Monday, February 16, 2026
Monday, February 16, 2026

ಭಾರತ ಕೀವಿಸ್ ಎರಡನೇ ಟೆಸ್ಟ್: ಮಯಾಂಕ್ ಶತಕದ ಗೌರವ.

Date:

ಭಾರತ ಮತ್ತು ‌ಕೀವಿಸ್ ಎರಡನೇ ಟೆಸ್ಟ್ನ ಮೊದಲನೇ ದಿನದ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಯಿತು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ನಿನ್ನೆ ಊಟದ ವಿರಾಮದ ನಂತರ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿತು. ‌ದಿನಾಂತ್ಯಕ್ಕೆ 70 ಓವರ್ಗಳಲ್ಲಿ 4 ವಿಕೆಟ್ ಪತನಕ್ಕೆ221 ರನ್ ಗಳಿಸಿತು.
ಮೊದಲ ವಿಕೆಟ್ ಜೊತೆಯಾಟದಲ್ಲಿ ಅಂಕಣಕ್ಕಿಳಿದು ಆಡಿದ ಮಯಾಂಕ್ ಮತ್ತು ಶುಭಮನ್ ಗಿಲ್ ,ಉತ್ತಮ ಆರಂಭ ಮಾಡಿದರು. ಇವರು ಜೊತೆಯಾಟದಲ್ಲಿ ತಂಡಕ್ಕೆ 80 ರನ್ಗಳನ್ನು ಸೇರಿಸಿದರು.
ಈ ಹಂತದಲ್ಲಿ ಭಾರತ ತಂಡದ ಇನ್ನಿಂಗ್ಸ್ ಗೆ ಅಜಾಜ್ ಪಟೇಲ್ 73 ರನ್ಗಳಿಗೆ 4 ವಿಕೆಟ್ ಕಬಳಸಿ ಭಾರತ ತಂಡಕ್ಕೆ ಬಲವಾದ ಪೆಟ್ಟುಕೊಟ್ಟರು.
28 ನೇ ಓವರ್ನಲ್ಲಿ ಗಿಲ್ ವಿಕೆಟ್ ಪಡೆದ ಪಟೇಲ್ ತಮ್ಮ ಇನ್ನೊಂದು ಓವರ್ನಲ್ಲಿ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರಿಗೆ ಖಾತೆ ತೆರೆಯಲು ಬಿಡಲಿಲ್ಲ. ಇಬ್ಬರು ಶೂನ್ಯಕ್ಕೆ ಔಟಾದರು. ಯುಡಿಆರ್ ಎಸ್ ‌ನಲ್ಲಿಯೂ ತಮ್ಮ ವಿರುದ್ಧದ ಬಂದ ಎಲ್ಬಿಡಬ್ಲ್ಯು ತೀರ್ಪಿಗೆ ವಿರಾಟ್ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ತವರಿನ ಅಂಗಳದಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡುತ್ತಿರುವ ಶ್ರೇಯಸ್ ಐಯ್ಯರ್ 41 ಎಸೆತಗಳಲ್ಲಿ 18 ರನ್ಗಳನ್ನು ಜೊತೆಗೂಡಿಸಿದರು. ಇಲ್ಲಿಯೂ ಅವರು ಉತ್ತಮ ವಾಗಿ ಬ್ಯಾಟಿಂಗ್ ಮಾಡಿದರು. ಇಬ್ಬರೂ ವಿಕೆಟ್ ಪತನಕ್ಕೆ ತಡೆಯೊಡ್ಡಿದ್ದರು.
119 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಮಯಾಂಕ್ ನಂತರದ ಆಟದಲ್ಲಿ ರನ್ ವೇಗ ಹೆಚ್ಚಿಸಿದರು.
ಪ್ಯಾಡಲ್ ಸ್ವೀಪ್ ಗಳ ಮೂಲಕ ತಮ್ಮ ಸುತ್ತಲೂ ನಿಂತ ಫೀಲ್ಡರ್ ಗಳ ಮಧ್ಯದಿಂದ ಚೆಂಡನ್ನು ಬೌಂಡರಿಗೆ ಕಳಿಸಿದ ಮಯಾಂಕ್ ಆಟ ಮನೋಹರವಾಗಿತ್ತು.
ಯಶಸ್ವಿ ಬೌಲರ್ ಪಟೇಲ್ ಮತ್ತು ಕೈಲ್ ಎಮಿಸನ್ ಅವರಿಗೆ ಮಯಾಂಕ್ ತಕ್ಕ ಪಾಠ ಕಲಿಸಿದರು. ಇನ್ನೊಂದು ಬದಿಯಲ್ಲಿ ಶ್ರೇಯಸ್ ತಮ್ಮ ಗೆಳೆಯನ ಆಟವನ್ನು ಮೆಚ್ಚುಗೆಯಿಂದ ನೋಡುತ್ತಿದ್ದರು.4 ನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದ್ದರು. ಶ್ರೇಯಸ್ ವಿಕೆಟ್ ಗಳಿಸಿದ ಪಟೇಲ್, ಈ ಜೊತೆಯಾಟವನ್ನು ಮುರಿದರು.
ಆದರೆ ಮಯಾಂಕ್ ಯಾರ ಬೌಲಿಂಗಿಗೂ ಎದೆಗುಂದದೆ 229 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಮಯಾಂಕ್ 246 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ನಾಲ್ಕು ಸಿಕ್ಸರ್ ಸಿಡಿಸಿ 120 ರನ್ಗಳನ್ನು ಗಳಿಸಿ ತಂಡಕ್ಕೆ ಕಾಣಿಕೆ ನೀಡಿದರು.
2019 ರ ನವೆಂಬರ್ ನಲ್ಲಿ ದ್ವಿಶತಕ ಬಾರಿಸಿದ ನಂತರ ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಮಯಾಂಕ್. ವಾಂಖೆಡೆ ಕ್ರೀಡಾಂಗಣದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಸರಣಿಯ ಮೊದಲ ಪಂದ್ಯದಲ್ಲಿಯೂ ಅವರು ಹೆಚ್ಚು ರನ್ನು ಗಳಿಸಿರಲಿಲ್ಲ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ಗಾಯಗೊಂಡಿರುವ K.L ರಾಹುಲ್ ತಂಡದಲ್ಲಿ ಇಲ್ಲದ ಕಾರಣಕ್ಕೆ ಸ್ಥಾನ ಪಡೆದಿದ್ದ ಮಯಾಂಕ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು
2 ಅಡಿ ಮುಂದಿಟ್ಟು ಸಿಕ್ಸರ್ ಹೊಡೆತಕ್ಕೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮಯಾಂಕ್ ಆಟಕ್ಕೆ ತಲೆದೂಗಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Navyashree Eeshwaravan Charitable Trust ಒಬ್ಬರ ಪ್ರಾಣವುಳಿಸಿದ ಪುಣ್ಯ ರಕ್ತದಾನದಿಂದ ಬರುತ್ತದೆ- ನವ್ಯಶ್ರೀ ನಾಗೇಶ್

ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ...

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು- ಡಿ.ಎಸ್.ಅರುಣ್

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ...

Shakti scheme ಇನ್ನುಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್

Shakti scheme ʼಶಕ್ತಿʼ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ...