ಭಾರತದ ನೌಕಾಪಡೆಗೆ ಮತ್ತಷ್ಟು ಬಲ ತುಂಬಲಿದೆ ದೇಶೀಯ ನಿರ್ಮಿತ ‘ಐ ಎನ್ ಎಸ್ ವೇಲಾ’ ಜಲಾಂತರ್ಗಾಮಿ ನೌಕೆ.
ಸ್ಕಾರ್ಪಿನ್ ಶ್ರೇಣಿಯ ಈ ಜಲಾಂತರ್ಗಾಮಿಯನ್ನು ಪ್ರಾಜೆಕ್ಟ್ 75 ರ ಅಡಿಯಲ್ಲಿ ನಿರ್ಮಿಸಲಾಗಿದೆ.
ಪ್ರಾಜೆಕ್ಟ್ 75 ಅಡಿಯಲ್ಲಿ ನೌಕಾಪಡೆಯ ಸೇರ್ಪಡೆಯಾದ ನಾಲ್ಕನೇ ಜಲಾಂತರ್ಗಾಮಿ ಇದಾಗಿದೆ. ಸಾಗರದಾಳದಲ್ಲಿ ವೈರಿ ಪಡೆಗಳ ವಿರುದ್ಧದ ಸಮರದ ಪೂರ್ಣ ಚಿತ್ರಣವನ್ನು ವೇಲಾ ಬದಲಾಯಿಸಲಿದೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ತಿಳಿಸಿದ್ದಾರೆ.
ಈ ಜಲಾಂತರ್ಗಾಮಿ ನೌಕೆಯನ್ನು ಪಶ್ಚಿಮ ನೌಕಾದಳದ ಮೂಲಕ ಹಿಂದೂ ಮಹಾಸಾಗರದಲ್ಲಿ ನಿಯೋಜನೆಯ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ನವೆಂಬರ್ ನಲ್ಲಿ ನೌಕಾಪಡೆಗೆ ದೈತ್ಯಶಕ್ತಿಗಳ ಸೇರ್ಪಡೆಯಾಗಲಿವೆ ಎಂದು ಹೇಳಿದರು.
“ಸದ್ಯ ವೇಲಾದಂತಹ ಅತ್ಯಧಿಕ ಧಾಳಿ ಸಾಮರ್ಥ್ಯದ ಸಬ್ ಮರೀನ್ ಶಕ್ತಿ ನಮಗೆ ಸಿಕ್ಕಿರುವುದು ಹಿಂದೂ ಮಹಾಸಾಗರದಲ್ಲಿ ಭಾರತದ ಸಾಗರ ಗಡಿ ರಕ್ಷಣೆಗೆ ನೆರವಾಗಲಿದೆ” ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.