ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ 74ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ಚತುರ್ವಿಧ ದಾನದೊಂದಿಗೆ ಕ್ಷೇತ್ರದ ಕಾರ್ಯವನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವ ಧರ್ಮಾಧಿಕಾರಿಯವರ ಧರ್ಮ ಕಾರ್ಯಗಳು, ಜನ ಕಲ್ಯಾಣ ಯೋಜನೆಗಳು ವಿಶ್ವವ್ಯಾಪ್ತಿಯಾಗಿದೆ ಮತ್ತು ಜನಮನ್ನಣೆ ಗಳಿಸಿವೆ. ಇವರ ಜನಪರ ಕಾಳಜಿ ಸ್ತುತ್ಯರ್ಹ,”ಎಂದು ಶ್ರೀ ಚಾರುಕೀರ್ತಿ ದಿವಾಕರ ಪಂಡಿತಾಚಾರ್ಯ ಸ್ವಾಮೀಜಿ ಹರಸಿ ಸ್ತುತಿಸಿದರು.
ಊರಿನ ನಾಗರಿಕರು, ದೇವಳದ ನೌಕರರು, ಗಣ್ಯರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಆಪ್ತರು, ಅಭಿಮಾನಿಗಳು ಮತ್ತು ಭಕ್ತರು ಶ್ರದ್ಧಾಭಕ್ತಿಯಿಂದ ಡಾ. ಹೆಗಡೆಯವರಿಗೆ ಶುಭಾಶಯ ಸಲ್ಲಿಸಿದರು.
ಹಿಂದಿನ ಧರ್ಮಾಧಿಕಾರಿಯಾಗಿದ್ದ ಕೀರ್ತಿಶೇಷ ರತ್ನವರ್ಮ ಹೆಗಡೆ, ರತ್ನಮ್ಮ ದಂಪತಿಯ ಜೇಷ್ಠ ಪುತ್ರರಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವಯಸ್ಸಿನಲ್ಲಿ ಅಂದರೆ 1968ರ ಅ. 24ರಂದು ಧರ್ಮ ಸಮನ್ವಯತೆಯ ನೆಲೆವೀಡು ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಡಾ. ವೀರೇಂದ್ರ ಹೆಗ್ಗಡೆ ಅವರ ಜನಪರ ಕಾರ್ಯಗಳು ಕ್ಷೇತ್ರದ ಅಭಿವೃದ್ಧಿ ಎಲ್ಲರಿಗೂ ಮಾದರಿಯಾಗಿದೆ. ಸುಮಾರು ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ, ಮಾನ್ಯತೆ ಪಡೆದಿದೆ. ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಾ. ಹೆಗಡೆಯವರು ಹಿರಿಯರು ಹಾಕಿಕೊಟ್ಟ ಪರಂಪರೆ, ಮಾರ್ಗದರ್ಶನದಲ್ಲಿ ಮುನ್ನಡೆದು ತಮ್ಮ ಆಡಳಿತ ವೈಖರಿ, ಅನುಪಮ ಸೇವೆ, ಧರ್ಮ ಮತ್ತು ಪರಂಪರೆಯ ರಕ್ಷಣೆಗಳೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ನಿತ್ಯದ ಬಳಕೆ ಕೂಡ ಇವರ ಹಿರಿಮೆಯಾಗಿದೆ.ಸಮಾಜ ಸೇವಾ ಕ್ಷೇತ್ರದಲ್ಲಿಯೂ ಕೂಡ ಅವರು ಸಲ್ಲಿಸುತ್ತಿರುವ ಸೇವೆ ಅನನ್ಯ. ಗ್ರಾಮೀಣಾಭಿವೃದ್ಧಿಯ ಕಲ್ಪನೆಯನ್ನ ಸಾಕ್ಷಾತ್ಕಾರ ಗೊಳಿಸುತ್ತಿರುವ ಅವರ ಸಂಕಲ್ಪಶಕ್ತಿ ಮಾದರಿಯಾಗಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಕಿಕೊಂಡಿರುವ ಅನೇಕ ಗ್ರಾಮೋದ್ಧಾರ ಯೋಜನೆಗಳು ಇತರ ಸಂಸ್ಥೆಗಳಿಗೆ ಆದರ್ಶವಾಗಿವೆ.
ಜನಮನಗೆದ್ದಿರುವ ಡಾ.ವೀರೇಂದ್ರ ಹೆಗ್ಗಡೆ.
Date: