Tuesday, February 10, 2026
Tuesday, February 10, 2026
Home Blog Page 1814

ಚೀನಾ ರಾಯಭಾರಿಯಾಗಿ : ದಿಲೀಪ್ ಕುಮಾರ್ ರಾವತ್

0

ಚೀನಾ ದೇಶಕ್ಕೆ ಭಾರತದ ನೂತನ ರಾಯಭಾರಿಯಾಗಿ ಐಎಫ್ಎಸ್ ಅಧಿಕಾರಿ ಪ್ರದೀಪ್ ಕುಮಾರ್ ರಾವತ್ ಅವರನ್ನು ನೇಮಿಸಲಾಗಿದೆ.

1990 ನೇ ತಂಡದ ಅಧಿಕಾರಿಯಾಗಿರುವ ದೀಪಕ್ ಕುಮಾರ್ ಅವರು ಪ್ರಸ್ತುತ ನೆದರ್ಲ್ಯಾಂಡ್ ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2017ರಲ್ಲಿ ಡೋಕ್ಲಾಂ ನ ಭಾರತ ಹಾಗೂ ಚೀನಾ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಸಂದರ್ಭದಲ್ಲಿ ದೀಪಕ್ ಕುಮಾರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೂರ್ವ ಏಷ್ಯಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು. ಇಂದಿನ ಸನ್ನಿವೇಶದಲ್ಲಿ ಎರಡು ರಾಷ್ಟ್ರಗಳ ನಡುವೆ ಹಲವು ಮಾತುಕತೆ ಸಂಧಾನದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕನ್ನಡದ ಅಸ್ಮಿತೆ ಕೆಣಕಿದ ಎಂಇಎಸ್ ನಿಷೇಧಕ್ಕೆ ಒತ್ತಾಯ

0

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಹಾಗೂ ಬೆಳಗಾವಿಯಲ್ಲಿ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದರ ಜೊತೆಗೆ , ಈ ಕೃತ್ಯಕ್ಕೆ ಪ್ರಚೋದನೆ ನೀಡಿದವರ ವಿರುದ್ಧವೂ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲು ಸರ್ವಾನುಮತದ ನಿರ್ಣಯಕ್ಕೆ ಅಂಗೀಕಾರವಾಗಿದೆ.

ಬೆಳಗಾವಿ ವಿಚಾರದಲ್ಲಿ ಪದೇಪದೇ ಖ್ಯಾತೆ ತೆಗೆಯುವ ಮಹಾರಾಷ್ಟ್ರದ ಎಂಇಎಸ್ ಸಂಘಟನೆಯನ್ನು ಕಾನೂನು ಚೌಕಟ್ಟಿನಲ್ಲಿ ನಿಷೇಧಿಸಲು ಪರಿಶೀಲನೆ ನಡೆಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

“ಇದು ದೇಶದ್ರೋಹದ ಕೆಲಸ. ವಿಕೃತ ಮನಸ್ಸುಗಳು ಷಡ್ಯಂತ್ರ. ಇದರ ಹಿಂದೆ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕುತಂತ್ರ ಅಡಗಿದೆ. ತರಲಾಗುವುದು” ಎಂದು ಬೊಮ್ಮಾಯಿ ಅವರು ಸದನದಲ್ಲಿ ತಿಳಿಸಿದ್ದಾರೆ.

ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟಿದ್ದು, ಶಿವಾಜಿ ಪ್ರತಿಮೆಗೆ ಮಸಿ ಬಳಿದದ್ದು ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ್ದ ಪ್ರಕರಣಗಳನ್ನು ವಿರೋಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವಂತೆ ಪಕ್ಷಭೇದ ಮರೆತು ಒಕ್ಕೊರಲಿನಿಂದ ಎಲ್ಲಾ ರಾಜಕೀಯ ನಾಯಕರು ಕನ್ನಡದಲ್ಲಿ ಪಕ್ಷದ ನಾಯಕರು ಕನ್ನಡಕ್ಕಾಗಿ ಧ್ವನಿ ಎತ್ತಿದ್ದಾರೆ.

“ಒಕ್ಕೂಟ ವ್ಯವಸ್ಥೆ ಒಪ್ಪಿದ ನಂತರವೂ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾಲ್ಕೆರೆದು ಪದೇಪದೇ ಜಗಳಕ್ಕೆ ಬರುತ್ತಿದೆ. ಇಂಥವರು ಬುದ್ಧಿಹೀನರು, ಅವಿವೇಕಿಗಳು. ಕನ್ನಡಿಗರ ಸ್ವಾಭಿಮಾನ ಕೆಣಕುವ ಇಂತಹ ಪುಂಡರನ್ನು ಗಡಿಪಾರು ಮಾಡಬೇಕು” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಆಗ್ರಹಿಸಿದರು.

ರಾಜ್ಯದ ವಿವಿಧೆಡೆ ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧಿಸಬೇಕು ಎಂದು ಕನ್ನಡ ಪರ ರಕ್ಷಣಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

“ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಸ್ವತಂತ್ರ ಸೇನಾನಿಗಳ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಪ್ರತಿಷ್ಠಾಪಿಸುವ ಮೂಲಕ ಸೂರ್ಯ-ಚಂದ್ರ ಇರುವವರೆಗೆ ಅವರ ತ್ಯಾಗ ಬಲಿದಾನ ಶಾಶ್ವತವಾಗಿ ಇರುವಂತೆ ಸರ್ಕಾರ ನೋಡಿಕೊಳ್ಳಲಿದೆ” ಎಂದು ಬೊಮ್ಮಾಯಿ ಅವರು ಸದನದಲ್ಲಿ ಘೋಷಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ತುಮರಿ ಭಾಗದಲ್ಲಿ ಆರೋಗ್ಯ ಸೌಲಭ್ಯ ಕೊರತೆ

0

ಸಾಗರ ತಾಲೂಕಿನ ತುಮರಿ ಗ್ರಾಮದಲ್ಲಿ ಆರೋಗ್ಯ ಸೇವೆಯಲ್ಲಿಯ ಅವ್ಯವಸ್ಥೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ಪ್ರಮುಖರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಕಣ್ಣು, ಕಿವಿ, ಮೂಗು ಇಲ್ಲದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ತುಮರಿ ಭಾಗದಲ್ಲಿ 108 ಅಂಬುಲೆನ್ಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಕಳೆದ ಒಂದು ವಾರದ ಅವಧಿಯಲ್ಲಿ ಈ ಭಾಗದ ಇಬ್ಬರು ಸಕಾಲದಲ್ಲಿ ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಳ್ಳುವಂತಾಗಿದೆ. ಈ ಸಾವಿನ ಹೊಣೆಯನ್ನು ತಾಲೂಕು ಆಡಳಿತವೇ ಹೊರಬೇಕು ಎಂದು ಸಾಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಮ್ಮ ಬೇಸರವನ್ನು ತೊಡಗಿಕೊಂಡಿದ್ದಾರೆ.
ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿರುವ ಈ ಭಾಗದ ಮುಳುಗಡೆ ಸಂತ್ರಸ್ತರಿಗೆ ಆರೋಗ್ಯ ಸೇವೆ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂಬ ಕನಿಷ್ಠ ಕಳಕಳಿಯೂ ಆಡಳಿತ ನಡೆಸುವವರಿಗೆ ಇಲ್ಲದೆ ಇರುವುದು ಬೇಸರದ ಸಂಗತಿ ಎಂದರು.
ಕಳೆದ ವಾರ ಅಂಬುಲೆನ್ಸ್ ಕೊರತೆಯಿಂದ ಇಬ್ಬರು ವ್ಯಕ್ತಿಗಳ ಮೃತಪಟ್ಟಿದ್ದಾರೆ. ಕ್ಷೇತ್ರದ ಶಾಸಕರು ಈ ಭಾಗಕ್ಕೆ ಬಂದಿದ್ದರೂ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಅಂಬುಲೆನ್ಸ್ ಸೇವೆ ಸಿಗದೆ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅವರು ಒತ್ತಾಯಿಸಿದರು.
ಬರುವ ಫೆಬ್ರವರಿ 28ರೊಳಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿಯಾಗಿ ನೂತನ ಅಂಬುಲೆನ್ಸ್ ಮಂಜೂರು ಮಾಡದೇ ಇದ್ದರೆ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅಲ್ಲದೆ, ಆರೋಗ್ಯ ಕೇಂದ್ರಕ್ಕೆ ಕೊರತೆ ಇರುವ ವೈದ್ಯ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ದೇವೇಂದ್ರ, ಉಪಾಧ್ಯಕ್ಷೆ ಶ್ರೀದೇವಿ, ಪ್ರಮುಖರಾದ ಎಸ್.ಎಲ್. ನಾಗರಾಜ್, ಸುಧಾಕರ್, ಸುರೇಶ್ ಕೆರೋಡಿ, ಮಹೇಶ್ ವಿಲ್ಲಿ ಮನೋಹರ್, ಕೃಷ್ಣ ಭಂಡಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಕ್ರಮ ಹಣ ಹೂಡಿಕೆ ಐಶ್ವರ್ಯ ರೈ ವಿಚಾರಣೆ

0

ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿರುವ ಪನಾಮ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ಸುಮಾರು 6 ಗಂಟೆಗಳ ಕಾಲ ನಡೆದಿದೆ. ಜಾಗತಿಕವಾಗಿ 2016ರಲ್ಲಿ ಪನಾಮ ಪೇಪರ್ಸ್ ಹಗರಣ ಸುದ್ದಿಯಾಗುತ್ತಲೇ ವಿದೇಶದಲ್ಲಿ ಅಕ್ರಮವಾಗಿ ಹೂಡಿಕೆಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ.

ಅದರಂತೆ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಜಾಮ್ ನಗರದಲ್ಲಿರುವ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಯು ಐಶ್ವರ್ಯ ರೈ ಅವರಿಗೆ ಸಮನ್ಸ್ ನೀಡಲಾಗಿತ್ತು. ಹಾಗಾಗಿ ಅಮಿತಾಬ್ ಬಚ್ಚನ್ ಹಾಗೂ ಜಯ ಬಚ್ಚನ್ ಅವರ ಸೊಸೆ ವಿಚಾರಣೆಗೆ ಹಾಜರಾಗಿದ್ದರು.

ಭಾರತೀಯ ರಿಸರ್ವ್ ಬ್ಯಾಂಕ್ ನ ಉದಾರೀಕೃತ ರವಾನೆ ಯೋಜನೆ ಅಡಿಯಲ್ಲಿ 2004ರಿಂದ ವಿದೇಶಿ ಸಂಸ್ಥೆಗಳ ಜೊತೆ ನಡೆದಿರುವ ವಹಿವಾಟು, ಹಣ ಸಂದಾಯ ಕುರಿತು ಮಾಹಿತಿ ನೀಡುವಂತೆ ಈಗಾಗಲೇ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ನೋಟಿಸ್ ನೀಡಲಾಗಿತ್ತು. ಪ್ರಸ್ತುತ ಸಂದರ್ಭದಲ್ಲಿ ಕೂಡ ಪ್ರಕರಣದ ತನಿಖೆ ನಡೆಯುತ್ತಿದೆ.

ಈ ಹಿಂದೆ ಬಚ್ಚನ್ ಅವರ ಕುಟುಂಬವು ತನಿಖಾ ಸಂಸ್ಥೆಗೆ ಹಲವು ದಾಖಲೆಗಳನ್ನು ನೀಡಿದೆ. ಐಶ್ವರ್ಯ ಅವರು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸ್ಥಾಪನೆಯಾದ ಅಮಿತ್ ಪಾರ್ಟ್ನರ್ಸ್ ಕಂಪನಿ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್ ಅವರನ್ನು ಈ ಮೊದಲೇ ಇ. ಡಿ ವಿಚಾರಣೆ ನಡೆಸಲಾಗಿತ್ತು.

ವಿದೇಶಗಳಲ್ಲಿ ಅಕ್ರಮವಾಗಿ ಹಣಹೂಡಿಕೆ ಸಂಬಂಧಿಸಿದಂತೆ ಜಾಗತಿಕ ಕಾನೂನು ಸಂಸ್ಥೆ ‘ ಮೋಸ ಫೊನ್ಸೇಕಾ ದ ದಾಖಲೆ ಸೋರಿಕೆಯಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ ಇದು ಜಾಗತಿಕವಾಗಿ ಗಮನ ಸೆಳೆದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜಮ್ಮುಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ

0

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಗಾಗಿ ರಚಿಸಿದ ಆಯೋಗವು ಶಿಫಾರಸ್ಸು ಗಳ ಮೊದಲ ಕರಡು ಸಿದ್ಧಪಡಿಸಿದೆ. ಜಮ್ಮುವಿನಲ್ಲಿ 6 ಹಾಗೂ ಕಾಶ್ಮೀರದಲ್ಲಿ ಬಂದು ವಿಧಾನಸಭಾ ಕ್ಷೇತ್ರದ ಸಂಖ್ಯೆ ಹೆಚ್ಚಿಸುವ ಪ್ರಸ್ತಾಪ ಮುಂದಿಟ್ಟಿದೆ. ಇದರ ಜೊತೆ ವಿಧಾನಸಭೆ ಚುನಾವಣೆ ಸದ್ಯದಲ್ಲಿಯೇ ನಡೆಯಲಿದೆ ಎನ್ನುವುದು ಖಚಿತವಾಗಿದೆ. ಆದರೆ, ಬಿಜೆಪಿಯ ರಾಜಕೀಯ ಲಾಭ ಗಮನದಲ್ಲಿಟ್ಟುಕೊಂಡು ಕ್ಷೇತ್ರ ಪುನರ್ ವಿಂಗಡನೆ ಕರಡು ಸಿದ್ಧಪಡಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಜಮ್ಮುವಿನಲ್ಲಿ ವಿಧಾನಸಭೆ ಕ್ಷೇತ್ರಗಳನ್ನು 43ಕ್ಕೆ ಮತ್ತು ಕಾಶ್ಮೀರದಲ್ಲಿ 45ಕ್ಕೆ ಏರಿಸುವುದು ಆಯೋಗದ ಶಿಫಾರಸ್ಸುಗಳಾಗಿವೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಾಗಿರುವ 24 ಕ್ಷೇತ್ರಗಳು ಹಾಗೆಯೇ ಉಳಿಯಲಿವೆ. ಜನಸಂಖ್ಯೆಯನ್ನು ಕಡೆಗಣಿಸಿ ಬಿಜೆಪಿ ಪ್ರಾಬಲ್ಯವಿರುವ ಜಮ್ಮು ಪ್ರದೇಶಕ್ಕೆ ಹೆಚ್ಚಿನ ಕ್ಷೇತ್ರ ನೀಡಲಾಗಿದೆ ಎನ್ನುವುದು ಪ್ರತಿಪಕ್ಷಗಳ ಆರೋಪವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನೀಚಡಿಯಲ್ಲಿ ನಕ್ಷತ್ರವನ ನಿರ್ಮಾಣ

0

ಸರ್ಕಾರದ ಸಹಕಾರದೊಂದಿಗೆ ನೀಚಡಿ ಗ್ರಾಮದಲ್ಲಿ ನಕ್ಷತ್ರ ವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಕೇವಲ ಸರ್ಕಾರದಿಂದ ನಿರ್ಮಾಣಗೊಂಡರೆ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ತಿಳಿಸಿದ್ದಾರೆ.

ಸಾಗರ ತಾಲೂಕಿನ ನೀಚಡಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿ ನಿರ್ಮಾಣವಾಗುತ್ತಿರುವ ನಕ್ಷತ್ರ ವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. “35 ವರ್ಷಗಳ ಹಿಂದೆ ಪಶ್ಚಿಮಘಟ್ಟ ಆಂದೋಲನವು ಆರಂಭವಾಗಿದೆ. ಪವಿತ್ರವನ, ನಕ್ಷತ್ರ ವನ, ರಾಶಿವನವನ್ನು ಶಿರಸಿ ತಾಲ್ಲೂಕಿನಲ್ಲಿ ಪತ್ಕಳದಲ್ಲಿ ಪ್ರಥಮವಾಗಿ ಆರಂಭಿಸಿ ಇಂದು ರಾಜ್ಯಾದ್ಯಂತ ಇಂತಹ ಮನಗಳು ನಿರ್ಮಾಣವಾಗುತ್ತಿದೆ. ನೀಚಡಿ ಯುವಕರ ಕೆರೆ ಅಭಿವೃದ್ಧಿ, ಅರಣ್ಯ ಸಂರಕ್ಷಣೆ ಯಂತಹ ಸಾಮಾಜಿಕ ಕಾರ್ಯಗಳು ಶ್ಲಾಘನೀಯ ಎಂದು ಆಶೀಸರ ತಿಳಿಸಿದರು.

ಜಿಲ್ಲೆಯಾದ್ಯಂತ ಗೋಶಾಲೆಗಳು ನಿರ್ಮಾಣವಾಗುತ್ತಿದೆ. ಗ್ರಾಮಗಳಿಗೆ ಮೀಸಲಿದ್ದ ಗೋಮಾಳಗಳು ಮಾತ್ರ ಇಲ್ಲದಂತಾಗಿದೆ. ಹೊಸದಾಗಿ ನೀಡಲಾಗುತ್ತಿದ್ದರೂ ಉಳಿಸಿಕೊಡಬೇಕು ಎಂದು ಹೇಳಿದರು.

ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸಾಮಾಜಿಕ ಅರಣ್ಯ ಸಮಿತಿ ರಚಿಸಿ 300 ಎಕರೆಗೂ ಹೆಚ್ಚು ವಿಸ್ತೀರ್ಣದ ಸೀತಾ ಅಶೋಕ ವನ ರಕ್ಷಣೆ ಮಾಡಿರುವುದು ರಾಜ್ಯದಲ್ಲಿಯೇ, ಎಲ್ಲೂ ಕಾಣಸಿಗುವುದಿಲ್ಲ. ಆ ವನವನ್ನು ಜನರು ಉಳಿಸಿಕೊಂಡು ಬಂದಿರುವುದು ರಾಜ್ಯಕ್ಕೆ ಮಾದರಿ ಎಂದು ಕೂಡ ತಿಳಿಸಿದರು.

ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿಯ ಸದಸ್ಯರಾದ ವೆಂಕಟೇಶ ಕವಲಕೋಡು, ಹಿರೇಬಿಲಗುಂಜಿ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಕಲಾ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ನಿವೇಶನ ಮಾರದೇ ಮನೆ ನಿರ್ಮಿಸಿ

0

ಸರ್ಕಾರಿ ನೌಕರರ ಭವನದಲ್ಲಿ ನಡೆದ ಸರ್ಕಾರಿ ನೌಕರರ ಗೃಹ ನಿರ್ಮಾಣ, ಸೌಹಾರ್ದ ಸಹಕಾರಿ ಸಂಘಗಳ ಸರ್ವಸದಸ್ಯರ ಸಭೆಯನ್ನು ನಡೆಸಲಾಯಿತು.

ಅತ್ಯಂತ ಕಡಿಮೆ ದರದಲ್ಲಿ ಎಲ್ಲ ಸರ್ಕಾರಿ ನೌಕರರಿಗೂ ನಿವೇಶನ ಒದಗಿಸಲು ಶ್ರಮಿಸುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದರು.

ರಾಜ್ಯದಲ್ಲೇ ಶಿವಮೊಗ್ಗ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮಾದರಿಯಾಗಿದೆ. 160 ಎಕ್ಕರೆ ಜಾಗವನ್ನು 300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಂದು ದೂರು ಇಲ್ಲದೆ ಅತ್ಯಂತ ಪಾರದರ್ಶಕವಾಗಿ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿದೆ. ಸದಸ್ಯರಿಗೆ ನಿವೇಶನ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಭಾಗವಹಿಸಿ ಕುಂದುಕೊರತೆ, ತಮ್ಮ ಅಭಿಪ್ರಾಯ ಮಂಡಿಸಬೇಕು. ಸಂಘದ ಬೆಳವಣಿಗೆ ಹಾಗೂ ಚಟುವಟಿಕೆ, ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲಾಗಿದೆ. ಹತ್ತುಪಟ್ಟು ಹೆಚ್ಚಿನ ದರದಲ್ಲಿ ಮಾರಿದವರು ಕೂಡ ಇದ್ದಾರೆ. ಬೇಡಿಕೆ ತುಂಬಾ ಇದೆ. ಕಡಿಮೆ ದರದಲ್ಲಿ ಎಲ್ಲ ಸದಸ್ಯರಿಗೂ ನಿವೇಶನ ನೀಡಲು ಇನ್ನಷ್ಟು ಸಾಕು ಶ್ರಮಿಸಲಾಗುತ್ತದೆ. ನಿವೇಶನ ಸಿಕ್ಕವರು ಮಾರಾಟ ಮಾಡಿದೆ ಮನೆ ಕಟ್ಟಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ತಿನ ಸಹಕಾರ ಸಂಘ ಹತ್ತು ಕೋಟಿ ರೂಪಾಯಿ ಲಾಭದಲ್ಲಿದೆ. ಒಳ್ಳೆಯ ರೀತಿಯಲ್ಲಿ ನಡೆಯಬೇಕು. ಇನ್ನೊಬ್ಬರಿಗೆ ಮೋಸ ಮಾಡಿ ಲಾಭ ಮಾಡುವ ಅನಿವಾರ್ಯ ಸಂಘಕ್ಕೆ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಓಮಿಕ್ರಾನ್ ಪ್ರಕರಣ : ಹೂಡಿಕೆದಾರರ ಹಿಂದೇಟು

0

ಓಮಿಕ್ರಾನ್ ಪ್ರಕರಣಗಳು ಜಗತ್ತಿನ ಹಲವೆಡೆ ಹೆಚ್ಚುತ್ತಿರುವುದರಿಂದ ಹೂಡಿಕೆದಾರರ ಸ್ಥೈರ್ಯ ಕುಂದಿದೆ.
ಇದರಿಂದಾಗಿ ದೇಶಿ ಹಾಗೂ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿದ್ದು ಡಿಸೆಂಬರ್ 2 ರಂದು. ಅಂದು 58,461 ಅಂಶಗಳಲ್ಲಿ ಇದ್ದ ಸೆನ್ಸೆಕ್ಸ್ , ನಂತರ ಒಮ್ಮೆ ಚೇತರಿಸಿಕೊಂಡಿತ್ತು. ಅದಾದ ನಂತರ ಇಳಿಕೆಯ ಹಾದಿ ಹಿಡಿಯಿತು. ಡಿಸೆಂಬರ್ 20ರ ಹೊತ್ತಿಗೆ ಸೆನ್ಸೆಕ್ಸ್ 55,822 ಅಂಶಗಳಿಗೆ ತಲುಪಿದೆ.
ವಿದೇಶಿ ಹೂಡಿಕೆದಾರರು ದೇಶಿ ಮಾರುಕಟ್ಟೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯುತ್ತಿರುವುದು ಮತ್ತು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವತ್ತ ಒಲವು ತೋರಿಸುತ್ತಿರುವುದು ಕೂಡ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ವರ್ತಕರು ತಿಳಿಸಿದ್ದಾರೆ.
ಸೆನ್ಸೆಕ್ಸ್ 55,822 ಅಂಶಗಳಿಗೆ ಇಳಿಕೆಯಾಗಿದ್ದು, ಈ ವರ್ಷದ ಅಗಸ್ಟ್ 23ರ ನಂತರದ ಕನಿಷ್ಠ ಮಟ್ಟ ಇದಾಗಿದೆ.
ನಿಫ್ಟಿ 16,614 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ. ಷೇರು ಹೂಡಿಕೆ ಕುಸಿತದ ಪರಿಣಾಮವಾಗಿ ಷೇರುಪೇಟೆಯಲ್ಲಿ ನೊಂದಾಯಿತ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 6,79 ಲಕ್ಷ ರೂ‌. ಕೋಟಿಯಷ್ಟು ಕಡಿಮೆಯಾಗಿದೆ. ಈಗ ಷೇರುಪೇಟೆ ನಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ 252 ಲಕ್ಷ ಕೋಟಿ ರೂಪಾಯಿ ಆಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮತದಾರರ ಪಟ್ಟಿಗೆ ಆಧಾರ್ ಜೋಡಣೆ ವಿಧೇಯಕ ಒಪ್ಪಿಗೆ

0

ಮತದಾರರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ಮಸೂದೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಅನುಮೋದನೆ ದೊರೆತಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸುವವರ ಆಧಾರ್ ಸಂಖ್ಯೆ ಪಡೆಯಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಈ ಮಸೂದೆ ಅವಕಾಶ ಒದಗಿಸುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಅವರು ಮಾಹಿತಿ ನೀಡಿದರು.
ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ -2021 ಅನ್ನು ಮಂಡಿಸಿದ ಅವರು, ಇದು ದೇಶದ ನಕಲಿ ಮತದಾನವನ್ನು ಕೊನೆಗೊಳಿಸುತ್ತದೆ. ಜೊತೆಗೆ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು
ವಿಶ್ವಾಸಾರ್ಹಗೊಳಿಸುತ್ತದೆ ಎಂದರು.
ಆದರೆ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಈ ಮಸೂದೆಯು ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದವು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮತಾಂತರ ನಿಷೇಧ ಕಾಯ್ದೆ ಸಂಪುಟ ಸಭೆ ಅಸ್ತು

0

ರಾಜ್ಯದಲ್ಲಿ ಮತಾಂತರ ನಿಷೇಧಕ್ಕಾಗಿ ತರಲು ಉದ್ದೇಶಿಸಿರುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ -2021’ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಒತ್ತಾಯ ಮತ್ತು ಆಮಿಷವೊಡ್ಡಿ ಮತಾಂತರ ನಿಷೇಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ.
ಅದರ ಪ್ರಕಾರ, ಎಸ್ ಸಿ, ಎಸ್ ಟಿ, ಅಪ್ರಾಪ್ತ ವಯಸ್ಕರು, ಮಹಿಳೆಯರು, ಬುದ್ಧಿಮಾಂಧ್ಯ ರನ್ನು ಮತಾಂತರ ಮಾಡಿದವರಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು, ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮಸೂದೆಯನ್ನು ಕರಡು ರೂಪದಲ್ಲೇ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ವಿರೋಧಪಕ್ಷಗಳು ಅಸಮ್ಮತಿ ವ್ಯಕ್ತಪಡಿಸಿ ವಿಧಾನಸಭೆಯಲ್ಲಿ ವಿರೋಧಿ ಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯನವರು ತಿಳಿಸಿದ್ದಾರೆ.