Saturday, February 14, 2026
Saturday, February 14, 2026
Home Blog Page 1758

ಎರಡು ಮಹಾನಗರಗಳಲ್ಲಿ ಕೋವಿಡ್ ತಗ್ಗಿದೆ

0

ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಕೋವಿಡ್ ಹರಡುವಿಕೆ ಪ್ರಮಾಣವು ತಗ್ಗಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮಿಕ್ರಾನ್ ಸೋಂಕು ಎರಡೂ ಮಹಾನಗರಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎನ್ನುವುದನ್ನು ಸೂಚನೆಯಿದು ಆಗಿರಬಹುದು. ಅದಲ್ಲದೆ, ಎರಡೂ ನಗರಗಳಲ್ಲಿ ಕೋವಿಡ್ ದೃಢ ಪಡುವಿಕೆ ದರ ಸ್ಥಿರವಾಗಿದೆ. ಇದು ಕೋವಿಡ್ ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವಕ್ಕೆ ಕಾರಣವಾಗಿದೆ.
ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಸೋಂಕು ಧೃಡಪಡುವಿಕೆ ಪ್ರಮಾಣವೂ ಇಳಿಕೆಯಾಗಿದೆ. ಅಂದರೆ ಸಾಂಕ್ರಾಮಿಕದ ಹೊಸ ಅಲೆಯ ಗರಿಷ್ಠ ಮಟ್ಟ ತಲುಪಿದ್ದೇವೆ ಎನ್ನುವುದರ ಸೂಚನೆಯೂ ಆಗಿರಬಹುದು. ಮುಂದಿನ ವಾರಗಳಲ್ಲಿ ನಿಜವಾದ ಇಳಿಕೆ ಕಾಣಿಸಿಕೊಳ್ಳಬಹುದು ಎಂದು ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಅಂಡ್ ಇಂಟಗ್ರೇಟಿವ್ ಬಯಾಲಜಿಯ ನಿರ್ದೇಶಕ ಅನುರಾಗ್ ಅಗರ್ ವಾಲ್ ತಿಳಿಸಿದ್ದಾರೆ.
ದೆಹಲಿ ಮತ್ತು ಮುಂಬೈನಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠಮಟ್ಟದಲ್ಲಿ ಇರುವುದು, ಮೂರನೇ ಅಲೆಯ ಅಂತ್ಯವನ್ನು ಸೂಚಿಸುತ್ತಿಲ್ಲ. ಏಕೆಂದರೆ ದೇಶದ 265 ಜಿಲ್ಲೆಗಳಲ್ಲಿ ಕೋವಿಡ್ ದೃಢಪಡುವ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.
ದೇಶದ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗದೇ ಇದ್ದರೆ, ದೇಶದಲ್ಲೆಡೆ ಕೋವಿಡ್ ನ ಮೂರನೇ ಅಲೆ ಗರಿಷ್ಟ ಮಟ್ಟ ಮುಟ್ಟಿದೆ ಎನ್ನಲಾಗದು ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕೆ. ಶ್ರೀನಾಥ್ ರೆಡ್ಡಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜೊಕೋವಿಕ್ ಗೆದ್ದು ಸೋತರು

0

ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡರು.
ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ ಅವರ ವೀಸಾ ರದ್ದುಗೊಳಿಸಿದ ಆಸ್ಟ್ರೇಲಿಯಾ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ನೊವಾಕ್ ಸೋಲನ್ನು ಅನುಭವಿಸಿದ್ದಾರೆ.
ಭಾನುವಾರ ಸಂಜೆ ಸರ್ಕಾರದ ಪರ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಜೊಕೊವಿಚ್ ಆಸ್ಟ್ರೇಲಿಯಾದಿಂದ ದುಬೈಗೆ ತೆರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಒಂಬತ್ತು ಬಾರಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿರುವ ದಾಖಲೆ ಅವರದ್ದಾಗಿದೆ. ಇವರು
ಒಟ್ಟು 20ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಆಟಗಾರನಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನವೋದ್ಯಮಕ್ಕೆ ಮೂಲನಿಧಿ: ರಾಜ್ಯದಲ್ಲಿ ಮಾತ್ರ ನೀಡಿಕೆ-ಅಶ್ವತ್ಥನಾರಾಯಣ

0

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೆಚ್ಚುವರಿಯಾಗಿ 75 ನವೋದ್ಯಮಗಳು ಸೇರಿದಂತೆ ಪ್ರಸಕ್ತ ವರ್ಷ ರಾಜ್ಯದಲ್ಲಿ ಒಟ್ಟು 200 ನವೋದ್ಯಮಗಳಿಗೆ ಗರಿಷ್ಠ ತಲಾ ರೂ.50 ಲಕ್ಷದವರೆಗೆ ಮೂಲನಿಧಿ (ಸೀಡ್ ಫಂಡ್) ನೀಡಲಾಗುವುದು ಎಂದು ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಪ್ರಥಮ ವಾರ್ಷಿಕ ನವೋದ್ಯಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈವರೆಗೆ ಸುಮಾರು 500 ನವೋದ್ಯಮಗಳಿಗೆ ಅನುದಾನ ನೀಡಲಾಗಿದೆ. ಮೂಲನಿಧಿ ಕೊಡುವ ಉಪಕ್ರಮ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉದ್ದಿಮೆಗಳ ಸ್ಥಾಪನೆಗಾಗಿ ರಾಜ್ಯಕ್ಕೆ ರೂ.1.60 ಲಕ್ಷ-ಕೋಟಿ ವಿದೇಶಿ ಬಂಡವಾಳ ಹರಿದು ಬಂದಿದೆ. ದೇಶದ ಒಟ್ಟು ಹೂಡಿಕೆಯಲ್ಲಿ ಶೇ 50ಕ್ಕಿಂತ ಹೆಚ್ಚು ಕರ್ನಾಟಕದಲ್ಲೇ ಆಗಿದೆ ಎಂದರು.
ದೇಶ ವಿಶ್ವ ಗುರುವಾಗಿ ಹಾಗೂ ಸೂಪರ್ ಪವರ್ ಆಗಿ ಹೊರಬರುವಲ್ಲಿ ನವೋದ್ಯಮಗಳ ಪಾತ್ರ ನಿರ್ಣಾಯಕ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಇದನ್ನು ಗಮನದಲ್ಲಿರಿಸಿ ಹಾರ್ಡ್ ವೇರ್ ವಲಯವನ್ನೂ ದಕ್ಷವಾಗಿ ಬೆಳೆಸಲಾಗುವುದು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ ಟ್ರಾನ್ಸ್ಲೇಷನ್ ಪಾರ್ಕ್ ಈ ದಿಸೆಯಲ್ಲಿ ಸರ್ಕಾರದ ಬದ್ಧತೆಗೆ ನಿದರ್ಶನ ಎಂದರು.
ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ರಾಜ್ಯದಲ್ಲಿ ಉದ್ಯಮಶೀಲ ವ್ಯಕ್ತಿಗಳಲ್ಲಿರುವ ಹೊಸ ಆಲೋಚನೆಗಳನ್ನು ತ್ವರಿತಗತಿಯಲ್ಲಿ ಗುರುತಿಸಿ ನೆರವು ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ನವೋದ್ಯಮಗಳಿಗೆ ಪ್ರಶಸ್ತವಾದ ಹಲವು ನೀತಿಗಳಿವೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಮುಂದಿನ ಐದು ವರ್ಷಗಳ ಬೆಳವಣಿಗೆಗೆ ವೇದಿಕೆ ಸಿದ್ಧಪಡಿಸಲಾಗಿದೆ ಎಂದು ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲೇ ಅಧಿಕ ನವೋದ್ಯಮಗಳ ಸ್ಥಾಪನೆ

0

ದೇಶದ 54, 000 ಸ್ಟಾರ್ಟಅಪ್ ಗಳಲ್ಲಿ 13,000 ಸ್ಟಾರ್ಟ್ಅಪ್ ಗಳು ನಮ್ಮ ರಾಜ್ಯದಲ್ಲೇ ಆರಂಭವಾಗಿರುವುದು ಹೆಮ್ಮೆಯ ಸಂಗತಿ.
ದೇಶದ ಆರ್ಥಿಕ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ರಾಜ್ಯವು ಬಹುಮುಖ್ಯ ಭೂಮಿಕೆ ವಹಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಹೆಚ್ಚು ಉದ್ಯೋಗ ಸೃಷ್ಟಿಸುವಂತಹ ಕ್ಷೇತ್ರಗಳಲ್ಲಿ ಸ್ಟಾರ್ಟ್ಅಪ್ ಗಳು ಬರಬೇಕೆನ್ನುವ ಚಿಂತನೆಯನ್ನು ಸರ್ಕಾರ ಹೊಂದಿದೆ. ಸಾಮಾಜಿಕ ಜವಾಬ್ದಾರಿಯಿಂದ ಶಿಕ್ಷಣ, ಆರೋಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ ಸ್ಟಾರ್ಟಅಪ್ ಗಳು ಅಧಿಕವಾಗಿ ಆರಂಭಗೊಳ್ಳಬೇಕು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ರಾಷ್ಟ್ರೀಯ ಸ್ಟಾರ್ಟಅಪ್ ದಿನಾಚರಣೆಯ ಅಂಗವಾಗಿ ಆನ್ಲೈನ್ ಮೂಲಕ ಸಂದೇಶ ನೀಡಿದ ಮುಖ್ಯಮಂತ್ರಿ, ” ಸ್ಟಾರ್ಟಅಪ್ ಗಳ ಸ್ಥಾಪನೆಗೆ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಮೂಲಕ ಮಾರ್ಗದರ್ಶನ, ವೈಜ್ಞಾನಿಕ ಬೆಂಬಲ ನೀಡುವ ಕೆಲಸವನ್ನು ಮಾಡುತ್ತಿದೆ. ನವ ಭಾರತಕ್ಕಾಗಿ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ರಾಜ್ಯದಲ್ಲಿ ಅತೀ ಹೆಚ್ಚು ಸ್ಟಾರ್ಟಅಪ್ ಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಪ್ರಧಾನ ಮಂತ್ರಿಗಳೇ ಪ್ರೇರಣೆಯಾಗಿದ್ದಾರೆ. ಸ್ಟಾರ್ಟಅಪ್ ಗಳಲ್ಲಿ ತೊಡಗಿರುವ ರಾಜ್ಯದ ಎಲ್ಲಾ ಯುವಕರ ಪರವಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನವೋದ್ಯಮ ಗಳಿಗೆ, ಉದ್ಯಮಶೀಲತೆಗೆ, ವೈಜ್ಞಾನಿಕ ಚಿಂತನೆಗೆ ಸರ್ಕಾರ ಪೂರ್ಣ ಪ್ರಮಾಣದ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಉತ್ತಮ ತಂತ್ರಾಂಶ, ತಂತ್ರಜ್ಞಾನ ಮತ್ತು ವೈಜ್ಞಾನಿಕತೆಯಿಂದ ಪ್ರಧಾನಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕ ಮಹತ್ವದ ಪಾತ್ರವಹಿಸಲಿದೆ. ನವಭಾರತ, ನವ ಆರ್ಥಿಕತೆಯ ಭಾರತದಲ್ಲಿ ನವಕರ್ನಾಟಕದ ಸ್ಟಾರ್ಟಅಪ್ ಗಳ ಮೂಲಕ ಮಹತ್ತರ ಕೊಡುಗೆ ನೀಡಲಿದೆ ಎಂದರು.

ಎಸ್ಸಿ ಎಸ್ಟಿ ನವೋದ್ಯಮಿಗಳಿಗೆ ಎಲಿವೇಟ್ ಉನ್ನತಿ ಕಾರ್ಯಕ್ರಮಗಳ ಮೂಲಕ ಆರ್ಥಿಕ ನೆರವು ಸೇರಿದಂತೆ ಅಮೃತ ನವೋದ್ಯಮ ಯೋಜನೆಯಡಿ ಒಬಿಸಿ ಮತ್ತು ಅಲ್ಪಸಂಖ್ಯಾತರ 75 ಸ್ಟಾರ್ಟಅಪ್ ಗಳಿಗೆ ಮತ್ತು ಮಹಿಳಾ ನವೋದ್ಯಮಿ ಗಳಿಗೆ ಉತ್ತೇಜಿಸಲು ಎಲಿವೇಟ್ 25 ಸ್ಟಾರ್ಟಅಪ್ ಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ 482 ಸ್ಟಾರ್ಟಅಪ್ ಗಳಿಗೆ 120 ಕೋಟಿ ರೂಪಾಯಿ ಆರ್ಥಿಕ ನಿರ್ವಹಿಸಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗೋವಾ ಮತದಾರರಿಗೆ ಭಾರೀ ಬಲೆ ಬೀಸಿರುವ ಕೇಜ್ರಿವಾಲ್

0

ಚುನಾವಣೆ ಬಂತೆಂದರೆ ಅದು ಭರವಸೆಗಳ ಕಾಲ.
ಜನತೆಯ ಮತ ಪಡೆಯಲು ಆಕರ್ಷಕ
ಯೋಜನೆಗಳನ್ನ ಮತದಾರರ ಮುಂದಿಡಲಾಗುತ್ತದೆ.
ಈ ಸಂಬಂಧ ಎಲ್ಲ ಪಕ್ಷಗಳೂ ಪ್ರಣಾಳಿಕೆಯನ್ನ ಹೊರಡಿಸುತ್ತವೆ.
ಅದೊಂದು ತರಹ ಶಿಸ್ತಾದ ಮಾತುಗಳ ಬತ್ತಳಿಕೆ. ಜನತೆಯ ಆಶೋತ್ತರಗಳನ್ನ ಈಡೇರಿಸುತ್ತೇವೆಂಬ
ಅನಧೀಕೃತ ಒಡಂಬಡಿಕೆ.
ಸೋತರೆ ಸದ್ದಿಲ್ಲ, ಗೆದ್ದರೆ ಮತ್ತೆ ಮತದಾರರೇ ನೆನಪಿಸಬೇಕು .ಅದೇ ವಿಡಂಬನೆ.
ಈಗ ಅದೇನೇ ಇರಲಿ
ಆಕರ್ಷಕ ಯೋಜನೆಗಳ ಬಗ್ಗೆ ರಾಜಕೀಯ ಪಕ್ಷಗಳು
ಪ್ರಣಾಳಿಕೆ ಸಿದ್ಧಪಡಿಸುತ್ತಿವೆ.
ನಿಮಗೆ ಗೊತ್ತಿರುವಂತೆ
ಆಮ್ ಆದ್ಮಿ ಪಾರ್ಟಿ
ಇಡೀ ರಾಜಕೀಯ ಕ್ಷೇತ್ರದಲ್ಲೇ ಒಂದಾದರೂ ನವೀನ ಯೋಜನೆ ಇಟ್ಟುಕೊಂಡೇ ನುಗ್ಗುತ್ತದೆ.
ಈ ಬಾರಿ ಗೋವಾ ರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಅದರ ಪ್ರಣಾಳಿಕೆ ಪ್ರಕಾಶಗೊಂಡಿದೆ.
ಅದರಲ್ಲಿ
ಹದಿಮೂರು ಅಂಶಗಳಿವೆ.
ರಾಜ್ಯದ ಜನತೆ ಉಚಿತ ವಿದ್ಯುತ್ (ಅಂದರೆ ಮೊದಲ ಮುನ್ನೂರು ಯೂನಿಟ್ ಗಳ ತನಕ).
ಎಲ್ಲರಿಗೂ ಉದ್ಯೋಗ,
ನಿರುದ್ಯೋಗಿಗಳಿಗೆ ಭತ್ಯೆ,
ಹದಿನೆಂಟು ವರ್ಷ ಮೆಲ್ಪಟ್ಟ ಮಹಿಳೆಯರಿಗೆ
ತಿಂಗಳಿಗೆ ಒಂದು ಸಾವಿರ ರೂಪಾಯಿ ಮಾಸಿಕ ಭತ್ಯೆ ನೀಡುವ ಬಗ್ಗೆ ಹೇಳಿಕೊಂಡಿದೆ.
ಅಷ್ಟೇ ಅಲ್ಲ ಸ್ಥಗಿತಗೊಂಡಿರುವ ಗಣಿ ಚಟುವಟಿಕೆ ಆರಂಭಿಸುವುದಾಗಿ
ಭರವಸೆ ನೀಡಿದೆ.
ಕೃಷಿಕರ ಸಮಸ್ಯೆಗಳ ಪರಿಹಾರ.
ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ
ಪ್ರತೀ ಗೋವಾ ಕುಟುಂಬವೂ ವಿವಿಧ ಯೋಜನೆಗಳ ಮೂಲಕ ಹತ್ತು ಲಕ್ಷ ರೂಪಾಯಿಗಳ ಲಾಭ ಹೊಂದುವಂತೆ ಮಾಡುವುದಾಗಿಯೂ ಹೇಳಲಾಗಿದೆ.
ನಲವತ್ತು ಸದಸ್ಯರಿರುವ ವಿಧಾನ ಸಭೆಗೆ ಫೆಬ್ರವರಿ ಹದಿನಾಲ್ಕರಂದು
ಚುನಾವಣೆ ನಡೆಯಲಿದೆ.
ದೆಹಲಿ ಗದ್ದುಗೆ ಹಿಡಿದಿರುವ ಚಾಣಾಕ್ಷ
ಶ್ರೀಅರವಿಂದ ಕೇಜ್ರಿವಾಲ್ ಬೀಸಿರುವ ಈ ಭರವಸೆಯ ಬಲೆಯಲ್ಲಿ ಗೋವಾ ಮತದಾರ ‌ಭಾರೀ ಮೀನಿನ ತರಹ ಬೀಳುತ್ತಾನೋ ಇಲ್ಲವೋ ಕಾದು ನೋಡಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಂದು ವರ್ಷ ತುಂಬಿದ ಲಸಿಕೆ ಅಭಿಯಾನ

0

ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ವಿರುದ್ಧದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಭಾನುವಾರ ಒಂದು ವರ್ಷ ತುಂಬಿತು. ಈ ಅವಧಿಯಲ್ಲಿ 156.76 ಕೋಟಿಗೂ ಅಧಿಕ ಡೋಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಲಸಿಕೆಯಿಂದಾಗಿ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಿದಂತಾಯಿತು. ಜನರ ಪ್ರಾಣ ಉಳಿಯಿತು. ಅನಿಸಿಕೆ ಕಾರ್ಯಕ್ರಮದೊಂದಿಗೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಕಾರ್ಯಕ್ರಮಕ್ಕೆ ಯಶಸ್ಸು ಸಿಗುವಲ್ಲಿ ನಮ್ಮ ವೈದ್ಯರು, ನರ್ಸ್ ಗಳು, ಹಾಗೂ ಆರೋಗ್ಯ ಕಾರ್ಯಕರ್ತರ ಪಾತ್ರ ಅನನ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಲಸಿಕೆ ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬಿರುವುದು ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಿ ಉತ್ಪಾದಿಸಿದ ಸಾಧನೆಯ ನೆನಪಿಗಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ವಿಶೇಷ ಅಂಚೆ ಚೀಟಿಯನ್ನು ವರ್ಚ್ಯುವಲ್ ವಿಧಾನದ ಮೂಲಕ ಬಿಡುಗಡೆ ಮಾಡಿದರು.
ಕೋವಿಡ್ ವಿರುದ್ಧದ ಲಸಿಕೆಯನ್ನು ತನ್ನ ಜನಸಂಖ್ಯೆಯ ಪೈಕಿ ಹೆಚ್ಚು ಜನರಿಗೆ ನೀಡಿದ ಜಗತ್ತಿನ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲುತ್ತದೆ. 9 ತಿಂಗಳ ಅಲ್ಪ ಅವಧಿಯಲ್ಲಿಯೇ 100 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಂದೇ ದಿನ 2.51 ಕೋಟಿ ಡೋಸ್ ಲಸಿಕೆ ನೀಡಿ, ದಾಖಲೆ ಮಾಡುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ವಯಸ್ಕರ ಪೈಕಿ ಶೇ 93ಕ್ಕೂ ಹೆಚ್ಚು ಜನರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರೆ, ಎರಡೂ ಡೋಸ್ ಗಳನ್ನು ಪಡೆದವರ ಪ್ರಮಾಣ ಶೇ 69.8ರಷ್ಟು ಎಂದು ಸಚಿವಾಲಯ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೊರೋನ ವೇಗ ತಗ್ಗುತ್ತಿದೆಯೆ?

0

ಕೊರೋನಾ ಮೂರನೇ ಅಲೆಯಲ್ಲಿ ದೇಶದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ದೈನಂದಿನ ಪ್ರಕರಣಗಳ ನಡುವೆಯೂ ಸೋಂಕಿನ ವೇಗ ತಗ್ಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೋಂಕಿನ ಹರಡುವಿಕೆ ವೇಗವನ್ನು ಸೂಚಿಸುವ ಆರ್- ವ್ಯಾಲ್ಯೂ ಜನವರಿ ಏಳರಿಂದ 13ರವರೆಗೆ ವಾರದಲ್ಲಿ ಅದರ ಹಿಂದಿನ ವಾರಕ್ಕೆ ಹೋಲಿಸಿದರೆ 2.2ಕ್ಕೆ ಇಳಿದಿದೆ ಎಂದು ಐಐಟಿ ಮದ್ರಾಸ್ ತಿಳಿಸಿದೆ.

ಜೊತೆಗೆ, ಓಮಿಕ್ರಾನ್ ಸೋಂಕಿನ ಕೇಂದ್ರಬಿಂದು ಗಳಾಗಿದ್ದ ದೆಹಲಿ ಮತ್ತು ಮುಂಬೈನಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದರ ಜೊತೆಗೆ ಸೋಂಕಿನ ವೇಗ ತಗ್ಗಿರುವ ಸುಳಿವು ಕೂಡ ನೀಡಿದೆ.

ಈಗಾಗಲೇ ಮುಂಬೈ ಹಾಗೂ ದೆಹಲಿಯಲ್ಲಿ ಮೂರನೇ ಅಲೆ ಉತ್ತುಂಗಕ್ಕೆ ತಲುಪಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಇತರ ದೇಶಗಳ ಮಾದರಿಯಲ್ಲೇ ಭಾರತದಲ್ಲೂ ಮೂರನೇ ಅಲೆ ಆದಷ್ಟು ಬೇಗ ಪೀಕ್ ಗೆ ತಲುಪಿ, ಇಳಿಮುಖವಾಗುವ ಮುನ್ಸೂಚನೆ ನೀಡಿದೆ.

ಕಳೆದ ಡಿಸೆಂಬರ್ 25ರಿಂದ ಜನವರಿ 6ರವರೆಗೆ ಭಾರತದ ಆರ್ ವ್ಯಾಲ್ಯೂ ಮುಂಬೈನಲ್ಲಿ 1.3, ದೆಹಲಿಯಲ್ಲಿ 2.9 ರಷ್ಟಿತ್ತು. ಇದು ಈಗ 0.6 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನವೋದ್ಯಮ ನವಭಾರತದ ಬೆನ್ನೆಲುಬು- ಪ್ರಧಾನಿ

0

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ಅಪ್ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ದೇಶದ ಅನೇಕ ಭಾಗಗಳ 150 ಸ್ಟಾರ್ಟಅಪ್ ಗಳ ಮುಖ್ಯ ರೊಡನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. “ನಮ್ಮ ಸ್ಟಾರ್ಟಅಪ್ ಗಳು ಆಟದ ನಿಯಮಗಳನ್ನೇ ಬದಲಿಸುತ್ತಿವೆ. ನವಭಾರತದ ಅಭಿವೃದ್ಧಿಯ ಬೆನ್ನೆಲುಬಾಗಿ ಹೊರಹೊಮ್ಮುತ್ತಿವೆ ಎಂದು ನಾನು ನಂಬಿದ್ದೇನೆ. ಭವಿಷ್ಯದ ದಿನಗಳಲ್ಲಿ ಸ್ಟಾರ್ಟ್ಅಪ್ ಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಮೋದೀಜಿ ಅವರು ಹೇಳಿದ್ದಾರೆ.

ಸರ್ಕಾರದ ಸ್ಟಾರ್ಟಅಪ್ ಗಳಿಗೆ ಮುಕ್ತವಾದ ಉದ್ಯಮಶೀಲತೆಯ ವಾತಾವರಣ ಕಲ್ಪಿಸಲು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಪ್ರಕ್ರಿಯೆಗಳಿಂದ ಸಾಧ್ಯವಾದಷ್ಟು ಮುಕ್ತಗೊಳಿಸಲು ಯತ್ನಿಸಲಾಗಿದೆ. ಸಂಶೋಧನೆಗೆ ಸಾಂಸ್ಥಿಕ ರೂಪ ಕೊಡಲಾಗುತ್ತಿದೆ. 2013-14 ರಲ್ಲಿ 4 ಸಾವಿರ ಪೇಟೆಂಟ್ ನೀಡಿದ್ದರೆ, ಕಳೆದ ವರ್ಷ 28000 ಪೇಟೆಂಟ್ ಗಳ ವಿತರಣೆಯಾಗಿದೆ. 2013-14 ರಲ್ಲಿ 70,000 ಟ್ರೇಡ್ ಮಾರ್ಕ್ ನೋಂದಣಿಯಾಗಿದ್ದರೆ, 2020-21 ರಲ್ಲಿ 2.5 ಲಕ್ಷ ನೋಂದಣಿಯಾಗಿದೆ ಎಂದರು.

ಜಗತ್ತಿನಾದ್ಯಂತ ಸ್ಟಾರ್ಟಅಪ್ ಗಳ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಯುವಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ಟಾರ್ಟಅಪ್ ಸಂಸ್ಕೃತಿಯನ್ನು ದೇಶದ ಮೂಲೆಮೂಲೆಗೆ ತಲುಪಿಸಲು ಪ್ರತಿವರ್ಷ ಜನವರಿ 16ರಂದು ರಾಷ್ಟ್ರೀಯ ಸ್ಟಾರ್ಟ್ಅಪ್ ದಿನವನ್ನು ಆಚರಿಸಲಾಗುವುದು ಎಂದು ಮಾನ್ಯ ಪ್ರಧಾನಿಯವರು ವಿವರಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಿರಿಗೆರೆಯಲ್ಲಿ ಸ್ವಾಮಿಯೇ ಶರಣಂ

0

ಮಕರ ಸಂಕ್ರಾಂತಿ ಎಂದಾಕ್ಷಣ ಎಳ್ಳು ಬೆಲ್ಲ ಜೋತೆಗೆ ಜನರ ಮನಸ್ಸಿನಲ್ಲಿ ಮೂಡಿಬರುವ ಚಿತ್ರವೇ, ಶಬರಿಮಲೆ ಅಯ್ಯಪ್ಪ ಸ್ವಾಮಿ ಮತ್ತು ಮಕರ ಜ್ಯೋತಿ.

ಅಯ್ಯಪ್ಪನ ಭಕ್ತರು ಕಾರ್ತಿಕಮಾಸ ದಿಂದ ಆರಂಭಿಸುವ ವ್ರತವು 44 ನೇ ದಿನವಾದ ಸಂಕ್ರಾಂತಿಯಂದು ಮುಗಿಯುತ್ತದೆ. ಬಳಿಕ ಭಕ್ತರು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ನಂತರ ತಮ್ಮ ಊರುಗಳಿಗೆ ಬಂದು ಅಯ್ಯಪ್ಪಸ್ವಾಮಿ ವ್ರತವನ್ನು ಪೂರ್ಣಗೊಳಿಸುತ್ತಾರೆ. ಇಂತಹ ಅಯ್ಯಪ್ಪಸ್ವಾಮಿಗೆ ಸಂಬಂಧಿಸಿದ ಶ್ರದ್ಧಾ ಕೇಂದ್ರವಾಗಿ ನಮ್ಮನ್ನು ಸೆಳೆದದ್ದು ಶಿವಮೊಗ್ಗ ಸನಿಹದ ಆಯನೂರಿನ ಸಿರಿಗೆರೆ. ಅಲ್ಲಿ ಅಯ್ಯಪ್ಪಸ್ವಾಮಿ ಭಕ್ತರಾದ ಮಿಥುನ್ ಅವರು ಕಳೆದ ಮೂರು ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸಿ ಶ್ರದ್ಧಾ-ಭಕ್ತಿಯಿಂದ ವ್ರತ ಆಚರಿಸಿಕೊಂಡು ಬರುತ್ತಿದ್ದಾರೆ.

ಬಳಿಕ ಬರಿಗಾಲಿನಲ್ಲಿ ಸಿರಿಗೆರೆ ಗ್ರಾಮದಿಂದ ಶಬರಿಮಲೆಗೆ ತೆರಳಿ ಸ್ವಾಮಿಯ ದರ್ಶನ ಪಡೆಯುತ್ತಿರುವುದು ಒಂದು ವಿಶೇಷವೇ ಸರಿ.

ಅಷ್ಟೇ ಅಲ್ಲ ಶಬರಿಮಲೆಯಲ್ಲಿ ನಡೆಯುವ ಸ್ವಾಮಿಯ ವಿಜೃಂಭಣೆಯ ಉತ್ಸವ ಜರುಗುವ ರೀತಿಯಲ್ಲಿಯೇ, ಸಿರಿಗೆರೆಯಲ್ಲೂ ಕಳೆದ ಎರಡು ವರ್ಷಗಳಿಂದ ನಡೆಯುತ್ತಾ ಬಂದಿದೆ.

ಅಯ್ಯಪ್ಪಸ್ವಾಮಿ ಮಾಲಾಧಾರಿಯಾದ ಮಿಥುನ್ ಸ್ವಾಮಿ ಅವರು ಸಿರಿಗೆರೆಯ ಸಮೀಪದಲ್ಲಿರುವ ಮಲೇಶಂಕರ ದೇವಾಲಯಕ್ಕೆ ಬರಿಗಾಲಿನಲ್ಲಿ ತೆರಳಿ ತಿರುವಾಭರಣಕ್ಕೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಕಾಲ್ನಡಿಗೆ ಮೂಲಕ ಗ್ರಾಮದೇವತೆಯ ಪಲ್ಲಕ್ಕಿಯೊಂದಿಗೆ ಕಾಡುದಾರಿಯಲ್ಲಿ ಅಯ್ಯಪ್ಪಸ್ವಾಮಿಯ ಶರಣು ಘೋಷ ಮಾಡುವ ಮೂಲಕ ಸಿರಿಗೆರೆಯ ಸ್ವರ್ಣಮಂದಿರಕ್ಕೆ ತಿರುವಾಭರಣ ಪೆಟ್ಟಿಗೆ ಹೊತ್ತುಕೊಂಡು ಬರುತ್ತಾರೆ. ಆ ಸಂಭ್ರಮವನ್ನು ನೋಡುವುದು ಭಕ್ತರಿಗೆ ಆನಂದವೋ ಆನಂದ.

ಸಿರಿಗೆರೆಯ ಸ್ವರ್ಣಮಂದಿರದಲ್ಲಿರುವ ಪಂಚಲೋಹದ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ತಿರುವಾಭರಣವನ್ನು ತೊಡಿಸಿ ಪೂಜೆ ಸಲ್ಲಿಸುತ್ತಾರೆ. ಆ ವೇಳೆ ಆಗಸದಲ್ಲಿ ಗರುಡ ದರ್ಶನ ನೀಡುತ್ತಿರುವುದು ಆಶ್ಚರ್ಯವೊಂದೆ ಅಲ್ಲ, ಜೊತೆಗೆ ಸ್ವಾಮಿಯ ಪವಾಡ ಎಂದು ಭಕ್ತರು ನಂಬಿದ್ದಾರೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿರುವ ಮಿಥುನ್ ಅವರು 44 ದಿನಗಳವರೆಗೆ ಕಟ್ಟುನಿಟ್ಟಾಗಿ ಶ್ರದ್ಧಾಭಕ್ತಿಯಿಂದ ವ್ರತವನ್ನು ಪಾಲಿಸುತ್ತಾರೆ. ಮಾಲೆ ಧರಿಸಿದ ಬಳಿಕ ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ ತಣ್ಣೀರಿನಲ್ಲಿ ಸ್ನಾನ ಮಾಡಿ, ಅಯ್ಯಪ್ಪ ಸ್ವಾಮಿಯ 108 ಶರಣು ಘೋಷಣೆಗಳನ್ನು ಪಠಿಸುವ ಮೂಲಕ ಪೂಜೆ ಸಲ್ಲಿಸುತ್ತಾರೆ. ನಂತರ ಸಂಜೆ ಸೂರ್ಯಾಸ್ತದ ಬಳಿಕ ಮತ್ತೊಮ್ಮೆ ತಣ್ಣೀರಿನಲ್ಲಿ ಸ್ನಾನ ಮಾಡಿ ಅಯ್ಯಪ್ಪಸ್ವಾಮಿಯನ್ನು ಸ್ಮರಿಸುತ್ತಾರೆ. ಅಲ್ಲದೆ ವ್ರತ ಪೂರ್ಣಗೊಳ್ಳುವವರೆಗೂ ಬರಿಗಾಲಿನಲ್ಲಿ ಓಡಾಡುತ್ತಾರೆ. ಅಯ್ಯಪ್ಪ ಸ್ವಾಮಿಯ ವ್ರತವನ್ನು ಆಚರಿಸುವುದರಿಂದ ಏಕಾಗ್ರತೆ ಹಾಗೂ ಮನಸ್ಸಿನಲ್ಲಿರುವ ದುಶ್ಚಟಗಳನ್ನು ಹೋಗಲಾಡಿಸುತ್ತದೆ ಎಂದು ಮಿಥುನ್ ಸ್ವಾಮಿ ಅವರು ಕೆ-ಲೈವ್ ಮೀಡಿಯಾದೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರು.

ಸಿರಿಗೆರೆಯಲ್ಲಿ ನಡೆದ ಅಯ್ಯಪ್ಪ ಸ್ವಾಮಿಯ ಉತ್ಸವದಲ್ಲಿ ಶಿವಮೊಗ್ಗದ ಗುರುಸ್ವಾಮಿ ರೋಜಾ ಷಣ್ಮುಗಂ ಅವರು ಎರಡು ವರ್ಷಗಳಿಂದ ಆಗಮಿಸಿ. ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ. ಭಕ್ತರಿಗೆ ಒಳಿತನ್ನು ಹಾರೈಸುತ್ತಿದ್ದಾರೆ.

ಅಯ್ಯಪ್ಪ ಸ್ವಾಮಿಯ ಭಕ್ತರ ಸಂಖ್ಯೆ ಅಪಾರ. ದೇಶ ವಿದೇಶದಲ್ಲಿರುವ ಭಕ್ತರು ಸ್ವಾಮಿ ಅಯ್ಯಪ್ಪನಲ್ಲಿ ಭಕ್ತಿ ನಂಬಿಕೆ ಇರಿಸಿಕೊಂಡಿದ್ದಾರೆ. ಅಂತಹವರಲ್ಲಿ ಲಂಡನ್ ನಲ್ಲಿ ವಾಸವಿರುವ ಶಬರೀಶ್ ಕೂಡ ಒಬ್ಬರು. 7 ತಿಂಗಳ ಮಗುವಿದ್ದಾಗ ತಂದೆಯೊಂದಿಗೆ ಶಬರಿಮಲೆ ಯಾತ್ರೆ ಪ್ರಾರಂಭಿಸಿದವರು, ಇಂದೂ ಕೂಡ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ.

ನೈಸರ್ಗಿಕವಾಗಿ ಸಮೃದ್ಧಿ ಪಡೆದಿರುವ ಮಲೆನಾಡಿನ ಮಲೇಶಂಕರ ಪ್ರದೇಶವು ಶಬರಿಮಲೆ ಅಂತೆಯೇ ಪ್ರಾಕೃತಿಕ ಶೋಭೆ ಪಡೆದಿದೆ. ಇಂತಹ ಪರಿಸರದಲ್ಲಿ ಆಧ್ಯಾತ್ಮಿಕ ಅನುಭವ ಪಡೆಯುವುದು ಸುಲಭ ಸಾಧ್ಯ ಎಂದು ಅಯ್ಯಪ್ಪ ಸ್ವಾಮಿಯ ಭಕ್ತ ಶ್ರೀ ಶಬರೀಶ್ ಅವರು ತಮ್ಮ ಅನಿಸಿಕೆಯನ್ನು ಕೆ-ಲೈವ್ ನೊಂದಿಗೆ ಹಂಚಿಕೊಂಡಿದ್ದು ಹೀಗೆ.

ಸಿರಿಗೆರೆಯ ಅಯ್ಯಪ್ಪ ಸ್ವಾಮಿಯ ಉತ್ಸವದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದರು. ಅಲ್ಲದೆ ಬಂದಂತಹ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಮುಂಬರುವ ದಿನಗಳಲ್ಲಿ ಶಬರಿಮಲೆಯಂತೆಯೇ, ಅಯ್ಯಪ್ಪಸ್ವಾಮಿ ಉತ್ಸವವು ನಾಡಿನಾದ್ಯಂತ ಹೆಸರಾಗಲಿ. ಸರ್ವರಿಗೂ ಅಯ್ಯಪ್ಪ ಸ್ವಾಮಿಯ ಆಶೀರ್ವಾದದಿಂದ ಸನ್ಮಂಗಳವಾಗಲಿ ಎಂದು ಕೆ-ಲೈವ್ ಮೀಡಿಯಾ ಹಾರೈಸುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಾಂತಿ ಕದಡುವ ಶತ್ರುಗಳಿಗೆ ತಕ್ಕ ಶಾಸ್ತಿ ಮಾಡುತ್ತೇವೆ- ಜ.ನರವಣೆ

0

ಭಾರತದ ಸೇನಾ ದಿನಾಚರಣೆ ಎಂದೇ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಪಾಕಿಸ್ತಾನ ಮತ್ತು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿ, ಗಡಿಯಲ್ಲಿ ತಂಟೆಗೆ ಬಂದರೆ ಪ್ರತ್ಯುತ್ತರ ನೀಡದೇ ಬಿಡುವುದಿಲ್ಲ ಎಂದಿದ್ದಾರೆ.
ದಿಲ್ಲಿಯ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆದ ಸೇನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸಂದೇಶ ಸ್ಪಷ್ಟವಾಗಿದೆ. ಗಡಿಗಳಲ್ಲಿ ಶಾಂತಿಯನ್ನು ಕದಡುವ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಉಪಟಳ ಮಾಡುವವರಿಗೆ ತಕ್ಕ ಪಾಠವನ್ನೂ ಕಲಿಸಿದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದ ಎಲ್ಲಾ ಸೈನಿಕರು, ಸೇನಾಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ಸೇನಾ ದಿನಾಚರಣೆಯ ಶುಭಾಶಯಗಳು. ರಾಷ್ಟ್ರೀಯ ಭದ್ರತೆ ಸೈನಿಕರು ನೀಡಿರುವ ನಿರ್ಣಾಯಕ ಕೊಡುಗೆಯನ್ನು ಬಣ್ಣಿಸಲು ಯಾವ ಪದಗಳಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
1949ರ ಜನವರಿ 15ರಂದು ಪೂರ್ಣ ಪ್ರಮಾಣದಲ್ಲಿ ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕರಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ ಸ್ಮರಣಾರ್ಥ ಪ್ರತಿವರ್ಷ ಜನವರಿ 15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ. ಅದಕ್ಕೂ ಮುನ್ನ ಜನರಲ್ ಸರ್ ಫ್ರಾನ್ಸಿಸ್ ರಾಬರ್ಟ್ ಬೂಚರ್ ಅವರೇ ಸೇನೆಯ ನಾಮನಿರ್ದೇಶನ ಮಹಾ ದಂಡನಾಯಕರಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಭಾರತೀಯ ಸೈನಿಕರಿಗೆ ಹೊಸಬಗೆಯ ಸಮವಸ್ತ್ರ ನೀಡಲಾಗುತ್ತಿದೆ. ಸೇನಾ ದಿನಾಚರಣೆಯಲ್ಲಿ ಪ್ಯಾರಚೂಟ್ ರೆಜಿಮೆಂಟ್ ನ ಕಮಾಂಡೋಗಳು ಇದೇ ಮೊದಲ ಬಾರಿಗೆ ನವೀನ ಬಗೆಯ ಸಮವಸ್ತ್ರ ಧರಿಸಿ ಪರೇಡ್ ನಡೆಸಿದರು. ದಶಕಗಳ ಹಳೆಯ ಸಮವಸ್ತ್ರಗಳನ್ನು ಹೊಸದಾಗಿ ಮಾರ್ಪಡಿಸಿದ್ದು, ಇದೇ ಆಗಸ್ಟ್ ನಲ್ಲಿ ಸೈನಿಕರಿಗೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.