Tuesday, August 4, 2026
Tuesday, August 4, 2026
Home Blog Page 2055

ಸತತ ಪ್ರಯತ್ನದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ

0

ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಶ್ರೀಮಂತರು, ಬಡವರು ಎಂಬ ಭೇದವಿಲ್ಲ. ಆತ್ಮವಿಶ್ವಾಸ, ಛಲ ಮತ್ತು ನಿರಂತರ ಪರಿಶ್ರಮ ಇದ್ದರೆ ಸಾಧನೆ ನಿಮ್ಮನ್ನು ಹುಡುಕಿ ಬರುತ್ತದೆ ಎಂದು ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ. ದಯಾನಂದ್ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭಾಂಗಣದಲ್ಲಿ ವಿ ಆರ್ ಒನ್ ಟೀಮ್ ಮತ್ತು ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಅಭ್ಯರ್ಥಿಗಳಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.


ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇದ್ದರೆ ಸಾಲದು, ಬದಲಾಗಿ ಗುರಿಮುಟ್ಟಲು ಸತತ ಪ್ರಯತ್ನ ವಿದ್ದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು. ಪ್ರತಿಯೊಬ್ಬರಲ್ಲಿಯೂ ವೈಶಿಷ್ಟ್ಯ ಇದ್ದೇ ಇರುತ್ತದೆ. ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು, ಅನುಸರಿಸುವುದು ಸರಿಯಲ್ಲ. ನಿಮ್ಮದೇ ಆದ ವ್ಯಕ್ತಿತ್ವದೊಂದಿಗೆ, ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಅಧ್ಯಯನ ನಡೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಸ್ಪೂರ್ತಿ ಆಗುವಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ದಯಾನಂದ್ ರವರು ಸಲಹೆ ನೀಡಿದರು.
ಕೆ.ಎ.ದಯಾನಂದ್ ಅವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಹ್ಯಾದ್ರಿ ಉತ್ಸವ ನಡೆಸಿದ್ದರು. ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ದಯಾನಂದ ಅವರ ಜೀವನವೇ ಎಲ್ಲರಿಗೂ ಸ್ಪೂರ್ತಿ ಎಂದು ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಗೋಪಿನಾಥ್, ಬಿ. ಆರ್.ಸಂತೋಷ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಟಿ.ಆರ್. ಅಶ್ವತ್ ನಾರಾಯಣ ಶೆಟ್ಟಿ, ವಿ ಆರ್ ಒನ್ ಟೀಮ್ ನ ಜಗದೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಡಿಕೆಗೆ ಭವಿಷ್ಯವಿದೆ- ಆರಗ ಜ್ಞಾನೆಂದ್ರ

0

ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಕೃಷಿಕರ ಸೌಹಾರ್ದ ಸಹಕಾರಿಯ ವಾರ್ಷಿಕ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಮಾನ್ಯ ಗೃಹಸಚಿವ ಆರಗ ಜ್ಞಾನೇಂದ್ರ ಅವರು ವಹಿಸಿದ್ದರು.

ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಹಿತ ಕಾಪಾಡುತ್ತಿದೆ ವೈಜ್ಞಾನಿಕವಾಗಿ ಅಡಿಕೆ ಆರೋಗ್ಯವೃದ್ಧಿಗೆ ಸಹಾಯಕ ಎಂದು ಗೃಹಸಚಿವರ ಜ್ಞಾನೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಡಿಕೆಗೆ ಇನ್ನಷ್ಟು ಉತ್ತಮ ಭವಿಷ್ಯ ಇದೆ. ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಕೆಲವು ತಿಂಗಳುಗಳಿಂದ ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರಕಿದೆ. ಮಲೆನಾಡು ಭಾಗದ ಜನರ ಬದುಕು ಅಡಿಕೆ ಧಾರಣೆ ಯಿಂದ ಸುಧಾರಣೆ ಕಂಡಿದೆ. ಅಕಾಲಿಕ ಮಳೆಯಿಂದಾಗಿ ಅಡಿಕೆ ಫಸಲು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಹೇಳಿದರು.

ಅಡಿಕೆಗೊನೆ ತೆಗೆಯುವ ಫೈಬರ್ ದೋಟಿಗೆ ಸಹಾಯಧನ ನೀಡಲಾಗುತ್ತದೆ. ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ 300 ಕೋಟಿ ಸಹಾಯಧನ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಮಳೆಯಿಂದ ಆಗಿರುವ ನಷ್ಟಕ್ಕೆ ಪರಿಹಾರ ದೊರಕಿಸಲು ಹೆಚ್ಚಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೌಹಾರ್ದ ಸಹಕಾರಿ ನಿರ್ದೇಶಕರು, ಸಿಇಓ ಕವಿತಾ ಜೋಯಿಸ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಶ್ವಮಾನವತೆಯನ್ನು ಸಾರಿದ ಕನಕದಾಸರು

0

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಕನಕದಾಸರ 534ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
“ಕನಕದಾಸರು ಜಾತ್ಯಾತೀತ ಮನೋಭಾವ ಬಿತ್ತುವ ಮೂಲಕ ವಿಶ್ವ ಮಾನವತೆಯನ್ನು ಸಾರಿದ ಮಹನೀಯರಾಗಿದ್ದಾರೆ” ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ದಾಸ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ದಾಸ ಶ್ರೇಷ್ಠರು ಎಂಬ ಪದಕ್ಕೆ ಅನ್ವರ್ಥವಾಗಿದ್ದ ಕನಕದಾಸರು ಎಲ್ಲಾ ವರ್ಗಗಳ ಜನರಿಗೂ ಆದರ್ಶಪ್ರಾಯ. ಸಮಾಜದ ಮೇಲ್ವರ್ಗ ಹಾಗೂ ತಳಸಮುದಾಯಗಳ ವೈರುಧ್ಯಗಳನ್ನು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿರುವ ಕನಕದಾಸರ ಚಿಂತನೆಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಉಪವಿಭಾಗಾಧಿಕಾರಿ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಕುರುಬ ಸಮಾಜದ ಮುಖಂಡರಾದ ನವುಲೆ ಈಶ್ವರಪ್ಪ, ಕೆ. ರಂಗನಾಥ್, ವೇಣುಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕರ್ನಾಟಕದ ಕೈತಪ್ಪಿದ T-20 ಕಿರೀಟ

0

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟಿ – 20 ಟೂರ್ನಿಯ ಫೈನಲ್ ಪಂದ್ಯವು ತಮಿಳುನಾಡು ಮತ್ತು ಕರ್ನಾಟಕ ತಂಡಗಳ ನಡುವೆ ಪಂದ್ಯ ನಡೆಯಿತು. ಕೊನೆಯ ಎಸೆತದಲ್ಲಿ ಆಟದ ತಿರುವನ್ನೇ ಬದಲಾಯಿಸಿದ ತಮಿಳುನಾಡು ತಂಡ ಕರ್ನಾಟಕವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗಳಿಸಿಕೊಂಡಿತು.

ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಬ್ಯಾಟಿಂಗ್ ಆರಂಭಿಸಿ ಕರುಣ್ ನಾಯರ್ ,,(18). ಬಿ.ಆರ್ .ಶರತ್ (16,). ಅಭಿನವ್ ಮನೋಹರ್ (46). ಪ್ರವೀಣ್ ದುಬೆ (33). ಎಸ್ ಸುಚಿತ್ (18). ಇವರೆಲ್ಲ ಸೇರಿ ಕರ್ನಾಟಕದ ಇನ್ನಿಂಗ್ಸ್ 7 ವಿಕೆಟ್ ಪತನಕ್ಕೆ 151 ರನ್ ಕಟ್ಟಿಕೊಟ್ಟರು. ಸ್ಪಿನ್ನರ್ ಗಳ ಎದುರು ಬ್ಯಾಟಿಂಗ್ ಆಡಿದ ಕರ್ನಾಟಕ ತಂಡವು ವೈಫಲ್ಯ ಅನುಭವಿಸಿತು.

152 ರನ್ ಗಳ ಗೆಲುವಿನ ಗುರಿಯನ್ನು ಇಟ್ಟುಕೊಂಡು ಆಡಿದ ತಮಿಳುನಾಡು ತಂಡದ ಪರ ಆರಂಭಿಕ ಜೋಡಿ ನಿಶಾಂತ್ (25) ಮತ್ತು ನಾರಾಯಣ್ ಜಗದೀಶನ್ (41) ಉತ್ತಮ ಆಟವಾಡಿದರು. ಆದರೆ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ತಂಡ ಒತ್ತಡಕ್ಕೆ ಒಳಗಾಗಿತ್ತು.

ವಿಜಯ್ ಶಂಕರ್, ನಾರಾಯಣ ಜಗದೀಶನ, ಮತ್ತು ಸಂಜಯ್ ಯಾದವ್ ಅವರ ವಿಕೆಟ್ಗಳು ಉರುಳಿದಾಗ ತಂಡಕ್ಕೆ 17 ಎಸೆತಗಳಲ್ಲಿ 36 ರನ್ ಬೇಕಾಗಿತ್ತು. ಈ ಸಂದರ್ಭದಲ್ಲಿ ಮಹಮ್ಮದ್ ಅವರ ನೆರವಿನೊಂದಿಗೆ ಶಾರುಖ್ ಖಾನ್ ದಿಟ್ಟ ಆಟ ಆಡಿದರು.7 ಎಸೆತ ಬಾಕಿ ಇರುವಾಗ ಮಹಮ್ಮದ್ ಕೂಡ ಔಟಾದರು.
ಆದರೆ ಶಾರುಕ್ ಖಾನ್ ಎದೆಗುಂದಲಿಲ್ಲ. ಪ್ರತೀಕ್ ಜೈನ್ ಹಾಕಿದ 19 ನೇಯ ಓವರ್ ನಲ್ಲಿ ಗೆಲುವಿಗೆ 16 ರನ್ ಬೇಕಾಗಿತ್ತು. ಬೌಂಡರಿ ಹಾಗೂ ಸ್ಕ್ವೇರ್ ಲೆಗ್ ಮೇಲಿಂದ ಸಿಕ್ಸರ್ ಸಿಡಿಸಿ ಶಾರುಖ್ ಖಾನ್ ಸಂಭ್ರಮಿಸಿದರು. ಹಾಗೆಯೇ ತಂಡದ ಮೊತ್ತ 150 ರನ್ ದಾಟಲು ನೆರವಾದರು. ಟಿ – 20 ಪಂದ್ಯಗಳಲ್ಲಿ ಗೆಲುವು ಯಾರ ಪರ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕೊನೆಯ ಎಸೆತ ಇದ್ದಾಗ ಗೆಲುವು ಅಸಾಧ್ಯ ಅಂದುಕೊಳ್ಳುತ್ತಿದ್ದಂತೆಯೇ ಸಿಕ್ಸರ್ ಹೊಡೆದು ಪಂದ್ಯದ ಗತಿಯನ್ನೇ ಬದಲಾಯಿಸುತ್ತಾರೆ. ಅದಕ್ಕೆ ಈ ಪಂದ್ಯವೇ ರೋಚಕ ಸಾಕ್ಷಿ.

ಇಲ್ಲಿ ಆದದ್ದು ಹೀಗೆ ಕೊನೆಯ ಎಸೆತ 5 ರನ್ ಬೇಕಿತ್ತು. ಶಾರುಖಾನ್ ಸಿಕ್ಸರ್ ಎತ್ತಿ ಕರ್ನಾಟಕದ ಜಯವನ್ನು ಕಸಿದುಕೊಂಡರು.

ತಮಿಳುನಾಡು ತಂಡ ಸತತವಾಗಿ ಈ ಟ್ರೋಫಿಯನ್ನು ಎರಡನೇ ಬಾರಿಗೆ ಗೆದ್ದುಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಂಕ್ರಾಮಿಕ ರೋಗ ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ

0

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಮನವಿ ಮಾಡಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ. ವಾಂತಿ ಬೇಧಿ ಉಂಟಾದಾಗ ಡಿ ಹೈಡ್ರೇಷನ್ ಆಗುವುದರಿಂದ ತಕ್ಷಣ ಚಿಕಿತ್ಸೆಯನ್ನು ಮನೆಯಲ್ಲಿಯೇ ಪ್ರಾರಂಭಿಸಬೇಕು. ಒಂದು ಲೀಟಲ್ ಶುದ್ಧವಾದ ನೀರಿಗೆ ಒಂದು ಚಮಚ ಉಪ್ಪು ಮತ್ತು 8 ಚಮಚ ಸಕ್ಕರೆ ದ್ರಾವಣ ತಯಾರಿಸಿ ಆಸ್ಪತ್ರೆಗೆ ಹೋಗುವವರಿಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು ಎಂದು ತಿಳಿಸಿದರು.
ನಗರ ಪ್ರದೇಶ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರಿಂದ ಪ್ರತಿ ಮನೆಗೆ ಭೇಟಿ ನೀಡಿ ಕ್ರಿಮಿ, ಜ್ವರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾವಹಿಸಲು ಎಲ್ಲಾ ಆರೋಗ್ಯ ಕಾರ್ಯಕರ್ತರ ವಾಟ್ಸಪ್ ಗ್ರೂಪ್ ಗಳನ್ನು ರಚಿಸಲಾಗಿದೆ. ಪ್ರತಿ ದಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ರಾಪಿಡ್ ರೆಸ್ಪಾನ್ಸ್ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಇದುವರೆಗೆ ಡೆಂಗ್ಯೂ 381, ಚಿಕನ್ ಗುನ್ಯಾ 169, ಮಲೇರಿಯಾ 2, ಇಲಿಜ್ವರ 22, ಮತ್ತು ಮಂಗನಕಾಯಿಲೆ 13 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶೀಘ್ರ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವೆ – ಸಿಎಂ

0

ಮನೆ ಕಳೆದುಕೊಂಡವರಿಗೆ ಬೇರೆ ಜಾಗ ಗುರುತಿಸಿ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹೊಸಕೊಟೆ ಮತ್ತು ಕೋಲಾರದಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
“ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿಗಳು ಹಾಗೂ ಇಲಾಖೆ ಸಚಿವರು ಪ್ರವಾಸ ಮಾಡಬಹುದು ಎಂದು ಚುನಾವಣಾ ಆಯೋಗವು ತಿಳಿಸಿದೆ. ಉಸ್ತುವಾರಿ ಸಚಿವರಿಗೆ ಸಂಚರಿಸಲು ಅವಕಾಶವಿಲ್ಲ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುವ ಕಡೆ ನಾನೇ ಹೋಗುತ್ತಿದ್ದೇನೆ ಎಂದರು.”
ಅಕಾಲಿಕ ಮಳೆಯಿಂದಾಗಿ ಎಷ್ಟು ನಷ್ಟವಾಗಿದೆ ಎಂಬುದು ಸಮೀಕ್ಷೆ ಪೂರ್ಣವಾದ ಬಳಿಕ ಸ್ಪಷ್ಟ ವರದಿ ಸಿಗಲಿದೆ ಎಂದರು.
ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಮಳೆಯಿಂದ ಜನರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರಿ ಆಸ್ಪತ್ರೆ ಹಿಂಭಾಗದ ಜಾಗದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈ ಬಗ್ಗೆ ನಿರಂತರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಅವಶ್ಯಕತೆ ಇರುವ ರೇಷನ್, ತಾತ್ಕಾಲಿಕ ಕಾಳಜಿ ಕೇಂದ್ರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದ್ದೆನೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವೀರ ಚಕ್ರ ಸನ್ಮಾನಿತ,ಕ್ಯಾಪ್ಟನ್ ಅಭಿನಂದನ್

0

ನವದೆಹಲಿಯಲ್ಲಿ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪುರಸ್ಕಾರ ನೀಡಲಾಯಿತು.
ಮಾನ್ಯ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ ಅವರು ಕ್ಯಾ. ಅಭಿನಂದನ್ ಅವರಿಗೆ ಸುಂದರ ಸಮಾರಂಭದಲ್ಲಿ ಈ ಗೌರವ ಅರ್ಪಿಸಿದರು.

2019ರಲ್ಲಿ ವೈಮಾನಿಕ ದಾಳಿ ಮುಖಾಂತರ ಅಭಿನಂದನ್ ಅವರು ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿದ್ದರು. ಈ ಸಾಹಸದ ಪ್ರತೀಕವಾಗಿ ಅವರಿಗೆ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ವೀರ ಚಕ್ರ’ ನೀಡಲಾಗಿದೆ.

ಅಭಿನಂದನೆ ಅವರು ವೈಮಾನಿಕ ದಾಳಿ ನಂತರದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ವಶದಲ್ಲಿದ್ದರು. ಈ ಸಮಯದಲ್ಲಿ ಅಭಿನಂದನ್ ಅವರು ಕೆಚ್ಚೆದೆಯಿಂದ ಅಸಾಧಾರಣ ಧೈರ್ಯ ಮತ್ತು ಶೌರ್ಯ ಪ್ರದರ್ಶಿಸಿದ್ದರು. ಜೀವದ ಉಳಿವನ್ನು ಕಡೆಗಣಿಸಿ, ತಮ್ಮ ಕರ್ತವ್ಯಪ್ರಜ್ಞೆಯನ್ನು ತೋರಿಸಿದ್ದರು ಎಂದು ರಾಷ್ಟ್ರಪತಿ ಭವನ ಟ್ವೀಟ್ ನಲ್ಲಿ ತಿಳಿಸಲಾಗಿದೆ.

ಈ ಸಮಾರಂಭ ಮಾನ್ಯ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಸಾಪ ನೂತನ ಅಧ್ಯಕ್ಷ ಡಾ. ಮಹೇಶ್ ಜೋಶಿ

0

ಕನ್ನಡ ಸಾಹಿತ್ಯ ಪರಿಷತ್ತಿನ 26ನೇ ರಾಜ್ಯ ಅಧ್ಯಕ್ಷರಾಗಿ ನಾಡೋಜ ಡಾ. ಮಹೇಶ್ ಜೋಶಿ ಅವರು ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಬಾಕಿ ಇದೆ .

ನಾಡೋಜ ಡಾ. ಮಹೇಶ್ ಜೋಶಿ ಅವರು ನಾನು ರಾಜಕೀಯವಾಗಿ ತಟಸ್ಥ; ಯಾವುದೇ ಪಕ್ಷದ ಸದಸ್ಯನಲ್ಲ, ಗುರುತಿಸಿಕೊಂಡಿಲ್ಲ. ನಾನು ಕನ್ನಡ ಪಂಥದವನು. ನಾನು ಯಾವುದೇ ಪಕ್ಷದ ಬ್ಯಾನರ್ ಹಿಡಿದು ಮತ ಕೇಳಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಕೋಟಿಗೇರಿಸುವುದು ಮತ್ತು ಶುಲ್ಕವನ್ನು 500 ರೂ. ನಿಂದ 250 ರೂ ಗೆ ಇಳಿಸುವುದು , ಆಡಳಿತ ಮತ್ತು ಹಣಕಾಸಿನ ವ್ಯವಸ್ಥೆ ಪಾರದರ್ಶಕ ಗೊಳಿಸುವುದು, ಡಿಜಿಟಲೀಕರಣಕ್ಕೆ ಒತ್ತು ನೀಡುವುದು, ಪರಿಷತ್ತಿನ ಹೆಸರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಡೋಜ ಡಾ. ಮಹೇಶ್ ಜೋಶಿ ಅವರು ತಮ್ಮ ಮುಂದಿನ ಯೋಜನೆಗಳನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆತಂಕ ಹುಟ್ಟಿಸಿದ ಅಮೆಜಾನ್

0

2 ವರ್ಷಗಳ ಹಿಂದೆ ವಿಶ್ವವೇ ಬಿಚ್ಚಿ ಬೀಳಿಸಿದಂತಹ ಪುಲ್ವಾಮಾ ಧಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈಗ ಪುಲ್ವಾಮಾ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು ಉಗ್ರರು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಮೂಲಕ ಧಾಳಿಗೆ ಬೇಕಾದ ರಾಸಾಯನಿಕ ಹಾಗೂ ಉಪಕರಣಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.

ಭಾರತದಾದ್ಯಂತ ಹೆಸರುವಾಸಿಯಾಗಿರುವ ಅಮೆಜಾನ್ ಆನ್ಲೈನ್ ಮಾರುಕಟ್ಟೆ ವ್ಯಾಪಾರವು ಇತ್ತೀಚೆಗೆ ಒಂದಲ್ಲ ಒಂದು ರೀತಿಯ ಗೊಂದಲಕ್ಕೆ ಸಿಲುಕಿ ಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಕೆಲ ದಿನಗಳ ಹಿಂದೆ ಅಮೆಜಾನ್ ವಿರುದ್ಧ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡಿದ ಪ್ರಕರಣ ದಾಖಲಾಗಿರುವ ಬೆನ್ನಲ್ಲಿಯೇ, ಈಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ಸೇನೆಯ 40 ಯೋಧರು ಹುತಾತ್ಮರಾಗಲು ಕಾರಣವಾದ ದಾಳಿಗೂ ಮುನ್ನ ಸುಧಾರಿತ ಸ್ಫೋಟಕ ಸಾಧನ ತಯಾರಿಸಲು ಬಳಸುವಂತಹ ರಾಸಾಯನಿಕ ಗಳಾದ ಅಮೋನಿಯಂ ನೈಟ್ರೇಟ್, ನೈಟ್ರೋಗ್ಲಿಸರಿನ್ ಹಾಗೂ ಬ್ಯಾಟರಿಗಳು ಸೇರಿ ಹಲವು ಉಪಕರಣಗಳನ್ನು ಆನ್ಲೈನ್ ಮೂಲಕ ಖರೀದಿಸಲಾಗಿದೆ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ತಿಳಿಸಿದ್ದಾರೆ.

ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವ ಇಂದಿನ ಜನತೆ ಅಮೆಜಾನ್ ನಂತಹ ಹಲವು ಆನ್ಲೈನ್ ಶಾಪಿಂಗ್ ಗೆ ಮುಂದಾಗಿದ್ದಾರೆ. ಇಂತಹ ಆನ್ಲೈನ್ ಶಾಪಿಂಗ್ ಗಳಿಂದ ಯುವಜನತೆ ಹಾದಿ ತಪ್ಪುತ್ತಿದ್ದಾರೆ ಎಂಬ ಆತಂಕ ಕೂಡ ಪೋಷಕರಲ್ಲಿ ಮೂಡಿದೆ.

ಇತ್ತೀಚಿಗೆ ಪುಲ್ವಾಮಾ ಧಾಳಿ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ ವ್ಯಕ್ತಿ ನೀಡಿದ ಮಾಹಿತಿಯಿಂದಲೇ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಹಾಗಾದರೆ ಈ ಮೂಲಕ ಏನು ಬೇಕಾದರೂ ಮಾರಾಟ ಮಾಡಬಹುದು ಎಂದು ಇ-ಕಾಮರ್ಸ್ ಸಂಸ್ಥೆಗಳು ಭಾವಿಸಿವೆಯೇ ಎಂದು ಭಾರ್ತಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ಆನ್ಲೈನ್ ಮಾರುಕಟ್ಟೆಯಿಂದಾಗಿ ಸ್ಥಳೀಯ ವರ್ತಕರು ಹೈರಾಣಾಗಿದ್ದಾರೆ. ಜೀವನ ನಡೆಸುವುದೇ ಅವರಿಗೆ ಕಷ್ಟವಾಗಿದೆ. ಎಲ್ಲ ಆನ್ಲೈನ್ ಮಯ ಆಗಿರುವಾಗ ಕೇಂದ್ರ ಸರ್ಕಾರ ಇಂತಹ ಆನ್ಲೈನ್ ಮಾರುಕಟ್ಟೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ನೀಡಬೇಕು. ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟವನ್ನು ನಿಷೇಧಿಸಬೇಕು.

ಸ್ಪೋಟಕ ಕಾಯ್ದೆ -1884 ರ ಪ್ರಕಾರ ಅಮೋನಿಯಂ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹವನ್ನು 2021ರಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, 2006ರಲ್ಲಿ ಮಾಲೇಗಾಂವ್ ಹಾಗೂ 2008ರಲ್ಲಿ ದಿಲ್ಲಿಯಲ್ಲಿ ನಡೆದ ದಾಳಿಯಲ್ಲಿ ಇದೇ ರಾಸಾಯನಿಕ ಬಳಸಲಾಗಿತ್ತು. ಇಷ್ಟೆಲ್ಲಾ ಆದರೂ ಸಹ ಅಮೆಜಾನ್ ಇಂತಹ ರಾಸಾಯನಿಕ ಮಾರಾಟ ಮಾಡುತ್ತಿರುವುದು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಬಿ.ಸಿ. ಭಾರ್ತಿಯಾ ಅವರು ಹೇಳಿದರು.

ಅಮೆಜಾನ್ ವಿರುದ್ಧ ಸೂಕ್ತ ತನಿಖೆಯಾಗಬೇಕು ಹಾಗೂ ಸಂಬಂಧಿಸಿದ ಸಂಸ್ಥೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಅಭಿಪ್ರಾಯ ಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇಶದಾದ್ಯಂತ ಮನೆಗೆಲಸದವರ ಸಮೀಕ್ಷೆ

0

ದೇಶದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ, ಏಕಕಾಲಕ್ಕೆ ಮನೆಗೆಲಸದವರ ಸಮೀಕ್ಷೆ ನಡೆಯಲಿದೆ.

ಅಡುಗೆಯವರು, ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿಗಳು ಹೀಗೆ ಹಲವಾರು ರೀತಿಯ ಸೇವೆ ಒದಗಿಸುವ ಮನೆಗೆಲಸದವರ ಸಮಸ್ಯೆಯನ್ನು ಅರಿಯಲು ಅಖಿಲ ಭಾರತ ಮಟ್ಟದ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಈ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ.

ಮನೆಗೆಲಸದವರ ನಿಖರವಾದ ಸಂಖ್ಯೆ ಮತ್ತು ಅನುಪಾತವನ್ನು ಅಂದಾಜು ಮಾಡುವುದು. ವಿವಿಧ ಕುಟುಂಬಗಳಲ್ಲಿ ಇರುವ ಮನೆಗೆಲಸದವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ದಾಖಲೆ ಆಧಾರಿತ, ದತ್ತಾಂಶ ಚಾಲಿತ ನೀತಿಗಳನ್ನು ಅರ್ಥ ಮಾಡಿಕೊಳ್ಳಬೇಕು.ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಮೀಕ್ಷೆ ನಡೆಯಲಿದೆ.
ನಗರೀಕರಣದಿಂದಾಗಿ, ಕಾರ್ಮಿಕರ ವಲಸೆ ಹೆಚ್ಚಾಗಿದೆ. ಮನೆಗೆಲಸ ಆಸಕ್ತಿ ಇರುವ ಕಾರ್ಮಿಕರ ಸಂಖ್ಯೆ ತೀವ್ರ ಹೆಚ್ಚಾಗಿದೆ. ಈ ವಲಯದಲ್ಲಿ ಕೆಲಸ ಮಾಡುವವರ ಸುರಕ್ಷತೆ ಮತ್ತು ಹಕ್ಕು ರಕ್ಷಣೆ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸಲು ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಮನೆಗೆಲಸದವರ ರಾಷ್ಟ್ರ ಮಟ್ಟದ ಸಮೀಕ್ಷೆ ಇದೇ ಪ್ರಥಮ ಬಾರಿಗೆ ನಡೆಸಲಾಗುತ್ತಿದೆ. ಈ ವಲಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸೂಕ್ತ ನೀತಿ ರೂಪಿಸಲಾಗಿದೆ. ಸಮಾಜದಲ್ಲಿನ ಎಲ್ಲಾ ಜನರಿಗೂ ಈ ಸೌಲಭ್ಯ ದೊರೆಯಬೇಕೆಂಬ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನೆರವು ನೀಡುವ ಈ ಸಮೀಕ್ಷೆಯು ಒಂದು ವರ್ಷದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.

ಇ- ಶ್ರಮ್ ಕೋರ್ಟಿನಲ್ಲಿ ನೋಂದಣಿ ಮಾಡಿಸಿಕೊಂಡಿರುವ ಅಸಂಘಟಿತ ವಲಯದ ಒಟ್ಟು 8.56 ಕೋಟಿ ಕಾರ್ಮಿಕರಿದ್ದಾರೆ. ಇದರಲ್ಲಿ ಶೇ. 8. 8 ರಷ್ಟು ಕಾರ್ಮಿಕರು ಮನೆಗೆಲಸದ ವರ್ಗಕ್ಕೆ ಸೇರಿದ್ದಾರೆ. ಈ ವರ್ಗವು ಕೃಷಿ ಮತ್ತು ನಿರ್ಮಾಣ ವಲಯದ ನಂತರ ಇರುವ ಮೂರನೇ ಅತಿದೊಡ್ಡ ವರ್ಗವಾಗಿದೆ.

ಮನೆಗೆಲಸ ಆರಂಭಿಸಿದಾಗಿನಿಂದ ವಯಸ್ಸು, ಶಿಕ್ಷಣ, ಔದ್ಯೋಗಿಕ ತರಬೇತಿ ,ಕೆಲಸ ಮಾಡಿದ ದಿನಗಳ ಸಂಖ್ಯೆ, ಹಲವಾರು ಮಾಹಿತಿಗಳನ್ನು ಸಮೀಕ್ಷೆಯ ವೇಳೆ ಸಂಗ್ರಹಿಸಲಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.