Tuesday, February 10, 2026
Tuesday, February 10, 2026
Home Blog Page 1813

ಆಪ್ ಮೂಲಕ ಲೋಕಸಭೆ ಕಲಾಪ

0

ಸಂಸತ್ತಿನ ಕಾರ್ಯಕಲಾಪಗಳ ನೇರಪ್ರಸಾರ ವೀಕ್ಷಿಸಬಹುದಾದ ಆಪ್ ಗೆ ಚಾಲನೆ ನೀಡಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಆಪ್ ಫೀಚರ್ ಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದ ಓಂ ಬಿರ್ಲಾ, ಪ್ರತಿಯೊಬ್ಬ ಸದಸ್ಯರು ಆಪ್ ಡೌನ್ಲೋಡ್ ಮಾಡಿಕೊಳ್ಳುವ ಜೊತೆಗೆ ನಿಮ್ಮ ಕ್ಷೇತ್ರದಲ್ಲಿ ಪ್ರತಿಯೊಬ್ಬ ಸದಸ್ಯರು ಸಹ ಡೌನ್ಲೋಡ್ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದರು.
ಉಭಯ ಸದನಗಳ ನಿತ್ಯ ಕಾರ್ಯಕಲಾಪಗಳನ್ನು ವೀಕ್ಷಿಸುವ ಜೊತೆಗೆ ವಿವಿಧ ಸಮಿತಿಗಳ ಪ್ರಶ್ನೋತ್ತರಗಳು, ವರದಿಗಳು ಹಾಗೂ ಸಂಸದೀಯ ದಾಖಲೆಗಳನ್ನು ಸಹ ‘ ಎಲ್ಎಸ್ ಮೆಂಬರ್ ಆಪ್’ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಸ್ಪೀಕರ್ ಅವರು ಆಪ್ ಗೆ ಚಾಲನೆ ನೀಡುವ ವೇಳೆಯೇ ಲಿಖೀಂಪುರ -ಖೇರಿ ಹಿಂಸಾಚಾರ ಸೇರಿ ಹಲವು ವಿಷಯ ಪ್ರಸ್ತಾಪಿಸಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಲೋಕ್ ಅದಾಲತ್ ನಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ತಗ್ಗಿದೆ

0

ಸಾವಿರದ ನೂರು ಮಂದಿ ನ್ಯಾಯಾಧೀಶರು ಒಂದು ವರ್ಷದಲ್ಲಿ ಇತ್ಯರ್ಥಪಡಿಸಬಹುದಾದಷ್ಟು ಅಂದರೆ ದಾಖಲೆಯ 3.37 ಲಕ್ಷ ಪ್ರಕರಣಗಳನ್ನು ಒಂದೇ ದಿನ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗಿದೆ.
ಅದಾಲತ್ ನಲ್ಲಿ ಮುಖ್ಯವಾಗಿ ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿದ್ದ 1,528 ಪ್ರಕರಣಗಳು ಇತ್ಯರ್ಥವಾಗಿದೆ. 100ಕ್ಕೂ ಹೆಚ್ಚು ದಂಪತಿಗಳು ಮನಸ್ತಾಪ ಮರೆತು ಒಂದಾಗಿದ್ದಾರೆ. ಮೈಸೂರಿನಲ್ಲಿಯೇ 37 ದಂಪತಿಗಳು ಹಳೆಯ ಕಹಿ ಮರೆತು ಒಂದಾಗಿ ಬಾಳ್ವೆ ನಡೆಸಲು ಮುಂದಾಗಿ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಹಾಗೂ ಕಾನೂನು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ , ಸರ್ಕಾರಕ್ಕೆ 71 ಕೋಟಿ ರೂಪಾಯಿ ದಂಡದ ಮೊತ್ತ ಜಮೆಯಾಗಿದೆ. ಒಟ್ಟು 5,07,139 ಕೇಸುಗಳನ್ನು ಲೋಕ್ ಅದಾಲತ್ ನಲ್ಲಿ ಪರಿಹರಿಸಲು ಗುರುತಿಸಲಾಗಿತ್ತು. ಆ ಪೈಕಿ 3,37,680 ಕೇಸುಗಳು ವಿಲೇವಾರಿಯಾಗಿವೆ ,ಎಂದರು.
2021 ರಲ್ಲಿ ಕರ್ನಾಟಕದಲ್ಲಿ ನಡೆಸಿದ ಒಟ್ಟು 4 ಲೋಕ್ ಅದಾಲತ್ ಗಳಲ್ಲಿ 12,77,853 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇದರಿಂದ ಒಟ್ಟಾರೆ ಸರ್ಕಾರಕ್ಕೆ 625 ಕೋಟಿ ರೂಪಾಯಿ ಉಳಿತಾಯವಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳೇ ಹೆಚ್ಚಿನ ಪ್ರಮಾಣದಲ್ಲಿ ವಿಲೇವಾರಿ ಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇದರಿಂದ ಕೋರ್ಟ್ ಗಳ ಮೇಲೆ ಹೊರೆ ತಗ್ಗಲಿದೆ ಎಂದು ನ್ಯಾ. ವೀರಪ್ಪ ನವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರಯಾಗ್ ನಲ್ಲಿ ಮಗುವನ್ನೆತ್ತಿ ಮುದ್ದಿಸಿದ ಮೋದೀಜಿ

0

ಉತ್ತರಪ್ರದೇಶ ವಿಧಾನಸಭೆಗೆ ಕೆಲ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರನ್ನು ಕೇಳಿಕೊಂಡರು. ಪ್ರಯಾಗ್ ರಾಜ್ ನಲ್ಲಿ ನಡೆದ ಸ್ವಸಾಯ ಸಂಘಗಳ ಸಮಾವೇಶ ನಡೆಯಿತು.

ಈ ಸಮಾವೇಶಕ್ಕೆ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
“ಈ ಹಿಂದೆ ಅಧಿಕಾರ ನಡೆಸಿದ್ದ ಸರ್ಕಾರಕ್ಕೆ ರಾಜ್ಯದಲ್ಲಿ ಮತ್ತೆ ಅವಕಾಶ ನೀಡಬಾರದು ಎಂದು ಉತ್ತರ ಪ್ರದೇಶದ ಮಹಿಳೆಯರು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ಅವರು ತಿಳಿಸಿದರು.

ಮಹಿಳೆಯರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು. ಮಹಿಳೆಯರ ಮದುವೆಯ ಕನಿಷ್ಠ ವಯಸ್ಸು ಏರಿಕೆ ಮಾಡಿದ್ದನ್ನು ವಿರೋಧಿಸಿದ ಪ್ರತಿಪಕ್ಷಗಳನ್ನು ಈ ಸಂದರ್ಭದಲ್ಲಿ ಟೀಕಿಸಿದರು.

ಈಗಿನ ವಿರೋಧಪಕ್ಷಗಳು ಉತ್ತರಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದವು. ಆದ್ದರಿಂದ ಮಹಿಳೆಯರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ಎದುರಾಗಿತ್ತು. ಒಂದು ವೇಳೆ ಮಹಿಳೆಯರು ದೂರು ನೀಡಲು ಠಾಣೆಗೆ ಹೋದರು ಅತ್ಯಾಚಾರಿಗಳು ಮತ್ತು ಮಾಫಿಯಾಗಳಿಂದ ಪೊಲೀಸರಿಗೆ ಕರೆ ಬರುತ್ತಿದ್ದವು. ಈಗಿನ ಹೊಸ ಉತ್ತರಪ್ರದೇಶವನ್ನು ಮತ್ತೆ ಹಿಂದಿನ ಕತ್ತಲು ದಿನಗಳಿಗೆ ತಡೆಯಲಾಗದು ಎಂದು ಪ್ರಧಾನಿ ಅವರು ತಿಳಿಸಿದರು.

ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಸರ್ಕಾರದ ನಿರ್ಧಾರವನ್ನು ಪ್ರಧಾನಿ ಅವರು ಸಮರ್ಥಿಸಿಕೊಂಡರು. ವಿದ್ಯಾಭ್ಯಾಸ ಮಾಡಲು, ಅವಕಾಶಗಳಿಗೆ ತೆರೆದುಕೊಳ್ಳಲು ಮಹಿಳೆಯರಿಗೂ ಒಂದಿಷ್ಟು ಸಮಯ ಬೇಕು. ಮಹಿಳೆಯರು ಪ್ರಗತಿ ಹೊಂದಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಆದರೆ ಕೆಲವರು ಈ ನಡೆಯನ್ನು ವಿರೋಧಿಸುತ್ತಿದ್ದಾರೆ. ದೇಶ ಎಲ್ಲವನ್ನು ನೋಡುತ್ತದೆ ಎಂದು ಪ್ರತಿಪಕ್ಷಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಮಸೂದೆ ವಿರೋಧಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಸೇರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಯಾಗ್ ನಲ್ಲಿ ನಡೆದ ಸ್ವಸಾಯ ಸಂಘಗಳ ಸಮಾವೇಶದಲ್ಲಿ ಮಗುವನ್ನು ಎತ್ತಿಕೊಂಡ ದೃಶ್ಯವು ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕನ್ನಡಿಗರ ಹಿತಕ್ಕಾಗಿ ‘ಮಹಾ’ ಸರ್ಕಾರದೊಂದಿಗೆ ಸಂಪರ್ಕ- ಆರಗ

0

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟ ಮತ್ತು ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸಗಣಿ ಮೆಚ್ಚಿದ ಪ್ರಕರಣದ ಸಂಬಂಧ ನಂದಗಡ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲಸಿ ಗ್ರಾಮದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ಮೂವರು ಆರೋಪಿಗಳನ್ನು ನಂದಗಡ ಪೊಲೀಸರು ಬಂಧಿಸಿದ್ದಾರೆ. ಖಾನಾಪುರದ ಹಲಸಿ ಗ್ರಾಮ ಪಂಚಾಯತ್ ಆವರಣದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ನಂತರ ಬಸವಣ್ಣನವರ ಮೂರ್ತಿಗೆ ಕಪ್ಪುಮಸಿ ಬಳಿದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಮೂಲತಹ ಹಲಸಿ ಗ್ರಾಮದ ಸಂಜು ಗುರವ, ಸಚಿನ ಗುರವ ಹಾಗೂ ಗಣೇಶ್ ಪೆಡ್ನೆಕರ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153A, 295,427,120B ರ ಅಡಿಯಲ್ಲಿ ಕೇಸ್ ದಾಖಲಾಗಿದೆ.

“ಗಡಿಪ್ರದೇಶದಲ್ಲಿ ಕನ್ನಡಿಗರು ಮರಾಠಿಗರು ಹಿತಕಾಪಾಡುವ ಕ್ರಮವಾಗಿ ಮಹಾರಾಷ್ಟ್ರದ ಗೃಹ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಎಂಇಎಸ್ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಾಡಿದ್ದೇವೆ. ಈ ವಿಷಯವನ್ನು ಪ್ರಧಾನಿಯವರ ಗಮನಕ್ಕೂ ತರಲಾಗುವುದು ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.

“ಎಂಇಎಸ್ ಸೇರಿ ಯಾವುದೇ ಸಂಘಟನೆಯ ಗುಂಡಾಗಿರಿ ವರ್ತನೆ ಸಹಿಸಿಕೊಳ್ಳಬಾರದು. ಅಂತವರನ್ನು ಗಡಿಪಾರು ಮಾಡಿ ಕಠಿಣ ನಿರ್ಧಾರ ಕೈಗೊಳ್ಳಬೇಕು” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬಸವೇಶ್ವರರ ಚಿತ್ರಕ್ಕೆ ಅಪಮಾನವನ್ನು ಖಂಡಿಸಿ, ಜಾಗತಿಕ ಲಿಂಗಾಯತ ಮಹಾಸಭಾದವರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹಾಗೂ ಈ ಸಂದರ್ಭದಲ್ಲಿ, ಮಹಾಪುರುಷರ ಪ್ರತಿಮೆಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿದರು.
ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಪ್ರತಿಭಟನೆಗೆ ಭಾಗವಹಿಸಿದ್ದರು.

ಇದೇ ರೀತಿ ಮಹಾರಾಷ್ಟ್ರದಲ್ಲೂ ಕೂಡ ಜನರ ಧಾರ್ಮಿಕತೆ ಮೇರೆ ಘಾಸಿಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ ಗೈದ ಪ್ರಕರಣ ಬೆಳಕಿಗೆ ಬಂದಿದೆ.

‘ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡದ ಬಾವುಟ ಕ್ಕೆ ಬೆಂಕಿ ಹಚ್ಚಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಬಗ್ಗೆ ಮಾಡಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್ ಅನ್ನು ನಿಷೇಧಿಸಿ ಎಂದು ಕನ್ನಡ ಚಿತ್ರದ ನಿರ್ಮಾಪಕರಾದ ಸಾ.ರ. ಗೋವಿಂದ್ ಆಗ್ರಹಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ” ಎಂಇಎಸ್ ನಿಷೇಧಿಸಿದರೆ ಅಷ್ಟೇ ಇಂತಹ ಕೃತ್ಯಗಳಿಗೆ ಶಾಶ್ವತ ಕಡಿವಾಣ ಹಾಕಬಹುದು. ವರನಟ ಡಾ. ರಾಜಕುಮಾರ್ ಅವರು ಈ ನಾಡಿಗೆ, ಭಾಷೆಗೆ, ನೆಲ-ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. ಈ ಭದ್ರ ಬುನಾದಿಯಲ್ಲಿ ನಾವಿದ್ದೇವೆ. ಭಾಷಾವಾರು ಪ್ರಾಂತ್ಯ ಮಾಡಿದ ಮೇಲೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರಕಿದೆ. ಆಡಳಿತಕ್ಕೆ ಬಂದ ಸರ್ಕಾರ ಕೇವಲ ಮತ್ತು ಭಿಕ್ಷೆಗಾಗಿ ಕನ್ನಡಿಗರ ಮಾನ, ಮರ್ಯಾದೆ ಗೌರವವನ್ನು ಹರಾಜು ಹಾಕುತ್ತಿವೆ ಎಂದು ಕನ್ನಡ ಚಿತ್ರದ ನಿರ್ಮಾಪಕ ಸಾ.ರಾ. ಗೋವಿಂದ್ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು, ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವುದನ್ನು ಮುಂದುವರಿಸಿದ್ದಾರೆ. ನೀರಜ್ ನಲ್ಲಿ ಗೋಕಾಕ ಮೂಲದ ಟ್ಯಾಕ್ಸಿಗೆ ಕಲ್ಲುಗಳ ತೂರಾಟದಿಂದ ವಾಹನದ ಹಿಂಬದಿಯ ಗಾಜು ಒಡೆದು ಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್ ಅನ್ನು ನಿಷೇಧಿಸಲಿ ಎಂದರು.

‘ ನಾಡು, ದುಡಿಗೆ ಅನ್ಯಾಯವಾದಾಗ ಇಡೀ ಚಿತ್ರೋದ್ಯಮ ಒಂದಾಗಿರುತ್ತದೆ. ಸಮಯ ಬಂದಾಗ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮುಖ್ಯಮಂತ್ರಿಗಳು ಕಠಿಣ ನಿಲುವು ತೆಗೆದುಕೊಳ್ಳಲಿ. ಇಡೀ ರಾಜ್ಯದ ಜನತೆ ನಿಮ್ಮ ಬೆನ್ನಿಗೆ ನಿಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ. ಆರ್. ಜೈರಾಜ್ ಅವರು ಮಾತನಾಡುತ್ತಿದ್ದರು. ” ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ರೀತಿ ಎಂಇಎಸ್ ತೊಂದರೆ ನೀಡುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿ ನಡೆಯುವ ಈ ಪುಂಡಾಟಕ್ಕೆ ಕೇಂದ್ರ ಸರ್ಕಾರವು ಕಡಿವಾಣ ಹಾಕಬೇಕು. ಕನ್ನಡಿಗರ ರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ರೀತಿ ಘಟನೆಗಳ ಆಗದಂತೆ ನಿಗಾವಹಿಸಬೇಕು” ಎಂದು ಸಾ.ರಾ. ಗೋವಿಂದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕದ ಕನಸು ಭಗ್ನ

0

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯವು ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ನಡೆಯಿತು. ಕರ್ನಾಟಕದ ವಿರುದ್ಧ ತಮಿಳುನಾಡು ಭರ್ಜರಿ ಜಯ ಸಾಧಿಸಿತು. ಈ ಮೂಲಕ ಕರ್ನಾಟಕ ತಂಡದ ವಿಜಯ್ ಹಜಾರೆ ಟ್ರೋಫಿ ಗಳಿಸುವ ಕನಸು ನುಚ್ಚುನೂರಾಯಿತು.
K.L ಸೈನಿ ಮೈದಾನದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು,
ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತು.
6 ನೇ ಓವರ್ ನಲ್ಲಿ ಬಾಬಾ ಅಪರಾಜಿತ್ ವಿಕೆಟ್ ಗಳಿಸಿದ ವೈಶಾಖ ವಿಜಯ್ ಕುಮಾರ್ ಉತ್ತಮ ಆರಂಭ ಒದಗಿಸಿದರು. ಜಗದೀಶನ್ ಜೊತೆಯಾಟದಲ್ಲಿ 147 ರನ್ ತಂಡಕ್ಕೆ ಸೇರಿಸಿದರು. 29ನೇ ಓವರ್ ನವರೆಗೂ ಕರ್ನಾಟಕದ ಬೌಲರ್ ಗಳು ವಿಕೆಟ್ ಲಭಿಸದೆ ಪರದಾಡಿದರು. .
ನಂತರ ಬಂದ ಶಾರೂಕ್ ಖಾನ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು, (ಅಜೇಯ 79 ರನ್) ‘ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್’ ನಲ್ಲಿ ತಮಿಳುನಾಡು ಗೆಲುವಿಗೆ ಕಾರಣರಾಗಿದ್ದ ಖಾನ್, ಇಲ್ಲಿಯೂ ಕೂಡ ಇದೇ ರೀತಿ ಆಟವಾಡಿ ಕರ್ನಾಟಕವನ್ನು ಎದೆಗುಂದುವಂತೆ ಮಾಡಿದರು,6 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಿಡಿಸಿ ತಂಡದ ಮತ್ತು 350 ರನ್ ದಾಟಲು ಕಾರಣರಾದರು.
ಖಾನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ತಮಿಳುನಾಡು ತಂಡ 355 ರನ್ ಗಳ ಗುರಿಯನ್ನ ಕರ್ನಾಟಕ ತಂಡಕ್ಕೆ ಸವಾಲಾಗಿ ನೀಡಿತು
ಬೃಹತ್ ಗುರಿಯನ್ನು ಬೆನ್ನತ್ತಿ ಆಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕರ್ನಾಟಕ 39 ಓವರ್ ಗಳಲ್ಲಿ ಆಲ್-ಔಟ್ ಆಗಿ 203 ರನ್ ಗಳಿಸಿಕೊಂಡಿತು.
ಮನೀಷ್ ಪಾಂಡೆ (8 ಎಸೆತಗಳಲ್ಲಿ 9 ರನ್) ದೊಡ್ಡ ಮೊತ್ತದ ಇನ್ನಿಂಗ್ಸ್ ಕಟ್ಟದಂತೆ ತಮಿಳುನಾಡಿನ ಬೌಲರ್ M. ಸಿದ್ದಾರ್ಥ್ ನೋಡಿಕೊಂಡರು. ಇದು ತಂಡಕ್ಕೆ ಬಹಳ ದೊಡ್ಡ ಪೆಟ್ಟಾಯಿತು, ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಮತ್ತು ಶ್ರೀನಿವಾಸ್ ಶರತ್ ಅವರು ಹೋರಾಟ ಮಾಡಿದರು. ತಂಡವನ್ನು ಜಯದತ್ತ ಮುನ್ನಡೆಸುವಲ್ಲಿ ವಿಫಲರಾದರು.
ದೇವದತ್ತ ಪಡಿಕ್ಕಲ್ ಖಾತೆ ತೆರೆಯದೇ ಮರಳಿದರು, ರೋಹನ್ ಕದಂ (24) ಮತ್ತು K.V ಸಿದ್ದಾರ್ಥ್ (29) ಎರಡನೇ ವಿಕೆಟ್ ಗೆ 59 ರನ್ ಸೇರಿಸಿದರು. ಸಿಲಂಬರಸನ್ ಬೌಲಿಂಗ್ ನಲ್ಲಿ ರೋಹನ್ ಔಟಾದರೆ, ಸಾಯಿ ಕಿಶೋರ್ ಎಸೆತದಲ್ಲಿ ಸಿದ್ದಾರ್ಥ್ ಪೆವಿಲಿಯನ್ ಗೆ ಮರಳಿದರು.
ಕರ್ನಾಟಕ ತಂಡ ಸಾಮರ್ಥ್ಯವಿದ್ದರೂ
ಟ್ರೋಫಿ ಗೆಲ್ಲಲು “ಸೆಮಿ” ಹಂತ ತಲುಪದೇ ಕೈಚೆಲ್ಲಿದ್ದು ಕ್ರಿಕೆಟ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮತಾಂತರ ಬಿಲ್ ಸಂವಿಧಾನ ಬಾಹಿರ-ಕಾಂಗ್ರೆಸ್

0

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿರೋಧಪಕ್ಷಗಳ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಿದೆ.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ -2021 ಅನ್ನು ಮಂಗಳವಾರ ಸದನದಲ್ಲಿ ವಿರೋಧಪಕ್ಷದ ಗದ್ದಲದ ನಡುವೆಯೂ ಮಂಡಿಸಲಾಗಿದೆ. ಈ ವಿಧೇಯಕದ ಬಗ್ಗೆ ವಿಸ್ತೃತ ಚರ್ಚೆಗೆ ಸದನದಲ್ಲಿ ಬುಧವಾರ ಅವಕಾಶ ನೀಡಿದೆ ಹಾಗೂ ಅಂಗೀಕಾರ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಬುಧವಾರ ತೀವ್ರವಾದ ಕೋಲಾಹಲ ನಡೆಯುವ ಸಾಧ್ಯತೆಯಿದೆ.

‘ಇದು ಜನ ಹಾಗೂ ಕಾನೂನು ವಿರೋಧಿ ಹೀಗಾಗಿ ವಿಧೇಯಕ ಒಪ್ಪಲು ಸಾಧ್ಯವಿಲ್ಲ. ವಿಧೇಯಕದ ಪ್ರಸ್ತಾವನೆಗೆ ನಮ್ಮ ವಿರೋಧ ಇದೆ. ಕರ್ನಾಟಕ ಇತಿಹಾಸದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಮಧ್ಯಪ್ರದೇಶ ಸರ್ಕಾರ ಮಂಡಿಸಿ ಈ ವಿಧೇಯಕ ಕುರಿತು ಖಟ್ಲೆ ಕೋರ್ಟ್ ನಲ್ಲಿ ಬಾಕಿ ಇದೆ. ಇದರ ಅರಿವಿದ್ದರೂ ಸರ್ಕಾರ ವಿಧೇಯಕ ಮಂಡಿಸಿದೆ. ಇದು ಸರ್ಕಾರದ ನಾಟಕ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರ ಟೀಕೆಗೆ ಪ್ರತ್ಯುತ್ತರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ‘ಈ ಬಗ್ಗೆ ಕೂಲಂಕಷ ಚರ್ಚೆಗೆ ಸರ್ಕಾರ ಸಿದ್ಧವಿದೆ‌. ಇದರ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಲು ಕೂಡ ಹಿಂಜರಿಯುವುದಿಲ್ಲ. ನಾವು ಕ್ರಿಶ್ಚಿಯನ್, ಪಾರ್ಸಿ ಹಾಗೂ ಇಸ್ಲಾಂ ಧರ್ಮಗಳನ್ನು ಉಲ್ಲೇಖಿಸಿಲ್ಲ ಚರ್ಚೆಯಲ್ಲಿ ಭಾಗವಹಿಸಿ’ ಎಂದು ಪ್ರತಿಪಕ್ಷಗಳ ನಾಯಕರನ್ನು ಕೋರಿಕೊಂಡರು.

ಜೆಡಿಎಸ್ ಪಕ್ಷ ಕೂಡಾ ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದೆ ‘ನಿಮಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಬೇಡ ಮತಾಂತರ ನಿಷೇಧ ಉದ್ದೇಶ ಈಡೇರಬೇಕು’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಮತಾಂತರ ನಿಷೇಧ ವಿಧೇಯಕ ಮಂಡನೆಯ ಬಳಿಕ ಸದನದ ಹೊರಗೆ ಮತ್ತು ಒಳಗೆ ಆಡಳಿತ ಮತ್ತು ಪ್ರತಿಪಕ್ಷಗಳ ಪ್ರಮುಖರ ಮಧ್ಯೆ ವಾಗ್ವಾದ ನಡೆಯಿತು. ‘ಮತಾಂತರ ನಿಷೇಧ ವಿಧೇಯಕ ಆರ್ ಎಸ್ಎಸ್ ಅಜೆಂಡಾ. ಸರ್ಕಾರದ ಸಾಧನೆಗಳನ್ನು ಹೇಳಲು ಏನು ಇಲ್ಲ. ಹೀಗಾಗಿ ಆರ್ಎಸ್ಎಸ್ ನಿರ್ದೇಶನದಂತೆ ಮತಾಂತರ ನಿಷೇಧ ವಿಧೇಯಕ ತರಲಾಗಿದೆ. ಸಂವಿಧಾನದ ಸೆಕ್ಷನ್ 21 21 ಉಲ್ಲಂಘಿಸಿ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಲಾಗಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದರು. ಕಾಂಗ್ರೆಸ್ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ’ ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ‘ರಾಜ್ಯ ಸರ್ಕಾರದ ಕದ್ದುಮುಚ್ಚಿ ವಿಧೇಯಕ ಮಂಡಿಸಿದೆ. ವಿಧೇಯಕ ಮಂಡನೆ ಪ್ರಸ್ತಾವನೆಗೆ ನಮ್ಮ ವಿರೋಧವಿದೆ. ಇದು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಭತ್ಯೆ ಮಂಜೂರು ಮಾಡಿ

0

ಕೋವಿಡ್ ಸೋಂಕಿತರೊಂದಿಗೆ ನಿರಂತರ ಕಾರ್ಯನಿರ್ವಹಿಸಿರುವ ಶುಶ್ರೂಷಕರ ಪೈಕಿ ಶೇ.60ರಷ್ಟು ಮಂದಿಗೆ ಇದುವರೆಗೆ ಕೋವಿಡ್ ಭತ್ಯೆ ಮಂಜೂರು ಮಾಡಿಲ್ಲ.
ಶುಶ್ರೂಷಕರಿಗೆ ಕೋವಿಡ್ ರಿಸ್ಕ್ ಪ್ರೋತ್ಸಾಹಧನ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಹಲವು ಸಲ ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲಿ 2022ರ ಜನವರಿ ಎಂಟರಂದು ತ್ರೈಮಾಸಿಕ ಸಭೆ ಕರೆದಿದ್ದು, ಈ ಕುರಿತು ಚರ್ಚೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಅಧ್ಯಕ್ಷರಾಗಿರುವ ರಾಜಕುಮಾರ್ ಮಾಳಗೆ ತಿಳಿಸಿದ್ದಾರೆ.
ವೈದ್ಯರು ಮತ್ತು ಗ್ರೂಪ್ ಡಿ ನೌಕರರಿಗೆ ಕೋವಿಡ್ ರಿಸ್ಕ್ ಇನ್ಸೆಂಟಿವ್ ಮಂಜೂರು ಮಾಡಲಾಗಿದೆ. ಆದರೆ, ಶುಶ್ರೂಷಕರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಆರೋಗ್ಯ ಇಲಾಖೆಯು 2020 ರ ಸೆಪ್ಟೆಂಬರ್ 24ರಂದು ಮೊದಲ ಆದೇಶ ಹೊರಡಿಸಿದ್ದು, ಅದರಲ್ಲಿ ಶುಶ್ರೂಷಕ ಅಧಿಕಾರಿಗಳಿಗೆ ಮಾಸಿಕ 5 ಸಾವಿರ ರೂಪಾಯಿ. ಎರಡನೇ ಅಲೆಯಲ್ಲಿ 8 ಸಾವಿರ ರೂಪಾಯಿ ಕೋವಿಡ್ ರಿಸ್ಕ್ ಪ್ರೋತ್ಸಾಹಧನ ಮಂಜೂರು ಮಾಡುವಂತೆ ಸೂಚನೆ ನೀಡಿತ್ತು. ಆದರೆ, ಮೊದಲನೇ ಹಂತದಲ್ಲಿ ಕೋವಿಡ್ ಕರ್ತವ್ಯ ನಿರ್ವಹಣೆ ಮಾಡಿದ ಹೊರಗುತ್ತಿಗೆ ನೌಕರರಿಗೆ ಮಾತ್ರ ಭತ್ಯೆ ನೀಡಿದೆ‌.
ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆಗಳಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಶುಶ್ರೂಷಕರು ಕೋವಿಡ್ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಆದರೆ, ಅವರಲ್ಲಿ ಬಹುತೇಕರು ಪಿಪಿಇ ಕಿಟ್ ಧರಿಸಿರಲಿಲ್ಲ.ಆದರೆ, ಇದೊಂದನ್ನೇ ಮಾನದಂಡ ಮಾಡಿಕೊಂಡು ಪ್ರೋತ್ಸಾಹಧನ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಖಾಯಂ ಸಿಬ್ಬಂದಿಗೆ ಪ್ರೋತ್ಸಾಹಧನ ಸಿಕ್ಕಿಲ್ಲ ಎನ್ನುವುದು ಶುಶ್ರೂಷಕರ ಆರೋಪವಾಗಿದೆ. ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸಿದ ವರಿಗೆ ಮಾತ್ರ ಪ್ರೋತ್ಸಾಹ ಧನ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು 2021ರ ಜೂ.16ರಂದು ಆದೇಶ ಹೊರಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮತ್ತೆ ರಾಜ್ಯದಲ್ಲಿ ಓಮಿಕ್ರಾನ್ ಪತ್ತೆ.

0

ರಾಜ್ಯದಲ್ಲಿ ಮತ್ತೆ ಐವರಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.
ರಾಜ್ಯದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ ಸೋಂಕಿತರ ರೋಗಲಕ್ಷಣವನ್ನು ಗಮನಿಸಿದಾಗ, ಸೋಂಕು ಗಂಭೀರವಾಗಿಲ್ಲ. ಕೆಲವರಿಗೆ ಹೋಂ ಕ್ವಾರಂಟೈನ್ ಮೂಲಕವೇ ಚಿಕಿತ್ಸೆ ನೀಡಬಹುದು. ಆದರೆ ಸೋಂಕು ಹೊಸದಾಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ದಿನಗಳ ಕಾಲ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡುವುದು ಒಳ್ಳೆಯದು ಎಂದು ಮಣಿಪಾಲ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸುದರ್ಶನ್ ಬಲ್ಲಾಳ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಓಮಿಕ್ರಾನ್ ಸೋಂಕು ಕಾಣಿಸಿಕೊಂಡವರಲ್ಲಿ ಕಾಯಿಲೆ ಗಂಭೀರ ಸ್ವರೂಪದಲ್ಲಿ ಉಲ್ಬಣವಾಗಿಲ್ಲ. ಈ ಸೋಂಕು ಕಾಣಿಸಿಕೊಂಡ 19 ಜನರ ಪೈಕಿ, 15 ಮಂದಿ ಎರಡೂ ಡೋಸ್ ಲಸಿಕೆ ಪಡೆದವರಾಗಿದ್ದು, ನಾಲ್ವರು 18 ವರ್ಷದೊಳಗಿನವರಾಗಿದ್ದರಿಂದ ಲಸಿಕೆ ಪಡೆದಿಲ್ಲ ಎಂದು ತಿಳಿದುಬಂದಿದೆ.
ಓಮಿಕ್ರಾನ್ ಕಾಣಿಸಿಕೊಂಡವರು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ, ಕೋವಿಡ್ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ಇಬ್ಬರು ಓಮಿಕ್ರಾನ್ ಸಂಪರ್ಕಿತ ರಿಗೆ ಈ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ, ಕೆಲವರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಕೆಲವರಿಗೆ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಓಮಿಕ್ರಾನ್ ಸೋಂಕಿತರ ಸಂಪರ್ಕಿತರಿಗೆಲ್ಲಾ ಸೋಂಕು ತಗುಲುವುದಿಲ್ಲ ಎಂದು ಸ್ಪಷ್ಟವಾಗಿದೆ.
ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲು ಓಮಿಕ್ರಾನ್ ಕೇಸ್ ಪತ್ತೆಯಾಗಿತ್ತು. ಡಿಸೆಂಬರ್ 3ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿ ಹಾಗೂ ಬೆಂಗಳೂರಿನ ವೈದ್ಯರೊಬ್ಬರಿಗೆ ಓಮಿಕ್ರಾನ್ ತಗುಲಿರುವುದು ದೃಢಪಟ್ಟಿತ್ತು. ಈ ಇಬ್ಬರೂ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಯಾವುದೇ ಪ್ರಯಾಣ ಇತಿಹಾಸ ಹೊಂದಿರಲಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಆ್ಯಷಸ್ ಕ್ರಿಕೆಟ್ ಸರಣಿ. ಆಸ್ಟ್ರೇಲಿಯ ಎರಡನೇ ಜಯ

0

ಆ್ಯಷಸ್ ಸರಣಿಯ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಿತು. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಜಯ ಸಾಧಿಸಿತು.

“ಅಡಿಲೇಡ್ ಓವಲ್” ಕ್ರೀಡಾಂಗಣದಲ್ಲಿ ನಡೆದ ಆ್ಯಷಸ್ ಟ್ರೋಫಿ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಶುಭಾರಂಭ ಮಾಡಿತು, ಮೊದಲ ದಿನ ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಪತನಕ್ಕೆ 150.4 ಓವರ್ಗಳಲ್ಲಿ 473 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 61 ಓವರ್ ಗಳಲ್ಲಿ 230 ಗಳಿಸಿಕೊಂಡಿತು.
ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಆತಿಥೇಯರು 275 ರನ್ ಗಳ ಜಯ ಸಾಧಿಸಿದರು, ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದರು,
“ಪಿಂಕ್ ಬಾಲ್” ಟೆಸ್ಟ್ ನಲ್ಲಿ ಆಸ್ಟ್ರೇಲಿಯದ ಅಧಿಪತ್ಯ ಮುಂದುವರೆದಿದ್ದು, ಈ ವರೆಗೆ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಂತಾಯಿತು.
ಇಂಗ್ಲೆಂಡ್ ಬ್ಯಾಟಿಂಗ್ ಪಡೆಯ ಮೇಲೆ ಮತ್ತೊಮ್ಮೆ ಹಿಡಿತ ಸ್ಥಾಪಿಸಿದ ಆಸ್ಟ್ರೇಲಿಯದ ಬೌಲರ್ ಗಳು ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.
468 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್, 192 ರನ್ಗಳಿಗೆ ಪತನ ಕಂಡಿತು, 207 ಎಸೆತಗಳಲ್ಲಿ 26 ರನ್ ಗಳಿಸಿದ ವಿಕೆಟ್ ಕೀಪರ್ ಮತ್ತು 97 ಎಸೆತಗಳಲ್ಲಿ ಏಳು ಬೌಂಡರಿ ಗಳೊಂದಿಗೆ 44 ರನ್ ಕಲೆಹಾಕಿದ 8 ನೇ ಕ್ರಮಾಂಕದ ಬ್ಯಾಟರ್ ‘ಕ್ರಿಸ್ ವೋಕ್ಸ್’ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಡೆಸಿದ ಶ್ರಮ ವ್ಯರ್ಥವಾಯಿತು.
ಅನೇಕ ಪಂದ್ಯಗಳಲ್ಲಿ ತಂಡವನ್ನು ಕಾಪಾಡಿಸಿದ್ದ ಜಗತ್ತಿನ ಒಂದನೇ ಕ್ರಮಾಂಕದ ಟೆಸ್ಟ್ ಬ್ಯಾಟ್ಸ್ ಮನ್ “ಜೋ ರೂಟ್” ಕ್ರೀಸ್ ನಲ್ಲಿ ಇರುವವರೆಗೂ ಇಂಗ್ಲೆಂಡ್ ಪಾಳ್ಯದಲ್ಲಿ ಭರವಸೆ ಇತ್ತು, ಆದರೆ ಅವರನ್ನು ನಾಲ್ಕನೇ ದಿನದ ಕೊನೆಯ ಓವರ್ ನಲ್ಲಿ ಔಟ್ ಮಾಡುವುದರೊಂದಿಗೆ ಆಸ್ಟ್ರೇಲಿಯಾ ಸುಲಭ ಜಯಕ್ಕೆ ಸಿದ್ಧವಾಗಿತ್ತು, ಆಸ್ಟ್ರೇಲಿಯಾದ ಪ್ರಬಲ ದಾಳಿ ಎದುರಿಸಲಾಗದೆ ‘ಓಲಿ ಪೋಪ್’ ಬೇಗನೆ ಮರಳಿದರು, ‘ಬಟ್ಲರ್ ಮತ್ತು ವೋಕ್ಸ್’ 61 ರನ್ ಗಳ ಜೊತೆಯಾಟದ ಮೂಲಕ ಆಸ್ಟ್ರೇಲಿಯಾ ಬೌಲರ್ ಗಳನ್ನ ಕಾಡಿದರು.
ದಾಖಲೆ ಮೊತ್ತ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನವಾದ ಭಾನುವಾರ 82 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು, ಹೀಗಾಗಿ ಆತಂಕದಲ್ಲೇ ಕೊನೆಯ ದಿನ ಕಣಕ್ಕೆ ಇಳಿದಿತ್ತು, ಆದರೆ ‘ಬೆಲ್ ಸ್ಟೋಕ್ಸ್’ , ‘ಜೋಸ್ ಬಟ್ಲರ್’ , ಮತ್ತು ‘ಕ್ರಿಸ್ ವೋಕ್ಸ್’ , ಅವರ ಹೋರಾಟದಿಂದಾಗಿ ನಾಯಕ ‘ಪ್ಯಾಟ್ ಕಮಿನ್ಸನ್’ ಬದಲಿಗೆ ಈ ಪಂದ್ಯದಲ್ಲಿ ಆಡಿದ ‘ಜೇ ರಿಚರ್ಡ್ಸನ್’ 5 ವಿಕೆಟ್ ಉರುಳಿಸಿ ಮಿಂಚಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಬ್ರಾಹ್ಮಣ ಸಭಾ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಶ್ರೀಅಶೋಕ ಹಾರನಹಳ್ಳಿ ಆಯ್ಕೆ

0

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಅಶೋಕ್ ಹಾರನಹಳ್ಳಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕ್ ಹಾರನಹಳ್ಳಿ ಯವರು ಮುನ್ನಡೆ ಪಡೆದಿದ್ದಾರೆ. ಇವರೊಂದಿಗೆ ಸಹ ಸ್ಪರ್ಧಿಯಾಗಿ ಎಸ್‌. ರಘುನಾಥ್ ಮತ್ತು ಆರ್. ಲಕ್ಷ್ಮಿಕಾಂತ್ ಸ್ಪರ್ಧಿಸಿದ್ದರು.
ಅಶೋಕ್ ಹಾರನಹಳ್ಳಿ ಮತ್ತು ರಘುನಾಥ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹಾರನಹಳ್ಳಿ ಅವರು 455 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ನೂತನ ಅಧ್ಯಕ್ಷರ ಅಧಿಕಾರ ಅವಧಿ 2022ರ ಜನವರಿಯಿಂದ 2024ರ ಡಿಸೆಂಬರ್ ವರೆಗೆ ಇರಲಿದೆ.
ಬೆಂಗಳೂರು ನಗರದ ಪಂಪ ಮಹಾಕವಿ ರಸ್ತೆಯ ಶಂಕರಪುರದಲ್ಲಿ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಮತದಾನಕ್ಕೆ 20 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ, ರಾಯಚೂರು ಕೇಂದ್ರಗಳಲ್ಲಿ ಡಿ.12ರಂದು ಮತದಾನ ನಡೆದಿತ್ತು. ಈ ಎನ್ನ ಕೇಂದ್ರಗಳಲ್ಲಿನ ಮತಗಳನ್ನು ಕ್ರೋಡೀಕರಿಸಿದ ಬಳಿಕ ಮತ ಎಣಿಕೆ ನಡೆಯಿತು.