ಇಂದಿನ ವಿದ್ಯಮಾನದಲ್ಲಿ ಸಿಗರೇಟ್ ಸೇದುವುದು, ತಂಬಾಕು ಸೇವನೆ, ಮದ್ಯಪಾನ ಸೇವನೆ ಫ್ಯಾಶನ್ ಆಗಿಬಿಟ್ಟಿದೆ.
ಇವುಗಳಿಂದ ಆರೋಗ್ಯಕ್ಕೆ ಹಾನಿ ಉಂಟಾಗಲಿದೆ ಎಂದು ತಿಳಿದರೂ ಸಹ ಈ ಕೆಟ್ಟ ಹವ್ಯಾಸಗಳನ್ನು ಬಿಡುವ ಬಗ್ಗೆ ಯಾರೂ ಯೋಚಿಸುವುದಿಲ್ಲ.
ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗರೂ ಸಹ ಧೂಮಪಾನ , ಮಧ್ಯಪಾನ, ಗುಟ್ಕಾ ಸೇವನೆಯಲ್ಲಿ ತೊಡಗಿದ್ದಾರೆ. ಸಾಂಸಾರಿಕ ಜೀವನದಲ್ಲಿನ ತೊಂದರೆಗಳು, ಹಣಕಾಸಿನ ವಿಚಾರ, ಪ್ರೇಮ ವೈಫಲ್ಯ, ಸೇರಿದಂತೆ ಇನ್ನೂ ಅನೇಕ ಕಾರಣಗಳಿಗೆ ಇವು ಮನಸ್ಸುಗಳು ಈ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ.
ಇನ್ನು ಕಾಲೇಜು ಯುವಕರಂತೂ ಲವ್ ಫೇಲ್ಯೂರ್ ಎನ್ನುವ ಕಾರಣಕ್ಕೆ ನಾನೇನು ಮಾಡ್ಲಿ ಸ್ವಾಮಿ, ಎಣ್ಣೆ ನಮ್ಮ ಪ್ರೇಮಿ ಎಂಬಂತೆ ಮಧ್ಯಪಾನದ ದಾಸರಾಗಿದ್ದಾರೆ.
ಪ್ರತಿಯೊಂದು ದಿನಕ್ಕೊಂದು ವಿಶೇಷ ದಿನವಿರುವಂತೆ ಪ್ರತಿವರ್ಷವೂ ಮೇ 31 ರಂದು ವಿಶ್ವ ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ.
ಈ ದಿನದಂದು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು..
1982ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ತ೦ಬಾಕು ರಹಿತ ದಿನದ ಆಚರಗೆಯ ಬಗ್ಗೆ ಅದಿನೂಚನೆ ಹೊರಡಿಸಿತು.ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿಯಿಂದ ಧೂಮಪಾನ ನಿಷೇಧ ಬಗ್ಗೆ ಚಿಂತನೆಯನ್ನು ಕೈಗೊ೦ಡಿತು. ಧೂಮಪಾನದಿಂದ ಪ್ರತಿ ಪ್ರತಿವರ್ಷ ಪ್ರಪಂಚದಾದ್ಯಂತ ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.
ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ.ಆದ್ದರಿಂದ
ದಾರಿ ತಪ್ಪುತ್ತಿರುವ ಯುವಜನತೆಗೆ ಜಾಗೃತಿ ಮೂಡಿಸಲು ಮತ್ತು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ‘ತಂಬಾಕು ರಹಿತ’ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದಲೇ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ತಂಬಾಕು ರಹಿತದಿನ ಎಂದು ಅರ್ಥಪೂರ್ಣವಾಗಿ ಮೇ 31 ನ್ನು ಜಗತ್ತಿನಾದ್ಯಂತ 1987 ನೇ ವರ್ಷದಿಂದ, ಆಚರಿಸುತ್ತಾ ಬಂದಿದೆ.
ಧೂಮಪಾನ, ತಂಬಾಕು, ಸಿಗರೇಟ್ ಮತ್ತು ಬೀಡಿಯಂತಹ ವಸ್ತುಗಳು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುತ್ತವೆ.
ತಂಬಾಕಿನಲ್ಲಿ ಇರುವ ಹಾನಿಕಾರಕ ವಸ್ತುಗಳು ಶ್ವಾಸಕೋಶದ ಮೂಲಕ ಹಾದುಹೋಗುವುದರಿಂದ ಶ್ವಾಸಕೋಶದ ನಾಳಗಳು ಶುಷ್ಕತೆ ಹಾಗೂ ಹಾನಿಯನ್ನು ಉಂಟುಮಾಡುತ್ತವೆ.
ಧೂಮಪಾನ ತ್ಯಜಿಸುವುದರಿಂದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಬಹುದು. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಯನ್ನು ತಡೆಯಬಹುದಾಗಿದೆ.