ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ಮಾನದಂಡದಲ್ಲಿ ಹೇಳುವುದಾದರೆ ಸಿದ್ದರಾಮಯ್ಯ ಹತ್ತು ಸಲ ರಾಜೀನಾಮೆ ಕೊಡಬೇಕಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹಿಂದೆ ಅಧಿಕಾರದಲ್ಲಿದ್ದಾಗ ಇದೇ ಪೊಲೀಸ್ ನೇಮಕಾತಿ ವಿಚಾರದಲ್ಲಿ ಗುಲ್ಬರ್ಗಾದಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಪ್ರಶ್ನೆಪತ್ರಿಕೆ ಸಿದ್ದ ಮಾಡಿದ್ದ ಡಿಐಜಿ ಮನೆಯಿಂದಲೇ ಲೀಕ್ ಆಗಿತ್ತು. ಅದು ತನಿಖೆಯಾಗಿ ಆ ಡಿಐಜಿಯನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಮುಂದೆ ಈ ಪ್ರಕರಣ ಏನಾಯಿತು? ಅವರು ಯಾವ ಕ್ರಮ ಕೈಗೊಂಡಿದ್ದರು? ಆ ಡಿಐಜಿಯನ್ನು ಅಮಾನತು ಮಾಡಿದ್ದರಾ? ಬಂಧಿಸಿದ್ದರೇ? ನನ್ನ ರಾಜೀನಾಮೆ ಕೇಳಲು ಸಿದ್ದರಾಮಯ್ಯಗೆ ಯಾವ ನೈತಿಕತೆಯಿದೆ ಎಂದರು.
ಸಚಿವ ಆರ್.ಅಶೋಕ್ ಮಾತನಾಡಿ, ಪಿಎಸ್ ಐ ಅಕ್ರಮ ನೇಮಕ ಕುರಿತು ನಿನ್ನೆಯೇ ಸಿಎಂ ಸ್ಪಷ್ಟವಾಗಿ ನಿಲುವು ತೆಗೆದುಕೊಂಡಿದ್ದಾರೆ.
ಹಿಂದೆ ಕೂಡ ಅನೇಕ ಸರ್ಕಾರದ ಮೇಲೆ ಆಪಾದನೆ ಬಂದಿತ್ತು. ಆದರೆ ಅದನ್ನು ಮುಚ್ಚಿ ಹಾಕುತ್ತಿದ್ದರು. ನಮ್ಮ ಸಿಎಂ ಎಲ್ಲರಿಗೂ ಸ್ವಾತಂತ್ರ್ಯ ನೀಡಿದ ಕಾರಣ ಬಂಧನವಾಗಿದೆ. ಬೇರೆ ಸರ್ಕಾರದ ರೀತಿ ಇದ್ದಿದ್ದರೆ ಇದು ಹೊರಗೆ ಬರುತ್ತಿರಲಿಲ್ಲ ಎಂದರು.