ನಟ ದಿಗಂತ್ ಸ್ಟಂಟ್ ಮಾಡುವ ವೇಳೆ ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈಗ
ಗುಣಮುಖರಾಗುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಪತ್ನಿ ಹಾಗೂ ನಟಿ ಐಂದ್ರಿತಾ ರೇ ತಿಳಿಸಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ದಿಗಂತ್ ರಜೆ ಕಳೆಯಲು ಗೋವಾಗೆ ಹೋಗಿದ್ದೆವು.
ಅಲ್ಲಿ ಪಲ್ಟಿ ಹೊಡೆಯುವಾಗ ಗಾಯಗೊಂಡರು ಎಂದರು.
ದಿಗಂತ್ ಗೆ ಪೆಟ್ಟು ಬಿದ್ದಾಗ ಕೂಡಲೇ ಗೋವಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದೆವು. ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಏರ್ ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆ ತರಲಾಯಿತು ಎಂದು ಅವರು ತಿಳಿಸಿದರು.