Sunday, November 8, 2026
Sunday, November 8, 2026
Home Blog Page 1951

ಉಕ್ರೇನ್ ನಿಂದ 11 ಸಾವಿರ ಭಾರತೀಯರ ಆಗಮನ

0

ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿದ್ದು, ಈವರೆಗೆ ಕೇಂದ್ರ ಸರ್ಕಾರವು ‘ಆಪರೇಶನ್ ಗಂಗಾ’ ಅಡಿಯಲ್ಲಿ ಉಕ್ರೇನ್ ನಿಂದ 11 ಸಾವಿರ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.

ಬಗ್ಗೆ ಮುರಳೀಧರನ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಇಲ್ಲಿಯವರೆಗೆ 11,000 ಭಾರತೀಯರನ್ನು ಉಕ್ರೇನ್ ನಿಂದ ಸ್ಥಳಾಂತರಿಸಲಾಗಿದೆ. ಆಪರೇಶನ್ ಗಂಗಾ’ ಅಡಿಯಲ್ಲಿ ಮೂರು ಐಎಎಫ್ ಸಿ-17 ವಿಮಾನಗಳು ಹಿಂಡಾನ್ ವಾಯುನೆಲೆಗೆ ಮರಳಿದ್ದು, ಕಳೆದ 24 ಗಂಟೆಗಳಲ್ಲಿ ಪೋಲೆಂಡ್, ರೊಮೇನಿಯಾ ಮತ್ತು ಸ್ಲೊವಾಕಿಯಾದ ವಾಯುನೆಲೆಗಳಿಂದ 629 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ.

ವಾಯುಪಡೆಯು ರೊಮೇನಿಯಾದ ರಾಜಧಾನಿ ಬುಚಾರೆಸ್ಟ್, ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ಮತ್ತು ಪೋಲಿಷ್ ನಗರ ರೆಸೆಸೊದಿಂದ ಹಿಂಡಾನ್ ವಾಯುನೆಲೆಗೆ ಸರ್ಕಾರದ ‘ಆಪರೇಶನ್ ಗಂಗಾ’ ಅಡಿಯಲ್ಲಿ ನಾಲ್ಕು ವಿಮಾನಗಳನ್ನು ನಿರ್ವಹಿಸಿತು. ಅದರ ಮೂಲಕ 798 ಭಾರತೀಯರನ್ನು ಮರಳಿ ಕರೆತರಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಂಗೈಯಲ್ಲೇ ಅಂಗಡಿ

0

ಅಂಗೈಯಲ್ಲಿನ ಮೊಬೈಲ್ ಫೋನ್ ಈಗ ಅಂಗೈಯಲ್ಲಿನ ಅಂಗಡಿಯಂತಾಗಿದೆ. ಈಗ ಎಲ್ಲರಿಗೂ ಅತ್ಯಂತ ಸರಳ ಮತ್ತು ಸುಲಭವಾಗಿ ಎಲ್ಲಾ ಅಗತ್ಯ ವಸ್ತುಗಳು ಮನೆಬಾಗಿಲಿಗೆ ಬಂದು ಬಿಡುತ್ತವೆ. ಭೌತಿಕ ರೂಪದಲ್ಲಿರುವ ಹಣ ಈಗ ಡಿಜಿಟಲ್ ಸ್ವರೂಪ ಪಡೆದುಕೊಂಡಿದೆ.
ಇಂದಿನ ಆಧುನಿಕ ಯುಗದಲ್ಲಿ ಯಾರ ಹತ್ತಿರವೂ ಸಮಯವಿಲ್ಲ.

ಈಗ ಹೆಚ್ಚಾಗಿ ಯಾರೂ ಕೂಡ ಮಾರ್ಕೆಟ್ ಗೆ ಹೋಗಿ ಅಗತ್ಯವಸ್ತುಗಳಾಗಲಿ, ಬಟ್ಟೆ, ಆಭರಣಗಳಾಗಲಿ, ಚಪ್ಪಲಿಗಳಾಗಲಿ, ಕೊನೆಗೆ ದಿನಸಿಯನ್ನೂ ಹೊರಗೆ ಹೋಗಿ ಕೊಂಡುಕೊಳ್ಳಲು ಇಷ್ಟಪಡುವುದಿಲ್ಲ. ಹಾಗೇಯೇ ತಿನಿಸು ಕೂಡ ಮನೆ ಬಾಗಿಲಿಗೆ ಬಂದು ರೆಡಿಯಾಗಿ ನಿಂತು ಬಿಡಬೇಕು. ಅಂತಹ ನಿರೀಕ್ಷೆ ನಮ್ಮದಾಗಿದೆ. ಅಂತೂ ಎಲ್ಲರೂ ಐಟಿ ಜಗತ್ತಿನ ಆನ್ ಲೈನ್ ಶಾಪಿಂಗ್ ಗೆ ಜೋತು ಬಿದ್ದಿದ್ದೇವೆ.
ಕೆಲವೊಮ್ಮೆ ಈ ಆನ್ ಲೈನ್ ಶಾಪಿಂಗ್ ಲಾಭದಾಯಕವಾದರೆ ,ಇನ್ನೂ ಕೆಲವೊಮ್ಮೆ ತಲೆಕೆರೆದುಕೊಳ್ಳುವಂತೆ ಮಾಡಿ, ಕೆಟ್ಟ ತಲೆನೋವಾಗಿ ಪರಿಣಮಿಸುತ್ತದೆ.

ಆನ್ ಲೈನ್ ಶಾಪಿಂಗ್ ನಿಂದ ಸಮಯವನ್ನು ಉಳಿಸಬಹುದು. ಆದರೆ ಆನ್ ಲೈನ್ ಶಾಪಿಂಗ್ ಭರಾಟೆಯಿಂದ ಹಬ್ಬಕ್ಕೋ, ಮದುವೆಗೂ ಒಮ್ಮೆ ಮನೆಮಂದಿಯೆಲ್ಲಾ ಶಾಪಿಂಗ್ ಗೆ ಹೋಗುವ ಸಂಭ್ರಮ ಕಡಿಮೆಯಾಗುತ್ತಿದೆ.
ಆನ್ ಲೈನ್ ಶಾಪಿಂಗ್ ಮೂಲಕ ನಮಗೆ ಇಷ್ಟದ ವಿವಿಧ ರೀತಿಯ ಬಟ್ಟೆಗಳಾಗಲಿ, ಅಗತ್ಯವಸ್ತುಗಳೇ ಆಗಲಿ ಅಂಗೈನ ಮೊಬೈಲ್ ಇಂದಲೇ ಆರ್ಡರ್ ಮಾಡಿ ಮನೆ ಬಾಗಿಲಿಗೆ ವಸ್ತುಗಳನ್ನು ತರಿಸಿಕೊಳ್ಳಬಹುದು.

ಈಗಾಗಲೇ ಅಂಗೈನ ಅಂಗಡಿಗೆ ಅಂಟಿಕೊಂಡಿರುವ ಅಭ್ಯಾಸ ಒಂದು ಚಟವಾಗಿಯೇ ಪರಿಣಮಿಸಿ ಬಿಟ್ಟಿದೆ.
ಆದರೆ, ಆನ್ ಲೈನ್ ಶಾಪಿಂಗ್ ವೇಳೆ ಹಲವಾರು ಅಗತ್ಯ ಕ್ರಮಗಳನ್ನು ಅನುಸರಿಸುವುದು ಉತ್ತಮ. ಇಲ್ಲದಿದ್ದರೆ, ಎಷ್ಟೇ ಬುದ್ದಿವಂತರಾದರೂ ಮೋಸ ಹೋಗಿ ಬಿಡುತ್ತೇವೆ.

ಒಮ್ಮೆ ನಾನು ಹಾಗೂ ನನ್ನ ಸ್ನೇಹಿತೆ ಬಹಳ ದಿನಗಳ ನಂತರ ಭೇಟಿ ಆದೆವು. ನೆನಪಿನಲ್ಲಿ ಉಳಿಯುವಂತಹ ಉಡುಗೊರೆಯನ್ನ ಕೊಡಬೇಕು ಎನ್ನುವ ನೆಪದಲ್ಲಿ ಆನ್ ಲೈನ್ ನಲ್ಲಿ ಶಾಪಿಂಗ್ ಗೆ ಮುಂದಾದೆವು. ಹೀಗೆ ಶಾಪಿಂಗ್ ಮಾಡಲು ಹೊರಟಾಗ ಯೂ ಟ್ಯೂಬ್ ನಲ್ಲಿ ಒಂದು ವೆಬ್ ಸೈಟ್ ಆಕರ್ಷಕವಾಗಿ ನಮ್ಮನ್ನು ಸೆಳೆಯಿತು. ಜಾಹೀರಾತಿನಲ್ಲಿ ಒಳ್ಳೆಯ ಆಫರ್ ಇರುವುದನ್ನ ನೋಡಿ 1000 ರೂ.ಗಳ 2 ಬಟ್ಟೆಗಳನ್ನು ಆರ್ಡರ್ ಮಾಡಿಯೂ ಆಯಿತು. ಆ ಬಟ್ಟೆಗಳನ್ನು ಮದುವೆಗೊ, ಮನೆಯ ಸಂಭ್ರಮಕ್ಕೋ ಹಾಕಿಕೊಂಡು ಬೇರೆಯವರ ಕಣ್ಣು ಕುಕ್ಕುವಂತೆ ಮೆರೆದರಾಯಿತು ಎಂದು ನನ್ನ ಅಹಂ ಸಾರಿ ಸಾರಿ ಹೇಳುತ್ತಿತ್ತು. ಅದು ಬರುವ ತನಕ ಹತ್ತಾರು ಜನರ ಹತ್ತಿರ ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು.

ಹೀಗೆ ಆ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವುದರ ಬಗ್ಗೆ ಕಲ್ಪನಾ ಲೋಕದಲ್ಲಿ ವಿಹರಿಸಿದ್ದೇ ವಿಹರಿಸಿದ್ದು. ಅಮ್ಮನ ಹತ್ತಿರ ಮತ್ತು ಸ್ನೇಹಿತರ ಹತ್ತಿರ ಮದುವೆಗೆ, ಸಮಾರಂಭಗಳಿಗೆ ಧರಿಸುವಂತಹ ಎರಡು ಭವ್ಯ ಉಡುಪನ್ನು ಕೇವಲ ಸಾವಿರ ರೂಪಾಯಿ ಗೆ ತರಿಸಿಕೊಳ್ಳುತ್ತಿದ್ದೆನೆ ಎಂದು ಜಂಬದಿಂದ ಹೇಳಿಕೊಂಡಿದ್ದೆ. ಯಾವುದಾದರೂ ಬೈಕ್ ನ ಶಬ್ದ ಆದಾಗಲೆಲ್ಲ ಅಂಗಳದತ್ತ ಕಣ್ಣು ಹಾಯಿಸುವುದು. ಹೀಗೆಯೇ ಹಲವಾರು ಬಾರಿ ಆಯಿತು. ಅಂತೂ ಒಂದು ದಿನ ಕೋರಿಯರ್ ಮನೆ ಬಾಗಿಲಿಗೆ ಬಂದೇ ಬಿಟ್ಟಿತು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರ ಕಣ್ಣುಗಳೂ ಆ ಪಾರ್ಸಲ್ ಮೇಲೆಯೇ ನೆಟ್ಟಿದ್ದವು. ಪಾರ್ಸಲ್ ತೆರೆಯುತ್ತಾ ಹೋದಂತೆ ಗೊತ್ತಾಗಿದ್ದು ನಾವು ಮೋಸ ಹೋಗಿದ್ದೇವೆ ಎಂದು ಆ ಪಾರ್ಸೆಲ್ ನಲ್ಲಿ ಯಾರೋ ಉಪಯೋಗಿಸಿ ಬಿಟ್ಟ , ಹರಿದು ಹೋಗಿ ಗಬ್ಬು ವಾಸನೆ ಬೀರುವ ಬಟ್ಟೆಗಳಿದ್ದವು. ಆ ನಂತರ ಆ ಜಾಲತಾಣಕ್ಕೆ ಭೇಟಿ ನೀಡಲು ನೋಡಿದರೆ, ಅಂಥದ್ದೊಂದು ವೆಬ್ ಸೈಟ್ ಇಲ್ಲವೇ ಇಲ್ಲ ಎಂದು ತಿಳಿಯಿತು…ನಮ್ಮ ದುಡ್ಡು ನೀರಿನಲ್ಲಿ ಹೋಮವಾದಂತಾಯಿತು..

ಆನ್ ಲೈನ್ ಶಾಪಿಂಗ್ ಮಾಡುವಾಗ ಅನುಸರಿಸಬೇಕಾದ ಕೆಲವು ಟಿಪ್ಸ್ ಗಳು ಹೀಗಿವೆ.
ಒಮ್ಮೆ ಓದಿ ಎಂದಾದರೂ ಉಪಯೋಗಕ್ಕೆ ಬರಲಿವೆ.

  1. ಯಾವಾಗಲೂ ಅಧಿಕೃತ ಇ-ಕಾಮರ್ಸ್ ಜಾಲತಾಣಗಳಲ್ಲೇ ವ್ಯವಹಾರ ನಡೆಸಿ. ಅವುಗಳನ್ನೇ ಹೋಲುವ, ಇಲ್ಲವೇ ನಾನಾ ಹೆಸರಿನ ನಕಲಿ ಇ-ಕಾಮರ್ಸ್ ಜಾಲತಾಣಗಳು ಹುಟ್ಟಿಕೊಳ್ಳುತ್ತಲೇ ಇವೆ. ನಿಮ್ಮ ಇ-ಮೇಲ್, ವಾಟ್ಸಪ್ ಗಳಿಗೆ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡುವಾಗ ಹತ್ತು ಸಲ ಯೋಚಿಸಿ.
  2. ಲಕ್ಕಿ ಡ್ರಾ ನಲ್ಲಿ ನೀವು ಗೆದ್ದಿದ್ದೀರಿ. ನಿಮಗಾಗಿ ಸ್ಪೆಷಲ್ ಡೀಲ್ ಇದೆ ಎಂದು ಯಾರಾದರೂ ನಿಮಗೆ ಕರೆ ಮಾಡಬಹುದು. 10ಸಾವಿರ ರೂಪಾಯಿ ಬೆಲೆಯ ಸೀರೆ ನಿಮಗೆ ಕೇವಲ 3 ಸಾವಿರ ರೂಪಾಯಿಗೆ ಕೊಡುವುದಾಗಿ ಹೇಳಬಹುದು. ಆರ್ಡರ್ ದೃಢೀಕರಿಸಲು ನಿಮ್ಮ ಇ-ಮೇಲ್ ಗೆ ಬರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಸೂಚಿಸಬಹುದು. ಕ್ಲಿಕ್ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿಗಳು ಕಳುವಾಗುವ ಅವಕಾಶಗಳು ಇವೆ. ಎಚ್ಚರವಿರಲಿ.
  3. ಅಮೆಜಾನ್, ಫ್ಲಿಪ್ ಕಾರ್ಟ್ ಹೆಸರಿನಲ್ಲಿ ನಂಬಲು ಅಸಾಧ್ಯವಾದ ಆಫರ್ ಗಳ ಹೊತ್ತ ಸಂದೇಶಗಳು ವಾಟ್ಸಪ್ ನಲ್ಲಿ ಬರಬಹುದು. ಈ ಜನಪ್ರಿಯ ಸೈಟ್ ಗಳ ಗ್ರಾಹಕರ ಖಾತೆಗಳ ಮಾಹಿತಿ ಕದಿಯುವ ಯತ್ನವೂ ನಡೆದಿರಬಹುದು. ಸುಲಭದ ಪ್ರಶ್ನೆಗೆ ಉತ್ತರಿಸಿ ಬಹುಮಾನ ಗೆಲ್ಲಿ ಎನ್ನುವ ಆಮಿಷಗಳೂ ಇರುತ್ತವೆ. ಅಂತಹ ಅನುಮಾನಾಸ್ಪದ ಆಫರ್ ಗಳ ಸಂದೇಶಗಳನ್ನು ಡಿಲೀಟ್ ಮಾಡಿ.
  4. ಉಚಿತ ಕೂಪನ್ ಆಸೆಗೆ ಪಟ್ಟು ಬಿದ್ದು ಇಕ್ಕಟ್ಟಿಗೆ ಸಿಲುಕಬೇಡಿ. ಕೆಲವು ವಸ್ತುಗಳನ್ನು ಖರೀದಿ ಮಾಡುವಾಗ ಕೂಪನ್ ಕೋಡ್ ಗಳನ್ನು ಹಾಕಿದರೆ ಒಂದಿಷ್ಟು ರಿಯಾಯಿತಿ ಸಿಗುತ್ತದೆ. ಈ ಕೂಪನ್ ಕೋಡ್ ಗಳಿಗಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ, ಸಿಗುವ ಬಹುತೇಕ ಕೂಪನ್ ಗಳು ನಕಲಿ ಆಗಿರುತ್ತವೆ. ಅದರ ಬಗ್ಗೆ ಗೋಜಿಗೆ ಹೋಗದಿರುವುದು ನಿಮ್ಮ ಜಾಣತನ.
  5. ಹಬ್ಬದ ಸೀಸನ್ ನಲ್ಲಿ ಭರ್ಜರಿ ಶಾಪಿಂಗ್ ಮಾಡುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಇಂಥ ಸಂದರ್ಭವನ್ನು ವಂಚಕರು ಬಳಸಿಕೊಳ್ಳುತ್ತಾರೆ. ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಜಾಸ್ತಿ ಮಾಡುತ್ತೇವೆ. ಇಲ್ಲವೇ ಹೊಸ ಕ್ರೆಡಿಟ್ ಕಾರ್ಡ್ ನೀಡುತ್ತವೆ ಎನ್ನಬಹುದು. ನಿಮಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮಿಂದ ಮಾಹಿತಿಯನ್ನು ಪಡೆಯುವ ಅವಕಾಶಗಳು ಇಲ್ಲಿವೆ.
  6. ಆಫರ್ ಗಳು, ಹೆಚ್ಚಿನ ರಿಯಾಯಿತಿ ನೀಡುವುದಾಗಿ ನಿಮಗೆ ಬರುವ ಎಸ್ ಎಂಎಸ್ ಅಥವಾ ಇ-ಮೇಲ್ ಗಳನ್ನು ನಂಬಬೇಡಿ. ನಿಮ್ಮ ಮಾಹಿತಿ ಕದಿಯುವ ಫಿಶಿಂಗ್ ಮೇಲ್ ಗಳ ಬಗ್ಗೆ ಎಚ್ಚರ ಇರಲಿ.

07.ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ಈಗಾಗಲೇ ನೀವು ಬಯಸಿದ ಉಡುಗೆಯಾಗಲಿ, ಅಗತ್ಯವಸ್ತುಗಳನ್ನಾಗಲಿ , ಈಗಾಗಲೇ ಖರೀದಿಸಿರುವ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು (review) ಹಂಚಿಕೊಂಡಿರುತ್ತಾರೆ. ಅದನ್ನು ಒಮ್ಮೆ ಗಮನಿಸಿ. ನಂತರ ಆರ್ಡರ್ ಮಾಡಿ.

  1. ಆನ್ಲೈನ್ ನಲ್ಲಿ ಯಾವುದೋ ಒಂದು ವಸ್ತು ನಿಮ್ಮ ಮನೆಗೆ ಬಂದಿರಬಹುದು. ಅದನ್ನು ಖಚಿತಪಡಿಸಿಕೊಳ್ಳುವ ವಂಚಕರು, ಡಿಲಿವರಿ ಫೀಡ್ ಬ್ಯಾಕ್ ಪಡೆಯುವ ನೆಪದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಕರೆ ಮಾಡಬಹುದು. ಈ ನೆಪದಲ್ಲಿ ನಿಮ್ಮ ಮಾಹಿತಿಯನ್ನು ಕದಿಯಬಹುದು. ಅಂತಹ ಫೋನ್ ಕಾಲ್ ಗಳಿಂದ ಎಚ್ಚರವಿರಲಿ.

ಬಲ್ಲವರ ಪಾಲಿಗೆ ಆನ್ ಲೈನ್ ಶಾಪಿಂಗ್ ಎನ್ನುವಂಥದ್ದು ಕಲೆಯಾದರೆ, ಎಚ್ಚರ ತಪ್ಪಿದರೆ ಅದು ಕೊಳೆಯೂ ಆಗಬಲ್ಲದು.

ಉಂಡೂ ಉಂಡೂ ರೋಗ ತಂದುಕೊಳ್ಳುವಂತೆ, ಕೊಂಡೂ ಕೊಂಡೂ ಕೊಳ್ಳುಬಾಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವುದೂ ಸಹ ಒಂದು ರೋಗವೇ ಸರಿ.
ಆನ್ ಲೈನ್ ಶಾಪಿಂಗ್ ನಡೆಸುವಾಗ ಹಣದ ಹರಿವಿನ ಅರಿವಾಗುವುದೇ ಇಲ್ಲ. ಅಗತ್ಯವಿದ್ದಲ್ಲಿ ಮಾತ್ರ ಶಾಪಿಂಗ್ ಮಾಡಿ. ಅನಗತ್ಯವಾಗಿ ಕೊಂಡುಕೊಳ್ಳುವಾಗ ಯೋಚಿಸಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ನಿಂದ ಒಟ್ಟು ಹತ್ತು ಸಾವಿರ ವಿದ್ಯಾರ್ಥಿಗಳ ವಾಪಸಾತಿ

0

ಕಳೆದ 24 ಗಂಟೆ ಅವಧಿಯಲ್ಲಿ ಉಕ್ರೇನ್ ನಿಂದ 18 ವಿಮಾನ‌ ಭಾರತಕ್ಕೆ ಬಂದಿದೆ. 18 ವಿಮಾನಗಳಲ್ಲಿ 4 ಸಾವಿರ ವಿದ್ಯಾರ್ಥಿಗಳು‌ ಭಾರತಕ್ಕೆ ಬಂದಿದ್ದಾರೆ. ಇದುವರೆಗೆ 48 ವಿಮಾನಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು ‌ಭಾರತಕ್ಕೆ ಆಗಮಿಸಿದ್ದಾರೆ.

ಮುಂದಿನ 24 ಗಂಟೆಯಲ್ಲಿ 16 ವಿಮಾನಗಳಲ್ಲಿ ವಿದ್ಯಾರ್ಥಿಗಳ ಏರ್​ಲಿಫ್ಟ್ ಮಾಡಲಾಗಿದೆ.

ಉಕ್ರೇನ್​ನಲ್ಲಿರುವ ಭಾರತದ ವಿದ್ಯಾರ್ಥಿಗಳ ಸುರಕ್ಷಿತ ತೆರವಿಗೆ ಮಾನವೀಯ ಕಾರಿಡಾರ್ ರಚನೆಯಾಗಿಲ್ಲ. ತಳಮಟ್ಟದಲ್ಲಿ ಮಾನವೀಯ ಕಾರಿಡಾರ್ ರಚನೆಯಾಗಿಲ್ಲ.

ಖಾರ್ಕೀವ್​ನಲ್ಲಿ 300, ಸುಮಿ ನಗರದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಗುಂಡಿನ ದಾಳಿಗೊಳಗಾದ ಭಾರತದ ಹರ್ಜೋತ್ ಸಿಂಗ್ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗುಚಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನ್ಯಾಟೋ ನಂಬಿ ಕೆಟ್ಟರಾ ಝೆಲೆನ್ ಸ್ಕಿ

0

ರಷ್ಯಾದ ಬಾಂಬ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ‘ನೊ-ಫ್ಲೈ ಜೋನ್’ (ಯುದ್ಧ ವಿಮಾನ ಹಾರಾಟ ನಿಷೇಧ ವಲಯ) ಹೇರುವ ಉಕ್ರೇನ್ ಮನವಿಯನ್ನು ನ್ಯಾಟೊ ತಿರಸ್ಕರಿಸಿದೆ.

ನ್ಯಾಟೊ ನಿಲುವನ್ನು ತೀವ್ರವಾಗಿ ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್ ನಗರಗಳಲ್ಲಿ ರಷ್ಯಾ ಮತ್ತಷ್ಟು ಬಾಂಬ್ ದಾಳಿ ನಡೆಸಲು ನ್ಯಾಟೊ ಹಸಿರು ನಿಶಾನೆ ತೋರಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ದಾಳಿ ಹಾಗೂ ಸಾವು-ನೋವನ್ನು ತಪ್ಪಿಸಲಾಗದು ಎಂದು ಅರಿತುಕೊಂಡಿರುವ ನ್ಯಾಟೊ, ಉದ್ದೇಶಪೂರ್ವಕವಾಗಿ ವಾಯುಪ್ರದೇಶವನ್ನು ಮುಚ್ಚದಿರಲು ನಿರ್ಧರಿಸಿದೆ ಎಂದು ವಿಡಿಯೊ ಸಂದೇಶದಲ್ಲಿ ಝೆಲೆನ್‌ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ವಿಮಾನ ಹಾರಾಟವನ್ನು ನಿಷೇಧಿಸುವುದರಿಂದ ರಷ್ಯಾದ ನೇರ ಆಕ್ರಮಣವನ್ನು ಪ್ರಚೋದಿಸಲಿದೆ ಎಂದು ನ್ಯಾಟೊ ಆತಂಕಪಟ್ಟುಕೊಳ್ಳುತ್ತಿದೆ. ಈ ಸಾವಿಗೆ ನ್ಯಾಟೊ ಕೂಡ ಹೊಣೆಯಾಗಲಿದೆ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಟೊ ಮುಖ್ಯಸ್ಥ ಜೆನ್ಸ್‌ ಸ್ಟಾಲ್ಟನ್‌ಬರ್ಗ್ , ‘ನೊ-ಫ್ಲೈ ಜೋನ್’ ಹೇರಲು ನ್ಯಾಟೊ ಯುದ್ಧ ವಿಮಾನಗಳನ್ನು ಉಕ್ರೇನ್‌ ವಾಯುಪ್ರದೇಶಕ್ಕೆ ರವಾನಿಸುವುದೊಂದೇ ಏಕೈಕ ಮಾರ್ಗವಾಗಿದೆ. ಬಳಿಕ ಇದನ್ನು ಕಾರ್ಯಗತಗೊಳಿಸಲು ರಷ್ಯಾದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಬೇಕಾಗುತ್ತದೆ. ನಾವದನ್ನು ಮಾಡಿದ್ದಲ್ಲಿ ಯುರೋಪ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗಲಿದೆ. ಯುದ್ಧದಲ್ಲಿ ಮತ್ತಷ್ಟು ರಾಷ್ಟ್ರಗಳು ಭಾಗಿಯಾಗಿ ಹೆಚ್ಚಿನ ಪ್ರಾಣ ಹಾನಿ ಸಂಭವಿಸಲಿದೆ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಐಎಂಎ ಪತ್ರ

0

ರಷ್ಯಾ ಹಾಗೂ ಉಕ್ರೇನ್​ ನಡುವಿನ ಯುದ್ಧದ ಪರಿಣಾಮವಾಗಿ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬರುವುದಕ್ಕಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಮಿಷನ್ ಗಂಗಾ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆದುಕೊಂಡು ಬಂದಿದ್ದು, ಇದಕ್ಕೆ ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್​ ಸಂಸ್ಥೆ ಕೂಡ ಭಾಗಿಯಾಗಿದೆ.

ಉಕ್ರೇನ್​ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸದ ಖರ್ಚು ಕಡಿಮೆ ಇರುವ ಕಾರಣ ವಿವಿಧ ದೇಶಗಳಿಂದ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಉಕ್ರೇನ್​ಗೆ ತೆರಳಿದ್ದಾರೆ. ಆದರೆ ಈಗ ಯುದ್ಧ ನಡೆಯುತ್ತಿರುವ ರಾಷ್ಟ್ರದಲ್ಲಿ ಉಳಿದುಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಈಗಾಗಲೇ ಭಾರತೀಯ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಾವನ್ನಪ್ಪಿದ್ದು, ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಅಧ್ಯಯನಕ್ಕೆ ಅಡ್ಡಿಯಾಗಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಈ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಮತ್ತು ಭವಿಷ್ಯದ ಬಗ್ಗೆ ಸಂಘವು ಚಿಂತಿಸುತ್ತಿದೆ ಎಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಈಗಾಗಲೇ ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಕೀವ್ ನಗರವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೌಲಿಂಗ್ ನಿಲ್ಲಿಸಿದ ಶೇನ್ ವಾರ್ನ್

0

ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾದ ಆಟಗಾರ ಶೇನ್ ವಾರ್ನ್ ಲೆಜೆಂಡರಿ ಲೆಗ್ ಸ್ಪಿನ್ನರ್ ಆಗಿದ್ದರು. ಇವರು ನಿಧನರಾಗಿದ್ದಾರೆ. 52 ವರ್ಷದ ಶೇನ್​​ ವಾರ್ನ್​​ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಶೇನ್ ವಾರ್ನ್ ಥಾಯ್ಲೆಂಡ್‌ ನ ತಮ್ಮ ವಿಲ್ಲಾದಲ್ಲಿ ಇದ್ದರು. ಶನಿವಾರ ಬೆಳಿಗ್ಗೆ ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಆಸ್ಟ್ರೇಲಿಯಾದ ಈ ಮಾಜಿ ಆಟಗಾರ ಶೇನ್‌ ವಾರ್ನ್​​, ಸಾಯುವ ಮುನ್ನ ಬೆಳಗ್ಗೆ ಆಸೀಸ್ ದಿಗ್ಗಜ ಕ್ರಿಕೆಟಿಗ ರೋಡ್ ಮಾರ್ಶ್ ನಿಧನಕ್ಕೆ RIP ಎಂದು ಸಂತಾಪ ಸೂಚಿಸಿದ್ದರು. ಇದು ಅವರ ಕೊನೆಯ ಟ್ವೀಟ್ ಆಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭೂಗೋಳ ಬಾಹ್ಯಾಕಾಶ ಅಧ್ಯಯನಕ್ಕೆ ಆಧಾರ ಡಿಫರೆನ್ಷಿಯಲ್ ಜ್ಯಾಮಿತಿ

0

ಗಣಿತಶಾಸ್ತ್ರದ ಅನ್ವಯಿಕತೆ ಅಗಾಧವಾಗಿದ್ದು ,ಸಮಕಾಲೀನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಮತ್ತು ಆವಿಷ್ಕಾರಗಳ ತಳಹದಿಯಾಗಿದೆ. ಅದರಲ್ಲಿಯೂ ಭೌಗೋಳಿಕ ಸ್ವರೂಪ, ಬಾಹ್ಯಾಕಾಶ ಸಂಶೋಧನೆ, ಸಾಪೇಕ್ಷತಾ ಸಿದ್ಧಾಂತದ ಅನ್ವಯಿಕ ಅಧ್ಯಯನಗಳಲ್ಲಿ ಡಿಫರೆನ್ಷಿಯಲ್ ಜ್ಯಾಮಿತಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಕಲ್ಕತ್ತಾ ವಿಶ್ವವಿದ್ಯಾಲಯದ ಎಮಿರೆಟಸ್ ಪ್ರಾಧ್ಯಾಪಕ ಪ್ರೊ. ಉದಯ್ ಚಂದ್ ಡೇ ಅವರು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರದಿಂದ‌ ಆರಂಭವಾದ “ಡಿಫರೆನ್ಷಿಯಲ್ ಜ್ಯಾಮಿತಿ” ಕುರಿತ ಎರಡು ದಿವಸಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಮನುಷ್ಯನ ಜೀವನ ಶೈಲಿಯನ್ನು ಉತ್ತಮಪಡಿಸುತ್ತಿರುವುದರಲ್ಲಿ‌ ವಿಜ್ಞಾನ‌ ಮತ್ತು ತಂತ್ರಜ್ಞಾನ ಕ್ಷೇತ್ರದ ಅನ್ವಯಿಕ ಸಂಶೋಧನೆಗಳ ಪಾತ್ರ ಬಹಳ ದೊಡ್ಡದು. ಸಾಮಾನ್ಯ ಜನರಿಗೆ ಉಪಯುಕ್ತವಾಗುವ ಇಂತಹ‌ ಆವಿಷ್ಕಾರಗಳ‌ ತಳಹದಿ‌ ಗಣಿತಶಾಸ್ತ್ರ ಎಂದು ಅವರು ಪ್ರತಿಪಾದಿಸಿದರು.

ಕುಲಪತಿ ಪ್ರೊ.‌ ಬಿ. ಪಿ.‌ವೀರಭದ್ರಪ್ಪ ಮಾತನಾಡಿ, ಗಣಿತಶಾಸ್ತ್ರ ಎಲ್ಲ ವಿಜ್ಞಾನ ವಿಷಯಗಳ ಅಡಿಪಾಯ. ಆದ್ದರಿಂದಲೇ ಗಣಿತಶಾಸ್ತ್ರವನ್ನು ನಿಜವಾದ ವೈಜ್ಞಾನಿಕ ಜ್ಞಾನಶಾಖೆಯೆಂದು ಪರಿಗಣಿಸಲಾಗುತ್ತದೆ ಎಂದರು.

ಕುಲಸಚಿವೆ ಜಿ.‌‌ ಅನುರಾಧ ಮಾತನಾಡಿ, ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿವಿಧ ಸಂಶೋಧನಾ ಪ್ರಾಜೆಕ್ಟ್ ಗಳನ್ನು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಸಮಾಜಕ್ಕೆ ಉಪಯುಕ್ತವಾಗುವ ಅನ್ವಯಿಕ ಸಂಶೋಧನೆಗೆ ವಿಶ್ವವಿದ್ಯಾಲಯ ಒತ್ತು ನೀಡುತ್ತದೆ ಎಂದರು.

ಸರ್ಬಿಯಾದ ನಿಸ್ ವಿಶ್ವವಿದ್ಯಾಲಯದ ಪ್ರೊ. ಜುಬಿಕ್ ವೆಲಿಮಿರೋವಿಕ್, ಟರ್ಕಿಯ ಗಾಜಿ ವಿಶ್ವವಿದ್ಯಾಲಯದ ಪ್ರೊ. ವಾನ್ಲಿ, ಸೌದಿಯ ತೈಬಾ ವಿಶ್ವವಿದ್ಯಾಲಯದ ಪ್ರೊ. ಮಹಮದ್ ಬೆಲ್ ಖೆಲ್ಫಾ ಸಮ್ಮೇಳನದಲ್ಲಿ‌‌ ಭಾಗವಹಿಸಿ ವಿಚಾರ ಮಂಡಿಸಿದರು.

ಪ್ರೊ.‌‌ ಸಿ. ಎಸ್. ಬಾಗೇವಾಡಿ, ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟೇಶ, ಪ್ರೊ.‌ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಬಿ. ಜೆ. ಗಿರೀಶ, ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ಅಧ್ಯಾಪಕರು ಪಾಲ್ಗೊಂಡಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪರಿಸರ ಮಾಲಿನ್ಯ ವಿಶ್ವದಲ್ಲಿ ಭಾರತಕ್ಕೆ ಮೂರನೇ ಸ್ಥಾನ

0

ಆಧುನೀಕರಣದಿಂದ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಪರಿಸರ ನಾಶವಾಗುತ್ತಿದೆ ಎಂದು ಪರಿಸರವಾದಿ, ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗ ತಾಲೂಕಿನ ಬೀರನಕೆರೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಶಾಖೆ ಹಾಗೂ ಜಿಲ್ಲಾ ಶಾಖೆ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಕರ್ನಾಟಕ ದರ್ಶನ ಕಾರ್ಯಕ್ರಮದಲ್ಲಿ ಜಾಗತಿಕ ತಾಪಮಾನದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಹವಾಮಾನ ವೈಪರೀತ್ಯ ತಪ್ಪಿಸಲು ಮಾನವನ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ಅತಿಯಾದ ವಾಹನ ಬಳಕೆ ಹಾಗೂ ಕೈಗಾರಿಕಾ ಕ್ರಾಂತಿ ಮತ್ತು ವಿವಿಧ ಪರಿಣಾಮಗಳಿಂದ ಪ್ರಕೃತಿಗೆ ಹಾನಿಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಆದ್ದರಿಂದ ಮಳೆ ಅವಧಿಯು ವ್ಯತ್ಯಾಸ ಆಗುತ್ತಿದೆ. ಯಾವ ಕಾಲದಲ್ಲಾದರೂ ಮಳೆ ಬರಬಹುದಾಗಿದೆ. ಪ್ರಕೃತಿಯಲ್ಲಿ ಏನು ಬೇಕಾದರೂ ಸಂಭವಿಸಬಹುದಾಗಿದೆ ಎಂದು ತಿಳಿಸಿದರು.

ಭಾರತ ದೇಶವು ಮಾಲಿನ್ಯದಲ್ಲಿ ಮೂರನೇ ಸ್ಥಾನದಲ್ಲಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಅತಿ ಹೆಚ್ಚಾಗಿ ಕಲ್ಲಿದ್ದಲನ್ನು ವಿದ್ಯುಚ್ಚಕ್ತಿ ಉದ್ಪಾದನೆಗೆ ಬಳಸುವುದರಿಂದ ಪರಿಸರ ವಿನಾಶದ ಅಂಚಿನಲ್ಲಿದೆ. ಇದೇ ರೀತಿ ಆದರೆ ಹವಾಮಾನ ತಜ್ಞರು ಹೇಳುವ ಪ್ರಕಾರ 40ರಿಂದ 50 ವರ್ಷಗಳಲ್ಲಿ ಇಡೀ ಜೀವ ವ್ಯವಸ್ಥೆ ಹಾಳಾಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಜಾಗತಿಕ ತಾಪಮಾನದಿಂದ ಅಕಾಲಿಕ ಮಳೆ, ಭೂಕುಸಿತ, ಪ್ರವಾಹ ಹಾಗೂ ಭೂಕಂಪನಗಳು ಸಂಭವಿಸುವುದರಿಂದ, ಜಾಗತಿಕ ತಾಪಮಾನದ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರು ಇದರ ಬಗ್ಗೆ ಜಾಗೃತಿ ವಹಿಸಬೇಕು. ಮಾಹಿತಿ ತಿಳಿದುಕೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕಾದುದು ಅತ್ಯಂತ ಮುಖ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಪ್ರಕೃತಿಯ ಮಹತ್ವ ಅರಿವಾಗುತ್ತದೆ. ಪರಿಸರದ ಬಗ್ಗೆ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ
ಕೆ.ಪಿ.ಬಿಂದಕುಮಾರ್, ಎಚ್.ಪರಮೇಶ್ವರ್, ಚೂಡಾಮಣಿ ಪವಾರ್, ಕಾತ್ಯಾಯಿನಿ, ಭಾರತಿ, ರಾಜೇಶ್ ಅವಲಕ್ಕಿ, ಜಿ.ವಿಜಯ್‌ಕುಮಾರ್, ಡಾ. ಶ್ರೀಪತಿ, ಮಲ್ಲಿಕಾರ್ಜುನ್, ಎಚ್.ಶಿವಶಂಕರ್, ಪರಮೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಮತೋಲನ ಚಿತ್ತದ ಬಜೆಟ್

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ವಿವಿಧ ಜಿಲ್ಲೆಗಳಿಗೂ ವಿವಿಧ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಆರ್ಥಿಕತೆ ಹಂಚಿಕೆಯಾಗಬೇಕು ಎಂಬ ಕಾಳಜಿಯಿಂದ ಜಿಲ್ಲೆಗಳನ್ನು ಗಮದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜು

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಕೊಂಡೊಯ್ಯುವ ಕಾರ್ಯ ನಡೆಯಲಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜು

ಧಾರವಾಡ ಕೃಷಿ ವಿವಿಯಲ್ಲಿ ಡಾ.ಎಸ್.ವಿ. ಪಾಟೀಲ ಕೃಷಿ, ಸಂಶೋಧನೆ ಮತ್ತು ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಆರಂಭ

ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ವಿದ್ಯಾರ್ಥಿಗಳ ಸಾಮರ್ಥ್ಯದ ವಿದ್ಯಾರ್ಥಿನಿಲಯಗಳ ಸಮುಚ್ಚಯ ಆರಂಭಗೊಳ್ಳಲಿದೆ.

ಮೆಣಸು ಮತ್ತು ಸಾಂಬಾರು ಪದಾರ್ಥಗಳ ಗುಣಮಟ್ಟ ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ

ಹಿರೇಕೆರೂರಿನಲ್ಲಿ ಗೋವಿನಜೋಳ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ.
ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ

ರೇಷ್ಮೆ ದ್ವಿತಳಿ ಮೊಟ್ಟಿ ಉತ್ಪಾದಿಸಿ ಶೈತ್ಯೀಕರಿಸಲು ಮದ್ದೂರು, ರಾಣೆಬೆನ್ನೂರು ಮತ್ತು ದೇವನಹಳ್ಳಿಯಲ್ಲಿ 15 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಶೈತ್ಯಾಗಾರಗಳ ನಿರ್ಮಾಣ

ಕಾಳಿ ನದಿಯಿಂದ ನೀರು ಬಳಸಿಕೊಂಡು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ

ಹಾವೇರಿ ಜಿಲ್ಲೆ ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಆರಂಭಗೊಳ್ಳಲಿದೆ.

ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಕೆ.ಸಿ. ವ್ಯಾಲಿ ಎರಡನೆ ಹಂತವನ್ನು 445 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯ ಸ್ಥಾಪಿಸಲು 15 ಕೋಟಿ ರೂ. ಮೀಸಲು

ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ಅಸ್ಪತ್ರೆಯನ್ನು 250 ಹಾಸಿಗೆಗಳ ಅಸ್ಪತ್ರೆಯಾಗಿ ಮೇಲ್ದರ್ಜೆಗೆ

ಹಾವೇರಿ ಜಿಲ್ಲೆ ಸವಣೂರಿನಲ್ಲಿ ಹೊಸ ಅಯುರ್ವೇದ ಕಾಲೇಜು

ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಅಯುಷ್ ವಿಭಾಗ

ಚಿತ್ರದುರ್ಗದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು

ತುಮಕೂರಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಕೇಂದ್ರ. ಅರಂಭದಲ್ಲಿ 10 ಕೋಟಿ ರೂ. ಹಂಚಿಕೆ

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳು

ಎಂದು ಝಮ್ ಹೇಳಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಯಾಗಿದ್ದೇನೆ ಎಂದು ಝಾಮ್ ಹೇಳಿದ್ದಾರೆ.

ಜಾಮ್ ಅವರ ನೇತೃತ್ವದಲ್ಲಿ ಸುಮಾರು 12 ಜನರು ಕೆಲಸ ಮಾಡುತ್ತಿದ್ದಾರೆ.
ಜನರು ಹೆಚ್ಚಾದಂತೆ
ಆಹಾರವನ್ನು ಪ್ಯಾಕಿಂಗ್ ಮಾಡುವುದು ಸಮಸ್ಯೆಯಾಗಿದೆ ಆದರೆ ಸ್ನೇಹಿತರು ಮತ್ತು ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಎದ್ದು ಊಟಕ್ಕೆ ಬೇಕಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಕೆಲಸ ಆರಂಭಿಸುತ್ತೇನೆ’ ಎಂದು ಝಾಮ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನೆ ಮಗನನ್ನೇ ಕಳೆದು ಕೊಂಡ ದುಃಖ

0

ದೇಶ ದೇಶಗಳ ವೈರತ್ವ ದಿಂದ ಇಂದು ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. ಇನ್ನು ಎಷ್ಟು ಆಹುತಿ ಗಳು ಬೇಕು ದೇಶಗಳಿಗೆ…? ಸಾಕು ನಿಲ್ಲಿಸಿಬಿಡಿ, ನಿಮ್ಮ ವೈರತ್ವವನ್ನು… ತಡೆದು ಬಿಡಿ ರಕ್ತಪಾತ ಗಳನ್ನು…

ಎಷ್ಟು ಬೇಸರವೆನಿಸುತ್ತದೆಯಲ್ಲವೇ… ತಾವು ಹೆತ್ತ ಮಗ ವಿದೇಶದಲ್ಲೆಲ್ಲೋ, ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದರೆ ಯಾವ ಹೆತ್ತ ತಂದೆ ತಾಯಿಯಾದರೂ ಈ ನೋವನ್ನು ಸಹಿಸಲು ಅಸಾಧ್ಯ.

ಮೊನ್ನೆ ನಡೆದ ರಷ್ಯಾ ದಾಳಿಯಿಂದಾಗಿ ಉಕ್ರೇನ್ ನಲ್ಲಿದ್ದ ಖಾರ್ಕೀವ್ ನಗರದಲ್ಲಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನ ಗೌಡರ್ ಎಂಬಾತ ಸಾವನ್ನಪ್ಪಿದ್ದಾನೆ.

ತಂದೆ-ತಾಯಂದಿರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಎಂದು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದರೆ, ದೇಶದೇಶಗಳ ವೈರತ್ವದಿಂದ ಏನು ಮಾಡದ ಅಮಾಯಕ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ.

ಒಮ್ಮೆಲೇ ದೇಶಗಳು ಶಾಂತಿಯುತವಾಗಿ ಚರ್ಚೆಗಳನ್ನು ನಡೆಸಿದರೇ… ಇಂದು ನಮ್ಮ ಕರ್ನಾಟಕದ ವಿದ್ಯಾರ್ಥಿಗಳು, ಯೋಧರು ಮತ್ತು ಅನೇಕ ನಾಗರಿಕರ ಪ್ರಾಣ ಉಳಿಯುತ್ತಿತ್ತು.

ತಮ್ಮ ಕ್ರೋಧ, ವೈರತ್ವವನ್ನು ಬಾಂಬ್ ದಾಳಿ ನಡೆಸಿದ ಕೂಡಲೇ ಇತ್ಯರ್ಥ ವಾಯಿತೇ…? ಇದರಿಂದ ಅನೇಕ ಸಾವು-ನೋವುಗಳಾಗುತ್ತದೆ. ಹೊರತು, ಇದರಿಂದ ಯಾರಿಗೂ ಸಮಸ್ಯೆ ಬಗೆಹರಿಯದು. ಇದರಿಂದ ಇನ್ನಷ್ಟು ಸಾವು ನೋವುಗಳಾಗುತ್ತದೆ ಅಷ್ಟೇ.

ಒಮ್ಮೆ ನಿಮ್ಮ ಕ್ರೋಧವನ್ನು ಬದಿಗಿಟ್ಟು ಯೋಚಿಸಿ. ದಾಳಿಯಿಂದಾಗಿ ಸಾವನ್ನಪ್ಪಿದವರು ನಿಮ್ಮಂತೆ ಮನುಷ್ಯರೆಂದು. ಅವರಿಗೂ ಒಂದು ಜೀವನ, ಸಂಸಾರ, ಕುಟುಂಬ ಇರುತ್ತದೆ.

ಎಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕೆಂದು ತೆರಳಿದ್ದಾನೆ, ನಮಗೆ ಮನೆ ಕಟ್ಟಿಸಿ ಕೊಡುತ್ತಾನೆ. ನಮ್ಮ ಕಷ್ಟಗಳೆಲ್ಲ ದೂರವಾಗುವ ಸಮಯ ಹತ್ತಿರ ಬಂದಿದೆ ಎಂದು ಅದೆಷ್ಟು ಕನಸುಗಳನ್ನು ಹೊತ್ತಿದ್ದಂತಹ ತಂದೆ-ತಾಯಿಗೆ ಇಂದು ಸಿಕ್ಕ ಪ್ರತಿಫಲ ವೇನು?

ತಮ್ಮ ಕಷ್ಟಗಳನ್ನು ಯಾರಲ್ಲಿ ಕೇಳುತ್ತಾರೆ? ತಮ್ಮ ಮಗ ಡಾಕ್ಟರ್ ಆಗಿ ಬಡವರ ಸೇವೆ ಮಾಡುತ್ತಾನೆ ಎಂಬ ಕನಸು ಇಂದು ನವೀನ್ ನ ಪೋಷಕರಿಗೆ ಕನಸಾಗಿಯೇ ಉಳಿಯಿತು. ಹೊರತು ನನಸಾಗಲಿಲ್ಲ. ಇದು ಒಂದು ಉದಾಹರಣೆ ಅಷ್ಟೇ.

ಇಂದು ಆತನ ಪಾರ್ಥಿವ ಶರೀರ ವನ್ನು ತರಲು ಸಹ ಕಷ್ಟಪಡುವಂತಹ ಸಂದರ್ಭಗಳು ಎದುರಾಗಿವೆ. ಇಂತಹ ಅದೆಷ್ಟೋ ಕುಟುಂಬಗಳು ಈ ದಾಳಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಅನಾಥವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ…

ಉಕ್ರೇನ್ ಇಂದಿನ ಚಿತ್ರಣ ಎಲ್ಲೆಲ್ಲೂ ಭಯದ ವಾತಾವರಣ, ಜನರು ತಮ್ಮ ಮೂಲಭೂತ ಅವಶ್ಯಕತೆಗೆ ಬೇಕಾದ ವಸ್ತುಗಳನ್ನು ತರಲು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ಇಂದು ಉಕ್ರೇನ್ ನಲ್ಲಿ ಎದುರಾಗಿದೆ.

ಯುದ್ಧ ಎಂಬ ಎರಡಕ್ಷರ ಎಷ್ಟೊಂದು ಅಪಾಯಕಾರಿ ಅಲ್ಲವೇ…! ಈ ಪದ ಎರಡೆ ಅಕ್ಷರ ವಾದರೂ ಅದರ ಹಿಂದೆ ಕ್ರೋಧ, ಕೋಪ, ದ್ವೇಷ ಎಲ್ಲವನ್ನು ಸಹ ಒಳಗೊಂಡಿರುತ್ತದೆ. ಇಂದಾದರೂ ಶಾಂತಿಯನ್ನು ಕಾಪಾಡಲಿ ಪ್ರಯತ್ನಿಸುವುದು ಒಳಿತು…