Tuesday, February 10, 2026
Tuesday, February 10, 2026
Home Blog Page 1812

ಶಿಕ್ಷಕರ ವರ್ಗಾವಣೆ‌ ಮಾರ್ಗಸೂಚಿ

0

ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ಬೆಳಗಾವಿಯ ಸುವರ್ಣ ಸೌಧದ ಅಧಿವೇಶನದಲ್ಲಿ ಅಂಗೀಕಾರ ನೀಡಲಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಜೊತೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ತರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ 2021ಕ್ಕೆ ವಿಧಾಸಭೆಯಲ್ಲಿ ಅಂಗೀಕಾರ ದೊರೆತಿದೆ ಎಂದು ತಿಳಿಸಿದರು.

2020ರಲ್ಲಿ ಕಾಯ್ದೆಗೆ ಮೊದಲ ತಿದ್ದುಪಡಿ ತಂದ ಪದವಿಪೂರ್ವ ಕಾಲೇಜು ಉಪನ್ಯಾಸಕರನ್ನು ಸೇರಿಸಿರಲಿಲ್ಲ. ಇದೀಗ ಸೇರ್ಪಡೆಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 50 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ವರ್ಗಾವಣೆ ಮಾಡುವಾಗ ಗರ್ಭಿಣಿಯರು ಹಾಗೂ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈ ತಿದ್ದುಪಡಿಯಿಂದ ಉಪನ್ಯಾಸಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹೊಸ ವರ್ಷಾಚರಣೆ ಮಾರ್ಗಸೂಚಿ

0

ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಹೊಸ ವರ್ಷ ಸಮೀಪಿಸುತ್ತಿರುವಂತೆ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ.

ಹೊಸ ವರ್ಷಾಚರಣೆ ವೇಳೆ ಸಂಭ್ರಮಾಚರಣೆ ಮತ್ತು ಡಿ.ಜೆ ಧ್ವನಿವರ್ಧಕ ಬಳಸಿ ಮೋಜು-ಮಸ್ತಿ ಕೂಟಗಳನ್ನು ನಡೆಸುವುದನ್ನು ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ.

ಮಂಗಳವಾರ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಅವರು ಉನ್ನತ ಮಟ್ಟದ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದರು.

“ಸೋಂಕು ನಿಯಂತ್ರಣ ಮತ್ತು ಓಮಿಕ್ರಾನ್ ವೈರಾಣುವಿನ ಹರಡುವಿಕೆ ಕುರಿತು ಚರ್ಚಿಸಲಾಯಿತು. ಹೊಸವರ್ಷದಲ್ಲಿ ರಾಜ್ಯದ ಯಾವುದೇ ಭಾಗದಲ್ಲೂ ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ನೀಡಿದಿರಲು ನಿರ್ಧರಿಸಲಾಗಿದೆ” ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದರು.

ಹೊಸವರ್ಷ ಆಚರಣೆ ಸಂದರ್ಭದಲ್ಲಿ ಜನರು ಗುಂಪು ಸೇರುವಂತಿಲ್ಲ. ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಅಂತಹ ಆಚರಣೆಗೆ ಅವಕಾಶವಿಲ್ಲ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ರಾಜ್ಯದಾದ್ಯಂತ ನಿಷೇಧ ಜಾರಿಯಲ್ಲಿದೆ ಎಂದು ಸಿಎಂ ತಿಳಿಸಿದರು.

ಹೊಸ ವರ್ಷಾಚರಣೆ ವೇಳೆ ಬಾರ್ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಪ್ರವೇಶ ನೀಡಬಹುದು ಡಿ.ಜೆ ಧ್ವನಿ ವರ್ಧಕಗಳ ಬಳಕೆ, ವಿಶೇಷ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ಇರುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

“ಹೊಸ ವರ್ಷಾಚರಣೆಗೆ ವಿಧಿಸುತ್ತಿರುವ ನಿರ್ಬಂಧನೆಗಳು ಕ್ರಿಸ್ಮಸ್ ಹಬ್ಬದ ಆಚರಣೆಗೆ ಉಂಟುಮಾಡುವುದಿಲ್ಲ. ಕ್ರಿಸ್ಮಸ್ ವೇಳೆ ಯಾವುದೇ ರೀತಿಯ ಬಹಿರಂಗ ಕೂಟಗಳು ಇರುವುದಿಲ್ಲ. ಚರ್ಚೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ ಅದು ಮುಂದುವರಿಯಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ನಿರ್ಬಂಧನೆಗಳನ್ನು ವಿಧಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಆದೇಶವನ್ನು ಹೊರಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಸೋಂಕಿನಿಂದ ಮಕ್ಕಳ ಸಾವು ದೃಢಪಟ್ಟಿಲ್ಲ

0

ದೇಶದಾದ್ಯಂತ ಕೊರೋನಾ ವೈರಸ್ ಜೊತೆಗೆ ರೂಪಾಂತರಿ ವೈರಸ್ ಗಳಾದ ಡೆಲ್ಟಾ ಓಮಿಕ್ರಾನ್ ಅಬ್ಬರ ಹೆಚ್ಚಾಗಿದೆ. ಇದರ ನಡುವೆಯೂ ಸರ್ಕಾರಗಳು ಶಾಲಾ-ಕಾಲೇಜುಗಳನ್ನು ಆರಂಭಿಸಿತು ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ.

ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾದ ಬೆನ್ನಲ್ಲೇ ಎಲ್ಲೆಡೆ ಮಕ್ಕಳಿಗೂ ಕೋವಿಡ್-19 ಪ್ರತಿರೋಧಕ ಲಸಿಕೆಯನ್ನು ನೀಡಲು ಚರ್ಚೆ ನಡೆದಿತ್ತು.
ಈ ಬಗ್ಗೆ ಕೋವಿಡ್ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಕೇಂದ್ರ ಸರ್ಕಾರಕ್ಕೆ ‘ಸದ್ಯ ಮಕ್ಕಳಿಗೆ ಕೋವಿಡ್ -19 ಪ್ರತಿರೋಧಕ ಲಸಿಕೆ ಹಾಕುವ ಅಗತ್ಯವಿಲ್ಲ’ ಎಂದು ಹೇಳಿದೆ.

ಭಾರತದಲ್ಲಿ ಕೋವಿಡ್ ಸೋಂಕಿನಿಂದಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೃತಪಟ್ಟ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಮಕ್ಕಳಿಗೆ ಲಸಿಕೆ ಅಗತ್ಯವಿಲ್ಲ ಎಂದು ಪ್ರಮುಖ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಸಮಿತಿ ಸದಸ್ಯ ಡಾ.ಜಯಪ್ರಕಾಶ್ ಮುಲಿಯಿಲ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯಗಳು ಒಮಿಕ್ರಾನ್ ಬಗ್ಗೆ ಜಾಗೃತವಾಗಿರಲಿ

0

ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಪ್ರಸರಣ ವೇಗವು ಈ ಹಿಂದಿನ ಡೆಲ್ಟಾ ರೂಪಾಂತರಿಗಿಂತಲೂ ಮೂರು ಪಟ್ಟು ಹೆಚ್ಚಿದೆ. ಹಾಗಾಗಿ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎಂಬ ನಿರ್ಲಕ್ಷ್ಯ ಬೇಡ. ರಾಜ್ಯ ಸರ್ಕಾರಗಳು ಸೋಂಕಿತರ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗೆ ಅಗತ್ಯ ವಾರ್ ರೂಮ್ ಅಥವಾ ಕಾರ್ಯಪಡೆಯನ್ನು ತ್ವರಿತಗತಿಯಲ್ಲಿ ಹೆಚ್ಚಿಸಿಕೊಳ್ಳಲಿ ಎಂದು ಕೇಂದ್ರ ಸರ್ಕಾರವು ಪತ್ರ ಬರೆದಿದೆ.
ಓಮಿಕ್ರಾನ್ ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರದ ಒಟ್ಟು ಜನರಲ್ಲಿ ಶೇ.81ರಷ್ಟು , ಅಂದರೆ 54 ಸೋಂಕಿತರು ಕೊರೊನಾ ಲಸಿಕೆಯ ಮೂರನೇ ಡೋಸ್ ಕೂಡ ಪಡೆದಿದ್ದರು ಎಂದು ತಿಳಿದುಬಂದಿದೆ. ಉಳಿದಂತೆ 10 ಮಂದಿ ಲಸಿಕೆ ಪಡೆದವರಲ್ಲಿ ಓಮಿಕ್ರಾನ್ ಸೋಂಕು ಗಂಭೀರ ಅನಾರೋಗ್ಯ ಮಾಡಿದೆ ತಿಳಿದುಬಂದಿದೆ.
ಪ್ರಸ್ತುತ ದೇಶಾದ್ಯಂತ ಕೋಟ್ಯಂತರ ಜನರು ಕಳೆದುಕೊಂಡಿರುವ ಕೊರೊನಾ ನಿರೋಧಕ ಲಸಿಕೆಯು ಓಮಿಕ್ರಾನ್ ಸೋಂಕು ತಡೆಯುವಲ್ಲಿ ಪರಿಣಾಮ ಅಲ್ಲ ಎನ್ನಲು ಸೂಕ್ತ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಪ್ರತಿಕಾಯಗಳನ್ನು ಕುಗ್ಗಿಸಲಿದೆ, ರೋಗನಿರೋಧಕತೆಯನ್ನು ಬದಿಗೊತ್ತಿ ಸೋಂಕು ಹಬ್ಬಿಸಲಿದೆ ಎನ್ನುವ ವದಂತಿಗಳ ಬಗ್ಗೆ ನಿರ್ದಿಷ್ಟ ಅಧ್ಯಯನ ವರದಿ ಹಾಗೂ ಸಾಕ್ಷ್ಯಗಳು ಸಿಕ್ಕಿಲ್ಲ. ಹಾಗಾಗಿ ಅನಗತ್ಯ ಆತಂಕ ಬೇಕಿಲ್ಲ ಎಂದು ಸಚಿವ ಮಾಂಡವೀಯ ರಾಜ್ಯಸಭೆಗೆ ತಿಳಿಸಿದ್ದಾರೆ.
ಎಲ್ಲಾ ರಾಜ್ಯಗಳು ತಮ್ಮ ಜಿಲ್ಲೆಗಳಲ್ಲಿನ ಓಮಿಕ್ರಾನ್ ಸೋಂಕಿತರ ಮೇಲೆ ತೀವ್ರ ನಿಗಾ ಇರಿಸಬೇಕು. ಅವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲು ಅಗತ್ಯವಾದ ಎಲ್ಲಾ ಸೌಲಭ್ಯಗಳು, ವೈದ್ಯಕೀಯ ಸಾಧನೆಗಳ ಲಭ್ಯತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಾದರೆ ಕೂಡಲೇ ರಾತ್ರಿ ಕರ್ಫ್ಯೂ ಜಾರಿ ಮಾಡಬೇಕು. ಹೆಚ್ಚಿನ ಸೋಂಕು ಪತ್ತೆಯಾಗುವ ಮುನ್ನವೇ ಸಂಭಾವ್ಯ ಸೋಂಕು ಏರಿಕೆ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸುವ ಮೂಲಕ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಬೆಳೆವಿಮೆ ವೈಜ್ಞಾನಿಕ ಲೆಕ್ಕಾಚಾರ ಮಾಡಿ

0

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವ ವಿಷಯವಾಗಿದೆ. ಇದೇ ರೀತಿ ರಾಜ್ಯ ಸರ್ಕಾರ ಕೂಡ ಎಪಿಎಂಸಿ ಕಾಯ್ದೆ ಸೇರಿದಂತೆ ಕೆಲವು ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದರು.

ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದ ಸಭಾಂಗಣದಲ್ಲಿ ರೈತ ನಾಯಕ ಎನ್. ಡಿ. ಸುಂದರೇಶ್ ಅವರ ನೆನಪಿನ ಕಾರ್ಯಕ್ರಮ ಪ್ರಯುಕ್ತ ರಾಜ್ಯ ರೈತ ಸಂಘ ರಕ್ತದಾನ ಶಿಬಿರವನ್ನು ನಡೆಸಿತು. ಈ ಕಾರ್ಯಕ್ರಮವನ್ನು ಕೋಡಿಹಳ್ಳಿ ಚಂದ್ರಶೇಖರ್ ಅವರು ಉದ್ಘಾಟಿಸಿದರು.

“ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಕೃಷಿ ಕಾಯ್ದೆಗಳನ್ನು ವಾಪಸ್ಸು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಸರ್ಕಾರದ ನಡೆಯನ್ನು ಗಮನದಲ್ಲಿಟ್ಟುಕೊಂಡು ನಂತರ ರೈತ ಸಂಘ ತನ್ನ ನಿರ್ಧಾರ ಕೈಗೊಳ್ಳಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದರು.

ರೈತರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ರೈತರಿಗೆ ನೀಡಬೇಕಾದ ಎಲ್ಲಾ ರೀತಿಯ ಪರಿಹಾರಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ವೈಜ್ಞಾನಿಕವಾದ ರೀತಿಯಲ್ಲಿ ಪರಿಹಾರ ನೀಡಬೇಕಾಗಿದೆ. ಬೆಳೆ ವಿಮೆ ರೈತರ ತಲುಪಿಲ್ಲ. ಸರ್ಕಾರ ಈ ಬಗ್ಗೆ ರೈತರ ಪರ ನಿಲ್ಲಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ಪ್ರತಿಮೆ ಹಾನಿ ಮಾಡಿದ ಘಟನೆಯ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿದರು. ಪ್ರತಿಮೆಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಒಳಗೆ ಹಾಕಬೇಕು. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಗಡಿಪಾರು ಮಾಡಬೇಕು. ಗಡಿಭಾಗದಲ್ಲಿ ವೋಟಿಗಾಗಿ ಕೆಲವು ರಾಜಕಾರಣಿಗಳು ಮೌನವಾಗಿರುವುದು ಸರಿಯಲ್ಲ. ಓಲೈಕೆ ರಾಜಕಾರಣಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಆಕ್ರೋಶವನ್ನು ಮಾತುಗಳ ಮುಖಾಂತರ ಹೊರಹಾಕಿದರು.

“ಸುಂದರೇಶ್ ಅವರ ವಿಚಾರಧಾರೆಗಳು ಸದಾ ವರ್ತಮಾನದಲ್ಲಿರುತ್ತವೆ. ಅವರು ಆದರ್ಶ ಹೋರಾಟಗಾರರು. ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದರು. ಯಾವ ಅಧಿಕಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ಉಗ್ರ ಸ್ವಭಾವ ಇದ್ದರು ಅವರ ವಳಗೆ ಮಾತೃ ಹೃದಯವಿತ್ತು. ಅವರ ಚಿಂತನೆಗಳ ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ರೈತ ಮುಖಂಡ ಎಚ್. ಆರ್. ಬಸವರಾಜಪ್ಪ ಅವರು ಸಲಹೆ ನೀಡಿದರು.

ಸುಂದರೇಶ್ ಅವರ 29ನೇ ನೆನಪಿನ ಕಾರ್ಯಕ್ರಮದಲ್ಲಿ ರೈತರು ರಕ್ತದಾನ ಮಾಡಿದ್ದಾರೆ. ಮುಂದಿನ ಬಾರಿ ನೇತ್ರದಾನದ ಪ್ರಮಾಣದ ಮೂಲಕ ಸುಂದರೇಶ್ ಅವರನ್ನು ಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಡಾ. ಬಿ. ಎಂ. ಚಿಕ್ಕಸ್ವಾಮಿ, ಡಿ. ಎಚ್. ರಾಮಚಂದ್ರಪ್ಪ, ಹಿಟ್ಟೂರು ರಾಜು, ಪುರದಾಳ್ ನಾಗರಾಜ್, ಟಿ. ಎಂ. ಚಂದ್ರಪ್ಪ, ಕೆ. ರಾಘವೇಂದ್ರ, ರೋಟರಿ ರಕ್ತನಿಧಿ ಅಧ್ಯಕ್ಷ ಅರಕೆರಿ ಮಂಜಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಖಾಸಗಿಯವರಿಗೆ ಬ್ಯಾಂಕ್ ಮಾರಾಟ ಇಲ್ಲ

0

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ನಡೆದ ಸಂಸತ್ ಅಧಿವೇಶನದಲ್ಲಿ ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ಗಳು ಖಾಸಗಿಯವರಿಗೆ ಮಾರಾಟ ಮಾಡುವ ಕುರಿತಂತೆ ಕೇಂದ್ರ ಸಚಿವ ಸಂಪುಟ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

2021-22 ನೇ ಸಾಲಿನ ಬಜೆಟ್ ನಲ್ಲಿ ಬ್ಯಾಂಕ್ ಖಾಸಗೀಕರಣದ ಘೋಷಣೆ ಮಾಡಲಾಗಿತ್ತು. ಸಂಸತ್ತಿನ ಹಾಲಿ ಅಧಿವೇಶನದಲ್ಲಿ ಖಾಸಗೀಕರಣಕ್ಕೆ ಸಂಬಂಧಿಸಿದ ಮಸೂದೆಯು ಮಂಡನೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋಲ್ಕತಾ ಪಾಲಿಕೆ ಚುನಾವಣೆ ಟಿಎಂಸಿ ಜಯಭೇರಿ

0

ಕಳೆದ ವಿಧಾನಸಭೆ ಚುನಾವಣೆಯಂತೆಯೇ ಕೊಲ್ಕತ್ತಾ ಮಹಾನಗರ ಪಾಲಿಕೆ (ಕೆಎಂಸಿ) ಚುನಾವಣೆಯಲ್ಲೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿದೆ.
ಮಹಾನಗರ ಪಾಲಿಕೆಯ ಒಟ್ಟು 144 ವಾರ್ಡ್ ಗಳ ಪೈಕಿ ಟಿಎಂಸಿ 134 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟು ಕೊಂಡರೆ, ಎಡರಂಗ ಹಾಗೂ ಕಾಂಗ್ರೆಸ್ ತಲಾ ಎರಡು ವಾರ್ಡ್ ಗಳಲ್ಲಿ ವಿಜಯದ ನಗೆ ಬೀರಿವೆ.
ಕೆಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಇದು ಪ್ರಜಾಪ್ರಭುತ್ವ ಹಾಗೂ ಜನರಿಗೆ ಸಿಕ್ಕ ಗೆಲುವಾಗಿದೆ. ಗೆದ್ದ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಜನರ ಸೇವೆಗೆ ಕಂಕಣಬದ್ಧರಾಗಿರಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಿಳಿಸಿದ್ದಾರೆ.
ಟಿಎಂಸಿಯು 2015 ರಲ್ಲಿ ನಡೆದ ಕೆಎಂಸಿ ಚುನಾವಣೆಯಲ್ಲಿ 124 ವಾರ್ಡ ಗಳಲ್ಲಿ ಗೆಲುವು ಸಾಧಿಸಿತ್ತು. ಹಾಗೆಯೇ ,ಎಡರಂಗ 13, ಬಿಜೆಪಿ 5 ಹಾಗೂ ಕಾಂಗ್ರೆಸ್ ಎರಡು ವಾರ್ಡ ಗಳಲ್ಲಿ ಗೆದ್ದಿತ್ತು. ಈ ಬಾರಿ 10ಕ್ಕೂ ಹೆಚ್ಚು ವಾರ್ಡ ಗಳ ಮೇಲೆ ಟಿಎಂಸಿ ಗೆಲುವು ಸಾಧಿಸಿದ್ದು, ಶೇ.71.95ರಷ್ಟು ಮತ ಗಳಿಸಿದೆ. ಎಡರಂಗ ಶೇ.11.13ರಷ್ಟು , ಬಿಜೆಪಿ ಶೇ.8.94, ಕಾಂಗ್ರೆಸ್ ಶೇ.4.47 ಹಾಗೂ ಶೇ.3.25 ರಷ್ಟು ಮತಗಳನ್ನು ಸ್ವತಂತ್ರ ಅಭ್ಯರ್ಥಿಗಳು ಪಡೆದಿದ್ದಾರೆ. ಪಕ್ಷದ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ನಗರದಾದ್ಯಂತ ಟಿಎಂಸಿ ಕಾರ್ಯ ಕರ್ತರು ಸಂಭ್ರಮಾಚರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹೆಣ್ಣಿಗೆ ಮದುವೆ ವಯಸ್ಸು 21 ವಿಧೇಯಕ ಮಂಡನೆ

0

ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ಏರಿಕೆ ಮಾಡಿ, ಗಂಡು ಮಕ್ಕಳಿಗೆ ಇರುವಂತೆ 21 ವರ್ಷಗಳಿಗೆ ಸಮನಾಗಿಸುವ ತಿದ್ದುಪಡಿ ವಿಧೇಯಕವು ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ದೇಶದಲ್ಲಿ ಶೇಕಡ ಏಳರಷ್ಟು ಹೆಣ್ಣುಮಕ್ಕಳು ಕೇವಲ 15-18 ವರ್ಷಗಳ ನಡುವೆ ಗರ್ಭ ಧರಿಸುತ್ತಾರೆ. 18 ವರ್ಷದೊಳಗೆ ಶೇಕಡ 23ರಷ್ಟು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಲಾಗುತ್ತಿದೆ. ಇದಕ್ಕೆಲ್ಲ ಹೊಸ ವಿಧೇಯಕವೇ ಪರಿಹಾರ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ.
ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯ್ದೆ, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ, ಮುಸ್ಲಿಂ ವೈಯಕ್ತಿಕ ಕಾನೂನು ಅರ್ಜಿ ಕಾಯಿದೆ, ವಿಶೇಷ ವೈವಾಹಿಕ ಕಾಯ್ದೆ, ಹಿಂದೂ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯ್ದೆಗಳ ಪ್ರಸ್ತುತ ಕಾನೂನುಗಳು ತಿದ್ದುಪಡಿ ವಿಧೇಯಕದ ಅನುಮೋದನೆ ಇಲ್ಲ ಪರಿಷ್ಕರಿಸಲ್ಪಡಲಿವೆ.
ಲಿಂಗ ಸಮಾನತೆ ತರುವ ಅಗತ್ಯವಿದ್ದರೆ ಸರ್ಕಾರವು ದೇಶದ ಗಂಡು ಮಕ್ಕಳ ವಿವಾಹಕ್ಕೆ ಅರ್ಹ ವಯಸ್ಸನ್ನು 21ರಿಂದ 18 ಇಳಿಕೆ ಮಾಡಲಿ. ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಪೋಷಣೆಗೆ ಅಗತ್ಯ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರವು ಒತ್ತು ನೀಡಬೇಕು ಎಂದ ಸಿಪಿಐ ನಾಯಕಿ ಬೃಂದಾ ಕಾರಟ್ ಅವರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಬಾಲ್ಯವಿವಾಹ ತಡೆ ವಿಧೇಯಕ, 2021 ಮಂಡಿಸಿದ ಕೂಡಲೇ ಪ್ರತಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಆತುರದಲ್ಲಿ ವಿಧೇಯಕದ ಅನುಮೋದನೆಗೆ ಸರ್ಕಾರ ಯತ್ನಿಸುತ್ತಿದೆ. ಸದ್ಯಕ್ಕೆ ತಿದ್ದುಪಡಿ ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಯ ಕೂಲಂಕಷ ಪರಿಶೀಲನೆಗೆ ಸ್ಪೀಕರ್ ಅವರು ರವಾನಿಸಬೇಕು. ಆತುರದ ಕೆಲಸಗಳಿಂದ ಹಲವು ಬಾರಿ ತಪ್ಪುಗಳಾಗುತ್ತವೆ. ಈ ವಿಧೇಯಕದ ಬಗ್ಗೆ ಸಾರ್ವಜನಿಕ ಚರ್ಚೆಗೆ ಅನುವು ಮಾಡಿಕೊಡುವ ಅಗತ್ಯವಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಗ್ರಹಿಸಿದರು.
18 ವರ್ಷಕ್ಕೆ ಹೆಣ್ಣುಮಗಳೊಬ್ಬಳು ದೇಶದ ಪ್ರಧಾನಿಯನ್ನು ಆಯ್ಕೆ ಮಾಡಬಲ್ಲಳು. ಲಿವ್-ಇನ್ ಸಂಬಂಧ ಹೊಂದಬಲ್ಲಳು, ಲೈಂಗಿಕ ಸಂಬಂಧ ಹೊಂದಬಲ್ಲಳು.ಆದರೆ ಆಕೆಗೆ ಮದುವೆ ಮಾಡುವುದು ಮಾತ್ರ ಬೇಡವೇ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರತದ ಬಗ್ಗೆ ಪಾಕ್ ನಿಂದ ಸುಳ್ಳುಸುದ್ದಿ ಜಾಲ

0

ಒಂದಲ್ಲಾ ಒಂದು ರೀತಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಪಿತೂರಿಯನ್ನು ನಡೆಸುತ್ತಲೇ ಇದೆ. ಗಡಿ ವಿಚಾರದಲ್ಲಿ ಸದಾ ಖ್ಯಾತೆ ತೆಗೆಯುವ ಪಾಕಿಸ್ತಾನ ತನ್ನ 20 ಯುಟ್ಯೂಬ್ ಚಾನೆಲ್ ಹಾಗೂ ಎರಡು ವೆಬ್ಸೈಟ್ ಗಳಲ್ಲಿ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಪ್ರಸಾರ ಹಾಗೂ ದ್ವೇಷ ಪ್ರಚೋದನೆ ಬಿತ್ತುತ್ತಿದೆ ಆದ್ದರಿಂದ ಅವುಗಳ ನಿಷೇಧಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.

ಪಾಕಿಸ್ತಾನದ 20 ಯುಟ್ಯೂಬ್ ಚಾನೆಲ್ ಹಾಗೂ ಎರಡು ವೆಬ್ಸೈಟ್ ನಲ್ಲಿ ಏಳು ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆರೆಗೆ ಇಂಟರ್ ಪೋಲ್ ಆದೇಶಿಸಿದೆ. ಅಯೋಧ್ಯೆಗೆ ಸೇನೆ ನುಗ್ಗಿಸಿದ ಉತ್ತರ ಕೋರಿಯಾ ಅಧ್ಯಕ್ಷ ಕಿಮ್ ಜಾಂಗ್. ಭಾರತದ ಏಳು ರಾಜ್ಯಗಳ ಆಕ್ರಮಣಕ್ಕೆ ಚೀನಾ ಯೋಜನೆ. 370ನೇ ವಿಧಿ ವಿರುದ್ಧ ವಿವಾದ: ಅಮೆರಿಕ, ಟರ್ಕಿ ಸೇನೆ ಭಾರತಕ್ಕೆ ಎಂಟ್ರಿ. ಜ.ಬಿಪಿನ್ ರಾವತ್ ಕೊಲೆಯ ಹಿಂದೆ ಮೋದಿ ಸಂಚನ್ನು ಬಹಿರಂಗಪಡಿಸಿದ ಚೀನಾ. ಜ. ಬಿಪಿನ್ ರಾವತ್ ಅವರಿದ್ದ ಕಾಫ್ಟರ್ ಹೊಡೆದುರುಳಿಸಿದ ತಮಿಳು ಟೈಗರ್ಸ್. ಭಾರತ ಮತ್ತು ಜಪಾನ್ ಇಂದ ಪಾಕ್ ಸಮುದ್ರದಲ್ಲಿ ಅಣುಬಾಂಬ್ ದಾಳಿ ಭಾರತದ ಮೇಲೆ ಸಮರ ಸಾರಿದ ತಾಲಿಬಾನ್ ಎಂಬ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದೆ.

ಭಾರತಕ್ಕೆ ಸಂಬಂಧಿಸಿರುವ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿಕೊಂಡು ಪ್ರಸಾರಮಾಡುವ ಸಂಘಟಿತ ಜಾಲದ ಭಾಗವಾಗಿ ಈ ಚಾನೆಲ್ ಗಳು ಕಾರ್ಯನಿರ್ವಹಿಸುತ್ತಿದ್ದವು. ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತ ಸಮುದಾಯಗಳು, ರಾಮ ಮಂದಿರ ಮುಂತಾದ ವಿಷಯಗಳ ಬಗ್ಗೆ ಪ್ರಚೋದನಾಕಾರಿ ಸುದ್ದಿಗಳನ್ನು ಬಿತ್ತರಿಸಲು ಈ ಚಾನೆಲ್ ಗಳನ್ನು ಬಳಸಲಾಗುತ್ತಿತ್ತು.

ಸರ್ಕಾರ ನಿರ್ಬಂಧಿಸುವ ಯುಟ್ಯೂಬ್ ಚಾನೆಲ್ ಗಳು ಒಟ್ಟು 35 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಒಳಗೊಂಡಿದೆ. ವೀಕ್ಷಣೀಯ ಸಂಖ್ಯೆ 55 ಕೋಟಿಗೂ ಹೆಚ್ಚಿದೆ.

ನಯಾ ಪಾಕಿಸ್ತಾನ ಗ್ರೂಪ್ ನ ಕೆಲವು ಯುಟ್ಯೂಬ್ ಚಾನೆಲ್ ಗಳನ್ನು ಪಾಕಿಸ್ತಾನದ ಪ್ರಮುಖ ಸುದ್ದಿವಾಹಿನಿಗಳ ನಿರೂಪಕರೇ ನಿರ್ವಹಿಸುತ್ತಿರುವುದು ತಿಳಿದುಬಂದಿದೆ.

ದಿ ಪಂಚ್ ಲೈನ್, ಖಾಲ್ಸಾ ಟಿವಿ, 48 ನ್ಯೂಸ್, ನ್ಯೂಸ್ 24, ಪಂಜಾಬ್ ವೈರಲ್, ಪಾಕಿಸ್ತಾನ ಗ್ಲೋಬಲ್, ತಯ್ಯಬ್ ಹನೀಫ್, ಮೊಹ್ಸಿನ್ ರಾಜಪೂತ್ ಸೇರಿದಂತೆ ಹಲವು ಯುಟ್ಯೂಬ್ ಚಾನಲ್ ಗಳನ್ನು ಶಾಶ್ವತವಾಗಿ ಬಂದ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಗುಪ್ತಚರ ಸಂಸ್ಥೆಗಳ ನೆರವಿನೊಂದಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂತಹ ಚಾನೆಲ್ ಗಳನ್ನು ಪತ್ತೆ ಮಾಡಿದೆ. ಯುಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಯೂಟ್ಯೂಬ್ ಸಂಸ್ಥೆಗೆ ಕೇಂದ್ರ ಸಚಿವಾಲಯ ಸೂಚಿಸಿದೆ.

ಅಲ್ಲದೆ ಮತ್ತೊಂದು ಪ್ರತ್ಯೇಕ ಆದೇಶದಲ್ಲಿ ಸುದ್ದಿ ಚಾನೆಲ್/ಪೋರ್ಟಲ್ ಗಳನ್ನು ನಿರ್ಬಂಧಿಸಲು ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡುವಂತೆ ದೂರಸಂಪರ್ಕ ಇಲಾಖೆಗೆ ಸೂಚನೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರಜಾಪ್ರಭುತ್ವ ಕನ್ನಡದಿಂದ ಜಾಗೃತ- ಡಾ. ರಹಮತ್

0

ಸಂವಿಧಾನ ಜಾರಿಗೆ ಬರುವ ಮೊದಲೇ ಪ್ರಜಾಪ್ರಭುತ್ವಕ್ಕೆ ಜನಸಮುದಾಯವನ್ನು ಸಜ್ಜುಗೊಳಿಸುವ ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದು, ಕನ್ನಡ ಸಾಹಿತ್ಯದ ಹೆಗ್ಗಳಿಕೆಯಾಗಿದೆ ಎಂದು ಲೇಖಕ ಡಾ. ರಹಮತ್ ತರಿಕೆರಿ ಅವರು ತಿಳಿಸಿದ್ದಾರೆ.

ಸಾಗರದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಟಿಪ್ಪು ಸಹಾರ ಯುವಜನ ಸಂಘದವರು ಪ್ರಜಾಪ್ರಭುತ್ವ ಮತ್ತು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಡಾ. ರಹಮತ್ ತರಿಕೆರಿ ಅವರು ಮಾತನಾಡುತ್ತಿದ್ದರು.

ಬಸವಣ್ಣನ ಕಾಲದಿಂದ ಹಿಡಿದು, ಕನ್ನಡದ ಇತ್ತೀಚಿನ ಲೇಖಕರರವರೆಗೂ ಪ್ರಜಾಪ್ರಭುತ್ವದ ಕುರಿತು ಪ್ರಜ್ಞೆಯನ್ನು ಜಾಗೃತಗೊಳಿಸಿದ ಯಶಸ್ಸು ಕನ್ನಡ ಸಾಹಿತ್ಯಕ್ಕೆ ಸಲ್ಲುತ್ತದೆ. ಸಂಪೂರ್ಣ ಭೀತಿಯಿಲ್ಲದ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳಬೇಕು. ಈ ರೀತಿ ಆಶಿಸಿದ ಕನ್ನಡದ ಲೇಖಕರು ಪ್ರಜಾಪ್ರಭುತ್ವವನ್ನು ಒಂದು ಮೌಲ್ಯಗಳ ಗುಚ್ಛ ಮತ್ತು ಪದ್ಧತಿಯಾಗಿ ಪರಿಗಣಿಸಿದ್ದಾರೆ ಹೊರತು ಕೇವಲ ರಾಜ ಪದ್ಧತಿಯಾಗಿ ಅಲ್ಲ ಎಂದು ಡಾ. ರಹಮತ್ ತರಿಕೆರಿ ಅವರು ತಿಳಿಸಿದರು.

ರಾಜಪ್ರಭುತ್ವ ದೇಶಗಳಲ್ಲಿಯೇ ಪ್ರಜಾಪ್ರಭುತ್ವ ಪದ್ಧತಿ ಇರುವ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಜಾಸತ್ತಾತ್ಮಕ ಅಂಶಗಳು ನೆಲೆಯೂರಿದೆ. ಇದು ವಿರಧಾಭಾಸದಂತೆ ಕಾಣುತ್ತದೆ. ಧಾರ್ಮಿಕ ನಾಯಕರು ರಾಜಕೀಯ ಪರಿಭಾಷೆಯಲ್ಲೂ, ರಾಜಕೀಯ ನಾಯಕರ ಧಾರ್ಮಿಕ ಪರಿಭಾಷೆಯಲ್ಲೂ ಮಾತನಾಡುತ್ತಿರುವ ಈ ಕಾಲದಲ್ಲಿ ಧಾರ್ಮಿಕ ಮೂಲಭೂತವಾದಿಗಳಿಂದ ಪ್ರಜಾಪ್ರಭುತ್ವಕ್ಕೆ ಕಂಟಕ ಎದುರಾಗಿದೆ. ಪ್ರಜಾಪ್ರಭುತ್ವದ ಮೂಲರೂಪದಲ್ಲಿ ಸಮಸ್ಯೆ ಇಲ್ಲದೆ ಹೋದರೂ ಅದು ರೂಪಾಂತರಗೊಳ್ಳುತ್ತಿರುವ ಬಗೆಯಲ್ಲಿ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುವಂತಾಗಿದೆ ಎಂಬುವುದನ್ನ ಅವರು ಸೋದಾಹರಣವಾಗಿ ಮಾತನಾಡಿದರು.

ರಾಜಕೀಯ ಪ್ರಜ್ಞೆ ಇಲ್ಲದ ಸಮುದಾಯ ಪ್ರಜಾಪ್ರಭುತ್ವದ ದೊಡ್ಡ ಸಮಸ್ಯೆಯಾಗಿದೆ. ನಾಗರಿಕ ಸಮಾಜ ಸಂವೇದನಾಶೀಲವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ. ಪ್ರಜಾಪ್ರಭುತ್ವ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ತರುವ ಜವಾಬ್ದಾರಿ ಮಾಧ್ಯಮ, ನ್ಯಾಯಾಂಗ ಹಾಗೂ ಕಾರ್ಯಾಂಗದ ಮೇಲೆ ಇದೆ. ಆದರೆ ಈ ರಂಗಗಳು ತಮ್ಮ ಕೆಲಸದಲ್ಲಿ ವಿಫಲವಾಗುತ್ತಿರುವುದು ಈ ಹೊತ್ತಿನ ದುರಂತವಾಗಿದೆ ಎಂದು ಡಾ. ರಹಮತ್ ತರಿಕೆರೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜಾತಿ, ಧರ್ಮ, ಹಾಗೂ ಲಿಂಗ, ಭಾಷೆ, ಆಹಾರ ಪದ್ಧತಿ, ವರ್ಣ ಅಭಿವ್ಯಕ್ತಿಗೆ ಸಂಬಂಧಪಟ್ಟ ವಿಷಯಗಳನ್ನು ನಾವು ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಆತಂಕದ ಅರಿವಾಗುತ್ತದೆ. ನಿರ್ಭೀತಿಯಿಂದ ಮಾತನಾಡುವ ವಾತಾವರಣವಿದ್ದರೆ ಮಾತ್ರ ಆತ್ಮವಿಮರ್ಶೆ ಸಾಧ್ಯವಾಗುತ್ತದೆ. ಆದರೆ ಈಗ ಪ್ರಶ್ನಿಸುವವರನ್ನು ನಿರ್ಮೂಲನೆ ಮಾಡುವ ಪ್ರವೃತ್ತಿ ಎದುರಾಗಿದೆ. ಧರ್ಮಗಳ ನಡುವೆ ಆರೋಗ್ಯಪೂರ್ಣ ಸಂವಾದದ ಬದಲು ಕತ್ತಿಹಿಡಿದು ಜಗಳ ಮಾಡುವ ಮನೋಭಾವ ಕಾಣುತ್ತಿರುವುದು ಕಳವಳದ ಸಂಗತಿಯಾಗಿದೆ.

ಪ್ರಜಾಪ್ರಭುತ್ವದಲ್ಲಿ ಬಹುಮತ ಎಂಬುದು ಅದರ ಮೂಲ ತತ್ವವಾದರೂ ಅದು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುವ ಬಗ್ಗೆ ನಾವು ಎಚ್ಚರವಹಿಸಬೇಕು. ವಿರೋಧಪಕ್ಷವೇ ಇಲ್ಲದ ಸಂದರ್ಭವನ್ನು ಸಂಭ್ರಮಿಸುವುದು ಒಳ್ಳೆಯ ಆಲೋಚನೆ ಕ್ರಮ ಅಲ್ಲ. ಏನೇ ಕೊರತೆಯಿದ್ದರೂ ಕಡಿಮೆ ದೋಷವುಳ್ಳ ರಾಜ ಪದ್ಧತಿ ಪ್ರಜಾಪ್ರಭುತ್ವ ಎಂಬ ಕಾರಣಕ್ಕೆ ಅದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದು ಲೇಖಕ ಡಾ. ರಹಮತ್ ತರಿಕೆರೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್, ಸಂಯುಕ್ತ ಕಿಸಾನ್ ಮೋರ್ಚಾದ ಎಚ್. ಬಿ. ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿ ಕುಗ್ವೆ, ಉಪನ್ಯಾಸಕಿ ವೃಂದಾ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.