Tuesday, February 10, 2026
Tuesday, February 10, 2026
Home Blog Page 1810

ಕಿಸಾನ್ ದಿನ ಕೃಷಿಕರನ್ನ ಸ್ಮರಿಸೋಣ

0

ನಮ್ಮ ಭಾರತ ದೇಶದ ಶೇ. 70ರಷ್ಟು ಆದಾಯ ಮೂಲ ಕೃಷಿಯನ್ನೆ ಅವಲಂಬಿತವಾಗಿದೆ.
ರೈತರು ಭಾರತ ದೇಶದ ಬೆನ್ನೆಲುಬಾಗಿ ನಿಂತಿದ್ದಾರೆ. ಇಂದು ನಮ್ಮ ನಾಡು ಮಳೆ ಬೆಳೆ ಗಳನ್ನು ಕಂಡು ಸಮೃದ್ಧ ವಾಗಿರಲು ಈ ರೈತರೇ ಮೂಲಕಾರಣ. ನಮ್ಮದು ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ಆಹಾರ , ತರಕಾರಿಗಳು, ಹಣ್ಣು, ವಿವಿಧ ದವಸ ಧಾನ್ಯಗಳು, ರೈತರ ಕೊಡುಗೆಯಾಗಿದೆ. ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ಹೆಮ್ಮೆಯ ವಿಷಯವೇ ಸರಿ.
ರೈತರಿಗಾಗಿ ನಡೆದ ಅದೆಷ್ಟೋ ಹೋರಾಟಗಳು, ಚಳುವಳಿಗಳು ಇತಿಹಾಸದ ಪುಟಗಳನ್ನು ಸೇರಿವೆ. ಅನ್ನ ಕೊಡುವ ರೈತನನ್ನು ಕೇವಲ ರೈತದಿನದಂದು ನೆನೆಯುವುದು ವಿಪರ್ಯಾಸ. ಶ್ರಮಜೀವಿಗಳಾದ ರೈತರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಇದಕ್ಕಾಗಿಯೇ ನಮ್ಮ ದೇಶದಲ್ಲಿ ಇವರಿಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಡಿಸೆಂಬರ್‌ 23. ಈ ದಿನವನ್ನು ದೇಶದೆಲ್ಲೆಡೆ ರೈತರ ದಿನ ಅಥವಾ ಕಿಸಾನ್‌ ದಿವಸ್‌ ಎಂದು ಆಚರಿಸಲಾಗುತ್ತದೆ.
ಮುಖ್ಯವಾಗಿ ಈ ದಿನವನ್ನು ಆಯ್ಕೆ ಮಾಡಲು ಇನ್ನೊಂದು ಕಾರಣವೂ ಇದೆ. ಈ ದಿನ ಭಾರತದ ಜನಪ್ರಿಯ ರೈತ ಮುಖಂಡ ದಿವಂಗತ ಚೌಧರಿ ಚರಣ್‌ ಸಿಂಗ್‌ ಅವರು ಹುಟ್ಟಿದ ದಿನವೂ ಹೌದು. ಅವರ ಸ್ಮರಣಾರ್ಥವಾಗಿಯೂ ಈ ದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ರೈತರು ಸಮಾಜಕ್ಕಾಗಿ ನೀಡುವ ಅನನ್ಯ ಸೇವೆಯನ್ನು ನೆನಪಿಸಲು ಹಾಗೂ ರೈತರು ಕುರಿತು ಜನಜಾಗೃತಿ ಮೂಡಿಸಲು ಕೃಷಿಕರ ದಿನವನ್ನು ಆಚರಿಸಲಾಗುತ್ತದೆ.
ರೈತರು ಕಷ್ಟದ ಸಮಯದಲ್ಲೂ ಎದೆಗುಂದದೇ , ಮಳೆ ಚಳಿ ಎನ್ನದೇ ಹಗಲು-ರಾತ್ರಿ ಕಷ್ಟಪಡುವ, ಜೀವನದ ನಿರ್ವಹಣೆಯನ್ನು ಮಾಡುವ ಪರಿಯನ್ನು ಜನಸಾಮಾನ್ಯರಿಗೆ ತಿಳಿಸುವ ಸದಾಶಯವನ್ನು ಈ ದಿನ ಒಳಗೊಂಡಿದೆ. ಕನಿಷ್ಠ ವಿದ್ಯಾಭ್ಯಾಸ ಇಲ್ಲದೆ ಇದ್ದರೂ ರೈತರು ಕೃಷಿಯನ್ನೇ ಅವಲಂಬಿಸಿ ನಾಡಿನ ಜನರಿಗೆ ಅನ್ನದಾನವನ್ನು ಮಾಡುತ್ತಿದ್ದಾರೆ. ಅವಶ್ಯಕತೆಗಿಂತಲೂ ತಟ್ಟೆಯ ತುಂಬಾ ಅನ್ನವನ್ನು ಹಾಕಿಸಿಕೊಂಡು ಚೆಲ್ಲುವ ನಮಗೆ ಅನ್ನದ ಬೆಲೆ ತಿಳಿಯುವುದೇ ಇಲ್ಲ. ಆದರೆ, ಒಂದು ತುತ್ತು ಅನ್ನಕ್ಕಾಗಿಯೂ ಪರದಾಡುವ ಜನರು ನಮ್ಮೊಂದಿಗೆ ಇದ್ದಾರೆ.
ಅದರಲ್ಲೂ ಭಾರತದಲ್ಲಿನ ರೈತರ ಕಷ್ಟ ಹೇಳತೀರದು. ಸರ್ಕಾರವೂ ಸಹ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಕೃಷಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಈಗ ಸುಲಭವಾಗಿ ಲಭ್ಯವಿದ್ದರೂ, ಹಲವಾರು ರೈತರು ಆಧುನಿಕ ತಂತ್ರಜ್ಞಾನವನ್ನು ತಮ್ಮ ಕೃಷಿ ಭೂಮಿಯನ್ನು ಅಳವಡಿಸಿಕೊಳ್ಳಲು ಅಶಕ್ತರಾಗಿದ್ದಾರೆ. ಆದರೂ ಸಹ ನಾಡಿನ ಜನತೆಗೆ ಅನ್ನ ನೀಡುವ ಕೆಲಸವನ್ನು ಎಂದಿಗೂ ನಿಲ್ಲಿಸುವುದಿಲ್ಲ.
ಅದೆಷ್ಟೋ ಕೃಷಿಕರು ಕೃಷಿಯನ್ನುಆದಾಯಕ್ಕಾಗಿ ಅಲ್ಲದಿದ್ದರೂ , ನೆಮ್ಮದಿಯ ಬದುಕಿಗಾಗಿ ಕೃಷಿಯನ್ನು ತಮ್ಮ ಬದುಕಿನ ಭಾಗವಾಗಿಯೇ ಸ್ವೀಕರಿಸುತ್ತಾರೆ. ಸರ್ಕಾರವು ರೈತರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಜನಸಾಮಾನ್ಯರು ಹಾಗೂ ಸರ್ಕಾರವು ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು, ಅವರಿಗೆ ಅಗತ್ಯವಿರುವ ಸಾಮಾನ್ಯ ಜ್ಞಾನ, ಕೃಷಿ ಸಂಬಂಧಿತ ತರಬೇತಿಗಳು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ರೈತರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸಲು ಸಾಧ್ಯವಾಗುತ್ತದೆ.
ಇಂದು ನಾವು ನೀರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೆವೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ರೈತರು. ಹಾಗಾಗಿ ನಾವು ಕೇವಲ ರೈತ ದಿನದಂದು ಕೃಷಿಕರಿಗೆ ಗೌರವ ಸೂಚಿಸುವುದಲ್ಲದೆ ಪ್ರತಿದಿನವೂ ಅವರ ಸೇವೆಗಾಗಿ ಅಭಿನಂದನೆಯನ್ನು ಸಲ್ಲಿಸುತ್ತಿರಬೇಕು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅನುವಾದ ಮಾರ್ಗದರ್ಶಿ ಪುಸ್ತಕ ಬಿಡುಗಡೆ

0

ವಿಜಯ ಕರ್ನಾಟಕ ಪತ್ರಿಕೆಯ ಅಂಕಣಕಾರ ಆಚಾರ್ಯ ಅವರು ಬರೆದಿರುವ ‘ಅನುವಾದ ಮಾರ್ಗದರ್ಶಿ’ ಎಂಬ ಪುಸ್ತಕವನ್ನು ಸಿಐಡಿ ಎಸ್ ಪಿ ರವಿ. ಡಿ. ಚನ್ನಣ್ಣನವರ್ ಅವರು ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರವಾಗುವಂತ ಈ ಪುಸ್ತಕದ ಬಗ್ಗೆ ರವಿ. ಡಿ .ಚನ್ನಣ್ಣನವರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ಯಾವುದೇ ರೀತಿಯ ಕೇಂದ್ರ ಸೇವೆಗಳಲ್ಲಿ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಹಾಗೂ ಪಂಜಾಬ್ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ಅಭ್ಯರ್ಥಿಗಳ ಪಾಲು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಮಾಹಿತಿಯ ಕೊರತೆ ಮತ್ತು ಅವುಗಳಿಗೆ ಅಗತ್ಯವಾದ ಸಂಪನ್ಮೂಲಗಳ ಲಭ್ಯತೆ ಇಲ್ಲದಿರುವುದು ಇದಕ್ಕೆ ಕಾರಣ ಎಂದು ರವಿ. ಡಿ. ಚನ್ನಣ್ಣನವರ್ ಅವರು ಹೇಳಿದರು.

ಪಿ. ಆರ್. ಆಚಾರ್ಯ ಅವರು ಬರೆದಿರುವ ಪೊಲೀಸ್ ಇನ್ಸ್ಪೆಕ್ಟರ್ ಪರೀಕ್ಷೆಗಾಗಿ ಕನ್ನಡದಿಂದ ಇಂಗ್ಲೀಷ್ ಗೆ ಅನುವಾದವಾಗಿರುವ, ‘ಅನುವಾದ ಮಾರ್ಗದರ್ಶಿ’ ಎಂಬ ಪುಸ್ತಕವು ಉಪಯುಕ್ತ ಸಂಪನ್ಮೂಲವಾಗಲಿದೆ ಎಂದು ರವಿ .ಡಿ .ಚನ್ನಣ್ಣನವರ್ ಅವರು ಅಭಿಪ್ರಾಯಪಟ್ಟರು.

“ಕೆಪಿಎಸ್ ಸಿ ನಡೆಸುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾಗುವ ಕನ್ನಡದಿಂದ ಇಂಗ್ಲೀಷ್ ಹಾಗೂ ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರವನ್ನು ಹೇಗೆ ಮಾಡಬೇಕೆಂಬುದು ಈ ಪುಸ್ತಕದಲ್ಲಿ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಈ ಪುಸ್ತಕದ ಪಾಠಗಳನ್ನು ಗಮನವಿಟ್ಟು ಅಭ್ಯಾಸ ಮಾಡಿದರೆ 20 ಅಂಕಗಳನ್ನು ಸುಲಭವಾಗಿ ಪಡೆಯಬಹುದು” ಎಂದು ಲೇಖಕ ಆಚಾರ್ಯ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಉಪಸ್ಥಿತರಿದ್ದರು.

ಪಿಎಸ್ಐ ಪರೀಕ್ಷೆಯ ಕನ್ನಡದಿಂದ ಇಂಗ್ಲೀಷ್ ಅನುವಾದ ತರಗತಿಗಳು ಬೆಂಗಳೂರಿನ ವಿಜಯನಗರದ ಎಂಟನೇ ಮುಖ್ಯರಸ್ತೆಯಲ್ಲಿನ ಎಕ್ಸಲೆನ್ಸ್ ಇಂಗ್ಲಿಷ್ ಕ್ಲಾಸ್ ಗಳು ಆರಂಭವಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು, ಹಾಗೂ ಈ ಪುಸ್ತಕವನ್ನು ಕೊಂಡುಕೊಳ್ಳಲು ಇಚ್ಚಿಸುವವರು ಈ ಪುಸ್ತಕವು ಸ್ವಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲಿ ಮತ್ತು https://pracharya.in ನಲ್ಲಿ ದೊರಕಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ತೆರಿಗೆ ವಂಚಿಸಿದ ಚೀನಾ ಮೊಬೈಲ್ ಕಂಪನಿಗಳು

0

ದೇಶದಲ್ಲಿ ಚೀನಾ ಮೂಲದ 3 ಮೊಬೈಲ್ ಕಂಪನಿಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ.

ಒನ್ ಪ್ಲಸ್ , ಒಪ್ಪೊ, ಹಾಗೂ ಶವೋಮಿ ಸಂಸ್ಥೆಗಳು ಭಾರಿ ಪ್ರಮಾಣದ ತೆರಿಗೆ ವಂಚನೆ ಮಾಡಿರುವ ಬಗ್ಗೆ ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು, ಮುಂಬೈ, ದಿಲ್ಲಿ, ಕೋಲ್ಕತಾ ಈ ನಗರಗಳಲ್ಲಿ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶೋಧ ನಡೆಸಿದ್ದಾರೆ.

ಶವೋಮಿ ಮತ್ತು ಓಪೋ ಸಂಸ್ಥೆಗಳ ಹಿರಿಯ ಅಧಿಕಾರಿಗಳ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರತೀಯ ಸಂಶೋಧಕರಿಗೆ ಆಸ್ಟ್ರೇಲಿಯದಲ್ಲಿ ಪೇಟೆಂಟ್

0

ಉಜಿರೆಯ ಎಸ್ ಡಿಎಂ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ನಾರಾಯಣ ಎಸ್. ಹೆಬ್ಬಾರ್ ಅವರು ರಸಾಯನಶಾಸ್ತ್ರದಲ್ಲಿನ ತಮ್ಮ ವಿನೂತನ ಸಂಶೋಧನೆಗಾಗಿ ಆಸ್ಟ್ರೇಲಿಯಾ ಸರ್ಕಾರದಿಂದ ಪೇಟೆಂಟ್ ಪಡೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಹಿಂದೆ 2017ರಲ್ಲಿ ಪೇಟೆಂಟ್ ಮಾನ್ಯತೆಯಿಂದ ವಂಚಿತರಾಗಿದ್ದೆವು. ಹಲವು ಪ್ರಯತ್ನಗಳ ಬಳಿಕ ಈ ಬಾರಿ ಯಶಸ್ಸು ಕಂಡಿರುವುದಕ್ಕೆ ಖುಷಿಯಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆಗಳಲ್ಲಿ ತೊಡಗಿಕೊಂಡು ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುವ ಇರಾದೆ ಇದೆ ಎಂದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಾಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಡಾ. ನಾರಾಯಣ ಎಸ್. ಹೆಬ್ಬಾರ್ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಸಂಶೋಧನೆ ‘ಪ್ರಿಪರೇಶನ್ ಆಫ್ ಸೈಕ್ಲೋಹೆಕ್ಸೆನ್ ಡಿರೈವೇಟಿವ್ ಆಂಡ್ ಆಸ್ ಕೆರೋಸಿನ್ ಇನ್ಹಿಬಿಟರ್ ಫಾರ್ ಮೈಲ್ಡ್ ಸ್ಟೀಲ್’ ಗಾಗಿ ಆಸ್ಟ್ರೇಲಿಯಾ ಸರ್ಕಾರದ ಪೇಟೆಂಟ್ ಪಡೆದುಕೊಂಡಿದ್ದಾರೆ.
ಈ ಸಂಶೋಧನೆಯು ಮೃದು ಉಕ್ಕಿಗೆ ಬಳಸಬಹುದಾದ ತುಕ್ಕು ಪ್ರತಿಬಂಧಕ ಸಂಯುಕ್ತದ ತಯಾರಿಕೆಯ ಕುರಿತಾಗಿದೆ.
ಪ್ರಸ್ತುತ ಪೇಟೆಂಟ್ ಗೌರವ ಪಡೆದುಕೊಂಡ 8 ಸದಸ್ಯರನ್ನೊಳಗೊಂಡ ತಂಡದಲ್ಲಿ ಒಬ್ಬರಾಗಿರುವ ಡಾ. ನಾರಾಯಣ ಹೆಬ್ಬಾರ್ ಅವರು ಕೆಲ ವರ್ಷಗಳಿಂದ ರಾಸಾಯನಶಾಸ್ತ್ರ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಂಶೋಧನೆಯ ಭಾಗವಾಗಿ ಇವರು ತುಕ್ಕಿಗೆ ಸಂಬಂಧಿಸಿದ ಅಧ್ಯಯನಗಳಲ್ಲಿ ಹೆಚ್ಚು ಒಳಗೊಂಡಿದ್ದರು.
ಕಾಲೇಜಿನ ಪ್ರಾಧ್ಯಾಪಕರು ಪೇಟೆಂಟ್ ಪಡೆದುಕೊಂಡಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಪ್ರಸ್ತುತ ಪೇಟೆಂಟ್ ಎಂಟು ವರ್ಷ ಕಾಲಾವಧಿ ಹೊಂದಿರಲಿದ್ದು, ನಿರ್ದಿಷ್ಟ ರಾಯಧನವನ್ನೂ ಒಳಗೊಳ್ಳಲಿದೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಪೇಟೆಂಟ್ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳಲ್ಲಿ ಸಂಶೋಧನ ಕೌಶಲ್ಯ ವೃದ್ಧಿಸಬೇಕು. ಅದಕ್ಕಾಗಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅವಕಾಶಗಳ ಸದ್ಬಳಕೆ ಅಗತ್ಯ. ಉನ್ನತ ಶಿಕ್ಷಣಕ್ಕಷ್ಟೇ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಸೀಮಿತಗೊಳಿಸಬಾರದು. ಸಂಶೋಧನೆ, ಪೇಟೆಂಟ್ ಗಳ ಕಡೆಗೂ ಗಮನಹರಿಸಬೇಕು. ಈ ಸಾಧನೆಗೆ ಎಸ್ ಡಿಎಂ ಕಾಲೇಜಿನ ನೈತಿಕ ಬೆಂಬಲ ಮತ್ತು ಸಹಕಾರ ಬೆನ್ನೆಲುಬಾಗಿದೆ ಎಂದು ನಾರಾಯಣ ಹೆಬ್ಬಾರ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಕೊರೋನ ಸೋಂಕು ಏರಿಕೆ

0

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 97,897 ಜನರಿಗೆ ಪರೀಕ್ಷೆಯನ್ನು ನಡೆಸಲಾಗಿದೆ. 321 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕೊರೋನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 30,03,265 ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 38,299ಕ್ಕೆ ಏರಿಕೆಯಾಗಿದೆ. 253 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೂ ಒಟ್ಟು ಬಿಡುಗಡೆಯಾದ ಅವರ ಸಂಖ್ಯೆ 29,57,799ಕ್ಕೆ ಹೆಚ್ಚಾಗಿದೆ. 7,138 ಸಕ್ರಿಯ ಪ್ರಕರಣಗಳಿವೆ.

ಕೊರೋನಾ ಸೋಂಕಿತರ ಪ್ರಮಾಣ ರಾಜ್ಯದಲ್ಲಿ ಶೇ.0.32 ರಷ್ಟಿದೆ. ಸಾವಿನ ಸಂಖ್ಯೆ ಶೇ.1.24ರಷ್ಟಿದೆ. ಬೆಂಗಳೂರು ನಗರದಲ್ಲಿ 211 ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ 20 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ ಹಾಗೂ 11 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಬೆಳಗಾವಿ ದಕ್ಷಿಣ ಕನ್ನಡ ಕೊಡಗು ಕೋಲಾರ ಜಿಲ್ಲೆಯಲ್ಲಿ ತಲಾ ಒಂದರಂತೆ ಸೋಂಕಿತರು ಮೃತಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಖಾಸಗಿ ಕಂಪನಿಗಳಿಗೆ ಕೈಗಾರಿಕಾ ಭದ್ರತೆ

0

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಸೇರಿದಂತೆ 11 ಖಾಸಗಿ ಕಂಪನಿಗಳಿಗೆ ಸಿಐಎಸ್ಎಫ್ ಭದ್ರತೆಯನ್ನು ಒದಗಿಸಲಾಗಿದೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ಕಂಪನಿಗಳಿಗೆ ಇರುವ ಬೆದರಿಕೆ ಹಾಗೂ ಭದ್ರತೆಯ ವೆಚ್ಚಗಳನ್ನು ಭರಿಸಲು ಕಂಪನಿಗಳ ಆಡಳಿತ ಮಂಡಳಿಗಳ ಬದ್ಧತೆಯನ್ನು ಆಧರಿಸಿ ಸಿಐಎಸ್ಎಫ್ ಸೇವೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಇನ್ಫೋಸಿಸ್ ಸೇರಿದಂತೆ 11 ಖಾಸಗಿ ಕಂಪನಿಗಳಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ವತಿಯಿಂದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಿಬಿಎಸ್ಎಫ್ 1969ರಲ್ಲಿ ಸ್ಥಾಪನೆಯಾಗಿದ್ದು, ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. 1.45 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿದೆ. ಸರ್ಕಾರಿ ಕಟ್ಟಡಗಳು, ವಿಮಾನ ನಿಲ್ದಾಣ, ಮೆಟ್ರೋ ಇತ್ಯಾದಿಗಳಿಗೆ ಭದ್ರತೆ ನೀಡುತ್ತದೆ. ಖಾಸಗಿ ವಲಯದ 11 ಕಂಪನಿಗಳಿಗೆ ಸದ್ಯ ಭದ್ರತೆಯ ಸೇವೆ ಒದಗಿಸುತ್ತಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಇನ್ಫೋಸಿಸ್ ಸೇರಿದಂತೆ 11 ಖಾಸಗಿ ಕಂಪನಿಗಳಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ವತಿಯಿಂದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್, ಬೆಂಗಳೂರು, ಮೈಸೂರು ಮತ್ತು ಪುಣೆಯಲ್ಲಿ ಇನ್ಫೋಸಿಸ್, ಹರಿದ್ವಾರದಲ್ಲಿ ಪತಂಜಲಿ, ಮುಂಬಯಿನಲ್ಲಿ ರಿಲಯನ್ಸ್ ಕಚೇರಿಗೆ ಸಿಐಎಸ್ಎಫ್ ಭದ್ರತೆ ಒದಗಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೊರೋನದಿಂದ ಮುಕ್ತರಾಗೋಣ ವಿಆಸಂ ಮುಖ್ಯಸ್ಥರ ಕರೆ

0

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸ್ವಾಗತಕ್ಕೆ ವಿಶ್ವವೇ ಸಜ್ಜಾಗುತ್ತಿದೆ. ಎರಡು ವರ್ಷಗಳಿಂದ ಕಾಡುತ್ತಿರುವ ಕೊರೋನಾ ಸೋಂಕು, ರೂಪಾಂತರಿ ವೈರಸ್ ಸೃಷ್ಟಿಗೂ ಕಾರಣವಾಗಿದೆ.ಈ ಕೊರೋನಾ ವೈರಸ್ ಸೃಷ್ಟಿಸಿರುವ ಒಂದಲ್ಲ ಒಂದು ಸಮಸ್ಯೆಯಿಂದ ವಿಶ್ವವೇ ಬಳಲುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯಸುಸ್ ಅವರು ಓಮಿಕ್ರಾನ್ ಸೋಂಕಿನಿಂದ ಆತಂಕ ನಿಧಾನವಾಗಿ ಹೆಚ್ಚುತ್ತಿದೆ. ಸಾಂಕ್ರಾಮಿಕ ಅಂತ್ಯಗೊಳಿಸಲು ದಿಟ್ಟತನದ ಸಂಕಲ್ಪಕ್ಕೆ ಕರೆ ನೀಡಿದ್ದಾರೆ.

ಪ್ರತಿ ರಾಷ್ಟ್ರವೂ 2022ರ ಮಧ್ಯ ಅವಧಿಯೊಳಗೆ ತಮ್ಮ ಜನಸಂಖ್ಯೆಯಲ್ಲಿ ಶೇ.70 ರಷ್ಟು ಜನರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯುವಂತೆ ಖಾತರಿಪಡಿಸಿಕೊಳ್ಳಬೇಕು. ಎರಡು ವರ್ಷಗಳಿಂದ ಕೊರೋನಾ ಕರಾಳ ರೂಪದ ನಡುವೆಯೇ ಕ್ರಿಸ್ಮಸ್ ಆಚರಣೆ ನಡೆಸಲಾಗಿದೆ.

ಮುಂಬರುವ ವರ್ಷಾಂತ್ಯಕ್ಕೆ ಕೊರೋನಾದಿಂದ ವಿಶ್ವವನ್ನು ಮುಕ್ತಗೊಳಿಸೋಣ. ಸದ್ಯ, ನಾವು ಸಾಂಕ್ರಾಮಿಕ ರೋಗದ ಕೊನೆಯ ಭಾಗದಲ್ಲಿ ಇದ್ದೇವೆ. ಇದರಿಂದ ಶೀಘ್ರ ಹೊರಬರುವ ಸಂಕಲ್ಪ ಮಾಡೋಣ ಎಂದು ವಿವಿಧ ರಾಷ್ಟ್ರಗಳು ಹಾಗೂ ಅಲ್ಲಿನ ಪ್ರಜೆಗಳಿಗೆ ಹೇಳಿದ್ದಾರೆ.

ದೇಶದಲ್ಲಿ ಈವರೆಗೆ ಒಟ್ಟು 213 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಓಮಿಕ್ರಾನ್ ರೂಪಾಂತರಿ ವೈರಸ್ ಸೋಂಕಿಗೆ ಒಳಗಾದವರಲ್ಲಿ 90 ಜನ ಗುಣಮುಖರಾಗಿದ್ದಾರೆ.ಕರ್ನಾಟಕದಲ್ಲಿ ಈವರೆಗೆ ಒಟ್ಟು 19 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ 24 ಗಂಟೆಯೊಳಗೆ ಕೊರೋನಾ ಸೋಂಕಿತರ ಸಂಖ್ಯೆ 6,317 ರಷ್ಟಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು 78,190 ಎಷ್ಟು ಇವೆ.

ದೇಶದಲ್ಲಿ 200ಕ್ಕೂ ಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಜಿಲ್ಲಾ ಮಟ್ಟದ ಕೈಗೊಳ್ಳಬೇಕಾದ ನೈಟ್ ಕರ್ಫ್ಯೂ, ಕಂಟೈನ್ ಮೆಂಟ್ ವಲಯಗಳ ರಚನೆ ಬಗ್ಗೆಯೂ ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಶಿವಮೊಗ್ಗದಲ್ಲಿ ಆಯುಷ್ ವಿವಿ ವಿಧೇಯಕ ಒಪ್ಪಿಗೆ

0

ಆಯುಷ್ಯ ವಿವಿಯನ್ನು ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಸ್ಥಾಪಿಸಲು ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ 2021ಕ್ಕೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳವಾರ ಅಂಗೀಕಾರ ದೊರೆತಿದೆ.

‘ಪಾಶ್ಚಿಮಾತ್ಯ ದೇಶಗಳು ಕೂಡ ಪಾರಂಪರಿಕ ವೈದ್ಯ ಪದ್ಧತಿಗೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಆಯುಷ್ ವಲಯದ ಪಾರಂಪರಿಕ ಔಷಧ ಹಾಗೂ ಚಿಕಿತ್ಸಾ ಪದ್ಧತಿಗೆ ಇಂದು ವಿಶ್ವದಾದ್ಯಂತ ಬೇಡಿಕೆಯಿದೆ. ಅವುಗಳ ವಿಶ್ವಾಸಾರ್ಹತೆ ಹೆಚ್ಚಿಸುವುದರ ಜೊತೆಗೆ, ಸಂಶೋಧನೆಗೆ ಒತ್ತು ನೀಡಲು ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ವಿಧೇಯಕ ಕುರಿತಂತೆ ವಿವರಿಸಿದರು.

‘ಪ್ರಸ್ತುತ ಅಲೋಪತಿಯಲ್ಲಿ 1.5 ಲಕ್ಷ ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ. ಆಯುಶ್ ನಲ್ಲಿ 42 ಸಾವಿರ ಮಂದಿ ಅಧ್ಯಯನ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೋಲಿನ ಹಳ್ಳಿಯಲ್ಲಿ ವಿವಿ ಸ್ಥಾಪನೆಗಾಗಿ ನೂರು ಎಕರೆ ಜಾಗ ಮಂಜೂರು ಮಾಡಲಾಗಿದೆ. 20 ಕೋಟಿ ರೂ. ಮೀಸಲಿಡಲಾಗಿದೆ’ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

‘ಈ ವಿವಿಯ ಕುಲಪತಿ ಹುದ್ದೆಗೆ ಆಯುಶ್ ನಲ್ಲಿ 25ವರ್ಷ ಬೋಧನೆ ಮಾಡಿದವರನ್ನು ಹಾಗೂ 6 ಸದಸ್ಯರನ್ನು ಕಾರ್ಯಕಾರಿ ಸಮಿತಿ ನೇಮಕ ಮಾಡಲಾಗುತ್ತದೆ’ ಎಂದು ಸಚಿವ ಸುಧಾಕರ್ ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಮೆರಿಕದಲ್ಲಿ ಒಮಿಕ್ರಾನ್ ಹೆಚ್ಚಳ

0

ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಅಮೆರಿಕದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಓಮಿಕ್ರಾನ್ ಗೆ ಮೊದಲ ಸಾವು ದಾಖಲಾಗಿದೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿಯೊಬ್ಬ ರೂಪಾಂತರಿ ವೈರಾಣು ಓಮಿಕ್ರಾನ್ ನಿಂದಾಗಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯು ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದಿರಲಿಲ್ಲ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ದಿನೇ ದಿನೇ ಹೊಸ ರೂಪಾಂತರಿ ಸೋಂಕಿನ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದು, ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಸೋಂಕಿನ ಪರೀಕ್ಷೆಯನ್ನು ಹೆಚ್ಚಿಸಿದೆ.

ಕಳೆದ ಒಂದು ವಾರದಲ್ಲಿ ಓಮಿಕ್ರಾನ್ ಸೋಂಕಿತರ ಪ್ರಮಾಣ ಶೇ.73 ರಷ್ಟು ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಪ್ರೊ ಕಬಡ್ಡಿ ಪಂದ್ಯಾವಳಿ

0

ಕಬಡ್ಡಿ ಎಂಬ ಪದ ಕೇಳುತ್ತಿದ್ದಂತೆ ಯಾರಿಗೆ ರೋಮಾಂಚನವಾಗುವುದಿಲ್ಲ ಹೇಳಿ, ಯುವಕರಿಂದ ಹಿಡಿದು ಮುದುಕರವರೆಗೂ ಆಟದ ಬಗ್ಗೆ ಅಭಿಮಾನ ಮತ್ತು ಆಸಕ್ತಿ ಮೂಡುವುದು ಸರ್ವೇಸಾಮಾನ್ಯ, ಇಂತಹ ಕಬಡ್ಡಿ ಕೇವಲ ಹಳ್ಳಿಗಳಿಗೆ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯ, ರಾಷ್ಟ್ರ, ವಿಶ್ವವ್ಯಾಪಿಯಾಗಿದೆ, ಪ್ರತಿವರ್ಷವೂ ಪ್ರೊ ಕಬಡ್ಡಿ ಲೀಗ್ ಟೂರ್ನಿಯನ್ನು ನಮ್ಮ ದೇಶದಲ್ಲಿ ನಡೆಸಿಕೊಂಡು ಬರುತ್ತಿರುವುದು ಕಬಡ್ಡಿಯ ಜನಪ್ರೀಯತೆಗೆ ಸಾಕ್ಷಿಯಾಗಿದೆ.
ಪ್ರೊ ಕಬಡ್ಡಿ ಲೀಗ್ ಸರಣಿಯ ಎಂಟನೇ ಆವೃತ್ತಿಯ ಟೂರ್ನಿ ಇಂದಿನಿಂದ ಶುಭಾರಂಭವಾಗಲಿದೆ.
8 ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯನ್ನು ವೈಟ್ ಫೀಲ್ಡ್ ನಲ್ಲಿ ಏರ್ಪಡಿಸಲಾಗಿದೆ, ಶೆರಟನ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಬಯೋ ಬಬಲ್ ವ್ಯವಸ್ಥೆಯಲ್ಲಿ ನಡೆಯಲಿದೆ. ಲೀಗ್ ನ ಮೊದಲ ಪಂದ್ಯದಲ್ಲಿ “ಬೆಂಗಳೂರು ಬುಲ್ಸ್” ಮತ್ತು “ಯು ಮುಂಬಾ” ತಂಡಗಳು ಮುಖಾಮುಖಿಯಾಗಲಿದೆ.
ಟೂರ್ನಿಯ ಮೊದಲು 4 ದಿನಗಳು “ಟ್ರಿಪಲ್ ಹೆಡರ್” (ಪ್ರತಿ ದಿನ 3 ಪಂದ್ಯಗಳು) ನಡೆಯಲಿದ್ದು, ಬಳಿಕ ಪ್ರತಿ ಶನಿವಾರ ಮೂರು ಪಂದ್ಯಗಳು ಆಯೋಜನೆಯಾಗಲಿದೆ. ಸೆಮಿಫೈನಲ್ ಮತ್ತು ಫೈನಲ್ ಸೇರಿ ಒಟ್ಟು 137 ಪಂದ್ಯಗಳು ನಡೆಯಲಿದ್ದು, ಸದ್ಯ 66 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಸ್ಪರ್ಧಿಸಲಿವೆ. ಆದರೆ, ಕೋವಿಡ್ ಕಾರಣದಿಂದಾಗಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಪ್ರೇಕ್ಷಕರು ‘T.V’ ಪರದೆಯ ಮೇಲಷ್ಟೇ ಪಂದ್ಯಗಳನ್ನು ವೀಕ್ಷಿಸಿ ಆನಂದಿಸಬಹುದಾಗಿದೆ.
ಮೊದಲಾರ್ಧದ ಪಂದ್ಯಗಳು ಜನವರಿ 20ರವರೆಗೆ ನಡೆಯಲಿವೆ.
ಅನುಭವಿ ಚಂದ್ರನ್ ರಂಜಿತ್ ತಂಡದಲ್ಲಿರುವುದರಿಂದ ಬುಲ್ಸ್ ತಂಡಕ್ಕೆ ಬಲ ವೃದ್ಧಿಸಿದೆ, ಬೆಂಗಳೂರು ಬುಲ್ಸ್ ಗೆ ಈ ಬಾರಿ ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ನಾಯಕನಾಗಿದ್ದು, ಹೊಸ ಹುರುಪಿನೊಂದಿಗೆ ಟೂರ್ನಿಗೆ ಸಜ್ಜಾಗಿದೆ.
ಆಡಿಲಿರುವ ತಂಡಗಳು ಮತ್ತು ತಂಡದ ನಾಯಕರುಗಳು:
‘ಬೆಂಗಳೂರು ಬುಲ್ಸ್’ ತಂಡದ ನಾಯಕ (ಪವನ್ ಶೆರಾವತ್), ‘ಯು ಮುಂಬಾ’ ತಂಡದ ನಾಯಕ (ಮಣಿಂದರ್ ಸಿಂಗ್), ‘ತೆಲುಗು ಟೈಟನ್ಸ್’ ತಂಡದ ನಾಯಕ (ರೋಹಿತ್ ಕುಮಾರ್), ‘ತಮಿಳ್ ವಾರಿಯರ್ಸ್’ ತಂಡದ ನಾಯಕ (ಸರ್ಜೀತ್ ಸಿಂಗ್), ‘ಪಟನಾ ಪೈರೇಟ್ಸ್’ ತಂಡದ ನಾಯಕ (ಪ್ರಶಾಂತ್ ಕುಮಾರ್ ರೈ), ‘ಪುಣೇರಿ ಪಲ್ಟನ್’ ತಂಡದ ನಾಯಕ (ನಿತಿನ್ ತೋಮರ್), ‘ದಬಾಂಗ್ ದಿಲ್ಲಿ’ ತಂಡದ ನಾಯಕ (ಜೋಗಿಂದರ್ ನರ್ವಾಲ್), ‘ಗುಜರಾತ್ ಫಾರ್ಚುನ್ ಜಯಂಟ್ಸ್’ ತಂಡದ ನಾಯಕ (ಸುನಿಲ್ ಕುಮಾರ್), ‘ಹರಿಯಾಣ ಸ್ಟೀಲರ್ಸ್’ ತಂಡದ ನಾಯಕ (ವಿಕಾಸ್ ಖಂಡೋಲ), ‘ಜೈಪುರ್ ಪಿಂಕ್ ಪ್ಯಾಂಥರ್ಸ್’ ತಂಡದ ನಾಯಕ (ದೀಪಕ್ ಹೂಡಾ), ‘ಯು.ಪಿ ಯೋಧಾ’ ತಂಡದ ನಾಯಕ (ನಿತೇಶ್ ಕುಮಾರ್).
ಮೊದಲ ದಿನ ಮೊದಲು ಮೂರು ಪಂದ್ಯಗಳು ನಡೆಯಲಿವೆ.
1.ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ. (ಸಮಯ 7:30)
2. ತೆಲುಗು ಟೈಟನ್ಸ್ ಮತ್ತು ತಮಿಳು ವಾರಿಯರ್ಸ್. (ಸಮಯ 8:30)
3. ಬೆಂಗಲ್ ವಾರಿಯರ್ಸ್ ಮತ್ತು ಯು.ಪಿ ಯೋಧಾ.
(ಸಮಯ 9:30)