ನವೆಂಬರ್ 28 ರಿಂದ ಡಿಸೆಂಬರ್ 1 ರ ನಡುವೆ ಬೆಂಗಳೂರಿಗೆ ಆಗಮಿಸಿದ ದಕ್ಷಿಣ ಆಫ್ರಿಕಾದ ಐವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಅವರ ಇರುವಿಕೆಯ ಬಗ್ಗೆ ಅಧಿಕಾರಿಗಳಿಗೂ ಖಚಿತವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ದೇಶಗಳಿಂದ ಆಗಮಿಸುವವರ ಮೇಲೆ ನಿಗಾ ಇರಿಸಲಾಗಿದೆ. ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಆಫ್ರಿಕಾದ ಪ್ರಯಾಣಿಕರ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ಏಕೆಂದರೆ ಆಫ್ರಿಕನ್ ಪ್ರಯಾಣಿಕರಲ್ಲಿ ಮೊದಲ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿತ್ತು.
ಡಿಸೆಂಬರ್ 1 ರಿಂದ, ದಕ್ಷಿಣ ಆಫ್ರಿಕಾದ ಎಲ್ಲಾ ಪ್ರಯಾಣಿಕರು ಮತ್ತು ಇತರೆ ಓಮಿಕ್ರಾನ ನಿಂದ
ಅಪಾಯದಲ್ಲಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಕಡ್ಡಾಯವಾಗಿ RT-PCR ಪರೀಕ್ಷೆಗೆ ಒಳಪಡಿಸಬೇಕು. ಆದಾಗ್ಯೂ, ಕಳೆದ ಮೂರು ವಾರಗಳಲ್ಲಿ ದಕ್ಷಿಣ ಆಫ್ರಿಕಾದಿಂದ KIA ಗೆ ಆಗಮಿಸಿದ ಪ್ರಯಾಣಿಕರನ್ನು ಅಧಿಕಾರಿಗಳು ಶೋಧಿಸುತ್ತಿದ್ದಾರೆ. ನಗರದಲ್ಲಿ ಓಮಿಕ್ರಾನ್ ಉಪಸ್ಥಿತಿ ವರದಿಯಾದ ನಂತರ, ವೈರಸ್ ಹರಡುವುದನ್ನು ನಿಯಂತ್ರಿಸುವ ಕ್ರಮಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸರಣಿ ಸಭೆಗಳನ್ನು ನಡೆಸಿತು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ಅವರು 10 ರೋಗಿಗಳು ಕಾಣೆಯಾಗಿದ್ದಾರೆ ಎಂದು ಹೇಳಿದರು. ನಮಗೆ ಸಹಕರಿಸದ ಅಂತರಾಷ್ಟ್ರೀಯ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ನನಗೆ ತಿಳಿಸಿದೆ ಎಂದು ಸುಧಾಕರ್ ಹೇಳಿದರು. ಆದರೆ, ಕೇವಲ 5 ಮಂದಿ ಮಾತ್ರ ನಾಪತ್ತೆಯಾಗಿದ್ದಾರೆ ಎಂದು ಬಿಬಿಎಂಪಿ ಅಧಿಕೃತ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಕಳೆದ ಮೂರು ವಾರಗಳಲ್ಲಿ ದಕ್ಷಿಣ ಆಫ್ರಿಕಾದಿಂದ 72 ಜನರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ನಾಗರಿಕ ಸಂಸ್ಥೆಯ ಅಂಕಿಅಂಶಗಳು ತೋರಿಸುತ್ತವೆ. ಅವರಲ್ಲಿ ಮೂವರು ಬೆಂಗಳೂರಿನಲ್ಲಿ ವಸತಿ ವಿಳಾಸಗಳನ್ನು ಒದಗಿಸಿದರೆ, ಇತರ 29 ಪ್ರಯಾಣಿಕರು ನಗರದ ಹೊರಗಿನ ವಿಳಾಸವನ್ನು ಒದಗಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಸಹಕಾರ ಅಗತ್ಯ- ಡಾ.ಸುಧಾಕರ್
ಆಫ್ರಿಕಾ ಮೂಲದ ಸೋಂಕಿತರು; ತನಿಖೆ.
ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಓಮಿಕ್ರಾನ್ ತಳಿಯ ವೈರಸ್ ಪತ್ತೆಯಾದ ದಕ್ಷಿಣ ಆಫ್ರಿಕಾ ಮೂಲದ ವೃದ್ಧರಿಗೆ ನೆಗೆಟಿವ್ ವರದಿ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಪ್ರಯೋಗಾಲಯದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಿದೆ.
ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವೃದ್ದರು ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ನವೆಂಬರ್ 20ರಂದು ಅವರಿಗೆ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಡಪಟ್ಟಿದ್ದರಿಂದ ಆರೋಗ್ಯ ಸಿಬ್ಬಂದಿ ಅವರನ್ನು ಕ್ವಾರಂಟೈನ್ ಮಾಡಿದ್ದರು. ಆದರೆ ನವೆಂಬರ್ 24ರಂದು ಅವರು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು,
ನೆಗೆಟಿವ್ ವರದಿ ನೀಡಿತ್ತು. ಹಾಗಾಗಿ ಅವರು ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿ ನವೆಂಬರ್ 27ರಂದು ದುಬೈಗೆ ತೆರಳಿದ್ದರು. ಇದೀಗ ವ್ಯಕ್ತಿಯ ಜಿನೋಮ್ ಸಿಕ್ವೆನ್ಸಿಂಗ್ ನಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಹಾಗಾಗಿ ವರದಿ ಬಗ್ಗೆ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಪರೀಕ್ಷೆ ಪಲಿತಾಂಶದಲ್ಲಿ ವೈರುಧ್ಯವಿರುವುದರಿಂದ ಹೈ ಗ್ರೌಂಡ್ ಪೋಲಿಸರಿಂದ ತನಿಖೆ ನಡೆಸುವಂತೆ ಸರ್ಕಾರ ಪೊಲೀಸರಿಗೆ ಸೂಚಿಸಿದೆ.
ಮಾನವರಿಗೆ ಮರ್ಕಟನ ಕಾಟ.
ಕರಿಮೂತಿ ಮಂಗ ಒಂದು ಕೆಂಪು ಟ್ಯಾಕ್ಟರ್ ಓಡಿಸುವ ಚಾಲಕರು ಹಾಗೂ ಟ್ಯಾಕ್ಟರ್ ಬಳಿ ಇದ್ದವರ ಮೇಲೆ ದಾಳಿ ಮಾಡುತ್ತಿರುವ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸೊರಬ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಕೆಂಪು ಟ್ರ್ಯಾಕ್ಟರ್ ಕಂಡ ತಕ್ಷಣ ಮಂಗವೊಂದು ದಾಳಿಮಾಡಲು ಯತ್ನಿಸುತ್ತದೆ.
ಇದುವರೆಗೂ ಎರಡು ಗ್ರಾಮಗಳಿಂದ ಸುಮಾರು 25 ಜನ ಮಂಗನ ದಾಳಿಗೆ ಒಳಗಾಗಿದ್ದಾರೆ. ಅಂಜನೇಯನ ಪ್ರತಿರೂಪ ಮಂಗನ ವೇಲು ಜನರಿಗೆ ಪೂಜನೀಯ ಭಾವನೆ ಇದೆ. ಹೀಗಾಗಿ ಮಂಗ ಕಚ್ಚಿ ಗಾಯಗೊಂಡು ಆಸ್ಪತ್ರೆಗಳಲ್ಲಿ ವಾರಗಟ್ಟಲೇ ಚಿಕಿತ್ಸೆ ಪಡೆದಿದ್ದಾರೆ.
ಆದರೆ ವಿನಾ ಮಂಗನಿಗೆ ತೊಂದರೆ ಕೊಟ್ಟಿಲ್ಲ. ಆದರೆ ಭಯಗೊಂಡ ಗ್ರಾಮಸ್ಥರು ಮಂಗನನ್ನು ಹಿಡಿದು ಪ್ರಾಣಿಸಂಗ್ರಹಾಲಯ ಇಲ್ಲವೇ ಅಭಯಾರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅರಣ್ಯ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಕೆಂಪು ಟ್ಯಾಕ್ಟರ್ ಚಾಲನೆ ಯಾದ ಕೂಡಲೇ ಚಾಲಕನ ಮೇಲೆ ಮಂಗ ದಾಳಿಮಾಡಲು ಮುಂದಾಗುತ್ತದೆ. ನನ್ನ ಮೇಲೆ ನಾಲ್ಕು ಬಾರಿ ದಾಳಿ ಮಾಡಿ ಕಚ್ಚಿದೆ. ಯಾರಿಗಾದರೂ ಪ್ರಾಣ ಹಾನಿ ಮಾಡುವ ಮುಂಚಿತವಾಗಿ ದಯಮಾಡಿ ಅರಣ್ಯ ಇಲಾಖೆಯವರು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಮಂಗನ ದಾಳಿಗೆ ಒಳಗಾದ ರುದ್ರೇಶ್ ಪೂಜಾರ್ ಅವರು ಮನವಿ ಮಾಡಿದ್ದಾರೆ.
ಶರಪಂಜರ ಶಿವರಾಂ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ನಿಧನ. ಕೆಲದಿನಗಳ ಹಿಂದೆ ಅಪಘಾತದಲ್ಲಿ ಶಿವರಾಂ ಅವರು ಗಾಯಗೊಂಡಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ಮನೆಯಲ್ಲಿ ಯಾರು ಇಲ್ಲದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೊಸಕೆರೆಹಳ್ಳಿ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಿವರಾಂ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಶಿವರಾಂ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
1938 ರಲ್ಲಿ ಮದ್ರಾಸ್ ಪ್ರಾಂತ್ಯದ ಚೂಡಸಂದ್ರ ಹಳ್ಳಿಯಲ್ಲಿ ಶಿವರಾಂ ಜನಿಸಿದರು. ಗುಬ್ಬಿ ನಾಟಕ ಕಂಪನಿಗೆ ಸೇರಿ ತಮ್ಮ ಬಣ್ಣದ ಬದುಕನ್ನ ಪ್ರಾರಂಭಿಸಿದರು.
ಕನ್ನಡದ ಮೇರು ನಟರಾದ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್, ಅಂಬರೀಶ್ ಅವರೊಂದಿಗೆ ನಟಿಸಿದ್ದರು.
ಅವರು ನಟಿಸಿದ ಶರಪಂಜರ ಚಿತ್ರದ ಅಡಿಗೆಭಟ್ಟನ ಪಾತ್ರ
ಅವರಿಗೆ ಜನಪ್ರಿಯತೆ ತಂದುಕೊಟ್ಟಿತು.
ಅಂದಿನಿಂದ ಶರಪಂಜರ ಶಿವರಾಂ ಎಂದೇ ಖ್ಯಾತರಾಗಿದ್ದರು
ಡಾ.ರಾಜಕುಮಾರ್, ಆರತಿ ನಟಿಸಿದ್ದ ‘ಹೃದಯ ಸಂಗಮ’ ಸಿನಿಮಾವನ್ನು ಶಿವರಾಂ ನಿರ್ದೇಶನ ಮಾಡಿದ್ದರು.
ಶಿವರಾಜ ಅವರು ಕನ್ನಡದಲ್ಲಿ 100ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ.
ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಂದ ಸಂಸ್ಕೃತಿ ಉಳಿವು- ದೊಡ್ಡಣ್ಣ.
ಕನ್ನಡ ಮಾಧ್ಯಮದಲ್ಲಿ ಓದಿದವರಿಂದ ಒಂದಿಷ್ಟು ಸಂಸ್ಕೃತಿ ಉಳಿಯುವ ಸಾಧ್ಯತೆಯಿದೆ. ಇದನ್ನು ಕಾನ್ವೆಂಟ್ ಮಕ್ಕಳಿಂದ ನಿರೀಕ್ಷಿಸಲಾಗದು ಎಂದು ಹಿರಿಯ ಚಿತ್ರನಟ ದೊಡ್ಡಣ್ಣನವರು ಹೇಳಿದ್ದಾರೆ.
ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಕವಿಗಳಾದ ಪಂಪ ,ರನ್ನ ,ಪೊನ್ನ, ಜನ್ನ, ರಾಘವಾಂಕ, ಕುವೆಂಪು ಮತ್ತು ವಚನ ಸಾಹಿತ್ಯಗಳು, ಬೇಂದ್ರೆ ಸಾಹಿತ್ಯ ಇವೆಲ್ಲವೂ ಉಳಿಸಿ ಬೆಳೆಸಬೇಕಿದೆ. ಹಾಗಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೂ ಈ ಬಗ್ಗೆ ಆಸಕ್ತಿ ಮೂಡಿಸಬೇಕು.ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ತಂದೆ ತಾಯಿ ಗುರು ಹಿರಿಯರಿಗೆ ಗೌರವ ನೀಡುತ್ತಾರೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ರೇವಣಸಿದ್ದಯ್ಯ ಮಾತನಾಡಿ, ಪತ್ರಿಕಾಭವನದಲ್ಲಿ ಗ್ರಂಥಾಲಯ ಸ್ಥಾಪನೆಗೆ rs.25000 ಧನಸಹಾಯ ನೀಡುವುದಾಗಿ ಭರವಸೆ ನೀಡಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ .ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇಶದಲ್ಲಿ ಸಂತಾನೋತ್ಪತ್ತಿ ಕುಸಿತ
ದೇಶದಲ್ಲಿ ಸಂತಾನ ಉತ್ಪತ್ತಿ ಫಲವಂತಿಕೆ ಕುಸಿಯುತ್ತಿರುವುದಕ್ಕೆ ಗರ್ಭನಿರೋಧಕಗಳ ಬಳಕೆ ಯಲ್ಲಿ ಹೆಚ್ಚಳ ಕಾರಣ ಎಂದು ಕೇಂದ್ರ ಸರ್ಕಾರದ ಸಮೀಕ್ಷೆಯಿಂದ ತಿಳಿದುಬಂದಿದೆ.
ವಲಸೆ ಕಾರ್ಮಿಕರು ಹೆಚ್ಚಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಗಮನಹರಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಈ ನಿಟ್ಟಿನಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಜನಸಂಖ್ಯೆ ಸ್ಪೋಟ ತಡೆಯಲು ಇದು ಸಹಕಾರಿ ಎಂದು ಅಂತರಾಷ್ಟ್ರೀಯ ಜನಸಂಖ್ಯಾ ವಿಜ್ಞಾನಗಳ ಕೇಂದ್ರದ ನಿರ್ದೇಶಕರಾದ ಪ್ರೊ.ಕೆ.ಜೇಮ್ಸ್ , ಅವರು ತಿಳಿಸಿದ್ದಾರೆ.
5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಫಲವಂತಿಕೆ ಕುಸಿಯುತ್ತಿರುವ ಸಂಗತಿಯನ್ನು ಬಯಲು ಮಾಡಿತ್ತು.ಅದೇ ಸಮೀಕ್ಷೆಯು, ಫಲವಂತಿಕೆ ಕ್ಷೀಣಿಸಲು ಗರ್ಭನಿರೋಧಕಗಳ ಬಳಕೆ ಹೆಚ್ಚಳವೇ ಕಾರಣ ಎಂಬುದನ್ನೂ ಪತ್ತೆ ಮಾಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಗರ್ಭನಿರೋಧಕ (ಮಾತ್ರೆ ಮತ್ತು ಸಾಧನ) ಬಳಕೆ ಶೇ.8.7ರಷ್ಟು ಜಾಸ್ತಿಯಾಗಿದೆ. ಐದು ವರ್ಷಗಳ ಮುನ್ನ ಶೇ.47.8ರಷ್ಟು ಜನರು ಗರ್ಭನಿರೋಧಕಗಳನ್ನು ಬಳಸುತ್ತಿದ್ದರೆ, ಈಗ ಪ್ರಮಾಣ ಶೇಕ.56.5ಕ್ಕೆ ಏರಿಕೆಯಾಗಿದೆ. ಅಂದರೆ ಚಿಕ್ಕ-ಚೊಕ್ಕ ಕುಟುಂಬದತ್ತ ಆಸಕ್ತಿ ತೋರಿಸುತ್ತಿರುವ ಭಾರತೀಯರು, ಹೆಚ್ಚೆಂದರೆ ಎರಡು ಮಕ್ಕಳನ್ನು ಮಾತ್ರ ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಸಮಾಜದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ಕೂಡ ಇದಕ್ಕೆ ಕಾರಣ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಓಮಿಕ್ರಾನ್: ತಡೆಗೆ ಮುಖ್ಯಮಂತ್ರಿ ಸಮಾಲೋಚನೆ
ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ರಾಜ್ಯದಲ್ಲೂ ಲಗ್ಗೆಯಿಟ್ಟ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ.
ವಿವಿಧ ರಾಷ್ಟ್ರಗಳಿಂದ ಇಲ್ಲಿಯವರೆಗೂ ದೇಶಕ್ಕೆ ಆಗಮಿಸಿದ 16 ಸಾವಿರ ಪ್ರಯಾಣಿಕರ ಆರ್ ಟಿ-ಪಿಸಿಆರ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 18 ಪ್ರಯಾಣಿಕರಲ್ಲಿ ಸೋಂಕು ದೃಡಪಟ್ಟಿದೆ. ಇವರ ಸ್ಯಾಂಪಲ್ ಅನ್ನು ಜಿನೋಮ್ ಸಿಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಂಸತ್ತಿಗೆ ತಿಳಿಸಿದ್ದಾರೆ.
ದಿಲ್ಲಿಯಿಂದ ಬೆಂಗಳೂರಿಗೆ ಹಿಂದಿರುಗಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವಥ್ ನಾರಾಯಣ್, ಡಾ.ಕೆ.ಸುಧಾಕರ್, ಆರ್, ಅಶೋಕ್ ಹಾಗೂ ತಜ್ಞ ವೈದ್ಯರು, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ವೈರಸ್ ಹರಡುವಿಕೆ ತಡೆಗೆ ಕ್ರಮ ಜೊತೆಗೆ ಆರೋಗ್ಯ ಮೂಲಸೌಕರ್ಯ, ಚಿಕಿತ್ಸೆಗೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಸೇರಿದಂತೆ ಸಂಭವನೀಯ ಕೋವಿಡ್ 3ನೇ ಅಲೆಗೆ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ವೇಗಪಡೆದ ಜವಾದ್ :ಮಳೆ ಭೀತಿ
ಅಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ‘ಜವಾದ್’ಚಂಡ ಮಾರುತ ಮತ್ತಷ್ಟು ವೇಗ ಪಡೆದಿದೆ. ಶನಿವಾರ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತದ ಪರಿಣಾಮ ದಿಂದ ರಾಜ್ಯದ ಕೆಲ ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತ ಎದುರಿಸಲು ಸಜ್ಜಾಗಿದ್ದು, ರಕ್ಷಣಾ ಕಾರ್ಯಕ್ಕೆ ಎಂಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮತ್ತೆ ಮಳೆ ಆತಂಕ ಎದುರಾಗಿದೆ.
ಕರಾವಳಿ, ಮಲೆನಾಡು ಜಿಲ್ಲೆಗಳು ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 3 ಮತ್ತು 4ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಕೋವಿಡ್ ನಂತೆ ಓಮಿಕ್ರಾನ್ ನನ್ನು ಎದುರಿಸಬಹುದು : ಡಾ.ಸೌಮ್ಯ ಸ್ವಾಮಿನಾಥನ್
ಕೋವಿಡ್ ವೈರಸ್ ನ ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ಹರಡುವುದಕ್ಕಿಂತಲೂ ಮೂರು ಪಟ್ಟು ಹೆಚ್ಚು ತ್ವರಿತವಾಗಿ ಮರು ಸೋಂಕು ಹರಡುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರು ತಿಳಿಸಿದ್ದಾರೆ.
‘ಓಮಿಕ್ರಾನ್ ರೂಪಾಂತರ ತಳಿಯನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮೊದಲೇ ಪತ್ತೆ ಮಾಡಿದ್ದಾರೆ. ಅದೊಂದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲೇ ಓಮಿಕ್ರಾನ್ ವಿಕಾಸವಾಗಿದೆ ಎಂದಲ್ಲ. ಅದು ಬೇರೆ ದೇಶಗಳಲ್ಲಿ ವಿಕಾಸ ವಾಗಿರಬಹುದು. ಬಹುಶಃ ವೈರಾಣು ಸಂರಚನೆ ವಿಶ್ಲೇಷಣೆ ಇಲ್ಲದೆ ಇರುವ ದೇಶಗಳಲ್ಲಿ ಇದು ವಿಕಾಸವಾಗಿರಬಹುದು. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ, ಓಮಿಕ್ರಾನ್ ಮೊದಲು ವಿಕಾಸ ವಾಗಿದ್ದು ಎಲ್ಲಿ ಎಂಬುದು ಪತ್ತೆಯಾಗದೆ ಇರುವ ಸಾಧ್ಯತೆಯೇ ಹೆಚ್ಚು’ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಅಲ್ಲದೆ ‘ಗಾಬರಿಯಾಗುವ ಅಗತ್ಯವಿಲ್ಲ ಹಿಂದೆ ಬೇರೆ ತಳಿಗಳನ್ನು ಎದುರಿಸಿದ ಅನುಭವದ ಆಧಾರದಲ್ಲೇ ಓಮಿಕ್ರಾನ್ ತಡೆಗಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು’ ಎಂದಿದ್ದಾರೆ.
ಕೋವಿಡ್ ತಡೆಗಟ್ಟಲು ನೀಡಲಾಗುತ್ತಿರುವ ಲಸಿಕೆಗಳು ಓಮಿಕ್ರಾನ್ ವಿರುದ್ಧ ಪರಿಣಾಮಕಾರಿಯಲ್ಲ ಎಂಬುದು ದೃಢಪಟ್ಟಿಲ್ಲ. ಅದನ್ನ ಪತ್ತೆಮಾಡುವ ಅಧ್ಯಯನಗಳು ನಡೆಯುತ್ತಿವೆ ಅಧ್ಯಯನಗಳು ಪೂರ್ಣವಾಗಲು ಇನ್ನೂ ಒಂದು ಅಥವಾ ಎರಡು ವಾರ ಬೇಕಾಗಬಹುದು ನಾವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
40-ವರ್ಷ ದಾಟಿದವರಿಗೆ ಬೂಸ್ಟರ್ ಡೋಸ್ ಸಲಹೆ
ಓಮಿಕ್ರಾನ್ ರೂಪಾಂತರಿ ಭಾರತಕ್ಕೆ ಕಾಲಿಟ್ಟ ಬೆನ್ನಲ್ಲೇ 40 ವರ್ಷ ದಾಟಿದವರಿಗೆ ಕೊರೊನಾ ಲಸಿಕೆಯ ಬೂಸ್ಟರ್ ನೀಡುವುದು ಉತ್ತಮ ಎಂದು ಜಿನೋಮ್ ಸೀಕ್ವನ್ಸಿಂಗ್ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೊರೊನಾದ ಡೆಲ್ಟಾ ರೂಪಾಂತರಿ ವಿರುದ್ಧ ದೇಶಗಳು ಕೈಗೊಂಡ ಕ್ರಮಗಳೇ ಒಮಿಕ್ರಾನ್ ವಿರುದ್ಧವೂ ತೆಗೆದುಕೊಳ್ಳಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಒಮಿಕ್ರಾನ್ ಪ್ರಸರಣದಿಂದಾಗಿ ಜಗತ್ತಿನಾದ್ಯಂತ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದ್ದು, ರೂಪಾಂತರಿ ಹೊಸದಾಗಿದ್ದರೂ, ಹೋರಾಟದ ಮಾದರಿ ಅದೇ ಇರಲಿದೆ ಎಂದಿದೆ.
ಎಲ್ಲರಿಗೂ ಲಸಿಕೆ ವಿತರಿಸುವುದು, ಜನ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧಾರಣೆ, ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಸೌಲಭ್ಯ, ಐಸಿಯು ಹಾಸಿಗೆಗಳ ಹೆಚ್ಚಳ ಸೇರಿ ಡೆಲ್ಟಾ ವಿರುದ್ಧ ಕೈಗೊಂಡ ಕ್ರಮಗಳನ್ನು ಮುಂದುವರಿಸುವುದು ಉತ್ತಮ ಎಂದು ಡಬ್ಲ್ಯೂ ಎಚ್ಒ ಪಶ್ಚಿಮ ಪೆಸಿಫಿಕ್ ನ ಪ್ರಾದೇಶಿಕ ನಿರ್ದೇಶಕ ಡಾ.ಟಕೇಶಿ ಕಸಾಯಿ ತಿಳಿಸಿದ್ದಾರೆ.
ಅನಾರೋಗ್ಯಕ್ಕೀಡಾದವರು, ಹಿರಿಯ ನಾಗರಿಕರು ಸೇರಿದಂತೆ ದೇಶದಲ್ಲಿ ಲಸಿಕೆ ಪಡೆಯದವರಿಗೆ ಕ್ಷಿಪ್ರವಾಗಿ ಲಸಿಕೆ ನೀಡಬೇಕು. ಎರಡನೇ ಡೋಸ್ ಪಡೆಯದೇ ಇರುವವರಿಗೂ ಲಸಿಕೆ ನೀಡುವತ್ತ ಗಮನ ಹರಿಸಬೇಕು. ಹಾಗೆಯೇ, 40 ವರ್ಷ ದಾಟಿದವರಿಗೆ ಬೋಸ್ಟರ್ ಡೋಸ್ ನೀಡುವ ಕುರಿತು ಚಿಂತನೆ ನಡೆಸಬೇಕು. ಅವರಿಗೆ ಬೂಸ್ಟರ್ ಡೋಸ್ ನೀಡುವುದೇ ಒಳ್ಳೇದು ಎಂದು ಭಾರತೀಯ ಸಾರ್ಸ್ -ಸಿಒವಿ-2 ಜಿನೋಮಿಕ್ಸ್ ಸೀಕ್ವೆನ್ಸಿಂಗ್ ಕ್ಯಾನ್ಸೋರ್ಷ್ಯಯಂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
