Friday, February 13, 2026
Friday, February 13, 2026
Home Blog Page 1778

ಸಿಎಪಿಎಫ್ ಸಿಬ್ಬಂದಿಗೆ ಆಯುಷ್ಮಾನ್ ಭಾರತ್ ಯೋಜನೆ

0

ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ವ್ಯಾಪ್ತಿಗೆ ದೇಶದಾದ್ಯಂತ ಇರುವ ಎಲ್ಲಾ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು ತರುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಯೋಜನೆಗಳ ಪೈಕಿ ಮಹತ್ವದ ಯೋಜನೆ ಇದಾಗಿದೆ. ‘ಯೋಜನೆಗೆ ಸಿಎಪಿಎಫ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ದೇಶಾದ್ಯಂತ ಯೋಜನೆಗೆ ನೋಂದಣಿ ಮಾಡಿಕೊಂಡಿರುವ 24 ಸಾವಿರ ಆಸ್ಪತ್ರೆಗಳಲ್ಲಿ ಕ್ಯಾಷ್ ಲೆಸ್ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ತಿಳಿಸಿದ್ದಾರೆ.

2021 ರ ನವೆಂಬರ್ 2 ರಿಂದ ಇದುವರೆಗೆ ಕೇಂದ್ರೀಯ ಅರೆಸೈನಿಕ ಪಡೆಗಳು, ಸಶಸ್ತ್ರ ಪಡೆಗಳಿಗೆ ಒಟ್ಟಾರೆ 35 ಲಕ್ಷ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅದಾನಿ ಸಮೂಹಕ್ಕೆ ಕಲ್ಲಿದ್ದಲು ಪೂರೈಕೆ ಗುತ್ತಿಗೆ

0

ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುವ ಗುತ್ತಿಗೆಯ ಟೆಂಡರ್ ಅನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ.

ಅದನ್ನು ಎಂಟರ್ಪ್ರೈಸಸ್ 10 ಲಕ್ಷ ಟನ್ ಕಲ್ಲಿದ್ದಲನ್ನು ಚಿಕ್ಕ ವಲಯದ ವಿದ್ಯುತ್ ಉತ್ಪಾದಕ ಕಂಪನಿಯಾದ ಎನ್ಟಿಪಿಸಿ ಲಿಮಿಟೆಡ್ ಗೆ ಪೂರೈಸಲಿದೆ.

ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಎನ್ ಟಿ ಪಿ ಸಿ ಕಳೆದ ಅಕ್ಟೋಬರ್ ನಲ್ಲಿ ಕಲ್ಲಿದ್ದಲು ಆಮದಿಗೆ ಟೆಂಡರ್ ಕರೆದಿತ್ತು ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆ ಇದು ಅನುಕೂಲ ಮಾಡಿಕೊಡಲಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಅದಾನಿ ಅವರಾಗಲಿ, ಎನ್ ಟಿ ಪಿ ಸಿ ಪ್ರತಿಕ್ರಿಯಿಸಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಮೂರನೇ ಅಲೆ ಎದುರಿಸಲು ಉದ್ಯಮ ವಲಯ ಸಿದ್ಧ

0

ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಭಾರತದ ಉದ್ಯಮ ವಲಯ ಸನ್ನದ್ಧವಾಗಿದೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿದ್ದರೂ ಸಹ ಎರಡನೇ ವೇಳೆ ಉಂಟಾಗಿದ್ದಂತಹ ಭೀತಿ ಈಗ ಇಲ್ಲ. ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ನಡೆಸಿರುವುದಾಗಿ ಉದ್ಯಮ ವಲಯದ ತಜ್ಞರು ತಿಳಿಸಿದ್ದಾರೆ.

ಎರಡನೆಯ ಅಲೆ ಇಳಿದನಂತರ ಕೆಲವು ಖಾಸಗಿ ಸಂಸ್ಥೆಯ ಕಚೇರಿಗಳು ಕೆಲಸವನ್ನು ಪುನರಾರಂಭಿಸಲು ಬಯಸಿದ್ದವು. ಆದರೆ ಕೋವಿಡ್ ನ ರೂಪಾಂತರ ತಳಿ ಓಮಿಕ್ರಾನ್ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಮ್ ಹೋಮ್ ಅನ್ನು ಮುಂದುವರಿಸಿವೆ ಎಂದು ತಿಳಿದುಬಂದಿದೆ.

ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ‘ಭಯಬೇಡ, ವಿಜ್ಞಾನವು ಕೋವಿಡ್ ನಿಯಂತ್ರಣದ ಬಗ್ಗೆ ನಿರ್ಧಾರಗಳನ್ನು ಮತ್ತು ಕಾರ್ಯತಂತ್ರವನ್ನು ನಿರೂಪಿಸಲಿವೆ. ಜನತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಹೇಳಿದ್ದಾರೆ.

ಭಾರತೀಯ ಉದ್ಯಮ ವಲಯವು ಕೋವಿಡ್ ನ 2ನೇ ಅಲೆಯನ್ನು ಎದುರಿಸಿರುವ ಅನುಭವ ಇರುವುದರಿಂದ ಮೂರನೇ ಅಲೆಯಿಂದ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಉದ್ಯಮ ವಲಯದ ಸಿಇಒಗಳು ತಿಳಿಸಿದ್ದಾರೆ.

ಈ ಬಗ್ಗೆ ಆರ್ ಪಿ ಜಿ ಎಂಟರ್ಪ್ರೈಸಸ್ ನ ಅಧ್ಯಕ್ಷ ಹರ್ಷ ಗೋಯೆಂಕಾ ಅವರು ” ಡಬ್ಲ್ಯುಎಫ್ ಹೆಚ್ ಉದ್ಯೋಗಿಗಳ ಆರೋಗ್ಯದ ಬಗ್ಗೆ ನಿಗಾ, ನೈರ್ಮಲ್ಯ, ಸಾಮಾಜಿಕ ಅಂತರ, ಸುರಕ್ಷತೆಗೆ ಉದ್ಯಮ ವಲಯ ನಿಗಾ ವಹಿಸಿದೆ” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತೆರಿಗೆ ವಂಚನೆ ಆರೋಪದ ಸುಳಿಯಲ್ಲಿ ಶಿಯೋಮಿ ಕಂಪನಿ

0

ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ಕಂಪನಿ, ಚೀನಾ ಮೂಲದ ಶವೋಮಿಗೆ 653 ಕೋಟಿ ಆಮದು ಸುಂಕ ಪಾವತಿಸಲು ನೋಟಿಸ್ ಜಾರಿಯಾಗಿದೆ.

ಶವೋಮಿ ಕಂಪನಿಯ ಘಟಕಗಳಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ, ಕಂಪನಿಯು ಅಮೆರಿಕ ಮತ್ತು ಚೀನಾದ ಕಂಪನಿಗಳಿಗೆ ಹಾಗೂ ಪರವನಾಗಿ ಶುಲ್ಕ ಪಾವತಿಸಿ ದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

‘ ಭಾರತದ ಕಾನೂನುಗಳನ್ನು ಪಾವತಿಸಿದ್ದಕ್ಕೆ ನಾವು ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ನೋಟೀಸು ಗಳನ್ನು ವಿಸ್ತೃತವಾಗಿ ಪರಿಶೀಲಿಸುತ್ತಿದ್ದೇವೆ. ಜವಾಬ್ದಾರಿಯುತ ಕಂಪನಿಯಾಗಿ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ ಎಂದು ಶಿಯೊಮಿ ವಕ್ತಾರರು ಹೇಳಿದ್ದಾರೆ.

ಶಿಯೋಮಿ ಇಂಡಿಯಾ ಅಥವಾ ಗುತ್ತಿಗೆ ಆಧಾರದಲ್ಲಿ ಈ ಕಂಪನಿಗೆ ತಯಾರಿಕ ಕೆಲಸ ಮಾಡಿಕೊಡುವ ಕಂಪನಿಗಳು ರಾಯಾಧನದ ಮೊತ್ತವನ್ನು ತಿಳಿಸುತ್ತಿರಲಿಲ್ಲ.

ಈ ಮೂಲಕ ಆಮದು ಸುಂಕವನ್ನು ವಂಚಿಸಲಾಗುತ್ತಿದೆ ಎಂಬುದನ್ನು ರೆವಿನ್ಯೂ ಗುಪ್ತದಳ ಮಹಾ ನಿರ್ದೇಶನಾಲಯ ನಡೆಸಿದ ತನಿಖೆಯ ವೇಳೆ ದೊರೆತ ಸಾಕ್ಷ್ಯಗಳು ತೋರಿಸಿಕೊಟ್ಟವು ಎಂದು ಸಚಿವಾಲಯ ಹೇಳಿದೆ.

ಡಿಆರ್ ಐ ತನಿಖೆ ಪೂರ್ಣಗೊಂಡ ನಂತರ ದಲ್ಲಿ ಒಟ್ಟು 653 ಕೋಟಿ ರೂಪಾಯಿ ಮೊತ್ತದ ಸುಂಕ ವಸೂಲಿಗೆ ಒಟ್ಟು ಮೂರು ನೋಟುಗಳನ್ನು ಶಿಯೋಮಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಶಿಯೋಮಿ ಕಂಪನಿಯು ಮಿ ಬ್ರಾಂಡ್ ನ ಮೊಬೈಲ್ ಫೋನ್ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿತ್ತು. ಅಥವಾ ಅದರ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು, ಭಾರತದಲ್ಲಿ ಅವುಗಳನ್ನು ಗುತ್ತಿಗೆ ತಯಾರಕರ ನೆರವಿನಿಂದ ಜೋಡಿಸಿ ಮೊಬೈಲ್ ಫೋನ್ ಸಿದ್ಧಪಡಿಸುತ್ತಿತ್ತು ಎಂಬುವುದನ್ನು ಡಿಆರ್ ಐ ತನಿಖೆ ಕಂಡುಕೊಂಡಿದೆ.

ಶವೋಮಿ ಕಂಪನಿಯು ಆಮದು ಸುಂಕವನ್ನು ವಂಚಿಸುತ್ತಿದೆ ಎಂಬ ಮಾಹಿತಿಯು ಡಿಆರ್ ಐ ಅಧಿಕಾರಿಗಳಿಗೆ ಲಭಿಸಿತ್ತು. ಇದರ ಆಧಾರದಲ್ಲಿ ಅದು ತನಿಖೆ ಆರಂಭಿಸಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸಿ.ಎನ್.ಬಾಲಕೃಷ್ಣ ಆಯ್ಕೆ

0

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಆಯ್ಕೆಯಾಗಿದ್ದಾರೆ.
ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ನಾನಾ ಹುದ್ದೆಗಳಿಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪಡೆಯಲು 18 ಮತಗಳು ಬೇಕಿದ್ದವು. ಒಟ್ಟು 35 ನಿರ್ದೇಶಕ ಪೈಕಿ 20 ನಿರ್ದೇಶಕರು ಬಾಲಕೃಷ್ಣ ಪರ ಮತ ಚಲಾಯಿಸಿದರು. ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ 14 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷರಾಗಿ ಡಾ.ಕೆ.ವಿ. ರೇಣುಕಾಪ್ರಸಾದ್ (ಸುಳ್ಯ) ,ಡಿ. ಹನುಮಂತಯ್ಯ, ಕೋನಪ್ಪರೆಡ್ಡಿ (ಕೋಲಾರ) , ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿ ಖಜಾಂಚಿಯಾಗಿ ರಾಘವೇಂದ್ರ ಮತ್ತು ಖಜಾಂಚಿಯಾಗಿ ಆರ್. ಪ್ರಕಾಶ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕಾಗಿ ಬ್ಯಾಲೆಟ್ ಪೇಪರ್ ಮೂಲಕ ಗುಪ್ತ ಮತದಾನ ಮಾಡಲಾಗಿತ್ತು. ಅಧ್ಯಕ್ಷಗಾದಿಗಾಗಿ ಸಿ.ಎನ್‌. ಬಾಲಕೃಷ್ಣ ಹಾಗೂ ಸಂಘದ ಹಿಂದಿನ ಅಧ್ಯಕ್ಷ ಸಿ.ಕೆಂಚಪ್ಪಗೌಡ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ, ಅಂತಿಮವಾಗಿ ಸಿ.ಎನ್. ಬಾಲಕೃಷ್ಣ ಗೆಲುವು ಸಾಧಿಸಿದರು. ಆಯ್ಕೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಒಕ್ಕಲಿಗರ ಸಂಘದ ಆವರಣದಲ್ಲಿ ಸಂಭ್ರಮಾಚರಣೆ ಮಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಸೋಂಕು ಹೆಚ್ಚಿರುವಲ್ಲಿ ಮಾತ್ರ ಕರ್ಫ್ಯೂ ಇರಲಿ-ಕೆ.ಎಸ್.ಈಶ್ವರಪ್ಪ

0

ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳು ಬೆಂಗಳೂರಿನಲ್ಲಿ ಅಧಿಕ ಇವೆ. ಹೀಗಾಗಿ, ರಾಜ್ಯಾದ್ಯಂತ ಕರ್ಫ್ಯೂ ವಿಧಿಸುವ ಅಗತ್ಯವಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹೊರತುಪಡಿಸಿ ಬೇರೆಯ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದಂಕಿಯಷ್ಟಿದೆ. ಅಂತಹ ಕಡೆಗೂ ಕರ್ಫ್ಯೂ ಅಗತ್ಯವಿಲ್ಲ. ಆದರೆ, ಸರ್ಕಾರ ಕೈಗೊಂಡಿರುವ ಈ ನಿರ್ಣಯದಿಂದ ಆಟೋರಿಕ್ಷಾ ಚಾಲಕರು, ಹಮಾಲರು ಸೇರಿ ದುಡಿಯುವ ವರ್ಗಕ್ಕೆ ಕಷ್ಟವಾಗಲಿದೆ ಎಂದು ತಿಳಿಸಿದರು.
ಕೋವಿಡ್ ಪ್ರಕರಣಗಳು ಬೆಂಗಳೂರಿನಲ್ಲಿ ಅಧಿಕ ಇವೆ. ಹೀಗಾಗಿ, ರಾಜ್ಯಾದ್ಯಂತ ಕರ್ಫ್ಯೂ ವಿಧಿಸುವ ಅಗತ್ಯವಿಲ್ಲ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆರೋಪಿತ ತಮಿಳುನಾಡಿನ ರಾಜಕಾರಣಿ ಹಾಸನದಲ್ಲಿ ಸೆರೆ.

0

ವಂಚನೆ, ಅವ್ಯವಹಾರ ಪ್ರಕರಣದಲ್ಲಿ ತಮಿಳುನಾಡು ಪೊಲೀಸರು ಎಐಎಡಿಎಂಕೆ ಪಕ್ಷದ ಮಾಜಿ ಸಚಿವರೊಬ್ಬರನ್ನು ಹಾಸನದಲ್ಲಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ವಶಕ್ಕೆ ಪಡೆದಿದ್ದಾರೆ. ಪಕ್ಕದ ರಾಜ್ಯದ ಮಾಜಿ ಸಚಿವರನ್ನು ಈ ರೀತಿ ಸೇರಿ ಹಿಡಿದಿರುವುದು ಇದೇ ಮೊದಲು ಎನ್ನಲಾಗಿದೆ.
ಆರೋಪಿಯನ್ನು ತಮಿಳುನಾಡಿನ ಮಾಜಿ ಸಚಿವ ರಾಜೇಂದ್ರ ಬಾಲಾಜಿ ಎಂದು ಗುರುತಿಸಲಾಗಿದೆ. ತಮಿಳುನಾಡು ಪೊಲೀಸ್ ತಂಡ ರಾಜೇಂದ್ರ ಅವರ ಕಾರನ್ನು ಹಿಂಬಾಲಿಸಿ ನಗರದ ವಾರ್ತಾ ಇಲಾಖೆ ಎದುರು ರಸ್ತೆಯಲ್ಲಿ ಅಡ್ಡಹಾಕಿತು.
ಬಾಲಾಜಿಯವರು ಕೆಲವರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೂರು ಕೋಟಿ ರೂಪಾಯಿ ವಸೂಲಿ ಮಾಡಿ ವಂಚಿಸಿದ್ದರು. ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಮದ್ರಾಸ್ ಹೈಕೋರ್ಟ್ ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅನೂರ್ಜಿತಗೊಳಿಸಿತ್ತು.
ಇದಲ್ಲದೆ ಚೆನ್ನೈ ನ ವಿವಿಧ ಠಾಣೆಗಳಲ್ಲಿ ಇವರ ಮೇಲೆ 6ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಚಿವರ ಗೆಣೆಕಾರರು ಕರ್ನಾಟಕದಲ್ಲಿ ವಾಸ್ತವ್ಯ ಒದಗಿಸಿ ಎಲ್ಲದಕ್ಕೂ ವ್ಯವಸ್ಥೆ ಮಾಡಿದ್ದರು. ಕಳೆದ ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಓಡಾಡುತ್ತಿದ್ದರು. ಜಿಲ್ಲೆಯಲ್ಲಿ ತಂಗಿರುವ ಮಾಹಿತಿ ಪಡೆದು ಹಾಸನಕ್ಕೆ ಬಂದು ಶೋಧ ನಡೆಸಿದ್ದರು ಎನ್ನಲಾಗಿದೆ. ಇವರನ್ನು ಬಂಧಿಸಲು 30 ಪೊಲೀಸ್ ಅಧಿಕಾರಿಗಳು ಬಂದಿದ್ದರು. 15 ನಿಮಿಷದ ಚೇಸಿಂಗ್ ನಲ್ಲಿ ಕೊನೆಗೂ ಬಾಲಾಜಿ ಸಿಕ್ಕಿಬಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದ ಓಂಶಕ್ತಿ ಯಾತ್ರಿಕರಿಗೆ ಕೋವಿಡ್ ತಪಾಸಣೆ

0

ತಮಿಳುನಾಡಿನಲ್ಲಿ ಓಂ ಶಕ್ತಿ ಯಾತ್ರೆ ಮುಗಿಸಿ ಶಿವಮೊಗ್ಗಕ್ಕೆ ಮರಳಿದ ಮಹಿಳೆಯರಿಗೆ ಜಿಲ್ಲಾಡಳಿತ ಸ್ಕ್ರೀನಿಂಗ್ ಕಾರ್ಯ ನಡೆಸಿ ಸ್ವ್ಯಾಬ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ.

ಶಿವಮೊಗ್ಗದಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಮರಳುತ್ತಿರುವ ಬಸ್ಸುಗಳನ್ನು ಸಹ್ಯಾದ್ರಿ ಕಾಲೇಜು ಬಳಿ ತಡೆದು ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಮಹಿಳೆಯರಿಗೆ ಸ್ಕ್ರೀನಿಂಗ್ ಮಾಡಿದರು.

ಈ ಬಾರಿ ಶಿವಮೊಗ್ಗದಿಂದ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಓಂಶಕ್ತಿ ದರ್ಶನಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 31 ರಂದು ಪ್ರವಾಸ ಆರಂಭಿಸಿದ್ದ ಮಹಿಳೆಯರು ಹಿಂತಿರುಗಿದ್ದಾರೆ. ಓಂ ಶಕ್ತಿ ದರ್ಶನ ಪಡೆದು ಮಂಡ್ಯ ಜಿಲ್ಲೆಗೆ ಮರಳಿದ ಮೂವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಇದು ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಮಹಿಳೆಯರನ್ನು ಸಂಪೂರ್ಣ ತಪಾಸಣೆಗೊಳಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ತಮಿಳುನಾಡಿನಿಂದ ಬಂದ 25 ಬಸ್ಸುಗಳನ್ನು ತಡೆದು ಎಲ್ಲರನ್ನೂ ತಪಾಸಣೆ ಮಾಡಲಾಗಿದೆ. ಎಲ್ಲರಿಗೂ 7ದಿನ ಹೋಂ ಕ್ವಾರಂಟೈನ್ ಗೆ ಸೂಚನೆ ನೀಡಲಾಗಿದೆ ಎಂದು ಡಿಎಚ್ಒ ಡಾ. ರಾಜೇಶ್ ಸುರಗಿಹಳ್ಳಿ ಅವರು ಹೇಳಿದ್ದಾರೆ.

ಓಂ ಶಕ್ತಿ ತೀರ್ಥಯಾತ್ರೆಗೆ ತೆರಳಿರುವ ನೂರಕ್ಕೂ ಅಧಿಕ ಬಸ್ಸುಗಳು ಡಿಪೊಗೆ ಬರುತ್ತಿದ್ದಂತೆ ಬಸ್ಸುಗಳನ್ನು ಸಂಪೂರ್ಣವಾಗಿ ಸ್ಯಾನಿಟಸ್ ಮಾಡಿ, ಅನಂತರ ನಿಯಮಿತ ಮಾರ್ಗಗಳಿಗೆ ಬಸ್ಸುಗಳನ್ನು ಕಳುಹಿಸಲಾಗುವುದು ಎಂದು ಡಿಪೊ ವ್ಯವಸ್ಥಾಪಕರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿದ್ಯಾರ್ಥಿಗಳು ಜೀವನ ಕೌಶಲ ಕಲಿಯಬೇಕು

0

ಪ್ರಸ್ತುತ ದಿನಗಳಲ್ಲಿ ಮನುಷ್ಯ ಸ್ವಯಂ ರಕ್ಷಣೆಗೆ ಅಗತ್ಯವಿರುವ ತರಬೇತಿಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ. ಎಸ್. ಗುರುಮೂರ್ತಿ ಅವರು ಹೇಳಿದ್ದಾರೆ.

ಶಿಕಾರಿಪುರದ ಬಿಸಿಎಂ ಇಲಾಖೆ ತಾಲೂಕಿನ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ಸ್ವಯಂ ರಕ್ಷಣೆ ಹಾಗೂ ಕರಾಟೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತವಾಗಿರದೆ ಜೀವನ ಸಾಗಿಸಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಕೆಲವು ಅನಿವಾರ್ಯ ಸಂದರ್ಭದಲ್ಲಿ ಸ್ವಯಂ ರಕ್ಷಣೆಗೆ ಕೌಶಲಗಳು ಅಗತ್ಯವಾಗುತ್ತವೆ. ತಾಲೂಕಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯವನ್ನು ವಿದ್ಯಾರ್ಥಿನಿಲಯಗಳಲ್ಲಿ ಒದಗಿಸುತ್ತಿದೆ. ಉತ್ತಮ ರೀತಿ ವಿದ್ಯಾಭ್ಯಾಸ ಮಾಡಬೇಕು ಎಂದು ಕೆ.ಎಸ್. ಗುರುಮೂರ್ತಿ ಅವರು ಸಲಹೆ ನೀಡಿದರು.

ಡಿವೈಎಸ್ ಪಿ ಶಿವಾನಂದ ಮದರ ಖಂಡಿ , ‘ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆಗಳು ಸಹಕಾರಿಯಾಗಿವೆ. ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವ ಮೂಲಕ ತಾಲೂಕಿಗೆ ಗೌರವ ತರಬೇಕು’ ಇಂದು ಗುರುಮೂರ್ತಿ ಅವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಬಿಸಿಎಂ ಇಲಾಖೆ ಕಲ್ಯಾಣಧಿಕಾರಿ ಶೋಭ, ಕರಾಟೆ ತರಬೇತುದಾರರಾದ ಡಿ.ಬಿ. ಮಿಥುನ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಸಮೇದ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೆಂಗಳೂರಿಗೆ ರಾಷ್ಟ್ರೀಯ ತನಿಖಾದಳ ಕಚೇರಿ

0

ಕೇಂದ್ರ ಹಣಕಾಸು ಸಚಿವಾಲಯವು ಬೆಂಗಳೂರು ಸೇರಿದಂತೆ ದೇಶದ 6 ನಗರಗಳಲ್ಲಿ ರಾಷ್ಟ್ರೀಯ ತನಿಖಾದಳ ಘಟಕಗಳನ್ನು ಸ್ಥಾಪಿಸಿ, ಹೆಚ್ಚುವರಿಯಾಗಿ 435 ಹುದ್ದೆಗಳನ್ನು ಸೃಷ್ಟಿಸಲು ಅನುಮತಿ ನೀಡಿದೆ.

ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ಪ್ರಸ್ತಾವನೆಯನ್ನು ಕಳುಹಿಸಿದೆ. ಬೆಂಗಳೂರು, ಪಟ್ನಾ, ಅಹಮದಾಬಾದ್, ಜೈಪುರ, ಭೂಪಾಲ್ ಮತ್ತು ಭುವನೇಶ್ವರದಲ್ಲಿ ಹೊಸ ಎನ್ಐಎ ಘಟಕಗಳು ಸ್ಥಾಪನೆಯಾಗಲಿವೆ.

ಪ್ರತಿ ಘಟಕದ ಕಚೇರಿಯಲ್ಲಿ 72 ಸಿಬ್ಬಂದಿ ನೇಮಿಸಲು ಅವಕಾಶ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ನೀಡಲಾದ ಪ್ರಸ್ತಾವನೆಯಲ್ಲಿ ಕೋರಲಾಗಿತ್ತು. ಆದರೆ ಸದ್ಯಕ್ಕೆ ಕೇವಲ 50 ಸಿಬ್ಬಂದಿ ನೇಮಕಕ್ಕೆ ಮಾತ್ರವೇ ಅನುಮತಿ ಸಿಕ್ಕಿದೆ.

ಬೆಂಗಳೂರು ಪಾಟ್ನಾ ಭೂಪಾಲ್ ಕಚೇರಿಗಳ ನೇತೃತ್ವವನ್ನು ಡಿಐಜಿ ವಹಿಸಲಿದ್ದಾರೆ. ಉಳಿದ ಕಚೇರಿಗಳ ನೇತೃತ್ವವನ್ನು ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.