Tuesday, August 4, 2026
Tuesday, August 4, 2026
Home Blog Page 2054

ನಟಿ ಹೇಮಾ ಮಾಲಿನಿ : 2021ರ ಚಲನಚಿತ್ರ ವಾರ್ಷಿಕ ವ್ಯಕ್ತಿ

0

ಭಾರತೀಯ ಚಿತ್ರರಂಗದ ಖ್ಯಾತ ತಾರೆ ಹೇಮಾ ಮಾಲಿನಿ ಅವರಿಗೆ ‘ಚಲನಚಿತ್ರ ವಾರ್ಷಿಕ ವ್ಯಕ್ತಿ'(2021) ಪುರಸ್ಕಾರ ನೀಡಲಾಗಿದೆ. ಗೋವಾದ ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಗೌರವವನ್ನು ಅರ್ಪಿಸಲಾಯಿತು.

ಭಾರತೀಯ ಚಿತ್ರರಸಿಕರ ಮನಸೂರೆಗೊಂಡ ‘ಡ್ರೀಮ್ ಗರ್ಲ್’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರು. ಮೊದಲು ಅಭಿನಯಿಸಿದ ಹಿಂದಿ ಚಿತ್ರ ‘ಸಪ್ನೊಕಾ ಸೌದಾಗರ್’. ಕೇವಲ ನಟನೆಯೇ ಅಲ್ಲದೆ, ನರ್ತನ, ಬರಹ, ನಿರ್ದೇಶನ, ನಿರ್ಮಾಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ನಟನೆಗೆ ‘ಫಿಲಂಫೇರ್ ಪ್ರಶಸ್ತಿ’, ‘ಫಿಲಂಫೇರ್ ಜೀವಮಾನ ಪ್ರಶಸ್ತಿ’ ನೀಡಲಾಗಿದೆ. ಅಲ್ಲದೆ 2012ರಲ್ಲಿ ‘ಪದ್ಮಶ್ರೀ’ ಯನ್ನು ನೀಡಿ ಗೌರವಿಸಲಾಗಿದೆ.

ಧರ್ಮೇಂದ್ರ ಮತ್ತು ರಾಜೇಶ್ ಖನ್ನಾ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಅನುಪಮ ಖ್ಯಾತಿಗಳಿಸಿದ್ದಾರೆ. ದೇಶ-ವಿದೇಶಗಳಲ್ಲಿ ಅವರು ತಮ್ಮ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಅವರ ನೇತೃತ್ವದಲ್ಲಿ ಮಾಲಿನಿ ನಾಟ್ಯವಿಹಾರ ಕಲಾಕೇಂದ್ರ ನಡೆಯುತ್ತಿದೆ.

ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮತ್ತು ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಶ್ರೀಮತಿ ಹೇಮಮಾಲಿನಿ ಅವರಿಗೆ ಪದಕ, ಪ್ರಶಸ್ತಿ ನೀಡಿ ಪುರಸ್ಕರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರದ ಪಿಂಚಣಿದಾರರಿಗೆ ‘ಸಿಹಿ ಸುದ್ದಿ’

0

ದೇಶದಲ್ಲಿ ಇರುವ ಲಕ್ಷಾಂತರ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ. ಪಿಂಚಣಿ ಪಡೆಯಲು ಜಂಟಿ ಬ್ಯಾಂಕ್ ಖಾತೆ ಕಡ್ಡಾಯವೆಂಬ ನಿಯಮ ವನ್ನು ಸರ್ಕಾರ ಸಡಿಲಗೊಳಿಸಿದೆ.

ನಿವೃತ್ತ ಸರ್ಕಾರಿ ಉದ್ಯೋಗಿಗೆ ತನ್ನ ಸಂಗಾತಿಯ ಜೊತೆಗೆ ಜಂಟಿ ಬ್ಯಾಂಕ್ ಖಾತೆ ಕಡ್ಡಾಯವಲ್ಲ. ಒಂದು ವೇಳೆ ಹಾಗೆ ಜಂಟಿ ಖಾತೆ ತೆರೆಯಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಈ ನಿಯಮವನ್ನು ಸಡಿಲಗೊಳಿಸಬಹುದು. ಕೇಂದ್ರ ಪಿಂಚಣಿ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ವಿಷಯವನ್ನು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತೈಲ ಬೆಲೆ ಇಳಿಕೆ: ಭಾರತ ಪ್ರತಿತಂತ್ರ

0

ದೇಶದಲ್ಲಿ ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಕಚ್ಚಾತೈಲ ಉತ್ಪಾದನೆ ಮಾಡಲು, ಒತ್ತಡ ಹೇರಿದ ದೇಶಗಳಿಗೆ ಭಾರತ ಪೈಪೋಟಿ ನೀಡಲು ತಯಾರಾಗಿದೆ. ಜಾಗತಿಕ ತೈಲ ದರಗಳ ಮೇಲೆ ಒಪೆಕ್ ದೇಶಗಳ ಪ್ರಾಬಲ್ಯ ವನ್ನು ನಿಯಂತ್ರಿಸಲು ಭಾರತ ಪ್ರತ್ಯುತ್ತರ ನೀಡಲು ಮುಂದಾಗಿದೆ.

ಭಾರತವು ತನ್ನ ಸಂಗ್ರಹಾಗಾರ ಗಳಿಂದ 50ಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಮೂಲಕ ಕಚ್ಚಾತೈಲದ ಆಮದು ಕಡಿತಗೊಳಿಸಿ, ಬೆಲೆ ನಿಯಂತ್ರಣಕ್ಕೆ ತರಲಿದೆ.

ಭಾರತವು 3.8 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಪೂರ್ವ ಮತ್ತು ಪಶ್ಚಿಮದ 3 ಕಡೆಗಳಲ್ಲಿ ಸಂಗ್ರಹಿಸಿದೆ. ಇದರಲ್ಲಿ 50ಲಕ್ಷ ಬ್ಯಾರಲ್ ಬಿಡುಗಡೆ ಮಾಡಲಾಗಿದೆ. ಏಳರಿಂದ ಹತ್ತು ದಿನಗಳ ಅಗತ್ಯಗಳಿಗೆ ಸಾಕಾಗಲಿದೆ. ಈ ಕಚ್ಚಾತೈಲವನ್ನು ಎಂ ಆರ್ ಪಿ ಎಲ್ (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಗೆ ಬಿಡುಗಡೆ ಮಾಡಲಾಗುತ್ತದೆ.

ವಿಶಿಷ್ಟ ವೆಂದರೆ ಇದೇ ಪ್ರಥಮ ಬಾರಿಗೆ ಭಾರತದ ಮುಂದಾಳತ್ವದಲ್ಲಿ ಇಂತಹ ಕಾರ್ಯತಂತ್ರ ಸಿದ್ಧಗೊಂಡಿದೆ.

ಅಮೆರಿಕ ,ಜಪಾನ್ ಮತ್ತು ದಕ್ಷಿಣ ಕೊರಿಯಾ ಇತರೆ ದೇಶಗಳು ಭಾರತದೊಂದಿಗೆ ಕೈ ಜೋಡಿಸಿವೆ. ಈ ದೇಶಗಳು ಒಟ್ಟಿಗೆ ತಮ್ಮ ಸಂಗ್ರಹಗಾರ ಗಳಿಂದ ಕಚ್ಚಾತೈಲವನ್ನು ಬಿಡುಗಡೆಗೊಳಿಸಿ ನಿರ್ಧರಿಸಿವೆ.

ಈ ರಾಷ್ಟ್ರಗಳು ತಮ್ಮದೇ ಸಂಗ್ರಹಾಗಾರ ದಲ್ಲಿರುವ ತೈಲವನ್ನು ಬಿಡುಗಡೆಗೊಳಿಸಿದಾಗ, ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ತೈಲ ಉತ್ಪಾದಕ ರಾಷ್ಟ್ರಗಳಿಗೆ ಬೇಡಿಕೆ ಕಡಿಮೆಯಾಗಲಿದೆ. ಇದರಿಂದ ಆದೇಶಗಳು ಬೆಲೆ ಇಳಿಸುವ ಒತ್ತಡಕ್ಕೆ ಸಿಲುಕಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೃಷಿ ಬೆಲೆ ಆಯೋಗ ಶಿಫಾರಸು

0

ರಾಜ್ಯದೆಲ್ಲೆಡೆ ಎರಡು ವಾರದಿಂದೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ರೈತರು ಬೆಳೆದಂತಹ ಬೆಳೆಗಳೆಲ್ಲ ನೀರು ಪಾಲಾಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಪರಿಸ್ಥಿತಿ ಮನಗಂಡು ರಾಜ್ಯ ಕೃಷಿ ಬೆಲೆ ಆಯೋಗವು ಹಲವು ಶಿಫಾರಸ್ಸುಗಳನ್ನು ಮಾಡಿದೆ.

ಎನ್ ಡಿ ಆರ್ ಎಸ್ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಕೃಷಿ ಮತ್ತು ವಾಣಿಜ್ಯ ಬೆಳೆಗಳು/ ಬಹುವಾರ್ಷಿಕ ಬೆಳೆಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೇರಿಗೆ 50,000.ರೂ ಹಾಗೂ 1 ಲಕ್ಷ.ರೂ ಪರಿಹಾರ ಧನ ಒದಗಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಅಡಿ ವಾರ್ಷಿಕವಾಗಿ ನೀಡುವ 6,000.ರೂ ಗಳಿಂದ 10,000.ರೂಗಳವರೆಗೆ ಹೆಚ್ಚಿಸಿ ಎರಡು ಕಂತುಗಳಲ್ಲಿ ಖಾತೆಗೆ ವರ್ಗಾಯಿಸುವಂತೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ .

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಹಾಗೂ ಗ್ರಾಹಕರ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆ ಕುರಿತಂತೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ವರದಿಯ ಶಿಫಾರಸ್ಸುಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಳೆಯಿಂದಾಗಿ ಆರೋಗ್ಯಸಮಸ್ಯೆಗಳು

0

ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ವಾತಾವರಣದಲ್ಲಿನ ಬದಲಾವಣೆಯ ಕಾರಣ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿಮನೆಯಲ್ಲೂ ಶೀತ, ಜ್ವರ, ಕೆಮ್ಮು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇದರಿಂದ ಆಸ್ಪತ್ರೆಗಳಲ್ಲಿ ಸರದಿ ಸಾಲು ಹೆಚ್ಚಾಗುತ್ತಿದೆ.

ವಿಪರೀತ ಮಳೆ, ಚಳಿಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಯಾವುದೇ ಸಣ್ಣ ಸಮಸ್ಯೆಯೂ ದೊಡ್ಡದಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿದವರು ಬೇಗನೆ ಕಾಯಿಲೆಗೆ ಬೀಳುತ್ತಾರೆ. ಇಂಥವರು ಮಳೆಗಾಲದಲ್ಲಿ ಅರಿಶಿನ ಮಿಶ್ರಿತ ಹಾಲು, ಮೆಣಸು, ತುಳಸಿ ರಸದ ಜೊತೆ ಜೇನುತುಪ್ಪ ಶುಂಠಿ ಸೇವಿಸಿದರೆ ಉತ್ತಮ ಎಂದು ಬೆಂಗಳೂರಿನ ಆಯುರ್ವೇದದ ವೈದ್ಯರಾದ ಡಾ. ಮಂಜುನಾಥ್ ಡಿ. ನಾಯಕ್ ತಿಳಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ಸಾಮಾನ್ಯವಾಗಿ ಕಾಡುವ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಇವುಗಳ ಪ್ರಮಾಣ ಹೆಚ್ಚಾಗಿದೆ. ಮಳೆಗಾಲದಲ್ಲಿನ ಕಲುಷಿತ ನೀರಿನಿಂದ ನೆಗಡಿ, ಜ್ವರ, ತಲೆನೋವು, ಸೀನುವಿಕೆ ಇನ್ನು ಮುಂತಾದ ರೋಗಲಕ್ಷಣಗಳು ಕಾಣಿಸುತ್ತದೆ. ಕೆಲವರಿಗೆ ಹೆಪಟೈಟಿಸ್ ‘ಎ’ಕೂಡ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಜನರಿಗೆ ವೈರಲ್ ಜ್ವರ ಯಾವುದು, ಸಾಮಾನ್ಯ ಜ್ವರ ಯಾವುದು ಎಂದು ತಿಳಿಯದೆ ಕಂಗಾಲಾಗುತ್ತಿದ್ದಾರೆ.

ಸಾಮಾನ್ಯವಾಗಿ ಶೀತ, ಜ್ವರ, ಕೆಲವೊಮ್ಮೆ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಂಡು ನ್ಯೂಮೋನಿಯಾ ಸಮಸ್ಯೆಗೆ ತಿರುಗುತ್ತದೆ. ಹಿರಿಯರು ಮತ್ತು ಮಕ್ಕಳು ಈ ಸಮಸ್ಯೆಗಳ ಒಳಗಾಗುವ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾ ಗಿದ್ದಾರೆ.

ಶೀತ ,ಜ್ವರ ಜನರನ್ನು ಬಾಧಿಸದೆ ಇರುವ ಹಾಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಾಗಿ ಬಿಸಿನೀರನ್ನು ಕುಡಿಯಬೇಕು. ಹುಳಿ ಹಣ್ಣು ಸೇವನೆ ಮಾಡಬಾರದು. ಶುಂಠಿ, ಅರಿಶಿನ, ಕಾಳುಮೆಣಸು ಕಷಾಯ ಕುಡಿಯಬೇಕು. ಖನಿಜಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಒಳಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಂತೋಷ್ ಬಾಬು ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ

0

ಚೀನಾ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಕರ್ನಲ್ ಬಿಕ್ಕುಮಳ್ಳ ಸಂತೋಷ್ ಬಾಬು ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾವೀರ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ದೇಶದ ಉನ್ನತ ಸೇನಾಧಿಕಾರಿಗಳ ಉಪಸ್ಥಿತಿಯಲ್ಲಿ ನವದೆಹಲಿಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂತೋಷ್ ಬಾಬು ಅವರ ಪತ್ನಿ ಬಿ. ಸಂತೋಷಿ ಮತ್ತು ತಾಯಿ ಮಂಜುಳಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಂತೋಷ್ ಬಾಬು ಅವರು ಕಳೆದ ವರ್ಷ ಜೂನ್ 15ರಂದು ಪೂರ್ವ ಲಡಾಖ್ ನ ಗಲ್ವಾನ್ ಗಣಿಯಲ್ಲಿ ಚೀನಾ ದಾಳಿಯ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ 16ನೇ ರೆಜಿಮೆಂಟ್ ನ ಕಮಾಂಡಿಂಗ್ ಅಧಿಕಾರಿಯಾಗಿದ್ದರು.
ಪರಮವೀರ ಚಕ್ರದ ನಂತರ ಮಹಾವೀರ ಚಕ್ರವು ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ.
ಗಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ವಿರುದ್ಧ ಯುದ್ಧದಲ್ಲಿ ಹುತಾತ್ಮರಾದ ನುದುರಾಮ್ ಸೊರೆನ್,ಹವಿಲ್ದಾರ್ (ಗನ್ನರ್) ಕೆ.ಪಳನಿ, ನಾಯಕ್ ದೀಪಕ್ ಸಿಂಗ್, ನೈಯಿಬ್ ಸುಬೇದಾರ್, ಮತ್ತು ಸಿಪಾಯಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಳೆ : ಸಂಶೋಧನಾ ಕೇಂದ್ರಕ್ಕೆ ಧಕ್ಕೆ

0

ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ.

ಜಕ್ಕೂರಿನ ಜವಾಹರ ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ನೆಲಮಹಡಿಯ ಪ್ರಯೋಗಾಲಯಗಳಿಗೆ ನೀರು ನುಗ್ಗಿದೆ. ಇದರಿಂದ ಸಂಶೋಧನೆಗೆಂದು ಬಳಸುತ್ತಿದ್ದ ಜೀವಕೋಶಗಳು, ಆಕಾರ ಕೋಶಗಳು, ವೈರಾಣುಗಳ ಮಾದರಿಗಳು ಹಾನಿಗೊಳಗಾಗಿವೆ. ಮಳೆಯಿಂದಾಗಿ ದಶಕಗಳ ಸಂಶೋಧನೆಗೆ ಧಕ್ಕೆಯಾಗಿದೆ.

ಸಂಶೋಧನೆ ಕೇಂದ್ರದ ಅಣು ಜೀವವಿಜ್ಞಾನ ಮತ್ತು ವಂಶವಾಹಿ ವಿಜ್ಞಾನದ ಪ್ರಯೋಗಾಲಯ ಸೇರಿದಂತೆ ಅನೇಕ ಪ್ರಯೋಗಗಳಿಗೆ ನಾಲ್ಕೈದು ಅಡಿಗಳಷ್ಟು ಮಳೆ ನೀರು ನುಗ್ಗಿದೆ. ಅತ್ಯಾಧುನಿಕ ಸೂಕ್ಷ್ಮ ದರ್ಶಕಗಳು, ಮೈನಸ್ 80 ಸೆಂಟಿಗ್ರೇಡ್ ವರೆಗೂ ಕಾಯ್ದುಕೊಳ್ಳುವ ಶೀತಲೀಕರಣ ಯಂತ್ರಗಳು ಸೇರಿದಂತೆ ಹಲವು ಉಪಕರಣಗಳು ಹಾಳಾಗಿವೆ.

20 ವರ್ಷ ಹಿಂದಿನಿಂದಲೂ ಸಂಗ್ರಹಿಸಿಟ್ಟಿದ್ದ ಜೀವಕೋಶಗಳ ಮಾದರಿಗಳು ಮಳೆಯಿಂದಾಗಿ ಅಪಾರ ನಷ್ಟಕ್ಕಿಡಾಗಿದೆ. ನಷ್ಟದ ಪ್ರಮಾಣವನ್ನು ಮತ್ತಷ್ಟು ಲೆಕ್ಕ ಹಾಕಬೇಕಿದೆ ಎಂದು ಜೆ ಎನ್ ಸಿ ಎ ಎಸ್ ಆರ್ ಅಧ್ಯಕ್ಷ ಪ್ರೊ. ಗಿರಿಧರ್.ಯು.ಕುಲಕರ್ಣಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸೇನಾ ಕಾರ್ಯನಿರತರಿಗೆ ಉಕ್ಕಿನ ತಂಗುದಾಣ

0

ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡು ಎತ್ತರದ, ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ ಸಿಬ್ಬಂದಿಯು, ಜೀವನ ಗುಣಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಉಕ್ಕಿನಿಂದ ನಿರ್ಮಿಸಿದ ತಂಗುದಾಣ ಪಡೆಯಲಿದ್ದಾರೆ.
ಉಕ್ಕಿನ ಹಾಳೆಗಳನ್ನು ಬಳಸಿ ನಿರ್ಮಿಸಲಾದ ಶೌಚಾಲಯ, ಅಡುಗೆ ಕೋಣೆ, ವಿರಾಮ ಕೋಣೆಯ ಮಾದರಿಗಳನ್ನು ಎಸ್ ಡಿಎಲ್ ಗಳಲ್ಲಿ ಅಳವಡಿಸಲಾಗುತ್ತದೆ. ಮೊದಲ ಹಂತದ ಜಾರಿ ನಂತರ ಇನ್ನೂ ಹೆಚ್ಚಿನ ಎಸ್ ಬಿಎಂ ಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂಬ ಮಾಹಿತಿ ದೊರೆತಿದೆ.
ಗಡಿಯ ಮುಂಚೂಣಿ ರಕ್ಷಣಾ ನೆಲೆ ಸಿಬ್ಬಂದಿಗಳ ಜೀವನ ಗುಣಮಟ್ಟ ಉತ್ತಮಗೊಳಿಸಲು ಕ್ರಮಕೈಗೊಳ್ಳಲಾಗಿದೆ.
ಬಿಎಸ್ಎಫ್ ಸಿಬ್ಬಂದಿ ಸ್ವತಂತ್ರವಾಗಿ ಅಥವಾ ಸೇನೆ ಜೊತೆಗೂಡಿ ಕಾರ್ಯ ನಿರ್ವಹಿಸಲಿದ್ದಾರೆ. ಗಡಿ ನಿಯಂತ್ರಣ ರೇಖೆಯ ವ್ಯಾಪ್ತಿ ಒಟ್ಟು 772 ಕಿ.ಮೀ. ಆಗಿದ್ದು, ಈ ಪೈಕಿ ಸುಮಾರು 430 ಕಿ.ಮೀ. ಉದ್ದದ ಅಂತರವು ಜಮ್ಮು ಮತ್ತು ಕಾಶ್ಮೀರದ ವ್ಯಾಪ್ತಿಯಲ್ಲಿದೆ.
ಬಿಎಸ್ಎಫ್ ನ ಅಧಿಕಾರಿ ಮೂಲಗಳ ಪ್ರಕಾರ, ಗಡಿನಿಯಂತ್ರಣ ರೇಖೆಯುದ್ದಕ್ಕೂ ಇರುವ ಇಂತಹ ಸುಮಾರು 115 ಎಫ್ ಡಿಎಲ್ ಗಳ ತಂಗುದಾಣಗಳನ್ನು ಉಕ್ಕಿನಿಂದ ನಿರ್ಮಿಸಿದ ವಿಶಾಲ ತಂಗುದಾಣಗಳಾಗಿ 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಇದೆ.
ಪ್ರಧಾನ ನಿರ್ದೇಶಕರು ಈ ಬಗ್ಗೆ ಮರುಬಳಕೆ ಇಂಧನ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ಈ ಎಫ್ ಡಿಎಲ್ ಗಳಿಗೆ ಸೋಲಾರ್ ಆಧಾರಿತ ವಿದ್ಯುತ್ ಯೋಜನೆ ಮಂಜೂರಾತಿ ಕೋರಿದ್ದು, ಇದಕ್ಕೆ ಔಪಚಾರಿಕ ಸಮ್ಮತಿ ದೊರೆತಿದೆ. ಈ ತಂಗುದಾಣಗಳಲ್ಲಿ ಸದ್ಯ ಅಡುಗೆ ಇನ್ನಿತರ ಉದ್ದೇಶಗಳಿಗೆ ಸೀಮೆಎಣ್ಣೆ ಮತ್ತು ಡೀಸೆಲ್ ಅವಲಂಬಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

“ಹಾದಿಗಲ್ಲು” : ಸಹೃದಯ ಸಂವಾದ

0

ಯುವ ಸಮುದಾಯದವರಲ್ಲಿ ಪ್ರೇರಣೆ ತುಂಬಬಲ್ಲ ಸ್ಫೂರ್ತಿಯುತ ಅಂಶಗಳ ಶಕ್ತಿಯ ಸಾಧನವಾಗಿ ಕೆ.ಎ.ದಯಾನಂದ ಅವರ “ಹಾದಿಗಲ್ಲು” ಕೃತಿ ಮೂಡಿಬಂದಿದೆ ಎಂದು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಮಾನ್ಯ ಕೆ.ಎ.ದಯಾನಂದ ಅವರ ಆತ್ಮವೃತ್ತಾಂಶ “ಹಾದಿಗಲ್ಲು” ಪುಸ್ತಕದ 7ನೇ ಮುದ್ರಣ ಲೋಕಾರ್ಪಣೆ ಹಾಗೂ ಕೃತಿ ಕುರಿತು “ಸಮಾನ ಮನಸ್ಕರೊಂದಿಗೆ ಸಂವಾದ”ಕಾರ್ಯಕ್ರಮ ನಡೆಯಿತು.
ಬಡ ಕುಟುಂಬದಲ್ಲಿ ಜನಿಸಿ ಕಷ್ಟದಲ್ಲಿಯೇ ಜೀವನ ನಡೆಸುವ ಜತೆಯಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುವುದು ಸವಾಲು. ಆದರೆ ಇವರು ನಡೆದು ಬಂದ ಹಾದಿಯು ಅನೇಕ ಸವಾಲುಗಳನ್ನು ದಾಟಿದ ಸಾಹಸಯಾತ್ರೆಯ ಸಾಧ್ಯತೆಯನ್ನು ತೆರೆದಿಡುತ್ತದೆ. ಏನೇ ಅಡೆತಡೆ ಬಂದರೂ ಅದನ್ನೆಲ್ಲಾ ಮೀರಿ ಸಾಧಿಸುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಎಲ್ಲರೂ ಕೃತಿಯನ್ನು ಓದುವ ಮೂಲಕ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯ ವ್ಯಕ್ತಪಡಿಸಿದರು.


ಕೆಲವು ವ್ಯಕ್ತಿಗಳ ಆತ್ಮಕತೆಯೂ ಹುಟ್ಟಿದಾಗಲೇ ಯಶಸ್ಸು ದೊರೆಯುವುದು ನಿಶ್ಚಿತ ಎಂಬಂತೆ ವರ್ಣಿಸುವ, ವೈಭವೀಕರಿಸುವ ರೀತಿಯಲ್ಲಿರುತ್ತದೆ. ಆದರೆ ಕೆ.ಎ. ದಯಾನಂದ ಅವರ ಹಾದಿಗಲ್ಲು ಕೃತಿಯಲ್ಲಿ ಬಾಲ್ಯ, ವಿದ್ಯಾರ್ಥಿ ಹಂತದಿಂದ ಹಿಡಿದು ಜೀವನದಲ್ಲಿ ಹಂತಹಂತವಾಗಿ ನೋವಿನ ಸರಮಾಲೆ ಎದುರಿಸಿ ಗೆಲುವಿನ ದಾರಿಗೆ ಬರುವ ಕಥನವನ್ನು ಕಾಣಬಹುದಾಗಿದೆ. ಈ ಪುಸ್ತಕವು ಪ್ರಾಮಾಣಿಕತೆ, ಕ್ರಿಯಾತ್ಮಕ ಆಲೋಚನೆಗಳ ಬಗ್ಗೆ ಪ್ರೇರಣೆ ಒದಗಿಸುತ್ತದೆ ಎಂದರು.
ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ.ದಯಾನಂದ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನನ್ನ ವೃತ್ತಿಯ ಆರಂಭದ ಅವಧಿಯಲ್ಲೇ ಮಾಡುತ್ತಿದ್ದೆ. ನಂತರ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದೆ. ಯುವಜನರಿಗೆ ಆತ್ಮಸ್ಥೈರ್ಯ ತುಂಬಲು ಸ್ಫೂರ್ತಿಯುತ ಅಂಶಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ನಡೆಸಿದೆ. ಕೊರೊನಾ ಲಾಕ್‌ಡೌನ್ ಆರಂಭದಲ್ಲಿ ಪುಸ್ತಕ ಪೂರ್ಣಗೊಳಿಸಿದೆ. ಇದೀಗ 7ನೇ ಮುದ್ರಣ ಕಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ, ರಘುಸಮರ್ಥ ನಾಡಿಗ್, ಅಭಿ, ರೈತ ದುರ್ಗಪ್ಪ ಅಂಗಡಿ, ಸಮನ್ವಯ ಟ್ರಸ್ಟ್ ಸ್ವಯಂಸೇವಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬೂಸ್ಟರ್ ಡೋಸ್ ಬೇಕೆ,ಬೇಡವೆ?

0

ಕೊರೊನಾ ವೈರಸ್ ವಿರುದ್ಧ ದ ಲಸಿಕೆ 2 ಡೋಸ್ ಪಡೆದುಕೊಂಡವರಿಗೆ ಬೂಸ್ಟರ್ ಡೋಸ್ ನಿಂದ ಹೆಚ್ಚಿನ ರಕ್ಷಣೆ ಸಿಗುತ್ತದೆ. ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ಭಾರತದಲ್ಲಿ ಲಸಿಕೆ ನೀಡಿಕೆ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಭಾರತದ ಜನರಿಗೆ ಮಾತ್ರವಲ್ಲದೆ, ಜಗತ್ತಿನಾದ್ಯಂತ ಲಸಿಕೆಯು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಲು ಭಾರತ ಬಯಸಿದೆ ಎಂದು ಭಾರ್ಗವ ಅವರು ಹೇಳಿದ್ದಾರೆ.

ಸದ್ಯಕ್ಕೆ ಬೇಕಾದಷ್ಟು ಲಸಿಕೆಗಳು ಸಂಗ್ರಹವಿದೆ. ಎಲ್ಲಾ ವಯಸ್ಕರಿಗೂ 2 ಡೋಸ್ ಲಸಿಕೆ ಹಾಕಿಸುವ ಜವಾಬ್ದಾರಿ ಸರಕಾರದ್ದಾಗಿದೆ. ಪರಿಣತರ ಒತ್ತಾಯದ ಮೇರೆಗೆ ಬೂಸ್ಟರ್ ಡೋಸ್ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಅರ್ಹತೆ ಇರುವ ಶೇ.82 ರಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ. ಎರಡನೇದು ಡೋಸ್ ಶೇ.43ರಷ್ಟು ಜನ ಪಡೆದಿದ್ದಾರೆ. ಒಟ್ಟು 116.87 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ಹಾಕಲಾಗಿದೆ. 12 ಕೋಟಿ ಜನರು ಲಸಿಕೆಯ ಎರಡನೇ ಡೋಸ್ ನಿಗದಿತ ಅವಧಿಯೊಳಗೆ ಹಾಕಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.