ಕನ್ನಡ ಚಿತ್ರರಂಗ ಮರೆಯಲಾಗದ ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮ ದಿನೋತ್ಸವ.
ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಲು ಸಾಧ್ಯವಾಗಿರಲಿಲ್ಲ.
ಆದರೆ ಈ ವರ್ಷ ತಮ್ಮ ನೆಚ್ಚಿನ ನಟನ 71ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಹಾಗೂ ಕುಟುಂಬ ವರ್ಗದವರು ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ ಸಾವಿರಾರು ಅಭಿಮಾನಿಗಳು ಸಹ ಸ್ಥಳಕ್ಕೆ ಭೇಟಿಕೊಟ್ಟು ನಮಿಸಿದ್ದಾರೆ.
ಅಂಬರೀಶ್ ಅಭಿಮಾನಿಗಳ ಬಳಗ, ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಬೆಂಗಳೂರಿನ ಅನೇಕ ಕಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಮಂಡ್ಯ ಜಿಲ್ಲೆಯ ಎಲ್ಲ ತಾಲೂಕಿನ ಹಳ್ಳಿಗಳಲ್ಲಿ ಊರಮಗನ ಹುಟ್ಟುಹಬ್ಬವನ್ನು ಅಭಿಮಾನದಿಂದ ಆಚರಿಸಲಾಗಿದೆ. ಮದ್ದೂರು ತಾಲೂಕು ಅಂಬರೀಶ್ ಅಭಿಮಾನಿಗಳ ಒಕ್ಕೂಟ ಪ್ರಧಾನ ಕಚೇರಿ ಕೂಡ ಉದ್ಘಾಟನೆಯಾಗಿದೆ