ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಪ್ರಮುಖವಾದ ಘಟ್ಟ. ಕೆಲವೊಂದು ಸಮಯದಲ್ಲಿ ಈ ಅಮೂಲ್ಯವಾದ
ಸಂಬಂಧ ಮುರಿದು ಬಿದ್ದು ವಿಚ್ಛೇದನಕ್ಕೂ ಕೂಡ ತಲುಪುತ್ತದೆ. ಗಂಡ-ಹೆಂಡತಿಯರಲ್ಲಿ ಮನಸ್ತಾಪ ಗಳಿದ್ದು, ಪರಸ್ಪರ ಅರ್ಥಮಾಡಿಕೊಳ್ಳದೆ ಇದ್ದರೆ ವಿಚ್ಛೇದನ ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಚಿಕ್ಕ ಚಿಕ್ಕ ಕಾರಣಗಳಿಂದಲೂ ಸಹ ಒಂದು ಉತ್ತಮವಾದ ಸಂಬಂಧ ಬೇರ್ಪಡುತ್ತದೆ.
ಹೌದು, ಸಣ್ಣಪುಟ್ಟ ಕಾರಣಗಳಿಂದಲೂ ವಿಚ್ಛೇದನ ವಾಗುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಬರೀ ವಿಚ್ಛೇದನ ಮಾತ್ರವಲ್ಲದೆ, ವಿವಾಹ ನಿಶ್ಚಿತವಾಗಿ ಇನ್ನೇನು ವಿವಾಹವಾಗಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು ಬಿದ್ದ ಘಟನೆಗಳನ್ನು ಅದೆಷ್ಟು ಪ್ರಸಂಗಗಳನ್ನು ಕೇಳಿರುತ್ತೇವೆ.
ಒಬ್ಬಳು ತನ್ನ ವಿವಾಹದಲ್ಲಿ ಫೋಟೋಗ್ರಾಫರ್ ಇಲ್ಲವೆಂದು ವಿವಾಹವೇ ಬೇಡ ಎಂದು ಮದುವೆ ಮಂಟಪದಿಂದ ಹೋರಟ ಘಟನೆ ಮೊನ್ನೆಯಷ್ಟೇ ನಡೆದಿದೆ. ಅದೇ ರೀತಿ ವಿವಾಹವಾಗಿ ತಮ್ಮ ಸಾಂಸಾರಿಕ ಜೀವನವನ್ನು ನಡೆಸಬೇಕಾದರೆ ಹೆಂಡತಿಗೆ ಅಡುಗೆ ಬರುವುದಿಲ್ಲವೆಂದು, ಮೂರು ಹೊತ್ತು ಮ್ಯಾಗಿ ಮಾಡುತ್ತಾಳೆಂದು ಇಲ್ಲೊಬ್ಬ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ.
ಪ್ರಪಂಚದಲ್ಲಿ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇವು ಒಂದು ಚಿಕ್ಕ ಉದಾಹರಣೆಗಳು. ಮನುಷ್ಯನ ಜೀವನದಲ್ಲಿ ಸಣ್ಣ ಸಣ್ಣ ಕಾರಣಗಳು ಕೂಡ ಅನೇಕ ಸಂಬಂಧಗಳನ್ನು ಒಂದು ಮಾಡುತ್ತದೆ. ಅದೇ ರೀತಿ ಚಿಕ್ಕಚಿಕ್ಕ ಕಾರಣಗಳು ಕೂಡ ಉತ್ತಮವಾದ ಸಂಬಂಧಗಳನ್ನು ಬೇರ್ಪಡಿಸಬಹುದು ಎಂಬುದಕ್ಕೆ ಇದು ಉದಾಹರಣೆ.
ಸಣ್ಣಪುಟ್ಟ ಕಾರಣಗಳನ್ನೇ ದೊಡ್ಡದು ಮಾಡಿಕೊಂಡರೆ ಮುಂದೆ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನ ಎದುರಿಸುವ ಆತ್ಮವಿಶ್ವಾಸವೇ ಇರುವುದಿಲ್ಲ. ಆದ್ದರಿಂದ ಯಃಕಶ್ಚಿತ್ ಸಮಸ್ಯೆಗಳಿಗೆ ಪರಿಹಾರವನ್ನ ನಾವು ಬೆಳೆಯುತ್ತಲೇ ಕಂಡುಹಿಡಿಯುವ ರೂಢಿ ಮಾಡಿಕೊಳ್ಳಬೇಕು.
ಸಣ್ಣ ಸಮಸ್ಯೆಗೆ ಉತ್ತರ ಕಂಡುಕೊಂಡವರಿಗೆ ಮುಂದೆ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಸುಲಭಸಾಧ್ಯ ಉಪಾಯ ಹೊಳೆಯುತ್ತದೆ.