Sunday, February 8, 2026
Sunday, February 8, 2026
Home Blog Page 1846

ಜ್ಯೂನಿಯರ್ ಹಾಕಿ ಉಪಾಂತ್ಯ

0

ವಿಶ್ವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್ ಹಂತವು ಇಂದು ಭಾರತ ಮತ್ತು ಜರ್ಮನಿ ತಂಡಗಳ ನಡುವೆ ನಡೆಯಲಿದೆ.

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಆರು ಬಾರಿ ಪ್ರಶಸ್ತಿ ಜಯಿಸಿರುವ ಜರ್ಮನಿಯನ್ನು ಮಣಿಸುವ ಸವಾಲು ಆತಿಥೇಯರ ಮುಂದಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 4-5 ರಿಂದ ಫ್ರಾನ್ಸ್ ಎದುರು ಸೋತಿತ್ತು. ನಂತರದ ಪಂದ್ಯಗಳಲ್ಲಿ ಅಮೋಘವಾದ ಆಟವಾಡಿ ನಾಕೌಟ್ ಹಂತ ತಲುಪಿತ್ತು. ಕ್ವಾರ್ಟರ್ಫೈನಲ್ನಲ್ಲಿ 1-0 ಇಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿತು.
ಆದರೆ ಜರ್ಮನಿ ತಂಡವನ್ನು ಹಗುರವಾಗಿ ರಲ್ಲಿ ಪ್ರಶಸ್ತಿ ಜಯಿಸಿದ್ದು. ಆದರೆ ನಂತರ ಫೈನಲ್ ರಲ್ಲಿ ಮೂರನೇ ಸ್ಥಾನಪಡೆದಿತ್ತು. ಜರ್ಮನಿಯನ್ನು ಕಡೆಗಣಿಸುವಂತಿಲ್ಲ. ಬಹಳ ಒಳ್ಳೆಯ ಆಟಗಾರರು ಇದ್ದಾರೆ. ಅವರ ವೇಗ ಮತ್ತು ಕೌಶಲ್ಯಪೂರ್ಣ ಆಟಕ್ಕೆ ತಕ್ಕ ಪ್ರತಿತಂತ್ರ ಹೆಣೆಯಬೇಕು ಎಂದು ಭಾರತ ತಂಡದ ಕೋಚ್ ಗ್ರಹನ್ ಹೇಳಿದ್ದಾರೆ.

ಮಂಡ್ಯ: ಭಿಕ್ಷಾಟನೆಗೈದ ಮಕ್ಕಳು ಮರಳಿ ಮನೆಗೆ

0

ಭಿಕ್ಷಾಟನೆಗೆ ಒಳಗಾಗಿ ಶಿಶುಪಾಲನಾ ಕೇಂದ್ರಗಳಿಗೆ ಕಳುಹಿಸಿದ 40 ಮಕ್ಕಳು ನಂತರ ಪೋಷಕರ ಬಳಿಗೆ ಹಿಂತಿರುಸಲಾಗಿದೆ. ಅವರು ಮತ್ತೆ ಬೀದಿಗೆ ಬಂದರೆ ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೇತನ್‌ಕುಮಾರ್ ಮಾತನಾಡಿ, ಸುಮಾರು 14 ಮಕ್ಕಳನ್ನು ರಕ್ಷಿಸಿ ಮಕ್ಕಳ ರಕ್ಷಣಾ ಕೇಂದ್ರಗಳಿಗೆ ಕಳುಹಿಸಲಾಗಿದೆ. ಮಕ್ಕಳನ್ನು ಭಿಕ್ಷಾಟನೆಗೆ ಬಳಸಬಾರದು ಎಂದು ಪೋಷಕರಿಗೆ ಸಲಹೆ ನೀಡಿದ ನಂತರ, ನಾವು ಮಕ್ಕಳನ್ನು ಮರಳಿ ಪೋಷಕರಿಗೆ ಒಪ್ಪಿಸಿದ್ದೇವೆ. ನಾವು ಈ ಮಕ್ಕಳನ್ನು ಮತ್ತೆ ಬೀದಿಗಳಲ್ಲಿ ಕಂಡುಕೊಂಡರೆ, ಈ ಅಪಾಯವನ್ನು ನಿಲ್ಲಿಸಲು ಮತ್ತು ಅವರನ್ನು ಶಾಶ್ವತವಾಗಿ ಪುನರ್ವಸತಿ ಮಾಡಲು ಮಿಷನ್ ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮಕ್ಕಳು ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ನಾವು ಈ ಮಕ್ಕಳು ನಗರದ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವುದನ್ನು ಕಾಣಬಹುದು. ಅಲೆಮಾರಿ ಬುಡಕಟ್ಟು ಜನಾಂಗದವರು ಕಮ್ಮನಹಳ್ಳಿ, ತುಂಬಕೆರೆ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಮಂಡ್ಯ ನಗರದಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವುದರ ವಿರುದ್ಧ ಸಾಮಾಜಿಕ ಜಾಲತಾಣ ಕಾರ್ಯಕರ್ತರು ಹಾಗೂ ಸಂಘಟನೆಗಳು ಧ್ವನಿ ಎತ್ತಿದ್ದವು. ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುವುದನ್ನು ಮುಂದುವರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೋಷಕರಿಗೆ ಮೊದಲೇ ಎಚ್ಚರಿಸಿದ್ದರು. ಎಚ್ಚರಿಕೆ ಫಲಕಾರಿಯಾಗದೇ ಇದ್ದಾಗ ಸಿಡಿಪಿಒ ಚೇತನ್‌ಕುಮಾರ್ ಮತ್ತು ಸಿಬ್ಬಂದಿ ಮಕ್ಕಳನ್ನು ವಶಕ್ಕೆ ಪಡೆದು ಮಕ್ಕಳ ರಕ್ಷಣಾ ಕೇಂದ್ರಗಳಿಗೆ ಕಳುಹಿಸಿದರು. ಮಕ್ಕಳನ್ನು ಭಿಕ್ಷಾಟನೆಗೆ ಬಳಸುವುದಿಲ್ಲ ಎಂದು ಪೋಷಕರು ಭರವಸೆ ನೀಡಿದ ನಂತರ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ್ದೆವೆ ಎಂದರು. ಚ
100ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಪೋಷಕರು ಇನ್ನೂ ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುತ್ತಿದ್ದಾರೆ. ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ, 18 ಅನಾಥರು ಮತ್ತು 22 ಮಕ್ಕಳನ್ನು ಒಂಟಿ ಪೋಷಕರನ್ನು ಹೊಂದಿದ್ದು, ಅಲ್ಲಿ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ರಕ್ಷಿಸಲಾಗಿದೆ ಮತ್ತು ನೋಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಮೈಯೆಲ್ಲ ಕಣ್ಣು.

0

ಇನ್ಮುಂದೆ ಶಿವಮೊಗ್ಗ ಜಿಲ್ಲೆಗೆ ಬರುವ ಮತ್ತು ಹೋಗುವ ಪ್ರತಿಯೊಂದು ವಾಹನದ ಮೇಲೆ ಕ್ಯಾಮರಾ ಕಣ್ಣಿಡಲಿದೆ.
ವೇಗವಾಗಿ ವಾಹನ ಚಲಾಯಿಸುವುದು ಸೇರಿ ಇನ್ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆದಲ್ಲಿ ಅಂಥವುಗಳ ವಿವರವನ್ನು ವಾಹನದ ಸಂಪೂರ್ಣ ವಿವರ ಸಹಿತ ಪೊಲೀಸರು ಪಡೆಯಬಹುದಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಟ್ರಾಫಿಕ್ ನಿಯಮಗಳನ್ನು ಸ್ಮಾರ್ಟ್ ಆಗಿಸುವುದಕ್ಕಾಗಿ ಹಲವು ಯೋಜನೆಗಳನ್ನು ಹೊಂದಲಾಗಿದೆ. ಈಗಾಗಲೇ ಹಲವೆಡೆ ಕ್ಯಾಮೆರಾ ಅಳವಡಿಸಿದ್ದು, ಇವುಗಳ ಮೂಲಕ ನಗರದ ಪ್ರತಿಯೊಂದು ಚಟುವಟಿಕೆಗಳ ಮೇಲೆ ಕಣ್ಣಿಡಬಹುದಾಗಿದೆ. ಜೊತೆಗೆ ಸ್ಮಾರ್ಟ್ ಫೋಲ್ ಗಳನ್ನು ಅಳವಡಿಸಿದ್ದು, ಇದರಲ್ಲಿ ಕ್ಯಾಮೆರಾ, ಪಬ್ಲಿಕ್ ಅನ್ನೌನ್ಸ್ಮೆಂಟ್, ಪರದೆ, ವಾತಾವರಣ ಮೌಲ್ಯಮಾಪನ ಹೀಗೆ ಹಲವು ವ್ಯವಸ್ಥೆಗಳನ್ನು ತಲುಪಿಸಲಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಂಡಿ ಚಿದಾನಂದ್ ವಟಾರೆ ಅವರು ತಿಳಿಸಿದ್ದಾರೆ.
ಈ ವ್ಯವಸ್ಥೆ ಶಿವಮೊಗ್ಗದಲ್ಲಿ ಆರಂಭಿಸುವುದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೋಸ್ಕರ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 41.83 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.
ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿ ಶಿವಮೊಗ್ಗ ನಗರಕ್ಕೆ ಬರುವ ಮತ್ತು ಹೊರಹೋಗುವ 9 ಪಾಯಿಂಟ್ ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವ್ಯವಸ್ಥೆ ರೂಪಿಸಿದ್ದು ಪೊಲೀಸ್ ಇಲಾಖೆಗೆ ಇದರಿಂದ ಭಾರಿ ಪ್ರಯೋಜನವಾಗಲಿದೆ.

ಅಡಕೆ ಸುಲಿಯಲು ಸುಲಭ ಸಾಧನ ಶಿಲ್ಪಿ: ವಿಶ್ವನಾಥ್

0

ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರಕ್ಕೆ ಹಲವಾರು ಯಂತ್ರಗಳು ಕೊಡುಗೆಯಾಗಿವೆ. ಹಳ್ಳಿಗಳಲ್ಲಿ ಕೃಷಿ ಯಂತ್ರಗಳ ಸದ್ದು ಹೆಚ್ಚಾಗಿದ್ದು ಬಹುತೇಕ ರೈತರು ಯಂತ್ರಗಳನ್ನೇ ಅವಲಂಬಿಸಿದ್ದಾರೆ.
ಕೂಲಿ ಆಳುಗಳ ಸಮಸ್ಯೆ, ಪ್ರಕೃತಿ ವೈಪರೀತ್ಯ, ಸೇರಿದಂತೆ ಹಲವಾರು ಸಮಸ್ಯೆಗಳಿಂದ ಪಾರಾಗಲು ಮಲೆನಾಡು ಭಾಗದಲ್ಲಿ ರೈತರು ಕೃಷಿ ಯಂತ್ರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈ ವರ್ಷ ಪ್ರಕೃತಿ ರೈತರಿಗೆ ಕೈ ಕೊಟ್ಟಿದ್ದು ಅಡಿಕೆ ಸಂಸ್ಕರಣ ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಸಿದೆ. ಈ ಬಾರಿ ಕೃಷಿ ಯಂತ್ರಗಳ ಸಂಶೋಧಕ ಕುಂಟವಳ್ಳಿ ವಿಶ್ವನಾಥ್ ಹೊಸ ಯಂತ್ರದ ಮೂಲಕ ರೈತರ ಕೈಹಿಡಿದಿದ್ದಾರೆ. ಈಗ ಅವರು ಸರಳ ತಾಂತ್ರಿಕತೆಯ ಹೊಂದಿದ ಹಣ್ಣಡಕೆ ಸುಲಿಯುವ ಯಂತ್ರವನ್ನು ಸಂಶೋಧಿಸಿ ಸಿದ್ಧಪಡಿಸಿದ್ದಾರೆ.
ಈ ಯಂತ್ರವು ಕಣ್ಣಡಕೆಯನ್ನು ಅತೀ ನಾಜೂಕಿನಿಂದ ಸುಲಿಯುವ ಸಾಮರ್ಥ್ಯವನ್ನು ಹೊಂದಿದೆ. ಎಂಟು ಕೆಜಿ ತೂಕದ ಕಣ್ಣಡಕೆಯನ್ನು ಸಿಪ್ಪೆ ಸಮೇತ ಎಂಟರಿಂದ ಹತ್ತು ನಿಮಿಷದಲ್ಲಿ ಸುಲಿಯುವ ನೈಪುಣ್ಯತೆ ಯಂತ್ರದ್ದಾಗಿದೆ‌. ಶೇ. 95ರಷ್ಟು ಹಣ್ಣಡಕೆ ರಾಶಿ ಇಡಿ ಅಡಿಕೆಯನ್ನಾಗಿಸುವ ಸಾಮರ್ಥ್ಯ ಯಂತ್ರಕ್ಕಿದೆ.
ಹಣ್ಣಡಕೆ ಸುಲಿಯುವ ಯಂತ್ರ ಚಿಕ್ಕದಾಗಿದ್ದು ರೈತರಿಗೆ ಉಪಯುಕ್ತ ಲಾಭಗಳಿವೆ. ಯಂತ್ರ ಸಂಶೋಧನೆಯಿಂದ ಹಣ್ಣಡಕೆ ಸುಲಿಯುವ ಚಿಂತೆ ರೈತರಿಗೆ ಈಗ ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ರಾಷ್ಟ್ರೀಯ ಅಡಿಕೆಗೆ ಉತ್ತಮ ಧಾರಣೆ ಇದ್ದು, ಹಣ್ಣಡಿಕೆ ಸುಲಿಯುವ ಯಂತ್ರ ಬಳಸಿದರೆ ಅತಿ ಹೆಚ್ಚು ಲಾಭ ಗಳಿಸಬಹುದಾದ ಅವಕಾಶ ರೈತರಿಗಿದೆ.

ಆತಂಕಕ್ಕೊಳಗಾಗಬೇಡಿ -ಡಾ. ಸುಧಾಕರ್

0

ಕೊರೊನಾ ವೈರಾಣುವಿನ ರೂಪಾಂತರಿ ಓಮಿಕ್ರಾನ್ ಬೆಂಗಳೂರಿನ ಮೂಲಕ ಭಾರತಕ್ಕೂ ಲಗ್ಗೆ ಇಟ್ಟಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ 46 ವರ್ಷದ ವೈದ್ಯರೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಜೆಪಿ ನಗರದಲ್ಲಿ ವಾಸವಿರುವ ಸೋಂಕಿತರ ಸಂಪರ್ಕದಲ್ಲಿದ್ದ ಪತ್ನಿ ಸೇರಿ ಐದು ಮಂದಿಗೆ ಕೊರೊನಾ ಸೋಂಕು ತಲುಪಿದೆ. ಇವರೆಲ್ಲರೂ ಕೂಡ ವೈದ್ಯರಾಗಿದ್ದಾರೆ. ಮನೆಯಲ್ಲಿ ಪ್ರತ್ಯೇಕ ತಾರೀಕಿಗೆ ಒಳಗಾಗಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನ ಸಮರ್ಥ ಪರೀಕ್ಷೆ ವ್ಯವಸ್ಥೆಯಿಂದಾಗಿ ಬೇಗನೆ ಕೋವಿಡ್ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ಜನರು ತಪ್ಪದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಸೋಂಕಿತ ವೈದ್ಯ ಹಾಗೂ ಇತರೆ ಇಬ್ಬರೂ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವೈದ್ಯರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದರು. ಇವರು ಯಾವುದೇ ಪ್ರಯಾಣ ಇತಿಹಾಸ ಹೊಂದಿರಲಿಲ್ಲ. ಆದರೂ ಸೋಂಕು ಹೇಗೆ ತಲುಪಿತು ಎಂಬುದು ನಿಗೂಢವಾಗಿದೆ.

ಪರಸ್ಪರ ಪ್ರೀತಿಯೇ ಮಾನವ ಧರ್ಮ.- ಗೆಹ್ಲೋಟ್

0

ಧರ್ಮದ ಹಾದಿಯಲ್ಲಿ ಸಾಕುವವನ ಹೃದಯ ನಿರ್ಮಲವಾಗಿರುತ್ತದೆ. ಆತನಲ್ಲಿ ಕರುಣೆ ಮತ್ತು ಕ್ಷಮಾ ಗುಣವಿರುತ್ತದೆ. ಮಾನವರು ಪರಸ್ಪರ ಪ್ರೀತಿಸುವಲ್ಲಿ ಧರ್ಮವಾಗಿರುತ್ತದೆ ಮತ್ತು ಅಂತಹ ಗುಣವು ಇತರರ ದುಃಖವನ್ನು ಕಳೆಯುತ್ತದೆ. ಇಂದಿನ ದಿನಗಳಲ್ಲಿ ಸರ್ವಧರ್ಮ ಸಮನ್ವಯ ಮತ್ತು ಸಮ್ಮೇಳನದ ತುರ್ತು ಇದ್ದೇ ಇದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ 89 ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರ ಧರ್ಮದ ನಿವಾಸವೇ ಆಗಿದೆ. ಮಾನವತೆಯ ಸ್ಥಾನವಾಗಿದೆ. ಈ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಬೇಕೆಂಬ ನನ್ನ ಬಹುಕಾಲದ ಕನಸು ಇಂದು ಈಡೇರಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಸ್‌. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ ಅವರು, ದೇಹ, ಭೌತಿಕತೆ, ಇಂದ್ರಿಯ ಲೋಲುಪತೆಯನ್ನು ಮೀರಿದ್ದೇ ಧರ್ಮ. ಈ ಹೆಸರನ್ನಿಟ್ಟುಕೊಂಡು ಮತಪಂಥಗಳ ಹೊಂಡ ತೋಡಿ ಕೊಂಡರೆ ಅದು ಧರ್ಮ ವಾಗುವುದಿಲ್ಲ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ‌. ವೀರೇಂದ್ರ ಹೆಗ್ಗಡೆಯವರು ಅತಿಥಿಗಳನ್ನು ಸ್ವಾಗತಿಸಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಸನ್ಮಾನಿಸಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ RTPCR ಕಡ್ಡಾಯ.

0

ಬೆಂಗಳೂರು ನಗರದಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಸೋಂಕು ತಡೆಗೆ ಸರಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.
ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ಮಹತ್ವದ ಸಭೆ ನಡೆಸಲಾಗಿದೆ. ಓಮಿಕ್ರಾನ್ ಸೋಂಕು ತಡೆಗಟ್ಟಲು ಪರಿಷ್ಕೃತ ಮಾರ್ಗಸೂಚಿ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 13 ದೇಶಗಳಲ್ಲಿ
ಓಮಿಕ್ರಾನ್ ಸೋಂಕು ಹೆಚ್ಚಾಗಿ ಹರಡುತ್ತಿದೆ ಆದರೆ, ತೀವ್ರವಾಗಿ ಬಾಧಿಸುವುದಿಲ್ಲ ಎಂಬುದು ಸಮಾಧಾನದ ವಿಷಯ ಎಂದು ತಿಳಿಸಿದರು.
ಸಭೆಯಲ್ಲಿ ಮದುವೆ ಸಮಾರಂಭಗಳಿಗೆ ಕೇವಲ ,500 ಜನರ ಮಿತಿ ಹೊಂದಿರಬೇಕು. ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
ಸಿನಿಮಾ ಮಾಲ್ ಗಳಲ್ಲಿ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ .
ಏರ್ ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ನಡೆಸಲು 3000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಸರ್ಕಾರಿ ನೌಕರರು ಎರಡೂ ಡೋಸ್ ಲಸಿಕೆ ಪಡೆದಿರಬೇಕು.
ಪೋಷಕರು ಸಹ 2 ಡೋಸ್ ಲಸಿಕೆ ಪಡೆದಿರಬೇಕು.
ಸಾರ್ವಜನಿಕವಾಗಿ ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ ಧರಿಸದಿದ್ದರೆ ನಗರ ಪ್ರದೇಶಗಳಲ್ಲಿ 250 ರೂಪಾಯಿ ಮತ್ತು ತಾಲೂಕುಗಳಲ್ಲಿ 150 ರೂಪಾಯಿ ದಂಡ ತೆರಬೇಕಾಗುತ್ತದೆ ಎಂಬ ನಿಮಯಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಇವು ಸಭೆಯ ಪ್ರಮುಖ ನಿರ್ಧಾರಗಳ ಮುಖ್ಯಾಂಶಗಳಾಗಿವೆ.

ಬೆಳಗಾವಿಯಲ್ಲಿ ವಿಧಾನ ಸಭೆ ಅಧಿವೇಶನ

0

ಭಯದ ವಾತಾವರಣದ ಮಧ್ಯೆ ಅಧಿವೇಶನ ಬೇಡ ಎಂಬ ವಿಧಾನಮಂಡಳದ ನೌಕರರ, ಕೆಲ ಮಾಜಿ ಸಚಿವರ, ಶಾಸಕರ ಒತ್ತಡದ ಮಧ್ಯೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನದ ತಯಾರಿ ನಡೆದಿದೆ.
ಈ ಮಧ್ಯೆ ಸರಕಾರ ಕಲಾಪ ನಡೆಸುವ ಸಂಬಂಧ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.
ಇತ್ತೀಚೆಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಡೆದ ಅಶಿಸ್ತಿನ ಘಟನೆಗಳು ವೈಯಕ್ತಿಕವಾಗಿ ನನಗೆ ನೋವು ತಂದಿದೆ. ಈ ಕುರಿತು ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದು ತಿಳಿಸಿದ್ದೇನೆ. ನಮ್ಮ ವರ್ತನೆಯನ್ನು ಲಕ್ಷಾಂತರ ಕಣ್ಣುಗಳು ನೋಡುತ್ತಿರುತ್ತವೆ. ನಡುವಳಿಕೆಯಲ್ಲಿ ನಿಯಮ ಸಭ್ಯತೆ ಮೀರದಂತಿರಬೇಕು. ಅಧಿವೇಶನದಲ್ಲಿ ಶಿಸ್ತು ಉಲ್ಲಂಘಿಸುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದ್ದಾರೆ.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ ಸ್ಪೀಕರ್ ಕಾಗೇರಿ, ಆತಂಕ, ಮುಂಜಾಗ್ರತೆ ಅನುಸರಿಸಿ ಡಿ. 13ರಿಂದ ಅಧಿವೇಶನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಸಂಸ್ಥೆ, ಪರಿಷತ್ ಚುನಾವಣೆ, ಅತಿವೃಷ್ಟಿ, ಕೋವಿಡ್ ನಡುವೆ ಅಧಿವೇಶನ ನಡೆಸಲಾಗುವುದೆಂದು ಇದೀಗ ತಾನೆ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಶ್ರೀ ಅಶೋಕ್ ಅವರು ತಿಳಿಸಿದ್ದಾರೆ.

ವೃದ್ಧಾಪ್ಯದಲ್ಲಿ ತಂದೆತಾಯಿ ಒಟ್ಟಿಗಿರಿ, ಕೋರ್ಟು.ಹಿತನುಡಿ.

0

ನಾನು ಎನ್ನುವ ಅಹಂ ಬಿಟ್ಟು ನಾವು ಎನ್ನುವ ಸಂತೋಷದಿಂದಾಗಿ ಎಲ್ಲರೂ ಒಟ್ಟಾಗಿ ಜೀವನ ನಡೆಸಿ ಎಂದು ಸ್ಥಿರಾಸ್ತಿ ವಿವಾದ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿರುವ ವೃದ್ಧ ತಂದೆ ತಾಯಿ ಮತ್ತು ಮಕ್ಕಳಿಗೆ ಹೈಕೋರ್ಟ್ ಬುದ್ಧಿವಾದ ಹೇಳಿದ ಪ್ರಸಂಗ ನಡೆದಿದೆ.
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಡಿವೈಎಸ್ಪಿ ಹುದ್ದೆಯಿಂದ ನಿವೃತ್ತರಾಗಿರುವ ಅರ್ಜಿದಾರರ ತಂದೆಗೆ ಈಗ 72 ವರ್ಷ. ತಾಯಿಗೆ 62 ವರ್ಷ. ಸಂತ್ರಸ್ತ ತಂದೆ 1987 ಮತ್ತು 1994 ರಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳ ಪೋಲೀಸ್ ಪದಕ ಪಡೆದು ಸೇವೆಯಲ್ಲಿ ಶಹಬ್ಬಾಸ್ ಗಿರಿ ಪಡೆದಿದ್ದವರು.
ಬೆಂಗಳೂರಿನ ವಿಜಯನಗರದ ಚಂದ್ರಾ ಲೇಔಟ್ ನಲ್ಲಿ ಮೂರು ಮಹಡಿಗಳ ಮನೆ ಇದೆ. ಅದನ್ನು ಬಿಟ್ಟು ಕೊಡುವಂತೆ ಮಗ ಕಿರುಕುಳ ನೀಡುತ್ತಿದ್ದಾನೆನ್ನುವುದು ಆರೋಪ. ಅವರು ಹಿರಿಯ ನಾಗರಿಕ ನಿರ್ವಹಣೆ ಮತ್ತು ಕಲ್ಯಾಣ 2007ರ ಕಲಂ 5 ಮತ್ತು 23 ರ ಅನುಸಾರ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ ರಕ್ಷಣೆ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ ಅರೆನ್ಯಾಯಿಕ ನ್ಯಾಯ ಮಂಡಳಿಯ ಅಧಿಕಾರಿ ಕೆ. ರಂಗನಾಥ್, ವೃದ್ಧಾಪ್ಯದಲ್ಲಿರುವ ಪೋಷಕರಿಗೆ ಆಸ್ತಿ ಬಿಟ್ಟುಕೊಡುವಂತೆ ಆದೇಶಿಸಿದ್ದರು. ಮಗ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾನೆ.
ಕೇಸ್ ನ ವಿವರಗಳನ್ನು ಗಮನಿಸಿದರೆ ಅಜ್ಜ ಅಜ್ಜಿಗೆ ಮೊಮ್ಮಕ್ಕಳ ಮೇಲೆ, ಮೊಮ್ಮಕ್ಕಳಿಗೆ ಭಾರೀ ಪ್ರೀತಿ ಇದ್ದಂತೆ ಕಾಣುತ್ತಿದೆ. ಸುಂದರ ಚಳಿಗಾಲದ ಋತುಮಾನದಲ್ಲಿ ಬದುಕನ್ನು ಆಸ್ವಾದಿಸುವುದರ ಬದಲಿಗೆ ಅಹಂಕಾರಗಳ ಗೋಡೆ ಕಟ್ಟಿಕೊಂಡು ಯಾಕೆ ಜಗಳ ಜೀವನ ನಡೆಸುತ್ತಿದ್ದಿರಿ? ಅಪ್ಪ ಮಕ್ಕಳು ಆಸ್ತಿಗಾಗಿ ಜಗಳ ಕಾಯುತ್ತಾ ಕೋರ್ಟ್ ಕಚೇರಿ ಅಲೆಯುವುದು ಎಷ್ಟು ಸೂಕ್ತ? ಕುಳಿತು ಎಲ್ಲರೂ ವಿವಾದ ಬಗೆಹರಿಸಿಕೊಳ್ಳಿ ಎಂದು ನ್ಯಾಯಪೀಠ ಸಲಹೆ ನೀಡಿದೆ.

ಬಳ್ಳಾರಿ : ಮರಳು ಮಾಫಿಯಾ

0

ಬಳ್ಳಾರಿಯಲ್ಲಿ ಒಂದು ದುರ್ಘಟನೆ. ಸಮಾಜದ ಸರ್ವತೋಮುಖ ಏಳಿಗೆಗೆ ಸರ್ಕಾರಿ ಅಧಿಕಾರಿಗಳದ್ದೂ ಕೊಡುಗೆ ಉಂಟು.
ಅಂತಹ ಸಂದರ್ಭಗಳಲ್ಲಿ ಅವರಿಗೆ ಜೀವನ್ಮರಣ ಸವಾಲಾಗುವ ಕ್ಷಣಗಳೂ ಸೃಷ್ಟಿಯಾಗುತ್ತವೆ.
ಇದಕ್ಕೆ ಸಾಕ್ಷಿ ಬಳ್ಳಾರಿಯಲ್ಲಿನ ಘಟನೆ. ಮರಳು, ಕಟ್ಟಡ ಸಾಮಾಗ್ರಿಗಳಲ್ಲಿ ಅತ್ಯಂತ ಅವಶ್ಯಕ. ಇಂತಹ ಮರಳನ್ನು ಅಕ್ರಮವಾಗಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ.
ಸರ್ಕಾರಿ ತನ್ನ ಸಿಬ್ಬಂದಿಗಳ ಮೂಲಕ ಅಂತಹ ಕ್ರಮವನ್ನು ತಡೆಗಟ್ಟಲು ಸೂಕ್ತ ನಿಯಂತ್ರಿಸುತ್ತಿದೆ. ಆದರೆ ಕೆಲವೆಡೆ ಮರಳು ಅಕ್ರಮ ಸಾಗಣೆದಾರರ ಗುಂಪು ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡುತ್ತಿವೆ.
ಇದಕ್ಕೆ ಬಳ್ಳಾರಿಯ ಗ್ರಾಮಲೆಕ್ಕಿಗ ಶ್ರೀವೆಂಕಟಸ್ವಾಮಿಯವರೇ ಸಾಕ್ಷಿ. ದುಷ್ಕರ್ಮಿಗಳು ಅವರ ಮೇಲೆ ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಅವರ ಕುಟುಂಬ ವರ್ಗದವರ ಮೇಲೂ ದಾಳಿ ನಡೆಸಿದ್ದಾರೆ.
ಕಳೆದ ಮಂಗಳವಾರ ಮರಳು ಸಾಗಿಸುವ ಟ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಯಿತು.
ಬಳ್ಳಾರಿಯ ತೋಳಮಾಮಿಡಿ ಗ್ರಾಮದ ವೇದಾವತಿ ನದಿಯಿಂದ ಮರಳನ್ನು ತೆಗೆದು ಅಕ್ರಮ ಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳು ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡಿ, ಟ್ರ್ಯಾಕ್ಟರ್ ವಶಪಡಿಸಿಕೊಂಡರು. ಮಾರನೆಯ ದಿನವೇ ದುಷ್ಕರ್ಮಿಗಳು ಶ್ರೀ ವೆಂಕಟೇಶ್ವರ ಅವರ ಮನೆಗೆ ನುಗ್ಗಿದರು. ಅಧಿಕಾರಿಯ ಪತ್ನಿ ಮತ್ತು ಮಗನ ಮೇಲೆ ರಾಡ್ ಗಳಿಂದ ಹೊಡೆದು ಹಲ್ಲೆ ನಡೆಸಿದರು. ಅಕ್ಕಪಕ್ಕದವರು ಕೂಡಲೇ ಬಂದು ಅವರನ್ನು ರಕ್ಷಿಸಿದ್ದಾರೆ. ಶ್ರೀ ವೆಂಕಟ ಸ್ವಾಮಿ ಮತ್ತು ಅವರ ಕುಟುಂಬದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ನಾಲ್ಕು ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮರಳು ಕಳ್ಳಸಾಗಣೆ ತಪ್ಪಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಮಲಪತ್ತಿ ಮಾಧ್ಯಮ ಕ್ಕೆ ತಿಳಿಸಿದ್ದಾರೆ.