Wednesday, August 26, 2026
Wednesday, August 26, 2026

ಎಲ್ಲರೂ ಸಹಬಾಳ್ವೆ,ಸಹಕಾರ ಸೇವಾ ಮನೋಭಾವನೆಯಿಂದ ಬಾಳಬೇಕೆಂಬುದೇ ಮಹಾವೀರರ ಸಂದೇಶ- ಕೆ. ರಂಗನಾಥ್

Date:

ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು ಅಹಿಂಸಾ ಧರ್ಮ ಪ್ರತಿಪಾದಕರಾದ ಭಗವಾನ್ ಶ್ರೀ ಮಹಾವೀರ ಜಯಂತಿಯ ಅಂಗವಾಗಿ ದಾರ್ಶನಿಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್ ಮಾತನಾಡಿ ಭಗವಾನ್ ಶ್ರೀ ಮಹಾವೀರರ ಜನನದ ಸಮಯದಲ್ಲಿ, ದೇಶದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿ ಅತ್ಯಂತ ಅನಿಶ್ಚಿತವಾಗಿತ್ತು.

ಮಹಿಳೆಯರು ಮತ್ತು ಕೆಳವರ್ಗದವರನ್ನು ದಮನಿಸಲಾಗುತ್ತಿತ್ತು. ಧರ್ಮದ ಸ್ವರೂಪವು ಬಾಹ್ಯ ಆಡಂಬರ ಮತ್ತು ಪ್ರದರ್ಶನದಲ್ಲಿ ಸಿಲುಕಿಕೊಂಡಿತ್ತು ಮತ್ತು ಜಾತಿವಾದದ ಪ್ರಭಾವವು ಬೆಳೆಯುತ್ತಿತ್ತು.

ಅಂತಹ ಸಮಯದಲ್ಲಿ, ಭಗವಾನ್ ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರಾಗಿ ಇಡೀ ಜಗತ್ತಿಗೆ ಅಹಿಂಸಾ ಧರ್ಮವನ್ನು ಪ್ರತಿಪಾದಿಸುತ್ತ ಎಲ್ಲರೂ ಸಹಬಾಳ್ವೆ, ಸಹಕಾರ ಸೇವಾಮನೋಭಾವದ ಜೀವನವನ್ನು ನಡೆಸಬೇಕೆಂದು ಸಾರಿದರು. ಇಂತಹ ಮಹಾನ್ ದಾರ್ಶನಿಕರ ಜೀವನ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕರಾದ ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್‌.ಪಿ. ಗಿರೀಶ್, ಮದನ್ ಸಿಂಗ್, ಮಹೇಂದ್ರ ಜೈನ್, ರಾಜೇಶ್ ಮಂದಾರ, ಆಚಾರಿ ಗೋಪಿ, ಟಿ ಗುರುಪ್ರಸಾದ್, ಕೆ ಎಲ್ ಪವನ್, ರಜನಿಕಾಂತ್, ಆರ್ ಕಿರಣ್, ಕೇಬಲ್ ಲೋಕೇಶ್, ಜಯಪ್ರಕಾಶ್, ಸುಬ್ರಮಣಿ, ನಂದನ್, ಶ್ರೀಕಾಂತ್, ರಾಘವೇಂದ್ರ, ಮನ್ವಿಕ್ ಜೈನ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shimoga ಇಂಟರಾಕ್ಟ್ ಕ್ಲಬ್ ಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ವೇದಿಕೆ: ಸುಮತಿ ಜಿ.ಕುಮಾರಸ್ವಾಮಿ

Rotary Club Shimoga ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಾರ್ವಜನಿಕ...

S.N. Channabasappa “ಮನರಂಜನೆ” ಮನುಷ್ಯ ಜೀವನದ ಭಾಗ.ಆ ಸಾಂಸ್ಕೃತಿಕ ಸೊಬಗು ಜೀವನದಲ್ಲಿ ಅಡಕವಾಗಿರಬೇಕು- ಎಸ್.ಎನ್.ಚನ್ನಬಸಪ್ಪ

S.N. Channabasappa ಮಾರ್ನಾಮಿಬೈಲು ಎನ್ನುವುದು ಒಂದು ಇತಿಹಾಸ ಪ್ರಸಿದ್ದತೆ ಪಡೆದಿದೆ, ನಗರದ...

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...