Tuesday, February 10, 2026
Tuesday, February 10, 2026
Home Blog Page 1811

ತಾಳೆಎಣ್ಣೆ ದರ ಇಳಿಕೆಯತ್ತ

0

ಕೇಂದ್ರ ಸರ್ಕಾರ ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಆಮದು ತೆರಿಗೆಯನ್ನು ಶೇ.17.5ರಿಂದ 12.5ಕ್ಕೆ ಇಳಿಕೆಯಾಗಿದೆ. ಇದರಿಂದ ತಾಳೆ ಎಣ್ಣೆಯ ರಿಟೇಲ್ ದರ ಕೂಡ ಇಳಿಕೆಯಾಗಿದೆ.

ಭಾರತ ವಿಶ್ವದ ಅತಿ ದೊಡ್ಡದಾದ ಖಾದ್ಯ ಖರೀದಿದಾರ ಎನಿಸಿಕೊಂಡಿದೆ. ದೇಶದಲ್ಲಿ ದಾಖಲೆಯ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಆಮದು ತೆರಿಗೆ ಕಡಿತದಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇಷ್ಟಲ್ಲದೇ, ಭಾರತೀಯ ಖರೀದಿದಾರರು ಕಚ್ಚಾತಾಳೆ ಎಣ್ಣೆ, ಸಂಸ್ಕರಿಸಿದ ತಾಳೆ ಎಣ್ಣೆ ಹೆಚ್ಚು ಆಕರ್ಷಿತರಾಗಿದ್ದಾರೆ. ಇದರಿಂದ ಮಲೇಷ್ಯಾ ಹಾಗೂ ಇಂಡೋನೇಷ್ಯ ದಿಂದ ಸಂಸ್ಕರಿಸಿದ ಖಾದ್ಯ ತೈಲ ಸಾಗಣೆ ಹೆಚ್ಚಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ತೆರಿಗೆ ಕಡಿತದ ನಂತರ, ಸಂಸ್ಕರಿಸಿದ ತಾಳೆ ಎಣ್ಣೆ ಆಮದುಗಳು ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ ಮತ್ತು ಇತರ ತೆರಿಗೆಗಳನ್ನು ಒಳಗೊಂಡಂತೆ ಒಟ್ಟಾರೆ ಶೇ.13.75ರ ತೆರಿಗೆಗೆ ಒಳಪಟ್ಟಿರುತ್ತವೆ. ಇದು ಹಿಂದಿನ ಶೇ.19.25ರ ತೆರಿಗೆಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಖಾದ್ಯ ತೈಲ ದರದಲ್ಲಿ ಮುಂದೆ ಬರುವ ದಿನಗಳಲ್ಲಿ ಮೂರ್ನಾಲ್ಕು ರೂಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮಂಡಳಿ ಎಸ್ಇಎ ತಿಳಿಸಿದೆ.

ಕಳೆದ ಒಂದು ತಿಂಗಳಿನಲ್ಲಿ ಖಾದ್ಯ ತೈಲ ದರದಲ್ಲಿ ಪ್ರತಿ ಕೆ.ಜಿ.ಗೆ 8 ರಿಂದ 10 ರೂಪಾಯಿ ಇಳಿಕೆಯಾಗಿತ್ತು. ಮುಂದೆ ಬರುವ ದಿನಗಳಲ್ಲಿ ಸ್ಥಳೀಯ ಹಾಗೂ ಜಾಗತಿಕ ಮಟ್ಟದಲ್ಲಿ ತೈಲ ಬೀಜಗಳ ಉತ್ಪಾದನೆ ಹೆಚ್ಚಾಗಲಿದೆ. ತೈಲ ದರ ಕೂಡ ಕಡಿಮೆಯಾಗಲಿದೆ.

120 ಲಕ್ಷ ಟನ್ ಸೋಯಾಬೀನ್ ನಿರೀಕ್ಷಿಸಲಾಗಿದೆ. 80 ಲಕ್ಷ ಟನ್ನಿಗಿಂತಲೂ ಅಧಿಕ ನೆಲಗಡಲೆ ಬೆಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 8 ರಿಂದ 10 ರೂ. ರಷ್ಟು ಕಡಿಮೆಯಾಗಿದೆ.

ಗ್ರಾಹಕ ವ್ಯವಹಾರ ಸಚಿವಾಲಯದಲ್ಲಿ ಕಾರ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಗೆ 130 ರೂಪಾಯಿ, ನೆಲಗಡಲೆ ಖಾದ್ಯಕ್ಕೆ ಎಣ್ಣೆ ಪ್ರತಿ ಕೆಜಿಗೆ 181.48 ರೂಪಾಯಿ, ಹಾಗೂ ಸಾಸಿವೆ ಎಣ್ಣೆಗೆ 187 ರೂಪಾಯಿ, ವನಸ್ಪತಿ ಎಣ್ಣೆ 138 ರೂ, ಸೋಯಾಬೀನ್ ಎಣ್ಣೆಗೆ 150 ರೂ, ಸೂರ್ಯಕಾಂತಿ ಎಣ್ಣೆಗೆ 163 ರೂಪಾಯಿ ದರ ಇದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮಂಗಳಮುಖಿಯರಿಗೆ ಫೊಲೀಸ್ ಹುದ್ದೆ ಅವಕಾಶ

0

ಕರ್ನಾಟಕ ಪೊಲೀಸ್ ಇಲಾಖೆ ಮೊದಲ ಬಾರಿಗೆ ಕೆಎಸ್ ಆರ್ ಪಿ ಹಾಗೂ ಐಆರ್ ಬಿನ ವಿಶೇಷ ಮೀಸಲು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಮಂಗಳಮುಖಿಯರಿಗೆ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ಮಂಗಳಮುಖಿಯರು ಸಮಾಜದಲ್ಲಿ ಘನತೆ, ಗೌರವ ಹಾಗೂ ಸ್ವಾಭಿಮಾನದಿಂದ ಬದುಕಬೇಕು ಎಂಬುದು ನಮ್ಮ ಆಶಯ. ನನ್ನ ಅವಧಿಯಲ್ಲಿ ಜಾರಿ ಬಂದಿದೆ ಎನ್ನುವುದಕ್ಕಿಂತ ಸ್ವತಹ ಸಿಎಂ ಹಾಗೂ ಗೃಹಮಂತ್ರಿ ಅವರಿಗೂ ಶ್ರೇಯಸ್ಸು ಸಲ್ಲಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚಿಸಿದ್ದಾರೆ.

ಕೆಎಸ್ ಆರ್ ಪಿ ಮತ್ತು ಐಆರ್ ಬಿ ಯ ವಿಶೇಷ ಮೀಸಲು ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಪುರುಷ, ಮಹಿಳೆ ಹಾಗೂ ಮಂಗಳಮುಖಿಯರು ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆಯ ಪ್ರತಿ ವಿಭಾಗದಲ್ಲಿಯೂ ಮಂಗಳಮುಖಿಯರಿಗೆ ಶೇ.1 ರಷ್ಟು ಸಮತಲ ಮೀಸಲಾತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬಹುದಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿರುವ ಅಧಿಸೂಚನೆ ಪ್ರಕಾರ 70 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಇದರಲ್ಲಿ ಐದು ಹುದ್ದೆಗಳಿಗೆ ಮಂಗಳಮುಖಿಯರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 12 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತದೆ. ಜನವರಿ 18ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಯಾವುದೇ ಸಹಾಯ ಅಥವಾ ಸೃಷ್ಟಿ ಕರಣಕ್ಕಾಗಿ ದೂರವಾಣಿ ಸಂಖ್ಯೆ 080-22943346ಗೆ ಕರೆ ಮಾಡಬಹುದಾಗಿದೆ.

ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಅಪರಾಧ ಸ್ಥಳಪರಿಶೀಲನೆ ಅಧಿಕಾರಿ 206 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಈ ಪೈಕಿ ಮೂರು ಹುದ್ದೆಗಳಿಗೆ ಮಂಗಳಮುಖಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಕಾಂಕ್ಷಿಗಳು ಜನವರಿ 15ರ ವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಚ್ಚಿಸುವ ಮಂಗಳಮುಖಿಯರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ತೃತೀಯ ಲಿಂಗಿ ಎಂಬ ಪ್ರಮಾಣಪತ್ರ ಪಡೆದಿರಬೇಕು. ಈ ಪ್ರಮಾಣ ಪತ್ರ ಹೊಂದಿಲ್ಲದೆ ಇದ್ದಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನಾ.ಡಿಸೋಜಾ ಸಾಹಿತ್ಯೋತ್ಸವ

0

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಫೆಬ್ರವರಿ ಎರಡನೇ ವಾರ ನಾ. ಡಿಸೋಜ ಸಾಹಿತ್ಯೋತ್ಸವ, ರಾಷ್ಟ್ರೀಯ ವಿಚಾರಸಂಕಿರಣದ ಅಂಗವಾಗಿ ಡಿಸೋಜ ಅವರ ಬದುಕು, ಸಾಹಿತ್ಯ, ಹೋರಾಟಗಳ ಕುರಿತು ಸಂಶೋಧಕರು, ವಿಮರ್ಶಕರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.

ನಾಡಿನ ಸಂವೇದನಶೀಲ ಕಾದಂಬರಿಕಾರ, ಕನ್ನಡದ ಸಾಕ್ಷಿಪ್ರಜ್ಞೆಯ ಪ್ರತೀಕ, ಮುಳುಗಡೆ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ ಸಮಾಜಮುಖಿ ಚಿಂತಕ ಡಿಸೋಜ ಅವರಿಗೆ 85ನೇ ವರ್ಷ ತುಂಬುತ್ತಿರುವ ಸಮಯದಲ್ಲಿ ಅವರ ಬರಹ ಪ್ರತಿಬಿಂಬಿಸುವ ಈ ಸಾಹಿತ್ಯೋತ್ಸವ ವನ್ನು ಶಿಕಾರಿಪುರದ ಜನಸ್ಪಂದನ ಟ್ರಸ್ಟ್, ಸುದ್ದಿ ಪಬ್ಲಿಕೇಶನ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎನ್. ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾ. ಡಿಸೋಜ ಈಗಿನವರೆಗೂ ಬರೆದಿರುವ ಕಾದಂಬರಿಗಳ ಸಮಗ್ರ ಸಂಪುಟ ನಾಡಿಮಿಡಿತ ಬಿಡುಗಡೆ ಮಾಡಲಾಗುತ್ತದೆ. ಒಂಬತ್ತು ಸಂಪುಟಗಳು, 5,902 ಪುಟಗಳುಳ್ಳ 44 ಕಾದಂಬರಿಗಳಿವೆ. ಈ ಪುಸ್ತಕದ ಬೆಲೆಯು 5,885 ರೂಪಾಯಿ. ಮೊದಲು ಓದುಗರಿಗೆ ರಿಯಾಯಿತಿ ದರದಲ್ಲಿ 4,800ಕ್ಕೆ ನೀಡಲಾಗುತ್ತದೆ ಎಂದು ಸುನಿಲ್ ಕುಮಾರ್ ತಿಳಿಸಿದರು.

ಸಾಹಿತ್ಯೋತ್ಸವದಲ್ಲಿ ಕಿರುಚಿತ್ರಗಳ ಪ್ರದರ್ಶನ, ಅವರ ಕೃತಿ ಆಧಾರಿತ ಸಿನಿಮಾಗಳ ಕುರಿತು ಗೋಷ್ಠಿಗಳು ನಡೆಯಲಿವೆ.

ಹೆಚ್ಚಿನ ಮಾಹಿತಿಗಾಗಿ 9620083614, 97433586571 ಸಂಪರ್ಕಿಸಬಹುದು ಎಂದು ಸುನಿಲ್ ಕುಮಾರ್ ಅವರು ಮಾಹಿತಿಯನ್ನು ನೀಡಿದರು.

ಡಾ. ಸುಧಾಕರ, ಜಿ. ಹಿರೇಕಸವಿ, ಮಹಾದೇವಪ್ಪ ತಾಳಗುಂದ, ವೀರೇಶ್, ಪ್ರಶಾಂತ್, ಶಿವಾನಂದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಮಕ್ಕಳಮೇಲಿನ ದೌರ್ಜನ್ಯ ಏರುಗತಿ

0

2018ರಿಂದ ಈಚೆಗೆ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ.
2018 ರಿಂದ ಈವರೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪದಡಿ 7,301 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ 915 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಈ ಕುರಿತು ವಿಧಾನಪರಿಷತ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರು ಕಾಂಗ್ರೆಸ್ ನ ಯು.ಬಿ. ವೆಂಕಟೇಶ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಸಾವು, ವರದಕ್ಷಿಣೆ ಕಿರುಕುಳ, ಗಂಡನ ಗಂಡನ ಮನೆಯವರಿಂದ ಕಿರುಕುಳ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬಾಲಾಪರಾಧ ಕಾಯ್ದೆ ಪ್ರಕರಣ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ಒಳಗೊಂಡಿದೆ. 2018ರಲ್ಲಿ 651ಕ್ಕೆ ಇದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು 2021 ರಲ್ಲಿ 709ಕ್ಕೆ ಏರಿಕೆಯಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹೆದ್ದಾರಿ ಆದಾಯ ಹೆಚ್ಚಳವಾಗಲಿದೆ

0

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಆದಾಯವು ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕ 1.4 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಭಾರತೀಯ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಬಹುದೊಡ್ಡ ಅವಕಾಶವಿದೆ. ಏಕೆಂದರೆ ಪ್ರತಿ ವರ್ಷ ಟ್ರಾಫಿಕ್ ಸಾಂದ್ರತೆಯು ಹೆಚ್ಚುತ್ತಿದೆ. ನಮ್ಮ ಪ್ರಸ್ತುತ ಟೋಲ್ ಆದಾಯ 40,000 ಸಾವಿರ ಕೋಟಿ ರೂಪಾಯಿಗಳು. ಮುಂದಿನ ಮೂರು ವರ್ಷಗಳಲ್ಲಿ ಇದು 1.4 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದರು.
ಮೂಲಸೌಕರ್ಯ ವಲಯದಲ್ಲಿ ಹೂಡಿಕೆಗಳನ್ನು ಆಹ್ವಾನಿಸಿದ ಗಡ್ಕರಿ, ಭಾರತೀಯ ಆರ್ಥಿಕತೆಯ ಗಾತ್ರವು ಹೆಚ್ಚುತ್ತಿದೆ. ಆದ್ದರಿಂದ ಸ್ವಾಭಾವಿಕವಾಗಿ, ಮೂಲಸೌಕರ್ಯ ಯೋಜನೆಗಳ ಮೇಲಿನ ಆದಾಯದ ಆಂತರಿಕ ದರವೂ ಏರುತ್ತಿದೆ ಎಂದು ಹೇಳಿದರು. ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು 3 ತಿಂಗಳೊಳಗೆ ಸಮನ್ವಯ ಸಮಿತಿಗಳು ನಿರ್ಧರಿಸಬೇಕು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬವು ಹೆಚ್ಚಿನ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಸಮನ್ವಯ ಮತ್ತು ಹೊಣೆಗಾರಿಕೆಗಳನ್ನು ಕಡಿಮೆ ಮಾಡುವ ಮೂಲಕ ಕ್ಲೈಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಲಾ ಮೂರು ಸದಸ್ಯರ ಸ್ವತಂತ್ರ ತಜ್ಞರ 3 ಸಮನ್ವಯ ಸಮಿತಿಗಳನ್ನು ರಚಿಸುವ ಮೂಲಕ ರಾಜಿ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪ್ರಾರಂಭಿಸಿದೆ. ಈ ಸಮಿತಿಗಳಿಗೆ ನ್ಯಾಯಾಂಗದ ನಿವೃತ್ತ ಅಧಿಕಾರಿಗಳು, ಸಾರ್ವಜನಿಕ ಆಡಳಿತ, ಹಣಕಾಸು ಮತ್ತು ಖಾಸಗಿ ವಲಯದ ಹಿರಿಯ ತಜ್ಞರು ನೇತೃತ್ವ ವಹಿಸಿದ್ದಾರೆ. ಬ್ಯಾಂಕ್-ರಾಪ್ಟ್ಸಿ ರೆಸಲ್ಯೂಶನ್ ಪ್ರಕ್ರಿಯೆಯನ್ನು ವೇಗಗೊಳಿಸಲು ಬಲವಾದ ಪ್ರಕರಣವನ್ನು ಮಾಡಿದ ಗಡ್ಕರಿ, ಹಣಕಾಸಿನ ವಿಷಯವನ್ನು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ದೀರ್ಘಕಾಲದವರೆಗೆ ಹಿಡಿದಿಟ್ಟುಕೊಂಡರೆ ಯಾವುದೇ ಉದ್ದೇಶವನ್ನು ಪೂರೈಸಲಾಗುವುದಿಲ್ಲ ಎಂದರು.
ಕಂಪನಿಗಳ ದಿವಾಳಿತನಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನಾವು ನಮ್ಮ ಆಲೋಚನೆಯನ್ನು ಬದಲಾಯಿಸಬೇಕಾಗಿದೆ. ಏಕೆಂದರೆ ವ್ಯಾಪಾರದ ಚಕ್ರಗಳು ಮತ್ತು ಡೀಫಾಲ್ಟ್‌ಗಳು ವಂಚನೆಗಳಾಗಿರುವುದಿಲ್ಲ ಎಂದು ಗಡ್ಕರಿ ಹೇಳಿದರು. ದಿವಾಳಿತನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪೂರ್ಣಗೊಳಿಸಲು ವಿಳಂಬವಾಗುತ್ತಿರುವುದನ್ನು ಉಲ್ಲೇಖಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ದಿವಾಳಿತನ ನ್ಯಾಯಮಂಡಳಿ NCLT ನ್ಯಾಯಾಧೀಶರ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದರು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಳೆದ 5 ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಮೇಲ್ಮನವಿ ಪ್ರಕರಣಗಳನ್ನು ಏಕೆ ಕಳೆದುಕೊಂಡಿದೆ ಎಂಬುದನ್ನು ಕಂಡುಹಿಡಿಯಲು ನಿವೃತ್ತ ನ್ಯಾಯಾಧೀಶರ ಅಡಿಯಲ್ಲಿ ಸಮಿತಿಯನ್ನು ಸ್ಥಾಪಿಸಲು ಬಯಸುವುದಾಗಿ ಗಡ್ಕರಿ ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಏಷ್ಯನ್ ಟ್ರೋಫಿ ಹಾಕಿ ಭಾರತಕ್ಕೆ ನಿರಾಸೆ

0

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್ ಹಂತದ ಪಂದ್ಯಾವಳಿ ಭಾರತ ಮತ್ತು ಜಪಾನ್ ತಂಡಗಳ ನಡುವೆ ನಡೆಯಿತು, ಭಾರತದ ವಿರುದ್ಧ ಜಪಾನ್ ರೋಚಕ ಜಯ ಸಾಧಿಸಿ, ಫೈನಲ್ ಹಂತಕ್ಕೆ ಕಾಲಿಟ್ಟಿದೆ.
ಮಂಗಳವಾರ ನಡೆದ ಸೆಮಿಫೈನಲ್ ನಲ್ಲಿ ಜಪಾನ್ ತಂಡವು 5-3 ರಿಂದ ಭಾರತ ತಂಡವನ್ನು ಸೋಲುಣಿಸಿತು. ‘ರೌಂಡರ್ ರಾಬಿನ್ ಲೀಗ್’ ನಲ್ಲಿ ಭಾರತ ತಂಡವು 6-0 ಯಿಂದ ಜಪಾನ್ ವಿರುದ್ಧ ಜಯಭೇರಿ ಬಾರಿಸಿತ್ತು. ಆದರೆ, ಸೆಮಿಫೈನಲ್ನಲ್ಲಿ ನಿಖರ ತಂತ್ರಗಳೊಂದಿಗೆ ಕಣಕ್ಕಿಳಿದ ಜಪಾನಿಯರು ಭಾರತದ ವಿರುದ್ಧ ಸೇಡು ತೀರಿಸಿಕೊಂಡರು.
ಭಾರತ ಮತ್ತು ಜಪಾನ್ ತಂಡಗಳು ಒಟ್ಟಾರೆ 18 ಬಾರಿ ಮುಖಾಮುಖಿಯಾಗಿವೆ, ಅದರಲ್ಲಿ 16 ಸಲ ಭಾರತ ಗೆದ್ದಿದೆ, 1 ಬಾರಿ ಜಪಾನ್ ಜಯಸಿದ್ದು, ಇನ್ನೊಂದು ಪಂದ್ಯದಲ್ಲಿ ಡ್ರಾ ಆಗಿತ್ತು, ಈ ಟೂರ್ನಿಯ ಲೀಗ್ ನಲ್ಲಿಯೂ ಭಾರತ ಅಜೇಯರಾಗಿ 4 ರ ಘಟ್ಟ ಪ್ರವೇಶಿಸಿತು.
ಇಂದು ನಡೆಯಲಿರುವ 3 ನೇ ಸ್ಥಾನದ ಪಂದ್ಯದಲ್ಲಿ ಭಾರತವು ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಆಡಲಿದೆ.
ಜಪಾನ್ ತಂಡವು 3-0 ಮುನ್ನಡೆಯಲ್ಲಿ ಇದ್ದಾಗ ಭಾರತವು ತಿರುಗೇಟು ನೀಡುವತ್ತ ಹೆಜ್ಜೆ ಇಟ್ಟಿತು, ಆದರ ಫಲವಾಗಿ 17ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಗೋಲು ಹೊಡೆದರು.ಆದರೆ, ನಂತರದ ಆಟದಲ್ಲಿ ಜಪಾನ್ ರಕ್ಷಣಾಪಡೆಯೂ ಚುರುಕಾಗಿ ಆಡಿತು.
ಜಪಾನಿನ ಶೋಟಾ ಯಮಡಾ ಮೊದಲ ನಿಮಿಷದಲ್ಲಿಯೇ ಲಭಿಸಿದ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ಗಳಿಸಿದರು, ಎರಡನೇ ನಿಮಿಷದಲ್ಲಿ ರೈಕಿ ಫುಜಿಶಿಮಾ ಫೀಲ್ಡ್ ಗೋಲು ಗಳಿಸುವ ಮೂಲಕ ಭಾರತಕ್ಕೆ ಆಘಾತ ಮೂಡಿಸಿದರು.
ಭರ್ಜರಿ ಆರಂಭದ ಆತ್ಮವಿಶ್ವಾಸದಲ್ಲಿ ತೇಲಿದ ತಂಡದ ಯೊಶಿಕಿ ಕಿರೀಷ್ತಾ (14 ನೇ ನಿಮಿಷ), ಕೊಸೀ ಕವಾಲೆ (35 ನಿಮಿಷ) ಮತ್ತು ರೊಮಾ ಊಕಾ (4 ನಿಮಿಷ) ಗೋಲು ಗಳಿಸಿದರು.
ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜಪಾನ್ ತಂಡ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕ್ರಿಸ್ಮಸ್ ಗೆ ಅಡಚಣೆಯಾಗದಂತೆ ರಕ್ಷಣೆ ಕೊಡಿ

0

ಕ್ರಿಸ್ಮಸ್ ಹಾಗು ಹೊಸ ವರ್ಷಾ ಆಚರಣೆಯಲ್ಲಿ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಕ್ರೈಸ್ತ ಒಕ್ಕೂಟ ಹಾಗೂ ಶಿವಮೊಗ್ಗ ಜಿಲ್ಲೆ ಫಾಸ್ಟರ್ಸ್ ಅಸೋಸಿಯೇಷನ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಯ ನಡೆಯುವ ಶಾಂತಿಯುತ, ಪವಿತ್ರ ದೈವಾರಾಧನೆಗೆ ಕೆಲವು ಸಂಘಟನೆಗಳು, ಸಮಾಜಘಾತುಕ ವ್ಯಕ್ತಿಗಳ ಕಿರುಕುಳ, ತೊಂದರೆ, ಅಡಚಣೆ ನೀಡುವ ಸಾಧ್ಯತೆ ಇದೆ. ಒತ್ತಾಯದ ಮತ್ತು ಆಮಿಷದ ಮತಾಂತರ ಮಾಡುತ್ತಿದ್ದಾರೆ ಎಂದು ಸುಳ್ಳು ನೆಪ ಉಂಟುಮಾಡುವ ಶಾಂತಿಯುತ ಆರಾಧನೆ ಗಳಿಗೆ ಭಂಗವನ್ನುಂಟು ಮಾಡುತ್ತಿದ್ದಾರೆ.

ಶಾಂತಿ ಪ್ರಿಯರಾದ ಕ್ರೈಸ್ತರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚರ್ಚ್ ಗಳ ಮೇಲೆ ದಾಳಿ ನಡೆಸುತ್ತಿರುವುದು ವಿಷಾದದ ಸಂಗತಿ ಎಂದರು.

ಬಲವಂತದ ಮತಾಂತರ ಮಾಡುತ್ತಿದ್ದರೆ ಕಾನೂನು ಕ್ರಮಕ್ಕೆ ಅಭ್ಯಂತರವಿಲ್ಲ. ಅನಗತ್ಯವಾಗಿ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳಿಗೆ ನುಗ್ಗಿ ದೇವಾರಾಧನೆಗೆ ಅಡ್ಡಿ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಿಸೆಂಬರ್ 24ರಿಂದ ಜನವರಿ ಬಂದ ರವರೆಗೆ ನಡೆಯುವ ಆರಾಧನೆ ಗಳಿಗೆ ಅಡಚಣೆಯಾಗದಂತೆ ರಕ್ಷಣೆಯ ಅಗತ್ಯವಿದೆ ಎಂದು ಮನವಿ ಮಾಡಿಕೊಂಡರು.

ಸಂಘಟನೆಗಳ ಮುಖಂಡರಾದ ಪಿ. ಡಿ. ಏಸುದಾಸ್, ಎಡ್ವರ್ಡ್, ಬಿ. ಏಸುದಾಸ್ ಅವರು ಪೊಲೀಸರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಮೆರಿಕದಲ್ಲಿ ಒಮಿಕ್ರಾನ್ ಹೆಚ್ಚಳ

0

ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಅಮೆರಿಕದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಓಮಿಕ್ರಾನ್ ಗೆ ಮೊದಲ ಸಾವು ದಾಖಲಾಗಿದೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿಯೊಬ್ಬ ರೂಪಾಂತರಿ ವೈರಾಣು ಓಮಿಕ್ರಾನ್ ನಿಂದಾಗಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯು ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದಿರಲಿಲ್ಲ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ದಿನೇ ದಿನೇ ಹೊಸ ರೂಪಾಂತರಿ ಸೋಂಕಿನ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದು, ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಸೋಂಕಿನ ಪರೀಕ್ಷೆಯನ್ನು ಹೆಚ್ಚಿಸಿದೆ.

ಕಳೆದ ಒಂದು ವಾರದಲ್ಲಿ ಓಮಿಕ್ರಾನ್ ಸೋಂಕಿತರ ಪ್ರಮಾಣ ಶೇ.73 ರಷ್ಟು ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಕನಸು ಭಗ್ನ

0

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಸರಣಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ಪಂದ್ಯ ನಡೆಯಿತು. ಕರ್ನಾಟಕದ ವಿರುದ್ಧ ತಮಿಳುನಾಡು ಭರ್ಜರಿ ಜಯ ಸಾಧಿಸಿತು. ಈ ಮೂಲಕ ಕರ್ನಾಟಕ ತಂಡದ ವಿಜಯ್ ಹಜಾರೆ ಟ್ರೋಫಿ ಗಳಿಸುವ ಕನಸು ನುಚ್ಚುನೂರಾಯಿತು.
K.L ಸೈನಿ ಮೈದಾನದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು, ಎದುರಾಳಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತು.
ಪಂದ್ಯದ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತು.
6 ನೇ ಓವರ್ ನಲ್ಲಿ ಬಾಬಾ ಅಪರಾಜಿತ್ ವಿಕೆಟ್ ಗಳಿಸಿದ ವೈಶಾಖ ವಿಜಯ್ ಕುಮಾರ್ ಉತ್ತಮ ಆರಂಭ ಒದಗಿಸಿದರು. ಆದರೆ, ಜಗದೀಶನ್ ಜೊತೆಯಾಟದಲ್ಲಿ 147 ರನ್ ತಂಡಕ್ಕೆ ಸೇರಿಸಿದರು. 29ನೇ ಓವರ್ ನವರೆಗೂ ಕರ್ನಾಟಕದ ಬೌಲರ್ ಗಳು ವಿಕೆಟ್ ಲಭಿಸದೆ ಪರದಾಡಿದರು. ಇವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ತಮಿಳುನಾಡು ತಂಡ 355 ರನ್ ಗಳ ಗುರಿ ಕರ್ನಾಟಕ ತಂಡಕ್ಕೆ ಸವಾಲಾಕಿತು.
ನಂತರ ಬಂದ ಶಾರೂಕ್ ಖಾನ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು, (ಅಜೇಯ 79 ರನ್) ‘ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್’ ನಲ್ಲಿ ತಮಿಳುನಾಡು ಗೆಲುವಿಗೆ ಕಾರಣರಾಗಿದ್ದ ಖಾನ್, ಇಲ್ಲಿಯೂ ಕೂಡ ಇದೇ ರೀತಿ ಆಟವಾಡಿ ಕರ್ನಾಟಕವನ್ನು ಎದೆಗುಂದುವಂತೆ ಮಾಡಿದರು,6 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಿಡಿಸಿ ತಂಡದ ಮೊತ್ತ 350 ರನ್ ದಾಟಲು ಕಾರಣರಾದರು.
ಬೃಹತ್ ಗುರಿಯನ್ನು ಬೆನ್ನತ್ತಿ ಆಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕರ್ನಾಟಕ 39 ಓವರ್ ಗಳಲ್ಲಿ ಆಲ್-ಔಟ್ ಆಗಿ 203 ರನ್ ಗಳಿಸಿಕೊಂಡಿತು.
ಮನೀಷ್ ಪಾಂಡೆ (8 ಎಸೆತಗಳಲ್ಲಿ 9 ರನ್) ದೊಡ್ಡ ಮೊತ್ತದ ಇನ್ನಿಂಗ್ಸ್ ಕಟ್ಟದಂತೆ ತಮಿಳುನಾಡಿನ ಬೌಲರ್ M. ಸಿದ್ದಾರ್ಥ್ ನೋಡಿಕೊಂಡರು. ಇದು ತಂಡಕ್ಕೆ ಬಹಳ ದೊಡ್ಡ ಪೆಟ್ಟಾಯಿತು, ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಮತ್ತು ಶ್ರೀನಿವಾಸ್ ಶರತ್ ಅವರು ಹೋರಾಟ ಮಾಡಿದರು. ತಂಡವನ್ನು ಜಯದತ್ತ ಮುನ್ನಡೆಸುವಲ್ಲಿ ವಿಫಲರಾದರು.
ದೇವದತ್ತ ಪಡಿಕ್ಕಲ್ ಖಾತೆ ತೆರೆಯದೇ ಮರಳಿದರು, ರೋಹನ್ ಕದಂ (24) ಮತ್ತು K.V ಸಿದ್ದಾರ್ಥ್ (29) ಎರಡನೇ ವಿಕೆಟ್ ಗೆ 59 ರನ್ ಸೇರಿಸಿದರು. ಸಿಲಂಬರಸನ್ ಬೌಲಿಂಗ್ ನಲ್ಲಿ ರೋಹನ್ ಔಟಾದರೆ, ಸಾಯಿ ಕಿಶೋರ್ ಎಸೆತದಲ್ಲಿ ಸಿದ್ದಾರ್ಥ್ ಪೆವಿಲಿಯನ್ ಗೆ ಮರಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನೀರಾವರಿ ಯೋಜನೆ ಪೂರ್ಣಗೊಳಿಸಿ

0

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಕೃಷ್ಣಾ ಮೇಲ್ದಂಡೆ, ಮಹದಾಯಿ, ನೀರಾವರಿ ಕಿತ್ತೂರು ಕಲ್ಯಾಣ ಕರ್ನಾಟಕ ಭಾಗದ ಸಿವಿಲ್ ನೇಮಕಾತಿ ಹಾಗೂ ನಂಜುಂಡಪ್ಪ ವರದಿ ಶಿಫಾರಸಿನಂತೆ ಬೆಂಗಳೂರಿನಲ್ಲಿರುವ ಕೆಲ ಇಲಾಖೆ ಕೇಂದ್ರ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಆಗ್ರಹದ ಜೊತೆಗೆ ನಾನಾ ಲೋಪ ದೋಷಗಳನ್ನು ಸರಿಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ಸದಸ್ಯರು ವಿಧಾನಪರಿಷತ್ತಿನಲ್ಲಿ ಆಗ್ರಹಿಸಿದರು.

ಪ್ರತಿಪಕ್ಷದ ನಾಯಕ ಎಸ್ ಆರ್ ಪಾಟೀಲ್, ಸದಸ್ಯ ಶ್ರೀಕಂಠೇಗೌಡ ಸೇರಿದಂತೆ ಹಲವರು ಉತ್ತರ ಕರ್ನಾಟಕ ಭಾಗದ ಬಹುದಿನದ ಸಮಸ್ಯೆಗಳನ್ನು ಕುರಿತು ಚರ್ಚೆ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ಅಲ್ಲದೆ ಕಾಲಮಿತಿಯಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಂತೆ ಆಗ್ರಹಿಸಿದರು.

ಕೃಷ್ಣಾ ನದಿ ನೀರಾವರಿ ಯೋಜನೆ ವಿಳಂಬದ ಬಗ್ಗೆ ಎಸ್ಆರ್ ಪಾಟೀಲ್ ಸುದೀರ್ಘ ಹಾಗೂ ಭಾವನಾತ್ಮಕವಾಗಿ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದರು. ಶೀಘ್ರದಲ್ಲಿ ಯೋಚನೆಗಳನ್ನು ಪೂರ್ಣಗೊಳಿಸುವಂತೆ ಆಡಳಿತ ಪಕ್ಷದ ಕೈಮುಗಿದು ಕಣ್ಣೀರಿಟ್ಟ ಸನ್ನಿವೇಶವು ಸದನದಲ್ಲಿ ಜರುಗಿತು.

ಕೃಷ್ಣಾನದಿಯಲ್ಲಿ 130 ಟಿಎಂಸಿ ಬಳಕೆಗೆ 2000 10ರಲ್ಲಿ ಕೋರ್ಟ್ ಆದೇಶಿಸಿದ್ದರೂ ಯೋಜನೆ ಕೈಗೆತ್ತಿಕೊಂಡಿಲ್ಲ. 30 ಲಕ್ಷ ಎಕರೆ ನೀರಾವರಿಗೆ ಒಳಪಡಿಸುವ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಗೆ ತಾರತಮ್ಯವಿದೆ. ಹಂತ ಹಂತದ ಭೂಸ್ವಾಧೀನ ಕೈಬಿಟ್ಟು ಒಂದೇ ಬಾರಿ ಭೂಸ್ವಾಧೀನ ನಡೆಸಿ ಎಂದು ಪಾಟೀಲ್ ತಿಳಿಸಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ನ್ಯಾಯಾಧಿಕರಣ ಆದೇಶ ಮತ್ತು ಗೆಜೆಟ್ ನೋಟಿಫಿಕೇಶನ್ ಆಗಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಟೆಂಡರ್ ಕರೆಯಲು ವಿಳಂಬ ಧೋರಣೆ ಅನುಸರಿಸುತ್ತಿದೆ.

ಕೃಷ್ಣ ಮತ್ತು ಕಳಸಾ-ಬಂಡೂರಿ ಯೋಜನೆ ಕುರಿತು ಸುವರ್ಣಸೌಧದಲ್ಲಿ ಸರ್ಕಾರ ಘೋಷಣೆ ಮಾಡಲು ಪಾಟೀಲ್ ಆಗ್ರಹಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿವಿಲ್ ಸೇವಾ ನೇಮಕಾತಿ ನಡೆಸಿ ಯುವಕರಿಗೆ ಉದ್ಯೋಗ ಸೃಷ್ಟಿಸು ಬಗ್ಗೆ ಒತ್ತಾಯಿಸಿದರು.

ಮಹದಾಯಿ ಹೋರಾಟದಲ್ಲಿ ಮಡಿದ 12 ಜನರ ಪೈಕಿ 6 ಜನರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ ಪರಿಹಾರ ಕೊಡಿ ಎಂದು ಪಾಟೀಲ್ ಆಗ್ರಹಿಸಿದರು.

ನೀರಾವರಿ ನಿಗಮ ದಲ್ಲಿ ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಪಾಟೀಲ್ ತಿಳಿಸಿದರು.