Tuesday, August 4, 2026
Tuesday, August 4, 2026
Home Blog Page 2053

ಸಾಮೂಹಿಕ ಭೋಜನ : ಕಟ್ಟೆಚ್ಚರ ಮಾರ್ಗಸೂಚಿ

0

ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸಾಮೂಹಿಕ ಭೋಜನ ಸೇವಿಸಿದ್ದ ಸಾರ್ವಜನಿಕರು ಫುಡ್ ಪಾಯಿಸನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ವರದಿಯಾಗಿತ್ತು. ಈಗ ಈ ಘಟನೆಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿ ಕೆ ಶಿವಕುಮಾರ್ ಅವರು ಸಾಮೂಹಿಕ ಭೋಜನ, ಅನ್ನಸಂತರ್ಪಣೆ, ಜಾತ್ರೆ ಉತ್ಸವದಂತಹ ಸಮಾರಂಭಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.

ಸಾಮೂಹಿಕ ಭೋಜನ ನಡೆಸುವ ಪೂರ್ವದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಡುಗೆ ಕೋಣೆಯಲ್ಲಿ ಅಪರಿಚಿತ ಅಥವಾ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು. ಅಡುಗೆ ಕೋಣೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಡುಗೆಗೆ ಬಳಸುವ ನೀರು ಶುದ್ಧವಾಗಿರುವುದನ್ನು ಖಾತ್ರಿಪಡಿಸಬೇಕು ಪ್ರತಿ ಎರಡು ತಿಂಗಳಿಗೊಮ್ಮೆ ನೀರನ್ನು ಆರೋಗ್ಯ ಇಲಾಖೆ ಸಹಕಾರದಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.

ಅಡುಗೆ ಮಾಡುವವರನ್ನು, ಸಹಾಯಕರನ್ನು, ಬಡಿಸುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ ನೇಮಕ ಮಾಡಿಕೊಳ್ಳಬೇಕು. ಕೈಗವಸು/ ತಲೆಗೆ ಟೋಪಿಯನ್ನು ಬಳಸುವುದು ಕಡ್ಡಾಯ. ಪ್ರತಿ ಸಿಬ್ಬಂದಿಯನ್ನು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಅವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಜಂತು ಹುಳು ನಿವಾರಣಾ ಮಾತ್ರ ನೀಡಬೇಕು. ಅಡುಗೆಭಟ್ಟರ ಮತ್ತು ಊಟ ಬಡಿಸುವವರ ಪೂರ್ಣ ವಿಳಾಸ ಮೊಬೈಲ್ ಸಂಖ್ಯೆಯನ್ನು ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸ್ಥಳೀಯ ಸರ್ಕಾರಿ ವೈದ್ಯಾಧಿಕಾರಿಗಳಿಗೆ ಮೊದಲೇ ನೀಡಿರಬೇಕು.

ಅಡಿಗೆಗೆ ಬಳಸುವ ಪದಾರ್ಥಗಳ ತಯಾರಿಕೆ ದಿನಾಂಕ ಮತ್ತು ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಏನಾದರೂ ಅವಘಡ ಸಂಭವಿಸಿದರೆ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕು. ದಾಸ್ತಾನು ಕೊಠಡಿ ಸ್ವಚ್ಛವಾಗಿರಬೇಕು. ಆಹಾರ ಪದಾರ್ಥಗಳ ಸರಬರಾಜು ಸಂದರ್ಭದಲ್ಲಿ ಕಲಬೆರಿಕೆ ಕಂಡುಬಂದಲ್ಲಿ ಅವುಗಳನ್ನು ಆಹಾರ ಸುರಕ್ಷತಾ ಇಲಾಖೆಯ ಮಾಹಿತಿ ನೀಡಬೇಕು. ಅಡುಗೆ ತಯಾರಿಸಿದ ನಂತರ ಪಾತ್ರೆಗಳಲ್ಲಿ ಹಲ್ಲಿ/ಜಿರಲೆ ಬೀಳದಂತೆ ಸುರಕ್ಷಿತವಾಗಿ ಮುಚ್ಚಿಡಬೇಕು.

ದೇವಸ್ಥಾನ, ಅಂಗನವಾಡಿ, ಶಾಲೆ, ವಸತಿ ಶಾಲೆ, ಹಾಸ್ಟೆಲ್, ಕ್ಯಾಂಟೀನ್, ಕಾರಾಗೃಹ ಮತ್ತು ಆಸ್ಪತ್ರೆ ಕ್ಯಾಂಟೀನ್ ಗಳಲ್ಲಿನ ಅಡುಗೆ ಕೊಠಡಿ ಮತ್ತು ಊಟದ ಕೊಠಡಿಗಳಲ್ಲಿ ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಿಕ್ಷಾಧನ ದಾನ,ಮಹಾದಾನ

0

ಈಗಿನ ಕಾಲದಲ್ಲಿ ಎಷ್ಟೇ ದೊಡ್ಡ ಹಣವಂತರಾದ್ರು, ನೂರು ರೂಪಾಯಿಗಳನ್ನು ಬಡವರಿಗೆ ದಾನ ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ. ಒಂದು ವೇಳೆ ಅಧಿಕ ಮೊತ್ತವನ್ನು ದಾನ ಮಾಡಿದರೆ ಅದಕ್ಕೊಂದು ಬೋರ್ಡ್ ಹಾಕಿಸದೆ ಬಿಡುವುದಿಲ್ಲ. ಇಂಥವರ ನಡುವೆ ಅಲ್ಲೊಬ್ಬ ಮಹಾನ್ ವೃದ್ದೆ ಭಿಕ್ಷೆ ಬೇಡಿ ಸಂಗ್ರಹಿಸಿದ ದುಡ್ಡನ್ನು ದೇವಾಲಯದ ಕಾರ್ಯಕ್ಕೆ ನೀಡಿದ್ದಾರೆ.

ಕಡೂರಿನ ಕೋಟಿ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ಎದುರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು ಕೆಂಪಜ್ಜಿ. ಇವರು ಸಾಲಿಗ್ರಾಮ ಪರಿಸರದ ಅಜ್ಜಿ ಎಂದೇ ಜನ ಪ್ರಸಿದ್ಧರಾಗಿದ್ದರು. ಈಕೆ 80ರ ಹಿರಿಯ ಜೀವ. ಕೆಂಪಜ್ಜಿ ಒಬ್ಬಳು ಅನಾಥೆ. ಇವರಿಗೆ ದೇವಾಲಯವೇ ಮನೆ. ಹಲವು ವರ್ಷಗಳಿಂದ ಸಾಯಿಬಾಬಾ ಮಂದಿರದಲ್ಲಿ ಉಳಿದು ಅಲ್ಲಿಯೇ ಭಿಕ್ಷೆಬೇಡಿ ಹಣ ಗಳಿಸುತ್ತಾರೆ. ಮಂದಿರದ ಪಕ್ಕಕ್ಕೆ ವಿನಾಯಕ ಕೆಫೆ ಮಾಲಿಕ ಭಾಸ್ಕರ್ ಕೆಂಪಜ್ಜಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ನೀಡುತ್ತಾರೆ.

ಭಿಕ್ಷೆ ಬೇಡುವ ಅಜ್ಜಿ ದೇವರಿಗೆ ದೇಣಿಗೆ ನೀಡುವ ಮಹಾತ್ಕಾರ್ಯ ಮಾಡಿದ್ದಾರೆ. ದುಡ್ಡಿದ್ದವರು ಮನಸ್ಸು ಮಾಡಿಕೊಡಬಹುದು.ಆದರೆ ಬೇಡಿ ಬದುಕುವವರು ಹೇಗೆ ನೀಡುತ್ತಾರೆ? ಎಂಬ ಪ್ರಶ್ನೆಗೆ ನೇರಾನೇರ ಉತ್ತರ,ಕೆಂಪಜ್ಜಿ. “ಏನ ಬೇಡಲಿ ನಿನ್ನ ಬಳಿ ಬಂದು?” ಎಂದು ದಾಸರ ಪದವಿದೆ. ಆದರೆ ಅದಕ್ಕೆ ಮಾರ್ಮಿಕ ಅರ್ಥ ಬರುವಂತೆ ಹಳ್ಳಿಯ ಅಜ್ಜಿ ,ಹಣವಂತರಿಗೆ ದಾನದ ಪಾಠ ಹೇಳಿದ್ದಾರೆ .
ತಮ್ಮ ಭಿಕ್ಷೆಯ ಇಪ್ಪತ್ತು ಸಾವಿರ ರೂಗಳನ್ನ ದೇವನಿಗೆ ನೀಡೇಬಿಟ್ಟರು.

ಕೆಂಪಜ್ಜಿಯ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಜ್ಜಿಯ ಜೀವನ ನಿರ್ವಹಣೆಯನ್ನು ದೇವಾಲಯ ಸಮಿತಿ ವಹಿಸಿಕೊಳ್ಳಲಿದೆ ಎಂದು ಶ್ರೀ ಪಾತಾಳ ಅಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

ಪಾತಾಳ ಆಂಜನೇಯಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೆಂಪಜ್ಜಿ ಸಂಪಾದಿಸಿದ 20ಸಾವಿರ ಹಣವನ್ನು ದೇವಾಲಯಕ್ಕೆ ನೀಡಿ ಸಂತೃಪ್ತಿ ಹೊಂದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸುಸ್ತಿದಾರ ಎಲ್ಲೇ ಇರಲಿ, ಸಾಲ ವಸೂಲಿ ಖಂಡಿತ

0

ಸಾಲ ಸುಸ್ತಿದಾರರ ಪ್ರಕರಣಗಳನ್ನು ಸರ್ಕಾರ ಸಕ್ರಿಯವಾಗಿ ನಡೆಸುತ್ತಿರುವುದರಿಂದ ಅವರು ಭಾರತದಲ್ಲಿ ಅಥವಾ ದೇಶದ ಹೊರಗಿನವರೆಂಬುದನ್ನು ಲೆಕ್ಕಿಸದೆ ಬ್ಯಾಂಕ್‌ಗಳಿಂದ ತೆಗೆದುಕೊಂಡು ಹೋಗಿರುವ ಎಲ್ಲಾ ಹಣವನ್ನು ಹಿಂಪಡೆಯಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಬ್ಯಾಂಕ್‌ಗಳ ಎನ್‌ಪಿಎ ಆತಂಕಕ್ಕೆ ಕಾರಣವಾಗಿತ್ತು. ಎನ್‌ಪಿಎಗಳನ್ನು ತಗ್ಗಿಸುವ ಸಲುವಾಗಿ ನಿರ್ದಿಷ್ಟ ‘4ಆರ್’ ತಂತ್ರವು ಗುರುತಿಸುವಿಕೆ, ನಿರ್ಣಯ, ಮರುಬಂಡವಾಳೀಕರಣ ಮತ್ತು ಸುಧಾರಣೆಗಳನ್ನು ತೋರಿಸಲು ಸೂಕ್ತ ಪರಿಹಾರವಾಗಿದೆ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಆಡಳಿತದೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ ಮಾತ್ರವಲ್ಲದೆ ಕೇಂದ್ರ ಪ್ರಾಯೋಜಿತ ಪ್ರತಿಯೊಂದು ಯೋಜನೆಯು ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬ ನಾಗರಿಕರಿಗೂ ಪ್ರಯೋಜನವನ್ನು ನೀಡುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ದೇಶದ ಉಳಿದ ಭಾಗಗಳೊಂದಿಗೆ ಬೆಳವಣಿಗೆ ಅಗತ್ಯ ಎಂದರು. ಅವರು ಎರಡು ದಿನಗಳ ಪ್ರವಾಸದಲ್ಲಿ ಎರಡನೇ ದಿನ ಜಮ್ಮುವಿಗೆ ಭೇಟಿ ನೀಡಿದರು. ಸರ್ಕಾರದ ಯೋಜನೆಗಳ ವಿವಿಧ ಫಲಾನುಭವಿಗಳು ಹಾಕಿರುವ ವಿವಿಧ ಸ್ಟಾಲ್‌ಗಳನ್ನು ಸಹ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೇಂದ್ರಾಡಳಿತ ಪ್ರದೇಶವನ್ನು “ವೇಗದ, ದಕ್ಷ ಮತ್ತು ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದು ಬಗ್ಗೆ ಹಣಕಾಸು ಸಚಿವೆ ಶ್ಲಾಘಿಸಿದರು.
ಕೇಂದ್ರ ಸರ್ಕಾರವು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಮನ್ವಯ ಹೊಂದಿದೆ. ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು.ಆದರೆ ಪ್ರಾರಂಭಿಸಲಾದ ಪ್ರತಿಯೊಂದು ಯೋಜನೆಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ತರಲಾಗುತ್ತದೆ. ಸೇವೆಗೆ ಅರ್ಹರಾದ ಪ್ರತಿಯೊಬ್ಬ ಫಲಾನುಭವಿಗೆ ಪ್ರಯೋಜನವನ್ನು ನೀಡುತ್ತದೆ. “2019 ರ ನಂತರ (ಜಮ್ಮು ಮತ್ತು ಕಾಶ್ಮೀರದ ಮರುಸಂಘಟನೆ ) ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಕ್ಷಿಪ್ರ ಪ್ರಗತಿಯ ಮೂಲಕ ಸಾಗುತ್ತಿರುವುದನ್ನು ನಾವು ನೋಡಿದ್ದೇವೆ. ಬಹಳ ದಿನಗಳಿಂದ ಕಾಯುತ್ತಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ ಮತ್ತು ಸರ್ಕಾರದಿಂದ ಯಾವುದೇ ನೆರವು ಪಡೆಯುವ ಅವಕಾಶವಿಲ್ಲದ ಸಮಾಜದ ವರ್ಗಗಳು ಅದನ್ನು ಪಡೆಯುತ್ತಿವೆ. ಇದು ದೇಶದ ಪ್ರಗತಿಯತ್ತ ಮತ್ತೊಂದು ಹೆಜ್ಜೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಕ್ಕಳೇ ಪಾಠ ಕಲಿಸಿದ ಪ್ರಸಂಗ

0

ಸರ್ಕಾರಿ ಶಾಲೆ ದುರಸ್ತಿಗೆ ಆಗ್ರಹಿಸಿ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಮುಖ್ಯರಸ್ತೆಯಲ್ಲಿ ಮಕ್ಕಳು ಮತ್ತು ಪೋಷಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
50 ವರ್ಷಗಳಿಗೂ ಹಿಂದೆ ನಿರ್ಮಾಣವಾಗಿರುವ ಕಟ್ಟಡ. ಶಿಥಿಲಗೊಂಡು ಹತ್ತಾರು ವರ್ಷಗಳೇ ಕಳೆದಿವೆ. ಕಟ್ಟಡ ಯಾವಾಗ ಬೇಕಾದರೂ ಬೀಳಬಹುದು. ನಿತ್ಯವೂ ಆತಂಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿದೆ. ಶಿಕ್ಷಕರು ಸಹ ಆತಂಕದಲ್ಲೇ ಪಾಠ-ಪ್ರವಚನ ನಡೆಸಬೇಕಿದೆ ಎಂದು ಪೋಷಕರು ದೂರಿದ್ದಾರೆ.
ಶಾಲೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ದುರಸ್ತಿ ಮಾಡಿಕೊಡುವಂತೆ ಐದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆದ ವಾರ ಸುರಿದ ಮಳೆಗೆ ಶಾಲೆ ಆವರಣ ಪೂರ್ತಿ ಜಲಾವೃತಗೊಂಡಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ಪೋಷಕರು ಹಾಗೂ ಮಕ್ಕಳು ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿ ಧರಣಿ ನಡೆಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಭೇಟಿ ನೀಡಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ ‌.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತದಲ್ಲಿ ಹೊಸ ವೈರಸ್ ಪತ್ತೆ!

0

ಭಾರತದಲ್ಲಿ ಮೊದಲ ಬಾರಿಗೆ ಆಸ್ಪೆರ್ ಗಿಲ್ಲಸ್ ಲೆಂಟುಲೂಸ್ ಎಂಬ ಹೊಸ ವೈರಸ್ ಪತ್ತೆಯಾಗಿದೆ. ಔಷಧಗಳಿಗೂ ಬಗ್ಗದ ಹೊಸ ಫಂಗಸ್ ಗೆ ಎರಡು ಬಲಿ ಪಡೆದುಕೊಂಡಿದೆ.

ಈ ಮಾರಣಾಂತಿಕ ಫಂಗಸ್ ನ ಹೆಸರು ಆಸ್ಪೆರ್ ಗಿಲ್ಲಸ್ ಲೆಂಟುಲೂಸ್. ಇದೊಂದು ಅಪರೂಪವಾದ ಫಂಗಸ್ ಆಗಿದೆ. ಇದಕ್ಕೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ.

ತೀವ್ರವಾದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ವ್ಯಕ್ತಿಗಳು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ವ್ಯಕ್ತಿಗಳು ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇವರಿಗೆ ಸಾಮಾನ್ಯವಾಗಿ ಫಂಗಸ್ ಸೋಂಕು ನಿಯಂತ್ರಣಕ್ಕೆ ಆಂಪೊಟೆರಿಸಿನ್ ಬಿ ಮತ್ತು ವೊರಿಕೊನ್ಯಾಜೋಲ್ ಔಷಧಗಳನ್ನು ಸೋಂಕಿತರಿಗೆ ನೀಡಲಾಗುತ್ತಿತ್ತು. ಆದರೂ ಕೂಡ ಫಂಗಸ್ ಸಾಮರ್ಥ್ಯ ಕುಗಲಿಲ್ಲ ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ.

2005ರಲ್ಲಿ ಪತ್ತೆಯಾಗಿ ಇಲ್ಲಿಯವರೆಗೆ ವಿದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ವೈರಸ್ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದೆ. ಸೋಂಕಿಗೆ ಒಳಗಾಗಿರುವ ಇಬ್ಬರು ವ್ಯಕ್ತಿಗಳು ಹಲವು ವಾರಗಳಿಂದ ಉಸಿರಾಟ ಸಮಸ್ಯೆ, ಕೆಮ್ಮು ಮತ್ತು ತೀವ್ರ ಜ್ವರ ಕಾಣಿಸಿಕೊಂಡಿತ್ತು. ಇವುಗಳು ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಿವೀಸ್ ವಿರುದ್ಧದ ಟೆಸ್ಟ್ : ಭಾರತ ತಂಡ ಸಿದ್ಧ

0

ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಕ್ರಿಕೆಟ್ ಸರಣಿಯ ನಾಳೆಯಿಂದ ಆರಂಭವಾಗಲಿದ್ದು. ರಾಹುಲ್ ಬದಲು ಸೂರ್ಯಕುಮಾರ್ ಯಾದವ್ ಗೆ ಸ್ಥಾನ ಕಲ್ಪಿಸಲಾಗಿದೆ.

ಗ್ರೀನ್ ಪಾರ್ಕ್ ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ‌ ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಆರಂಭಿಸಬೇಕಿದ್ದ, ಬ್ಯಾಟ್ಸ್ಮನ್ K.L. ರಾಹುಲ್ ಗಾಯಗೊಂಡಿದ್ದಾರೆ.29 ವರ್ಷದ ರಾಹುಲ್ 40 ಟೆಸ್ಟ್ ಗಳಲ್ಲಿ ಆಡಿದ್ದು, 2321 ರನ್ ಗಳನ್ನು ಗಳಿಸಿದ್ದಾರೆ. ರಾಹುಲ್ ಎಡ ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಅವರು ಎರಡು ಟೆಸ್ಟ್ ಗಳಲ್ಲಿ ಆಡಲು ಲಭ್ಯರಿಲ್ಲ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಸ್ಚೇತನ ತರಬೇತಿಗೆ ಸೇರಿಕೊಳ್ಳಲಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಅವರು ತಂಡಕ್ಕೆ ಸೇರುವ ನಿರೀಕ್ಷೆ ಇದೆ ಎಂದು BCCI ಪ್ರಕಟಣೆಯಲ್ಲಿ ತಿಳಿಸಿದೆ.

ಅವರು ತಂಡದಿಂದ ಹೊರಬಿದ್ದಿರುವುದರಿಂದ ಮಯಂಕ್ ಅಗರ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಶುಭಮನ್ ಗಿಲ್ ಅವರ ಹೆಗಲಿಗೆ ಬೀಳುವುದು ಖಚಿತವಾಗಿದೆ. ಮುಂಬೈನ ಸೂರ್ಯ ಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತ ಅಂಡರ್ 21 ಹಾಕಿ ವಿಶ್ವಕಪ್

0

ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ ಪಂದ್ಯ ನಡೆಯಲಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಬಯೋಬಬಲ್ ವ್ಯವಸ್ಥೆಯ ಬಿ. ಗುಂಪಿನ ಮೊದಲ ಪಂದ್ಯದಲ್ಲಿ ಭಾರತವು ಪ್ರಾನ್ಸ್ ಎದುರಾಗಲಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದಲ್ಲಿ ಆಡಿದ ವಿವೇಕ ನೇತೃತ್ವದ ತಂಡವು ಇಂದು ಆರಂಭವಾಗಲಿರುವ ಜೂನಿಯರ್ ವಿಶ್ವಕಪ್ ಪಂದ್ಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
40 ವರ್ಷಗಳ ಹಿಂದೆ ಆರಂಭವಾದ ಟೂರ್ನಿಯಲ್ಲಿ ಫ್ರಾನ್ಸ್ ತಂಡವು 2013 ರಲ್ಲಿ ರನ್ನರ್ ಆಫ್ ಆಗಿತ್ತು. ಭಾರತದ ಎದುರು ಎರಡು ಬಾರಿ ಚಾಂಪಿಯನ್ ಮತ್ತು ಒಂದು ಬಾರಿ ರನ್ನರ್ಸ್ ಆಗಿದೆ. ಜರ್ಮನಿ ಒಟ್ಟು ಆರು ಬಾರಿ ಪ್ರಶಸ್ತಿ ಜೈಯಿಸಿದೆ. ಈ ಬಾರಿ ಡಿ ಗುಂಪಿನಲ್ಲಿ ಆಡಲಿದೆ. ತಲಾ ಒಂದು ಬಾರಿ ಪ್ರಶಸ್ತಿ ಜಯಿಸಿರುವ ಪಾಕಿಸ್ತಾನ ಮತ್ತು ಅರ್ಜೆಂಟೀನಾ ಕೂಡ ಇದೇ ಗುಂಪಿನಲ್ಲಿವೆ.
ಭಾರತ ತಂಡವು ಹಾಲಿ ಚಾಂಪಿಯನ್ ಆಗಿದ್ದು ಟ್ರೋಫಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಅನುಭವಿ ಗ್ರಾಹಂ ರೀಡ್ ಮುಖ್ಯ ಕೋಚ್ ಮತ್ತು ಕನ್ನಡಿಗರಾದ ಬಿ.ಜೆ. ಕಾರಿಯಪ್ಪ ಕೋಚ್ ಆಗಿರುವ ತಂಡವು ಆತ್ಮವಿಶ್ವಾಸದ ಆಗಸದಲ್ಲಿದೆ. ಸತತ ಮೂರನೇ ಬಾರಿಗೆ ಭಾರತದಲ್ಲಿ ಈ ಟೂರ್ನಿ ಆಯೋಜನೆ ಆಗುತ್ತಿದೆ.
21 ವರ್ಷದೊಳಗಿನವರ 16 ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ಭಾರತ ತಂಡದಲ್ಲಿ 20 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 18 ಆಟಗಾರರು ಫ್ರೆಂಟ್ ಲೈನ್ ನಲ್ಲಿದ್ದಾರೆ. 2 ಬದಲಿ ಆಟಗಾರರಿದ್ದಾರೆ. ಇದು ಪ್ರಶಸ್ತಿ ಉಳಿಸಿಕೊಳ್ಳಲು ಸಾಮರ್ಥ್ಯ ಮತ್ತು ಸಮತೋಲನವಿರುವ ತಂಡವಾಗಿದೆ ಎಂದು ರೀಡ್ ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಲೋಕಜ್ಞಾನ ಒಲವಿನ ಆಟೋ ಚಾಲಕ- ಸುರಂಜನ್ ಕರ್ಮಾಕರ್

0

ಸಾಮಾನ್ಯವಾಗಿ ನಾವು ಕಷ್ಟದಲ್ಲಿರುವವರಿಗೆ ಆಟೋ ಚಾಲಕರು ಸಹಾಯ ಮಾಡಿರುವುದನ್ನ ಕೇಳಿರುತ್ತೇವೆ. ಆದರೆ ಇಲ್ಲೊಬ್ಬರು ಆಟೋ ಹತ್ತುವ ಪ್ರಯಾಣಿಕರಿಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವರು ಸರಿಯಾದ ಉತ್ತರವನ್ನು ನೀಡಿದ್ದರೆ ಪ್ರಯಾಣದ ವೆಚ್ಚ ಎಷ್ಟೇ ಆಗಿದ್ದರೂ, ಹಣ ಸ್ವೀಕರಿಸುವುದಿಲ್ಲ.

ಪಶ್ಚಿಮ ಬಂಗಾಳದ, ಹೌರಾ ಜಿಲ್ಲೆಯ ಲಿಲುವಾದಲ್ಲಿ ಆಟೋ ಚಾಲಕರೊಬ್ಬರು ಜನರ ಸಾಮಾನ್ಯ ಜ್ಞಾನ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ. ‘ಕ್ವಿಜ್ ಮಾಸ್ಟರ್’ ಎಂದೇ ಪ್ರಸಿದ್ಧಿಯಾಗಿರುವ ಈತನ ಹೆಸರು ಸುರಂಜನ್ ಕರ್ಮಾಕರ್.

ತಮ್ಮ ಆಟೋ ಹತ್ತುವ ಪ್ರಯಾಣಿಕರಿಗೆ 15 ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಯಾಣಿಕರು ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಪ್ರಯಾಣದ ವೆಚ್ಚ ಎಷ್ಟೇ ಆಗಿದ್ದರೂ ಅವರಿಂದ ಹಣ ಪಡೆದುಕೊಳ್ಳುವುದಿಲ್ಲ.

ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಇವರ ಕುರಿತು ಸಂಕಲನ್ ಸಹಕಾರ ಎಂಬುವವರು ತಮ್ಮ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
“ನಾನು ಹಾಗೂ ನನ್ನ ಪತ್ನಿ ಆಟೋ ಹತ್ತಿದಾಗ, 15 ಪ್ರಶ್ನೆ ಕೇಳುತ್ತೇನೆ ಎಂದರು. ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೆ ಬಾಡಿಗೆ ಪಡೆಯುವುದಿಲ್ಲ ಎಂದು ಸುರಂಜನ್ ಹೇಳಿದರು. ನಾನು ಮೊದಲಿಗೆ, ಹೆಚ್ಚಿನ ಬಾಡಿಗೆ ಹಣ ಬೇಕಾಗಿದೆ. ಅದಕ್ಕಾಗಿ ಇವರು ಇಂತಹ ಉಪಾಯ ಮಾಡಿದ್ದಾರೆ ಎಂದುಕೊಂಡೆ. ಅದರಲ್ಲೂ ರಾಷ್ಟ್ರ ಗೀತೆ ರಚಿಸಿದವರು ಯಾರು ಎಂದು ಮೊದಲ ಪ್ರಶ್ನೆ ಕೇಳಿದಾಗ ಇನ್ನೂ ಅನುಮಾನ ಹೆಚ್ಚಾಯಿತು. ಆದರೆ, ನಂತರದಲ್ಲಿ ಕೇಳಿದ ಪ್ರಶ್ನೆ ನಿಜವೆನ್ನಿಸಿತು ಎಂದು ಸಂಕಲನ್ ತಿಳಿಸಿದ್ದಾರೆ.
ಬಳಿಕ ಅವರು ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿ ಯಾರು ಎಂದು ಕೇಳಿದರು. ನಾನು ಬಿ.ಸಿ. ರಾಯ್ ಎಂದೆ. ಆದರೆ, ಆ ಉತ್ತರ ತಪ್ಪಾಗಿತ್ತು. ನಂತರ ಅವರು ಕೇಳಿದ ಪ್ರಶ್ನೆ ಕೇಳಿ ಬೆರಗಾದೆ. ವಿಕ್ರಮ ಬೇತಾಳ, ಶ್ರೀದೇವಿ ಜನ್ಮದಿನ, ಜಗತ್ತಿನ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಯಿಂದ ಹಿಡಿದು ಅವರು ಎಲ್ಲಾ ವಿಷಯಗಳನ್ನು ಕುರಿತು ಪ್ರಶ್ನೆ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ. ಬಳಿಕ ಅವರು ನಾನು ಹೇಳಿದ ಜಾಗದಲ್ಲಿ ಬಿಟ್ಟರು. ಸುರಂಜನ್ ಗೆ ಓದುವ ಅಭ್ಯಾಸವಿದೆ. ಹಗಲಿಡೀ ದುಡಿದರೂ ರಾತ್ರಿ ಎರಡು ಗಂಟೆಯವರೆಗೆ ಓದುತ್ತಾರೆ “ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಕಲನ್ ಮಾಹಿತಿ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗಣಿ ಸಂಪತ್ತಿನ ಮೂಲಕ ರಾಜ್ಯ ಸಂಪನ್ಮೂಲ ಗಳಿಸಬೇಕು

0

ನವದೆಹಲಿಯಲ್ಲಿ ಗಣಿ ಮತ್ತು ಖನಿಜಗಳ ಮೇಲಿನ 5ನೇ ರಾಷ್ಟ್ರೀಯ ಸಮಾವೇಶ ನಡೆಯಿತು.
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಗಣಿ ಹರಾಜು ನಿಯಮ ಜಾರಿಗೆ ಬಂದು 7 ವರ್ಷಗಳಾದರೂ ಹಲವು ರಾಜ್ಯಗಳು ಒಂದೇ ಒಂದು ಗಣಿಯನ್ನೂ ಹರಾಜು ಮಾಡಿಲ್ಲ ಎಂದರು. ಹರಾಜನ್ನು ತ್ವರಿತಗೊಳಿಸುವಂತೆ ರಾಜ್ಯಗಳನ್ನು ಒತ್ತಾಯಿಸಿದರು.
ರಾಜ್ಯಗಳು ತಮ್ಮ ಸಂಪನ್ಮೂಲಗಳ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ಸಂಪೂರ್ಣ ಖನಿಜ ನೀತಿಯನನ್ನು ಉದಾರಗೊಳಿಸುವಂತೆ ಕೇಳಿಕೊಂಡರು. ಆದಾಗ್ಯೂ, ಕೆಲವು ಖನಿಜ ಸಮೃದ್ಧವಾಗಿರುವ ರಾಜ್ಯಗಳು ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡುವಲ್ಲಿ ಮತ್ತು ನೈಜ ಸಾಮರ್ಥ್ಯವನ್ನು ಸಾಧಿಸುವಲ್ಲಿ ಹಿಂದುಳಿದಿವೆ ಎಂದು ಸಚಿವರು ಹೇಳಿದರು.
“ನಾನು ಮತ್ತೊಮ್ಮೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ.. ನನ್ನ ಏಕೈಕ ವಿನಂತಿ ಏನೆಂದರೆ ನಿಮ್ಮ ಕ್ಷೇತ್ರವು ಬಹಳಷ್ಟು ಗಣಿಗಳನ್ನು ಹರಾಜಿಗೆ ತರುವುದು. ಬಹಳಷ್ಟು ಸುಧಾರಣೆಗಳನ್ನು ಮಾಡಬೇಕಾಗಿದೆ ಎಂದರು.
ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸಲು ಸರ್ಕಾರವು ಗಣಿಗಾರಿಕೆ ವಿಭಾಗದಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಲು ಬಯಸುತ್ತದೆ.ಅದು ಉದ್ಯಮ ಸ್ನೇಹಿಯಾಗಿದೆ ಮತ್ತು ಹೆಚ್ಚಿನ ಹೂಡಿಕೆಗಳನ್ನು ತರುತ್ತದೆ. “ನಾವು ಈಗಾಗಲೇ ಕೆಲವು ತಿದ್ದುಪಡಿಗಳನ್ನು ತರಲು ಯೋಚಿಸುತ್ತಿದ್ದೇವೆ” ಎಂದು ಜೋಶಿ ಹೇಳಿದರು.
ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಹರಾಜು ಕಾರ್ಯವಿಧಾನದ ಮೂಲಕ ಸಂಯೋಜನೆ ಪರವಾನಗಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಇವುಗಳು ರಾಜಸ್ಥಾನದಲ್ಲಿ ಸುಣ್ಣದ ಕಲ್ಲುಗಳನ್ನು ಮತ್ತು ಮಧ್ಯಪ್ರದೇಶದಲ್ಲಿ 19 ವಿವಿಧ ಖನಿಜ ಬ್ಲಾಕ್ ಗಳನ್ನು ಒಳಗೊಂಡಿದೆ. ಗಣಿ ಸಚಿವಾಲಯವು ಇತ್ತೀಚೆಗೆ ಈ ಬ್ಲಾಕ್‌ಗಳ ಹರಾಜಿಗೆ ಪೂರ್ವಾನುಮತಿ ನೀಡಿತ್ತು. “ಶಕ್ತಿಶಾಲಿ ಖನಿಜ ಸಾಮರ್ಥ್ಯವನ್ನು ತಲುಪಲು ಗಣಿಗಾರಿಕೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ.ಆದರೆ ಗಣಿಗಾರಿಕೆ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಪರಿಣಾಮಗಳ ಬಗ್ಗೆಯೂ ನಾವು ಜಾಗೃತರಾಗಿದ್ದೇವೆ” ಎಂದು ಅವರು ಒತ್ತಿ ಹೇಳಿದರು. ಸುಸ್ಥಿರ ಗಣಿಗಾರಿಕೆಯನ್ನು ಉತ್ತೇಜಿಸಲು, ಸಚಿವಾಲಯವು ಶುದ್ಧ ಮತ್ತು ಸುಸ್ಥಿರ ಗಣಿಗಾರಿಕೆಯ ದಿಕ್ಕಿನಲ್ಲಿ ಶ್ಲಾಘನೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಖನಿಜ ಗಣಿಗಾರರಿಗೆ ಗಣಿಗಳ ಸ್ಟಾರ್ ರೇಟಿಂಗ್‌ಗಳನ್ನು ಪರಿಚಯಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಯುರೋಪ್- ಮಧ್ಯ ಏಷ್ಯಾ ಕೋವಿಡ್ ಗಂಭೀರತೆ

0

ಯುರೋಪ್, ಕೋವಿಡ್‌ನ ದೃಢವಾದ ಹಿಡಿತದಲ್ಲಿ ಉಳಿದಿದೆ ಮತ್ತು ಪ್ರಸ್ತುತ ಪ್ರವೃತ್ತಿಗಳು ಮುಂದುವರಿದರೆ ಈ ಚಳಿಗಾಲದಲ್ಲಿ ಖಂಡದಲ್ಲಿ ಸಾವಿನ ಸಂಖ್ಯೆ 2.2 ಮಿಲಿಯನ್‌ಗೆ ಏರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಯುರೋಪಿನಾದ್ಯಂತ ಮುಂಬರುವ ತಿಂಗಳುಗಳಲ್ಲಿ ಸುಮಾರು 700,000 ಜನರು ಸಾಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೆಲವು ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಪ್ರೇರೇಪಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ” ಪ್ರಸ್ತುತ ಮತ್ತು ಬರುವ ಮಾರ್ಚ್ ನಡುವೆ 53 ದೇಶಗಳ ಪೈಕಿ 49 ರಲ್ಲಿ ನಿಗಾ ಘಟಕಗಳಲ್ಲಿ ಹೆಚ್ಚಿನ ಅಥವಾ ತೀವ್ರ ಒತ್ತಡವನ್ನು ನಿರೀಕ್ಷಿಸುತ್ತಿವೆ ಎಂದಿದೆ.
ಕೋವಿಡ್ -19 ಯುರೋಪ್ ಮತ್ತು ಮಧ್ಯ ಏಷ್ಯಾದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ವಿಶ್ವ ಸಂಸ್ಥೆಯ ಪ್ರಕಾರ, ಆರೋಗ್ಯ ಮಾಪನಗಳು ಮತ್ತು ಮೌಲ್ಯಮಾಪನ ಸಂಸ್ಥೆಯು ಹೆಚ್ಚು-ಸಾಂಕ್ರಾಮಿಕ ಡೆಲ್ಟಾ ರೂಪಾಂತರ, ಸಾಕಷ್ಟು ವ್ಯಾಕ್ಸಿನೇಷನ್ ಕವರೇಜ್ ಮತ್ತು ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರದಂತಹ ಕ್ರಮಗಳನ್ನು ಸರಾಗಗೊಳಿಸುವ ಸಂಯೋಜನೆಯಿಂದ ಕೊವಿಡ್ ನಿಂದ ಉಂಟಾಗುವ ಸಾವನ್ನು ತಪ್ಪಿಸಬಹುದು ಎಂದು ತಿಳಿಸಿದೆ.
ಕೊವಿಡ್ ಕಾರಣದಿಂದ ಸೆಪ್ಟೆಂಬರ್ ಅಂತ್ಯದಲ್ಲಿ ದಿನಕ್ಕೆ 2100 ಸಾವುಗಳು ಸಂಭವಿಸಿವೆ. ಕಳೆದ ವಾರಕ್ಕೆ ಹೋಲಿಸಿದರೆ ಈಗ ಪ್ರತಿ ದಿನಕ್ಕೆ ಸುಮಾರು 4,200 ಸಾವುಗಳು ಹೆಚ್ಚಳವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ಮಾಡಿದೆ.
ಯುರೋಪ್ ಮತ್ತು ಮಧ್ಯ ಏಷ್ಯಾದಾದ್ಯಂತ ಕೋವಿಡ್ -19 ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ಮುಂದೆ ಸವಾಲಿನ ಚಳಿಗಾಲವನ್ನು ಎದುರಿಸುತ್ತೇವೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್‌ನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲೂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ವ್ಯಾಕ್ಸಿನೇಷನ್, ಸಾಮಾಜಿಕ ಅಂತರ, ಮುಖವಾಡಗಳ ಬಳಕೆ ಮತ್ತು ಕೈ ತೊಳೆಯುವಿಕೆಯನ್ನು ಒಳಗೊಂಡಿರುವ “ಲಸಿಕೆ ಪ್ಲಸ್” ವಿಧಾನಕ್ಕೆ ಕರೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.