ರಾಜ್ಯದ ಹಲವೆಡೆ ಶುಕ್ರವಾರ ಚಿಕ್ಕಮಗಳೂರು, ಮೈಸೂರು ಜಿಲ್ಲೆ ಸೇರಿದಂತೆ ಬಯಲುಸೀಮೆಯಲ್ಲಿ ಧಾರಾಕಾರ ಮಳೆ ಸುರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ದಂದೂರು, ಕಡೂರು, ಬೀರೂರು ಭಾಗದಲ್ಲಿ ಸುರಿದಂತಹ ಮಳೆಯಿಂದಾಗಿ ಬೆಳೆ ಹಾನಿ ಉಂಟಾಗಿದೆ.
ಈ ಭಾಗಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ ರಾಗಿ ಬೆಳೆ ನೆಲಕಚ್ಚಿವೆ. ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಶಿವನಿ ಕೆರೆ ಇರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ತೊಂದರೆಉಂಟಾಗಿದೆ.
ರಾಮಗಿರಿ, ಗಂಗಸಮುದ್ರ ಕಣವಿ ಹಳ್ಳಿ ಸಿಂಗೇನಹಳ್ಳಿ ಸುತ್ತ -ಮುತ್ತ ಸುರಿದ ಭಾರಿ ಮಳೆಗೆ ಕೆರೆ ಕೋಡಿ ಬಿದ್ದಿದೆ.
ಮೈಸೂರು, ಕೊಡಗು ಮಂಡ್ಯ ಹಾಸನ ಜಿಲ್ಲೆಗಳಲ್ಲೂ ಕೂಡ ಗುಡುಗು ಸಹಿತ ಸುರಿದಂತಹ ವಿಪರೀತ ಮಳೆಯಿಂದಾಗಿ ಕೊಯ್ಲು ಮಾಡಿದ ಭತ್ತ ಕೊಯ್ದು ಹೋಗಿದೆ.
ಅಕಾಲಿಕ ಮಳೆಯು ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.