Wednesday, January 21, 2026
Wednesday, January 21, 2026

ಕೈಗಾರಿಕೆಗಳಿಗೆ ನೂತನ ಆಸ್ತಿ ತೆರಿಗೆ ಮಿತಿ : ಕರಡು ಸಿದ್ಧ

Date:

ರಾಜ್ಯ ಸರ್ಕಾರ ಕೈಗಾರಿಕೆಗಳನ್ನು ಪ್ರತ್ಯೇಕಗೊಳಿಸಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸುವ ವಿಧೇಯಕಕ್ಕೆ ಕರಡು ಸಿದ್ಧಪಡಿಸುತ್ತಿದೆ.

ಪ್ರಸ್ತುತ ರಾಜ್ಯ ಸರ್ಕಾರ ವಾಣಿಜ್ಯ ಕಟ್ಟಡಗಳಿಗೆ ವಿಧಿಸುತ್ತಿರುವ ತೆರಿಗೆಯ ಶೇ.70 ರಷ್ಟು ತೆರಿಗೆಯನ್ನು ಕೈಗಾರಿಕೆ ಮಿತಿಗೊಳಿಸುವ ಹೊಸ ವಿಧೇಯಕಕ್ಕೆ ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆ ನಂತರ ರಾಜ್ಯದಲ್ಲಿ ಜಾರಿಗೆ ಬರಲಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಉತ್ತೇಜನ ದೃಷ್ಟಿಯಿಂದಾಗಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸುವ ವಿಧೇಯಕ ಮಂಡಿಸಲಾಗುತ್ತಿದೆ.

ಈ ಕುರಿತಂತೆ “ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೋವಿಡ್ ನಂತರ ಕೈಗಾರಿಕಾ ಉತ್ತೇಜನಕ್ಕೆ ಹೊಸ ಕಾನೂನು ಅಗತ್ಯವಿತ್ತು. ಹೀಗಾಗಿ ಆಸ್ತಿ ತೆರಿಗೆ ಸಂಬಂಧ ವಿಧೇಯಕ ಮಂಡನೆ ಆಗಲಿದೆ” ಎಂದು ತಿಳಿಸಿದ್ದಾರೆ.

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಕಲಂ 101(2)ರ ಕಾಯ್ದೆಗೆ ತಿದ್ದುಪಡಿ ತಂದು ನೂತನ ತೆರಿಗೆ ನೀತಿಯನ್ನು ಸೇರ್ಪಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಕೈಗಾರಿಕೆಗೆ ಬಳಸುತ್ತಿರುವ ಮತ್ತು ಬಳಸುವ ಉದ್ದೇಶ ಹೊಂದಿರುವ ಸರ್ಕಾರಿ ಕಟ್ಟಡಗಳಿಗೂ ಮೊದಲು ನೀಡಿದ ವಿನಾಯಿತಿಗಳನ್ನು ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.

ಬಿಬಿಎಂಪಿ ಹೊರತುಪಡಿಸಿ ಮಹಾನಗರ ಪಾಲಿಕೆ/ ನಗರಸಭೆ /ಪುರಸಭೆಗಳು ಸೇರಿದಂತೆ ಎಲ್ಲಾ ನಗರಗಳಿಗೆ ಈ ಹೊಸ ಕಾನೂನು ಅನ್ವಯಿಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar ಮನೆರೇಗಾ ಹೆಸರು ಬದಲಿಕೆ ವಿರುದ್ಧ ರಾಜ್ಯದಾದ್ಯಂತ ಪಾದಯಾತ್ರೆ- ಡಿ.ಕೆ.ಶಿವಕುಮಾರ್

D.K. Shivakumar ಕೂಲಿ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ವಿಬಿ ಜಿ...

CM Siddharamaiah ಚಾಲುಕ್ಯರ ಆಡಳಿತ ವೈಖರಿಯಂತೆ ನಮ್ಮ ಸರ್ಕಾರದಿಂದಲೂ ಸರ್ವಧರ್ಮಗಳ ಸಮನ್ವಯತೆ ಪಾಲನೆ- ಸಿದ್ಧರಾಮಯ್ಯ

CM Siddharamaiah ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವ ಅರಿಯುವ ಉದ್ದೇಶವನ್ನು...

B.Y. Raghavendra 4G ಸ್ಯಾಚುರೇಷನ್ ಯೋಜನೆಯಡಿ ನೂತನ BSNL ಟವರ್ ಉದ್ಘಾಟನೆ

B.Y. Raghavendra ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪುರದಾಳು ಗ್ರಾ.ಪಂ.ನ ಚಿತ್ರಶೆಟ್ಟಿಹಳ್ಳಿಯಲ್ಲಿಮಾನ್ಯ...