ಉತ್ತರಪ್ರದೇಶದ ಬಲರಾಮ ಪುರದಲ್ಲಿ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು.
ಪ್ರಕೃತಿಯ ಮೇಲಿನ ಒತ್ತಡ ತಗ್ಗಿಸಿ ಸಮೃದ್ಧ ಫಸಲು ಪಡೆಯಲು ಸಹಜಕೃಷಿ ಅತ್ಯುತ್ತಮ ವಿಧಾನವಾಗಿದೆ. ದೇಶದ ರೈತರೆಲ್ಲರೂ ಸಹಜ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಎಂದು ಮೋದಿಜಿ ಅವರು ತಿಳಿಸಿದ್ದಾರೆ.
ಸಹಜ ಕೃಷಿಯಿಂದ ನೀರಿನ ಮಿತ ಬಳಕೆ ಸಾಧ್ಯವಾಗುತ್ತದೆ. ಜೊತೆಗೆ ಉತ್ತಮ ಇಳುವರಿ ಪಡೆಯಬಹುದು. ಕೃಷಿಯಲ್ಲಿನ ವೆಚ್ಚ ಕಡಿಮೆ ಮಾಡಿ ರೈತರ ಆದಾಯ ವೃದ್ಧಿಸಲು ಇದು ಸಹಕಾರಿಯಾಗಲಿದೆ ಎಂದು ಪ್ರಧಾನಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಹಜ ಕೃಷಿ ಅಳವಡಿಕೆ ಮಾದರಿ ಕುರಿತು ಮಾಹಿತಿ ನೀಡುವುದಕ್ಕಾಗಿ ಡಿಸೆಂಬರ್ 16ರಂದು ಕೇಂದ್ರ ಸರ್ಕಾರ ಮೆಗಾ ಕಾರ್ಯಕ್ರಮ ಆಯೋಜಿಸಿದೆ. ನಮ್ಮ ದೇಶದ ಎಲ್ಲಾ ರೈತರು ಇದನ್ನು ವೀಕ್ಷಿಸಬೇಕು. ದೂರದರ್ಶನದಲ್ಲಿ ವೀಕ್ಷಿಸಬಹುದಾಗಿದೆ. ಅಥವಾ ಸಮೀಪದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಹೋಗಿ ವೀಕ್ಷಿಸಬಹುದು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.