Tuesday, August 4, 2026
Tuesday, August 4, 2026
Home Blog Page 2052

ಬಿಸಿಯೂಟ ಸಂಗಡ ಮೊಟ್ಟೆ ಅಥವಾ ಬಾಳೆಹಣ್ಣು

0

ರಾಜ್ಯದ ಏಳು ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ , ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಯೋಜನೆ ದೊರೆಯಲಿದೆ.

ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಕಲ್ಬುರ್ಗಿ, ಬೀದರ್, ಯಾದಗಿರಿ ಈ ಜಿಲ್ಲೆಯ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ದೊರೆಯಲಿದೆ. ಮೊಟ್ಟೆ ಸೇವಿಸದವರಿಗೆ ಮೊಟ್ಟೆ ಬದಲು ಬಾಳೆಹಣ್ಣು ನೀಡಲು ತೀರ್ಮಾನಿಸಲಾಗಿದೆ.

ಡಿಸೆಂಬರ್ ತಿಂಗಳಿನಿಂದ ಮಾರ್ಚ್ ಮೂವತ್ತರವರೆಗೆ ಒಟ್ಟು ನಾಲ್ಕು ತಿಂಗಳು ಯೋಜನೆ ಜಾರಿಯಲ್ಲಿ ಇರುತ್ತದೆ. ಈ ಯೋಜನೆಗೆ ಸುಮಾರು 39. 86 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಮಕ್ಕಳು ಅಪೌಷ್ಠಿಕತೆ ರಕ್ತಹೀನತೆ ಹೊಂದಿರುವ ಮಕ್ಕಳ ಪ್ರಮಾಣ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರವು ‘ಪ್ರಧಾನಮಂತ್ರಿ ಪೋಷಣ್’ ಯೋಜನೆಯ ಅಡಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೋವಿಡ್ ನಂತರ ವಿಮಾನ ಸಂಚಾರ ಸುಧಾರಿಸಿದೆ : ಬನ್ಸಲ್

0

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಲ್ ಅವರು ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ವಿಮಾನ ನಿಲ್ದಾಣಗಳಲ್ಲಿ ಒಟ್ಟು 90 ಸಾವಿರ ಕೋಟಿ ಹೂಡಿಕೆ ಆಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಈ ಹೂಡಿಕೆಯಲ್ಲಿ ಖಾಸಗಿ ವಲಯದ ಪಾಲು 68 ಸಾವಿರ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನವು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು, ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ದೇಶಿ ವಿಮಾನ ಸಂಚಾರ ಪ್ರಮಾಣವು ಕೋವಿಡ್ ನ ಮೊದಲಿನ ಹಂತಕ್ಕೆ ಬರುತ್ತಿದೆ ಎಂದಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಆಗಲಿರುವ ಒಟ್ಟು ಹೂಡಿಕೆಯಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 20ರಿಂದ 22 ಸಾವಿರ ಕೋಟಿ ವರೆಗಿನ ಮೊತ್ತವನ್ನು ಹೂಡಿಕೆ ಮಾಡಲಿದೆ ಹಾಗೂ ಇನ್ನುಳಿದ ಮೊತ್ತವನ್ನು ಖಾಸಗಿ ಕಂಪನಿಗಳು ಹೂಡಿಕೆ ರೂಪದಲ್ಲಿ ವಿನಿಯೋಗಿಸಲಿವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 220 ವಿಮಾನ ನಿಲ್ದಾಣಗಳು, ಹೆಲಿಕಾಪ್ಟರ್ ನಿಲ್ದಾಣಗಳು ಸಕ್ರಿಯವಾಗುವ ನಿರೀಕ್ಷೆ ಇದೆ. ಪ್ರಸ್ತುತ ದೇಶದಲ್ಲಿ ಒಟ್ಟು 136 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಹಲವೆಡೆ ಸಣ್ಣ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜೀವ್ ಬನ್ಸಲ್ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿತ್ತನೆ ಬೀಜಗಳ ಜೊತೆ ತರಕಾರಿ ಬೀಜಗಳನ್ನು ಉತ್ಪಾದಿಸಲಿ: ಬಿ.ಸಿ.ಪಾಟೀಲ್

0

ಕರ್ನಾಟಕ ರಾಜ್ಯ ಬೀಜ ನಿಗಮ ತಳಿವರ್ಧಿತ ಬಿತ್ತನೆ ಬೀಜಗಳ ಜೊತೆಗೆ ರೈತರಿಗೆ ಲಾಭದಾಯಕವಾಗುವ ತರಕಾರಿ ಬೀಜಗಳನ್ನೂ ಉತ್ಪಾದಿಸಲಿ ಎಂದು ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.
ಹೆಬ್ಬಾಳದ ಕರ್ನಾಟಕ ಬೀಜ ನಿಗಮದಲ್ಲಿ ಬೀಜ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾ ಉಪವ್ಯವಸ್ಥಾಪಕ ನಿರ್ದೇಶಕರೊಂದಿಗೆ ಬಿ.ಸಿ.ಪಾಟೀಲ್ ಸಭೆ ನಡೆಸಿದರು.
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವುದರ ಜೊತೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗುಣಮಟ್ಟದ ಬೀಜ ಉತ್ಪಾದನೆಯ ಲಾಭ ತರುವ ನಿಗಮವಾಗಬೇಕು. ಬೀಜ ನಿಗಮ ರೈತರಿಗೆ ಬರಿ ಬಿತ್ತನೆ ಬೀಜವನ್ನು ಪೂರೈಸುವ ಕೆಲಸವನ್ನಷ್ಟೇ ಮಾಡಬಾರದು. ಆ ಮೂಲಕ ನಿಗಮ ದೇಶದಲ್ಲಿಯೇ ಲಾಭದಾಯಕ ನಿಗಮವಾಗಬೇಕು.ರೈತರ ಹಿತದೃಷ್ಟಿಯಿಂದ ತರಕಾರಿ ಬಿತ್ತನೆ ಬೀಜಗಳನ್ನು ಸಹ ರಾಜ್ಯ ಬೀಜ ನಿಗಮ ಉತ್ಪಾದಿಸಿ ಮಾರಾಟ ಮಾಡಬೇಕು. ಇದಕ್ಕೆ ಅಗತ್ಯವಾದ ಕೌಶಲ್ಯ ತರಬೇತಿ ವೃತ್ತಿಪರತೆಯನ್ನು ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರು ಹೊಂದಬೇಕು. ಆ ಮೂಲಕ ಕರ್ನಾಟಕ ತೈಲ ನಿಗಮದಂತೆ ಬೀಜ ನಿಗಮವು ಸಹ ಲಾಭದಾಯವಾಗಬೇಕೆಂದು ಬಿ.ಸಿ.ಪಾಟೀಲ್ ಕರೆ ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಾಲ್ಮೀಕಿ ರಾಮಾಯಣದಲ್ಲಿ ಅನುಕರಣೆಯ ಮೌಲ್ಯಗಳಿವೆ

0

ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರೊ.ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ನಡೆಸಲಾಯಿತು.

“ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಸ್ತ್ರೀ ಸಮಾನತೆ, ಸಹೋದರ ಬಾಂಧವ್ಯ, ಅಹಿಂಸಾವಾದ ಹೀಗೆ ಹಲವಾರು ಅನುಕರಣಿಯ ಮೌಲ್ಯಗಳಿವೆ. ಹೀಗಾಗಿಯೇ ರಾಮ ಮತ್ತು ರಾಮಾಯಣ ಭಾರತೀಯರ ಹೃದಯಕ್ಕೆ ಹತ್ತಿರವಾದ ಭಾವನಾತ್ಮಕ ವಿಚಾರ ” ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಗತ್ತಿನ ಕಾವ್ಯಪರಂಪರೆಯಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ಮಹಾಕಾವ್ಯವನ್ನು ವಾಲ್ಮೀಕಿಯವರು ರಚಿಸಿದ್ದಾರೆ. ಇವರು ಸರ್ವಕಾಲಕ್ಕೂ ಸಲ್ಲುವ ಅನೇಕ ಆದರ್ಶಗಳನ್ನು ಪ್ರತಿಪಾದಿಸಿದ ಜಾಗತಿಕ ಕವಿ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ನಾಗಭೂಷಣ್ ಬಗ್ಗನಡು ಹೇಳಿದರು.

ಮಹರ್ಷಿ ವಾಲ್ಮೀಕಿ ಅವರು ರಾಮನ ಮೇರು ವ್ಯಕ್ತಿತ್ವವನ್ನು ಮತ್ತು ರಾಮಾಯಣದ ಮೂಲಕ ಅವರು ಪ್ರತಿಪಾದಿಸಿದ್ದಾರೆ. ಈ ಮೌಲ್ಯಗಳನ್ನು ಇಂದಿನ ಪೀಳಿಗೆಯವರಿಗೆ ತಲುಪಿಸಬೇಕು. ಈ ದೃಷ್ಟಿಯಿಂದ ಸರ್ಕಾರ ವಾಲ್ಮೀಕಿ ಜಯಂತಿಯ ಆಚರಣೆ ಆರಂಭಿಸಿದೆ. ವಿಶ್ವವಿದ್ಯಾಲಯ ವಾಲ್ಮೀಕಿ ಜಯಂತಿಯನ್ನು ಆಚರಿಸುವುದರ ಜೊತೆಗೆ ವರ್ಷವಿಡಿ ಎಸ್ ಸಿ ಎಸ್ ಟಿ ಘಟಕದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕುಲಸಚಿವೆ ಶ್ರೀಮತಿ ಜಿ. ಅನುರಾಧ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಎಂ. ತ್ಯಾಗರಾಜ, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಘಟಕದ ಸಂಚಾಲಕ ಡಾ. ಉದ್ದಗಟ್ಟಿ ವೆಂಕಟೇಶ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಹಿಳೆಯರಲ್ಲಿ ಪರಸ್ಪರ ವಿಚಾರವಿನಿಮಯ ಅಗತ್ಯ-ಕೆ. ಎಸ್. ಈಶ್ವರಪ್ಪ

0

ಶಿವಮೊಗ್ಗದ ವಿನೋಬನಗರ ಶಿವಾಲಯ ಸಭಾಂಗಣದಲ್ಲಿ, ನಾಡ ನಮನ ಸ್ಪರ್ಧೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರತಿಮನೆಯಲ್ಲೂ ದೇಶಭಕ್ತಿ ಗೀತೆ, ರಾಷ್ಟ್ರಾಭಿಮಾನ ಮೊಳಗಬೇಕು.
ಹೆಣ್ಣುಮಕ್ಕಳು ಸದಾ ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು, ಮನೆಯೊಳಗೆ ಒತ್ತಡದಲ್ಲಿ ಇರುತ್ತಾರೆ. ಅವರು ಮನೆ ಗೆಲಸದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಪರಸ್ಪರ ತಮ್ಮ ಸಮಸ್ಯೆ ಹಂಚಿಕೊಳ್ಳಬೇಕು. ಒಳ್ಳೆಯ ವಿಚಾರ ಅರಿಯಲು ಇಂತಹ ಕಾರ್ಯಕ್ರಮ ಸಹಾಯಕವಾಗಿದೆ. ಭಜನೆ, ಹಾಡು ಇನ್ನು ಹಲವಾರು ಸಂಸ್ಕಾರಗಳು ಬೇರೂರಿ ದಾಗ ಅದು ಸಮಾಜದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದರು.

ಹಾಡು ಮತ್ತು ಭಜನೆಗೆ ರಾಗ ಮುಖ್ಯವಲ್ಲ, ಭಾವ ಮುಖ್ಯ. ಉತ್ತಮ ಹಾಡುಗಾರರ ಜೊತೆಗೆ ಧ್ವನಿಗೂಡಿಸಿದಾಗ ತನ್ನಿಂತಾನೇ ಅವರು ಅದ್ಭುತ ಹಾಡುಗಾರ ರಾಗುತ್ತಾರೆ. ಭಕ್ತಿಯಲ್ಲಿ ತಲ್ಲೀನರಾದಾಗ, ಸ್ವಾಭಾವಿಕವಾಗಿ ಉತ್ತಮ ವಾದ ಸ್ವರ ಹೊರಹೊಮ್ಮುತ್ತದೆ. ಅದರಿಂದ ಹೃದಯಕ್ಕೆ ಆನಂದ, ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಕೂಡ ತಿಳಿಸಿದರು.

ಸದ್ಗುಣ, ಸಚ್ಚಾರಿತ್ರ್ಯ, ಸಹಕಾರ ಮನೋಭಾವನೆ, ಸಂಸ್ಕಾರ ಇವುಗಳು ಭಜನೆಯಿಂದ ಹೊರಬರಲು ಸಾಧ್ಯ. ಇದು ಕೇವಲ ಮಹಿಳೆಯರ ಸಂಘಟನೆ ಮಾತ್ರವಲ್ಲ. ಭಕ್ತಿ ಮತ್ತು ಭಾವದ ಸಮ್ಮೇಲನವಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ, ನಮಗರಿವಿಲ್ಲದೇ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜಿಲ್ಲಾ ಜಂಗಮ ಸಮಾಜ ಅಧ್ಯಕ್ಷ ಟಿ. ವಿ. ಈಶ್ವರಯ್ಯ, ವಿನೋಬನಗರ ವೀರಶೈವ ಸಮಿತಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಸಮಾಜ ಅಧ್ಯಕ್ಷ ಉಮೇಶ್ ಹಿರೇಮಠ್, ಜಿಲ್ಲಾ ಜಂಗಮ ಮಹಿಳಾ ಸಮಾಜದ ಅಧ್ಯಕ್ಷ ಸುಜಯ ಪ್ರಸಾದ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೋವಿಡ್ ಸಂಕಷ್ಟದಲ್ಲಿ ಭಾರತ್ ಬಯೋಟೆಕ್ ಕೊಡುಗೆ

0

ಶಿವಮೊಗ್ಗದ ಪಿಇಎಸ್ ಕಾಲೇಜಿನಲ್ಲಿ ಇಂದು ನಡೆದ “ಮಕ್ಕಳಿಗೆ ಇನೋವೇಷನ್ ಅನು ಬೋಧನೆಯ ಸಮಯದಲ್ಲಿಯೇ ಅಳವಡಿಕೆ” ಎಂಬ ವಿಷಯವನ್ನು ಕುರಿತು ವಿಚಾರ ಸಂಕಿರಣ ನಡೆಯಿತು.

‘ಭಾರತ್ ಬಯೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೃಷ್ಣಮೂರ್ತಿ ಎಲ್ಲಾ’ ಅವರು ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಕೊರೋನ ಸಂಕಷ್ಟದ ಸಮಯದಲ್ಲಿ ಇಡೀ ಪ್ರಪಂಚವು ನರಳುತ್ತಿತ್ತು. ಆ ಸನ್ನಿವೇಶದಲ್ಲಿ ಭಾರತ್ ಬಯೋಟೆಕ್ ಸಹಾಯದಿಂದ ಕೊವ್ಯಾಕ್ಸಿನ್ ಔಷಧವನ್ನು ಸಂಶೋಧಿಸಲಾಯಿತು. ಈ ಲಸಿಕೆಯನ್ನು ನಮ್ಮ ಜನತೆಗೆ ಕೊಡುವ ಜೊತೆಗೆ ವಿವಿಧ ದೇಶಗಳಿಗೆ ಕೂಡ ನೀಡಲಾಗಿದೆ” ಎಂದು ಡಾ.ಕೃಷ್ಣಮೂರ್ತಿಮೂರ್ತಿ ನುಡಿದರು.

ಇದೇ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ ಅವರು ಮಾತನಾಡಿದರು ಡಾ. ಕೃಷ್ಣಮೂರ್ತಿ ಎಲ್ಲಾ ಅವರು ನಮ್ಮ ಶಿವಮೊಗ್ಗಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಡಾ. ಮೂರ್ತಿ ಅವರ ಜೊತೆ ಮಾತನಾಡಿದಾಗ ‘ಅಡಿಕೆ ಸಿಪ್ಪೆಯನ್ನು ಹಾಗೂ ಮಲೆನಾಡಿನ ಅಪ್ಪೆ ಮಿಡಿಯನ್ನು ಕೂಡ ಫುಡ್ ಪ್ರೊಸೆಸ್ ನಲ್ಲಿ ಬಳಸುವ ಮಾರ್ಗವಿದೆ’ ಎಂದು ತಿಳಿಸಿದರು. ನಮ್ಮ ಮಲೆನಾಡಿನ ಪ್ರದೇಶಗಳಿಗೆ ಡಾ.ಕೃಷ್ಣಮೂರ್ತಿ ಅವರ ಕೊಡುಗೆ ಇರಲಿ ಮತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಹಾರೈಸಿದರು.

ವಿಜ್ಞಾನಿ ಡಾ.ರವಿ, ಪಿಇಎಸ್ ಟ್ರಸ್ಟ್ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಸುಭಾಷ್ ಬಿ.ಆರ್, ಕಾಲೇಜಿನ ಟ್ರಸ್ಟಿ ಬಿ.ವೈ.ಅರುಣಾದೇವಿ, ಪ್ರಾಂಶುಪಾಲರಾದ ಡಾ. ಚೈತನ್ಯ ಕುಮಾರ್, ಸಿಸಿಎ ಡಾ.ನಾಗರಾಜ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಧಿಕಾರಿಗಳ ಅಕ್ರಮ ಆಸ್ತಿ : ಎಸಿಬಿ ಜಪ್ತಿ

0

ಕೆಎಎಸ್ ಅಧಿಕಾರಿಗಳು ಸೇರಿದಂತೆ 15 ಮಂದಿ ಭ್ರಷ್ಟ ನೌಕರರ ಕಚೇರಿ ಹಾಗೂ ಮನೆಗಳ ಮೇಲೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಇದರ ಜೊತೆಗೆ ಭಾರಿ ಪ್ರಮಾಣದ ಚಿನ್ನಾಭರಣಗಳು, ಬೆಳ್ಳಿ, ಕಂತೆ ಕಂತೆ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಮನೆಯವರು ಮಾತ್ರವಲ್ಲದೆ, ಬೇರೆಯವರ ಹೆಸರಿನಲ್ಲಿ ನೊಂದಣಿಯಾದ ಕಾರುಗಳು, ಸೈಟು, ಬಾಡಿಗೆ ನೀಡಿದ ಮನೆಗಳು, ಕೃಷಿ ಭೂಮಿ ಹೊಂದಿರುವ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡುತನಿಖೆ ನಡೆಸಿದರು.
ಜೀವರ್ಗಿ ತಾಲೂಕಿನ ಪಿಡಬ್ಲ್ಯೂಡಿ ಜೆಇ ಶಾಂತಗೌಡ ಬಿರಾದಾರ್, ಸಕಾಲ ಮಿಷನ್ ಆಡಳಿತಾಧಿಕಾರಿ ಎಲ್. ಸಿ. ನಾಗರಾಜ್, ಗದಗದ ಜಂಟಿ ಕೃಷಿ ನಿರ್ದೇಶಕರು ಟಿ.ಎಸ್.ರುದ್ರೇಶಪ್ಪ, ಮಂಡ್ಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸ ಕೆ, ಹಾಗೂ ಮಂಗಳೂರಿನ ಸ್ಮಾರ್ಟ್ ಸಿಟಿ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ, ಬೆಂಗಳೂರಿನ ಬಿಬಿಎಂಪಿ ಚಾಲಕ ಜಿ.ವಿ. ಗಿರಿ, ಬಳ್ಳಾರಿಯ ನಿವೃತ್ತ ಸಬ್ ರಿಜಿಸ್ಟ್ರಾರ್ ಕೆ.ಎಸ್‌. ಶಿವಾನಂದ್ ಸೇರಿದಂತೆ ಹಲವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಸ್ಥಳಗಳ ಮೇಲೆ 508 ಅಧಿಕಾರಿಗಳು ಮುಂಜಾನೆಯಿಂದಲೇ ಶೋಧ ನಡೆಸಿದ್ದಾರೆ. 15 ಅಧಿಕಾರಿಗಳ ಮನೆಯಲ್ಲಿ 26ಕೆಜಿ ಚಿನ್ನ, 1.20 ಕೋಟಿ ರೂಪಾಯಿಗಳ ನಗದು ಪತ್ತೆಯಾಗಿವೆ. ಆದಾಯ ಮೂಲಕ್ಕಿಂತ ನೂರಾರು ಪಟ್ಟು ಆಸ್ತಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯ ‘ಡಿ’ ಗ್ರೂಪ್ ನೌಕರ ಜಿ.ವಿ.ಗಿರಿ, ಎಫ್ ಡಿಎ ನೌಕರ ಮಾಯಣ್ಣ ಮತ್ತು ಹೆಸ್ಕಾಂನ ಎಫ್ ಡಿಸಿ ನೌಕರ ನಾಥಾಜಿ ಪಾಟೀಲ್ ಅವರ ಐಷಾರಾಮಿ ಮನೆ, ಜೀವನ ಶೈಲಿ ಕಂಡು ಸ್ವತಃ ಎಸಿಬಿ ಅಧಿಕಾರಿಗಳೇ ದಂಗಾಗಿದ್ದರು.
ಇದನ್ನು ಎಸಿಬಿ ಈ ನಡೆಸಿದ ದೊಡ್ಡ ದಾಳಿ ಎಂದೇ ಹೇಳಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಾಮುಂಡಿ ಬೆಟ್ಟ : ಪ್ರಧಾನಿಗೆ ಭೈರಪ್ಪನವರ ಪತ್ರ

0

ಚಾಮುಂಡಿ ಬೆಟ್ಟದ ಮೇಲಿನ ಅಭಿವೃದ್ಧಿ ಯೋಜನೆಗಳ ವಿರುದ್ಧ ಹಸಿರಿನಿಂದ ತೀವ್ರ ವಿರೋಧದ ನಡುವೆ, ಹೆಸರಾಂತ ಕಾದಂಬರಿಕಾರ ಎಸ್.ಎಲ್. ಬೈರಪ್ಪ ಅವರು ಪ್ರಸಾದ್ (ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಹೆರಿಟೇಜ್ ಆಗ್ಮೆಂಟೇಶನ್ ಡ್ರೈವ್) ಯೋಜನೆಯಡಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೀಸಲು ಅರಣ್ಯಗಳಿಂದ ಆದಿವಾಸಿಗಳನ್ನು ಸ್ಥಳಾಂತರಿಸುವಂತೆ 9 ಸಚಿವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಈ ಪತ್ರವನ್ನು ನಗರದ ಕಾರ್ಯಕರ್ತೆ ಭಾಮಿ ಶೆಣೈ ಅವರು ಹಂಚಿಕೊಂಡಿದ್ದು, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್. ಎಲ್.ಭೈರಪ್ಪ ಅವರ ಬೆಂಬಲವು ಗುಡ್ಡಗಳನ್ನು ಉಳಿಸಲು ಹೋರಾಡುತ್ತಿರುವ ಕಾರ್ಯಕರ್ತರ ತೋಳಿಗೆ ಗುಂಡು ಹಾರಿಸಿದೆ ಎಂದು ಹೇಳಿದ್ದಾರೆ.
ಸುಂದರವಾಗಿ ರೂಪಿಸಲಾದ ಪ್ರಸಾದ್ ಯೋಜನೆಯನ್ನು ನಿಜವಾದ ಉತ್ಸಾಹದಲ್ಲಿ ಅನುಷ್ಠಾನಗೊಳಿಸಲು ನೇರವಾಗಿ ಪ್ರವಾಸೋದ್ಯಮ ಸಚಿವಾಲಯಕ್ಕೆ ನೀಡಬೇಕು ಎಂದು ಭೈರಪ್ಪನವರು ಪ್ರಧಾನ ಮಂತ್ರಿಯನ್ನು ವಿನಂತಿಸಿದ್ದಾರೆ.
ನಾವು ಈಗಿರುವ ಕಾಂಕ್ರೀಟ್ ಕಾಡನ್ನು ಕೆಡವಿ ನೈಸರ್ಗಿಕ ಸೌಂದರ್ಯವನ್ನು ಮರುಸ್ಥಾಪಿಸಬೇಕು. ಹಸಿರು ಹೊದಿಕೆಯನ್ನು ಹೆಚ್ಚಿಸಲು ಬೃಹತ್ ನೆಡುತೋಪು ಅಭಿಯಾನವನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಕಾದಂಬರಿಕಾರರು ಸಲಹೆ ನೀಡಿದರು.
4000 ಕ್ಕೂ ಹೆಚ್ಚು ನಿವಾಸಿಗಳು ಬೆಟ್ಟದ ತುದಿಯಲ್ಲಿ ವಾಸಿಸುತ್ತಿದ್ದಾರೆ.ದೇವಾಲಯದ ಅರ್ಚಕರು ಮತ್ತು ಕಾರ್ಯನಿರತ ಸಿಬ್ಬಂದಿಗಳಿಗೆ ಮಾತ್ರ ಅಲ್ಲಿ ಉಳಿಯಲು ಅವಕಾಶ ನೀಡಬೇಕು. ಉಳಿದವರನ್ನು ನಗರ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಅವರು ಹೇಳಿದರು.
ಇದರ ಹೊರತಾಗಿ, ವಿಐಪಿಗಳು ಸೇರಿದಂತೆ ಉಳಿದ ವಾಹನ ಸಂಚಾರವನ್ನು ನಿರ್ಬಂಧಿಸಬೇಕು ಮತ್ತು ಭಕ್ತರನ್ನು ಸಾಗಿಸಲು ವಿದ್ಯುತ್ ವಾಹನವನ್ನು ಮಾತ್ರ ಓಡಿಸಬೇಕು. ಎಲ್ಲಾ ಪೂಜಾ ಸಾಮಗ್ರಿಗಳನ್ನು ದೇವಸ್ಥಾನದ ಅಧಿಕಾರಿಗಳು ಮಾತ್ರ ಮಾರಾಟ ಮಾಡಬೇಕೇ ಹೊರತು ಖಾಸಗಿ ಮಾರಾಟಗಾರರಿಂದಲ್ಲ ಎಂದು ಭೈರಪ್ಪನವರು ಪತ್ರದಲ್ಲಿ ಬರೆದಿದ್ದಾರೆ.
ಹಿಂದಿನ ಸರ್ಕಾರವು ಬೆಟ್ಟದ ದೇಗುಲವನ್ನು ಬಹು ಹಂತದ ಪಾರ್ಕಿಂಗ್ ಸೌಲಭ್ಯಗಳು ಮತ್ತು ಅಂಗಡಿಗಳೊಂದಿಗೆ ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಿದೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಪ್ಯಾರಿಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಪ್ರಸ್ತಾಪಿಸಿದ್ದನ್ನು ಅವರ ಸಲಹೆಗಳು ಸಂಪೂರ್ಣ ಅನುಸರಣೆಯಲ್ಲಿವೆ ಎಂದು ಅವರು ಹೇಳಿದರು.

2022ರವರೆಗೆ ಗರೀಬ್ ಯೋಜನೆ ವಿಸ್ತರಣೆ

0

ಕೋವಿಡ್-19 ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಬಡವರನ್ನು ಬೆಂಬಲಿಸುವ ಪ್ರಯತ್ನದಲ್ಲಿ, ಪ್ರಧಾನ ಮಂತ್ರಿ ಗರೀಬ್ ಯೋಜನೆಯಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಿಂಗಳಿಗೆ ಉಚಿತ ಆಹಾರ ಧಾನ್ಯಗಳ ಪೂರೈಕೆಯನ್ನು ಮಾರ್ಚ್ 2022 ರಲ್ಲಿ 4 ತಿಂಗಳವರೆಗೆ ವಿಸ್ತರಿಸಲು ಕೇಂದ್ರವು ನಿರ್ಧರಿಸಿದೆ.ಈ ನಿರ್ಧಾರದಿಂದ ಕೇಂದ್ರದ ಬೊಕ್ಕಸಕ್ಕೆ ಹೆಚ್ಚುವರಿ 5,33,44 ರೂ ವೆಚ್ಚವಾಗಲಿದೆ. ಈ ನಿರ್ಧಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಒಳಗೊಂಡಿರುವ 80 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಪ್ರಯೋಜನವನ್ನು ನೀಡಲಿದೆ. ಪ್ರಧಾನ ಮಂತ್ರಿ ಗರೀಬ್ ಯೋಜನಾ ಯೋಜನೆಯಡಿಯಲ್ಲಿ ಉಚಿತ ಆಹಾರ ಧಾನ್ಯಗಳು, ವಿತರಣೆ ಬಡವರಿಗೆ ಪರಿಹಾರವನ್ನು ಒದಗಿಸುತ್ತದೆ .ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಒದಗಿಸಲಾದ ಸಾಮಾನ್ಯ ಕೋಟಾದ ಬಗ್ಗೆ ಪ್ರತಿ ಕೆಜಿಗೆ 2 ಅಥವಾ 3 ರೂಪಾಯಿಗಳ ಸಬ್ಸಿಡಿ ದರವಿದೆ. ಯೋಜನೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ ಮತ್ತು ಹಿಂದಿನ ವಿಸ್ತರಣೆಯು ನವೆಂಬರ್ 30 ರವರೆಗೆ ಮಾನ್ಯವಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆನ್ ಲೈನ್ ಗೇಮ್; ವಿಚಾರಣೆ ಪ್ರಗತಿ.

0

ಗೊತ್ತಿಲ್ಲದ ಫಲಿತಾಂಶಕ್ಕಾಗಿ ಬೆಟ್ಟಿಂಗ್ ಮೂಲಕ ಹಣ ಅಥವಾ ಬಾಜಿ ಕಟ್ಟುವುದು ಕೂಡ ಕೌಶಲ್ಯದ ಕ್ರೀಡೆಯಾಗಿದೆ. ಇದೇ ತರ ಆನ್ಲೈನ್ ಗೇಮ್ ಗಳನ್ನು ನಿರ್ಬಂಧಿಸುವುದೇ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿಯ ಉದ್ದೇಶವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ವಾದ ಮಂಡಿಸಿದೆ.

ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಇತರೆ ಕಂಪನಿಗಳು ಅರ್ಜಿಗಳನ್ನು ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ, ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಯನ್ನು ಆಲಿಸಿತು. ನಂತರ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.

“ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್ ನಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಹಲವು ಗೇಮ್ ಗಳಿಂದ ಸಮಾಜದಲ್ಲಿ ಎಷ್ಟೋ ಕುಟುಂಬಗಳು ನೆಮ್ಮದಿ ಹಾಳಾಗಿದೆ. ಇದಕ್ಕಾಗಿ ಆನ್ಲೈನ್ ಗೇಮ್ ಗಳನ್ನು ನಿಷೇಧಿಸಬೇಕೆಂದು ಕೋರಲಾಗಿತ್ತು. ವಿಚಾರಣೆ ನಡೆಯುವ ವೇಳೆ ನ್ಯಾಯಪೀಠ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿತು. ಅದರಂತೆ ಸರ್ಕಾರ ಆನ್ಲೈನ್ ಗೇಮ್ ನಿಷೇಧಿಸಲು ನಿರ್ಧಾರ ಕೈಗೊಂಡಿದೆ. ಆ ಅರ್ಜಿ ಇನ್ನೂ ಹೈಕೋರ್ಟ್ ನಲ್ಲಿ ಬಾಕಿಇದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು.

ಅಡ್ವೊಕೇಟ್ ಜನರಲ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯದ ಉದಾಹರಣೆಯನ್ನು ನೀಡಿದರು. ಇದು ಕೌಶಲ್ಯದ ಕ್ರೀಡೆ, ಅದರ ಬಗ್ಗೆ ಗೊತ್ತಿಲ್ಲದ ಫಲಿತಾಂಶಕ್ಕೆ ನಾವು ಬೇರೆಯವರಿಂದ ಹಣ ಸಂಗ್ರಹ ಮಾಡಿದರೆ ಅಥವಾ ಬೆಟ್ ಕಟ್ಟಿಸಿಕೊಂಡರೆ ಅದು ಅಪರಾಧವಾಗುತ್ತದೆ. ಆನ್ಲೈನ್ ಗೇಮ್ ಗಳ ಮೂಲಕ ಬೆಟ್ಟಿಂಗ್ ನಡೆಸಿದರೆ ಅದು ಶಿಕ್ಷಾರ್ಹ ಆಗುತ್ತದೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.