Tuesday, August 4, 2026
Tuesday, August 4, 2026
Home Blog Page 2050

ಮೊದಲ ಟೆಸ್ಟ್ ನಲ್ಲಿ ಶ್ರೇಯಸ್ ಸೆಂಚುರಿ

0

ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯುತ್ತಿದೆ. ಖಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್ ನಲ್ಲಿ ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಬೆಳಗ್ಗೆ ಪಂದ್ಯ ಆರಂಭಕ್ಕೂ ಮುನ್ನ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು ಶ್ರೇಯಸ್ ಗೆ ಟೆಸ್ಟ್ ಕ್ಯಾಪ್ ನೀಡಿ ಶುಭಕೋರಿದರು.

ಟಾಸ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 84 ಓವರ್ ಗಳಲ್ಲಿ 4 ವಿಕೆಟ್ ಗಳ ಪತನಕ್ಕೆ 258 ರನ್ ಗಳಿಸಿತ್ತು. ಮೊದಲನೇ ವಿಕೆಟ್ ಹಂತದಲ್ಲಿ ಆಡಿದ ಗಿಲ್ ಮತ್ತು ಚೇತೇಶ್ವರ ಪೂಜಾರ ನ್ಯೂಜಿಲ್ಯಾಂಡ್ ತಂಡದ ಕೈಲ್ ಜಮಿಸನ್ ಅವರ ಸ್ವಿಂಗ್ ಎಸೆತಗಳಿಂದ ನಿಧಾನಗತಿಯಲ್ಲಿ ಚಂಡುಗಳನ್ನು ಎದುರಿಸಿ 88 ಎಸೆತಗಳಲ್ಲಿ 26ರನ್ ಗಳಿಸಿಕೊಂಡು ಬಹಳ ಎಚ್ಚರಿಕೆಯ ಆಟವಾಡಿದರು.

ಎರಡನೇ ವಿಕೆಟ್ ಜೊತೆಯಾಟದಲ್ಲಿ ಅವರು 61 ರನ್ ಸೇರಿಸಿದರು. 9 ನೇಯ ಪಂದ್ಯವಾಡಿದ ಗಿಲ್ 4 ನೇ ಅರ್ಧಶತಕ ಪೂರೈಸಿದರು.22 ನೇ ಓವರ್ ನಲ್ಲಿ ಲಭಿಸಿದ ಜೀವ ದಾನವನ್ನು ಸಮರ್ಪಕವಾಗಿ ಬಳಸಿಕೊಂಡರು. ಆದರೆ ಊಟದ ವಿರಾಮದ ನಂತರ ಕೈಲ್ ಜಮಿಸನ್ ಬಿರುಗಾಳಿಗೆ ಕುಸಿಯುತ್ತಿದ್ದ ತಂಡಕ್ಕೆ ಬಲತುಂಬಲು ಗಿಲ್ 93 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 52 ರನ್ ಗಳಿಸಿದರು. ವೇಗಿ ಕೈಲ್ ಅವರ ಬೌಲಿಂಗ್ ಗೆ ಕ್ಲೀನ್ ಬೋಲ್ಡ್ ಆಗಿ ಔಟಾದರು. ನಂತರ ಪೂಜಾರ ಜೊತೆಗೂಡಿದ ನಾಯಕ ಅಜಿಂಕ್ಯಾ ರಹಾನೆ 63 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ಕೈಲ್ ಜಮಿಸನ್ ಅವರ ಬೌಲಿಂಗ್ ದಾಳಿಗೆ ರಹಾನೆ ಬೋಲ್ಡ್ ಆದರು.

5ನೇ ವಿಕೆಟ್ ಜೊತೆಯಾಟಕ್ಕೆ ಕಣಕ್ಕೆ ಕಾಲಿಟ್ಟು ಬ್ಯಾಟಿಂಗ್ ಆರಂಭಿಸಿದ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಅಮೋಘವಾಗಿತ್ತು. ಶ್ರೇಯಸ್ 136 ಎಸೆತಗಳಲ್ಲಿ 7 ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸುವ ಮೂಲಕ 75 ರನ್ ಗಳನ್ನು ಗಳಿಸಿಕೊಂಡರು ಹಾಗೂ ರವೀಂದ್ರ ಜಡೇಜಾ 50 ರನ್ ಗಳಿಸಿ ಜೊತೆಯಾಟ ಮುರಿಯದೆ 113 ರನ್ಗಳನ್ನು ತಂಡಕ್ಕೆ ಸೇರಿಸಿದರು. ಇದರಿಂದಾಗಿ 145 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಪಾರುಮಾಡಿದರು.

ಇದರಿಂದಾಗಿ ತಂಡದ ಶ್ರೇಯಸ್ ಅಯ್ಯರ್ ತಮ್ಮ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದರು. ರವೀಂದ್ರ ಜಡೇಜಾ ಜೊತೆಗೆ ದಶಕದ ಜೊತೆಯಾಟವನ್ನು ಆಡಿದ ಮುಂಬೈ ಹುಡುಗ ಆತಿಥೇಯ ತಂಡಕ್ಕೆ ಮೊದಲ ದಿನದ ಆಟದಲ್ಲಿ ಉತ್ತಮ ರನ್ ಗಳಿಕೆಗೆ ಪ್ರಮುಖ ಕಾರಣರಾದರು.

ಜನಜಾಗೃತಿಗೆ ಯಕ್ಷಗಾನ ಕಲೆ

0

ಹೊಸನಗರ ರಾಮಚಂದ್ರಾಪುರ ಮಠದ ಸಭಾಂಗಣದಲ್ಲಿ ಯಕ್ಷಗಾನ ಕಾರ್ಯಕ್ರಮ ನೆರವೇರಿತು. ಈ ಪ್ರದರ್ಶನದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿದ ನೂತನ ಯಕ್ಷಪ್ರಸಂಗ ‘ಸಿರಿಧೇನು ಮಹಿಮಾ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷ ಮೇಳ ಗುಂಡೂಮನೆಯವರು ಏರ್ಪಡಿಸಿದ್ದರು. ಈ ಸೇವೆಯಾಟ ದಲ್ಲಿ ರಮೇಶ್ ಹೆಗಡೆ ರಚಿಸಿರುವ ನೂತನ ಯಕ್ಷ ಕೃತಿ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

‘ಅತ್ಯಂತ ಸುಲಭವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿ ಯಕ್ಷಗಾನ ಕಲೆ ಹೊಂದಿದೆ’ ಎಂದು ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀ. ಗಜಾನನ ಭಟ್ ತಿಳಿಸಿದರು.

ಹೊಸನಗರ ಪ್ರಧಾನ ಮಠದ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಮಹಾನಂದಿ ಗೋ ಲೋಕದ ಕೃಷ್ಣಪ್ರಸಾದ್ ಎಡಪಾಡಿ, ವಂಶವಾಹಿನಿ ಭಾಗವತರಾದ ಸೂರ್ಯನಾರಾಯಣ ಹೆಗಡೆ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇಶದಲ್ಲಿ ಪೌಷ್ಟಿಕಾಂಶದ ಕೊರತೆ : ಯೋಜನೆಗಳನ್ನ ಅನುಷ್ಠಾನಗೊಳಿಸಿ

0

ಪೌಷ್ಟಿಕಾಂಶಯುಕ್ತ ಹಾಗೂ ಹಸಿವು ಮುಕ್ತ ರಾಷ್ಟ್ರ ನಿರ್ಮಾಣ ಇಂದಿನ ತುರ್ತು ಅಗತ್ಯ ಎಂದು ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ.ಆರ್.ಸಿ. ಅಗರ್ವಾಲ್ ಅವರು ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿವಿ ಆವರಣದಲ್ಲಿ ಏರ್ಪಡಿಸಲಾಗಿದ್ದ 6ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರ ಲಭಿಸಬೇಕು. ದೇಶದಲ್ಲಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಬೇಕು. ಆ ಗ ಮೂಲಕ ಜಾಗತಿಕವಾಗಿ ದೇಶವನ್ನು ಗುರುತಿಸಿಕೊಳ್ಳುವ ಸ್ಥಾನಕ್ಕೆ ಕೊಂಡೊಯ್ಯುಬೇಕು. ಈ ಜವಾಬ್ದಾರಿ ಪ್ರತಿಯೊಬ್ಬರದ್ದು ಆಗಿದೆ ಎಂದರು.
ದೇಶದಲ್ಲಿ ಲಭಿಸುತ್ತಿರುವ ನೀರಿನಲ್ಲಿ ಶೇ.25ರಷ್ಟು ನೀರನ್ನು ಮಾತ್ರ ಬಳಸಲಾಗುತ್ತಿದೆ. ಶೇಕಡ 75ರಷ್ಟು ನೀರನ್ನು ವ್ಯರ್ಥವಾಗಿ ಸಮುದ್ರಗಳಿಗೆ ಹರಿಸಲಾಗುತ್ತಿದೆ. ಈ ನೀರನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಇಳುವರಿಯನ್ನು ಪಡೆದು, ಆಹಾರ ಉತ್ಪಾದನೆಯಲ್ಲಿ ಹಾಗೂ ಆಹಾರ ಸಂಸ್ಕರಣೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕೆಂದರು.
ಬಹು ಸಂಖ್ಯೆಯ ಜನರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವಿಮುಖರಾಗಿರುವ ಯುವಕರು ಕೃಷಿ ಕ್ಷೇತ್ರದಲ್ಲಿನ ಸಮಸ್ಯೆ-ಸವಾಲುಗಳನ್ನು ಎದುರಿಸಿ, ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಬೇಕು. ಅಲ್ಲದೆ ತಂತ್ರಜ್ಞಾನದ ಅಳವಡಿಕೆಯಿಲ್ಲದೇ ಕೃಷಿಯಲ್ಲಿ ನಿರೀಕ್ಷಿತ ಪ್ರಗತಿ ಕಷ್ಟಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆವಿಷ್ಕಾರಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯುವಂತೆ ಸಲಹೆ ನೀಡಿದರು.


ಈ ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯದ ವತಿಯಿಂದ ಹೈದರಾಬಾದ್ ನ ಭಾರತ ಬಯೋಟಿಕ್ ಸಂಸ್ಥೆಯ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಎಲ್ಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ಇದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ವಿವಿಯ ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಹಾಗೂ ವಿವಿಧ ನಿಕಾಯಗಳ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕು. ಈ ಶಿಕ್ಷಣ ನೀತಿಯನ್ನು ಬೈಬಲ್ ನಂತೆ ಜತನದಿಂದ ಕಾಪಾಡಿಕೊಳ್ಳುವ ಜೊತೆಗೆ ಅಧ್ಯಯನ ಮಾಡಬೇಕು. ಈ ನೀತಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದರಿಂದಾಗಿ ಯುವಸಮೂಹಕ್ಕೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿದೆ ಎಂದು ಅಗರ್ವಾಲ್ ರವರು ತಿಳಿಸಿದರು.
ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನವಿಲೆಯ ವಿವಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಘಟಿಕೋತ್ಸವ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ.ಎಂ.ಕೆ.ನಾಯ್ಕ್., ಕುಲಸಚಿವ ಡಾ. ಆರ್. ಲೋಕೇಶ್ ಸೇರಿದಂತೆ ವ್ಯವಸ್ಥಾಪನ ಮಂಡಳಿಯ ಸದಸ್ಯರು, ವಿಶ್ವವಿದ್ಯಾಲಯದ ಉಪನ್ಯಾಸಕರು, ಪದಕದ ದಾನಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ನೋಯ್ಡಾ ವಿಮಾನ ನಿಲ್ದಾಣ: ಏಷ್ಯಾದಲ್ಲೇ ಪ್ರಥಮ ವಾಗಲಿದೆ.

0

ಏಷ್ಯಾದಲ್ಲೇ ಅತಿ ದೊಡ್ಡ ವಿಮಾನ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮ ಉತ್ತರಪ್ರದೇಶದ ಜೆವರ ನಲ್ಲಿ ನಡೆಯಿತು. ಶಂಕು ಸ್ಥಾಪನೆಯನ್ನು ಮಾನ್ಯ ನರೇಂದ್ರ ಮೋದಿ ಅವರು ನೆರವೇರಿಸಿದರು.

” ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಅಥವಾ ಯೋಜನೆ ಅರ್ಧಕ್ಕೆ ನಿಲ್ಲಬಾರದು. ಕಳೆದ ಏಳು ವರ್ಷಗಳ ಮುನ್ನ ನಿರ್ಲಕ್ಷಕ್ಕೆ ತುತ್ತಾಗಿ ಕತ್ತಲೆಯಲ್ಲಿ ಮುಳುಗಿದ್ದ ಉತ್ತರ ಪ್ರದೇಶವು ಡಬಲ್ ಎಂಜಿನ್ ಬಿಜೆಪಿ ಸರಕಾರದ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದೆ. ಈ ಖ್ಯಾತಿಯನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸುವುದು ನಮ್ಮ ಗುರಿ” ಎಂದು ಮಾನ್ಯ ಪ್ರಧಾನಿ ಅವರು ತಿಳಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಇಲ್ಲಿ ವಿಮಾನ ನಿಲ್ದಾನ ನಿರ್ಮಾಣವಾಗಲಿದೆ ಎಂದು ಹೇಳಿದರು.

ಕೊನೆಯ ಹಂತದ ನಿರ್ಮಾಣ ಪ್ರಕ್ರಿಯೆ ಮುಗಿದ ನಂತರ ಈ ನಿಲ್ದಾಣವು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೀರಿಸಲಿದೆ. ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಕೇವಲ ನಾಲ್ಕು ವಿಮಾನ ನಿಲ್ದಾಣಗಳಿದ್ದವು. ಈಗ 9 ನಿಲ್ದಾಣ ಗಳು ಕಾರ್ಯನಿರ್ವಹಿಸುತ್ತಿವೆ. ಹತ್ತನೇ ವಿಮಾನ ನಿಲ್ದಾಣ ನಿರ್ಮಿಸಲು ಚಾಲನೆ ನೀಡಲಾಗಿದೆ ಎಂದು ಸಿಂಧಿಯಾ ತಿಳಿಸಿದರು.

ಮೊದಲ ಹಂತದ ನಿರ್ಮಾಣ ಕಾರ್ಯಕ್ಕೆ 34 ಸಾವಿರ ಕೋಟಿ ಹೂಡಿಕೆ ಆಗಲಿದೆ. ಪ್ರಥಮ ಹಂತದಲ್ಲಿ ವಾರ್ಷಿಕ 1.2 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿರಲಿದೆ. ನಿಲ್ದಾಣದ ವ್ಯಾಪ್ತಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಕಾಮಗಾರಿಯು 2024 ಕ್ಕೆ ಮುಗಿಯಲಿದೆ ಎಂದು ತಿಳಿದುಬಂದಿದೆ.

ಜನಮನಗೆದ್ದಿರುವ ಡಾ.ವೀರೇಂದ್ರ ಹೆಗ್ಗಡೆ.

0

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ 74ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ಚತುರ್ವಿಧ ದಾನದೊಂದಿಗೆ ಕ್ಷೇತ್ರದ ಕಾರ್ಯವನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವ ಧರ್ಮಾಧಿಕಾರಿಯವರ ಧರ್ಮ ಕಾರ್ಯಗಳು, ಜನ ಕಲ್ಯಾಣ ಯೋಜನೆಗಳು ವಿಶ್ವವ್ಯಾಪ್ತಿಯಾಗಿದೆ ಮತ್ತು ಜನಮನ್ನಣೆ ಗಳಿಸಿವೆ. ಇವರ ಜನಪರ ಕಾಳಜಿ ಸ್ತುತ್ಯರ್ಹ,”ಎಂದು ಶ್ರೀ ಚಾರುಕೀರ್ತಿ ದಿವಾಕರ ಪಂಡಿತಾಚಾರ್ಯ ಸ್ವಾಮೀಜಿ ಹರಸಿ ಸ್ತುತಿಸಿದರು.
ಊರಿನ ನಾಗರಿಕರು, ದೇವಳದ ನೌಕರರು, ಗಣ್ಯರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಆಪ್ತರು, ಅಭಿಮಾನಿಗಳು ಮತ್ತು ಭಕ್ತರು ಶ್ರದ್ಧಾಭಕ್ತಿಯಿಂದ ಡಾ. ಹೆಗಡೆಯವರಿಗೆ ಶುಭಾಶಯ ಸಲ್ಲಿಸಿದರು.
ಹಿಂದಿನ ಧರ್ಮಾಧಿಕಾರಿಯಾಗಿದ್ದ ಕೀರ್ತಿಶೇಷ ರತ್ನವರ್ಮ ಹೆಗಡೆ, ರತ್ನಮ್ಮ ದಂಪತಿಯ ಜೇಷ್ಠ ಪುತ್ರರಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವಯಸ್ಸಿನಲ್ಲಿ ಅಂದರೆ 1968ರ ಅ. 24ರಂದು ಧರ್ಮ ಸಮನ್ವಯತೆಯ ನೆಲೆವೀಡು ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಡಾ. ವೀರೇಂದ್ರ ಹೆಗ್ಗಡೆ ಅವರ ಜನಪರ ಕಾರ್ಯಗಳು ಕ್ಷೇತ್ರದ ಅಭಿವೃದ್ಧಿ ಎಲ್ಲರಿಗೂ ಮಾದರಿಯಾಗಿದೆ. ಸುಮಾರು ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ, ಮಾನ್ಯತೆ ಪಡೆದಿದೆ. ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಾ. ಹೆಗಡೆಯವರು ಹಿರಿಯರು ಹಾಕಿಕೊಟ್ಟ ಪರಂಪರೆ, ಮಾರ್ಗದರ್ಶನದಲ್ಲಿ ಮುನ್ನಡೆದು ತಮ್ಮ ಆಡಳಿತ ವೈಖರಿ, ಅನುಪಮ ಸೇವೆ, ಧರ್ಮ ಮತ್ತು ಪರಂಪರೆಯ ರಕ್ಷಣೆಗಳೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ನಿತ್ಯದ ಬಳಕೆ ಕೂಡ ಇವರ ಹಿರಿಮೆಯಾಗಿದೆ.ಸಮಾಜ ಸೇವಾ ಕ್ಷೇತ್ರದಲ್ಲಿಯೂ ಕೂಡ ಅವರು ಸಲ್ಲಿಸುತ್ತಿರುವ ಸೇವೆ ಅನನ್ಯ. ಗ್ರಾಮೀಣಾಭಿವೃದ್ಧಿಯ ಕಲ್ಪನೆಯನ್ನ ಸಾಕ್ಷಾತ್ಕಾರ ಗೊಳಿಸುತ್ತಿರುವ ಅವರ ಸಂಕಲ್ಪಶಕ್ತಿ ಮಾದರಿಯಾಗಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಕಿಕೊಂಡಿರುವ ಅನೇಕ ಗ್ರಾಮೋದ್ಧಾರ ಯೋಜನೆಗಳು ಇತರ ಸಂಸ್ಥೆಗಳಿಗೆ ಆದರ್ಶವಾಗಿವೆ‌.

ಉದ್ಯೋಗಕ್ಕೆ ಬೆಂಗಳೂರು ಪ್ರಶಸ್ತ ನಗರ

0

ಒಂದಲ್ಲಾ ಒಂದು ಪ್ರಶಂಸೆಯ ಗರಿಗೆ ಪಾತ್ರವಾಗಿರುವ ರಾಜ್ಯ ರಾಜಧಾನಿ ಬೆಂಗಳೂರು ಈಗ ಉದ್ಯೋಗ ಮತ್ತು ಆರ್ಥಿಕ ಪ್ರಗತಿಯ ದೃಷ್ಟಿಯಿಂದ ದೇಶದಲ್ಲೇ ಅತ್ಯುತ್ತಮ ನಗರವಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಗ್ಗೆ ನೀತಿ ಆಯೋಗ ಮೊಟ್ಟ ಮೊದಲ ಬಾರಿಗೆ ‘ಸಸ್ಟೈನೆಬಲ್ ಡೆವಲಪ್ಮೆಂಟ್ ಗೋಲ್ಸ್’ ಸೂಚ್ಯಂಕದಲ್ಲಿ ಬೆಂಗಳೂರು, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ.

ನೀತಿ ಆಯೋಗದ ಸಮೀಕ್ಷೆಯ ಪ್ರಕಾರ ಇಡೀ ದೇಶದಲ್ಲಿಯೇ ಉತ್ತಮ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಒಟ್ಟು 56 ನಗರಗಳಲ್ಲಿ ಬೆಂಗಳೂರು ಗರಿಷ್ಠ 79 ಅಂಕಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. 64 ಅಂಕಗಳಿಸಿ ಛತ್ತೀಸ್ಗಡ್ ರಾಜಧಾನಿ ರಾಯ್ಪುರ ಎರಡನೇ ಸ್ಥಾನ ಪಡೆದಿದೆ ಹಾಗೂ ವಾಣಿಜ್ಯ ರಾಜಧಾನಿ ಎಂದೇ ಹೆಸರುವಾಸಿಯಾಗಿರುವ ಮುಂಬೈ 17ನೇ ಸ್ಥಾನದಲ್ಲಿದೆ.

ನೌಕಾಪಡೆಗೆ ಮತ್ತಷ್ಟು ಬಲ : ಐಎನ್ಎಸ್ ವೇಲಾ

0

ಭಾರತದ ನೌಕಾಪಡೆಗೆ ಮತ್ತಷ್ಟು ಬಲ ತುಂಬಲಿದೆ ದೇಶೀಯ ನಿರ್ಮಿತ ‘ಐ ಎನ್ ಎಸ್ ವೇಲಾ’ ಜಲಾಂತರ್ಗಾಮಿ ನೌಕೆ.

ಸ್ಕಾರ್ಪಿನ್ ಶ್ರೇಣಿಯ ಈ ಜಲಾಂತರ್ಗಾಮಿಯನ್ನು ಪ್ರಾಜೆಕ್ಟ್ 75 ರ ಅಡಿಯಲ್ಲಿ ನಿರ್ಮಿಸಲಾಗಿದೆ.
ಪ್ರಾಜೆಕ್ಟ್ 75 ಅಡಿಯಲ್ಲಿ ನೌಕಾಪಡೆಯ ಸೇರ್ಪಡೆಯಾದ ನಾಲ್ಕನೇ ಜಲಾಂತರ್ಗಾಮಿ ಇದಾಗಿದೆ. ಸಾಗರದಾಳದಲ್ಲಿ ವೈರಿ ಪಡೆಗಳ ವಿರುದ್ಧದ ಸಮರದ ಪೂರ್ಣ ಚಿತ್ರಣವನ್ನು ವೇಲಾ ಬದಲಾಯಿಸಲಿದೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ತಿಳಿಸಿದ್ದಾರೆ.

ಈ ಜಲಾಂತರ್ಗಾಮಿ ನೌಕೆಯನ್ನು ಪಶ್ಚಿಮ ನೌಕಾದಳದ ಮೂಲಕ ಹಿಂದೂ ಮಹಾಸಾಗರದಲ್ಲಿ ನಿಯೋಜನೆಯ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ನವೆಂಬರ್ ನಲ್ಲಿ ನೌಕಾಪಡೆಗೆ ದೈತ್ಯಶಕ್ತಿಗಳ ಸೇರ್ಪಡೆಯಾಗಲಿವೆ ಎಂದು ಹೇಳಿದರು.

“ಸದ್ಯ ವೇಲಾದಂತಹ ಅತ್ಯಧಿಕ ಧಾಳಿ ಸಾಮರ್ಥ್ಯದ ಸಬ್ ಮರೀನ್ ಶಕ್ತಿ ನಮಗೆ ಸಿಕ್ಕಿರುವುದು ಹಿಂದೂ ಮಹಾಸಾಗರದಲ್ಲಿ ಭಾರತದ ಸಾಗರ ಗಡಿ ರಕ್ಷಣೆಗೆ ನೆರವಾಗಲಿದೆ” ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಗುತ್ತಿಗೆ ಕಮಿಷನ್ ವ್ಯವಹಾರ : ಪರಿಶೀಲನೆ ಸಿಎಂ

0

ಬಿಟ್ ಕಾಯಿನ್ ಹಗರಣದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರಿಂದ ಶೇ.40 ಕಮಿಷನ್ ಆರೋಪ ವಿಚಾರಣೆಗೆ ಸಿಎಂ ಬೊಮ್ಮಾಯಿ ಅವರು ತನಿಖೆಗೆ ಮುಂದಾಗಿದ್ದಾರೆ.

ಪ್ರಧಾನಿ ಮೋದಿಯವರಿಗೆ ಕಳೆದ ಜುಲೈ 26ರಂದು ‘ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್’ ಪತ್ರ ಬರೆದಿತ್ತು. ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಬೇಡಿಕೆಗೆ ಒತ್ತಡ ಹೇರಲಾಗುತ್ತಿದೆ ಎಂದು ಪತ್ರದಲ್ಲಿ ಗಂಭೀರವಾಗಿ ಆರೋಪಿಸಿತ್ತು. ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಸಹ ಸಂಘದ ಪದಾಧಿಕಾರಿಗಳ ನಿಯೋಗ ಮನವಿ ಸಲ್ಲಿಸಿತ್ತು.

ಈ ಸಂಬಂಧ ಪ್ರತಿಪಕ್ಷಗಳು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಟೀಕಿಸಿವೆ. ಸಿಎಂ ಬೊಮ್ಮಾಯಿ ಅವರು ಸಂಬಂಧಪಟ್ಟ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.

ಶೇ.40ರಷ್ಟು ಕಮಿಷನ್ ದಂಧೆ ಬಗ್ಗೆ ಗುತ್ತಿಗೆದಾರರ ಸಂಘದ ಆರೋಪವನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರಿಗೆ ಪ್ರತಿಪಕ್ಷ ಕಾಂಗ್ರೆಸ್ ಮನವಿ ಪತ್ರ ಸಲ್ಲಿಸಿದೆ. ಈ ವಿಷಯವನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಗುತ್ತಿಗೆದಾರರಿಂದ ಶೇ.40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿಯವರು ಪ್ರತಿಕ್ರಿಯಿಸಿದ್ದು, “ನಮ್ಮ ಸರ್ಕಾರ ಬಂದ ಮೇಲೆ ಯಾವುದಾದರೂ ಟೆಂಡರ್ ಅಂತಿಮ ಗೊಂಡಿದ್ದರೆ, ಅದನ್ನು ವಿಶೇಷವಾಗಿ ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ. ಇದಕ್ಕಿಂತ ಪಾರದರ್ಶಕತೆ ಇನ್ನೇನು ಬೇಕು?” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ‘ನಮ್ಮ ಸರ್ಕಾರವಿದ್ದಾಗ ಮೋದಿಯವರು ಟೆನ್ ಪರ್ಸೆಂಟ್ ಸರ್ಕಾರ ಎಂದಿದ್ದರು. ಈ ಹೇಳಿಕೆಗೆ ಯಾವ ಆಧಾರವೂ ಇರಲಿಲ್ಲ. ಆದರೆ, ಈಗ ನಾವು ಕೊಟ್ಟ ದೂರಿನಲ್ಲಿ ಗುತ್ತಿಗೆದಾರರ ಸಂಘ ಬರೆದ ಪತ್ರ ನೀಡಿದ್ದೇವೆ’ ಎಂದು ಹೇಳಿದ್ದಾರೆ.

‘ರಾಜ್ಯಕ್ಕೆ ಕಳಂಕ ಬಂದಿದೆ. ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಗುತ್ತಿಗೆದಾರರ ಸಂಘದ ದೂರಿನ ಬಗ್ಗೆ ಸುಪ್ರೀಂಕೋರ್ಟ್ ಜಡ್ಜ್ ಅವರಿಂದ ತನಿಖೆ ಆಗಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಕುವೆಂಪು ವಿವಿ : ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

0

ಭಾರತದಲ್ಲಿ ವರ್ಷಕ್ಕೆ ಸುಮಾರು 3 ಲಕ್ಷ ಜನರು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಮಲ್ನಾಡ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ರೋಷನ್ ಬಿ.ಎ.ರಾವ್ ಹೇಳಿದರು.
ಕುವೆಂಪು ವಿವಿಯ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದೊಂದಿಗೆ ಕ್ಯಾನ್ಸರ್ ಕಾಯಿಲೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಮತ್ತು ದುಶ್ಚಟಗಳು ಮಾರಣಾಂತಿಕ ಕ್ಯಾನ್ಸರ್ ಗೆ ಕಾರಣ. ಆದ್ದರಿಂದ , ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕ್ಯಾನ್ಸರ್ ತಡೆಯಬಹುದು ಎಂದು ಕುಲಸಚಿವೆ ಜಿ. ಅನುರಾಧ ಅವರು ತಿಳಿಸಿದರು.
ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ಜೀವನದ ಒತ್ತಡ, ಡ್ರಗ್ಸ್ ಸೇವನೆ, ದೀರ್ಘಕಾಲದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕ್ಯಾನ್ಸರ್ ಕಾಯಿಲೆ ಸಾಧ್ಯತೆ ಹೆಚ್ಚು. ಕ್ಯಾನ್ಸರ್ ಪೀಡಿತರಲ್ಲಿ ಬಹುತೇಕರು ತಂಬಾಕು ಸೇವನೆ, ಧೂಮಪಾನ ಮತ್ತು ಮದ್ಯವ್ಯಸನಿಗಳಾಗಿದ್ದಾರೆ.
ಒಂದು ಅಥವಾ ಎರಡು ವಾರಗಳಿಗೂ ಅಧಿಕ ಸಮಯ ಬಾಯಿಯಲ್ಲಿ ಗಾಯ ಗುಣವಾಗದಿರುವುದು, ಧ್ವನಿ ಬದಲಾವಣೆ, ಊಟ ಕಡಿಮೆ ಸೇರುವುದು, ಮೂತ್ರದಲ್ಲಿ ರಕ್ತ ಹೋಗುವಿಕೆ, ಮೂಳೆಗಳಲ್ಲಿ ನೋವು ಮತ್ತು ದೇಹದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು ಕ್ಯಾನ್ಸರ್ ನ ಮುನ್ಸೂಚನೆಗಳಾಗಿವೆ‌. ಆದ್ದರಿಂದ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪ್ರಾರಂಭಿಸಿದರೆ ಕ್ಯಾನ್ಸರ್ ನಿಂದ ಗುಣಮುಖರಾಗಬಹುದು ಎಂದು ಡಾ.ರೋಷನ್ ಬಿ.ಎ.ರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಆರೋಗ್ಯಧಿಕಾರಿ ಡಾ. ಶ್ರೀ ರಕ್ಷಾ, ಮಹಿಳಾ ವೈದ್ಯಾಧಿಕಾರಿ ಡಾ. ಉಷಾರಾಣಿ, ಆಪ್ತಸಮಾಲೋಚಕಿ ರಜಿನಿ, ಹಸಿನಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವರದಕ್ಷಿಣೆ ಹಣ, ಸಮಾಜಸೇವೆಗೆ…

0

ವಿವಾಹದ ಸಂದರ್ಭದಲ್ಲಿ ವಧುವಿನ ಕಡೆಯವರು ವರನಿಗೆ ವರದಕ್ಷಿಣೆ ಕೊಡುವ ಅನಿಷ್ಟ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ವಧುಯೊಬ್ಬರು ತಮ್ಮ ಮದುವೆಗೆಂದು (ವರದಕ್ಷಿಣೆ) ಇರಿಸಿದ್ದ 75 ಲಕ್ಷ ರೂಗಳನ್ನು ಸಾಮಾಜಿಕ ಕಾರ್ಯಕ್ಕಾಗಿ ನೀಡಿದ್ದಾರೆ.

ರಾಜಸ್ಥಾನದ, ಬಾರ್ಮೇರ್ ಜಿಲ್ಲೆಯ ಉದ್ಯಮಿ ಕಿಶೋರ್ ಸಿಂಗ್ ಕನೋದ್ ಅವರ ಮಗಳ ಅದುವೇ ಇತ್ತೀಚೆಗೆ ನೆರವೇರಿತು. ವಧುವಿನ ಹೆಸರು ಅಂಜಲಿ ಕನ್ವಾರ್ . ತಂದೆ ಕಿಶೋರ್ ಅವರು ಮಗಳ ವಿವಾಹದ ಸಂದರ್ಭದಲ್ಲಿ, ವರನಿಗೆ ವರದಕ್ಷಿಣೆ ರೂಪದಲ್ಲಿ 75 ಲಕ್ಷವನ್ನು ರೂಪಾಯಿಗಳನ್ನು ತೆಗೆದಿರಿಸಿದ್ದರು. ಆದರೆ ಮದುಮಗಳು ಅಂಜಲಿ ಬುದ್ಧಿವಂತಿಕೆಯನ್ನು ಉಪಯೋಗಿಸಿದರು. ಮದುವೆಯ ಹಿಂದಿನ ದಿನ ಆಕೆ, ತಮ್ಮ ತಂದೆಯ ಬಳಿ ಹೋಗಿ ‘ವರದಕ್ಷಿಣೆ ನೀಡಲು ತೆಗೆದಿಟ್ಟ ಹಣವನ್ನು ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ನೀಡಿ’ ಎಂದು ಕೇಳಿಕೊಂಡರು. ಇದಕ್ಕೆ ತಂದೆ ಸಂತೋಷದಿಂದ ಒಪ್ಪಿದರು.

ಮದುವೆಯ ದಿನ ಮಂಟಪದಲ್ಲಿ ಇದರ ಬಗ್ಗೆ ಕಿಶೋರ್ ಘೋಷಣೆ ಮಾಡಿದ್ದರು. ಮಗಳಿಗೆ ಖಾಲಿ ಚೆಕ್ ನೀಡಿ, ಎಷ್ಟು ದೇಣಿಗೆ ನೀಡಬೇಕು. ಅದನ್ನು ಚೆಕ್ ನಲ್ಲಿ ನಮೂದಿಸಿ ಎಂದು ಹೇಳಿದರು. ಚೆಕ್ ನಲ್ಲಿ ಅಂಜಲಿಯವರು 75ಲಕ್ಷ ನಮೂದಿಸಿದರು.

ನಂತರ ಅದನ್ನು ಹಾಸ್ಟೆಲ್ ಕಟ್ಟಡ ನಿಧಿಗೆ ಅರ್ಪಿಸಲಾಯಿತು. ಹಾಸ್ಟೆಲ್ ನಿರ್ಮಿಸುತ್ತಿರುವ ತಾರಾತರ ಆಡಳಿತವರ್ಗವು ಕಿಶೋರ್ ಅವರ ದಾನ ಗುಣವನ್ನ ಮೆಚ್ಚಿದೆ.
“ನಾವು ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಕಿಶೋರ್ ಅವರು ಈ ಮೊದಲೇ ಒಂದು ಕೋಟಿ ದೇಣಿಗೆ ನೀಡಿದ್ದರು. ಕೆಲಸ ಪೂರ್ಣಗೊಳಿಸಲು ಇನ್ನೂ 50 ರಿಂದ 75 ಲಕ್ಷ ಹಣದ ಅಗತ್ಯವಿತ್ತು. ಈಗ ಕಿಶೋರ್ ಅವರು ಅದನ್ನು ಒದಗಿಸಿದ್ದಾರೆ” ಎಂದು ತಾರಾತರ ಮಠವು ಮಾಹಿತಿ ನೀಡಿದೆ. ಈ ವರದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಧುವಿನ ನಡೆಗೆ ಬಾರಿ ಮೆಚ್ಚುಗೆ ಪಡೆದುಕೊಂಡಿದೆ.