ಏಷ್ಯಾದಲ್ಲೇ ಅತಿ ದೊಡ್ಡ ವಿಮಾನ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮ ಉತ್ತರಪ್ರದೇಶದ ಜೆವರ ನಲ್ಲಿ ನಡೆಯಿತು. ಶಂಕು ಸ್ಥಾಪನೆಯನ್ನು ಮಾನ್ಯ ನರೇಂದ್ರ ಮೋದಿ ಅವರು ನೆರವೇರಿಸಿದರು.
” ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಅಥವಾ ಯೋಜನೆ ಅರ್ಧಕ್ಕೆ ನಿಲ್ಲಬಾರದು. ಕಳೆದ ಏಳು ವರ್ಷಗಳ ಮುನ್ನ ನಿರ್ಲಕ್ಷಕ್ಕೆ ತುತ್ತಾಗಿ ಕತ್ತಲೆಯಲ್ಲಿ ಮುಳುಗಿದ್ದ ಉತ್ತರ ಪ್ರದೇಶವು ಡಬಲ್ ಎಂಜಿನ್ ಬಿಜೆಪಿ ಸರಕಾರದ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದೆ. ಈ ಖ್ಯಾತಿಯನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸುವುದು ನಮ್ಮ ಗುರಿ” ಎಂದು ಮಾನ್ಯ ಪ್ರಧಾನಿ ಅವರು ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಇಲ್ಲಿ ವಿಮಾನ ನಿಲ್ದಾನ ನಿರ್ಮಾಣವಾಗಲಿದೆ ಎಂದು ಹೇಳಿದರು.

ಕೊನೆಯ ಹಂತದ ನಿರ್ಮಾಣ ಪ್ರಕ್ರಿಯೆ ಮುಗಿದ ನಂತರ ಈ ನಿಲ್ದಾಣವು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೀರಿಸಲಿದೆ. ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಕೇವಲ ನಾಲ್ಕು ವಿಮಾನ ನಿಲ್ದಾಣಗಳಿದ್ದವು. ಈಗ 9 ನಿಲ್ದಾಣ ಗಳು ಕಾರ್ಯನಿರ್ವಹಿಸುತ್ತಿವೆ. ಹತ್ತನೇ ವಿಮಾನ ನಿಲ್ದಾಣ ನಿರ್ಮಿಸಲು ಚಾಲನೆ ನೀಡಲಾಗಿದೆ ಎಂದು ಸಿಂಧಿಯಾ ತಿಳಿಸಿದರು.
ಮೊದಲ ಹಂತದ ನಿರ್ಮಾಣ ಕಾರ್ಯಕ್ಕೆ 34 ಸಾವಿರ ಕೋಟಿ ಹೂಡಿಕೆ ಆಗಲಿದೆ. ಪ್ರಥಮ ಹಂತದಲ್ಲಿ ವಾರ್ಷಿಕ 1.2 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿರಲಿದೆ. ನಿಲ್ದಾಣದ ವ್ಯಾಪ್ತಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಕಾಮಗಾರಿಯು 2024 ಕ್ಕೆ ಮುಗಿಯಲಿದೆ ಎಂದು ತಿಳಿದುಬಂದಿದೆ.