ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯುತ್ತಿದೆ. ಖಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್ ನಲ್ಲಿ ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಬೆಳಗ್ಗೆ ಪಂದ್ಯ ಆರಂಭಕ್ಕೂ ಮುನ್ನ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು ಶ್ರೇಯಸ್ ಗೆ ಟೆಸ್ಟ್ ಕ್ಯಾಪ್ ನೀಡಿ ಶುಭಕೋರಿದರು.
ಟಾಸ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 84 ಓವರ್ ಗಳಲ್ಲಿ 4 ವಿಕೆಟ್ ಗಳ ಪತನಕ್ಕೆ 258 ರನ್ ಗಳಿಸಿತ್ತು. ಮೊದಲನೇ ವಿಕೆಟ್ ಹಂತದಲ್ಲಿ ಆಡಿದ ಗಿಲ್ ಮತ್ತು ಚೇತೇಶ್ವರ ಪೂಜಾರ ನ್ಯೂಜಿಲ್ಯಾಂಡ್ ತಂಡದ ಕೈಲ್ ಜಮಿಸನ್ ಅವರ ಸ್ವಿಂಗ್ ಎಸೆತಗಳಿಂದ ನಿಧಾನಗತಿಯಲ್ಲಿ ಚಂಡುಗಳನ್ನು ಎದುರಿಸಿ 88 ಎಸೆತಗಳಲ್ಲಿ 26ರನ್ ಗಳಿಸಿಕೊಂಡು ಬಹಳ ಎಚ್ಚರಿಕೆಯ ಆಟವಾಡಿದರು.
ಎರಡನೇ ವಿಕೆಟ್ ಜೊತೆಯಾಟದಲ್ಲಿ ಅವರು 61 ರನ್ ಸೇರಿಸಿದರು. 9 ನೇಯ ಪಂದ್ಯವಾಡಿದ ಗಿಲ್ 4 ನೇ ಅರ್ಧಶತಕ ಪೂರೈಸಿದರು.22 ನೇ ಓವರ್ ನಲ್ಲಿ ಲಭಿಸಿದ ಜೀವ ದಾನವನ್ನು ಸಮರ್ಪಕವಾಗಿ ಬಳಸಿಕೊಂಡರು. ಆದರೆ ಊಟದ ವಿರಾಮದ ನಂತರ ಕೈಲ್ ಜಮಿಸನ್ ಬಿರುಗಾಳಿಗೆ ಕುಸಿಯುತ್ತಿದ್ದ ತಂಡಕ್ಕೆ ಬಲತುಂಬಲು ಗಿಲ್ 93 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 52 ರನ್ ಗಳಿಸಿದರು. ವೇಗಿ ಕೈಲ್ ಅವರ ಬೌಲಿಂಗ್ ಗೆ ಕ್ಲೀನ್ ಬೋಲ್ಡ್ ಆಗಿ ಔಟಾದರು. ನಂತರ ಪೂಜಾರ ಜೊತೆಗೂಡಿದ ನಾಯಕ ಅಜಿಂಕ್ಯಾ ರಹಾನೆ 63 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ಕೈಲ್ ಜಮಿಸನ್ ಅವರ ಬೌಲಿಂಗ್ ದಾಳಿಗೆ ರಹಾನೆ ಬೋಲ್ಡ್ ಆದರು.
5ನೇ ವಿಕೆಟ್ ಜೊತೆಯಾಟಕ್ಕೆ ಕಣಕ್ಕೆ ಕಾಲಿಟ್ಟು ಬ್ಯಾಟಿಂಗ್ ಆರಂಭಿಸಿದ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಅಮೋಘವಾಗಿತ್ತು. ಶ್ರೇಯಸ್ 136 ಎಸೆತಗಳಲ್ಲಿ 7 ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸುವ ಮೂಲಕ 75 ರನ್ ಗಳನ್ನು ಗಳಿಸಿಕೊಂಡರು ಹಾಗೂ ರವೀಂದ್ರ ಜಡೇಜಾ 50 ರನ್ ಗಳಿಸಿ ಜೊತೆಯಾಟ ಮುರಿಯದೆ 113 ರನ್ಗಳನ್ನು ತಂಡಕ್ಕೆ ಸೇರಿಸಿದರು. ಇದರಿಂದಾಗಿ 145 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಪಾರುಮಾಡಿದರು.
ಇದರಿಂದಾಗಿ ತಂಡದ ಶ್ರೇಯಸ್ ಅಯ್ಯರ್ ತಮ್ಮ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದರು. ರವೀಂದ್ರ ಜಡೇಜಾ ಜೊತೆಗೆ ದಶಕದ ಜೊತೆಯಾಟವನ್ನು ಆಡಿದ ಮುಂಬೈ ಹುಡುಗ ಆತಿಥೇಯ ತಂಡಕ್ಕೆ ಮೊದಲ ದಿನದ ಆಟದಲ್ಲಿ ಉತ್ತಮ ರನ್ ಗಳಿಕೆಗೆ ಪ್ರಮುಖ ಕಾರಣರಾದರು.