ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯು ಪಿಹೆಚ್ಡಿ ಸ್ಕಾಲರ್ಶಿಪ್ ಗೆ ವಯಸ್ಸಿನ ಮಿತಿ ನಿಗದಿಗೊಳಿಸಿದೆ. ಇದರಿಂದ ರಾಜ್ಯದ ಸಾವಿರಾರು ಸಂಶೋಧನಾ ವಿದ್ಯಾರ್ಥಿಗಳು ಫೆಲೋಶಿಪ್ ಅರ್ಜಿ ಸಲ್ಲಿಸಲು ಆಗದೆ ವಂಚಿತರಾಗಿದ್ದಾರೆ.
2021-2022ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣವಧಿ ಪಿ ಹೆಚ್ ಡಿ ಅಧ್ಯಯನಕ್ಕೆ ನೋಂದಣಿ ಮಾಡಿಕೊಂಡಿರುವವರಿಗಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲಾಗಿದೆ. ವಯೋಮಿತಿ ನಿಗದಿ ಮಾಡಿರುವುದರಿಂದ ಸಾವಿರಾರು ಅಭ್ಯರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ.
ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಹೆಚ್ ಡಿ ಮಾಡಲು, ಉನ್ನತ ಶಿಕ್ಷಣ ಪಡೆಯಲು ವಯೋಮಿತಿ ಎಷ್ಟಿರಬೇಕು ಎಂದು ನಿಗದಿ ಮಾಡಿಲ್ಲ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಯೋಮಿತಿ ನಿಗದಿ ಮಾಡಿರುವುದು ಏಕೆ ಎಂಬುದು ಸಂಶೋಧನಾ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮೂಡಿದೆ.
“ವಯೋಮಿತಿಯನ್ನು ಆ ಸರ್ಕಾರವೇ ನಿರ್ಧರಿಸಿದೆ. ಇದನ್ನು ಇಲಾಖೆಯಿಂದ ಬದಲಾವಣೆ ಮಾಡೋಕೆ ಆಗಲ್ಲ. ಸರ್ಕಾರ ಬದಲಿಸುವಂತೆ ಸೂಚನೆ ನೀಡಿದರೆ ಬದಲಾವಣೆ ಮಾಡಲಾಗುವುದು” ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.