ಇನ್ಮುಂದೆ ಶಿವಮೊಗ್ಗ ಜಿಲ್ಲೆಗೆ ಬರುವ ಮತ್ತು ಹೋಗುವ ಪ್ರತಿಯೊಂದು ವಾಹನದ ಮೇಲೆ ಕ್ಯಾಮರಾ ಕಣ್ಣಿಡಲಿದೆ.
ವೇಗವಾಗಿ ವಾಹನ ಚಲಾಯಿಸುವುದು ಸೇರಿ ಇನ್ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆದಲ್ಲಿ ಅಂಥವುಗಳ ವಿವರವನ್ನು ವಾಹನದ ಸಂಪೂರ್ಣ ವಿವರ ಸಹಿತ ಪೊಲೀಸರು ಪಡೆಯಬಹುದಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಟ್ರಾಫಿಕ್ ನಿಯಮಗಳನ್ನು ಸ್ಮಾರ್ಟ್ ಆಗಿಸುವುದಕ್ಕಾಗಿ ಹಲವು ಯೋಜನೆಗಳನ್ನು ಹೊಂದಲಾಗಿದೆ. ಈಗಾಗಲೇ ಹಲವೆಡೆ ಕ್ಯಾಮೆರಾ ಅಳವಡಿಸಿದ್ದು, ಇವುಗಳ ಮೂಲಕ ನಗರದ ಪ್ರತಿಯೊಂದು ಚಟುವಟಿಕೆಗಳ ಮೇಲೆ ಕಣ್ಣಿಡಬಹುದಾಗಿದೆ. ಜೊತೆಗೆ ಸ್ಮಾರ್ಟ್ ಫೋಲ್ ಗಳನ್ನು ಅಳವಡಿಸಿದ್ದು, ಇದರಲ್ಲಿ ಕ್ಯಾಮೆರಾ, ಪಬ್ಲಿಕ್ ಅನ್ನೌನ್ಸ್ಮೆಂಟ್, ಪರದೆ, ವಾತಾವರಣ ಮೌಲ್ಯಮಾಪನ ಹೀಗೆ ಹಲವು ವ್ಯವಸ್ಥೆಗಳನ್ನು ತಲುಪಿಸಲಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಂಡಿ ಚಿದಾನಂದ್ ವಟಾರೆ ಅವರು ತಿಳಿಸಿದ್ದಾರೆ.
ಈ ವ್ಯವಸ್ಥೆ ಶಿವಮೊಗ್ಗದಲ್ಲಿ ಆರಂಭಿಸುವುದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೋಸ್ಕರ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 41.83 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.
ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿ ಶಿವಮೊಗ್ಗ ನಗರಕ್ಕೆ ಬರುವ ಮತ್ತು ಹೊರಹೋಗುವ 9 ಪಾಯಿಂಟ್ ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವ್ಯವಸ್ಥೆ ರೂಪಿಸಿದ್ದು ಪೊಲೀಸ್ ಇಲಾಖೆಗೆ ಇದರಿಂದ ಭಾರಿ ಪ್ರಯೋಜನವಾಗಲಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಮೈಯೆಲ್ಲ ಕಣ್ಣು.
Date: