ಕೋವಿಡ್ ಎರಡನೇ ಅಲೆ ಬಳಿಕ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಆಯುಧ ಪೂಜೆಯೆಂದು ತೆರೆಕಾಣಬೇಕಿತ್ತು. ಆದರೆ ಹಲವು ಕಾರಣದಿಂದ ಚಿತ್ರಪ್ರದರ್ಶನ ಗೊಳ್ಳದೆ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು. ವಿಜಯದಶಮಿಯಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಉತ್ತಮ ಪ್ರದರ್ಶನ ಕಾಣುತ್ತಿದೆ.
ಯೋಗ ದಸರಾ : ಹುರುಪಿನ ಆರಂಭ
ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಂದಾಗಿ ಸ್ಥಗಿತಗೊಂಡಿದ್ದ ದಸರಾ ವೈಭವ ಈ ವರ್ಷ ಮತ್ತೆ ಮರುಕರಳಿಸಿದ್ದು ಇಂದು ದಸರಾ ಹಬ್ಬದ ಪ್ರಯುಕ್ತ ಯೋಗ ದಸರಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ಹಾಗೂ ಪ್ರಾಣಯಾಮ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರ ಆಶ್ರಯದಲ್ಲಿ ಯೋಗ ಹಾಗೂ ಯೋಗ ನಡಿಗೆ ,ಚಂಡೆ,ಮದ್ದಳೆ ಹಾಗೂ ಮಲ್ಲಕಂಬ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವ ಮೂಲಕ ಯೋಗ ಮಾಡಲಾಯಿತು. ನಂತರ ಯೋಗ ವಿದ್ಯಾರ್ಥಿಗಳಿಂದ ಟ್ರಾಕ್ಟರ್ ನಲ್ಲಿ ಮಲ್ಲಕಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ,ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಬಾಂಗ್ಲಾ 12 ರ ಘಟ್ಟಕ್ಕೆ ಲಗ್ಗೆ
ಅಲ್ ಅಮೆರತ್ ಒಮನ್ ನಲ್ಲಿ ನಡೆದ. ಟಿ – 20 ವಿಶ್ವಕಪ್ ಟೂರ್ನಿಯು ಪಪುವ ನ್ಯೂಗಿನಿ ಮತ್ತು ಬಾಂಗ್ಲಾದೇಶ ನಡುವೆ ಬಿ.ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವು ನ್ಯೂಗಿನಿ ತಂಡದ ವಿರುದ್ಧ 84 ರನ್ ಗಳ ಮೂಲಕ ಭರ್ಜರಿ ಜಯಗಳಿಸಿ.ಟೂರ್ನಿಯ ಸೂಪರ್ 12 ರ ಘಟ್ಟ ಪ್ರವೇಶಿಸಿದೆ.
ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 182 ರನ್ ಬಾರಿಸಿತು. 182 ರನ್ ಗಳನ್ನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿದ ಪಪುವ ನ್ಯೂಗಿನಿ ತಂಡವು 97 ರನ್ ಗಳಿಗೆ ಆಲೌಟ್ ಆಯಿತು.
ಶಕೀಬ್ ಅಲ್ ಹಸನ್ ಭರ್ಜರಿ ಆಟದಲ್ಲಿ 4 ವಿಕೆಟ್ ಗಳನ್ನು ಪಡೆದು ಮಿಂಚಿ ಬಾಂಗ್ಲಾದೇಶವನ್ನು ಗೆಲುವಿನ ಹಾದಿ ಕಡೆಗೆ ಕರೆದೊಯ್ದರು.ಬಾಂಗ್ಲಾದೇಶವು ಮೊದಲನೇ ಓವರ್ ನಲ್ಲೇ ಆಘಾತ ಕಂಡು. ನಾಯಕ ಮೊಹಮ್ಮದ್ದುಲ್ಲ ಮತ್ತು ಶಕೀಬ್ ಅಲ್ ಹಸನ್ ರವರು ಅಂಕಣಕ್ಕೆ ಇಳಿದರು. ನಾಯಕ ಮೊಹಮ್ಮದ್ದುಲ್ಲ ಭರ್ಜರಿ ಆಟದಿಂದ ಮಿಂಚಿ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಅವರು ಕೊನೆಯ 5 ಓವರ್ ಗಳಲ್ಲಿ 68 ರನ್ ಕಲೆ ಹಾಕುವ ಮೂಲಕ ತಂಡವು ಉತ್ತಮ ಮೊತ್ತ ಗಳಿಸಲು ನೆರವಾದರು.ಹಾಗೆಯೇ ಮೊಹಮ್ಮದ್ದುಲ್ಲ ಮತ್ತು ಶಕೀಬ್ ಜೊತೆಯಾಟದಿಂದಾಗಿ ಬಾಂಗ್ಲಾದೇಶ ಪವರ್ ಪ್ಲೇ ಮುಕ್ತಾಯದ ವೇಳೆ 45 ರನ್ ಗಳಿಸಿ. ಗೆಲುವಿನ ದಡ ಸೇರಿಸಿದರು.
ಲಸಿಕೆ ಸಾಧನೆ, ಇತಿಹಾಸ ಸೃಷ್ಟಿ:
ಭಾರತವು ಶತಕೋಟಿ ಡೋಸ್ ಕೋರೋನಾ ಲಸಿಕೆ ಪೂರೈಸುವ ಮೂಲಕ, ಮಹತ್ತರ ಸಾಧನೆಯನ್ನು ಗೈದಿದೆ. ಭಾರತದಲ್ಲಿ ನೀಡಿರುವ ಲಸಿಕೆಗಳ ಪ್ರಮಾಣ ಇತರೇ ದೇಶಗಳಿಗಿಂತ ಹೆಚ್ಚಾಗಿದೆ.
ಕೇವಲ ಒಂಭತ್ತು ತಿಂಗಳಲ್ಲಿ ಇದು ಭಾರತದ ಬೃಹತ್ ಸಾಧನೆಯೇ ಸರಿ.
ಮಾನ್ಯ ರಾಷ್ಟ್ರಪತಿ ಗಳಾದ ಶ್ರೀ. ರಾಮನಾಥ್ ಕೋವಿಂದ್ ಅವರು “ದೇಶವು ಇಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ದೇಶವು ನೂರು ಕೋಟಿ ಲಸಿಕೆಯನ್ನು ಪೂರೈಸಿದೆ” ಈ ಮೂಲಕ ಭಾರತೀಯರಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯರನ್ನುಉದ್ದೇಶಿಸಿ ಹರ್ಷವನ್ನು, ತಮ್ಮ ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶಿವಮೊಗ್ಗದ ಕೊರೊನ ವಾರಿಯರ್ಸ್ ಗೆ ಸನ್ಮಾನ
ಕೋವಿಡ್ ಬಗೆಗಿನ ಪ್ರಚಾರದ ನಡುವೆಯೂ ನೂರು ಕೋಟಿ ಲಸಿಕೆ ನೀಡಿರುವುದು ದೇಶದ ಸಾಧನೆಯಾಗಿದೆ. ಅನೇಕರು ಇದರ ಬಗ್ಗೆ ಸಲ್ಲದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಪ್ರಧಾನಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸ ತಾವು ಮಾಡಿ ದೇಶದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದ ಆರೋಗ್ಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕೊರೊನ ವಾರಿಯರ್ಸ್ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಗೃಹಸಚಿವ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ರಾಜೇಶ್ ಸುರಗಿಹಳ್ಳಿ, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಟ್ರಂಪ್ ಈಗ “ಟ್ರುಥ್” ಒಡೆಯ
ಹಿಂಸಾತ್ಮಕ ಕ್ಯಾಪಿಟಲ್ ದಂಗೆ ಮತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ ನಿಂದ ನಿಷ್ಕ್ರಿಯಗೊಳಿಸಿದ ನಂತರ ತನ್ನ ಅಂತರ್ಜಾಲದ ಪ್ರಾಬಲ್ಯವನ್ನು ಮರುಪಡೆಯಲು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಸಾಮಾಜಿಕ ಜಾಲತಾಣವನ್ನು ಆರಂಭಿಸುವ ಯೋಜನೆಯನ್ನು ಘೋಷಿಸಿದ್ದಾರೆ.
“Truth social” ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ ಎಂಬ ಮಾಧ್ಯಮ ಸಂಸ್ಥೆ ಜೊತೆಗೆ “ಟ್ರುಥ್” (ಸತ್ಯ) ಎಂಬ ಆಪ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಇದು ಈಗಾಗಲೇ ಆಪಲ್ ನ ಆಫ್ ಸ್ಟೋರ್ ನಲ್ಲಿ ಫ್ರೀ- ಆರ್ಡರ್ ಗೆ ಲಭ್ಯವಿದೆ ಎಂದು ಹೇಳಿದ್ದಾರೆ.
“ನಾವು ಟ್ವಿಟರ್ ನಲ್ಲಿ ತಾಲಿಬಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಇರುವ ಟ್ವಿಟರ್ ನಲ್ಲಿ ಅಮೆರಿಕ ಜನರ ಆಗಿನ ಅಧ್ಯಕ್ಷರಾಗಿದ್ದವರಿಗೆ ಮಾತ್ರ ನಿರ್ಬಂಧ ಹೇರಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ” ಎಂದು ಟ್ರಂಪ್ ಕಿಡಿಕಾರಿದ್ದಾರೆ. ವಿಶ್ವದ ದಿಗ್ಗಜ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಮವಾದ ಪೈಪೋಟಿಯನ್ನು ತಮ್ಮ ಹೊಸ ಆಪ್ ನೀಡುವುದರಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆಕ್ವಿಸಿಷನ್ ಕಾರ್ಪೊರೇಷನ್ ಎಂಬ ಕಂಪನಿಯ ಜೊತೆಗೂಡಿ ಆಪ್ ಅಭಿವೃದ್ಧಿಗೊಳಿಸಲಾಗಿದ್ದು, ಇದು ಸುದ್ದಿ, ಆನ್ಲೈನ್ ಗೇಮ್ಸ್, ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹ ಒದಗಿಸುತ್ತದೆ ಎಂದು ಹೇಳಿದ್ದಾರೆ.ತಾವು ಅಮೇರಿಕಾ ಅಧ್ಯಕ್ಷಗಾದಿಯನ್ನ ಏರುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.
ಈಗಾಗಲೇ ವರ್ಷಾರಂಭದಲ್ಲೇ “From the desk of Donald J Trump ” ಎಂಬ ಬ್ಲಾಗ್ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ.ಬಹಳ ಮಂದಿ ಸಧ್ಯದ ಬೃಹತ್ ಸಾಮಾಜಿಕ ಜಾಲತಾಣ ಸಂಘಟನೆಯ ( Big Tech) ವಿರುದ್ಧ ಸೆಟೆದು ನಿಲ್ಲುವ ಪ್ರಯತ್ನ ಯಾರಾದರೂ ಮಾಡಬಹುದಲ್ಲ ? ಎಂಬ ಪ್ರಶ್ನೆಗೆ ತಾವು ಸಧ್ಯದಲ್ಲೇ ಎದ್ದು ನಿಲ್ಲುವುದಾಗಿ ಹೇಳಿದ್ದಾರೆ.
ತಂತ್ರಜ್ಞಾನವು ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಇಂದಿನ ಜಗತ್ತಿನಲ್ಲಿ ಮಾಧ್ಯಮಗಳಲ್ಲಿ ಆಂತರಿಕ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ವೈಜ್ಞಾನಿಕ ಪ್ರಗತಿಯ ಮುಂಚೂಣಿಯಲ್ಲಿರುವ ಅಮೆರಿಕಾದ ಮಾಜಿ ಅಧ್ಯಕ್ಷರೊಬ್ಬರು ಸಾಮಾಜಿಕ ಜಾಲತಾಣವನ್ನು ಆರಂಭ ಮಾಡಿರುವುದು ಎಲ್ಲರ ಗಮನ ಸೆಳೆಯುವಂತಿದೆ. ಪ್ರಸಕ್ತ ಅವರು ಆರಂಭಿಸಿರುವ “ಟ್ರುಥ್ ಸೋಶಿಯಲ್” ಜಾಲತಾಣ ಹೇಗೆ ಇಡೀ ಜಗತ್ತನ್ನು ವ್ಯಾಪಿಸುತ್ತದೆ ಎಂದು ಕಾದು ನೋಡಬೇಕಿದೆ.
ಅಕಾಲಿಕ ಮಳೆ: ಕೃಷಿಕರಿಗೆ ದೆಹಲಿ ಸರ್ಕಾರದ ಬಂಪರ್ ಪರಿಹಾರ
ಅಕಾಲಿಕ ಮಳೆಯಿಂದಾಗಿ ಬೆಳೆ ನಾಶ ಆಗಿರುವ ರೈತರಿಗೆ ದೆಹಲಿ ಸರ್ಕಾರವು ಪರಿಹಾರ ಘೋಷಣೆ ಮಾಡಿದೆ. ದೆಹಲಿ ಮುಖ್ಯಮಂತ್ರಿ ಶ್ರೀ ಅರವೀಂದ್ ಕೇಜ್ರಿವಾಲ್ ಅವರು ಪ್ರತಿ ಹೆಕ್ಟೇರ್ ಗೆ 50 ಸಾವಿರ ರೂಪಾಯಿಗಳ ಪರಿಹಾರ ಧನ ನೀಡುವುದಾಗಿ ತಿಳಿಸಿದ್ದಾರೆ.
ದೇಶದಲ್ಲಿಯೇ ಇದು ಅತ್ಯಂತ ಹೆಚ್ಚಿನ ಪರಿಹಾರವಾಗಿದೆ. ಇನ್ನಾ 2 ತಿಂಗಳಲ್ಲಿ ರೈತರಿಗೆ ಪರಿಹಾರ ತಲುಪಿಸಲಾಗುವುದು. ಬರುವ 15 ದಿನಗಳಲ್ಲಿ ಬೆಳೆ ನಾಶ ಸಮೀಕ್ಷೆ ಪೂರೈಸಲು ಅಧಿಕಾರಿಗಳಿಗೆ ಆದೇಶಿಸಿ, ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೃಷಿಕರ ತಂಡವು ತಮ್ಮನ್ನು ಬೇಟಿ ಮಾಡಿ ಅಕಾಲಿಕ ಮಳೆಯ ಪರಿಣಾಮವನ್ನು ಗಮನಕ್ಕೆ ತಂಡವು ತಂದಿದೆ. ಚಿಂತಿಸಬೇಡಿರಿ ಎಂದು ಧೈರ್ಯ ತುಂಬಿರುವುದಾಗಿ ಅರವೀಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ದೇಶದ ಇತರ ರಾಜ್ಯಗಳು ಕೇವಲ 8-10 ಸಾವಿರ ರೂಪಾಯಿಗಳ ಪರಿಹಾರ ನೀಡುತ್ತಿದೆ. ತಾವು ನೀಡಿದ ಈ ಪರಿಹಾರದ ಮೊತ್ತವು ಅತ್ಯಂತ ಅಧಿಕ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಿಜೆಪಿ ಪಕ್ಷವು ಪರಿಹಾರ ಮೊತ್ತ ಕಡಿಮೆಯಾಗಿದೆ ಅದನ್ನು ಪ್ರತಿ ಹೆಕ್ಟೇರ್ ಗಿಂತ ಪ್ರತಿ ಎಕರೆಗೆ ಹೆಚ್ಚಿಸಬೇಕು ಹಾಗೂ ಡಿಸೈಲ್, ವಿದ್ಯುತ್, ಕೃಷಿ ಉಪಕರಣಗಳ ಖರೀದಿಯಲ್ಲಿ ರೈತರಿಗೆ ಸಹಾಯಧನ ನೀಡಬೇಕು ಎಂದು ಒತ್ತಾಯ ಮಾಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ.3 ರಷ್ಟು ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಿಳ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೋವಿಡ್-19 ರ ಭೀತಿಯ ನಡುವೆಯೇ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು. ಜನವರಿ 1, 2020 ರಿಂದ ಜುಲೈ1, 2020 ಜನವರಿ 1, 2021ರ ತುಟ್ಟಿಭತ್ಯೆಗಳನ್ನು ಸರ್ಕಾರಿ ನೌಕರರಿಗೆ ನೀಡಿರಲಿಲ್ಲ.
ಕೋವಿಡ್ 19 ರ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಡಿಎ ಮತ್ತು ಡಿಆರ್ ನ ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸಿತ್ತು.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 3 ರಷ್ಟು ತುಟ್ಟಿಭತ್ಯೆ (Dearness allowance -DA) ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೊಸ ಪ್ರಸ್ತಾವವು ಅನುಷ್ಠಾನಕ್ಕೆ ಬಂದ ನಂತರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು ಶೇ.31 ಕ್ಕೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಿದ್ದಾರೆ. 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ್ಮಿ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಕೇಂದ್ರ ಕ್ಯಾಬಿನೆಟ್ ತುಟ್ಟಿಭತ್ಯೆ ಮತ್ತು ಅನ್ಯಾಯ ಪರಿಹಾರವನ್ನು ಶೇಕಡಾ 3 ರಿಂದ 31 ಕ್ಕೆ ಹೆಚ್ಚಿಸಿದೆ ಎಂದು ಹೇಳಿದರು.
ಸಿಹಿಮೊಗ್ಗೆಯಲ್ಲಿ ಸಂತಸದ ದಸರಾ ವೈಭವ
ಶಿವಮೊಗ್ಗದಲ್ಲಿ ನಾಡದೇವಿ ಚಾಮುಂಡೇಶ್ವರಿಯ ವೈಭವದ ರಾಜಬೀದಿ ಮೆರವಣಿಗೆ ಆರಂಭವಾಗಿದೆ. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಮುಂದೆ ನಂದಿ ಕೋಲಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನಿಡಲಾಯಿತು. ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಸದಸ್ಯರು, ಅಧಿಕಾರಿಗಳು ನಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಲಾರಿ ಮೇಲೆ ಅಂಬಾರಿ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಗೆ ಹೂವು ಹಾಕಿ ನಮನ ಸಲ್ಲಿಸಲಾಯಿತು. ಈ ಭಾರಿ ಲಾರಿಯಲ್ಲಿ ನಾಡದೇವಿಯ ಮೆರವಣಿಗೆ ನಡೆಸಲಾಗುತ್ತಿದೆ. ಸಕ್ರೆಬೈಲು ಬಿಡಾರದಿಂದ ಬಂದಿರುವ ಸಾಗರ ಮತ್ತು ಭಾನುಮತಿ ಆನೆಗಳು ಮೆರವಣಿಗೆಯಲ್ಲಿವೆ. ವೈಭವದ ಹೆಚ್ಚಿಸಿದ ಸಾಂಸ್ಕೃತಿಕ ಕಲಾ ತಂಡ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಂಡಿವೆ. ಇವು ಮೆರವಣಿಗೆಯ ವೈಭವ ಹೆಚ್ಚಿಸಿದೆ.
======
► Klive News : http://13.234.19.57/
► Like us on Facebook: https://www.facebook.com/KeelambiMedi…
► Follow us on Instagram: https://www.instagram.com/klive.news/
ಟಿ – 20 ಅಭ್ಯಾಸ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು.
ವಿಶ್ವದಾದ್ಯಂತ ಕೋವಿಡ್ – 19 ಸನ್ನಿವೇಶದ ಪರಿಣಾಮ ನಿಗದಿತ ಕ್ರಿಕೆಟ್ ಟಿ – 20 ವಿಶ್ವಕಪ್ ಪಂದ್ಯ ತಡವಾಗಿದೆ. ಹಾಗಾಗಿ ಮುಂದೆ ನಡೆಯಲಿರುವ. ಟಿ – 20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಭರವಸೆ ಭಾಷ್ಯ ಬರೆದಿದೆ.
ದುಬೈನಲ್ಲಿ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಅರ್ಧಶತಕವನ್ನು ಗಳಿಸಿದರು. ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡವು 9 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 5 ವಿಕೆಟ್ ಗಳಿಗೆ 155 ರನ್ ಗಳಿಸಿತು. ಆಸ್ಟ್ರೇಲಿಯಾ ತಂಡದ 152 ರನ್ ಗಳನ್ನು ಬೆನ್ನತ್ತಿದ ಭಾರತ 17.5 ಓವರ್ ಗಳಲ್ಲಿ 1 ವಿಕೆಟ್ ಗೆ 153ರನ್ ಗಳಿಸಿ ಜಯಗಳಿಸಿದೆ.
ಭಾರತದ ಸ್ಪಿನ್ ಜೋಡಿ ಎಂದೇಹೆಸರುವಾಸಿಯಾಗಿರುವ R.ಅಶ್ವಿನ್ ಮತ್ತು ರವೀಂದ್ರ ಜಡೇಜರವರ ಸ್ಪಿನ್ ಮೋಡಿಗೆ ಆಸ್ಟ್ರೇಲಿಯಾ ತಂಡ ತತ್ತರಿಸಿತು.
ರೋಹಿತ್ ಮತ್ತು K.L.ರಾಹುಲ್. ಮೊದಲ ವಿಕೆಟ್ ಜೊತೆಯಾಟದಲ್ಲಿ 68ರನ್ ಗಳಿಸಿ. ಭಾರತ ತಂಡದ ಗೆಲುವಿಗೆ ಭದ್ರ ಬುನಾಧಿ ಹಾಕಿದರು.
ವಿರಾಟ್ ಕೊಹ್ಲಿಯ ಬದಲು 3ನೇ ಕ್ರಮಾಂತದಲ್ಲಿ ಆಡಿದ ಸೂರ್ಯ ಕುಮಾರ್ ಯಾಧವ್ 38ರನ್ ಗಳಿಸುವ ಮೂಲಕ
ಭರವಸೆ ಮೂಡಿಸಿದರು.ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯ ಕುಮಾರ್ ಜೊತೆಗೂಡಿ ಭಾರತ ತಂಡವನ್ನು ಗೆಲುವಿನ ಧಡ ಸೇರಿಸಿದರು.
