Sunday, July 12, 2026
Sunday, July 12, 2026

‘ಪಾರ್ತಿಸುಬ್ಬ’ ಪ್ರಶಸ್ತಿ ಪುರಸ್ಕೃತ ಯಕ್ಷ ಪ್ರತಿಭೆ, ಶ್ರೀಧರ.

Date:

ಹುಟ್ಟೂರಿನಲ್ಲಿ ನನಗೆ ಮಾಡಿದ ಸನ್ಮಾನ ಎಲ್ಲಾ ಸನ್ಮಾನ ಗಳಿಗಿಂತ ದೊಡ್ಡದಾಗಿದೆ. ಅತ್ಯಂತ ಸಂತೋಷವನ್ನು ತಂದಿದೆ. ನಾನು ಬರೆದ ಎಲ್ಲಾ ಬರವಣಿಗೆಯಲ್ಲಿ ಹುಟ್ಟೂರಿನ ಉಲ್ಲೇಖವಿದೆ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕವಿ ಶ್ರೀಧರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನನ್ನ ಬಾಲ್ಯದ ದಿನಗಳು ಅತ್ಯಂತ ಬಡತನದಿಂದ ಕೂಡಿತ್ತು. ನನಗೆ ಯಕ್ಷಗಾನದಲ್ಲಿ ಆಸಕ್ತಿ ಬಾಲ್ಯದಿಂದಲೂ ಇತ್ತು. ಯಕ್ಷಗಾನ ಕಲಿಕೆ ಮತ್ತು ವೀಕ್ಷಣೆಗೆ 20ರಿಂದ 30 ಕಿ. ಮೀ. ದೂರ ನಡೆದುಕೊಂಡು ಹೋಗಬೇಕಾಗಿತ್ತು. ಆದರೆ ಇಂದು ನನ್ನ ಪ್ರಯತ್ನ ಸಾರ್ಥಕ ಎನಿಸುತ್ತಿದೆ. ನಿವೃತ್ತಿ ಜೀವನ ನಡೆಸುತ್ತಿರುವ ನನ್ನ ಸಂಪೂರ್ಣ ಜೀವನವನ್ನು ಯಕ್ಷಗಾನಕ್ಕಾಗಿಯೇ ಮೀಸಲಿಡುತ್ತೇನೆ ಎಂದರು. ಪಾರ್ತಿಸುಬ್ಬ ಪ್ರಶಸ್ತಿ
ಪಡೆದ ಶ್ರೀಧರ್ ಹೇಳಿದ್ದಾರೆ.ಹುಟ್ಟೂರು ನಿಟ್ಟೂರಿನಲ್ಕಿ ಅಭಿಮಾನಿಗಳು ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಖ್ಯಾತ ಭಾಗವತ ಸುಬ್ರಮಣ್ಯ ಧಾರೇಶ್ವರ ಅವರು ಮಾತನಾಡಿ, ಕವಿ ಶ್ರೀಧರ ಅವರು ಬಹುಮುಖ ಪ್ರತಿಭೆ ಉಳ್ಳವರು. ಇವರಿಂದ ನಾನು ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕವಿ ಶ್ರೀಧರ ಅವರ ಜೀವನ, ಯಶೋಗಾಥೆ ಒಳಗೊಂಡ ‘ಯಕ್ಷ ಶ್ರೀಧರ’ ಎಂಬ ಗೌರವಗ್ರಂಥ ಬಿಡುಗಡೆಗೊಳಿಸಿದರು. ಈ ಗೌರವ ಗ್ರಂಥವನ್ನು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಬಿಡುಗಡೆ ಮಾಡಿದರು.

ಈ ಸಮಾರಂಭದಲ್ಲಿ ಯಕ್ಷಗಾನ ಸಂಘಟಕರಾದ ನಾರಾಯಣ ಎಂ. ಹೆಗಡೆ, ಡಾ. ಶಾಂತರಾಮ ಪ್ರಭು, ಶ್ರೀಧರ ಅವರ ಧರ್ಮಪತ್ನಿ ನಟೇಶ್ವರಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...