Friday, February 13, 2026
Friday, February 13, 2026
Home Blog Page 1779

ನೀರಿಗಾಗಿ ನಡಿಗೆ ಬಿಲ್ ಕುಲ್ ನಿಲ್ಲಲ್ಲ- ಡಿಕೆಶಿ

0

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಕಠಿಣ ನಿರ್ಬಂಧ ಹೊರಡಿಸಿದೆ. ಇದರ ನಡುವೆಯೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ನಿಗದಿಯಂತೆ ನಡೆಸುವುದಾಗಿ ತಿಳಿಸಿದೆ.

ಕಾಂಗ್ರೆಸ್ ನ ಈ ನಿರ್ಧಾರಕ್ಕೆ ಸರ್ಕಾರವು ಪ್ರತಿಯುತ್ತರ ನೀಡಿದ್ದು, ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಜನವರಿ 9ರಿಂದ 19 ರ ವರೆಗೆ ಪಾದಯಾತ್ರೆ ನಿಗದಿಯಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಂಟಿ ಹೇಳಿಕೆ ನೀಡಿದ್ದು, ಇದು ನೀರಿನ ಹಕ್ಕಿಗಾಗಿ ಹೋರಾಟ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ.

‘ಕಾನೂನು ಚೌಕಟ್ಟಿನಲ್ಲಿಯೇ ನಿಯಮ ಪಾಲಿಸಿ ನಡಿಗೆ ಮಾಡಲಾಗುವುದು. ಸಾರ್ವಜನಿಕರು ಈ ನಡಿಗೆಯಲ್ಲಿ ಭಾಗಿಯಾಗಲು ಸರ್ಕಾರ ಅವಕಾಶ ನೀಡದಿದ್ದರೆ ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ’ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಜನಹಿತಕ್ಕಾಗಿ ಪಕ್ಷತೀತವಾಗಿ ನೀರಿಗಾಗಿ ನಡಿಗೆ ಆಯೋಜಿಸಲಾಗಿದೆ ಆದರೆ ರಾಜ್ಯ ಸರ್ಕಾರ ಮತ್ತು ಕೆಲ ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಅವರ ಅಸೂಯೆಗೆ ಮದ್ದಿಲ್ಲ. ನೀರಿಗಾಗಿ ನಡಿಗೆಗೆ ಜನ ತೋರುತ್ತಿರುವ ಉತ್ಸಾಹ ನೋಡಿ ಇದನ್ನು ತಡೆಯಲು ದೊಡ್ಡ ಪಿತೂರಿ ನಡೆಸಿದ್ದಾರೆ. ಕೋವಿ ನೆಪದಲ್ಲಿ ನಿರ್ಬಂಧ ಹೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆ

0

ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಅನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಾಧ್ಯತೆಯಿದೆ.

ಬುಧವಾರ ರಾಜ್ಯದಲ್ಲಿ 4,246 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಬರೋಬರಿ 3,605 ಕೋವಿಡ್ ಸೋಂಕು ಪತ್ತೆಯಾಗಿದೆ. ಇಬ್ಬರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ಹಾಗೂ ರಾಜ್ಯಕ್ಕೆ ಸಂಬಂಧಿಸಿದಂತೆ ಮೆಟ್ರೋ ರೈಲು ಮತ್ತು ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಸಂಚಾರದ ಬಗ್ಗೆ ರಾಜ್ಯ ಸರ್ಕಾರ ಮತ್ತಷ್ಟು ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

*ಬೆಂಗಳೂರಿನಲ್ಲಿ ಮೆಟ್ರೋ ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 8 ರಿಂದ ರಾತ್ರಿ 9ರವರೆಗೆ ಪ್ರತಿ 20 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ.

  • ವಾರಂತ್ಯ ಕರ್ಫ್ಯೂ ವೇಳೆ ಕೋವಿಡ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ನೀಡಲಾಗಿದೆ.
  • ಹಲವು ದೇವಾಲಯಗಳಲ್ಲಿ ಸೇವೆ ಮತ್ತು ದರ್ಶನದ ಬಂದ್ ಮಾಡಲಾಗಿದೆ.
  • ವಿಧಾನಸೌಧ, ವಿಕಾಸಸೌಧ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.
  • ಶುಕ್ರವಾರ ರಾತ್ರಿ 10ರಿಂದ ಸೋಮವಾರ 5.00 ಗಂಟೆಯವರೆಗೆ ಪ್ರಯಾಣಿಕರ ದಟ್ಟಣೆ ಆಧಾರದ ಮೇಲೆ ಕಾರ್ಯಾಚರಣೆಗೊಳಿಸಲು ಕೆ ಎಸ್ ಆರ್ ಟಿ ಸಿ ತೀರ್ಮಾನಿಸಿದೆ.

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಟು ಭಾಗಶಃ ಸ್ತಬ್ದ ವಾಗಲಿದೆ.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು “ರಾಜ್ಯದಲ್ಲಿ ಮುಂದಿನ 4 ರಿಂದ 6 ವಾರಗಳ ಕಾಲ ಜನರು ಬಹಳ ಎಚ್ಚರಿಕೆಯಿಂದ ಇರಬೇಕು” ಎಂದು ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಖಾಸಗಿ ಆಸ್ಪತ್ರೆಗಳು ಶೇ.30ರಷ್ಟು ಹಾಸಿಗೆಗಳನ್ನು ಮೀಸಲಿಡಲು ಆದೇಶಿಸಿದೆ.

ರಾಜ್ಯದ ಖಾಸಗಿ ಆಸ್ಪತ್ರೆ ವೈದ್ಯಕೀಯ ಕಾಲೇಜುಗಳಲ್ಲಿನ ಐಸಿಯು ವಿತ್ ವೆಂಟಿಲೇಟರ್, ಹೆಚ್ ಡಿ ಯು ಮತ್ತು ಸಾಮಾನ್ಯ ಹಾಸಿಗೆಗಳ ಪ್ರತಿ ವಿಭಾಗದಲ್ಲಿ ತಕ್ಷಣಕ್ಕೆ ಶೇ.30ರಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿಡಬೇಕೆಂದು ರಾಜ್ಯ ಸರ್ಕಾರ ತಿಳಿಸಿದೆ.

ಜನವರಿ ಏಳರಿಂದ ಎಲ್ಲಾ ವಿಭಾಗದಲ್ಲಿ ಶೇ.50 ಹಾಗೂ ಜನವರಿ 10ರಿಂದ ಎಲ್ಲಾ ವಿಭಾಗದಲ್ಲಿ ಶೇ.75 ರಷ್ಟು ಹಾಸಿಗೆಗಳನ್ನು ಮೀಸಲಿಡಲು ಸರ್ಕಾರ ಸೂಚಿಸಿದೆ.

ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಲ್ಲಿ ಕೈಗಾರಿಕೆ ಕಾರ್ಖಾನೆ ಐಟಿ ಕಂಪನಿ ಉದ್ಯೋಗಿಗಳಿಗೆ 2 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆಯೇ, ಕೆಲಸದ ಸ್ಥಳದಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿವುದೆಯೇ ಎನ್ನುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸ್ಥಳೀಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆ ಉಡುಪಿಯಲ್ಲಿ ಜನವರಿ 18ರಂದು ನಡೆಯಲಿರುವ ಶ್ರೀಕೃಷ್ಣ ಮಠದ ಪರ್ಯಾಯೋತ್ಸವಕ್ಕೂ ಕೋವಿಡ್ ಅಡ್ಡಿಯಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಆಚರಿಸಲಾಗುವ ಉತ್ಸವ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಲಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭದ್ರತಾ ವೈಫಲ್ಯ ಆಗಿಲ್ಲ- ಸಿಎಂ.ಪಂಜಾಬ್

0

ವಿಧಾನ ಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ಪಂಜಾಬ್ ನಲ್ಲಿ ಮೋದಿ ಅವರಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ರಾಜ್ಯ ಸರಕಾರ ತೋರಿದ ನಿರ್ಲಕ್ಷದ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ.
ನರೇಂದ್ರ ಮೋದಿಯವರು ಜಾಥಾದಲ್ಲಿ ಭಾಗವಹಿಸಲು ಫಿರೋಜ್ ಪುರಕ್ಕೆ ತೆರಳುವಾಗ ಫ್ಲೈ ಓವರ್ ಒಂದರ ಮೇಲೆ ನೂರಾರು ಪ್ರತಿಭಟನಾಕಾರರು ರಸ್ತೆ ತಡೆದ ಕಾರಣ ಪ್ರಧಾನಿಯವರು 20 ನಿಮಿಷ ಕಾದು, ಹಿಂತಿರುಗಿದ್ದಾರೆ.
ನರೇಂದ್ರ ಮೋದಿ ಭೇಟಿ ವೇಳೆ ಭದ್ರತಾ ವೈಫಲ್ಯ ಆಗಿಲ್ಲ.ಅವರು ಏಕಾಏಕಿ ರಸ್ತೆ ಮಾರ್ಗದ ಮೂಲಕ ತೆರಳಿದ್ದರಿಂದ ಗೊಂದಲ ಉಂಟಾಗಿದೆ. ಬಿಜೆಪಿ ಜಾಥಾಗೆ ಹೆಚ್ಚಿನ ಜನ ಸೇರಿದ ಕುರಿತು ಖಚಿತಪಡಿಸಿಕೊಂಡ ಮೋದಿಯವರು ವಾಪಸಾಗಿದ್ದಾರೆ ಎಂದು ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಚನ್ನಿಯವರು ತಿಳಿಸಿದ್ದಾರೆ.
ಇನ್ನು ಭದ್ರತೆ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
ಪ್ರಧಾನಿಯವರು ರಸ್ತೆ ಮಾರ್ಗದ ಮೂಲಕ ತೆರಳುವ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಅಲ್ಲದೆ, ಪೋಲಿಸ್ ಮಹಾನಿರ್ದೇಶಕರಿಂದ ಭದ್ರತೆ ಕುರಿತು ಭರವಸೆ ಸಿಕ್ಕ ಬಳಿಕವೇ ಅವರು ತೆರಳಿದರು. ಹೀಗಿದ್ದರೂ, ಮೋದಿ ಅವರು ಫ್ಲೈ ಓವರ್ ಮೇಲೆ ಸಿಲುಕಿ ಹಾಕಿಕೊಳ್ಳಬೇಕಾಯಿತು.
ಇದಕ್ಕೆ ರಾಜ್ಯ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಇದು ತನಿಖೆಯಾಗಲಿ ಎಂದಿದೆ.
ನರೇಂದ್ರ ಮೋದಿ ಅವರು ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಫಿರೋಜ್ ಪುರ ಜಾಥಾದಲ್ಲಿ ಭಾಗವಹಿಸುವವರಿದ್ದರು. ಅಲ್ಲದೆ, ಸುಮಾರು 42 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡುವುದು ಸಹ ಅವರ ಯೋಜನೆಯಾಗಿತ್ತು. ಆದರೆ, ರಾಜ್ಯದಲ್ಲಿ ಉಂಟಾದ ಗೊಂದಲ, ಭದ್ರತಾ ವೈಫಲ್ಯದಿಂದಾಗಿ ಅವರು ವಾಪಸ್ ಆಗಬೇಕಾಯಿತು. ಮೋದಿ ಭೇಟಿ, ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ರದ್ದು ಪಡಿಸಲಾಗಿದ್ದು, ಪುನಃ ಆಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಸೋಂಕು; ಪರಿಷ್ಕೃತ ಮಾರ್ಗಸೂಚಿ

0

ಕೊರೊನಾ ಸೋಂಕು ದಿಢೀರ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ನಗರಗಳಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಓಮಿಕ್ರಾನ್ ಪ್ರಸರಣ ವೇಗಕ್ಕೆ ಬ್ರೇಕ್ ಹಾಕಲು ಸಾಮೂಹಿಕ ಸಭೆ -ಸಮಾರಂಭಗಳಿಗೆ ಪೂರ್ಣ ನಿರ್ಬಂಧ ಅಗತ್ಯ. ಮಾಲ್ನುಪಿರಾವಿರ್ ಮಾತ್ರೆಯಿಂದ ಮಾಂಸಗಳು, ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.ಹಾಗಾಗಿ, ಚಿಕಿತ್ಸೆ ಮಾರ್ಗಸೂಚಿಯಲ್ಲಿ ಹೆಸರಿಸಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕರಾದ ಡಾ. ಬಲರಾಮ್ ಭಾರ್ಗವ ಅವರು ತಿಳಿಸಿದ್ದಾರೆ.
ಈ ಮುಂಚೆ ಕೊರೊನಾ ಪಾಸಿಟಿವ್ ವರದಿ ಬಂದವರು ಕಡ್ಡಾಯವಾಗಿ 10 ದಿನ ಮನೆಯಲ್ಲಿ ಐಸೋಲೇಷನ್ ಗೆ ( ಹೋಮ್ ಕ್ವಾರಂಟೈನ್) ಒಳಗಾಗಬೇಕಿತ್ತು. ಅದನ್ನು ಪರಿಷ್ಕರಿಸಿ 7 ದಿನಗಳಿಗೆ ಇಳಿಕೆ ಮಾಡಲಾಗಿದೆ. ಜೊತೆಗೆ ಸತತ 3 ದಿನದಿಂದ ಜ್ವರ ಕಾಣಿಸಿಕೊಳ್ಳದೇ ಇದ್ದಲ್ಲಿ , ಐಸೋಲೇಷನ್ ಮುಕ್ತಾಯಗೊಳಿಸಬಹುದು. ಪುನಃ ಸೋಂಕಿನ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ.ಕ್ವಾರಂಟೈನ್ ನಲ್ಲಿ ಇರುವಾಗ ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಅದನ್ನು ತಂದು, ನಿತ್ಯವೂ ಅವರಿಂದ ಚಿಕಿತ್ಸೆ ವಿಧಾನಗಳ ಕುರಿತು ಫೋನ್ ಕರೆಯ ಮೂಲಕ ಅಗತ್ಯ ಸಲಹೆ ಪಡೆಯಬೇಕು.
ಸೌಮ್ಯ ರೋಗಲಕ್ಷಣಗಳು ಮತ್ತು ಸೋಂಕಿನ ಲಕ್ಷಣ ರಹಿತರಾಗಿದ್ದು ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ದೃಢ ಪಟ್ಟವರಿಗೆ ಹೊಸ ಮಾರ್ಗಸೂಚಿ ಅನ್ವಯ ವಾಗಲಿದೆ. ವೈದ್ಯಕೀಯ ಚಿಕಿತ್ಸೆ ಕುರಿತು ಎಚ್ಚರಿಸಲಾಗಿದ್ದು, ಸೊಂಕು ದೃಢಪಟ್ಟವರು ಕೂಡಲೇ ಜನರು ಆಸ್ಪತ್ರೆಗಳಿಗೆ ಬೆಡ್ ಗಾಗಿ ದೌಡಾಯಿಸುವ ಅಗತ್ಯವಿಲ್ಲ. ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ. ಅವರ ಸೂಚನೆ ಇಲ್ಲದೆಯೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಲು ಯತ್ನಿಸಬಾರದು. ಸಿಟಿ ಸ್ಕ್ಯಾನ್, ಎದೆ ಭಾಗದ ಎಕ್ಸ್-ರೇ ಮಾಡಿಸಲು ಸೋಂಕಿತರು ಸ್ವಯಂ ಚಿಕಿತ್ಸೆ ಮಾಡಿಕೊಳ್ಳಲು ಯತ್ನಿಸಬಾರದು. ಸೌಮ್ಯ ರೋಗ ಲಕ್ಷಣಗಳಿದ್ದವರು ಸ್ಟಿರಾಯ್ಡ್ಸ್ ಪಡೆದುಕೊಳ್ಳುವ ದುಸ್ಸಾಹಸಕ್ಕೂ ಹೋಗಬಾರದು.
ಇವೆಲ್ಲವುಗಳಿಂದ ಕೊರೊನಾ ಸೋಂಕಿನ ಬಳಿಕ ಗಂಭೀರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸರಕಾರ ಎಚ್ಚರಿಕೆ ನೀಡಿದೆ.
ಮುಂಜಾಗೃತೆ ಡೋಸ್ (ಬೂಸ್ಟರ್) ಪಡೆಯುವವರಿಗೆ ಈ ಮುಂಚೆ ಪಡೆಯಲಾದ ಲಸಿಕೆಯನ್ನೇ ನೀಡಲಾಗುವುದು. ಕೊವ್ಯಾಕ್ಸಿನ್ ಪಡೆದವರಿಗೆ ಅದನ್ನೇ ಬೂಸ್ಟರ್ ಡೋಸ್ ಆಗಿ ನೀಡಲಾಗುವುದು, ಬದಲು ಮಾಡುವುದಿಲ್ಲ ಎಂದು ನೀತಿ ಆಯೋಗ ಸದಸ್ಯರಾದ ಡಾ.ವಿ.ಕೆ.ಪೌಲ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೌಲರ್ ಶಾರ್ದೂಲ್ ಗೆ : ಮೊದಲ ಇನ್ನಿಂಗ್ಸ್ ಗೌರವ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ಅಲ್ಪ ಮೊತ್ತದ ಮುನ್ನಡೆ ಸಾಧಿಸಿದೆ.
ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರೆಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತವು 202 ರನ್ ಗಳಿಸಿತ್ತು.ಟೆಸ್ಟ್ ನ ಎರಡನೇ ದಿನದಾಟದಲ್ಲಿ 202 ರನ್ ಬೆನ್ನತ್ತಿ ಆಡಿದ ದಕ್ಷಿಣ ಆಫ್ರಿಕಾ ತಂಡ 79.4 ಓವರ್ ಗಳಲ್ಲಿ 229 ರನ್ ಗಳಿಸಿತು.
ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಆತಿಥೇಯ ತಂಡವು 1 ವಿಕೆಟ್ ಕಳೆದುಕೊಂಡು 35 ರನ್ ಗಳಿಸಿತು.ಕ್ರೀಸ್ ನಲ್ಲಿದ್ದ ಕೀಗನ್ ಪೀಟರ್ಸನ್ ಮತ್ತು ನಾಯಕ ಡೀನ್ ಎಲ್ಗರ್ ತಾಳ್ಮೆಯ ಜೊತೆಯಾಟವಾಡಿದರು.2 ನೇ ವಿಕೆಟ್ ಗೆ 74 ರನ್ ಸೇರಿಸಿದರು.ಇನ್ನಿಂಗ್ಸ್ ಗೆ ಬಲ ತುಂಬುವಂತಹ ಆಟವಾಡಿದರು.
ಡೀನ್ ಎಲ್ಗರ್ 120 ಎಸೆತಗಳಲ್ಲಿ 28 ರನ್ ಹಾಗೂ ಕೀಗನ್ ಪೀಟರ್ಸನ್ 118 ಎಸೆತಗಳಲ್ಲಿ 62 ರನ್ ಗಳಿಸಿ ತಮ್ಮ ತಂಡಕ್ಕೆ ಚೈತನ್ಯ ತುಂಬಿದರು. ಇದರಿಂದಾಗಿ ಬೌಲರ್ ಶಾರ್ದೂಲ್ ಅವರ “ಸ್ವಿಂಗ್” ಚಳಕದಿಂದ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡವು 20 ಓವರ್ ಗಳಲ್ಲಿ 2 ವಿಕೆಟ್ ಗಳಿಗೆ 85 ರನ್ ಗಳಿಸಿತು.ರಾಹುಲ್(24) ಮತ್ತು ಮಯಾಂಕ್(44) ರನ್ ಗಳಿಸಿ ಬೇಗನೆ ಮರಳಿದರು.
ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಚೇತೇಶ್ವರ ಪೂಜಾರ (35) ಹಾಗೂ ಅಜಿಂಕ್ಯ ರಹಾನೆ (11) ರನ್ ಗಳಿಸಿ ಇವರು ರನ್ ಬಾರಿಸುವ ನಿರೀಕ್ಷೆಯಲ್ಲಿ ಆಟ ಮುಂದುವರೆಸಿದರು. ಈಗಾಗಲೇ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್,ಪೂಜಾರ ಮತ್ತು ಅಜಿಂಕ್ಯ ಬಗ್ಗೆ ‘ಈ ಇಬ್ಬರು ಆಟಗಾರರಿಗೂ ಉಳಿದಿರುವುದು ಎರೆಡನೇ ಇನ್ನಿಂಗ್ಸ್ ಮಾತ್ರ’ ಎಂದು ಎಚ್ಚರಿಕೆ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಉತ್ತರವೆಂಬಂತೆ ಎರಡನೇ ಕ್ರಿಕೆಟ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅಜಿಂಕ್ಯ(11) ಮತ್ತು ಪೂಜಾರ(35) ಕ್ರೀಸ್ ನಲಿದ್ದು ಆಟ ಮುಂದುವರೆಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್: ತಲೈವಾರ್ಸ್ ಗೆ ಜಯ.ಸ್ಟೀಲರ್ಸ್ – ಮುಂಬಾ ಟೈ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಮಂಗಳವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.
ಸ್ಟೀಲರ್ಸ್ ಮತ್ತು ಮುಂಬಾ ತಂಡಗಳ ನಡುವೆ ಪಂದ್ಯ ಡ್ರಾ
ಮೊದಲನೇ ಪಂದ್ಯವು:
ಹರಿಯಾಣ ಸ್ಟೀಲರ್ಸ್(24) ಮತ್ತು ಯು. ಮುಂಬಾ(24) ತಂಡಗಳ ನಡುವೆ ಪಂದ್ಯ ನಡೆಯಿತು. ಎರಡು ತಂಡಗಳ ಸಮಬಲ ಹೋರಾಟದಿಂದಾಗಿ ಪಂದ್ಯವನ್ನು ಟೈ ಮಾಡಿಕೊಂಡಿವೆ.
ಮೊದಲಾರ್ಧದಲ್ಲಿ ಹರಿಯಾಣ ತಂಡವು 12-10 ರಿಂದ ಮುಣ್ಣಡೆಯಲ್ಲಿತ್ತು.ನಂತರ ಪುಟಿದೆದ್ದ ಮುಂಬಾ ತಂಡದ ರೋಹಿತ್ ಗುಲಿಯಾ 8 ಅಂಕ ಇವರ ಉತ್ತಮ ರೇಡಿಂಗ್ ನಿಂದ ಮುನ್ನಡೆ ಸಾಧಿಸಿತು.ಆದರೆ,ಕೊನೆಯಲ್ಲಿ ಸಮಬಲ ಸಾಧಿಸಿದವು.

ಯೋಧಾ ವಿರುದ್ಧ ತಲೈವಾರ್ಸ್ ಗೆ ಜಯ

ಎರಡನೇ ಪಂದ್ಯವು:
ಯು.ಪಿ ಯೋಧಾ(33) ಮತ್ತು ತಮಿಳ್ ತಲೈವಾರ್ಸ್(39) ತಂಡಗಳ ನಡುವೆ ಪಂದ್ಯ ನಡೆಯಿತು.ಯೋಧಾ ವಿರುದ್ಧ ತಲೈವಾರ್ಸ್ ಭರ್ಜರಿ ಜಯ ಸಾಧಿಸಿದೆ.
ಮೊದಲಾರ್ಧ ವಿರಾಮದ ವೇಳೆಗೆ ತಲೈವಾರ್ಸ್ 21-10 ರಿಂದ ಮುನ್ನಡೆ ಸಾಧಿಸಿತ್ತು.ಮಂಜೀತ್ ಮತ್ತು ಅಜಿಂಕ್ಯ ಕ್ರಮವಾಗಿ 7 ಹಾಗೂ 6 ಅಂಕಗಳನ್ನು ಗಳಿಸಿದರು.ಇದರಿಂದ ಯೋಧಾ ದ ವಿರುದ್ಧ 6 ಅಂಕಗಳ ಅಂತರದಿಂದ ರೋಚಕ ಜಯ ಸಾಧಿಸಿತು.

ಇಂದು ನಡೆಯಲಿರುವ ಪಂದ್ಯಗಳು:
೧. ಪುನೇರಿ ಪಲ್ಟನ್ ಮತ್ತು ಗುಜರಾತ್ ಜಯಂಟ್ಸ್
ಸಮಯ:7.30
೨. ದಬಾಂಗ್ ಡೆಲ್ಲಿ ಮತ್ತು ತೆಲುಗು ಟೈಟನ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಮಿಶೂರ್ ಕಿಟ್ ಸದ್ಯದಲ್ಲೇ ಮಾರುಕಟ್ಟೆಗೆ

0

ಮುಂಬೈನಲ್ಲಿ ತೀವ್ರಗತಿಯಲ್ಲಿ ಪ್ರಸ್ತುತ ನಡೆಸುತ್ತಿರುವ ಓಮಿಕ್ರಾನ್ ರೂಪಾಂತರಿಯಿಂದ ಸೋಂಕಿಗೆ ಒಳಗಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಜನರಿಗೆ ನೆರವಾಗುವ ಪರೀಕ್ಷೆ ಕಿಟ್ ಓಮಿಶೂರ್ ಅನ್ನು ಟಾಟಾ ಮೆಡಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ಸ್ ಅಭಿವೃದ್ಧಿಪಡಿಸಿದೆ. ಜಿನೋಮ್ ಸಿಕ್ವೆನ್ಸಿಂಗ್ ಅಗತ್ಯವಿಲ್ಲದೆಯೇ ಓಮಿಕ್ರಾನ್ ಸೋಂಕಿಗೆ ತುತ್ತಾಗಿರುವುದನ್ನು ಈ ಕಿಟ್ ಸುಲಭವಾಗಿ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.

ಒಟ್ಟು 85 ನಿಮಿಷಗಳ ಅವಧಿಯಲ್ಲಿ ಕೊರೋನಾ ಸೋಂಕಿನ ಬಗ್ಗೆ ನಿಖರ ವರದಿಯನ್ನು ಕಿಟ್ ನೀಡಲಿದೆ.
ಪ್ರಯೋಗಾಲಯಗಳಲ್ಲಿ ಬಳಕೆಯಲ್ಲಿರುವ ಆರ್ ಟಿ ಪಿಸಿಆರ್ ಪರೀಕ್ಷೆಯ ಸಾಧನಗಳ ಗುಣಮಟ್ಟಕ್ಕೆ ತಕ್ಕಂತೆಯೇ ಕಿಟ್ ಕೂಡ ಪರೀಕ್ಷೆಯ ವರದಿ ನೀಡಲಿದೆ.

ಓಮಿಕ್ರಾನ್ ಅಲ್ಲದೆಯೇ ಇತರ ರೂಪಾಂತರಿಗಳು ಹಾಗೂ ಕೊರೋನಾದ ತಳಿಗಳ ಸೋಂಕಿನ ಕುರಿತು ಕೂಡ ಕಿಟ್ ಖಾತರಿಪಡಿಸಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವತಿಯಿಂದ ಕಿಟ್ ಗೆ ಡಿಸೆಂಬರ್ 30ರಂದು ಮಾನ್ಯತೆ ನೀಡಲಾಗಿದೆ ಎಂದು ಸಂಶೋಧನಾ ವಿಭಾಗದ ಮುಖ್ಯಸ್ಥ ರವಿ ವಸಂತಪುರಂ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಶೀಘ್ರವೇ ಕಿಟ್ ಲಭ್ಯವಾಗುವಂತೆ ಮಾಡಲು ಅಗತ್ಯವಾದ ಪರವಾನಗಿಯನ್ನು ಪಡೆಯಲು ಕಂಪನಿ ಸಿದ್ಧತೆ ನಡೆಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿರ್ಬಂಧ ಕಾಂಗ್ರೆಸ್ ಪಾದಯಾತ್ರೆ ಅಚಲ

0

ಕೋರೋನಾ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧ ಜಾರಿಗೊಳಿಸಿದ್ದರೂ, ನಿಗದಿಯಂತೆ ಮೇಕೆದಾಟು ಪಾದಯಾತ್ರೆ ನಡೆಸಲು ಕಾಂಗ್ರೆಸ್ ಹಿರಿಯ ಮುಖಂಡರ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರಿ ನಿರ್ಬಂಧ ಹೇರಿದರೆ ಪಾದಯಾತ್ರೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಬಾರದು ಸಂಘರ್ಷಕ್ಕೆ ಇಲ್ಲದೆ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.

ಹಾಗೆಯೇ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಪಕ್ಷದ ಪ್ರಮುಖರಾದ ವೀರಪ್ಪ ಮೊಯ್ಲಿ, ಆರ್. ವಿ. ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗ ರೆಡ್ಡಿ, ಸಲೀಂ ಅಹಮದ್, ಈಶ್ವರ ಖಂಡ್ರೆ, ಆರ್. ಧ್ರುವನಾರಾಯಣ್ ಇನ್ನು ಮುಂತಾದವರು ಭಾಗಿಯಾಗಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತದಿಂದ ರೈಫಲ್ ಮತ್ತು ಪಿಸ್ತೂಲು ಖರೀದಿ

0

ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಗೆ ಶೀಘ್ರದಲ್ಲೇ ಅಮೇರಿಕಾದ ಸಿಗ್ ಸೌರ್ ಅಸಾಲ್ಟ್ ರೈಫಲ್ ಹಾಗೂ ಪಿಸ್ತೂಲುಗಳು ಲಭ್ಯವಾಗಲಿದೆ. ಉಗ್ರನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಭಾರಿ ಪ್ರಮಾಣದ ಬಲ ದೊರೆಯಲಿದೆ.

ಅಮೆರಿಕದಿಂದ ಅತ್ಯಾಧುನಿಕ 500 ಸಿಗ್ ಸೌರ್- 716 ರೈಫಲ್ ಮತ್ತು 100 ಸಿಗ್ ಸೌರ್ ಎಂಪಿಎಕ್ಸ್ 9 ಎಂಎಂ ಪಿಸ್ತೂಲುಗಳನ್ನು ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಶೀಘ್ರದಲ್ಲೇ ಇವು ಪೋಲಿಸರಿಗೆ ಲಭ್ಯವಾಗಲಿವೆ. ದೇಶದಲ್ಲೇ ಪ್ರಥಮ ಬಾರಿಗೆ ಪೊಲೀಸರಿಗೆ ಅತ್ಯಾಧುನಿಕ ಹಾಗೂ ಪಿಸ್ತೂಲುಗಳು ಸಿಕ್ಕಂತಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಶೇಷ ಕಾರ್ಯಾಚರಣೆ ತಂಡ ಹಾಗೂ ಗಣ್ಯರ ರಕ್ಷಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಆಧುನಿಕ ಶಸ್ತ್ರಾಸ್ತ್ರ ನೀಡಲಾಗುತ್ತದೆ. ಸರ್ಕಾರಿ ಇ- ಮಾರುಕಟ್ಟೆ ಮೂಲಕ ನಡೆಸಿದ ಜಾಗತಿಕ ಟೆಂಡರ್ ನಲ್ಲಿ ಅಮೆರಿಕವು ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸುವ ಪಡೆದುಕೊಂಡಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಭಾರತೀಯ ಸೇನೆ ಸಹ ಅಮೆರಿಕದಿಂದ ಖರೀದಿ ಅಸಾಲ್ಟ್ ರೈಫಲ್ ಮತ್ತು ಬಂದೂಕುಗಳ ಖರೀದಿಗೆ ಮುಂದಾಗಿದೆ. 2019 ರಲ್ಲಿ ಸಿಗ್
ಸೌರ್ ಮಾದರಿಯ 72,400 ರೈಫಲ್ ಗಳ ಖರೀದಿಗೆ 100 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಂವಿಧಾನದಿಂದ ಎಲ್ಲರ ರಕ್ಷಣೆ-ಸಿದ್ಧರಾಮಯ್ಯ

0

ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಡಾಂತರ ಎದುರಾಗಿದೆ. ಇವುಗಳ ರಕ್ಷಣೆಗೆ ಎಲ್ಲಾ ಪ್ರಜಾ ವಂತರು ದನಿ ಎತ್ತಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ.

ಬೆಂಗಳೂರು ನಗರದ ಗಾಂಧಿಭವನದಲ್ಲಿ ‘ವಿಸ್ತಾರ ಟ್ರಸ್ಟ್ ಮತ್ತು ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ. ಮುಜಾಫರ್ ಅಸ್ಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

“ಸಂವಿಧಾನ ಉಳಿದರೆ ಎಲ್ಲರೂ ಉಳಿಯುತ್ತೇವೆ. ತಪ್ಪಿದರೆ, ಸಮಾಜದಲ್ಲಿ ಮತ್ತೆ ಅಶಾಂತಿ ಎದುರಾಗಲಿದೆ” ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಸತ್ಯವನ್ನು ಹೇಳುವವರಿಗೆ ದೇಶದ್ರೋಹಿ, ಉಗ್ರವಾದಿ ಪಟ್ಟ ಕಟ್ಟುವಂತಹ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಮನುಷ್ಯನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದೆ ಹೋದರೆ, ಸಮಾಜ ಮತ್ತು ಜ್ಞಾನ ವಿಕಾಸ ಆಗುವುದಾದರೂ ಹೇಗೆ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಹೈಕೋರ್ಟ್ ನ ನಿವೃತ್ತ ನ್ಯಾ. ಎಚ್. ಎನ್. ನಾಗಮೋಹನದಾಸ್ ಅವರು ಮಾತನಾಡಿ, ‘ ದೇಶದಲ್ಲಿ 4,635 ಜಾತಿಗಳಿವೆ. ಜಾತಿಯಿಂದ ಅನುಕೂಲ ಇರುವಂತವರು ಧರ್ಮದೊಂದಿಗೆ ಜಾತಿ ಬೆರೆಸಿದ್ದಾರೆ. ದೇಶದಲ್ಲಿ ಜಾತಿ ವಿನಾಶ ವಾಗದೆ ಇದ್ದರೂ , ಸಂವಿಧಾನದ ಮೂಲಕ ದೊಡ್ಡ ಪೆಟ್ಟು ನೀಡಲಾಗಿದೆ. ಭಾರತ ದೇಶವನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನಮ್ಮ ಸಂವಿಧಾನ ಸಮಗ್ರವಾಗಿ ಅರ್ಥವಾಗುತ್ತದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ತಪ್ಪಿದರೆ, ಕೋಮುವಾದಿ ಮತ್ತು ಜಾತಿವಾದಿಗಳ ಸಂಖ್ಯೆ ಹೆಚ್ಚಾಗಿ ನಾವೆಲ್ಲರೂ ಮತ್ತೆ ಗುಲಾಮಗಿರಿಗೆ ಸಿಲುಕಿದ್ದೇವೆ ಎಂದು ನಾಗಮೋಹನ್ ದಾಸ್ ಅವರು ಎಚ್ಚರಿಕೆ ನೀಡಿದ್ದಾರೆ.

ಕೃತಿಯ ಕರ್ತೃ ಪ್ರೊ. ಮುಜಾಫರ್ ಅಸ್ಸಾದಿ ಅವರು ಮಾತನಾಡಿ, ‘ಕರ್ನಾಟಕದಲ್ಲಿ ನಾನಾ ಧರ್ಮ ಮತ್ತು ಪದಗಳ ಸಮನ್ವಯತೆಯಿಂದಾಗಿ ಕೋಮುವಾದ ಬೆಳೆದಿಲ್ಲ. ಆದರೆ, ಎಲ್ಲೆಡೆ ಜಾತಿ ರಾಜಕಾರಣ ಎಂಬುವುದು ರಾರಾಜಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಬೇಕೆಂಬ ಮಹಾತ್ಮ ಗಾಂಧಿ ಅವರ ಆಶಯದಂತೆ, ಅತ್ಯಂತ ಕೆಳ ಜಾತಿಗಳನ್ನು ಗುರುತಿಸುವ ಸಲುವಾಗಿ ಈ ಕೃತಿಯನ್ನು ರಚಿಸಿದ್ದೇನೆ ಎಂದು ಮುಜಾಫರ್ ಅಸ್ಸಾದಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.