ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿರುವ ರೈಲು ಟಿಕೆಟ್ ಗಳ ಮೇಲಿನ ರಿಯಾಯಿತಿಗಳನ್ನು ಮರುಸ್ಥಾಪಿಸಲು ಪ್ರಸ್ತುತ ಕಾರ್ಯ ಸಾಧುವಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಈ ಬಗ್ಗೆ ಲಿಖಿತ ಉತ್ತರ ಮಾಹಿತಿ ನೀಡಿದ ಅವರು, ಅಂಗವಿಕಲರು, ರೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ವರ್ಗದ ಪ್ರಯಾಣಿಕರಿಗೆ 2020 ರ ಮಾರ್ಚ್ 20ರಿಂದ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಈ ಸೌಲಭ್ಯದ ಮರುಸ್ಥಾಪನೆಗೆ ಮನವಿಗಳು ಬಂದಿವೆ. ಆದರೆ ಅದು ಕಾರ್ಯಸಾಧುವಲ್ಲ ಎಂದಿದ್ದಾರೆ. ಈ ಮುನ್ನ 54 ವಿಭಾಗಗಳಲ್ಲಿ ರಿಯಾಯಿತಿ ಸೌಲಭ್ಯ ನೀಡಲಾಗುತ್ತಿತ್ತು.
ರೈಲ್ವೆ ವಿಶೇಷ ಸೌಲಭ್ಯ ಸದ್ಯಕ್ಕೆ ಜಾರಿ ಇಲ್ಲ
Date: