Sunday, February 8, 2026
Sunday, February 8, 2026
Home Blog Page 1845

ಓಮಿಕ್ರಾನ್ : ಸಂದೇಹ ಸಮಾಧಾನ – ಎಲ್ಲರಿಗೂ ಮಾಹಿತಿ

0

ಓಮಿಕ್ರಾನ್ ರೂಪಾಂತರಿ ಭಾರತಕ್ಕೆ ಕಾಲಿಟ್ಟ ಬೆನ್ನಲ್ಲೇ ಜನರು ಆತಂಕಕ್ಕೀಡಾಗಿದ್ದಾರೆ. ಜನರ ಮನಸ್ಸಿನಲ್ಲಿರುವ ಗೊಂದಲಗಳನ್ನು ಪರಿಹರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಓಮಿಕ್ರಾನ್ ಗೊಂದಲಗಳಿಗೆ ಪ್ರಶ್ನೋತ್ತರ ರೂಪದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದೆ.

ಲಸಿಕೆ ಪರಿಣಾಮಕಾರಿಯೇ?

ಇದುವರೆಗೆ ಬಳಸಲಾಗುತ್ತಿರುವ ಯಾವ ಲಸಿಕೆಯು ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ ಅಲ್ಲ ಎಂಬುದು ದೃಢಪಟ್ಟಿಲ್ಲ. ಹೊಸ ರೂಪಾಂತರಿಗಳು ಲಸಿಕೆಯ ಸಾಮರ್ಥ್ಯ ಕುಂಠಿತಗೊಳಿಸಬಹುದು ಹೊರತು, ನಿಷ್ಕ್ರಿಯಗೊಳಿಸುವುದಿಲ್ಲ. ಆದ್ದರಿಂದ ಭಾರತದಲ್ಲಿಯೂ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಸಂದೇಹ ಬೇಡ.

ಓಮಿಕ್ರಾನ್ ವಿರುದ್ಧ ನಾವೆಷ್ಟು ಜಾಗೃತರಾಗಿರಬೇಕು?

ಇದು ಸಹ ರೂಪಾಂತರಿಯೇ ಆಗಿರುವುದರಿಂದ ಹೆಚ್ಚಿನ ಕ್ರಮಗಳ ಅಗತ್ಯವಿಲ್ಲ. ಲಸಿಕೆ ಪಡೆಯುವುದು, ಅನವಶ್ಯಕವಾಗಿ ಮನೆಯಿಂದ ಹೊರಗೆ ಬರದಿರುವುದು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಆಗಾಗ ಕೈ ತೊಳೆಯುವುದು, ಜನ ಸಂದಣಿಯ ಸಮಾರಂಭಗಳಿಗೆ ತೆರಳದಿರುವುದು, ಪೌಷ್ಟಿಕಾಂಶಯುತ ಆಹಾರ ಸೇವನೆ- ಇವಿಷ್ಟನ್ನು ಪಾಲಿಸಿದರೆ ಸಾಕು.

ರೂಪಾಂತರಿ ಅಪಾಯಕಾರಿಯೇ?

ಸಾರ್ಸ್ -ಸಿಒವಿ -2ನ ಹಲವು ರೂಪಾಂತರಿಗಳಂತೆ ಓಮಿಕ್ರಾನ್ ಸಹ ರೂಪಾಂತರಿ ಅಷ್ಟೇ. ಇದಕ್ಕೆ ಬಿ.1.1.529 ಎಂದು ಕರೆಯಲಾಗಿದೆ. ಗ್ರೀನ್ ಅಲ್ಫಾ ಬೆಟ್ ಗಳಾದ ಅಲ್ಪಾ, ಬೀಟಾ, ಡೆಲ್ಟಾದಂತೆ ಇದಕ್ಕೆ ಓಮಿಕ್ರಾನ್ ನ ಮೂವತ್ತಕ್ಕೂ ಅಧಿಕ ರೂಪಾಂತರಿಗಳು ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ಶಕ್ತಿ ಹೊಂದಿದೆ. ಆದರೆ ಹೊಸ ರೂಪಾಂತರಿ ಮಾರಣಾಂತಿಕ ಎಂಬುದು ಇದುವರೆಗೆ ಸಾಬೀತಾಗಿಲ್ಲ. ಹಾಗಾಗಿ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ.

ಇದು ಮೂರನೇ ಅಲೆ ಆರಂಭವೇ?

ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 24ರಂದು ಪತ್ತೆಯಾದ ಸೋಂಕು ಹತ್ತೇ ದಿನದಲ್ಲಿ ಮೂವತ್ತಕ್ಕೂ ಅಧಿಕ ದೇಶಗಳಿಗೆ ಹಬ್ಬಿದೆ ಯಾದರೂ, ಇದು ಮಾರಣಾಂತಿಕವೇ ಎಂಬುದು ದೃಢಪಟ್ಟಿಲ್ಲ. ಅಲ್ಲದೇ ಸಾಮೂಹಿಕವಾಗಿಯೂ ಹರಡುತ್ತಿಲ್ಲ. ದೇಶದಲ್ಲಂತೂ ನಿತ್ಯ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿಯೇ ಇದೆ. ಹಾಗಾಗಿ ದೇಶದಲ್ಲಿ ಇದು ಮೂರನೇ ಅಲೆಗೆ ಕಾರಣವಾಗುತ್ತದೆ ಎಂಬ ಆತಂಕ ಬೇಕಿಲ್ಲ.

ಸುಲಭವಾಗಿ ಪತ್ತೆ ಸಾಧ್ಯವೇ?

ಬಹುತೇಕ ರೂಪಾಂತರಿಗಳನ್ನು ಆರ್ ಟಿಪಿಸಿಆರ್ ತಪಾಸಣೆಯಿಂದ ಪತ್ತೆ ಹಚ್ಚಬಹುದಾಗಿದೆ. ವೈರಾಣು ಹರಡುವಿಕೆಯ ತೀವ್ರತೆ, ಸೋಂಕಿನ ಪತ್ತೆ ಸೇರಿ ಹಲವು ವಿಧದಲ್ಲಿ ಪತ್ತೆಹಚ್ಚಬಹುದು. ಸದ್ಯ , ಓಮಿಕ್ರಾನ್ ನ ವೈರಾಣು ಹರಡುವಿಕೆಯ ತೀವ್ರತೆ ಹೆಚ್ಚಿಲ್ಲದ ಕಾರಣ ಜಿನೋಮ್ ಸೀಕ್ವೆನ್ಸಿಂಗ್ ಮೊರೆ ಹೋಗಲಾಗುತ್ತಿದೆ. ಹಾಗೊಂದು ವೇಳೆ ಹೊಸ ರೂಪಾಂತರಿಯ ಪ್ರಸರಣ ಹೆಚ್ಚಾದರೆ, ಅದರಲ್ಲೂ ಆರ್ ಟಿ- ಪಿಸಿಆರ್ ಪರೀಕ್ಷೆ ಮೂಲಕವೇ ಪತ್ತೆ ಹಚ್ಚಬಹುದಾಗಿದೆ.

ಡಬ್ಲ್ಯೂ ಎಚ್ ಒ ಹೇಳಿದ್ದೆನು?

ಹೊಸ ರೂಪಾಂತರಿಯು ವೇಗವಾಗಿ ಹರಡುವ, ಮನುಷ್ಯನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಸಾಂಕ್ರಾಮಿಕವಾಗಿದೆ. ಇದುವರೆಗೆ ಯಾವ ದೇಶದಲ್ಲಿಯೂ ರೂಪಾಂತರಿ ವೈರಾಣುವಿನಿಂದ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಭಾರತ ಕೀವಿಸ್ ಎರಡನೇ ಟೆಸ್ಟ್: ಮಯಾಂಕ್ ಶತಕದ ಗೌರವ.

0

ಭಾರತ ಮತ್ತು ‌ಕೀವಿಸ್ ಎರಡನೇ ಟೆಸ್ಟ್ನ ಮೊದಲನೇ ದಿನದ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಯಿತು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ನಿನ್ನೆ ಊಟದ ವಿರಾಮದ ನಂತರ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿತು. ‌ದಿನಾಂತ್ಯಕ್ಕೆ 70 ಓವರ್ಗಳಲ್ಲಿ 4 ವಿಕೆಟ್ ಪತನಕ್ಕೆ221 ರನ್ ಗಳಿಸಿತು.
ಮೊದಲ ವಿಕೆಟ್ ಜೊತೆಯಾಟದಲ್ಲಿ ಅಂಕಣಕ್ಕಿಳಿದು ಆಡಿದ ಮಯಾಂಕ್ ಮತ್ತು ಶುಭಮನ್ ಗಿಲ್ ,ಉತ್ತಮ ಆರಂಭ ಮಾಡಿದರು. ಇವರು ಜೊತೆಯಾಟದಲ್ಲಿ ತಂಡಕ್ಕೆ 80 ರನ್ಗಳನ್ನು ಸೇರಿಸಿದರು.
ಈ ಹಂತದಲ್ಲಿ ಭಾರತ ತಂಡದ ಇನ್ನಿಂಗ್ಸ್ ಗೆ ಅಜಾಜ್ ಪಟೇಲ್ 73 ರನ್ಗಳಿಗೆ 4 ವಿಕೆಟ್ ಕಬಳಸಿ ಭಾರತ ತಂಡಕ್ಕೆ ಬಲವಾದ ಪೆಟ್ಟುಕೊಟ್ಟರು.
28 ನೇ ಓವರ್ನಲ್ಲಿ ಗಿಲ್ ವಿಕೆಟ್ ಪಡೆದ ಪಟೇಲ್ ತಮ್ಮ ಇನ್ನೊಂದು ಓವರ್ನಲ್ಲಿ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರಿಗೆ ಖಾತೆ ತೆರೆಯಲು ಬಿಡಲಿಲ್ಲ. ಇಬ್ಬರು ಶೂನ್ಯಕ್ಕೆ ಔಟಾದರು. ಯುಡಿಆರ್ ಎಸ್ ‌ನಲ್ಲಿಯೂ ತಮ್ಮ ವಿರುದ್ಧದ ಬಂದ ಎಲ್ಬಿಡಬ್ಲ್ಯು ತೀರ್ಪಿಗೆ ವಿರಾಟ್ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ತವರಿನ ಅಂಗಳದಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡುತ್ತಿರುವ ಶ್ರೇಯಸ್ ಐಯ್ಯರ್ 41 ಎಸೆತಗಳಲ್ಲಿ 18 ರನ್ಗಳನ್ನು ಜೊತೆಗೂಡಿಸಿದರು. ಇಲ್ಲಿಯೂ ಅವರು ಉತ್ತಮ ವಾಗಿ ಬ್ಯಾಟಿಂಗ್ ಮಾಡಿದರು. ಇಬ್ಬರೂ ವಿಕೆಟ್ ಪತನಕ್ಕೆ ತಡೆಯೊಡ್ಡಿದ್ದರು.
119 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಮಯಾಂಕ್ ನಂತರದ ಆಟದಲ್ಲಿ ರನ್ ವೇಗ ಹೆಚ್ಚಿಸಿದರು.
ಪ್ಯಾಡಲ್ ಸ್ವೀಪ್ ಗಳ ಮೂಲಕ ತಮ್ಮ ಸುತ್ತಲೂ ನಿಂತ ಫೀಲ್ಡರ್ ಗಳ ಮಧ್ಯದಿಂದ ಚೆಂಡನ್ನು ಬೌಂಡರಿಗೆ ಕಳಿಸಿದ ಮಯಾಂಕ್ ಆಟ ಮನೋಹರವಾಗಿತ್ತು.
ಯಶಸ್ವಿ ಬೌಲರ್ ಪಟೇಲ್ ಮತ್ತು ಕೈಲ್ ಎಮಿಸನ್ ಅವರಿಗೆ ಮಯಾಂಕ್ ತಕ್ಕ ಪಾಠ ಕಲಿಸಿದರು. ಇನ್ನೊಂದು ಬದಿಯಲ್ಲಿ ಶ್ರೇಯಸ್ ತಮ್ಮ ಗೆಳೆಯನ ಆಟವನ್ನು ಮೆಚ್ಚುಗೆಯಿಂದ ನೋಡುತ್ತಿದ್ದರು.4 ನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದ್ದರು. ಶ್ರೇಯಸ್ ವಿಕೆಟ್ ಗಳಿಸಿದ ಪಟೇಲ್, ಈ ಜೊತೆಯಾಟವನ್ನು ಮುರಿದರು.
ಆದರೆ ಮಯಾಂಕ್ ಯಾರ ಬೌಲಿಂಗಿಗೂ ಎದೆಗುಂದದೆ 229 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಮಯಾಂಕ್ 246 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ನಾಲ್ಕು ಸಿಕ್ಸರ್ ಸಿಡಿಸಿ 120 ರನ್ಗಳನ್ನು ಗಳಿಸಿ ತಂಡಕ್ಕೆ ಕಾಣಿಕೆ ನೀಡಿದರು.
2019 ರ ನವೆಂಬರ್ ನಲ್ಲಿ ದ್ವಿಶತಕ ಬಾರಿಸಿದ ನಂತರ ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಮಯಾಂಕ್. ವಾಂಖೆಡೆ ಕ್ರೀಡಾಂಗಣದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಸರಣಿಯ ಮೊದಲ ಪಂದ್ಯದಲ್ಲಿಯೂ ಅವರು ಹೆಚ್ಚು ರನ್ನು ಗಳಿಸಿರಲಿಲ್ಲ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ಗಾಯಗೊಂಡಿರುವ K.L ರಾಹುಲ್ ತಂಡದಲ್ಲಿ ಇಲ್ಲದ ಕಾರಣಕ್ಕೆ ಸ್ಥಾನ ಪಡೆದಿದ್ದ ಮಯಾಂಕ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು
2 ಅಡಿ ಮುಂದಿಟ್ಟು ಸಿಕ್ಸರ್ ಹೊಡೆತಕ್ಕೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮಯಾಂಕ್ ಆಟಕ್ಕೆ ತಲೆದೂಗಿದರು.

ರಾಜ್ಯದ ಹಲವೆಡೆ ಮಳೆ : ರೈತರಿಗೆ ಬೆಳೆ ಸಂಕಷ್ಟ

0

ರಾಜ್ಯದ ಹಲವೆಡೆ ಶುಕ್ರವಾರ ಚಿಕ್ಕಮಗಳೂರು, ಮೈಸೂರು ಜಿಲ್ಲೆ ಸೇರಿದಂತೆ ಬಯಲುಸೀಮೆಯಲ್ಲಿ ಧಾರಾಕಾರ ಮಳೆ ಸುರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ದಂದೂರು, ಕಡೂರು, ಬೀರೂರು ಭಾಗದಲ್ಲಿ ಸುರಿದಂತಹ ಮಳೆಯಿಂದಾಗಿ ಬೆಳೆ ಹಾನಿ ಉಂಟಾಗಿದೆ.

ಈ ಭಾಗಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ ರಾಗಿ ಬೆಳೆ ನೆಲಕಚ್ಚಿವೆ. ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಶಿವನಿ ಕೆರೆ ಇರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ತೊಂದರೆಉಂಟಾಗಿದೆ.

ರಾಮಗಿರಿ, ಗಂಗಸಮುದ್ರ ಕಣವಿ ಹಳ್ಳಿ ಸಿಂಗೇನಹಳ್ಳಿ ಸುತ್ತ -ಮುತ್ತ ಸುರಿದ ಭಾರಿ ಮಳೆಗೆ ಕೆರೆ ಕೋಡಿ ಬಿದ್ದಿದೆ.

ಮೈಸೂರು, ಕೊಡಗು ಮಂಡ್ಯ ಹಾಸನ ಜಿಲ್ಲೆಗಳಲ್ಲೂ ಕೂಡ ಗುಡುಗು ಸಹಿತ ಸುರಿದಂತಹ ವಿಪರೀತ ಮಳೆಯಿಂದಾಗಿ ಕೊಯ್ಲು ಮಾಡಿದ ಭತ್ತ ಕೊಯ್ದು ಹೋಗಿದೆ.

ಅಕಾಲಿಕ ಮಳೆಯು ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಶೀರ್ಷಿಕೆ ಜೂ.ಹಾಕಿ : ಭಾರತ “ಸೆಮಿ” ಯಲ್ಲಿ ಸೋಲು.

0

ಜೂನಿಯರ್ ವಿಶ್ವಕಪ್ ಹಾಕಿ ಸೆಮಿಫೈನಲ್ ಪಂದ್ಯವು ಭಾರತ ಮತ್ತು ಜರ್ಮನಿ ತಂಡಗಳ ನಡುವೆ ನಡೆಯಿತು. ಭಾರತ ತಂಡದ ವಿರುದ್ಧ ಜರ್ಮನಿ ಜಯಗಳಿಸಿ ಫೈನಲ್ ಹಂತವನ್ನು ತಲುಪಿದೆ.
ಮೊದಲ ಸೆಮಿಫೈನಲ್ ನಲ್ಲಿ ಫ್ರಾನ್ಸ್. ಅರ್ಜೆಂಟೀನ ವಿರುದ್ಧ ಮತ್ತು ರೋಚಕ ಶೂಟೌಟ್ ನಲ್ಲಿ ಬೆಲ್ಜಿಯಂ ವಿರುದ್ಧ ಸ್ಪೇನ್ ಗೆಲುವು ಸಾಧಿಸಿವೆ.. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ 2 ಗೋಲ್ ಗಳಿಸಿದ್ದವು. 4 ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಪಾವು ಅವರು ಗೋಲ್ ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 24ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ನಲ್ಲೂ ಕುನಿಲ್ ಚೆಂಡನ್ನು ಗುರಿ ಮುಟ್ಟಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಶೈಲಿ ಆಟವಾಡಿದ ಜರ್ಮನಿ. ಕೊನೆಯವರೆಗೂ ಪ್ರಾಬಲ್ಯ ಸಾಧಿಸಿತ್ತು. 15ನೇ ನಿಮಿಷದಲ್ಲಿ ಕ್ಲೆನ್ಲೆನ್ ‌ಎರಿಕ್ ಗೋಲು ಹೊಡೆದು ತಂಡದ ಖಾತೆ ತೆರೆದರು. ಆರು ನಿಮಿಷಗಳ ನಂತರ ಫಿಲಿಪ್ ಹಾಲ್ಜ್ ಮುಲ್ಲರ್ 21 ನಿಮಿಷ ಮತ್ತು ಹೆಸೆನ್ ಮುಲ್ಲರ್ 24 ನಿಮಿಷ ಅವರು ಫೀಲ್ಡ್ ಗೋಲ್ಗಳನ್ನು ಹೊಡೆದರು. 25ನೇ ನಿಮಿಷದಲ್ಲಿ ಕ್ರಿಸ್ಟೋಫರ್ ಕಟರ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.
ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡವು 2-4 ರಿಂದ ಜರ್ಮನಿ ಎದುರು ಸೋತಿತು. ಇದರಿಂದಾಗಿ ಸತತ ಎರಡನೇ ಸಲ ಪ್ರಶಸ್ತಿ ಜಯಿಸುವ ಭಾರತ ತಂಡದ ಕನಸು ಒಡೆದುಹೋಯಿತು.

ದಿನಕ್ಕೆ ಒಂದು ಲಕ್ಷ ಕೋವಿಡ್ ಟೆಸ್ಟ್

0

ರಾಜ್ಯದಲ್ಲಿ ಪ್ರತಿದಿನ ಒಂದು ಲಕ್ಷ ಕೋವಿಡ್ ಪರೀಕ್ಷೆ ನಡೆಸಬೇಕು. ಅದರಲ್ಲಿ ಶೇ.70ರಷ್ಟು ಆರ್ ಟಿಪಿಸಿಆರ್ ಮತ್ತು ಶೇಕಡಾ 30 ರಾಪಿಡ್ ಆಂಟಿಜಿನ್ ಟೆಸ್ಟ್ ಆಗಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ಆರೋಗ್ಯ ಕಾರ್ಯಕರ್ತರು, ಸಹಜ ಅಸ್ವಸ್ಥತೆ ಹೊಂದಿರುವವರು, ವಯಸ್ಸಾದವರು, ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.

ರೈಲ್ವೆ ವಿಶೇಷ ಸೌಲಭ್ಯ ಸದ್ಯಕ್ಕೆ ಜಾರಿ ಇಲ್ಲ

0

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿರುವ ರೈಲು ಟಿಕೆಟ್ ಗಳ ಮೇಲಿನ ರಿಯಾಯಿತಿಗಳನ್ನು ಮರುಸ್ಥಾಪಿಸಲು ಪ್ರಸ್ತುತ ಕಾರ್ಯ ಸಾಧುವಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಈ ಬಗ್ಗೆ ಲಿಖಿತ ಉತ್ತರ ಮಾಹಿತಿ ನೀಡಿದ ಅವರು, ಅಂಗವಿಕಲರು, ರೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ವರ್ಗದ ಪ್ರಯಾಣಿಕರಿಗೆ 2020 ರ ಮಾರ್ಚ್ 20ರಿಂದ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಈ ಸೌಲಭ್ಯದ ಮರುಸ್ಥಾಪನೆಗೆ ಮನವಿಗಳು ಬಂದಿವೆ. ಆದರೆ ಅದು ಕಾರ್ಯಸಾಧುವಲ್ಲ ಎಂದಿದ್ದಾರೆ. ಈ ಮುನ್ನ 54 ವಿಭಾಗಗಳಲ್ಲಿ ರಿಯಾಯಿತಿ ಸೌಲಭ್ಯ ನೀಡಲಾಗುತ್ತಿತ್ತು.

ಅಕಾಲಿಕ ಮಳೆ : ತೋಟಗಾರಿಕಾ ಉತ್ಪನ್ನಕ್ಕೆ ಧಕ್ಕೆ ಬೀಳಲಿದೆ

0

ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ಅಕಾಲಿಕ ಅತಿವೃಷ್ಟಿ ಪ್ರಸ್ತುತ ವರ್ಷದ ಇಳುವರಿಗೆ ಮಾತ್ರವಲ್ಲದೆ ಮುಂದಿನ ವರ್ಷದ ಇಳುವರಿಗೂ ಭಾರಿ ಹೊಡೆತ ನೀಡುವ ಆತಂಕ ಎದುರಾಗಿದೆ.
ಈ ವರ್ಷ ನಾನಾ ಬೆಳೆಗಳು ಕೀಟಬಾಧೆ , ಶಿಲೀಂಧ್ರ ಭಾದೆ, ನುಸಿಕಾಟದಿಂದ ಬಳಲುತ್ತಿವೆ. ಹೀಗಾಗಿ ಮುಂದಿನ ವರ್ಷಕ್ಕೆ ಗುಣಮಟ್ಟದ ಬಿತ್ತನೆ ಬೀಜ ಅನುಮಾನ. ಇದಲ್ಲದೆ ದೀರ್ಘಕಾಲಿಕ ಬೆಳೆಗಳ ಪ್ರಸಕ್ತ ವರ್ಷದ ಪರಿಣಾಮ ಮುಂದಿನ ವರ್ಷಕ್ಕೂ ಮುಂದುವರೆಯಲಿದೆ ಎಂದು ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ. ಮಂಜುನಾಥ ಎಚ್.ಅವರು ತಿಳಿಸಿದ್ದಾರೆ.
ದೀರ್ಘಾವಧಿ ಬೆಳೆಗಳು ನಾನಾ ರೀತಿಯ ರೋಗಾತಂಕ ಎದುರಿಸುತ್ತಿವೆ. ಮುಂದಿನ ವರ್ಷ ನಾನಾ ಕಾರಣಗಳಿಗೆ ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಕುಂಠಿತವಾಗುವುದು ನಿಶ್ಚಿತವಾಗಿದೆ.
ಅಕಾಲಿಕ ಮಳೆಯಿಂದ ಅಡಿಕೆ, ತೆಂಗು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳಿಗೂ ಹಾನಿಯುಂಟಾಗಿದೆ. ಮುಂದಿನ ವರ್ಷದ ಫಸಲಿಗೂ ಇದು ತೊಂದರೆಯಾಗಲಿದೆ. ಇಳುವರಿ ಕುಂಠಿತವಾಗುವುದು ಸಹಜ ಎಂದು ರೈತರಾದ ರವೀಶ್ ಅವರು ತಿಳಿಸಿದ್ದಾರೆ.
ಮಲೆನಾಡು, ಕರಾವಳಿ ಬಯಲುಸೀಮೆ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಅಡಿಕೆಗೆ ಬೆಲೆ ಇದೆಯಾದರೂ ಮಳೆ ಈ ಬಾರಿ ಅಡಿಕೆ ತೆಗೆದು, ಸಂಸ್ಕರಣೆ ಮಾಡಲು ಬಿಡುತ್ತಿಲ್ಲ. ಸದಾ ಮೋಡ ಮುಸುಕಿದ ವಾತಾವರಣ, ಮಳೆಯಿಂದ ಹೊಂಬಾಳೆ ಶಿಲೀಂದ್ರ ರೋಗ ತಗುಲಿ ಹರಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಮುಂದಿನ ವರ್ಷ ಖಂಡಿತ ನಿರೀಕ್ಷಿತ ಇಳುವರಿ ಸಾಧ್ಯವಿಲ್ಲ. ಕಾಫಿ ,ಏಲಕ್ಕಿ, ಭತ್ತ, ಶೇಂಗಾ ತೊಗರಿ ಸೇರಿದಂತೆ ಬಹುತೇಕ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಅಕಾಲಿಕ ಅತಿವೃಷ್ಟಿ ಚಿಂತೆಯನ್ನು ತಂದೊಡ್ಡಿದೆ.

ಸಿಬಿಐ ,ಇಡಿ ನಿರ್ದೇಶಕರ ಅವಧಿ : ವಿಧೇಯಕ ಮಂಡನೆ

0

ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರ ಅಧಿಕಾರವಧಿಯನ್ನು ಎರಡು ವರ್ಷಗಳಿಂದ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸುವ ಎರಡು ವಿಧೇಯಕಗಳನ್ನು ಕೇಂದ್ರಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.
ಸಿಬಿಐ ಮತ್ತು ಇ.ಡಿ. ನಿರ್ದೇಶಕರ ಹುದ್ದೆಯ ಅಧಿಕಾರದ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಿ ಸರಕಾರ ಕಳೆದ ತಿಂಗಳು ಸುಗ್ರೀವಾಜ್ಞೆ ಹೊರಡಿಸಿತ್ತು. ಆರು ತಿಂಗಳ ಒಳಗಾಗಿ ಈ ಸುಗ್ರೀವಾಜ್ಞೆಗೆ ಸಂಸತ್ತಿನ ಅನುಮೋದನೆ ಪಡೆಯಬೇಕಿದೆ. ವಿಧೇಯಕ ಮಂಡನೆ ವೇಳೆ ಕಾಂಗ್ರೆಸ್ ಟಿಎಂಸಿ ಸೇರಿದಂತೆ ಪ್ರತಿ ಪಕ್ಷಗಳ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ವಿರೋಧ, ಗದ್ದಲದ ನಡುವೆಯೇ ಕೇಂದ್ರೀಯ ಜಾಗೃತ ಆಯೋಗ ( ತಿದ್ದುಪಡಿ) ವಿಧೇಯಕ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ( ತಿದ್ದುಪಡಿ) ವಿಧೇಯಕವನ್ನು ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಮಂಡಿಸಿದರು.

ಮೊದಲ ದಿನ ಮಯಾಂಕ್ ಆಕರ್ಷಕ ಶತಕ

0

2 ನೇ ಟೆಸ್ಟ್ ಟೂರ್ನಿಯ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪಂದ್ಯದ ಇಂದಿನಿಂದ ಆರಂಭವಾಗಲಿದೆ.

ವಾಂಕೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ನಲ್ಲಿ ಗೆದ್ದವರಿಗೆ ಸರಣಿ ಕಿರೀಟ ಒಲಿಯಲಿದೆ. ಆದ್ದರಿಂದ ಈ ಟೆಸ್ಟ್ ಮ್ಯಾಚ್ ಮಹತ್ವದ್ದಾಗಿದೆ. ಮೊದಲ ಪಂದ್ಯದಲ್ಲಿ ರೋಚಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ ಕೇನ್ ವಿಲಿಯಮ್ಸನ್ ಬಳಗವು, ಆತಿಥೇಯರಿಂದ ಗೆಲುವು ಕಸಿದುಕೊಂಡಿತು. ವಿಶ್ವ ಚಾಂಪಿಯನ್ ತಂಡಕ್ಕೆ ತಕ್ಕಂತೆ ಆಡಿತ್ತು.

ಇಂದು ನಡೆಯಲಿರುವ ಪಂದ್ಯದಲ್ಲಿ ದೀರ್ಘಕಾಲದ ವಿಶ್ರಾಂತಿಯ ಬಳಿಕ ಅಂಕಣಕ್ಕೆ ವಿರಾಟ್ ಕೊಹ್ಲಿ ಮರಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಕಾನ್ಪುರ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿ ಮಿಂಚಿದರು. ಇದರಿಂದಾಗಿ ತಮ್ಮ ತವರು ಅಂಗಳದಲ್ಲಿ ಆಡುವ ಅವಕಾಶ ಪಡೆಯುವುದು ಖಚಿತವಾಗಿದೆ.

ಮೊದಲ ಟೆಸ್ಟ್ ನಲ್ಲಿ ಅರ್ಧಶತಕ ಬಾರಿಸಿದ್ದ ಶುಭಮನ್ ಗಿಲ್ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮಯಂಕ್ ಮತ್ತೊಂದು ಅವಕಾಶ ಗಿಟ್ಟಿಸಿದರು. ರಹನೆ ಅಥವಾ ಪೂಜಾರ ಬೆಂಚ್ ಕಾಯಬೇಕಾಗಬಹುದು. ಕಳೆದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ವೃದ್ಧಿಮಾನ್ ಸಹಾ ಕತ್ತು ನೋವಿನಿಂದಾಗಿ ಕೀಪಿಂಗ್ ಮಾಡಿರಲಿಲ್ಲ ಅವರ ಬದಲಿಗೆ ಕೀಪಿಂಗ್ ಮಾಡಿದ್ದ ಶ್ರೀಕರ್ ಭರತ್ ಚುರುಕಿನ ಆಟದಿಂದ ಸೆಳೆದಿದ್ದರು.

ಇದೀಗ ಕೊಹ್ಲಿಯ ಎದುರು ಇರುವ ಪ್ರಮುಖ ಸವಾಲೆಂದರೆ ಬ್ಯಾಟಿಂಗ್ ಕ್ರಮಾಂಕವನ್ನು ಬಲಿಷ್ಠಗೊಳಿಸುವ ಅಂತಹ ತಂಡವನ್ನು ಕಣಕ್ಕಿಳಿಸುವುದಾಗಿ. ಅಲ್ಲದೆ ಹವಾಮಾನ ವೈಪರೀತ್ಯದಿಂದಾಗಿ ಕಳೆದ ದಿನಗಳಿಂದ ಮಳೆ ಸುರಿಯುತ್ತಿರುವುದು ವಾತಾವರಣವು ಆಟಗಾರರಿಗೆ ಕೂಡ ಕಠಿಣ ಸವಾಲಿದೆ. ಪಂದ್ಯ ನಡೆಯುವ 5 ದಿನಗಳಲ್ಲಿ ಬಹುತೇಕ ಮಳೆ ಬೀಳುವ ಮುನ್ಸೂಚನೆಯೂ ಇದೆ.

ಹಸಿರು ಹೆಚ್ಚಾಗಿ ಕಾಣುತ್ತಿರುವ ವಾಂಕೆಡೆ ಕ್ರೀಡಾಂಗಣದಲ್ಲಿ ವೇಗಿಗಳಿಗೆ ನೆರವು ನೀಡುವ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಈ ಬಾರಿ ಕೇನ್ ವಿಲಿಯಂಸನ್ ಅವರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.
ತಂಡದ ಸೋಲು ತಪ್ಪಿಸಿದ ಯುವ ಪ್ರತಿಭೆ ರಚಿನ್ ರವಿಂದ್ರ ಮುಂಬೈನಲ್ಲಿ ಆಡುವುದು ಖಚಿತ. ಟಾಮ್ ಲತಾ ಮತ್ತು ವಿಲಿಯಂ ಮತ್ತೊಮ್ಮೆ ಭಾರತದ ಸ್ಪಿನ್ ಶಕ್ತಿಗೆ ಸವಾಲೊಡ್ಡಲು ಸಿದ್ದರಾಗಿದ್ದಾರೆ.

ಇಂದಿನ ಪಂದ್ಯದಲ್ಲಿ ಭಾರತ ತಂಡವು 221 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಜೇಯ 120 ರನ್ ಗಳನ್ನು ಗಳಿಸಿದ್ದಾರೆ.

ಭಾರತ ಕಾನೂನು ಬದ್ಧ ಕ್ರಮಕೈಗೊಳ್ಳುತ್ತಿದೆ

0

ಭಾರತ ಕಾನೂನುಬದ್ಧ ಕ್ರಮ ಕೈಗೊಳ್ಳುತ್ತಿದೆ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯಾದ ಜಮ್ಮು ಮತ್ತು ಕಾಶ್ಮೀರವು ಗಡಿರೇಖೆಯ ಭಯೋತ್ಪಾದನೆಯ ಸ್ಥಾನದಲ್ಲಿಲ್ಲ ಎಂದು ತಿಳಿದು ಬಂದಿದೆ.
“ಭಾರತದಲ್ಲಿ ಕಾನೂನಿನ ನಿಯಮವು ಕಾನೂನನ್ನು ಉಲ್ಲಂಘಿಸುತ್ತದೆಯೇ ಹೊರತು ಹಕ್ಕುಗಳ ಕಾನೂನುಬದ್ಧ ನೀತಿಗಳನ್ನಲ್ಲ ಎಂದು ಸಚಿವಾಲಯದ ಬಾಹ್ಯ ವ್ಯವಹಾರಗಳು ಹೇಳಿದೆ. ಜಮ್ಮುವಿನ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ಹೈಕಮಿಷನರ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಾಗ್ಚಿ ಅವರ ಕಾಮೆಂಟ್‌ಗಳು ಬಂದವು. ಅವರು ಭಾರತದಲ್ಲಿ ಇನ್ಫೋಸಿಸ್ ಮಿಂಟ್ ಸರ್ಕಾರ ಮತ್ತು ಭದ್ರತಾ ಪಡೆಗಳ ವಿರುದ್ಧ “ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಮೂಲಭೂತ ಮಾನವ ಹಕ್ಕು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದಂತೆ ಎಲ್ಲೆಡೆಯೂ ಅತ್ಯಂತ ಮಹತ್ವವನ್ನು ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.
ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಅದರ ನಾಗರಿಕರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಯುಎ-ಪಿಎಯಂತಹ ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ಸಂಸತ್ತು ಜಾರಿಗೊಳಿಸಿದೆ ಎಂದು ಬಾಗ್ಚಿ ಹೇಳಿದರು. ಹೇಳಿಕೆಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಬಂಧನ ಮತ್ತು ನಂತರದ ಬಂಧನವನ್ನು ಸಂಪೂರ್ಣವಾಗಿ ಕಾನೂನಿನ ನಿಬಂಧನೆಗಳ ಪ್ರಕಾರ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.