Tuesday, August 4, 2026
Tuesday, August 4, 2026
Home Blog Page 2051

ಜು.ಹಾಕಿ ವಿಶ್ವಕಪ್ :ಮೊದಲ ಪಂದ್ಯ ಭಾರತಕ್ಕೆ ಸೋಲು

0

ಜೂನಿಯರ್ ಹಾಕಿ ವಿಶ್ವಕಪ್ ಹಾಕಿ ಟೂರ್ನಿ ಭಾರತ ಮತ್ತು ನಡೆದಿದ್ದು ಭಾರತದ ವಿರುದ್ಧ ಜಯಗಳಿಸಿದೆ.
ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್. ಭಾರತೀಯ ಹಾಕಿ ಒಕ್ಕೂಟದ ಅಧ್ಯಕ್ಷ ನರೇಂದರ್ ಪಾತ್ರ ಅವನೇ ಸಿದ್ದರು.
B. ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು 4-5 ರಿಂದ ಫ್ರಾನ್ಸ್ ಎದುರು ಸೋಲುಂಡಿತು.
ಜರ್ಮನಿ ತಂಡ 5-2 ರಲ್ಲಿ ಪಾಕಿಸ್ತಾನ ಮಣಿಸಿತು. ಟೊರೆಂಟ್ 1-0 ಇಂದ ಕೆನಡಾ ಎದುರು ಮಲೇಷ್ಯಾ2-1 ರಿಂದ ಚಿಲಿ ವಿರುದ್ಧವೂ ಜಯ ಗಳಿಸಿದವು. ಮೊದಲ ದಿನ ನಡೆದ ಇನ್ನುಳಿದ ಪಂದ್ಯಗಳಲ್ಲಿ ಬೆಲ್ಜಿಯಂ 5-1 ರಿಂದ ದಕ್ಷಿಣ ಆಫ್ರಿಕಾ ಇದ್ದರು ಜಯ ಸಾಧಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗೌತಮ್ ಗಂಭೀರ್: ಉಗ್ರರಿಂದ ಬೆದರಿಕೆ.

0

ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಐಸಿಸಿ ಕಾಶ್ಮೀರ ಉಗ್ರ ಸಂಘಟನೆಯಿಂದ ಕೊಲೆ ಬೆದರಿಕೆ ಬಂದಿದೆ.

ರಾತ್ರಿಯ ವೇಳೆ ಅಧಿಕೃತ ಇಮೇಲ್ ಗೆ ಜೀವ ಬೆದರಿಕೆ ಮೇಲ್ ಬಂದಿದೆ. ” ನಿಮ್ಮನ್ನು ಮತ್ತು ಕುಟುಂಬಸ್ಥರನ್ನು ಕೊಂದು ಹಾಕುತ್ತೇವೆ” ಎಂದು ಐಸಿಸ್ ಸಂಘಟನೆಯ ಹೆಸರಿನಲ್ಲಿ ಬೆದರಿಕೆ ಬಂದಿದೆ.

ದೆಹಲಿಯಲ್ಲಿನ ಗಂಭೀರ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಪೊಲೀಸ್ ಸಿಬ್ಬಂದಿ ವರ್ಗದವರು ಮೇಲ್ ಕಳುಹಿಸುವವರು ನಿಖರ ಸ್ಥಳದ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ಇದಕ್ಕಾಗಿ ಗೂಗಲ್ ಕಂಪನಿಯಲ್ಲಿ ಗೆ ಸಂಪರ್ಕವನ್ನು ಸಾಧಿಸಿದ್ದಾರೆ.

ಗಂಭೀರ ಅವರ ಖಾಸಗಿ ಕಾರ್ಯದರ್ಶಿ ಗೌರವ್ ಅರೋರ. ಇವರು ಡಿಸಿಪಿ ಶ್ವೇತಾ ಚೌಹಾಣ್ ಅವರನ್ನು ಭೇಟಿ ಮಾಡಿ ಬೆದರಿಕೆ ಸಂಬಂಧ ದೂರು ನೀಡಿದ್ದಾರೆ. ಸೈಬರ್ ಸೆಲ್ ನಲ್ಲಿ ಎಫ್ಐಆರ್ ದಾಖಲಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ.

ಕೋವಿಡ್ : ದೇಶದಲ್ಲೇ ಬೆಂಗಳೂರು ಅಗ್ರಸ್ಥಾನ

0

ಭಾರತವು 9,283 ಹೊಸದಾಗಿ ಕರೋನಾ ವೈರಸ್ ಸೋಂಕನ್ನು ಹೊಂದಿದೆ. ದೇಶದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 3,45,35,763. ಆದರೆ ಸಕ್ರಿಯ ಪ್ರಕರಣಗಳು 1,11,481 ಕ್ಕೆ ಇಳಿದಿದೆ. ಇದು 537 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ತಿಳಿಸಿದೆ. ಇಲ್ಲಿಯವರೆಗೆ 37 ಸಾವುಗಳಾಗಿವೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ ಪ್ರಮಾಣವು 0.32% ಅನ್ನು ಒಳಗೊಂಡಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ 2,103 ಪ್ರಕರಣಗಳ ಇಳಿಕೆ ಕಂಡಿದೆ. ಕರ್ನಾಟಕದಲ್ಲಿ ಪ್ರಸ್ತುತ 254 ಹೊಸ ಪ್ರಕರಣಗಳು ಮತ್ತು ಮೂರು ಸಾವುಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,94,255 ಕ್ಕೆ ತಲುಪಿದೆ. ಬೆಂಗಳೂರು ನಗರವು ಪ್ರಕರಣಗಳ ಪಟ್ಟಿಯಲ್ಲಿ (152) ಅಗ್ರಸ್ಥಾನದಲ್ಲಿದೆ. ಏಕೆಂದರೆ ನಗರದಲ್ಲಿ 464 ಡಿಸ್ಚಾರ್ಜ್ ಮತ್ತು ಒಂದು ಸಾವು ಸಂಭವಿಸಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 6,412.

ಹಿರಿಯ ಮಾಧ್ಯಮ ತಜ್ಞ ಶ್ರೀ ಶೇಷಚಂದ್ರಿಕ ಅವರೊಡನೆ ಸಂವಾದ.

0

ಎಸ್.ಕೆ. ಶೇಷಚಂದ್ರಿಕ ಅವರು ನಾಡಿನ ಹಿರಿಯ ಮಾಧ್ಯಮ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಆಕಾಶವಾಣಿ, ದೂರದರ್ಶನ, ಇಂತಹ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. ಹಿರಿಯ ಪತ್ರಕರ್ತರಾಗಿ ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿಯೂ ಖ್ಯಾತಿಯನ್ನು ಪಡೆದಿದ್ದಾರೆ.
ಆಕಾಶವಾಣಿಯಲ್ಲಿ ಬಾತ್ಮೀದಾರರಾಗಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಭಾರತ ಸರ್ಕಾರವು ನೀಡುವ ಎಲ್.ಕೆ. ಶರ್ಮಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಈ ವರ್ಷ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ನೀಡಲಾಗಿದೆ. ಇವರಿಗೆ ರಾಜ್ಯೋತ್ಸವ ಮತ್ತು ಮಾಧ್ಯಮ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಗಿದೆ.
ಸಾರೆಕೊಪ್ಪ ಬಂಗಾರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಇವರು ಪತ್ರಿಕಾ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉತ್ತಮ ಬರವಣಿಗೆ ಉತ್ತಮ ಸಮಾಜ

0

ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯಲ್ಲಿ ಆಸಕ್ತಿ ರೂಢಿಸಿಕೊಳ್ಳಬೇಕು. ವಯಸ್ಸು ಬೆಳೆದಂತೆ ಪ್ರಬುದ್ಧತೆಯೂ ಮೈಗೂಡುತ್ತದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಎಂ. ಜಯಕರ ತಿಳಿಸಿದ್ದಾರೆ.
ದಿಶಾ ಭಾರತ್ ಮತ್ತು ಈಸ್ಟ್ ವೆಸ್ಟ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ನನ್ನ ಭಾರತ ಅಭಿಯಾನ ನಿಮಿತ್ತ ಕಾರ್ಯಕ್ರಮ ಜರುಗಿತು.
‘ಸ್ವಾತಂತ್ರ್ಯ ನಂತರದ ಭಾರತ’ ಎಂಬ ವಿಷಯದ ಕುರಿತು ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಕುಲಪತಿಗಳು ಅಭಿನಂದನೆ ಸಲ್ಲಿಸಿದರು.
ಉತ್ತಮ ಬರವಣಿಗೆಯಿಂದ ಆರೋಗ್ಯಪೂರ್ಣ ಸಮಾಜದ ಜೊತೆಗೆ ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂದರು.
ಕರ್ನಾಟಕ ಸಂಸ್ಕೃತಿ ವಿವಿ ಕುಲಸಚಿವ ಡಾ.ಎಂ. ಕೊಟ್ರೇಶ್ ಅವರು ಮಾತನಾಡಿ, ವ್ಯಕ್ತಿಯೊಬ್ಬನ ಜ್ಞಾನವನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆ ಅಗತ್ಯವಿದೆ. ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕಾರ್ಯ ಇಂದಿನ ಅವಶ್ಯಕತೆಯಾಗಿದೆ. ಸೃಜನ ಹಾಗೂ ಸೃಜನೇತರ ಶೈಲಿಯ ಬರಹಗಳು ಪ್ರಾಮುಖ್ಯತೆ ಪಡೆದಿವೆ. ಹೆಚ್ಚು ಹೆಚ್ಚು ಸೃಜನಶೀಲ ಸಾಹಿತ್ಯ ನಿರ್ಮಾಣವಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಸ್ಟ್ ವೆಸ್ಟ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ರಶ್ಮಿ ರವಿಕಿರಣ್ ವಹಿಸಿದ್ದರು. ದೇಶ ಭಾರತ ಸಂಸ್ಥಾಪಕಿ ಹಾಗೂ ನಿರ್ದೇಶಕಿ ರೇಖಾ ರಾಮಚಂದ್ರನ್, ದಯಾನಂದ್ ಸಾಗರ್, ದಂತ ವೈದ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಂತ್ ಮಾದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕ್ರಿಪ್ಟೋಕರೆನ್ಸಿಗೆ ಅಗ್ನಿ ಪರೀಕ್ಷೆ

0

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಗಳನ್ನು ಸರ್ಕಾರ ನಿಷೇಧಿಸಲಿದೆ ಎಂಬ ವದಂತಿ ಡಿಜಿಟಲ್ ಕರೆನ್ಸಿ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.
ಕೇಂದ್ರ ಸರ್ಕಾರ ನವೆಂಬರ್ 29ರಂದು ಸಂಸತ್ತಿನ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಕುರಿತ ವಿಧೇಯಕ ಮಂಡಿಸಲಿದೆ. ಇದರ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಸರಕಾರ ಕ್ರಿಪ್ಟೋ ಕರೆನ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಸಾಧ್ಯತೆ ಇಲ್ಲ ‌. ಬದಲಿಗೆ ನಿಯಂತ್ರಿಸುವ ಹಾಗೂ ಅದರ ಮೂಲಕ ಭಯೋತ್ಪಾದನೆಗೆ ಹಣಕಾಸು ಇತ್ಯಾದಿ ಅಕ್ರಮಗಳು ನಡೆಯದಿರುವಂತೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಚಲಾವಣೆಯಲ್ಲಿರುವ ಅನೇಕ ಕ್ರಿಪ್ಟೋಕರೆನ್ಸಿಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಕೆಲವು ಮಾತ್ರ ಉಳಿದುಕೊಳ್ಳಲಿದೆ ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಬಿಟ್ ಕಾಯಿನ್, ಟೆದರ್ ಡಾಗ್ ಕಾಯಿನ್ ಮುಂತಾದ ಕ್ರಿಪ್ತೋಕರೆನ್ಸಿ ಗಳ ಮೌಲ್ಯ ಪಾತಳಕ್ಕೆ ಕುಸಿದಿದೆ. ಬಹುತೇಕ ಬಿಟ್ ಕಾಯಿನ್ ದರವು ಸರಾಸರಿ ಶೇ.20ರಷ್ಟು ಕುಸಿತ ಕಂಡಿದೆ ಎಂದು ‘ವಾಜರ್ ಎಕ್ಸ್’ ಅಂಕಿ ಅಂಶಗಳು ತಿಳಿಸಿವೆ.
ಒಂದು ವೇಳೆ ಸರ್ಕಾರ ಬಹುತೇಕ ಕ್ರಿಪ್ತೋಕರೆನ್ಸಿ ಗಳನ್ನು ನಿಷೇಧಿಸಿದರೆ ಏನಾಗಲಿದೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹೆಣ್ಣಿನ ಮೇಲೆ ನಿಲ್ಲದ ದೌರ್ಜನ್ಯ

0

ಜಗವೆಂಬ ಹಣತೆಯಲ್ಲಿ, ಬದುಕೆಂಬ ಎಣ್ಣೆ ಹಾಕಿ, ಗಂಡನೆಂಬ ಬತ್ತಿಗೆ ಹೆಣ್ಣಿನ ದೀಪ ಬೆಳಗುವುದಯ್ಯು…. ಆಹಾ! ಸಾಲುಗಳು ಎಷ್ಟು ಅರ್ಥಗರ್ಭಿತವಾಗಿದೆ. ಸಾಮಾಜಿಕ ಜೀವನದಲ್ಲಿ ಈ ಸಾಲುಗಳು ಗಂಡು-ಹೆಣ್ಣು ಸಮಾನ ಎಂಬ ಅರ್ಥವನ್ನು ನೀಡುತ್ತದೆ.

ಸಮಾಜದಲ್ಲಿ ಹೆಣ್ಣು-ಗಂಡು ಎಂಬುದು ಎರಡು ಕಣ್ಣುಗಳಿದ್ದಂತೆ. ಆದರೆ ಅನೇಕ ಶತಮಾನಗಳಿಂದ ಹೆಣ್ಣಿನ ಮೇಲೆ ಆಗುವ ದೌರ್ಜನ್ಯಗಳು ಈಗಿನವರೆಗೂ ನಿಂತಿಲ್ಲ. ಆಧುನಿಕ ಕಾಲದಲ್ಲಿ ಹೇಳುವ ಈ ಪುರುಷ ಪ್ರಧಾನ ಸಮಾಜವೂ ತನ್ನ ಅಂತರಾಳದಲ್ಲಿ ಮಹಿಳೆಯ ಬಗ್ಗೆ ಯೋಚಿಸುವುದೇ ಬೇರೆ. ಆಕೆ ಪ್ರತಿನಿತ್ಯವೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ.

ಮಾಧ್ಯಮಗಳಲ್ಲಿ ಪ್ರತಿದಿನವೂ ಒಂದಲ್ಲ ಒಂದು ಸುದ್ದಿ, ಹೆಣ್ಣಿನ ಮೇಲಾಗುವ ದೌರ್ಜನ್ಯವೇ ಆಗಿರುತ್ತದೆ. ಸ್ವಾತಂತ್ರದ ನಂತರ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿತ್ತು. ಆದರೆ ಅದೆಷ್ಟು ರಾಜ್ಯಗಳಲ್ಲಿ ಇಂದಿಗೂ ಕೂಡ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿದೆ.

ಅತ್ಯಾಚಾರ, ವರದಕ್ಷಿಣೆ ಪಿಡುಗು, ಇನ್ನೂ ಹಲವು ಸಾಮಾಜಿಕ ಪಿಡುಗುಗಳು ಇಂದಿಗೂ ಅಸ್ತಿತ್ವದಲ್ಲಿದೆ. ಸ್ತ್ರೀ ಮೇಲೆ ಪುರುಷರ ರಕ್ಕಸಿಯ ಅಟ್ಟಹಾಸ ನಡೆಸುತ್ತಲೇ ಇದೆ.
ಅತ್ಯಾಚಾರಕ್ಕೆ ಎಷ್ಟೋ ಮಹಿಳೆಯರು ಬಲಿಯಾಗುತ್ತಿದ್ದಾರೆ.

ಸಮಾಜದಲ್ಲಿನ ಮಹಿಳೆಯರ ಮೇಲಾಗುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ತಪ್ಪಿಸಲು ಕಾನೂನು ಅರಿವು ಅಗತ್ಯವಿದೆ. ಇದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸ ಬೇಕು. ಆದ್ದರಿಂದ ಪ್ರತಿವರ್ಷ ನವೆಂಬರ್ 25ರಂದು ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನವಾಗಿ ಆಚರಿಸಲಾಗುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಾಕ್ ನ ಲಾಹೋರ್ ಪಟ್ಟಣ ಮಾಲಿನ್ಯದಲ್ಲಿ ಪ್ರಥಮ

0

ವಿಶ್ವದ ಅತಿ ಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಎಂಬ ಅಪಕೀರ್ತಿಗೆ ಪಾಕಿಸ್ತಾನದ ರಾಜಧಾನಿ ಲಾಹೋರ್ ಪಾತ್ರವಾಗಿದೆ.

ಸ್ವಿಜರ್ಲ್ಯಾಂಡ್ ನ ‘ಪ್ಲಾಟ್ಫಾರ್ಮ್ ಐಕ್ಯೂಏರ್’ ಎಂಬ ವಾಯು ಗುಣಮಟ್ಟದ ಮೇಲೆ ನಿಗಾ ಇಡುವ ಕಂಪನಿ ಈ ಕುರಿತಂತೆ ಮಾಹಿತಿ ನೀಡಿದೆ.

ನಗರಗಳ ವಾಯು ಗುಣಮಟ್ಟ ಅಳೆಯುವ ಅಮೆರಿಕದ ಎಕ್ಯೂಐ ಎಂಬ ಮಾನದಂಡದ ಪ್ರಕಾರ ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಲಾಹೋರ್ ಪಡೆದಿದೆ.

ಲಾಹೋರ್ ನ ವಾಯು ಗುಣಮಟ್ಟ ಸೂಚ್ಯಂಕ 203 ದಾಖಲಾಗಿದೆ. 2ನೇ ಸ್ಥಾನದಲ್ಲಿರುವ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 186 ಎಂದು ‘ಪ್ಲಾಟ್ ಫಾರ್ಮ್ ಐಕ್ಯೂಏರ್ ‘ ಕಂಪನಿ ಮಾಹಿತಿಯಲ್ಲಿ ತಿಳಿಸಿದೆ.

‘ಈ ನಗರಗಳಲ್ಲಿ ಹೊಗೆ ಮಂಜಿನ ಪ್ರಮಾಣ ಹೆಚ್ಚುತ್ತಿದೆ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳ ಪ್ರಮಾಣವೂ ಅಧಿಕಗೊಂಡಿದೆ. ಅದರಿಂದ ಸಾವಿರಾರು ಜನರು ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಜನರು ಮನೆಯಲ್ಲಿ ಉಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕಂಪನಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೂರು ಕೃಷಿ ಕಾನೂನು ರದ್ದು : ಕೇಂದ್ರ ಸಂಪುಟ ಒಪ್ಪಿಗೆ

0

ಕಳೆದ ಒಂದು ವರ್ಷದಿಂದ ನಡೆದ ರೈತರ ಪ್ರತಿಭಟನೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಘೋಷಣೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಮೋದಿಯವರ ಘೋಷಣೆಯ ನಂತರದ ಮೊದಲ ಸಂಪುಟ ಸಭೆಯಲ್ಲೇ ಕೃಷಿ ಕಾನೂನು ರದ್ಧತಿಗೆ ಅಗತ್ಯ ವಿಧೇಯಕ ಮಂಡನೆ ನಿರ್ಧಾರವು ಸ್ವಾಗತಾರ್ಹ. ಇದು ನಮ್ಮ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಮಾತಿಗೆ ತಪ್ಪದಿರುವುದು ನಮ್ಮ ಸರ್ಕಾರದ ಸಂಕಲ್ಪ ಮಂತ್ರ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೃಷಿ ಕಾನೂನು ರದ್ದು ವಿಧೇಯಕ -2021ರ ಮಂಡನೆಗೆ ಸಂಪುಟ ಸರ್ವಸಮ್ಮತ ಒಪ್ಪಿಗೆ ನೀಡಿದೆ. ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿಯೇ ಈ ರದ್ದು ವಿಧೇಯಕ ಮಂಡನೆಯಾಗಲಿದೆ. ಈ ಬಗ್ಗೆ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ಮುಂಬರುವ ಅಧಿವೇಶನದಲ್ಲಿ ಕೃಷಿ ಕಾನೂನುಗಳ ರದ್ಧತಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿದೆ ಎಂದರು.
ನವಂಬರ್ 29ರಿಂದ ಡಿಸೆಂಬರ್ 23 ರವರೆಗೆ ಚಳಿಗಾಲದ ಸಂಸತ್ ಅಧಿವೇಶನ ನಡೆಯಲಿದೆ. ರೈತರ ಪ್ರತಿಭಟನೆಗೆ ಮನ್ನಣೆ ನೀಡಿ ಕೃಷಿ ಕಾನೂನು ರದ್ದು ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 19ರಂದು ಪ್ರಕಟಿಸಿದ್ದರು. ನವೆಂಬರ್ 21ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲಾಗಿತ್ತು.
2020ರ ನವೆಂಬರ್ ನಿಂದ ಆರಂಭಗೊಂಡಿರುವ ಸುಮಾರು 40 ರೈತ ಸಂಘಟನೆಗಳ ಪ್ರತಿಭಟನೆಯು ದಿಲ್ಲಿಯ ಗಡಿಯಲ್ಲಿ ನಿರಂತರವಾಗಿ ಸಾಗುತ್ತಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಉತ್ತರಪ್ರದೇಶದಿಂದ ಸಾವಿರಾರು ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಲೆನಾಡ ಸೊಬಗಿಗೆ ಸೆರೆಯಾದ ರಾಜ್ಯಪಾಲರು

0

ಪ್ರಾದೇಶಿಕ ಮತ್ತು ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದ್ದಾರೆ.
ಶಿವಮೊಗ್ಗ ನಗರದ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಪ್ರೇರಣಾ ಕನ್ವೇಷನ್ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದರು.
ಬೇರೆ ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಹಳ ಮುಂಚೂಣಿಯಲ್ಲಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಶಿವಮೊಗ್ಗದ ಕೊಡುಗೆ ಅಪಾರವಾಗಿದೆ. ಇದು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿ. ಹಿಂದಿ ಭಾಷಿಗನಾದರೂ ರಾಜ್ಯಪಾಲನಾಗಿ ಕರ್ನಾಟಕಕ್ಕೆ ಬಂದ ಬಳಿಕ ಕನ್ನಡ ಕಲಿಯುತ್ತಿದ್ದೇನೆ ಎಂದರು.


ರಾಜ್ಯಪಾಲರಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಭೇಟಿ ನೀಡಿದ ಥಾವರಚಂದ್ ಗೆಹ್ಲೋಟ್ ಅವರು ಮಲೆನಾಡಿನ ಪರಿಸರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ವೀಕ್ಷಿಸಿದರು. ಅರಣ್ಯ, ದಟ್ಟ ಹಸಿರು, ತಂಪಾದ ವಾತಾವರಣವಿರುವ ಇಂತಹ ಸ್ಥಳಗಳಿಗೆ ರಾಜ್ಯದವರಲ್ಲದೇ ಹೊರ ರಾಜ್ಯದವರೂ ಬಂದು ವೀಕ್ಷಿಸಬೇಕು. ಪ್ರವಾಸಿ ಕೇಂದ್ರಗಳಿಗೆ ಹೆಚ್ಚು ಜನರು ಬರುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೋಗ ಜಲಪಾತವನ್ನು ವಿಕ್ಷಿಸಿ ಆನಂದ ಪಟ್ಟರು.