Friday, February 13, 2026
Friday, February 13, 2026
Home Blog Page 1777

ಪುಣೇರಿ – ಡೆಲ್ಲಿ ಜಯಭೇರಿ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಬುಧವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ಜಯಂಟ್ಸ್ ವಿರುದ್ಧ ಪಲ್ಟನ್ ಗೆ ಜಯ
ಮೊದಲನೇ ಪಂದ್ಯವು:
ಪುಣೀರಿ ಪಲ್ಟನ್(33) ಮತ್ತು ಗುಜರಾತ್ ಜಯಂಟ್ಸ್ (26) ತಂಡಗಳ ನಡುವೆ ಪಂದ್ಯ ನಡೆಯಿತು. ಗುಜಾರತ್ ವಿರುದ್ಧ ಪುಣೇರಿ ಭರ್ಜರಿ ಜಯ ಸಾಧಿಸಿತು.

ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಪುಣೇರಿ‌ ಮೊದಲಾರ್ಧದ ಮುಕ್ತಾಯದ ವೇಳೆಗೆ 19-13 ರಿಂದ ಮುನ್ನಡೆಯಲ್ಲಿತ್ತು.ಒಟ್ಟು 18 ರೇಡ್ ಮಾಡಿದ ಮೋಹಿತ್ 10 ಟಚ್ ಪಾಯಿಂಟ್ಸ್ ಗಳಿಸಿದರು. ಅಸ್ಲಂ ಇನಾಂದಾರ್ 8 ಪಾಯಿಂಟ್ಸ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು. ಇದರಲ್ಲಿ 13 ಪಾಯಿಂಟ್ಸ್ ರೇಡಿಂಗ್ ಮೂಲಕವೇ ಬಂದವು.ಇದರಿಂದ ಪುಣೇರಿ ತಂಡವು 7 ಅಂಕಗಳ ಅಂತರದಿಂದ ಗುಜಾರತ್ ತಂಡವನ್ನು ಮಣಿಸಿತು.

ಡೆಲ್ಲಿ ತಂಡಕ್ಕೆ ಕೇವಲ 1 ಅಂಕದ ಅಂತರದಿಂದ ಮಣಿದ ಟೈಟನ್ಸ್ ತಂಡ
ಎರಡನೇ ಪಂದ್ಯವು:
ದಬಾಂಗ್ ಡೆಲ್ಲಿ(36) ಮತ್ತು ತೆಲುಗು ಟೈಟನ್ಸ್(35) ತಂಡಗಳ ನಡುವೆ ಪಂದ್ಯ ನಡೆಯಿತು.ಡೆಲ್ಲಿ ವಿರುದ್ಧ 1 ಅಂಕದ ಅಂತರದಿಂದ ಸೋಲನ್ನು ಅನುಭವಿಸಿತು.

ನವೀನ್ ಕುಮಾರ್ 25 ಪಾಯಿಂಟ್ಸ್ ಅವರ ಬಲ ಪ್ರದರ್ಶನದ ರೇಡಿಂಗ್ ನಿಂದ ದಬಾಂಗ್ ಡೆಲ್ಲಿ ಜಯ ಸಾಧಿಸಿತು.36-35 ರಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು.

ಇಂದು ನಡೆಯಲಿರುವ ಪಂದ್ಯಗಳು:
೧. ಪಟ್ನಾ ಪೈರೇಟ್ಸ್ ಮತ್ತು ತಮಿಳ್ ತಲೈವಾರ್ಸ್
ಸಮಯ:7.30
೨. ಬೆಂಗಳೂರು ಬುಲ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಕ್ಕಳಿಗೆ ಕೋವಿಡ್ ಲಸಿಕೆ ದಾಖಲೆ- ಮನ್ಸುಖ್ ಮಾಂಡವೀಯ

0

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಅಭಿಯಾನಕ್ಕೆ ಈಗಾಗಲೇ ಅನುಮತಿ ನೀಡಿದ್ದಾರೆ. ಈ ಅಭಿಯಾನದಲ್ಲಿ ಹೊಸ ದಾಖಲೆಯನ್ನು ಮಾಡಲಾಗಿದ್ದು, ಒಟ್ಟಿನಲ್ಲಿ ಒಂದು ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆಯ ಡೋಸ್ ನೀಡಲಾಗಿದೆ. ಲಸಿಕೆ ಅಭಿಯಾನ ಪ್ರಾರಂಭವಾಗಿ ಕೇವಲ 3 ದಿನಗಳಲ್ಲಿ ಈ ದಾಖಲೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಡಿಸೆಂಬರ್ 25ರಂದು 2007 ರ ಒಳಗೆ ಜನ್ಮಪಡೆದ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಘೋಷಣೆ ಮಾಡಿದ್ದರು. ಜನವರಿ 3 ರಿಂದ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಒಂದೇ ದಿನ ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಮಕ್ಕಳು ಲಸಿಕೆ ಪಡೆದಿದ್ದಾರೆ.

ಕೊವ್ಯಾಕ್ಸಿನ್ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದ 15ರಿಂದ 18 ವರ್ಷದ ಮಕ್ಕಳಿಗೆ ಪ್ಯಾರಾಸಿಟಮಾಲ್ ಮಾತ್ರೆಗಳು ಅಥವಾ ನೋವು ನಿವಾರಕ ಮಾತ್ರೆಗಳನ್ನು ಕೊಡುವುದು ಬೇಡ ಎಂದು ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸರ್ಕಾರಿ ನೌಕರರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ

0

ಶಿವಮೊಗ್ಗ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ನೌಕರರ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸರಿ ಸಮಾನ ವೇತನ ಮತ್ತು ಭತ್ಯೆಗಳನ್ನು ಜಾರಿಗೊಳಿಸುವುದು, ಎನ್. ಪಿ. ಎಸ್. ರದ್ದತಿ, ವಿವಿಧ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿಯೊಂದಿಗೆ ನಾಳೆಯೇ ಸಮಾಲೋಚಿಸಿ ಅದರ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವ ನೌಕರರಿಂದ ಹಲವು ಯೋಜನೆಗಳು ಯಶಸ್ವಿಯಾಗಿದೆ. ಇದರಿಂದ ದೇಶದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಶ್ಲಾಘಿಸಿದರು.

ಬಹುದಿನಗಳಿಂದ ಇತ್ಯರ್ಥಗೊಳ್ಳದೆ ಉಳಿದಿರುವ ಶಿಕ್ಷಕರ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಗಮನಹರಿಸಲಾಗುವುದು.

ಪಿಂಚಣಿಯಿಲ್ಲದೆ ನಿವೃತ್ತ ನೌಕರರು ಜೀವನ ನಿರ್ವಹಿಸುವುದು ಕಷ್ಟ. ಪಿಂಚಣಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರ ಸಮಸ್ಯೆಗೆ ಕುಟುಂಬದ ಸದಸ್ಯನಂತೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಮಾತನಾಡಿ, ‘ನೌಕರರ ಬಹುದಿನಗಳ ಬೇಡಿಕೆಗಳಾದ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ, ಎನ್ ಪಿ ಎಸ್ ರದ್ದತಿ, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಶಿಕ್ಷಕರ ಸಮಸ್ಯೆಗಳ ಇತ್ಯರ್ಥ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.

ಎಲ್ಲ ಶ್ರೇಣಿಯ ಅಧಿಕಾರಿ ಹಾಗೂ ನೌಕರರಿಗೆ ಸಮಾನ ವೇತನ ಭತ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಾಸಗಳಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಇವುಗಳ ಈಡೇರಿಕೆಗೆ ನಿರ್ಣಾಯಕ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಕಾರ್ಯದರ್ಶಿ ಐ. ಪಿ. ಶಾಂತರಾಜ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಆರ್. ಪಾಪಣ್ಣ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆನ್ ಲೈನ್ ಮೂಲಕ ಸುಳ್ಳು ಮಾಹಿತಿ: ಸಾರ್ವಜನಿಕರೆ ಎಚ್ಚರ

0

ಹತ್ತು ಮತ್ತು 12ನೇ ತರಗತಿಯ ಎರಡನೇ ಅವಧಿಯ ಬೋರ್ಡ್ ಪರೀಕ್ಷೆ ಗಳ ಕುರಿತು ಆನ್ಲೈನ್ ವೇದಿಕೆಗಳ ಮೂಲಕ ಸುಳ್ಳು ಮಾಹಿತಿ ಹರಿಬಿಡುತ್ತಿರುವ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್ಇ) ತಿಳಿಸಿದೆ.

ಈ ಪರೀಕ್ಷೆಗಳ ಕುರಿತ ಅಧಿಕೃತ ಮತ್ತು ಇತ್ತೀಚಿನ ಮಾಹಿತಿಯನ್ನು ಮಂಡಳಿಯ ವೆಬ್ಸೈಟ್ನಲ್ಲಿ ಪಡೆಯಬೇಕು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

10 ಹಾಗೂ 12ನೇ ತರಗತಿಯ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಕೆಲವು ಆನ್ಲೈನ್ ವೇದಿಕೆಗಳು ಬ್ರೇಕಿಂಗ್ ನ್ಯೂಸ್ ನಡಿ ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಮಂಡಳಿ ಹೇಳಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕಳೆದ ವರ್ಷ ಜುಲೈನಲ್ಲಿಯೇ ಎರಡನೇ ಅವಧಿಯ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ ಆರ್ಥಿಕ ಸೂಪರ್ ಪವರ್- ರಾಜನಾಥ್ ಸಿಂಗ್

0

ಮೂಲಸೌಕರ್ಯಗಳ ನಿರ್ಮಾಣದಲ್ಲಿ ದೇಶವು ಕ್ರಾಂತಿಯಾಗುತ್ತಿದೆ. ಈಗ ದೇಶವು ಆರ್ಥಿಕವಾಗಿ ಸೂಪರ್ ಪವರ್ ಆಗುವುದನ್ನು ತಡೆಯಲು ವಿಶ್ವದ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಲಕ್ನೊ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಪಾಲ್ಗೊಂಡಿದ್ದರು.
26,778 ಕೋಟಿ ವೆಚ್ಚದ ರಸ್ತೆ ಯೋಜನೆಯ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ರಕ್ಷಣಾ ಸಚಿವರು ಈ ವಿಷಯ ತಿಳಿಸಿದರು. ಇದರಲ್ಲಿ ಸುಮಾರು 4,270 ಕೋಟಿ ರೂಪಾಯಿ ವೆಚ್ಚದ 63 ಕಿಮೀ ಉದ್ದದ ಲಕ್ನೋದಿಂದ ಕಾನ್ಪುರ ಎಕ್ಸ್‌ಪ್ರೆಸ್‌ವೇ ಸೇರಿದೆ.

ದೇಶದಲ್ಲಿ ಮೂಲಸೌಕರ್ಯ ನಿರ್ಮಾಣದ ವಿಷಯದಲ್ಲಿ ಹೊಸ ಕ್ರಾಂತಿಯೊಂದು ಕಂಡು ಬಂದಿದೆ. ಜಗತ್ತಿನಲ್ಲಿ ಶ್ರೀಮಂತವಾಗಿರುವ ದೇಶಗಳ ಹಿಂದಿನ ದೊಡ್ಡ ರಹಸ್ಯ ಇದು. ಈಗ ಭಾರತ ಆರ್ಥಿಕ ಮಹಾಶಕ್ತಿಯಾಗುವುದನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ರಾಜನಾಥ್ ಹೇಳಿದರು. ಮೊದಲು ಪ್ರತಿದಿನ ಐದರಿಂದ ಎಂಟು ಕಿಲೋಮೀಟರ್ ರಸ್ತೆ ನಿರ್ಮಾಣವಾಗುತ್ತಿತ್ತು ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಪ್ರತಿದಿನ 30 ರಿಂದ 40 ಕಿಮೀ ರಸ್ತೆ ನಿರ್ಮಾಣವಾಗುತ್ತಿದೆ. ಇದು ಸಣ್ಣ ಸಾಧನೆಯಲ್ಲ ಎಂದು ರಾಜನಾಥ್ ತಿಳಿಸಿದ್ದಾರೆ. ಲಕ್ನೋ-ಕಾನ್ಪುರ್ ಎಕ್ಸ್‌ಪ್ರೆಸ್‌ವೇಯನ್ನು ರಾಜ್ಯದ ಜನತೆಗೆ ಉತ್ತಮ ಕೊಡುಗೆ ಎಂದು ಕರೆದ ಲಕ್ನೋ ಸಂಸದರು ಇದನ್ನು ಆರ್ಥಿಕ ಕಾರಿಡಾರ್ ಆಗಿ ನೋಡಬೇಕು ಎಂದು ಹೇಳಿದರು. ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್‌ಗೆ ಹೆಚ್ಚಿನ ವೇಗದ ಸಂಪರ್ಕವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದಲ್ಲಿ ಎಕ್ಸ್‌ಪ್ರೆಸ್‌ವೇಗಳು ಮತ್ತು ಇತರ ರಸ್ತೆಗಳಲ್ಲಿ 7 ನಿರ್ಮಾಣವನ್ನು ಘೋಷಿಸಿದರು.
ಕೇಂದ್ರ ಸರ್ಕಾರವು ಉತ್ತರ ಪ್ರದೇಶದಲ್ಲಿ ಏಳು ಗ್ರೀನ್‌ಫೀಲ್ಡ್ ಪ್ರವೇಶ ನಿಯಂತ್ರಣ ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲಿದೆ ಎಂದು ತಿಳಿಸಿದರು.

ಪಶ್ಚಿಮ ಬಂಗಾಳದ ಗೋರಖ್‌ಪುರದಿಂದ ಸಿಲಿಗುರಿಗೆ 519 ಕಿಮೀ ಉದ್ದದ ಗ್ರೀನ್‌ಫೀಲ್ಡ್ ಪ್ರವೇಶ ನಿಯಂತ್ರಣ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು 32,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.ಅದರ ನಿರ್ಮಾಣ ಕಾರ್ಯವನ್ನು 6 ತಿಂಗಳೊಳಗೆ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

20,000 ಕೋಟಿ ರೂಪಾಯಿ ವೆಚ್ಚದಲ್ಲಿ ವಾರಣಾಸಿಯಿಂದ ಕೋಲ್ಕತ್ತಾದ 686 ಕಿಮೀ ಉದ್ದದ ಗ್ರೀನ್‌ಫೀಲ್ಡ್ ಸಿಕ್ಸ್‌ಲೇನ್ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದೆ. ಈ ಎಕ್ಸ್‌ಪ್ರೆಸ್‌ವೇ ಮತ್ತು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ನಡುವಿನ ಸಂಪರ್ಕಕ್ಕಾಗಿ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ಗಾಜಿಪುರದಿಂದ 30 ಕಿಮೀ ಎಲಿವೇಟೆಡ್ ರಸ್ತೆ, ಮುರ್ಜಾಫರ್‌ನಗರದಿಂದ ಹೊಸ ಆರು ಲೇನ್ ಹೆದ್ದಾರಿ ನಿರ್ಮಾಣವನ್ನು ಮಾಡಲಾಗುವುದು ಎಂದರು. 12,000 ಕೋಟಿ ಮೌಲ್ಯದ ಡೆಹ್ರಾಡೂನ್ ಮತ್ತು ಸಹರಾನ್‌ಪುರ ಬೈಪಾಸ್‌ನಿಂದ 50 ಕಿಮೀ ಸಿಕ್ಸ್‌ಲೇನ್ ರಸ್ತೆಯ ನಿರ್ಮಾಣಕ್ಕಾಗಿ 2,000 ಕೋಟಿ ರೂ ಮೀಸಲಿಡಲಾಗಿದೆ. ಲಕ್ನೋದಿಂದ ಕಾನ್ಪುರ ಹೆದ್ದಾರಿ ನಿರ್ಮಾಣದಿಂದಾಗಿ 30 ರಿಂದ 35 ನಿಮಿಷಗಳಲ್ಲಿ ಕಾನ್ಪುರದಿಂದ ಲಕ್ನೋ ವಿಮಾನ ನಿಲ್ದಾಣವನ್ನು ತಲುಪಬಹುದು ಎಂದು ಹೇಳಿದರು. ತುಳಸಿಪುರ, ಮತ್ತು ರಾಜ್ಯ ರಾಜಧಾನಿ ಲಕ್ನೋಗೆ ಸಂಬಂಧಿಸಿದ ರಸ್ತೆ ಯೋಜನೆಗಳು ಮತ್ತು ಇದರೊಂದಿಗೆ ಅನೇಕ ಇತರ ಯೋಜನೆಗಳಿಗೆ ಅನುಮೋದನೆಯನ್ನು ಘೋಷಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಮಿಕ್ರಾನ್; ಹಾಂಕಾಂಗ್ ನಿಂದ ವಿಮಾನ ಹಾರಾಟ ನಿರ್ಬಂಧ

0

ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳನ್ನು ತಡೆಯುವ ಪ್ರಯತ್ನದಲ್ಲಿ ಹಾಂಗ್ ಕಾಂಗ್ ತನ್ನ ಕೆಲವು ಕಠಿಣ ಕೋವಿಡ್ -19 ನಿರ್ಬಂಧಗಳನ್ನು ಪುನಃ ವಿಧಿಸಿದೆ.
ಭಾರತ ಸೇರಿದಂತೆ 8 ದೇಶಗಳಿಂದ ವಿಮಾನಗಳನ್ನು 3 ಜನವರಿ 3ರಿಂದ 21 ರ ವರೆಗೆ ನಿಷೇಧಿಸಿದೆ ಎಂದು ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಾಹಕ ಕ್ಯಾರಿ ಲ್ಯಾಮ್ ಚೆಂಗ್ ಯುಯೆಟ್-ಗೋರ್ ಅವರು ತಿಳಿಸಿದ್ದಾರೆ. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಭಾರತ, ಪಾಕಿಸ್ತಾನ, ಫಿಲಿಪೈನ್ಸ್, ಯುಕೆ ಮತ್ತು ಯುಎಸ್, ನ ವಿಮಾನಗಳನ್ನು ನಿಷೇಧಿಸಲಾಗಿದೆ ಎಂದರು.

ಹಾಂಗ್ ಕಾಂಗ್ ಸಾಮಾಜಿಕ ಚಟುವಟಿಕೆಗಳು ಮತ್ತು ಅಂತರಾಷ್ಟ್ರೀಯ ಪ್ರಯಾಣವನ್ನು ಒಳಗೊಳ್ಳುವ ಕೆಲವು ಕಠಿಣವಾದ ಕೋವಿಡ್ -19 ನಿರ್ಬಂಧಗಳನ್ನು ಮಂಡಳಿಯಾದ್ಯಂತ ಪುನಃ ಹೇರುತ್ತಿದೆ.ಎಲ್ಲಾ ಸೇವೆಗಳಲ್ಲಿ ಸಂಜೆ 6 ಗಂಟೆಗೆ ಕರ್ಫ್ಯೂ ಅನ್ನು ನಿಗದಿಪಡಿಸಿದೆ.
ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತ್ವರಿತ ಬದಲಾವಣೆ ಕಂಡುಬಂದಿದೆ. ಇದು ನಮ್ಮನ್ನು ಚಿಂತೆಗೀಡು ಮಾಡಿದೆ. ಪ್ರಸರಣ ಸರಪಳಿಗಳನ್ನು ಕಡಿತಗೊಳಿಸಲು ನಾವು ವೇಗದ, ನಿರ್ಣಾಯಕ ಮತ್ತು ನಿಖರವಾದ ಕ್ರಮಗಳನ್ನು ಪ್ರಕಟಿಸುತ್ತೇವೆ ಎಂದು ಲ್ಯಾಮ್ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರಯಾಣಿಕರ ವಿಮಾನಗಳ ಮೇಲಿನ ಎರಡು ವಾರಗಳ ನಿಷೇಧವು ಜನವರಿ 21 ರವರೆಗೆ ಜಾರಿಯಲ್ಲಿರುತ್ತದೆ. ಇತ್ತೀಚೆಗೆ ಆ ದೇಶಗಳಲ್ಲಿದ್ದ ಅಥವಾ ಅವುಗಳ ಮೂಲಕ ಸಾಗಿದ ಪ್ರಯಾಣಿಕರಿಗೆ ಎರಡು ವಾರಗಳವರೆಗೆ ನಗರಕ್ಕೆ ಹಿಂತಿರುಗುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಾಗರ ಸುದ್ದಿ ಸಾರ

0

ಶಾಸಕರಾದ ಹೆಚ್. ಹಾಲಪ್ಪನವರು ವಿವಿಧ ಅಭಿವೃದ್ಧಿ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಜೂರು ಮಾಡಿಸಿರುವ ನೂತನವಾದ ಸುಸಜ್ಜಿತ, ಅತ್ಯಾಧುನಿಕ 108 ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದರು.
ಅಂಬುಲೆನ್ಸ್ ಕೆಟ್ಟುಹೋಗಿ ತುಮರಿಯಲ್ಲಿ ತೊಂದರೆಯಾಗಿತ್ತು. ರಿಪೇರಿಗೆ ಕಳುಹಿಸಿದ ಅಂಬುಲೆನ್ಸ್ ರೆಡಿಯಾಗಲು ಸಾಕಷ್ಟು ಸಮಯ ಬೇಕು. ಈಗ ಹೊಸ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿಗಳು ಎಷ್ಟು ಮುಖ್ಯವೋ ಅಂಬುಲೆನ್ಸ್ ಕೂಡ ಅಷ್ಟೇ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ
ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸಾಗರದ ಸ.ಪ.ಪೂ ಕಾಲೇಜಿನಲ್ಲಿ *15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಪ್ರತಿಬಂಧಕ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದರು.
ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಬೇಕು ಎನ್ನುವ ಯೋಜನೆ ಜಾರಿಯಲ್ಲಿದೆ. ನಮ್ಮ ತಾಲೂಕಿನಲ್ಲಿ ಶೇ.40ರಷ್ಟು ವ್ಯಾಕ್ಸಿನೇಷನ್ ಆಗಿದೆ. ಇನ್ನ ಉಳಿದಿರುವ ಆರು ದಿನಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆನ್ನು ಪೂರ್ಣಗೊಳಿಸಿದ್ದೇವೆ. ಎಲ್ಲಾ ವೈದ್ಯಕೀಯ ವೃಂದದವರಿಗೆ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ
ನಗರಸಭೆ ಅಧ್ಯಕ್ಷರು, ಸದಸ್ಯರು, ವೈದ್ಯಾಧಿಕಾರಿಗಳು, CDC ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.

ಹೆಚ್.ಹಾಲಪ್ಪನವರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ಸಾಗರ ಉಪವಿಭಾಗೀಯ ಆಸ್ಪತ್ರೆಯ RTPCR ಲ್ಯಾಬ್ ಗೆ ಪೂರಕ ಪರಿಕರಗಳನ್ನು ಒದಗಿಸುವ ಬಗ್ಗೆ ಭರವಸೆ ನೀಡಿದರು.
ಫಾರೆಸ್ಟ್ ರೈಟ್ ಟು ಆಕ್ಟ್, ನೆಟ್ ವರ್ಕ್ ಸಮಸ್ಯೆ ಹಾಗೂ ಸಾಗರದ ಗಣಪತಿ ಕೆರೆಯನ್ನು ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸುವ ಕುರಿತು ಚರ್ಚಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭೂಮಿ ಹಕ್ಕುಪತ್ರ ನೀಡಿ ರೈತರ ಪ್ರತಿಭಟನೆ

0

ಶಿಕಾರಿಪುರ ತಾಲೂಕು ಕಚೇರಿಯೆದುರು ಬಸವಾಪುರ ಬೀಚಾರ್ ಗ್ರಾಮದ ರೈತರು ಸಾಗುವಳಿ ಭೂಮಿ ಹಕ್ಕುಪತ್ರ ನೀಡಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಬಸವಾಪುರ ಬೇಚಾರ್ ಗ್ರಾಮದ ರೈತರಿಗೆ ಭೂಮಿ ಹಕ್ಕು ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು.

1985ರಿಂದ ಬಸವಾಪುರ ಬೇಚಾರ್ ಗ್ರಾಮದ 2000 ಎಕರೆ ಕೃಷಿ ಭೂಮಿಯಲ್ಲಿ 600 ರೈತರ ಕುಟುಂಬಗಳು ಸಾಗುವಳಿ ಮಾಡುತ್ತಿದ್ದವು. ಆದರೆ 2004 ರಲ್ಲಿ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡಿದೆ. ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸಿದೆ. ರೈತರಿಗೆ ಭೂಮಿ ಹಕ್ಕು ನೀಡುವಂತೆ ಹಲೋ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರೈತರ ಹಿತದೃಷ್ಟಿಯಿಂದ ಈ ಭೂಮಿ ಈ ಕಂದಾಯ ಇಲಾಖೆಗೆ ವರ್ಗಾವಣೆ ಯಾಗಬೇಕು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಬೇಕು. ಸಾಗರ ಉಪವಿಭಾಗಧಿಕಾರಿ ಡಾ. ನಾಗರಾಜ್ ನಾಯ್ಕ ಅವರು ಅರಣ್ಯ ಇಲಾಖೆಯಿಂದ ದಾಖಲೆ ಪಡೆದು ರೈತರಿಗೆ ಭೂಮಿ ಹಕ್ಕು ನೀಡಬೇಕು. ಹಕ್ಕುಪತ್ರ ನೀಡದಿದ್ದರೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಜೆಡಿಎಸ್ ಮುಖಂಡ ಎಚ್. ಟಿ. ಬಳಿಗಾರ್, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಅಮೃತ ರಾಸ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬಿಜೆಪಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುತ್ತಿದೆ

0

ಹಿಂದುಳಿದ ವರ್ಗಗಳ ಮತವನ್ನು ಪಡೆದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನ 70 ವರ್ಷದ ಆಡಳಿತ ಅವಧಿಯಲ್ಲಿ ಹಿಂದುಳಿದವರ ಅಭಿವೃದ್ಧಿ ಮಾಡಿಲ್ಲ. ಮತ ಪಡೆದು ಮೋಸ ವಂಚನೆ ಮಾಡಿದೆ. ಅದಕ್ಕಾಗಿಯೇ ಈಗ ದೇಶದಲ್ಲಿ ಟಾರ್ಚ್ ಹಾಕಿ ಹುಡುಕುವ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಿಜೆಪಿ ಈಗ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಮೋದೀಜಿ ಅವರು ಹಿಂದುಳಿದ ವರ್ಗಕ್ಕೆ ಸೇರಿದ್ದು, ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಗ್ಯ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಾರ್ವಜನಿಕ ಭವಿಷ್ಯ ನಿಧಿ ವಾರ್ಷಿಕ ಕೊಡುಗೆ ಏರಿಕೆ

0

ಕೇಂದ್ರ ಸರ್ಕಾರಕ್ಕೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ವು ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ವಾರ್ಷಿಕ ಮಿತಿಯನ್ನು ಈಗಿನ 1.5 ಲಕ್ಷ ರೂ. ಗಳಿಂದ 3 ಲಕ್ಷ ರೂ. ಗಳಿಗೆ ಏರಿಕೆ ಮಾಡಬಹುದು ಎಂದು ಬಜೆಟ್ ಪೂರ್ವ ಸಲಹೆ ನೀಡಿದೆ.

ಸಣ್ಣ ಉಳಿತಾಯ ಯೋಜನೆಯಾಗಿರುವ ಪಿಪಿಎಫ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ವಾರ್ಷಿಕ ಠೇವಣಿಯ ಮಿತಿ 1.5 ಲಕ್ಷ ರೂ. ಗಳಿದೆ. ಆದ್ದರಿಂದ ಇದರ ಮುಖೇನ ಏರಿಸುವುದು ಸೂಕ್ತ ಎಂದು ತಿಳಿಸಿದೆ.

ಫೆಬ್ರವರಿ ಒಂದರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. 2022-23ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಲಿದ್ದಾರೆ.

ಸಾರ್ವಜನಿಕ ಭವಿಷ್ಯನಿಧಿ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ. ವೇತನದಾರರ ಮಾತ್ರವಲ್ಲದೇ, ಸಾರ್ವಜನಿಕರು ಇದರಲ್ಲಿ ವಾರ್ಷಿಕ ಕನಿಷ್ಠ 500 ರೂ.ಗಳಿಂದ 1.5 ಲಕ್ಷ ರೂ. ಮಿತಿಯೊಳಗೆ ಹೂಡಿಕೆ ಮಾಡಬಹುದಾಗಿದೆ.

ಇದು ನಿವೃತ್ತ ಉಳಿತಾಯ ಯೋಜನೆಯಾಗಿದೆ. ತೆರಿಗೆ ಉಳಿತಾಯದ ಪ್ರಯೋಜನವೂ ಲಭ್ಯ. ಸದ್ಯ ವಾರ್ಷಿಕ ಶೇ.7.1ರ ಬಡ್ಡಿದರ ದೊರೆಯುತ್ತದೆ. ಹದಿನೈದು ವರ್ಷಗಳ ಅವಧಿ ಇದಕ್ಕಿದ್ದು, ನಂತರ ಐದು ವರ್ಷ ಅವಧಿಗೆ ವಿಸ್ತರಿಸಬಹುದಾಗಿದೆ.