Monday, March 30, 2026
Monday, March 30, 2026
Home Blog Page 576

Department of Food Civil Supplies ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘನೆ. ಅಂಗಡಿ ಮಾಲೀಕರಿಂದ ದಂಡ ವಸೂಲಿ

0

Department of Food Civil Supplies ಆಹಾರ ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಗಳು ಜಂಟಿಯಾಗಿ ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ದಾಳಿ ನಡೆಸಿ ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ವಿಧಿಸಿರುತ್ತಾರೆ.

ಆಹಾರ ಸುರಕ್ಷತೆ ಮತ್ತು ಕಲಬೆರಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘನೆ ಪ್ರಕರಣದಡಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ವಾತಿ ಎಂಟರ್ಪ್ರೈಸಸ್ ಇವರಿಗೆ ರೂ.10,000/- ಮತ್ತು ಹಾಟ್‌ಸ್ಪಾಟ್ ಕೆಫೆ ಹಾಗೂ ರೈಲ್ವೆ ನಿಲ್ದಾಣದಲ್ಲಿನ ಕಾಫಿ ಶಾಪ್ ಇವರಿಗೆ ತಲಾ ರೂ.5000/- ಗಳ ದಂಡವನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ವಿಧಿಸಿರುತ್ತಾರೆ.
ಮತ್ತು ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದ ಮೂರು ಹೋಟೆಲ್ ಗಳಿಂದ ಒಟ್ಟು ಏಳು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿರುತ್ತಾರೆ.

Department of Food Civil Supplies ತಯಾರಿ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ಇಲ್ಲದ ಆಹಾರ ಪದಾರ್ಥಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ದಿನಾಂಕ ನಮೂದಾಗಿರದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿರುತ್ತಾರೆ.

Youth Hostels Association ಚಾರಣಗಳಲ್ಲಿ ನಿರಂತರ ಭಾಗಿಯಾಗಿದ್ದಕ್ಕೆ ರಾಷ್ಟ್ರೀಯ ಮಂಡಳಿ ಮನ್ನಣೆ- ಅ.ನಾ.ವಿಜೇಂದ್ರರಾವ್

0

Youth Hostels Association ಚಾರಣಗಳಲ್ಲಿ ಹೆಚ್ಚು ಯಶಸ್ಸು ಸಾಧಿಸಲು ಸಾಧ್ಯವಾಗಿದ್ದು, ನಿರಂತರ ಚಾರಣಗಳಲ್ಲಿ ಭಾಗವಹಿಸಿದ್ದರಿಂದ ಉನ್ನತ ಸ್ಥಾನ ಲಭಿಸಿದೆ ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಮಂಡಳಿ ಸದಸ್ಯ ಅ.ನಾ.ವಿಜಯೇಂದ್ರ ರಾವ್ ಹೇಳಿದರು.

ಶಿವಮೊಗ್ಗದಲ್ಲಿ ಯೂತ್ ಹಾಸ್ಟೆಲ್ ತರುಣೋದಯ ಘಟಕದಿಂಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಸದಸ್ಯರು ಅತ್ಯುತ್ತಮವಾಗಿ ಚಾರಣಗಳಲ್ಲಿ ಭಾಗವಹಿಸುತ್ತಿದ್ದಾರೆ. ನನಗೆ ಉನ್ನತ ಸ್ಥಾನ ದೊರಕಲು ಎಲ್ಲರ ಸಹಕಾರ ಕಾರಣ. ಈ ಸನ್ಮಾನ ನಿಮ್ಮೆಲ್ಲರಿಗೂ ಸಲ್ಲಬೇಕು ಎಂದು ತಿಳಿಸಿದರು.

ಯೂತ್ ಹಾಸ್ಟೆಲ್ಸ್ ನಿಯಮ, ನಿಬಂಧನೆಗಳು, ಸುರಕ್ಷಿತ ನಡುವಳಿಕೆ, ಪ್ರತ್ಯೇಕ ವಸತಿ ಸೌಕರ್ಯ, ಉತ್ತಮ ಆಹಾರ, ಕಡಿಮೆ ಖರ್ಚಿನಲ್ಲಿ ಇರುವ ಅನುಕೂಲಗಳನ್ನು ನಮ್ಮ ಘಟಕದ ಸದಸ್ಯರು ಉಪಯೋಗಿಸುತ್ತಿದ್ದಾರೆ. ಇದರಿಂದ ನಮ್ಮ ಘಟಕವನ್ನು ಗುರುತಿಸಿ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯನಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.

Youth Hostels Association ಅಧ್ಯಕ್ಷತೆ ವಹಿಸಿದ್ದ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಪ್ರತಿಯೊಬ್ಬರೂ ದಿನನಿತ್ಯದ ಜಂಜಾಟದಿಂದ ಹೊರಬರಲು ಆಗಾಗ್ಗೆ ಪ್ರಕೃತಿಯೊಂದಿಗೆ ಬೆರೆತು ಚಾರಣ ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಹೊಸ ಸ್ನೇಹಿತರು ದೊರಕುತ್ತಾರೆ. ಈ ವಿಚಾರದಲ್ಲಿ ಯೂತ್ ಹಾಸ್ಟೆಲ್ಸ್ ಉತ್ತಮ ಕಾರ್ಯಕ್ರಮ ಮಾಡುತ್ತಿರುವುದರಿಂದ ನಮ್ಮ ಘಟಕದ ಸದಸ್ಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಹೆಚ್ಚು ಸದಸ್ಯರನ್ನು ಪರಿಚಯಿಸಬೇಕು ಎಂದು ತಿಳಿಸಿದರು.

ತರುಣೋದಯ ಘಟಕ ಹೆಚ್ಚು ಚಾರಣಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಸುಮಾರಾಣಿ ಪ್ರಾರ್ಥಿಸಿದರು. ದಿಲೀಪ್ ನಾಡಿಗ್ ಸ್ವಾಗತಿಸಿದರು. ಜಿ.ವಿಜಯಕುಮಾರ್ ನಿರೂಪಿಸಿದರು. ಪ್ರಕೃತಿ ಮಂಚಾಲೆ ವಂದಿಸಿದರು.

DC Shivamogga ಮಾಸಿಕ ಪಿಂಚಣಿ ಸಂದಾಯವಾಗಿಲ್ಲದವರು ಆಧಾರ್ ಅಪ್ ಡೇಟ್ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ

0

DC Shivamogga ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆ (ಡಿಬಿಟಿ) ಮೂಲಕ ಪಾವತಿಸುತ್ತಿದ್ದು, ಆಧಾರ್ ಡೃಢಿಕರಣ ವಿಫಲವಾದ 2937 ಫಲಾನುಭವಿಗಳು ಮತ್ತು ಹೆಸರು ಹೊಂದಾಣಿಕೆ ಇರುದ 21 ಫಲಾನುಭವಿಗಳಿಗೆ ಕಳೆದ ಮಾರ್ಚ್-2024 ರಿಂದ ಮಾಸಿಕ ಪಿಂಚಣಿ ಸಂದಾಯವಾಗಿರುವುದಿಲ್ಲ.
DC Shivamogga ಮಾಸಿಕ ಪಿಂಚಣಿ ಸಂದಾಯವಾಗದೇ ಇರುವ ಫಲಾನುಭವಿಗಳು ಕೂಡಲೇ ಮಂಜೂರಾತಿ ಆದೇಶ ಪತ್ರ, ಆಧಾರ್ ಕಾರ್ಡ್, ಪಾಸ್ ಪುಸ್ತಕ ಮತ್ತು ಎನ್.ಪಿ.ಸಿ.ಐ. ಮ್ಯಾಪಿಂಗ್ ಆಗಿರುವುದರ ಪ್ರತಿಯೊಂದಿಗೆ ಸಂಬಂಧಿಸಿದ ತಾಲ್ಲೂಕು ಕಛೇರಿ/ನಾಡ ಕಛೇರಿಗೆ ಭೇಟಿ ನೀಡಿ ಆಧಾರ್ ಅಪ್ ಡೇಟ್ ಮಾಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ

S.N. Chennabasappa ಮೂಲಭೂತ ಸೌಕರ್ಯ ಒದಗಿಸಲು ಆನಂದರಾವ್ ಬಡಾವಣೆ ಸಂಘದವರಿಂದ ಶಾಸಕರ ಭೇಟಿ

0

S.N. Chennabasappa ಶಿವಮೊಗ್ಗದ ಎಂ.ಆನಂದರಾವ್ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಸಮರ್ಕವಾಗಿಲ್ಲ. ಅದೇ ರೀತಿ, ಇಲ್ಲಿನ ಮಂಜುನಾಥ ಬಡಾವಣೆಯಲ್ಲಿ ಪುಂಡರು ಗಾಂಜಾ ಸೇವಿಸಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೀರ ಕೇಸರಿ ಹನುಮಾನ್‌ ಸೇವಾ ಸಂಘ ಸದಸ್ಯರು ಶಾಸಕ ಎಸ್.ಎನ್.‌ ಚೆನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

S.N. Chennabasappa ಈ ಬಡಾವಣೆಯಲ್ಲಿ ನೀರಿನ ವ್ಯತ್ಯಯ ಹೆಚ್ಚಿದೆ. ಆದ್ದರಿಂದ ದಿನ ಬಳಕೆಗೆ ತುಂಬಾ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೊಳಿಸುವಂತೆ ಅನೇಕ ಭಾರಿ ಸಂಬಂಧ ಪಟ್ಟ ಅಧಿಕಾರಿಗಳು, ಎಂಜಿನಿಯರ್‌ ಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈ ವರೆಗೆ ಕ್ರಮಕೈಗೊಂಡಿಲ್ಲ. ಆದ್ದರಿಂದ, ಕೂಡಲೇ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

Klive Special Article ಕಾಡುವ ಹುಡುಗನ ಹಾಡು ಓದುಗರ ಅನಿಸಿಕೆ

0

Klive Special Article ಕಾಡುವ ಹುಡುಗನ ಹಾಡು…
ಇತ್ತೀಚೆಗೆ ನಾನು ಓದಿದ ಕಾವ್ಯಗುಚ್ಚಗಳಲ್ಲಿ ವಿನೂತನವಾಗಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು. ಕದಂಬರಾಳಿದ ಬನವಾಸಿಯತಹ ಊರಲ್ಲಿ ಹುಟ್ಟಿ, ಸಾಧನೆಯ ಹಾದಿ ಹಿಡಿದು ಊರೂರು ಸುತ್ತಿ, ಶೈಕ್ಷಣಿಕವಾಗಿ ತಾನೂ ಬೆಳೆದು, ಸಾಹಿತ್ಯದಲ್ಲೂ ಕೃಷಿ ಮಾಡುತ್ತಿರುವ ಅಂಜುಂ ಅವರ ಬರಹದ ಬೇರು ನೆಲೆಯೂರಿ ಹೆಮ್ಮರವಾಗಿ ಬೆಳೆದು ಸಾಹಿತ್ಯಲೋಕದಲ್ಲಿ ಹೊಸ ಹೊಸ ಹೂಗುಚ್ಚಗಳನ್ನ ನೀಡುವಂತಾಗಲಿ.

ದೈನಂದಿನ ಬದುಕಿನೊಂದಿಗೆ ತಾನು ಬೆರೆತ ಸಮಾಜವನ್ನ ತನ್ನ ಒಳಗಣ್ಣಿನಿಂದ ಸೂಕ್ಷ್ಮವಾಗಿ ಕಾಣುವ ಮನಸ್ಸಿದ್ದವರಲ್ಲಿ ಮಾತ್ರ ಈ ಒಂದು ಕವಿ ಹೃದಯ ಕಾಣಬಹುದು ಎನ್ನುವುದು ನನ್ನ ಭಾವನೆ.
ನಾಟ್ಯಕ್ಕೆ ಹೆಸರಾದ ನವಿಲು ಗಂಡೇ ಅದರೂ ನೋಡುವುದಕ್ಕೂ, ಆಡುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲದ ಇಂದಿನ ನಾಗರಿಕ ಎಂಬ ಸಮಾಜದಲ್ಲಿ
Klive Special Article ತಪ್ಪು ನಡೆದರೆ ಗಂಡೇ ಎಲ್ಲಕ್ಕೂ ಕಾರಣ ಎಂಬಂತೆ ಬಿಂಬಿಸುವುದೇ ಹೆಚ್ಚು.
ಇಂತಹವರ ನಡುವೆ ಗಂಡಿಗೂ ಒಂದು ಮನಸ್ಸಿದೆ. ಅವನಲ್ಲೂ ಎಲ್ಲವನ್ನ, ಎಲ್ಲರನ್ನ ಪ್ರೀತಿಯಿಂದ ಕಾಣುವ ಮನಸ್ಸಿದೆ, ಸಹೃದಯಿಯಾದ ಅವನೂ ಎಲ್ಲರಿಂದಲೂ ಪ್ರೀತಿಪಾತ್ರನಾಗಬಲ್ಲ ಎಂಬುದನ್ನ ಮನಸ್ಸಿನ ಪುಟಗಳಲ್ಲಿ ಅರಳಿಸುವಲ್ಲಿ ಅಂಜುಂ ಪ್ರಯತ್ನ ಉತ್ತಮವಾಗಿ ಮೂಡಿದೆ.
ನಿಮ್ಮ ಕಾವ್ಯಪ್ರಪಂಚ ವಿಶಾಲವಾಗಿ ಬೆಳೆದು ಕಾವ್ಯಾಸಕ್ತರ ಮನತಣಿಸುವಂತಾಗಲಿ…
ಶುಭವಾಗಲಿ
ಅಂಜದೇ ಮುನ್ನಡೆ ಅಂಜುಮ್…..

ಪುಸ್ತಕ: ಕಾಡುವ ಹುಡುಗನ ಹಾಡು
ಲೇಖಕರು: ಅಂಜುಮ್ ಬಿ.ಎಸ್.
ಪ್ರಕಾಶಕರು : ಸುವ್ವಿ ಪ್ರಕಾಶನ ಶಿಕಾರಿಪುರ
ಪುಟ: 106
ಬೆಲೆ:110
ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಲು ಕರೆ ಮಾಡಿ 9980197085

ಕನ್ನಡದ ಓದುಗ…

ಲೇ: ಆದಿತ್ಯ ಪ್ರಸಾದ್

Kuvempu University ಕುವೆಂಪು ವಿವಿಯಲ್ಲಿ ನಾಯಕತ್ವ ಕುರಿತ ಕಾರ್ಯಾಗಾರ ಸಂಪನ್ನ

0

Kuvempu University ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಆವರಣದಲ್ಲಿ ಇತ್ತೀಚೆಗೆ ನಾಯಕತ್ವದ ಅಭಿವೃದ್ದಿಯ ಬಗ್ಗೆ ಒಂದು ದಿನದ ಕಾರ್ಯಗಾರ ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕುವೆಂಪು ವಿಶ್ವವಿದ್ಯಾಲಯದ ಉಪ ಕಪಲಪತಿ ಪ್ರೊ. ಶರತ್ ಆನಂತಮೂರ್ತಿ ಕಾರ್ಯಗಾರ ಶಿಬಿರವನ್ನು ಉದ್ಘಾಟಿಸಿದರು.

ಮೂಲಸೌಕರ್ಯ ಅಭಿವೃದ್ಧಿ ಬಂದರುಗಳು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಪ್ಸಿಬಾ ಕೊರ್ಲಪತಿ ಅವರು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಬಗ್ಗೆ ಮಾಹಿತಿ ನೀಡಿದರು.

Kuvempu University ಉದ್ಯಮಿ ನಿವೇದನ್ ನೆಂಪೆ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಭದ್ರೀಶ್, ಕೆ.ಮಂಜುನಾಥ್,ಎ.ಎಲ್ ಮಂಜುನಾಥ್ ಇದ್ದರು.

Klive Special Article ಆದರ್ಶನೀಯ ಶಿಕ್ಷಕ ರತ್ನಶ್ರೀರೋನಿ ಡಿ.ಬೆರ್ಟಾ

0

Klive Special Article ಯೇ ಪ್ರಿಯಾಣಿ ಚ ಭಾಷಂತೇ ಪ್ರಯಚ್ಛಂತಿ ಚ ಸತ್ಕೃತಮ್ l
ಶ್ರೀಮಂತೋ ವಂದ್ಯಚರಣಾ ದೇವಾಸ್ತೇ ನರವಿಗ್ರಹಾಃ ll
ಯಾರು ಪ್ರಿಯವಾದದ್ದನ್ನು ಮಾತಾಡುತ್ತಾರೋ ಸತ್ಕಾರ್ಯವನ್ನು ಮಾಡುತ್ತಾರೋ ಅವರು ಶ್ರೀಮಂತರು, ಗೌರವಾನ್ವಿತರು, ವಂದನೀಯರು ಹಾಗೂ ಮನುಷ್ಯರೂಪದ ದೇವರು ಎನ್ನುವ ಸುಭಾಷಿತದಂತೆ ಇರುವಂತಹ ವ್ಯಕ್ತಿಗಳು ವಿರಳ. ಆ ಸಾಲಿನಲ್ಲಿ ನನಗೆ ಕಂಡು ಬಂದ ವ್ಯಕ್ತಿಯೊಬ್ಬರ ಪರಿಚಯ ಇಂದು ಮಾಡಿಕೊಡುವುದು ಸೂಕ್ತ ಎನಿಸಿ, ಈ ಲೇಖನ ಬರೆಯಲಾರಂಭಿಸಿದೆ.

ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ ಮತ್ತು ಪರಿಸರದ ಕುರಿತಾದ ಕುತೂಹಲ ಇದಕ್ಕೆ ತಾವು ಜನಿಸಿದ ಪ್ರದೇಶವೂ ಕಾರಣವಾಗಿತ್ತು. ಕುದುರೆಮುಖ ಎಂಬ ಪ್ರದೇಶವೇ ಹಾಗೆ ಅದು ಕಬ್ಬಿಣದ ಅದಿರಿನ ನಿಕ್ಷೇಪ ಹಾಗೂ ವನ್ಯಜೀವಿಗಳು ಮತ್ತು ಜೀವ ವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲಿಯೇ ಇದ್ದುದರಿಂದ ಸಹಜವಾಗಿಯೇ ಪ್ರಕೃತಿಯಲ್ಲಿ ಪ್ರೇಮ ಮತ್ತು ಪಕ್ಷಿಗಳ ಕುರಿತಾದ ಆಸಕ್ತಿ ಮೂಡಿತೆಂದರೆ ಆಶ್ಚರ್ಯವೇನಿಲ್ಲ.

ನಂತರ ತನ್ನ ಉನ್ನತ ಅಧ್ಯಯನ ನಡೆಸಿದ್ದು ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅದರಲ್ಲಿ ಅತಿಯಾದ ಪ್ರೀತಿ ಬೆಳೆಸಿಕೊಂಡ ಮೇಲೆ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ನಿರಂತರ ಅಧ್ಯಯನದ ಆಸಕ್ತಿಯನ್ನು ಹೊಂದಿ ತಮ್ಮ ವೃತ್ತಿಯಲ್ಲಿ ಸಾಕಷ್ಟು ಪರಿಣತಿ ಪಡೆದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಅತ್ಯುತ್ತಮ ಮಾರ್ಗದರ್ಶಕರಾದರು. ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರೂ ಆದರು. ಬರಿ ಇಷ್ಟೇ ಅವರ ಗುಣಗಳಾಗಿದ್ದಿದ್ದರೆ ಈ ಲೇಖನ ಬರೆಯುವ ಕಾರಣವೇ ಇರುತ್ತಿರಲಿಲ್ಲ. ಆದರೆ ಅವರ ಕುರಿತಾಗಿ ಹೇಳ ಹೊರಟರೆ ಅದು ಮುಗಿಯುವುದೇ ಇಲ್ಲ ಆದರೂ ನಾನು ಗುರುತಿಸಿದಷ್ಟು ಹೇಳುವುದಾದರೆ,
ತಾನು ಸ್ವತಃ ಮಗುವಿನ ಮುಗ್ಧ ಮನಸ್ಸನ್ನು ಹೊಂದಿ, ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಹಿಸುವವರು. ಒಂದರ್ಥದಲ್ಲಿ ಕಾಯಕಯೋಗಿ ಎಂದರೂ ತಪ್ಪಾಗಲಾರದು. ಶಿಸ್ತಿನ ಸಿಪಾಯಿಯಾದ ಅವರ ಕಾರ್ಯನಿಷ್ಠೆಯನ್ನು ಎಂಥವರಾದರೂ ಮೆಚ್ಚದೇ ಇರಲಾರರು. ಏನೇ ಕೆಲಸವನ್ನು ನೀಡಿದರೂ ಅದನ್ನು ಪೂರ್ಣವಾಗಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಸ್ವಭಾವ ಅವರದು. ಇದೆಲ್ಲಕ್ಕಿಂತ ಮಿಗಿಲಾಗಿ ಇನ್ನೊಂದು ವಿಶಿಷ್ಟವಾದ ಗುಣವೆಂದರೆ ಪ್ರತಿಫಲದ ಅಪೇಕ್ಷೆ ಇಲ್ಲದೆ ಕೆಲಸ ಮಾಡುವ ವ್ಯಕ್ತಿ. ಅಬ್ಬಾ! ಈ ಕಾಲದಲ್ಲಿಯೂ ಇಂಥವರು ಇದ್ದಾರಾ ಎಂದು ಆಶ್ಚರ್ಯ ಪಡುವ ಗುಣ ಸ್ವಭಾವ ಇವರದು. ಒಮ್ಮೆ ತಾವು ಉದ್ಯೋಗ ಮಾಡುವ ಸ್ಥಳದಲ್ಲಿ ಸಂಬಳ ಹೆಚ್ಚು ಮಾಡಿದರೆಂದು ಗಾಬರಿಯಾಗಿ ಓಡಿ ಹೋಗಿ ನನಗೆ ಸಂಬಳ ಹೆಚ್ಚಾಯಿತು ದಯಮಾಡಿ ಕಡಿಮೆ ಮಾಡಿ ಎಂದು ಹೇಳಿದ ಮಹಾನುಭಾವ.

Klive Special Article ಮೇಲಿನವುಗಳೆಲ್ಲ ಒಂದೆಡೆಯಾದರೆ ಆ ವ್ಯಕ್ತಿ ಒಬ್ಬ ಉತ್ತಮ ಪರಿಸರ ಪ್ರೇಮಿ. ಮಳೆ, ಹವಾಮಾನ, ಮರ, ಪಕ್ಷಿ ಇವುಗಳ ಕುರಿತಾಗಿ ಏನನ್ನು ಕೇಳಿದರೂ ಸಮಗ್ರವಾಗಿ ತಿಳಿಸಬಲ್ಲ ತಜ್ಞ. ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳನ್ನು ಮಗುವಂತೆ ಆರೈಕೆ ಮಾಡುವ ಮಹನೀಯ. ತಾನು ಪ್ರತಿನಿತ್ಯ ಮನೆಗೆ ನಡೆದೇ ಸಾಗುವ ಅವರು ಗಿಡಗಳಿಗೆ ನೀರೆರೆದು ಹೋಗುತ್ತಿದ್ದರು. ಕೆರೆಯಲ್ಲಿ ನೀರು ಕಡಿಮೆಯಾದಾಗ ಟ್ಯಾಂಕರ್ ಗೆ ಹಣ ಕೊಟ್ಟು ನೀರು ಹಾಕಿಸುತ್ತಿದ್ದರು. ಒಮ್ಮೆ ಕಾಲೇಜಿನಲ್ಲಿ ಒಂದು ವಿಶಿಷ್ಟವಾದ ಮರವನ್ನು ಕಾರಣಾಂತರದಿಂದ ಕಡಿದಾಗ ಬಹು ನೊಂದುಕೊಂಡಿದ್ದು ಅವರ ಪರಿಸರ ಪ್ರೇಮಕ್ಕೆ ಸಾಕ್ಷಿ.

ಅವರೊಬ್ಬ ಉತ್ತಮ ಬಾಣಸಿಗರೆಂಬುದಕ್ಕೆ ಹಬ್ಬ ಬಂದಾಗ ವಾರದ ಮೊದಲೇ ವಿವಿಧ ರೀತಿಯ ತಿಂಡಿಗಳನ್ನು ಮಾಡಿ, ಹಬ್ಬ ಮುಗಿದ ಮೇಲೆ ಕಾಲೇಜಿಗೆ ಅದನ್ನು ಹಂಚುವ ಅವರ ಸಂಭ್ರಮ ನಿಜಕ್ಕೂ ಶ್ಲಾಘನೀಯ. ಮನೆಗೆಲಸದಲ್ಲಿಯೂ ಸಹ ಪ್ರಾವಿಣ್ಯತೆ ಹೊಂದಿರುವುದು ಅವರ ವಿಶೇಷತೆಗಳಲ್ಲಿ ಒಂದು.

ಬೋರ್ಡ್ ಮೇಲೆ ಅಕ್ಷರ ಮೂಡಿಸುತ್ತಿದ್ದರೆ ಅಳಿಸಲು ಮನಸೇ ಬರುವುದಿಲ್ಲವೆಂಬಷ್ಟು ಮುದ್ದಾಗಿ ಬರೆಯುವ ಬರಹಗಾರ. ಚುರುಕುತನದ, ಅಸೂಯಾ ವ್ಯಕ್ತಿತ್ವವನ್ನು ಹೊಂದಿರದ ಇವರು ಗೀತೆಯಲ್ಲಿ ಕೃಷ್ಣ ಹೇಳುವಂತಹ ಸ್ಥಿತಪ್ರಜ್ಞನಂತೆಯೇ ಬದುಕುತ್ತಿರುವವರು. ಹೊಗಳಿಕೆಗೆ ಏರದ, ತೆಗಳಿಕೆಗೆ ಇಳಿಯದ ಇವರು ನನಗೆ ಕಂಡದ್ದು ದೇವಮಾನವನಂತೆಯೇ ವಂದನೀಯರು.

ಇಷ್ಟೆಲ್ಲಾ ಸದ್ಗುಣಗಳ ಗಣಿ ಯಾರೆಂದರೆ ಪೇಸ್ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಶ್ರೀ ರೋನಿ ಡಿ. ಬೆರ್ಟಾ. ಒಬ್ಬ ಆದರ್ಶ ಶಿಕ್ಷಕರಾದ ಇವರು ಹಾಗೂ ಇವರ ಜೀವನ ಎಲ್ಲರಿಗೂ ಪ್ರೇರಣಾದಾಯಿ. ಎಲೆ ಮರೆ ಕಾಯಿಯಂತೆ ಇರುವ ಇವರು ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸ್ಮರಣೀಯರು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜು ಶಿವಮೊಗ್ಗ.

CP Yogeshwar ಟಿಕೆಟ್ ಕೊಡಲಿ ,ಬಿಡಲಿ ಪಕ್ಷದೊಂದಿಗೆ ಇರುವೆ- ಸಿ.ಪಿ.ಯೋಗೀಶ್ವರ್

0

CP Yogeshwar ವರಿಷ್ಠರ ಭೇಟಿ ಬಳಿಕ ಪಕ್ಷ ನನ್ನ ಜೊತೆ ಇದೆ, ಪಕ್ಷದ ವರಿಷ್ಠರು ಜೊತೆಗಿದ್ದಾರೆ ಎಂದು ಎನಿಸಿದೆ. ಟಿಕೆಟ್ ಸಿಗಲಿ, ಸಿಗದೇ ಇರಲಿ ನಾನು ಪಕ್ಷದ ಜೊತೆ ಇರುತ್ತೇನೆ ಎಂದು ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯ ಮುಖಂಡರ ಜೊತೆ ರಾಷ್ಟ್ರೀಯ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಉಪಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಚುನಾವಣೆ ಪ್ರಕಟವಾದ ಮೇಲೆ ಟಿಕೆಟ್ ಬಗ್ಗೆ ತೀರ್ಮಾನ ಆಗುತ್ತದೆ. ನಮ್ಮ ಹೈಕಮಾಂಡ್ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ.

CP Yogeshwar ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕು. ಹಾಗಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು ಎಂದರು.

DC Shivamogga ಗಣೇಶ ವಿಸರ್ಜನೆಗೆ ತೆಪ್ಪ, ಲೈಫ್ ಜಾಕೆಟ್ ಬಳಕೆ ಕಡ್ಡಾಯ. ಈಜುಗಾರರ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯಬೇಕು- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಸೆ. 07 ರಂದು ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ ವಿವಿಧ ದಿನಾಂಕಗಳಂದು ವಿಸರ್ಜನೆಯನ್ನು ಮೆರವಣಿಗೆ ಮೂಲಕ ಹೊಳೆ, ನದಿ, ಕೆರೆಗಳು, ಹಿನ್ನೀರು ಪ್ರದೇಶಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ತೆಪ್ಪ ಬಳಕೆ ಮಾಡಿದ್ದಲ್ಲಿ ಕೇವಲ ಮೂರರಿಂದ DC Shivamogga ನಾಲ್ಕು ಜನರಿಗೆ ಮಾತ್ರ ತೆಪ್ಪದಲ್ಲಿ ಹೋಗಲು ಅವಕಾಶವನ್ನು ನೀಡಿ, ಕಡ್ಡಾಯವಾಗಿ ಲೈಫ್ ಜಾಕೇಟ್ ಬಳಸಿಕೊಂಡು ನುರಿತ ಈಜುಗಾರರ ಸಮ್ಮುಖದಲ್ಲಿ ಗಣಪತಿ ವಿಸರ್ಜನೆ ಮಾಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡಿಯವರು ಆದೇಶಿಸಿದ್ದಾರೆ

Youth Hostel Taranodaya ತರುಣೋದಯ ವೈಎಚ್ ಘಟಕ ರಾಷ್ಟ್ರಮಟ್ಟದಲ್ಲೇ ಅತ್ಯುತ್ತಮ ಕಾರ್ಯಮಾಡುತ್ತಿದೆ – ಎನ್.ಗೋಪಿನಾಥ್

0

Youth Hostel Taranodaya ಉತ್ತಮ ಸಂಘಟನೆಯಿಂದ ಸದಸ್ಯರಿಗೆ ಹೆಚ್ಚಿನ ಅವಕಾಶಗಳಿದ್ದು, ಸಂಘಟನೆ ಸದೃಢಗೊಳ್ಳಲು ಎಲ್ಲರ ಸಹಕಾರ ಮುಖ್ಯ ಎಂದು ಯೂತ್ ಹಾಸ್ಟೆಲ್ ತರಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ತರುಣೋದಯ ಘಟಕದ ಹಿರಿಯ ಸದಸ್ಯರಾದ ಸಿದ್ದಲಿಂಗಯ್ಯ ದಂಪತಿ, ವೀರಭದ್ರಪ್ಪ ಪೂರ್ಣಿಮಾ ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಪ್ರತಿ ವರ್ಷ ನೂರಾರು ಸದಸ್ಯರನ್ನು ಹಿಮಾಲಯ ಚಾರಣಕ್ಕೆ ಕಳಿಸುತ್ತಿರುವುದರಿಂದ ಹಾಗೂ ನಮ್ಮ ಘಟಕ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು, ಅ.ನಾ.ವಿಜಯೇಂದ್ರ ಅವರನ್ನು ಇತ್ತೀಚೆಗೆ ರಾಷ್ಟ್ರೀಯ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಚೇರ್ಮನ್ ವಾಗೇಶ್ ಮಾತನಾಡಿ, ಸದಸ್ಯತ್ವದಲ್ಲಿ ರಾಜ್ಯದಲ್ಲಿ ನಮ್ಮ ಘಟಕ ಎರಡನೇ ಸ್ಥಾನದಲ್ಲಿ ಇದ್ದು, ಪ್ರಥಮ ಸ್ಥಾನಕ್ಕೆ ಏರಲು ತಮ್ಮೆಲ್ಲರ ಸಹಕಾರ ಮುಖ್ಯ. ಎಲ್ಲರ ಸಂತೋಷಕ್ಕಾಗಿ ಚಾರಣ ಹಮ್ಮಿಕೊಳ್ಳುತ್ತೇವೆ. ದೇಶಾದ್ಯಂತ ವರ್ಷದ ಎಲ್ಲ ಹವಾಗುಣಕ್ಕೆ ಹೊಂದುವಂತಹ ರಾಷ್ಟ್ರೀಯ ಚಾರಣ ಏರ್ಪಡಿಸಲಾಗುತ್ತದೆ. ಸದಸ್ಯರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

Youth Hostel Taranodaya ಗೌರವ ಸ್ವೀಕರಿಸಿ ಮಾತನಾಡಿದ ಅ.ನಾ.ವಿಜಯೇಂದ್ರ, ಯೂತ್ ಹಾಸ್ಟೇಲ್ಸ್ ಇತ್ತೀಚೆಗೆ ಚಾರಣ ಮಾಡಲು ಆಗದವರಿಗೆ ವಿದೇಶಿ, ಧಾರ್ಮಿಕ, ಸಾಮಾಜಿಕ ಪ್ರಸಿದ್ಧಿ ಹೊಂದಿದ ಪ್ರದೇಶಕ್ಕೆ ಪ್ರವಾಸವನ್ನು ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗಿ ಬರಲಾಗುತ್ತಿದೆ ಎಂದರು.

ಯಶೋಧಾ ಶೇಖರ್ ಪ್ರಾರ್ಥಿಸಿದರು. ಭಾರತಿ ಗುರುಪಾದಪ್ಪ ಸ್ವಾಗತಿಸಿದರು. ಡಾ. ಪ್ರಕೃತಿ ಮಂಚಾಲೆ ವಾರ್ಷಿಕ ವರದಿ ವಾಚಿಸಿದರು. ನಾಗರಾಜ್ ಲೆಕ್ಕಪತ್ರ ಮಂಡಿಸಿದರು. ಎಸ್.ಉಮೇಶ್ ಚಾರಣದ ಅನುಭವ ತಿಳಿಸಿದರು. ಸುಮಾರಾಣಿ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.