Wednesday, February 11, 2026
Wednesday, February 11, 2026
Home Blog Page 1809

ಏಷ್ಯನ್ ಹಾಕಿ. ಭಾರತಕ್ಕೆ ಕಂಚು

0

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಹಂತದ ಸರಣಿಯು ಬುಧವಾರ ಜಪಾನ್ ಮತ್ತು ದಕ್ಷಿಣ ಕೊರಿಯಾ ತಂಡಗಳ ನಡುವೆ ಪಂದ್ಯ ನಡೆಯಿತು. ಜಪಾನ್ ವಿರುದ್ಧ ದಕ್ಷಿಣ ಕೊರಿಯಾ ತಂಡವು ಜಯ ಸಾಧಿಸಿ “ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು”ತನ್ನದಾಗಿಸಿಕೊಂಡಿದೆ.
ಫೈನಲ್ ನಲ್ಲಿ ಜಪಾನ್ ತಂಡವನ್ನು ಮಣಿಸಿದ ದಕ್ಷಿಣ ಕೊರಿಯಾ ಚಿನ್ನ ಪದಕ ಜಯಿಸಿತು, ಶೂಟೌಟ್ ನಲ್ಲಿ ಕೊರಿಯಾ ತಂಡವು 4 – 2 ಗೋಲುಗಳಿಂದ ಜಪಾನ್ ಎದುರು ಜಯಿಸಿತು. ಪಂದ್ಯದ ನಿಗದಿಯ ಅವಧಿಯಲ್ಲಿ ಉಭಯ ತಂಡಗಳು 3 – 3 ರಿಂದ ಸಮಬರ ಸಾಧಿಸಿದವು.
ಮೂರನೇ ಸ್ಥಾನಕ್ಕಾಗಿ ಬುಧವಾರ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ 4 – 3 ರಲ್ಲಿ ಜಯಗಳಿಸಿತು.
ಆರಂಭದಿಂದಲೇ ಆಕ್ರಮಣಕ್ಕೆ ಇಳಿದ ತಂಡ ಒಟ್ಟಾರೆ 11 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗಳಿಸಿಕೊಂಡಿತು. ಈ ಪೈಕಿ ಎರಡರಲ್ಲಿ ಯಶಸ್ಸು ಸಾಧಿಸಿತು. “ರೌಂಡ್ ರಾಬಿನ್” ಹಂತದ ಮೊದಲ ಪಂದ್ಯದಲ್ಲಿ ಸೋತಿದ್ದ ಮನ್ ಪ್ರೀತ್ ಸಿಂಗ್ ಬಳಗ ನಂತರ ರೊಚ್ಚಿಗೆದ್ದಿತು. ಆದರೆ, ಸೆಮಿಫೈನಲ್ ನಲ್ಲಿ ಜಪಾನ್ ಗೆ ಮಣಿದಿತ್ತು. ‘ಕಂಚಿನ ಪದಕ’ ದ ಪಂದ್ಯದಲ್ಲಿ ಪಾಕಿಸ್ತಾನದ ಪ್ರಬಲ ಪೈಪೋಟಿಯನ್ನು ಮೀರಿ ಜಯಿಸಿತು. ಮಸ್ಕತ್ ನಲ್ಲಿ ಕಳೆದ ಬಾರಿ ನಡೆದಿದ್ದ ಟೂರ್ನಿಯ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಚಾಂಪಿಯನ್ ಪಟ್ಟ ಗಳಿಸಿದ್ದವು.
ಮೊದಲ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಗೋಲಿನೊಂದಿಗೆ ಮುನ್ನಡೆ ಸಾಧಿಸಿದ ಭಾರತದ ಪರ (45ನೇ ನಿಮಿಷದಲ್ಲಿ) ಸುಮಿತ್, (53 ನೇ ನಿಮಿಷದಲ್ಲಿ) ವರುಣ್ ಕುಮಾರ್,ಮತ್ತು (57ನೇ ನಿಮಿಷದಲ್ಲಿ) ಆಕಶ್ ದೀಪ್ ಸಿಂಗ್, ಚೆಂಡನ್ನು ಗುರಿ ಮುಟ್ಟಿಸಿದರು.
ಎರಡನೇ ಕ್ವಾರ್ಟರ್ ನಲ್ಲಿ 2 ತಂಡಗಳು ಜಿದ್ದಾಜಿದ್ದಿಯ ಹೋರಾಟ ಪ್ರದರ್ಶಿಸಿದವು, 22 ಮತ್ತು 26ನೇ ನಿಮಿಷಗಳಲ್ಲಿ ಭಾರತದ ಪ್ರಯತ್ನವನ್ನು ಅಮ್ಜದ್ ಅಲಿ ತಡೆದರು. ಆದರೂ, ಭಾರತ ಛಲ ಬಿಡದೆ ಆಕ್ರಮಣಕಾರಿ ಆಟ ಮುಂದುವರಿಸಿತು.
ನಿಧಾನವಾಗಿ ಆಟಕ್ಕೆ ಮುದುರಿಕೊಂಡ ಪಾಕಿಸ್ತಾನ ಭರವಸೆ ಗಳಿಸಿ ಕೊಂಡು ಮುನ್ನುಗ್ಗಿತು,ಇದರ ಫಲವಾಗಿ 10 ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಲಭಿಸಿತು. ಪ್ರತಿದಾಳಿ ನಡೆಸಿದ ಭಾರತಕ್ಕೆ ಪೆನಾಲ್ಟಿ ಅವಕಾಶಗಳು ಲಭಿಸಿದವು. 14 ನೇ ನಿಮಿಷದಲ್ಲಿ ಪಾಕಿಸ್ತಾನ ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ, ಗೋಲ್-ಕೀಪರ್ ಪಾಠಕ್ ಚೆಂಡನ್ನು ತಡೆದರು.
ಪಾಕಿಸ್ತಾನದ ರಕ್ಷಣಾ ವಿಭಾಗದ ಮೇಲೆ ಅರಂಭದಿಂದಲೇ ಒತ್ತಡ ಯಶಸ್ವಿಯಾದ ಭಾರತ ತಂಡ ಜಪಾನ್ ಎದುರಿನ ಪಂದ್ಯಕ್ಕಿಂತ ಭಿನ್ನವಾಗಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು,ಮೊದಲ ನಿಮಿಷದಲ್ಲಿ ಲಭಿಸಿದ ‘ಪೆನಾಲ್ಟಿ ಕಾರ್ನರ್’ ನಲ್ಲಿ ಕೆಳಹಂತದ ಮೋಹಕ ‘ಫ್ಲಿಕ್’ ಮೂಲಕ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭಾರತ- ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ

0

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿಯಂತ್ರಣ ಮಂಡಳಿ ಗಳು ಜಂಟಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ ಆಟಗಾರರು,ನೆರವು ಸಿಬ್ಬಂದಿ ಮತ್ತಿತರರಿಗೆ ಕೋವಿಡ್ ಖಚಿತವಾದರೂ ಪಂದ್ಯಗಳನ್ನು ಸ್ಥಗಿತಗೊಳಿಸದಿರಲೂ 2 ಮಂಡಿಳಿಗಳು ನಿರ್ಧರಿಸಿವೆ.
ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದ ಕಳೆದೆರಡು ವರ್ಷಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲು ಸಾಧ್ಯವಾಗಿಲ್ಲ,ಆದ್ದರಿಂದ ಪ್ರಚಾರ ಮತ್ತು ಜಾಹೀರಾತು ಆದಾಯದ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ಮಂಡಳಿಗೆ ಇದು ಮಹತ್ವದ ಟರ್ನಿಯಾಗಿದೆ,ಆದ್ದರಿಂದ ಯಾವುದೇ ಕಾರಣಕ್ಕೂ ಟೂರ್ನಿಗೆ ಅಡೆತಡೆಯಾಗದಂತೆ ನೋಡಿಕೊಳ್ಳುತ್ತೇವೆ,ಎಂದು ಮಂಡಳಿಗಳು ಹೇಳಿವೆ.
ಆದರೆ ಈ ಸರಣಿಯ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಿಲ್ಲ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯಲ್ಲಿ 3 ಟೆಸ್ಟ್ ಗಳು ನಡೆಯಲಿವೆ,ತದನಂತರ 3 ಏಕದಿನ ಪಂದ್ಯಗಳು ನಡೆಯುತ್ತವೆ, ಇದೇ 26 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ.
ಪ್ರತಿದಿನವೂ “ರಾಪಿಡ್ ಆಂಟಿಜನ್” ಪರೀಕ್ಷೆ (R.T) ಯನ್ನು ಪ್ರತಿದಿನವೂ ನಡೆಸಲಾಗುವುದು.ಸೋಂಕಿತ ಪ್ರಕರಣಗಳು ಕಂಡುಬಂದರೆ ಆಯಾ ಆಟಗಾರ,ಸಿಬ್ಬಂದಿಯ ತಂಡದ ವೈದ್ಯರು ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ವೈದ್ಯಕೀಯ ಶಿಷ್ಟಾಚಾರದ ಕರಾರಿಗೆ ಎರಡು ಮಂಡಳಿಗಳು ಒಪ್ಪಿಕೊಂಡಿವೆ, ಜೀವ ಸುರಕ್ಷಾ ವಾತಾವರಣ (ಬಯೋಬಬಲ್) ದಲ್ಲಿರುವ ಎಲ್ಲರೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು, ಬಹುತೇಕ ಎಲ್ಲರೂ ಲಸಿಕೆ ತೆಗೆದುಕೊಂಡವರಾಗಿದ್ದಾರೆ, ಆದ್ದರಿಂದ ಒಂದೊಮ್ಮೆ ಯಾರಿಗಾದರೂ ಕೋವಿಡ್ ತಗುಲಿದರೆ ಅವರನ್ನು ಪ್ರತ್ಯೇಕವಾಸಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ, ವೈದ್ಯಕೀಯ ತಂಡವು ಸನ್ನದ್ಧವಾಗಿದೆ, ಆಟಗಾರರು ಉಳಿದುಕೊಂಡಿರುವ ಹೋಟೆಲ್ ನಲ್ಲಿಯೇ ಇಂತಹ ವ್ಯವಸ್ಥೆ ಕಲ್ಪಿಸಲಾಗಿದೆ,ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ವೈದ್ಯಾಧಿಕಾರಿ ‘ಶುಯಬ್ ಮಾನಜ್ರಾ’ ಹೇಳಿದ್ದಾರೆ.
ಹೋಟೆಲ್ ಸಿಬ್ಬಂದಿಯು ತಂಡಗಳು ಬರುವ ಒಂದು ವಾರ ಮುಂಚೆಯೇ “ಬಯೋ ಬಬಲ್” ನಲ್ಲಿದ್ದಾರೆ, ಅವರನ್ನು ಪ್ರತಿದಿನ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ, ಯಾವುದೇ ದಾರಿಯಿಂದಲೂ ‘ಸೋಂಕು ಬಯೋ ಬಬಲ್’ ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಎಂದು. ‘ಮಾಂಜ್ರಾ’ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅವಧಿಗೆ ಮುನ್ನ ಸಂಸದ್ ಅಧಿವೇಶನ ಅಂತ್ಯ

0

ಆರಂಭದಿಂದಲೂ ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆಗಳಿಗೆ ಸಾಕ್ಷಿಯಾದ ಸಂಸತ್ ನ ಚಳಿಗಾಲದ ಅಧಿವೇಶನವು ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಗಿದೆ.
ಚುನಾವಣೆ ಕಾನೂನುಗಳ ವಿಧೇಯಕ, ನಾರ್ಕೋಟಿಕ್ಸ್ ಡ್ರಗ್ಸ್ ಅಂಡ್ ಸೈಕೋಟ್ರಾಫಿಕ್ ಸಬ್ ಸ್ಟನ್ಸಸ್ ತಿದ್ದುಪಡಿ ವಿಧೇಯಕ, ಕೇಂದ್ರ ಜಾಗೃತ ಆಯೋಗದ ತಿದ್ದುಪಡಿ ವಿಧೇಯಕ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿಧೇಯಕ, ಕೃಷಿ ಕಾಯ್ದೆಗಳ ರದ್ಧತಿ ವಿಧೇಯಕ ಸೇರಿದಂತೆ ಒಟ್ಟು 12 ವಿಧೇಯಕಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ.
ಕೇಂದ್ರ ಸರ್ಕಾರವು ಉದ್ದೇಶಿಸಿದ್ದ ವಿಧೇಯಕಗಳನ್ನು ಮಂಡಿಸಿದೆ. ಸಂಸತ್ ಗೆ ನೀಡಬೇಕಿದ್ದ ಮಾಹಿತಿಗಳನ್ನು ನೀಡಿಯಾಗಿದೆ. ಹೀಗಾಗಿ ಒಂದು ದಿನ ಮೊದಲೇ ಅಧಿವೇಶನ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು ತಿಳಿಸಿದ್ದಾರೆ.
ಗದ್ದಲ, ಪ್ರತಿಭಟನೆಯಲ್ಲೇ ಅಧಿವೇಶನ ಅಂತ್ಯಗೊಂಡಿದೆ. ಇದು ಯಶಸ್ವಿ ಅಧಿವೇಶನ ಎಂದು ಕೇಂದ್ರ ಸರ್ಕಾರವು ಹೇಳಿದೆ. ಆದರೆ, ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಪ್ರತಿಪಕ್ಷಗಳು ದೂರಿವೆ.
ಪ್ರತಿಪಕ್ಷಗಳ ಅಡ್ಡಿ ಪಡಿಸುವಿಕೆ ತಂತ್ರದ ಮಧ್ಯೆಯೇ ಚಳಿಗಾಲದ ಅಧಿವೇಶನ ಯಶಸ್ವಿಯಾಗಿದೆ ಎಂದು ಜೋಶಿ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಬಹುತೇಕ ವಿಧೇಯಕಗಳಿಗೆ ಅಂಗೀಕಾರ ಪಡೆದಿದೆ. ಕೆಲವು ವಿಷಯಗಳ ಕುರಿತು ಮಾತ್ರ ಚರ್ಚೆಯಾದವು, ಅದಕ್ಕೆ ಪ್ರತಿಪಕ್ಷಗಳೇ ಕಾರಣ . ಆದರೂ, ವಿಧೇಯಕ ಅಂಗೀಕಾರಗಳಿಗೆ ಅಂಗೀಕಾರ ಸಿಕ್ಕಿರುವುದು ಸಂತಸದ ವಿಚಾರ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಡೀಮ್ಡ್ ಅರಣ್ಯ ಈಗ ಮತ್ತೆ ಕಂದಾಯ ಇಲಾಖೆಗೆ

0

ರಾಜ್ಯ ಸರ್ಕಾರವು ರಾಜ್ಯದ ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ ಭೂಮಿಯನ್ನು ಕಂದಾಯ ಇಲಾಖೆಗೆ ಮಂಡಿಸಲು ನಿರ್ಧರಿಸಿದೆ. ಇದರಿಂದ ಭೂ ಮಾಲೀಕರಿಗೆ ಉಳುಮೆ ಹಾಗೂ ವಸತಿಗಾಗಿ ಹಕ್ಕುಪತ್ರ ವಿತರಣೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ದಶಕಗಳಿಂದ ಭೂ ದಾಖಲೆ ಪಡೆಯಲು ಪರದಾಡುತ್ತಿದ್ದಾರೆ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.

ಕಂದಾಯ ಸಚಿವ ಆರ್.ಅಶೋಕ್ ವಿಧಾನಪರಿಷತ್ತಿನಲ್ಲಿ ” ಅಧಿಕಾರಿಗಳ ನಿರ್ಲಕ್ಷದಿಂದ ತಪ್ಪಾಗಿ ನಮೂದಿಸಲಾಗಿದೆ ರಾಜ್ಯದ 6.44 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯು ಕಂದಾಯ ಇಲಾಖೆಗೆ ಮರಳಿಸಲಿದೆ. ಈ ಭೂಮಿಯ ಉಳುಮೆ ಮತ್ತು ವಸತಿಗಾಗಿ ಮಾಲೀಕರಿಗೆ ಹಕ್ಕು ಪತ್ರ ವಿತರಿಸಲಾಗುವುದು” ಎಂದು ತಿಳಿಸಿದರು.

ಡೀಮ್ಡ್ ಅರಣ್ಯ ಸಮಸ್ಯೆ ಕುರಿತು ಪರಿಷತ್ತಿನಲ್ಲಿ ಕೆಲಕಾಲ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ನ ಪ್ರತಾಪಚಂದ್ರ ಶೆಟ್ಟಿ ಅವರು ಡೀಮ್ಡ್ ಕುರಿತಂತೆ ಕೇಳಿದ ಪ್ರಶ್ನೆಗೆ “ರಾಜ್ಯದಲ್ಲಿ 10.11 ಲಕ್ಷ ಹೆಕ್ಟೇರ್ ಮೀಸಲು ಅರಣ್ಯವಿದೆ. 1993-94 ರಲ್ಲಿ ಅಂದಿನ ಅಧಿಕಾರಿಗಳು ಖಾಲಿ ಜಾಗವನ್ನು ಅವೈಜ್ಞಾನಿಕವಾಗಿ ಅರಣ್ಯ ಇಲಾಖೆಯಿಂದ ನಮೂದಿಸಿದ ಪರಿಣಾಮ ಮಾಲೀಕರಿಗೆ ಹಕ್ಕುಪತ್ರ ವಿತರಣೆಗೆ ಸಮಸ್ಯೆಯಾಗಿದೆ” ಎಂದು ಆರ್.ಅಶೋಕ್ ವಿವರಿಸಿದರು.

ಭೂಮಿಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಪಡೆಯುವ ಸರ್ಕಾರದ ನಿರ್ಧಾರ ಮಹತ್ವದ್ದು. ದಶಕಗಳ ಹಿಂದೆ ಸರ್ಕಾರದ ಗಮನಕ್ಕೆ ಬರದಂತೆ ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ಭೂಮಿ ಗುರುತಿಸಿದೆ ಸಮಸ್ಯೆಗೆ ಕಾರಣ. ಇನ್ನಾದರೂ ರೈತರಿಗೆ ಹಕ್ಕುಪತ್ರ ವಿತರಿಸುವ
ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಡೀಮ್ಡ್ ಸಮಸ್ಯೆ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರು ‘ರೈತರು ಉಳಿಮೆ ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ’ ಎಂದು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸದನ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆ

0

ರಾಜ್ಯದಲ್ಲಿ ಪರ ವಿರೋಧ ಸೃಷ್ಟಿಸಿರುವಂತಹ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021’ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಯಲಿದ್ದು ವಿಧೇಯಕದ ಅಂಗೀಕಾರಕ್ಕೆ ಸರ್ಕಾರದ ನಿಲುವು ಕುತೂಹಲವನ್ನು ಮೂಡಿಸಿದೆ.

ಕಾಂಗ್ರೆಸ್ ಈ ವಿಧೇಯಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಬುಧವಾರ ನಡೆದ ಅಧಿವೇಶನದಲ್ಲಿ ಪುನರುಚ್ಚರಿಸಿದೆ. ಆದರೆ ವಿದೇಯಕದ ಅಂಶಗಳ ಸಮಗ್ರ ಅಂಶಗಳನ್ನು ಕುರಿತಂತೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ. ಪ್ರತಿಪಕ್ಷಗಳು ಸರ್ಕಾರದ ಈ ನಿರ್ಧಾರ ಬಗ್ಗೆ ಮುಗಿಬೀಳುವ ಸಾಧ್ಯತೆ ಇದೆ.

ಬುಧವಾರ ನಡೆದ ವಿಧಾನಸಭೆಯಲ್ಲಿ ವಿಧೇಯಕದ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಹಾಗಾಗಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಬಗ್ಗೆ ಚರ್ಚೆ ನಡೆಯಲಿದೆ.

‘ಎರಡೂ ಮಹತ್ವದ ವಿಷಯಗಳ ಆಗಿರುವುದರಿಂದ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಿ. ನಾನು ಕೂಡ ಅನಾರೋಗ್ಯ ನಿಮಿತ್ತ ಸದನಕ್ಕೆ ಬಂದರೂ ಚರ್ಚೆ ನಡೆಸುವ ಸ್ಥಿತಿಯಲ್ಲಿಲ್ಲ. ಕೂಲಂಕುಷ ಚರ್ಚೆ ನಡೆಸೋಣ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ವಿಧಾನಸಭೆಯಲ್ಲಿ ಅಂಗೀಕಾರವಾದ ವಿಧೇಯಕಗಳನ್ನು ಪರಿಷತ್ತಿನಲ್ಲೂ ಮಂಡಿಸಬೇಕಿದೆ. ಈ ನಿಟ್ಟಿನಲ್ಲಿ ಬೇಗ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಲು ಸಹಕಾರ ನೀಡಬೇಕು’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಕೋರಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅನುಪಿನಕಟ್ಟೆ ಲಂಬಾಣಿಹಟ್ಟಿ ಕುಗ್ರಾಮಕ್ಕೆ ಸೌಕರ್ಯ ವಂಚನೆ

0

ಸುಮಾರು 50ಕ್ಕೂ ಹೆಚ್ಚು ಮನೆಗಳಿರುವ ಸುಮಾರು 250ಕ್ಕೂ ಹೆಚ್ಚು ಜನರಿರುವ ಶಿವಮೊಗ್ಗ ಸನಿಹದ ಅದರಲ್ಲೂ ಪುರದಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನುಪಿನಕಟ್ಟೆ ಲಂಬಾಣಿಹಟ್ಟಿಯಲ್ಲಿ ಕುಡಿಯಲು ಸಕಾಲಿಕವಾದ ಕುಡಿಯುವ ನೀರಿಲ್ಲ. ಕನಿಷ್ಠ ಶಾಲೆ ಸೌಲಭ್ಯವಿಲ್ಲದೇ, ಅಂಗನವಾಡಿಯಿಲ್ಲದೇ ನಿತ್ಯ ಒಂದೂವರೆ ಕಿ.ಮೀ.ದೂರದ ಗಾಡಿಕೊಪ್ಪಕ್ಕೆ ಬಂದು ಹೋಗಿ ಜೀವನ ಸಾಗಿಸಬೇಕಿದೆ. ಈ ಲಂಬಾಣಿ ಹಟ್ಟಿಯಲ್ಲಿ ಮನೆಗಳಿವೆ. ಆದರೆ ಮೂಲಭೂತ ವ್ಯವಸ್ಥೆಗಳೇ ಇಲ್ಲ. ಇಲ್ಲಿಗೆ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಿ ಎಂದು ಮಾನವ ಹಕ್ಕುಗಳ ಕಮಿಟಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ ಮಾನವ ಹಕ್ಕುಗಳ ಕಮಿಟಿಯ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿದಾಗ ಕಂಡು ಬಂದ ಸತ್ಯ ಚಿತ್ರಣ ಇದಾಗಿದೆ. ಅಲ್ಲಿನ ಶೇ.99ರಷ್ಟು ಜನ ಕೂಲಿಕಾರ್ಮಿಕರಾಗಿ ಬದುಕುತ್ತಿದ್ದಾರೆ. ಅವರ ಅಳಲು ಬೆಟ್ಟದಷ್ಟಿವೆ. ಕನಿಷ್ಠ ಚಿಕ್ಕಪುಟ್ಟ ಮೂಲಭೂತ ಸೌಕರ್ಯಗಳನ್ನಾದರೂ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಿ ಎಂದು ಕೋರಿದರು.
ಬಸವ ವಸತಿ ಯೋಜನೆ, ಆಶ್ರಯ ಯೋಜನೆಯಂತಹ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಉಳಿದಂತೆ ಚಿಕ್ಕಪುಟ್ಟ ಜೋಪಡಿಗಳಲ್ಲಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಕುಗ್ರಾಮ ಶಿವಮೊಗ್ಗ ನಗರ ವ್ಯಾಪ್ತಿಯ ಕೆಲವೇ ಮೀಟರ್‌ಗಳ ಅಂತರದಲ್ಲಿರುವುದು ದುರಂತವೇ ಹೌದು. ಬೆಳಗ್ಗೆ ಇಲ್ಲಿ ಹಾಲು ತರಲು ಒಂದೂವರೆ ಕಿ.ಮೀ. ಹೋಗಬೇಕು. ಉಳಿದಂತೆ ಯಾವುದೇ ಸೌಲಭ್ಯಗಳು ಇಲ್ಲಿಲ್ಲ. ಇಲ್ಲಿನ ಸುಮಾರು 60ರಿಂದ 70 ಮಕ್ಕಳು ದೂರದ ಗಾಡಿಕೊಪ್ಪಕ್ಕೆ ಬಂದು ಶಾಲೆಗೆ ಹೋಗಬೇಕು. ಅಂಗನವಾಡಿ ಕಲಿಯುವ ಸುಮಾರು 15ರಿಂದ 20 ಮಕ್ಕಳನ್ನು ನಿತ್ಯ ಅಷ್ಟು ದೂರ ಕರೆತಂದು ಕರೆದೊಯ್ಯಬೇಕು. ಕೂಲಿ ಮಾಡುತ್ತಲೇ ಬದುಕು ಕಟ್ಟಿಕೊಂಡಿರುವವರು ಹೇಗೆ ತಾನೆ ಆ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲೊಂದು ಪುಟ್ಟ ಕಲ್ಲಿನ ಗೂಡಿನಲ್ಲಿ ಸೇವಾಲಾಲ್ ದೇವಸ್ಥಾನವಿದೆ. ಇದೇ ಆ ಊರಿಗೆ ದೊಡ್ಡ ದೇವಸ್ಥಾನ. ಇಲ್ಲಿ ಶಿಕ್ಷಣ, ಕುಡಿಯುವ ನೀರು, ದೇವಸ್ಥಾನ ಇಲ್ಲದ ಕುಗ್ರಾಮವಾಗಿ ಇರುವುದು ದುರಂತವೇ ಹೌದು. ಅದೃಷ್ಟವೆಂಬಂತೆ ಹಿಂದೆ ಶಾಸಕರಾಗಿದ್ದ ಶಾರದಾ ಪೂರ‍್ಯಾನಾಯ್ಕ್ ಅವರು ಇಲ್ಲಿ ಸಿಮೆಂಟ್ ರಸ್ತೆ ಮಾಡಿಸಿದ್ದರು. ಅದೊಂದು ಬಿಟ್ಟರೆ ಉಳಿದ ಯಾವುದೇ ವ್ಯವಸ್ಥೆಗಳಿಲ್ಲ. ಚರಂಡಿಯಿಲ್ಲ, ಮಳೆ ಬಂದರೆ ಸಲಿಸಾಗಿ ನೀರು ಹರಿದು ಹೋಗುವುದಿಲ್ಲ. ಸ್ವಚ್ಛತೆಯ ಮಾತು ಹೇಳುವಂತಿಲ್ಲ ಎಂದು ಹೇಳಿದ್ದಾರೆ.
ಈ ಪುಟ್ಟ ಲಂಬಾಣಿ ಹಟ್ಟಿಯಲ್ಲಿ ನೂರಾರು ಬೇಡಿಕೆಗಳಿವೆ. ಮಾನ್ಯ ಜಿಲ್ಲಾಧಿಕಾರಿಗಳಾದ ತಾವುಗಳು ಚಿಕ್ಕ ಪುಟ್ಟ, ಅತ್ಯಗತ್ಯ ಬೇಡಿಕೆಗಳಾದ ಸಮರ್ಪಕ ಕುಡಿಯುವ ನೀರು, ಅಂಗನವಾಡಿ, ಪ್ರಾಥಮಿಕ ಶಾಲೆ, ಚರಂಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಬಂಧಿಸಿದವರಿಗೆ ಮಾಹಿತಿ ನೀಡಿ ಆದಷ್ಟು ಬೇಗನೆ ಈ ಕಾರ್ಯ ಮಾಡಿಕೊಡಲು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಉಪಾಧ್ಯಕ್ಷ ಎಸ್.ಕೆ.ಗಜೇಂದ್ರಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿರಂಜನ ಮೂರ್ತಿ, ಜಿಲ್ಲಾಧ್ಯಕ್ಷ ಎಸ್.ರಮೇಶ್, ಪದಾಧಿಕಾರಿಗಳಾದ ಶಾರದಾ ಶೇಷಗಿರಿಗೌಡ,ರವಿ, ಮಹಂತೇಶ್, ಹಟ್ಟಿಯ ದೇವರಾಜ್, ಶೋಭಾ ದೇವರಾಜ್, ಹನುಮಾನಾಯ್ಕ್ ಹಾಗೂ ಇತರರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಬ್ಯಾಂಕುಗಳು ಫ್ರೂಟ್ಸ್ ತಂತ್ರಾಂಶ ಬಳಸಲಿ

0

ರೈತರ ಜಮೀನು ಇತರೆ ಮಾಹಿತಿ ಒಂದೇ ಸೂರಿನಡಿ ಲಭ್ಯಗೊಳಿಸಿರುವ ಇ-ಗವರ್ನನ್ಸ್ ಪೋರ್ಟಲ್ ಆದ ಫ್ರೂಟ್ಸ್ ತಂತ್ರಾಂಶಕ್ಕೆ ಎಲ್ಲಾ ಬ್ಯಾಂಕುಗಳು ನೋಂದಾಯಿಸಿಕೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಸೂಚಿಸಿದ್ದಾರೆ.
ಬ್ಯಾಂಕುಗಳು ಸೇರಿದಂತೆ ಫ್ರೂಟ್ಸ್ ಬಗ್ಗೆ ಅರಿವಿನ ಕೊರತೆ ಇದೆ. ಆದ್ದರಿಂದ ಡಿ‌.28ರಂದು ನಬಾರ್ಡ್ ವತಿಯಿಂದ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಫ್ರೂಟ್ಸ್ ಯೋಜನೆ ಜಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಒಂದು ದಿನದ ತರಬೇತಿ ಕಾರ್ಯಗಾರ ನಡೆಸಲಾಗುವುದು ಎಂದು ನಬಾರ್ಡ್ ನ ಡಿಡಿಎಂ ಬಿ.ರವಿ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಬ್ಯಾಂಕ್ ಗಳಿಗೆ ಏರ್ಪಡಿಸಿದ್ದ ಡಿಸಿಸಿ-ಡಿಎಲ್ ಆರ್ ಸಿ ಸಭೆ ಅಧ್ಯಕ್ಷತೆಯನ್ನು ಜಿ.ಪಂ . ಸಿಇಒ ಎಂ.ಎಲ್. ವೈಶಾಲಿ ಅವರು ವಹಿಸಿದ್ದರು.
ಬ್ಯಾಂಕುಗಳು ರೈತರಿಗೆ ಮತ್ತು ಎಂಎಸ್ಎಂಇ ಗೆ ಸಾಲ ಸೌಲಭ್ಯ ನೀಡುವಲ್ಲಿ ಯಾವುದೇ ರೀತಿಯ ತಾಂತ್ರಿಕ ಹಾಗೂ ಇತರೆ ಸಮಸ್ಯೆಗಳಿದ್ದರೆ ಅವುಗಳನ್ನು ನಿವಾರಿಸಿಕೊಂಡು ನಿಗದಿತ ಪ್ರಗತಿ ಸಾಧಿಸಬೇಕು. ನಿಗದಿತ ಪ್ರಗತಿ ಸಾಧಿಸದೇ ಇರುವ ಬ್ಯಾಂಕ್ ಗಳು ಕಾರಣ ಸಮೇತ ವರದಿ ನೀಡಬೇಕು. ಬ್ಯಾಂಕ್ ಗಳು ತಮ್ಮ ಬಳಿ ಬಾಕಿ ಇರುವ ಕೃಷಿ, ಎಂಎಸ್ ಎಂಇ, ಶೈಕ್ಷಣಿಕ ಸಾಲ ಮತ್ತು ವಸತಿ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು.
ಫ್ರೂಟ್ಸ್ ತಂತ್ರಾಂಶಕ್ಕೆ ನೋಂದಣಿ ಮಾಡಿಸಿಕೊಂಡು ಇದರ ಮೂಲಕ ರೈತರಿಗೆ ಸಾಲ ಸೌಲಭ್ಯವನ್ನು ತ್ವರಿತವಾಗಿ ನೀಡುವಂತೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಹೇಮ ಗಿರೀಶ್ ಫ್ರೂಟ್ಸ್ ಪೋಸ್ಟಲ್ ಬಗ್ಗೆ ಮಾಹಿತಿ ನೀಡಿದರು. ನಬಾರ್ಡ್ ಬ್ಯಾಂಕ್ ನ ಡಿಡಿಎಂ ಎಂ.ರವಿ, ಕೆನರಾ ಬ್ಯಾಂಕಿನ ರೀಜಿನಲ್ ಮ್ಯಾನೇಜರ್ ಸಂದೀಪ್ ರಾವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಹಾಗೂ ಜಿಲ್ಲೆಯ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಸ್ತಾವನೆ.

0

ಕರ್ನಾಟಕದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಾತ್ರವಲ್ಲದೆ ಅನುದಾನಿತ ಶಾಲೆಗಳಲ್ಲಿ ಸುಮಾರು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಇದರಿಂದ 7,045 ಶಿಕ್ಷಕ ಹುದ್ದೆಗಳು ಖಾಲಿ ಉಳಿದಿವೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ನೇಮಕಾತಿ ನಡೆಯುತ್ತಿಲ್ಲ ಎನ್ನುವ ಗೊಂದಲಗಳ ಮಧ್ಯೆಯೂ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲೂ ಸಾವಿರಾರು ಶಿಕ್ಷಕ ಹುದ್ದೆಗಳು ಖಾಲಿ ಇವೆ ಎಂದು ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾವನೆಗೊಂಡಿದೆ.

ಶಿಕ್ಷಕರ ಕ್ಷೇತ್ರದ ಶಾಸಕರಾದ ಡಾ. ವೈ. ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ರಾಜ್ಯದಲ್ಲಿ ವಿಭಾಗವಾರು ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ತಿಳಿಸಿದ್ದಾರೆ.

ಬೆಂಗಳೂರು ಆಯುಕ್ತಾಲಯ ವಿಭಾಗದಲ್ಲಿ ಸುಮಾರು 4,239 ಹುದ್ದೆಗಳು ಖಾಲಿ ಇವೆ. ಧಾರವಾಡ ಆಯುಕ್ತ ವಲಯದಲ್ಲಿ 1,843 ಹುದ್ದೆಗಳು ಖಾಲಿ ಇವೆ. ಕಲಬುರ್ಗಿ ಆಯುಕ್ತಾಲಯ ದಲ್ಲಿ 963 ಹುದ್ದೆಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 2045 ಹುದ್ದೆಗಳು ಖಾಲಿ ಇದೆ ಎಂದು ಮಾಹಿತಿ ದೊರಕಿದೆ.

ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ ಖಾಸಗಿ ಪ್ರೌಢಶಾಲೆಗಳಲ್ಲಿ 2015ರ ಡಿಸೆಂಬರ್ 31ರವರೆಗೂ ನೇಮಕಾತಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಹುದ್ದೆಗಳು ನಾನಾ ಕಾರಣಗಳಿಂದ ತೆರವುಗೊಳಿಸಲಾಗಿದೆ. ಕೆಲ ಶಿಕ್ಷಕರ ನಿಧನ, ನಿವೃತ್ತಿ, ಹಾಗೂ ರಾಜೀನಾಮೆ ಹೀಗೆ ನಾನಾ ಕಾರಣಗಳಿಂದ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಇದುವರೆಗೂ ಆ ಹುದ್ದೆಗಳು ಭರ್ತಿಯಾಗಿಲ್ಲ. ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ನಿಯಮಾನುಸಾರ ಅರ್ಹತೆ ಹೊಂದಿರಬೇಕು. ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ ನೀಡಲು ಕ್ರಮ ಕೈಗೊಂಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ 39 ಹುದ್ದೆಗಳು, ಕೋಲಾರದಲ್ಲಿ 62 ಹುದ್ದೆ, ರಾಮನಗರ 105, ಚಿಕ್ಕಬಳ್ಳಾಪುರ 76, ದಾವಣಗೆರೆ 106, ಚಿತ್ರದುರ್ಗ 162, ಮಧುಗಿರಿ 89, ತುಮಕೂರು 229 ಹುದ್ದೆ ಗಳು, ಶಿವಮೊಗ್ಗ 116, ಮೈಸೂರು 150, ಮಂಡ್ಯ 103, ಹಾಸನ 88, ಚಾಮರಾಜನಗರ 97, ಉಡುಪಿ 137, ದಕ್ಷಿಣಕನ್ನಡ 242, ಚಿಕ್ಕಮಗಳೂರು 87, ಕೊಡಗು 60, ವಿಜಯಪುರ 72, ಬಾಗಲಕೋಟೆ 48, ಬೆಳಗಾವಿ 20, ಗದಗ 8, ಹಾವೇರಿ 49, ದಾರವಾಡ 30, ಚಿಕ್ಕೋಡಿ 34, ಶಿರಸಿ 17, ಕಾರವಾರ 40, ಬಳ್ಳಾರಿ 125, ಬೀದರ್ 141, ಕೊಪ್ಪಳ 38, ಕಲಬುರ್ಗಿ 114, ರಾಯಚೂರು 30 ಹೀಗೆ 24 ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ ಎಂದು ಮಾಹಿತಿ ದೊರಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ದೂರಶಿಕ್ಷಣ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಿ.

0

ಕುವೆಂಪು ವಿಶ್ವವಿದ್ಯಾಲಯ 2019-20ನೇ ಸಾಲಿನ ದೂರಶಿಕ್ಷಣ ವಿದ್ಯಾರ್ಥಿಗಳ ಪ್ರಥಮ ವರ್ಷದ ಪದವಿ ಪರೀಕ್ಷೆಗಳನ್ನು ರದ್ದು ಪಡಿಸುವುದು ಸೇರಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಎನ್ ಎಸ್ ಯುಐ ಪ್ರತಿಭಟನೆ ನಡೆಸಿದೆ.
ವಿದ್ಯಾರ್ಥಿಗಳಿಗೆ ಪ್ರಮೋಟ್ ಮಾಡಲಾಗಿದೆ ಎಂದು ತಿಳಿಸುವ ಜೊತೆಗೆ 2021-22ನೇ ಸಾಲಿನಲ್ಲಿ ಅದೇ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಈಗ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮೋಟ್ ನೀಡಿ ದ್ವಿತೀಯ ವರ್ಷದ ಪದವಿ ಪ್ರವೇಶಾತಿ ನೀಡಿರುವುದರಿಂದ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ಕೂಡಲೇ ಕುವೆಂಪು ವಿವಿ ಹೊರಡಿಸಿರುವ ಪ್ರಥಮ ವರ್ಷದ ಪರೀಕ್ಷೆ ಬರುವ ಸೂಚನೆ ರದ್ದುಪಡಿಸಬೇಕು. ದ್ವಿತೀಯ ವರ್ಷದ ಪಠ್ಯಕ್ರಮಕ್ಕೆ ಅನುಗುಣವಾಗಿ ಮುಂದಿನ ಪರೀಕ್ಷೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
2019 -20ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷದ ಪದವಿಗೆ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕೊರೊನಾ ಕಾರಣದಿಂದ ದೂರಶಿಕ್ಷಣ ವಿದ್ಯಾರ್ಥಿಗಳಿಗೆ ಎರಡು ವರ್ಷ ಪರೀಕ್ಷೆ ನಡೆಸಿಲ್ಲ. ಆದರೀಗ ಏಕಾಏಕಿ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವಿದ್ಯಾಲಯ ಘಟಕದ ನಗರಾಧ್ಯಕ್ಷ ಮುರುಗೇಶ್, ಜಿಲ್ಲಾ ಕಾರ್ಯದರ್ಶಿ ರವಿ, ನಗರಾಧ್ಯಕ್ಷ ವಿಜಯ್, ರವಿ ಚಂದ್ರೋಜಿ ರಾವ್, ಆಕಾಶ್ , ಅರ್ಪಿತಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೇಂದ್ರ ಸಚಿವರೊಂದಿಗೆ ಚರ್ಚೆ- ಫಲಪ್ರದ ನಾಗಾಭರಣ

0

ಶಿಕ್ಷಣ, ಉದ್ಯೋಗ ಮತ್ತು ಭಾಷೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂಬಂಧಪಟ್ಟ ಕೇಂದ್ರದ ಸಚಿವರೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚರ್ಚಿಸಿದೆ. ಆ ಮೂಲಕ ಅಗತ್ಯ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಪ್ರಾಧಿಕಾರದ ಈ ಬಾರಿಯ ನಿಯೋಗ ಯಶಸ್ವಿಯಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್ ನಾಗಾಭರಣ ಅವರು ತಿಳಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನ-1 ರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.”ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಹಾಗೂ ಕನ್ನಡಿಗ, ಕರ್ನಾಟಕವೆಂಬ ಆಯ್ಕೆ ಮಂತ್ರದ ಅಡಿ ಕಾರ್ಯನಿರ್ವಹಿಸುತ್ತಿದೆ. ಇವುಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ನಿಯೋಗವು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ಕಿಶನ್ ರೆಡ್ಡಿ, ಹಾಗೂ ಅನುರಾಗ್ ಸಿಂಗ್ ಠಾಕೂರ್, ಮಾಜಿ ಪ್ರಧಾನಿ ಹಾಗೂ ಸಂಸದ ಎಚ್. ಡಿ. ದೇವೇಗೌಡ್ರು, ಮತ್ತು ಕೆಲವು ಸಂಸದರನ್ನು ಭೇಟಿ ಮಾಡಿದೆ. ಕರ್ನಾಟಕದ ಸಮಸ್ಯೆಗಳ ಬಗ್ಗೆ ತಿಳಿಸಿದೆ. ಇವುಗಳ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರದ ಸಚಿವರು ಕೆಲವು ಸಮಸ್ಯೆಗಳ ಪರಿಹಾರಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಟಿ. ಎಸ್. ನಾಗಾಭರಣ ತಿಳಿಸಿದ್ದಾರೆ.

ಇತರ ಸಮಸ್ಯೆಗಳು ಬಗೆಹರಿಸಲು ಭರವಸೆ ಇದೆ ಎಂದು ಟಿ. ಎಸ್. ನಾಗಾಭರಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಎಚ್.ಜಿ. ಶೋಭಾ, ಅಶ್ವಿನಿ ಶಂಕರ್, ಸುರೇಶ ಬಡಿಗೇರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಇನ್ನು ಮುಂತಾದವರು ಉಪಸ್ಥಿತರಿದ್ದರು.