Monday, March 30, 2026
Monday, March 30, 2026
Home Blog Page 574

Breaking News ಗಣಪತಿ ಹೊತ್ತ ವಾಹನ ಪಲ್ಟಿ.ಇಬ್ಬರು ಯುವಕರ ಮರಣ

0

Breaking News ಗಣಪತಿ ಮೂರ್ತಿಯನ್ನು ತರಲು ಟಾಟಾ ಏಸ್ ವಾಹನದಲ್ಲಿ ಹೋಗುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು ಕಂಡ ಘಟನೆ ವರದಿಯಾಗಿದೆ.
ಗಾಯಗೊಂಡ ಇನ್ನಿಬ್ಬರು ಯುವಕರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಿದ್ದಾರೆ.
ಘಟನೆ ಇಂದು ಬೆಳಿಗ್ಗೆ
Breaking News ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. ಮೃತರನ್ನು 20 ವರ್ಷದ ಧನುಷ್ ಹಾಗೂ ಶ್ರೀಧರ್ ಎಂದು ಗುರುತಿಸಲಾಗಿದೆ.
ಲಿಂಗದಹಳ್ಳಿ ಗ್ರಾಮದ 9 ಯುವಕರು ಬೆಳಗ್ಗೆ ಏಳು ಗಂಟೆಗೆ ಗಣಪತಿ ತರಲೆಂದು 15 ಕಿ.ಮೀ. ದೂರದ ತರೀಕೆರೆ ಪಟ್ಟಣಕ್ಕೆ ಟಾಟಾ ಏಸ್ ಲಗೇಜ್ ಆಟೋದಲ್ಲಿ ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ಟಾಟಾ ಏಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಇದರಲ್ಲಿದ್ದ ಉಳಿದ ಮೂರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು ತೀವ್ರವಾದ ರಕ್ತಸ್ರಾವವಾಗಿದೆ.
ಚಾಲಕ ಮನೋಜ್ ಹಾಗೂ ಮತ್ತೋರ್ವನನ್ನು ಮೆಗ್ಗಾನ್ ತುರ್ತುಘಟಕಕ್ಕೆ ರವಾನಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಲಿಂಗದಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Union of Press Distributors ಸೆ,8 ರಂದು ಚಿತ್ರದುರ್ಗದಲ್ಲಿ ಪತ್ರಿಕಾ ವಿತರಕರ 8 ನೇ ರಾಜ್ಯಮಟ್ಟದ ಸಮ್ಮೇಳನ

0

Union of Press Distributors ಚಿತ್ರದುರ್ಗದಲ್ಲಿ ಸೆ.8ರಂದು ಪತ್ರಿಕಾ ವಿತರಕರ 8ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲತೇಶ್ ಎನ್.ತಿಳಿಸಿದರು.

ಅವರು ಮಾತನಾಡುತ್ತಾ ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಅಂದು ಬೆಳಗ್ಗೆ 11:30ಕ್ಕೆ ನಡೆವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ನಾನಾ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಗೋವಿಂದ ಕಾರಜೋಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಗಣ್ಯರು ಭಾಗವಹಿಸುವರು ಎಂದು ಹೇಳಿದರು.

ಮಧ್ಯಾಹ್ನ 2ಕ್ಕೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಓದುತ್ತಿರುವ ಪತ್ರಿಕಾ ವಿತರಕರು ಹಾಗೂ ವಿತರಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಮಧ್ಯಾಹ್ನ 3ಕ್ಕೆ ’ವಿತರಕರು ಅಂದು ಇಂದು ಮುಂದು ವಿಷಯ ಕುರಿತು ಚರ್ಚಾ ಗೋಷ್ಠಿ ನಡೆಯಲಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸುವರು ಎಂದು ತಿಳಿಸಿದರು.

ಸರಕಾರ ಪತ್ರಿಕೆಗಳನ್ನು ನಾಲ್ಕನೇ ಅಂಗ ಎಂದು ಗುರುತಿಸಿದೆ, ಆದರೆ ಮನೆ ಮನೆಗೆ ಪತ್ರಿಕೆಗಳನ್ನು ವಿತರಣೆ ಮಾಡುವವರನ್ನು ನಿರ್ಲಕ್ಷಿಸಿದೆ. ನಮಗೆ ಯಾವುದೇ ರೀತಿಯ ಸೌಲಭ್ಯಗಳು ಲಭಿಸಿಲ್ಲ ಕೋವಿಡ್
ಸಮಯದಲ್ಲಿ ನಾನಾ ತೊಂದರೆ ಅನುಭವಿಸಿದ್ದು, ಹಲವು ವಿತರಕರನ್ನು ಕಳೆದು ಕೊಳ್ಳಬೇಕಾಯಿತು. ಈ ಸಮಯದಲ್ಲಿ ಒಕ್ಕೂಟ ಮಾಡುವುದರ ಮೂಲಕ ನಮ್ಮ ಸಮಸ್ಯೆಗಳಿಗಾಗಿ ಹೋರಾಟ ಮಾಡಲಾಗುತ್ತಿದೆ. ಈಗ ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿದೆ, ಸರಕಾರದ ಇ-ಶ್ರಮ್ ಯೋಜನೆಯಡಿ ನಮಗೆ ಅರ್ಜಿ ಹಾಕಲು ಅನುಮತಿ ಲಭಿಸಿರಿವುದು ಸಂತಸ ತಂದಿದೆ ಎಂದರು.

Union of Press Distributors ಇದೇ ಸಂದರ್ಭದಲ್ಲಿ ನಮ್ಮ ಒಕ್ಕೂಟದ ಹೆಸರಿನಲ್ಲಿ ಕ್ಷೇಮ ನಿಧಿ ಸ್ಥಾಪಿಸಿ 10 ಕೋಟಿ ಮೀಸಲಿಡುವುದು, ಪತ್ರಿಕಾ ವಿತರಕರಿಗೆ ರಾಜ್ಯೋತ್ಸವ ಪ್ರಶಸ್ತಿ ಮುಂದುವರೆಸಿಕೊಂಡು ಹೋಗುವುದು ಸೇರಿದಂತೆ ಮತ್ತಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ ಸಲ್ಲಿಸಲಾಗುವುದು. ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರಿದ್ದೇವೆ, ನಮ್ಮ ಒಕ್ಕೂಟದಲ್ಲಿ ಸುಮಾರು 3500 ವಿತರಕರು ನೋಂದಾಯಿಸಿಕೊಂಡಿದ್ದಾರೆ. ಈ ಸಮ್ಮೇಳನದಲ್ಲಿ ರಾಜ್ಯದ ನಾನಾ ಕಡೆಗಳಿಂದ ಸುಮಾರು 03 ಸಾವಿರಕ್ಕೂ ಹೆಚ್ಚು ವಿತರಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 500 ಜನ ಪತ್ರಿಕಾ ವಿತರಕರು ಇದ್ದು, ಸೆ.೮ಕ್ಕೆ ಪತ್ರಿಕಾ ವಿತರಕರ ೪ನೇ ರಾಜ್ಯ ಸಮ್ಮೇಳನಕ್ಕೆ ಎಲ್ಲಾ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Rotary Shivamogga ಯುವಜನರೇ ಹೆಚ್ಚಾಗಿ ಸಮುದಾಯದೊಂದಿಗೆ ಬೆರೆತು ದೇಶದ ಅಭಿವೃದ್ದಿಗೆ ಶ್ರಮಿಸಲು ರೋಟರಿ ವೇದಿಕೆ ಸಹಕಾರಿ- ವಸಂತ ಹೋಬಳಿದಾರ್

0

Rotary Shivamogga ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ರೋಟರಿ ಸದಸ್ಯರು ಪ್ರಶಂಸಾರ್ಹರು ರೋಟರಿ ಮಾಜಿ ಸಹಾಯಕ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯಲ್ಲಿ ಸದಸ್ಯರ ಜವಾಬ್ದಾರಿ ಹಾಗೂ ಸೇವಾ ಕಾರ್ಯಗಳ ಬಗ್ಗೆ ಮಾತನಾಡಿ, ಹೆಚ್ಚು ಹೆಚ್ಚು ಯುವಜನರು ಸಮುದಾಯಗಳೊಂದಿಗೆ ಬೆರೆತು ಸಮುದಾಯದ ಜತೆಗೆ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲು ರೋಟರಿ ವೇದಿಕೆಗಳು ಸಹಕಾರಿಯಾಗಬಲ್ಲವು ಎಂದು ತಿಳಿಸಿದರು.
Rotary Shivamogga ರೋಟರಿ ಸದಸ್ಯರು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅಧಾರ ಸ್ತಂಭಗಳಿದ್ದಂತೆ. ಅವರಿಗೆ ಜವಾಬ್ದಾರಿಗಳು ಹೆಚ್ಚಿದ್ದು, ಅವುಗಳನ್ನ ಬಹಳ ಮುತುವರ್ಜಿಯಿಂದ ನಿಭಾಯಿಸಬೇಕಾಗುತ್ತದೆ. ಸಮಾಜದಲ್ಲಿ ರೋಟರಿ ಸದಸ್ಯರಿಗೆ ವಿಶೇಷವಾದ ಸ್ಥಾನಮಾನವಿದೆ. ಅವರ ಸೇವಾಪರತೆಯನ್ನು ಕಂಡು ಸಾರ್ವಜನಿಕ ಸದಾಭಿಪ್ರಾಯ ಬಹುಉತ್ತುಂಗದಲ್ಲಿದೆ. ಸಮುದಾಯದ ಅವಶ್ಯಕತೆಗಳನ್ನ ಪರಾಮರ್ಶಿಸಿ ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ರೋಟರಿ ಪಿಡಿಜಿ ಜಿ.ಎನ್.ಪ್ರಕಾಶ್ ಸಂಸ್ಥೆ ಕುರಿತು ಮಾತನಾಡಿ, ಎಲ್ಲ ರೋಟರಿ ಸದಸ್ಯರು ರೋಟರಿ ಮೂಲ ಉದ್ದೇಶ, ಕಾರ್ಯವೈಖರಿ ಮತ್ತು ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ರೋಟರಿ ಚಿಂತನೆಗೆ ಅನುಗುಣವಾಗಿ ಕಾರ್ಯ ಪ್ರವೃತ್ತರಾಗಬೇಕು. ಚತುರ್ವಿಧ ಪರೀಕ್ಷೆ, ಫ್ಯೂಚರ್ ವಿಷನ್ ಪ್ಲಾನ್, ಫೈವ್ ಅವೆನ್ಯೂಸ್ ಆಫ್ ಸರ್ವಿಸಸ್, ಸ್ಟೇಟರ್ಜಿ ಪ್ಲಾನಿಂಗ್, ಡಿಸಿಗ್ನೇಟೆಡ್ ಮಂತ್ಸ್ ಹೀಗೆ ಹಲವಾರು ವಿಚಾರಗಳು ಸಮಾಜಕ್ಕೆ ಉತ್ತಮ ನೇತಾರರನ್ನು ಕೊಡುವಲ್ಲಿ, ಪೊಲಿಯೋ ಮತ್ತು ಸಾಕ್ಷರತಾ ಮಿಷನ್ ರೀತಿ ಪರಿಣಾಮಕಾರಿ ಯೋಜನೆಗಳನ್ನು ಸಾದರಪಡಿಸುವಲ್ಲಿ ರೋಟರಿ ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು.
ಕಿರಣ್ ಕುಮಾರ್.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಈಶ್ವರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರವಿ ಕೋಟೋಜಿ, ಡಾ. ಗುಡುದಪ್ಪ ಕಸಬಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಉಪಸ್ಥಿತರಿದ್ದರು. ಸೆಂಟ್ರಲ್ ಕ್ಲಬ್ಬಿನ ಹೊಸ ಸದಸ್ಯರು ಮತ್ತು ಈಸ್ಟ್ ಕ್ಲಬ್ಬಿನ ಹೊಸ ಸದಸ್ಯರು ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು.

Akashvani Bhadravati ಆಕಾಶವಾಣಿ ಭದ್ರಾವತಿ‌ ಕೇಂದ್ರದ ಆವರಣದಲ್ಲಿ ” ಏಕ್ ಪೇಡ್ ಮಾ ಕೆ ನಾಮ್” ಕಾರ್ಯಕ್ರಮ

0

Akashvani Bhadravati “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಭದ್ರಾವತಿ, ವಕೀಲರ ಸಂಘ ಅಭಿಯೋಜನ ಇಲಾಖೆ, ಭದ್ರಾವತಿ ಅರಣ್ಯ ಇಲಾಖೆ, ಆಕಾಶವಾಣಿ ಭದ್ರಾವತಿ ಇವರ ಸಹಯೋಗದಲ್ಲಿ ನಡೆಯಿತು.
ಭದ್ರಾವತಿ ಜೆ.ಎಂ.ಎಫ್.ಸಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ವಿ ರವರು ಈ ಕಾರ್ಯುಕ್ರಮವನ್ನು ಉದ್ಘಾಟಿಸಿದರು.

Akashvani Bhadravati ಉಪಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಎಂ ವಿ(ಐಎಫ್‌ಎಸ್), ಹೆಚ್ಚುವರಿ ಸಿವಿಲ್ ನ್ಯಾಯಾಧೀಶರುಗಳಾದ ಮಹಮ್ಮದ್ ಅಲಿ ನಾಯಕ್, ಎನ್ ಗಿರಿಜಾ ಹಾಗು ವಕೀಲ ಸಂಘದ ಅಧ್ಯಕ್ಷರಾದ ಎಂ.ಹೆಚ್.ಉಮೇಶ್, ಸಹಾಯಕ ಸರ್ಕಾರಿ ಅಭಿಯೋಜಕರುಗಳಾದ ಪ್ರಸನ್ನಕುಮಾರ್ ಹಾಗು ನಾಗರಾಜ್, ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಎಸ್.ಆರ್.ಭಟ್, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಬಿ.ಎಸ್.ನಟೇಶ್ ರಾಮನ್, ವಲಯ ಅರಣ್ಯಾಧಿಕಾರಿಗಳಾದ ಶ್ರೀ ದುಗ್ಗಪ್ಪ ಪಿ.ಹೆಚ್ ಉಪಸ್ಥಿತರಿದ್ದರು.

Directorate of Women And Child Development Department ಹಿರಿಯ ನಾಗರೀಕರ ಅನುಭವ,ಜ್ಞಾನ ಇಂದಿನ ಸಮಾಜಕ್ಕೆ ಅತ್ಯಂತ ಪೂರಕ- ನ್ಯಾ.ಎಂ.ಎಸ್.ಸಂತೋಷ್

0

Directorate of Women And Child Development Department ಹಿರಿಯರ ಅನುಭವಗಳು ಇಂದಿನ ನಾಗರಿಕ ಸಮಾಜಕ್ಕೆ ನಿಜವಾದ ಮಾರ್ಗದರ್ಶನವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ.ಎಸ್ ಅವರು ತಿಳಿಸಿದರು.
ಅವರು ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಸರ್ಕಾರಿ ನಿವೃತ ನೌಕರರ ಸಂಘ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರೀಕರಿಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ನಾಗರಿಕರ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಎರಡು ವಿಶೇಷ ಅವಿಸ್ಮರಣೀಯ ಕಾರ್ಯಕ್ರಮಗಳು ಇಂದು ನಡೆಯುತ್ತಿದ್ದು, ಒಂದು ಅಕ್ಷರವನ್ನು ಕಲಿಸಿದ ವ್ಯಕ್ತಿಯೂ ಕೂಡ ಗುರು ಸ್ಥಾನದಲ್ಲಿ ನೋಡುತ್ತೇವೆ. ತಂದೆ ತಾಯಿ ಮಕ್ಕಳಿಗೆ ಮೊದಲ ಗುರುವಾಗಿದ್ದಾರೆ. ಅವರ ಹಾಕಿಕೊಟ್ಟ ನೈತಿಕ ಮೌಲ್ಯಗಳ ಮೇಲೆ ಇಂದು ನಾವುಗಳು ಉನ್ನತಸ್ಥಾನದಲ್ಲಿ ಜೀವಿಸುತ್ತಿದೇವೆ. ಹಿರಿಯರು ನೀತಿ ನಿಯತ್ತು ಮತ್ತು ಮೌಲ್ಯಗಳ ಆಧಾರದ ಮೇಲೆ ಜೀವನ ನಡೆಸುತ್ತಿದ್ದರು. ಕಾನೂನಿನ ಅರಿವು ಅವರಿಗೆ ಇರಲಿಲ್ಲ ಆದರೆ ಪ್ರತಿಯೊಬ್ಬರನ್ನು ಗೌರದಿಂದ ಕಾಣುತ್ತಿದ್ದರು. ಇಂದು ಅದು ಬದಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
Directorate of Women And Child Development Department ಇಂದಿನ ಸಮಾಜದಲ್ಲಿ ನೀತಿ ಮತ್ತು ಮೌಲ್ಯಗಳು ಕುಸಿತ ಕಂಡಿದ್ದು ಅಧುನಿಕ ಯುಗದಲ್ಲಿ ತಂತ್ರಜ್ಞಾನಗಳ ಬೆಳವಣಿಗೆಯಿಂದ ನಾವು ನಮ್ಮ ಮನೆಯ ಹಿರಿಯರನ್ನು ಕಡೆಗಣಿಸುತ್ತಿದ್ದೇವೆ. ಅವರ ಅನುಭವದ ಮಾತುಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ನಾವು ಮುಂದೆ ಹಿರಿಯರಾದಾಗ ನಮ್ಮ ಮಕ್ಕಳು ನಮ್ಮ ನೋಡುವ ರೀತಿ ಬದಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಲಿದೆ. ಹಿರಿಯ ನಾಗರಿಕರು ನಮ್ಮ ಸಮಾಜದ ಗೌರವಯುತ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿಗಳಾಗಿದ್ದಾರೆ. ಅವರ ಅನುಭವ, ಜ್ಞಾನ ಇಂದಿನ ಸಮಾಜಕ್ಕೆ ಅತ್ಯಂತ ಪೂರಕವಾಗಿದೆ. ಅವರ ಅನುಭವದ ಮಾತುಗಳನ್ನು ನಾವು ಕೇಳಬೇಕು ಮತ್ತು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಪ್ಪ ಮಾತನಾಡಿ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡರೆ ಜೀವನ ಸುಧಾರಣೆ ಆಗುತ್ತದೆ. ಹಿರಿಯ ನಾಗರಿಕರಿಗೆ ರಕ್ಷಣೆ ಮಾಡುವ ಕೆಲಸವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಸರ್ಕಾರ ಹಿರಿಯ ನಾಗರಿಕರ ರಕ್ಷಣೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸಿ ಅವರನ್ನು ಗೌರವಿಸುವ ಕೆಲಸಗಳು ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಉಪ ನಿರ್ದೇಶಕರಾದ ಉಮೇಶ್ ಹೆಚ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿರೇಖಾ, ನಿವೃತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ವೃದ್ಧಾಶ್ರಮದ ವಿವಿಧ ಸ್ವಯಂ ಸೇವಾ ಸಂಘಟನೆಯ ಸದಸ್ಯರು ಹಿರಿಯ ನಾಗರಿಕರು ಉಪಸ್ಥಿತರಿದ್ದರು.

District Chamber of Commerce Shivamogga ಸಣ್ಣ ಕೈಗಾರಿಕೆಗಳ ಅಭಿವೃದ್ದಿ ಬ್ಯಾಂಕ್ ಶಾಖೆ ಶಿವಮೊಗ್ಗಕ್ಕೆ ತರುವಲ್ಲಿ ಸಂಸದರ ಯತ್ನ ಪ್ರಶಂಸನೀಯ- ಎನ್.ಗೋಪಿನಾಥ್

0

District Chamber of Commerce Shivamogga ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ( ಎಸ್‌ಐಡಿಬಿಐ-ಸಿಡ್ಬಿ) ಶಾಖೆಯನ್ನು ಶಿವಮೊಗ್ಗಕ್ಕೆ ತರುವಲ್ಲಿ ಶ್ರಮಿಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕೆಗಳು, 3,500 ಎಂಎಸ್‌ಎಂಇ ಹಾಗೂ ಹೊಸ ಉದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ತುಂಬಾ ಅನುಕೂಲ ಒದಗಿಸಲಿದೆ. ಹೊಸ ಉದ್ಯಮಗಳ ಸ್ಥಾಪನೆಯಿಂದ ಹೆಚ್ಚು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಸಿಡ್ಬಿ ಶಾಖೆ ಸ್ಥಾಪನೆಯಿಂದ ಹೊಸದಾಗಿ ಸ್ಥಾಪನೆಯಾಗುವ ಉದ್ಯಮಕ್ಕೆ ಆರ್ಥಿಕವಾಗಿ ಶಕ್ತಿ ತುಂಬಲಿದೆ. ಹೊಸ ಹೊಸ ಉದ್ಯಮಿಗಳಿಗೆ ಸಾಲ ಸೌಲಭ್ಯ ಸಿಗಲಿದೆ. ಶಿವಮೊಗ್ಗ ಜಿಲ್ಲೆಯು ಪ್ರವಾಸೋದ್ಯಮ, ಕೈಗಾರಿಕೆ, ಆಹಾರ ಉತ್ಪನ್ನ ಕೈಗಾರಿಕಾ ಘಟಕದ ಉದ್ಯಮಕ್ಕೂ ಹೆಚ್ಚು ಅವಕಾಶಗಳಿವೆ. ಸಿಡ್ಬಿ ಶಾಖೆಯಿಂದ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ತುಂಬಾ ಅನುಕೂಲವಾಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದ್ದಾರೆ.

District Chamber of Commerce Shivamogga ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ( ಸಿಡ್ಬಿ ) ಶಾಖೆಯನ್ನು ಶಿವಮೊಗ್ಗ ಜಿಲ್ಲೆಗೆ ತರುವಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪ್ರಯತ್ನ ಅಪಾರ. ಶಾಖೆ ಶೀಘ್ರ ಆರಂಭವಾಗುವುದರಿಂದ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದ್ದಾರೆ.

Bharat Scouts and Guides ಶಿಕ್ಷಕ ವೃತ್ತಿ ಶ್ರೇಷ್ಠ.ದೇವರು ನಮಗೆ ಕೊಟ್ಟಿರುವ ವರ ಎಂಬ ಹೆಮ್ಮೆ ಇರಬೇಕು- ಪಿ.ಜಿ.ಆರ್.ಸಿಂಧ್ಯಾ

0

Bharat Scouts and Guides ಶಿಸ್ತು ಹಾಗೂ ಸಮಯ ಪ್ರಜ್ಞೆ ಜೀವನದ ಯಶಸ್ಸಿನ ಮೂಲ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದರು.
ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ಲಾಕ್ ಲೀಡರ್, ಕ್ಲಬ್ ಮಾಸ್ಟರ್, ಗೈಡ್ ಕ್ಯಾಪ್ಟನ್, ಸ್ಕೌಟ್ ಮಾಸ್ಟರ್ ತರಬೇತಿ ಶಿಬಿರದಲ್ಲಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಮಗೆ ಮಾನ್ಯತೆ ಕೊಡುತ್ತದೆ. ಸಮವಸ್ತ್ರವು ನಾವೆಲ್ಲಾ ಒಂದೇ ಭಾವನೆ ಬೆಳೆಸುತ್ತದೆ. ಸಮಾಜದ ಬದಲಾವಣೆ ತರುವ ಶಕ್ತಿ ಸಾಮೂಹಿಕವಾಗಿ ಮಾಡಿದಾಗ ಬರುತ್ತದೆ ಎಂದು ತಿಳಿಸಿದರು.
ಶಿಕ್ಷಕ ವೃತ್ತಿ ಬಹಳ ಶ್ರೇಷ್ಠ. ದೇವರು ನಮಗೆ ಕೊಟ್ಟಿರುವ ವರ ಎಂಬ ಹೆಮ್ಮೆ ಇರಬೇಕು. ಸಮಾಜದ ಓರೆಕೋರೆಗಳನ್ನು ತಿದ್ದುವ ಶಕ್ತಿ ಶಿಕ್ಷಕರಿಗೆ ಇರುತ್ತದೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಒಳ್ಳೆಯ ಆಲೋಚನೆಗಳನ್ನು ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಬದುಕುವ ಕಲೆ, ಆತ್ಮವಿಶ್ವಾಸ ಹಾಗೂ ಉತ್ತಮ ಜೀವನಶೈಲಿ ಜತೆ ಸಂವಹನ ಕಲೆ ಕಲಿಸುತ್ತದೆ. ಆದ್ದರಿಂದ ಇಲ್ಲಿನ ತರಬೇತಿ ಹೊಂದಿದ ಶಿಕ್ಷಕರು ಶಾಲಾ ಹಂತದಲ್ಲಿ ಘಟಕಗಳನ್ನು ಸ್ಥಾಪಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ತತ್ವಗಳು, ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು. ಪ್ರತಿ ಮನೆಯಲ್ಲಿ ಸ್ಕೌಟ್, ಗೈಡ್ ಇರಬೇಕು ಎಂದು ಹೇಳಿದರು.ಸಂಸ್ಥೆಯಿಂದ ತರಬೇತಿ ಶಿಬಿರದ ಜತೆಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಮಕ್ಕಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪದಾಧಿಕಾರಿಗಳಾದ ಶಿವಶಂಕರ್, ಪ್ರೊ. ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್, ಆಂಜನೇಯ, ವೀರೇಶಪ್ಪ, ರಾಜೇಶ್ ಅವಲಕ್ಕಿ, ಆನಂದ್, ಶಕುಂತಲಾ ಚಂದ್ರಶೇಖರ್, ರವಿ, ಲಕ್ಷ್ಮೀ ಕೆ.ರವಿ, ಜಿ.ವಿಜಯಕುಮಾರ್, ಜ್ಯೋತಿ, ಗೀತಾ ಚಿಕ್ಕಮಠ್, ವಿದ್ಯಾ ಕೃಷ್ಣಸ್ವಾಮಿ, ಎಂ.ಪರಮೇಶ್ವರಯ್ಯ, ವಿನಯ ಭೂಷಣ್, ಅಶೋಕ್‌ಕುಮಾರ್, ಕೆ.ವಿ.ಚಂದ್ರಶೇಖರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Industrial Smart City ಶಿವಮೊಗ್ಗ ನಗರವನ್ನಕೈಗಾರಿಕಾ ಸ್ಮಾರ್ಟ್ ಸಿಟಿ ಆಯ್ಕೆಗೆ ಅನುಮೋದಿಸಲು ಶಾಸಕ ಚೆನ್ನಿ ಮನವಿ

0

Industrial Smart City ಶಿವಮೊಗ್ಗ ನಗರವನ್ನಕೈಗಾರಿಕಾ ಸ್ಮಾರ್ಟ್ ಸಿಟಿ ಆಯ್ಕೆಗೆ ಅನುಮೋದಿಸಲು ಶಾಸಕ ಚೆನ್ನಿ ಮನವಿಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಶಿವಮೊಗ್ಗ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) ಅಡಿಯಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಶಿವಮೊಗ್ಗ ಮಹಾನಗರವನ್ನು ಆಯ್ಕೆ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದರು.

ಭಾರತ ಸರ್ಕಾರವು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) 28,602 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ ದೇಶದ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ. ಈ ಯೋಜನೆಯ 10 ರಾಜ್ಯಗಳಲ್ಲಿ ವ್ಯಾಪಿಸಿದ್ದು, 1 ಮಿಲಿಯನ್ ಪ್ರತ್ಯಕ್ಷ ಉದ್ಯೋಗಗಳನ್ನು ಮತ್ತು 3 ಮಿಲಿಯನ್ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿರುವುದು ದೇಶದ ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಾಗಿದೆ ಮತ್ತು ದೇಶವೇ ಹರ್ಷಿಸುವ ಸಂಗತಿಯಾಗಿದೆ.

ಕರ್ನಾಟಕ ರಾಜ್ಯವು ಸಹ ಕೈಗಾರಿಕೆ ಕ್ಷೇತ್ರಕ್ಕೆ ಸಾಕಷ್ಟು ರೀತಿಯ ಕೊಡುಗೆಯನ್ನು ನೀಡಿದೆ. ಹೊಸ ಹೊಸ ಕೈಗಾರಿಕೆಗಳನ್ನು ಸ್ಪಾಪಿಸಲು ಪೂರಕವಾದ ಸಂಪತ್ತು ನಮ್ಮ ರಾಜ್ಯದಲ್ಲಿದೆ. ಅದರಲ್ಲೂ ಕರ್ನಾಟಕ ರಾಜ್ಯದ ಹೃದಯ ಭಾಗದಲ್ಲಿರುವ ಶಿವಮೊಗ್ಗ ಮಹಾನಗರವು ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶದ ಪ್ರವೇಶ ದ್ವಾರದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ “ಮಲೆನಾಡಿನ ಹೆಬ್ಬಾಗಿಲು” ಎಂದು ಕರೆಯಲಾಗುತ್ತದೆ. ಈ ನಗರವು ತುಂಗಾ ನದಿಯ ದಡದಲ್ಲಿದೆ. ಜಿಲ್ಲೆಯಲ್ಲಿ ಹರಿಯುವ ತುಂಗಾ, ಭದ್ರಾ, ವರದಾ, ಶರಾವತಿ ನದಿಗಳೊಂದಿಗೆ ಪ್ರಾಕೃತಿಕ ಸಂಪತ್ತಿನ ಗಣಿಯಾಗಿದೆ. ಶಿವಮೊಗ್ಗವು ಶಿಕ್ಷಣ ಸಾಹಿತ್ಯ, ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ, ವಾಣಿಜ್ಯ ವ್ಯವಹಾರ, ಪ್ರವಾಸೋದ್ಯಮ, ಸಣ್ಣ ಮತ್ತು ಬೃಹತ್ ಕೈಗಾರಿಗೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ವಾಂಗೀಣವಾಗಿ ತನ್ನದೇ ಆದ ಮಹೋನ್ನತ ಛಾಪನ್ನು ಮೂಡಿಸಿದ ಭೂಮಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಆರ್ಥಿಕತೆಯು ಪ್ರಾಥಮಿಕವಾಗಿ ಕೃಷಿಯಿಂದ ನಡೆಸಲ್ಪಡುತ್ತದೆ. ಅಡಿಕೆ, ಭತ್ತ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಹೆಸರುವಾಸಿಯಾಗಿದೆ. ಕಬ್ಬಿಣದ ಅದಿರು ಗಣಿಗಾರಿಕೆ, ಉತ್ಪಾದನೆಯಂತಹ ಕೈಗಾರಿಕೆಗಳನ್ನು ಹೊಂದಿದೆ, ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಪ್ರದೇಶದಲ್ಲಿ ನೆಲೆಗೊಂಡಿವೆ. ವಾರ್ಷಿಕವಾಗಿ ಸಾವಿರಾರು ಜನ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತ್ತು ತಾಂತ್ರಿಕವಾಗಿ ಹೊರಹೊಮ್ಮಿಸುತ್ತಿದೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) ಅಡಿಯಲ್ಲಿ ಮೊದಲನೇ ಹಂತದಲ್ಲಿ ಈಗಾಗಲೇ 12 ನಗರಗಳ ಪೈಕಿ 10 ನಗರಗಳನ್ನು ಘೋಷಿಸಿದ್ದು, ಶಿವಮೊಗ್ಗ ನಗರವನ್ನು ಈ ಯೋಜನೆಯಡಿ ಸೇರಿಸಿ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕಾ ಕಾರಿಡಾರ್ ಸ್ಮಾರ್ಟ್ ಸಿಟಿಯನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿದೆ.

  • ಶಿವಮೊಗ್ಗ ನಗರವು ಹಾಲೀ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿ ಹೊಂದಿರುತ್ತಿದೆ.
  • ಶಿವಮೊಗ್ಗ ಮಹಾನಗರಕ್ಕೆ ಹೊಂದಿಕೊಂಡಂತೆ ದೇವಕಾತಿಕೊಪ್ಪ ಪ್ರದೇಶಲ್ಲಿ 280 ಎಕ್ರೆ, ಸೋಗಾನೆ ಪ್ರದೇಶದಲ್ಲಿ 580 ಎಕ್ರೆ, ಹಾಗೂ ವಿವಿಧ ಭಾಗಗಳಲ್ಲಿ 380 ಎಕ್ರೆ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ದಿಗಾಗಿ ಜಮೀನು ಲಭ್ಯವಿರುತ್ತದೆ.
  • ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪೂರೈಕೆಗಾಗಿ ಶರಾವತಿ ವಿದ್ಯುತ್ ತಯಾರಿಕಾ ಘಟಕವೂ ಸಹ ನಮ್ಮ ಜಿಲ್ಲೆಯಲ್ಲಿಯೇ ಇದೆ.
  • ಸರಕು ಸಾಗಾಣಿಕೆ, ಸಾರಿಗೆ ಸಂಪರ್ಕ ವ್ಯವಸ್ಥೆಗಾಗಿ ಜಿಲ್ಲೆಯಲ್ಲಿ ವಾಯು ಸಾರಿಗೆ, ರೈಲ್ವೆ ಸಾರಿಗೆ, ರಸ್ತೆ ಸಾರಿಗೆ ವ್ಯವಸ್ಥೆಯು ಸಮರ್ಪಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿವೆ ಮತ್ತು ಜಲ ಸಾರಿಗೆಗಾಗಿ ಶಿವಮೊಗ್ಗ ಜಿಲ್ಲೆಯು ಕರಾವಳಿ ಭಾಗಕ್ಕೆ ಹೊಂದಿಕೊಂಡಿರುತ್ತದೆ.
  • ನೈಸರ್ಗಿಕ ಸ್ವರ್ಗದಂತಿರುವ ಜಿಲ್ಲೆಯ ಪ್ರಾಕೃತಿಕ ಸಂಪತ್ತು ಕೈಗಾರಿಕೆಗಳಿಗೆ ಪೂರಕವಾಗಿರುತ್ತದೆ.
  • ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಭಾಗಗಳಿಗೆ ಸಂಪರ್ಕ ಕೊಂಡಿಯಂತಿರುವ ಶಿವಮೊಗ್ಗ ಎಲ್ಲಾ ಭಾಗದ ಜನಗಳಿಗೆ ಔದ್ಯೋಗಿಕ ನ್ಯಾಯ ಒದಗಿಸುವ ಪ್ರದೇಶವಾಗಿರುತ್ತದೆ.
  • ಶಿವಮೊಗ್ಗವು ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ಕೈಗಾರಿಕೆಗಳಿಗೆ ಸೂಕ್ತ ಪ್ರದೇಶವಾಗಿರುತ್ತದೆ.
  • ರಾಜ್ಯದ ನಿರುದ್ಯೋಗ ಸೂಚ್ಯಂಕ 3.9% ರಷ್ಟು ಇದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 4.5% ರಷ್ಟು ಇದ್ದು, ಈ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸಿದ್ದಲ್ಲಿ ಸ್ಥಳೀಯರಿಗೆ ಮತ್ತು ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.
  • ಶಿವಮೊಗ್ಗದಲ್ಲಿ ಹಲವಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಡಿಪ್ಲೊಮೊ, ಇಂಜಿನಿಯರಿಂಗ್ ಕಾಲೇಜುಗಳಿದ್ದು, ಸಮರ್ಪಕವಾಗಿ ತಾಂತ್ರಿಕ ಸಿಬ್ಬಂದಿಗಳನ್ನು ಒದಗಿಸಬಹುದಾಗಿರುತ್ತದೆ. ಕೈಗಾರಿಕೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳೊಂದಿಗೆ ಮಾನವ ಶಕ್ತಿಯೂ ಸಹ ಲಭ್ಯವಿರುತ್ತದೆ.

ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ಅವಲೋಕಿಸಿ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ (NICDP) ಅಡಿಯಲ್ಲಿಮೊದಲನೇ ಹಂತದಲ್ಲಿಯಾದರೂ ಅಥವಾ ಎರಡನೇ ಹಂತದಲ್ಲಿಯಾದರೂ ಶಿವಮೊಗ್ಗ ನಗರವನ್ನು ಕೈಗಾರಿಕಾ ಸ್ಮಾರ್ಟ್ ಸಿಟಿ ಎಂದು ಘೋಷಿಸಿ ಅಭಿವೃದ್ದಿಪಡಿಸಲು ಶಿವಮೊಗ್ಗ ಜಿಲ್ಲೆ ಜನತೆಯ ಪರವಾಗಿ ಘನ ಭಾರತ ಸರ್ಕಾರಕ್ಕೆ ತಮ್ಮ ಮೂಲಕ ವಿನಂತಿಸುತ್ತೇನೆ ಎಂದು ತಿಳಿಸಿದರು..

Shivaganga Yoga Centre ಗುರು ಎಂದರೆ ವ್ಯಕ್ತಿಯಲ್ಲ. ರಾಷ್ಟ್ರದ ಶಕ್ತಿ- ಎಚ್.ಎಂ.ಚಂದ್ರಶೇಖರಯ್ಯ

0

Shivaganga Yoga Centre ಸಮಾಜ ಸುವ್ಯವಸ್ಥಿತ ಹಾಗೂ ಸುಸಂಸ್ಕೃತವಾಗಿ ನಡೆಯಬೇಕಾದರೆ ಗುರುವಿನ ಪಾತ್ರ ತುಂಬಾ ದೊಡ್ಡದು. ಎಲ್ಲ ಕ್ಷೇತ್ರಗಳನ್ನು ಗುರುವಿನ ಮಹತ್ವ ಅತಿ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿವೃತ್ತ ಉಪನ್ಯಾಸಕ, ಯೋಗ ಶಿಕ್ಷಕ ಎಚ್.ಎಂ.ಚಂದ್ರಶೇಖರಯ್ಯ ಹೇಳಿದರು.

ಕೃಷಿ ನಗರ ಶಾಖೆಯಲ್ಲಿ ಶಿವಗಂಗಾ ಯೋಗಕೇಂದ್ರದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಎಂದರೆ ವ್ಯಕ್ತಿಯಲ್ಲ, ರಾಷ್ಟ್ರದ ಶಕ್ತಿ. ಪ್ರತಿಯೊಂದು ಹಂತದಲ್ಲೂ ಗುರುವಿನ ಮಾರ್ಗದರ್ಶನ ನಮಗೆ ಅಗತ್ಯವಾಗಿ ಬೇಕು. ಸಮಾಜದ ಓರೆಕೋರೆಗಳನ್ನು ತಿದ್ದುವಂತಹ ಶಕ್ತಿ ಗುರುವಿಗೆ ಇದೆ. ವ್ಯಕ್ತಿ ಎಂತಹ ದೊಡ್ಡ ಸ್ಥಾನದಲ್ಲಿ ಇದ್ದರೂ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದೇಶಿಯ ವಿದ್ಯಾ ಶಾಲೆ ನಿವೃತ್ತ ಉಪನ್ಯಾಸಕ ನೀಲಕಂಠ ರಾವ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರುವಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ. ಸಾಮಾಜಿಕ ಜಾಲತಾಣದಿಂದ ಮಕ್ಕಳ ಮನಸ್ಸು ವಿಕಲಗೊಳ್ಳುತ್ತಿದೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ತುಂಬಾ ಅಗತ್ಯ. ಎಲ್ಲಿ ಗುರುವನ್ನ ಪೂಜಿಸುತ್ತಾರೋ ಗೌರವಿಸುತ್ತಾರೋ ಅಂತಹ ಸ್ಥಳ ಪವಿತ್ರತೆಯಿಂದ ಕೂಡಿರುತ್ತದೆ ಎಂದರು.

ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ತುಂಬಾ ಪಾವಿತ್ರತೆ ಹಾಗೂ ನಿಸ್ವಾರ್ಥತೆಯಿಂದ ಕೂಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಗುರುಗಳನ್ನ ಗೌರವಿಸಬೇಕು ಎಂದು ತಿಳಿಸಿದರು.

Shivaganga Yoga Centre ಇದೇ ಸಂದರ್ಭದಲ್ಲಿ ಮೇರಿ ಇಮ್ಯಾಕುಲೇಟ್ ಶಿಕ್ಷಕಿ ನಾಗರತ್ನಮ್ಮ ಚಂದ್ರಶೇಖರಯ್ಯ ಮಾತನಾಡಿ, ಅಲ್ಲಮ ಪ್ರಭುಗಳ ವಚನ ಇಂದಿಗೂ ಪ್ರಸ್ತುತ. ಗುರುಗಳ ಬಗ್ಗೆ ಅವರು ಹಾಡಿದ ಮಾತು ಇಂದು ಸತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಕೃಷಿ ನಗರದ ಎಲ್ಲ ಯೋಗಪಟುಗಳು ಗುರುಗಳಿಗೆ ಶುಭಾಶಯಗಳು ತಿಳಿಸಿ ಗೌರವಿಸಿದರು.

ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಜಯಣ್ಣ, ಮಹೇಶ್ವರಪ್ಪ, ಅನಿಲ್, ಚಿದಾನಂದ, ಬಿಂದು ವಿಜಯ ಕುಮಾರ್ ಹಾಗೂ ಯೋಗ ಶಿಕ್ಷಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Shivamogga Police ಕಾಚಿನಕಟ್ಟೆಯಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣು

0

Shivamogga Police ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈತನನ್ನು ಗೋವಿಂದರಾಜು ಎಂದು ಗುರುತಿಸಲಾಗಿದೆ. ಇವರಿಗೆ ಮದುವೆಯಾಗಿ 20 ವರುಷ ಕಳೆದರೂ ಮಕ್ಕಳಾಗಿಲ್ಲ ಎಂಬ ಚಿಂತೆ ಕಾಡುತ್ತಿತ್ತು ಎನ್ನಲಾಗಿದೆ. ಇವರ ಶವ ಮನೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.