Saturday, February 14, 2026
Saturday, February 14, 2026
Home Blog Page 1757

ಕಣ್ಮನ ಸೆಳೆದ ಕೆರೆ ಹಬ್ಬ

0

ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡವು ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಕ್ಯಾದಿಗೆ ಕಟ್ಟೆ ಕೆರೆಯಾ ಜೀರ್ಣೋದ್ಧಾರವನ್ನು ಕೈಗೊಂಡು, ಕೆರೆಯ ಆವರಣದಲ್ಲಿ ವೃಕ್ಷಮಾತೆ ಶ್ರೀಮತಿ ತುಳಸಿ ಗೌಡ ಹೆಸರಿನ ಉದ್ಯಾನವನದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ಕೆರೆಗೆ ಮೀನುಗಳನ್ನು ಬಿಡುವ ಮೂಲಕ ಹಾಗೂ ಕೆರೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಲೋಕಾರ್ಪಣೆ ಮಾಡಿದರು.

ಬೆಳಿಗ್ಗೆಯ ಅರುಣರಾಗ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿದ್ದರು. ಜಿಲ್ಲಾ ಪ್ರವಾಸೋದ್ಯಮ ವೇದಿಕೆಯ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ಸಂಸದ ಬಿ.ವೈ.ರಾಘವೇಂದ್ರ ಅವರು ಕೊಡಮಾಡಿದ್ದ 2 ಲಕ್ಷ ರೂಪಾಯಿ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ ದೇಣಿಗೆಯನ್ನು ಘೋಷಿಸಿದರು.

ಸುಮಾರು ಐದೂವರೆ ಎಕರೆ ವಿಸ್ತೀರ್ಣವಿರುವ ಜಾಗದಲ್ಲಿ ಮೂರುವರೆ ಎಕರೆಯಲ್ಲಿ ಪುನರುಜ್ಜೀವನ ಕೈಗೊಂಡ ಪರಿಸರಾಸಕ್ತ ತಂಡವು ಸ್ಥಳೀಯರು ಜಿಲ್ಲಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಅನೇಕ ದಾನಿಗಳ ಸಹಾಯ ಹಸ್ತದಿಂದ ಕೆರೆಯನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೆರೆಹಬ್ಬ ಹಾಗೂ ಉದ್ಯಾನವನವನ್ನು ವೃಕ್ಷಮಾತೆ ತುಳಸಿ ಗೌಡ ಅವರು ಉದ್ಘಾಟಿಸುವ ಮೂಲಕ ಲೋಕಾರ್ಪಣೆ ಮಾಡಿದರು. ವೃಕ್ಷಮಾತೆ ಅವರದೇ ಶೈಲಿಯಲ್ಲಿ ಕೆರೆ ಪುನರುಜ್ಜೀವನ ಕಾರ್ಯದ ಬಗ್ಗೆ ಕೆ-ಲೈವ್ ಮೀಡಿಯಾ ದೊಂದಿಗೆ ಹಂಚಿಕೊಂಡರು.

ಪರಿಸರ ಚಿಂತಕರೂ ಆದ ಪ್ರೊ.ಎ.ಎಸ್. ಚಂದ್ರಶೇಖರ್ ಅವರು 2021 ರಿಂದ 2030 ರವರೆಗಿನ ಈ ಹತ್ತು ವರ್ಷಗಳ ಕಾಲ ವಿಶ್ವಸಂಸ್ಥೆ ಏಕೋ ಸಿಸ್ಟಮ್ ರೆಸ್ಟೋರೇಷನ್ ಬಗ್ಗೆ ಮಾತನಾಡಿದರು.

eco-system ಹೇಗೆ ಆಗಿದೆ. ಪರಿಸರದಲ್ಲಿರುವ ನೆಲ, ಜಲ, ಕಾಡು, ಪ್ರಾಣಿ, ಸಸ್ಯಗಳು ನಗರೀಕರಣದಿಂದ ಹಾಳಾಗಿದೆ. ಪರಿಸರವನ್ನು ಸರಿಪಡಿಸಲು ಈ ಹತ್ತು ವರ್ಷಗಳ ಕಾಲ ವಿಶ್ವಸಂಸ್ಥೆ ಪಣತೊಟ್ಟಿದೆ. ವಿಶ್ವಸಂಸ್ಥೆಯ ಜೊತೆ ಪರಿಸರವನ್ನು ರಕ್ಷಿಸುವ ಹೊಣೆ ಎಲ್ಲರದ್ದು ಎಂದು ಪ್ರೊ.ಎ.ಎಸ್. ಚಂದ್ರಶೇಖರ್ ಹೇಳಿದರು.

ಅರ್ಥಶಾಸ್ತ್ರಜ್ಞರು,ಪರಿಸರ ಚಿಂತಕರು ಹಾಗೂ ಹೋರಾಟಗಾರರಾದ ಪ್ರೊ.ಬಿ.ಎಂ. ಕುಮಾರಸ್ವಾಮಿ ಅವರು ಮಾತನಾಡಿ 1984 ರಲ್ಲಿ ಪಶ್ಚಿಮಘಟ್ಟದ ಉಳಿವಿಗಾಗಿ ಪಶ್ಚಿಮ ಘಟ್ಟಗಳ ರಾಜ್ಯಗಳು ಕನ್ಯಾಕುಮಾರಿಯಿಂದ ಗೋವಾದ ವರೆಗೆ ಹಾಗೂ ಗುಜರಾತ್ ನಿಂದ ಗೋವಾದವರಿಗೆ ಆಯೋಜಿಸಿದ್ದ ನೂರು ದಿನಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರ ಬಗ್ಗೆ ಮೆಲುಕು ಹಾಕುವುದರ ಜೊತೆಗೆ ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಪ್ರೊ.ಬಿ.ಎಂ.ಕುಮಾರಸ್ವಾಮಿ ಅವರು ತಿಳಿಸಿದರು.

ಕೆರೆ ಹಬ್ಬದ ಎರಡನೇ ಭಾಗ ಸಂಧ್ಯಾರಾಗ ಸಂಜೆಯ ಗೋಧೂಳಿ ಸಮಯಕ್ಕೆ ಸರಿಯಾಗಿ ಕೆರೆಯ ಸುತ್ತಲೂ ದೀಪಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ಹಾಗೂ ಆರತಿ ಕಾರ್ಯಕ್ರಮ ನೆರವೇರಿತು.

ಕೆರೆಯ ಸುತ್ತಲೂ ಹಚ್ಚಿದ ಸಾಲು ಹಣತೆಯ ಬೆಳಕು ನೋಡುತ್ತಿದ್ದಂತೆ ನೆರೆದವರು ಮಂತ್ರಮುಗ್ಧರಾದರು. ಜೊತೆಗೆ ಕೆರೆಯ ನೀರಿನಲ್ಲಿ ದೀಪಗಳ ಪ್ರತಿಬಿಂಬ ನೆರೆದವರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯಿತು.

ಸಂಜೆಯ ಇನ್ನೊಂದು ಆಕರ್ಷಣೆ ಕೆರೆಯ ಆರತಿ. ಕೆರೆ ಆರತಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು, ವೃಕ್ಷಮಾತೆ ಶ್ರೀಮತಿ ತುಳಸಿ ಗೌಡ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಸುನೀತಾ ಅಣ್ಣಪ್ಪ ಅವರು ಕಿರಿಕೆ ಆರತಿ ಮಾಡಿ ಕೆರೆಯಲ್ಲಿ ದೀಪಗಳನ್ನು ತೇಲಿ ಬಿಟ್ಟರು. ದೀಪೋತ್ಸವದಲ್ಲಿ ಪರಿಸರಸ್ನೇಹಿ ಗೋಮಯ ದೀಪಗಳನ್ನ ಬಳಸಿದ್ದು ವಿಶೇಷವಾಗಿತ್ತು.

ಸಂಜೆಯ ಸಂಧ್ಯಾವಂದನೆ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಅವರಿಗೆ ಸನ್ಮಾನವನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಬಸವಕೇಂದ್ರದ ಡಾ. ಶ್ರೀ ಬಸವಮರುಳ ಸಿದ್ಧ ಸ್ವಾಮೀಜಿ, ಹೊಸನಗರ ತಾಲೂಕಿನ ಮೂಲೆಗದ್ದೆಯ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ಅವರು, ವಾಜಪೇಯಿ ಬಡಾವಣೆಯ ಸಾರ್ವಜನಿಕರು ಮತ್ತು ಪುನರುಜ್ಜೀವನ ಕಾರ್ಯದಲ್ಲಿ ಭಾಗಿಯಾಗಿದ್ದವರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನದಿ ನೀರು ವಿವಾದಗಳ ಕಾಯ್ದೆ ಮರುಪರಿಶೀಲಿಸಿ- ಸಿಎಂ

0

ಅಂತರ್‌ರಾಜ್ಯ ನದಿ ನೀರು ವಿವಾದಗಳ ಕಾಯ್ದೆಯನ್ನು ಮರುಪರಿಶೀಲಿಸುವಂತೆ ಕೇಂದ್ರವನ್ನು ಒತ್ತಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಅವುಗಳನ್ನು ಪರಿಹರಿಸುವ ಬದಲು ಹೆಚ್ಚಿನ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಕಾರ್ಯವಿಧಾನದ ಮತ್ತು ಕಾನೂನು ಮಧ್ಯಸ್ಥಿಕೆಗಳಿಂದ ಕರ್ನಾಟಕದ ಹಲವಾರು ಯೋಜನೆಗಳು ಕುಂಠಿತಗೊಂಡಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಧಾನಮಂತ್ರಿ ಗತಿ ಶಕ್ತಿ ದಕ್ಷಿಣ ವಲಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬೊಮ್ಮಾಯಿ ನದಿ ಜಲಾನಯನ ಪ್ರದೇಶದಲ್ಲಿ ನದಿ ತೀರದ ರಾಜ್ಯಗಳಿಗೆ ಗರಿಷ್ಠ ನೀರಿನ ಬಳಕೆಯನ್ನು ಅನುಮತಿಸುವ ವೈಜ್ಞಾನಿಕ ಮಾರ್ಗಗಳ ಮೇಲೆ ಕಾಯಿದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದರು.
ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಮೇಕೆದಾಟು ಯೋಜನೆಗೆ ಪರಿಸರ ಮತ್ತು ಇತರ ಅನುಮತಿಗಳಿಗೆ ಕರ್ನಾಟಕ ಒತ್ತಾಯಿಸುತ್ತಿರುವುದರಿಂದ ಮುಖ್ಯಮಂತ್ರಿಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶದೊಂದಿಗಿನ ಅನೇಕ ನೀರಾವರಿ ರಾಜ್ಯ ನದಿ ನೀರಿನ ವಿವಾದಗಳ ಬಗ್ಗೆ ತಿಳಿಸಿದರು.
ಚಾಲ್ತಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಕೆಲವು ಕಾನೂನು ಮಧ್ಯಸ್ಥಿಕೆಗಳು ಅಗತ್ಯವಾಗಿವೆ. ವಿಳಂಬವು ರಾಜ್ಯಗಳಿಗೆ ಭಾರಿ ನಷ್ಟವನ್ನುಂಟು ಮಾಡುತ್ತಿದೆ. ಕೇಂದ್ರವು ವಿವಿಧ ಯೋಜನೆಗಳನ್ನು ನಿಯಂತ್ರಿಸುವ ಕಾನೂನನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಲಾಕ್ ಡೌನ್ ಬೇಕೆ ಬೇಡವೆ ? ಸಭೆಯಲ್ಲಿ ತೀರ್ಮಾನ – ಸಿಎಂ

0

ದೇಶಾದ್ಯಂತ ಕೋವಿಡ್ ಮೂರನೆಯ ಅಬ್ಬರದ ನಡುವೆಯೇ 12ರಿಂದ 14 ವರ್ಷ ವಯೋಮಾನದ ಮಕ್ಕಳಿಗೂ ಶೀಘ್ರ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಮಾರ್ಚ್ 1ರಿಂದ 12-14 ವಯೋಮಾನದ ಮಕ್ಕಳಿಗೆ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ನೀತಿ ಆಯೋಗದ ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ದೈನಂದಿನ ಸೋಂಕು ಗಣನೀಯವಾಗಿ ಹೆಚ್ಚುತ್ತಿದ್ದರೂ, ಹೆಚ್ಚಿನ ನಿರ್ಬಂಧ ಕ್ರಮಗಳಿಗೆ ಮುಂದಾಗಿದೆ ಹಾಲಿ ಸ್ಥಿತಿಯನ್ನೇ ಸದ್ಯಕ್ಕೆ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ಕರ್ಫ್ಯೂ ಮುಂದುವರಿಸಬೇಕೆ ಅಥವಾ ಸಡಿಲಗೊಳಿಸಬೇಕೇ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಕುರಿತ ವರ್ಚ್ಯುವಲ್ ಸಭೆಯ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ.
ದೇಶದಲ್ಲಿ 12 ವರ್ಷ ಅಥವಾ ಅದಕ್ಕಿಂತ ಕಿರಿಯ ಮಕ್ಕಳಿಗೆ ಲಸಿಕೆ ನೀಡುವ ಕುರಿತು ನೀಲನಕ್ಷೆ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಅರ್ಜುನ್ ಸ್ವೀಕರಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ನೇತೃತ್ವದ ಪೀಠ ಮಾ.22ಕ್ಕೆ ಇದರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಈಗ ಆನ್ ಲೈನ್ ನಲ್ಲಿ ವೈದ್ಯರ ಸಲಹೆ ಬಂದಿದೆ ಇ- ಸಂಜೀವಿನಿ ಆ್ಯಪ್

0

ಕೇಂದ್ರ ಸರ್ಕಾರದ ಇ- ಸಂಜೀವಿನಿ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಈ ಮೂಲಕ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ಈ ಆಪ್ ಬಳಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಬಿಳಿ ಕಾಯಿಲೆಯಿಂದ ಆಸ್ಪತ್ರೆಗೆ ಹೋದರೂ ಸಕಾಲದಲ್ಲಿ ವೈದ್ಯರು ಸಿಗುವುದು ಕಷ್ಟ. ಹೀಗಾಗಿ ಕೋವಿಡ್ ಪೀಡಿತರು ಮತ್ತು ಇತರೆ ರೋಗಿಗಳು ಇ- ಸಂಜೀವಿನಿಗೆ ಮೊರೆ ಹೋಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 35.19 ಲಕ್ಷ ಜನರು ಇ-ಸಂಜೀವಿನಿ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 2021ರ ಅಕ್ಟೋಬರ್ 24 ಲಕ್ಷ ಜನರು ಇ-ಸಂಜೀವಿನಿ ಮೂಲಕ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದುಬಂದಿದೆ.
ಸಾಮಾನ್ಯ ಕೆಮ್ಮು, ನೆಗಡಿ ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ವೈದ್ಯರಿಂದ ಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಆಪ್ ಬಳಸಬಹುದಾಗಿದೆ.
ಇ-ಸಂಜೀವಿನಿ ಬಳಕೆಯಲ್ಲಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಕುಂದಾನಗರಿಯಲ್ಲಿ ಇದುವರೆಗೆ 2.21 ಲಕ್ಷ ಜನರು ಟೆಲಿ ಸಂದರ್ಶನದ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಬಳ್ಳಾರಿಯಲ್ಲಿ 2.16 ಲಕ್ಷ, ಚಿಕ್ಕಮಗಳೂರು 2.09 ಲಕ್ಷ ಹಾಗೂ ಬೆಂಗಳೂರು ನಗರದಲ್ಲಿ 1.27 ಲಕ್ಷ ಜನರು ಇ- ಸಂಜೀವಿನಿ ಮೂಲಕ ಚಿಕಿತ್ಸೆ ಪಡೆದಿದ್ದಾರೆ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಜಯದ ಹಾದಿಯಲ್ಲಿ ಯೋಧಾ-ವಾರಿಯರ್ಸ್

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಸೋಮವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ಪಲ್ಟನ್ ವಿರುದ್ಧ ಯೋಧಾ ಗೆ ಜಯ
ಪುಣೇರಿ ಪಲ್ಟನ್(40) ಮತ್ತು ಯು.ಪಿ ಯೋಧಾ(50) ತಂಡಗಳ ನಡುವೆ ಪಂದ್ಯ ನಡೆಯಿತು.ಪುಣೇರಿ ವಿರುದ್ದ ಯೋಧಾ ಭರ್ಜರಿ ಜಯ ಸಾಧಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಧಾರಳ ಪಾಯಿಂಟ್ ಗಳನ್ನ ಕಲೆಹಾಕಿದವು. ಯೋಧಾ ತಂಡದ ರೇಡರ್ ಪ್ರದೀಪ್ ನರ್ವಾಲ್ 3 ಪಾಯಿಂಟ್ ಗಳೊಂದಿಗೆ ಮೊದಲ ಪಂದ್ಯ ಆರಂಭದ ಮೊದಲ ರೇಡ್ ನಲ್ಲಿಯೇ ಸೂಪರ್ ರೀಡಿಂಗ್ ಮೂಲಕ 3 ಪಾಯಿಂಟ್ ಗಳನ್ನು ತಂಡಕ್ಕೆ ಸೇರಿಸಿದರು.
ಆದರೆ ಪಲ್ಟನ್ ತಂಡದ ರೇಡರ್ ಗಳಾದ ಅಸ್ಲಾಂ ಮತ್ತು ಮೋಹಿತ್ ಅವರ ಉತ್ತಮ ಆಟ ಪ್ರದರ್ಶನದ ಮೂಲಕ ಯು.ಪಿ ಯೋಧಾ ಆಲ್ ಔಟ್ ಆಯಿತು.ಆದ್ದರಿಂದ ಮೊದಲಾರ್ಧದಲ್ಲಿಯೇ 20-20 ರ ಸಮಬಲ ಸಾಧಿಸಿದವು.
ನಂತರ ರೊಚ್ಚಿಗೆದ್ದ ಯು.ಪಿ ಯೋಧಾ ಅಮೋಘ ಆಟವಾಡಿ 30 ಪಾಯಿಂಟ್ ಕಲೆ ಹಾಕಿ ಪಲ್ಟನ್ ವಿರುದ್ಧ 10 ಪಾಯಿಂಟ್ ಗಳ ಅಂತರದಿಂದ ಮಣಿಸಿತು.

ಟೈಟನ್ಸ್ ವಿರುದ್ಧ ವಾರಿಯರ್ಸ್ ಗೆ ರೋಚಕ ಗೆಲುವು

ಎರಡು ತಂಡಗಳು ಮೊದಲಾರ್ಧದಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸಿ ಸಮಬಲ ಸಾಧಿಸಿದವು.ಆದರೆ,ದ್ವಿತೀಯಾರ್ಧದಲ್ಲಿ ಕೇವಲ 1 ಅಂಕದ ಅಂತರದಿಂದ ಟೈಟನ್ಸ್ ತಂಡವನ್ನು ವಾರಿಯರ್ಸ್ ಸೋಲಿಸಿತು.
ಇಂದು ನಡೆಯಲಿರುವ ಪಂದ್ಯಗಳು:
೧. ದಬಾಂಗ್ ಡೆಲ್ಲಿ ಮತ್ತು ಪಟ್ನಾ ಪೈರೇಟ್ಸ್
ಸಮಯ:7.30
೨. ಗುಜರಾತ್ ಜಯಂಟ್ಸ್ ಮತ್ತು ಯು.ಮುಂಬಾ
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಪೋಲಿಸ್ ಕ್ಯಾಪ್ ಗೆ ಮತ್ತೊಂದು ಗರಿ

0

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯು ತನ್ನ ಕ್ಯಾಪ್‌ನಲ್ಲಿ ಮತ್ತೊಂದು ವೈಶಿಷ್ಟ್ಯವನ್ನು ಸೇರಿಸಿದೆ. ಅಕಾಡೆಮಿಯು 2020-21 ನೇ ಸಾಲಿನ ದಕ್ಷಿಣ ವಲಯದ ಅತ್ಯುತ್ತಮ ಪೊಲೀಸ್ ತರಬೇತಿ ಸಂಸ್ಥೆಗಾಗಿ ಕೇಂದ್ರ ಗೃಹ ಸಚಿವರ ಟ್ರೋಫಿಯನ್ನು ಗೆದ್ದಿದೆ.ಕರ್ನಾಟಕ ಪೊಲೀಸ್ ಅಕಾಡೆಮಿಯನ್ನು ವಲಯ ಮಟ್ಟದ ವಿಭಾಗದ ವಿಜೇತ ಎಂದು ಘೋಷಿಸಲಾಗಿದೆ. . ಅಕಾಡೆಮಿಯು ದಕ್ಷಿಣ ವಲಯದಲ್ಲಿ ಗೆಜೆಟೆಡ್ ಅಧಿಕಾರಿಗಳ ವಿಭಾಗ ಮತ್ತು ಗೆಜೆಟೆಡ್ ಅಲ್ಲದ ಅಧಿಕಾರಿಗಳ ವಿಭಾಗ ಎರಡನ್ನೂ ಗೆದ್ದಿದ್ದರೆ, ಕೇರಳದ ತ್ರಿಶೂರ್‌ನ ಭಾರತೀಯ ಮೀಸಲು ಬೆಟಾಲಿಯನ್ ಇತರ ವಿಭಾಗದಲ್ಲಿ ಗೆದ್ದಿದೆ.
ಕೇಂದ್ರ ವಲಯದಲ್ಲಿ, ಉತ್ತರ ಪ್ರದೇಶದ ಡಾ ಬಿಆರ್‌ಎ ಪೊಲೀಸ್ ಅಕಾಡೆಮಿ ಗೆಜೆಟೆಡ್ ವಿಭಾಗದಲ್ಲಿ, ಉತ್ತರಾಖಂಡದ ಸಶಸ್ತ್ರ ತರಬೇತಿ ಕೇಂದ್ರವು ಛತ್ತೀಸ್‌ಗಢದ ವರ್ಗೇತರ ಪೊಲೀಸ್ ತರಬೇತಿ ಶಾಲೆಯು ಇತರ ವಿಭಾಗದಲ್ಲಿ ಗೆದ್ದಿದೆ. ಅದೇ ರೀತಿ ಪಶ್ಚಿಮ ವಲಯದಲ್ಲಿ, ಮಹಾರಾಷ್ಟ್ರ ಪೊಲೀಸ್ ಅಕಾಡೆಮಿ, ನಾಸಿಕ್, ಗೆಜೆಟೆಡ್ ವಿಭಾಗದಲ್ಲಿ ಗೆದ್ದರೆ, ಪೂರ್ವ ವಲಯದಲ್ಲಿ, ಬಿಹಾರ ಪೊಲೀಸ್ ಅಕಾಡೆಮಿ, ರಾಜಗೀರ್ ನಾನ್ ಗೆಜೆಟೆಡ್ ಆಫೀಸರ್ ವಿಭಾಗದಲ್ಲಿ ಗೆದ್ದಿದೆ.
ಪಶ್ಚಿಮ ಬಂಗಾಳದ ಪೊಲೀಸ್ ತರಬೇತಿ ಶಾಲೆ ಇತರ ವಿಭಾಗದಲ್ಲಿ ಗೆದ್ದಿದೆ. ಹರಿಯಾಣ ಪೊಲೀಸರು ಮತ್ತು ರಾಜಸ್ಥಾನ ಪೊಲೀಸ್ ಮತ್ತು ತರಬೇತಿ ಶಾಲೆಗಳ ವಲಯವು ವಿಜೇತರೆಂದು ಘೋಷಿಸಲ್ಪಟ್ಟರೆ, ಈಶಾನ್ಯ ವಲಯದಲ್ಲಿ ಅಸ್ಸಾಂ ಪೊಲೀಸ್ ತರಬೇತಿ ಕಾಲೇಜು ಮತ್ತು ಮೇಘಾಲಯ ಪೊಲೀಸ್ ತರಬೇತಿ ಶಾಲೆಗಳು ವಿಜೇತರಾಗಿ ಹೊರಹೊಮ್ಮಿದವು. ರಾಷ್ಟ್ರಮಟ್ಟದ ವಿಜೇತರು 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆಯುತ್ತಾರೆ. ವಲಯ ವಿಜೇತರು ತಲಾ 2 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ವಿಜೇತ ತರಬೇತಿ ಸಂಸ್ಥೆಗಳ ಮುಖ್ಯಸ್ಥರಿಗೆ ಕೇಂದ್ರ ಗೃಹ ಮಂತ್ರಿಗಳು ಡಿಸ್ಕ್ ಅನ್ನು ನೀಡುತ್ತಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಲ್ಲಾಸಭೆ: ಉಸ್ತುವಾರಿ ಸಚಿವರಿಂದ ವಿವಿಧ ನಿರ್ಧಾರಗಳ ಪ್ರಕಟಣೆ

0

ಫೆಬ್ರವರಿ ಮಾಹೆಯಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೋನ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದೆ. ಮಾರ್ಚ್ 22 ಮತ್ತು 23ರಂದು ನಡೆಸಲು ಜಾತ್ರಾ ಸಮಿತಿಯು ನಿರ್ಧರಿಸಿದೆ.
ಸೋಂಕಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಂದಿನ ಸ್ಥಿತಿಗಳನ್ನಾಧರಿಸಿ ಜಾತ್ರೆ ನಡೆಸಲು ಕ್ರಮ ವಹಿಸಲಾಗುವುದು. ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ ಹೊರಗಿನ ಊರುಗಳಿಂದ ಭಕ್ತಾಧಿಗಳ ಆಗಮಿಸದಂತೆ ನಿಯಂತ್ರಿಸಿ, ಸಮಿತಿಯವರು ಮಾತ್ರ ಸಾಂಕೇತಿಕವಾಗಿ ಆಚರಿಸಲು, ನಿಯಂತ್ರಣದಲ್ಲಿದ್ದರೆ ಅಂಗಡಿ, ಮುಂಗಟ್ಟು, ಸ್ಟಾಲ್ ಮತ್ತು ಎಕ್ಸಿಬಿಷನ್‍ಗಳಿಗೆ ಅವಕಾಶವಿಲ್ಲದಂತೆ ಹಾಗೂ ಕಡಿಮೆಯಾಗಿದ್ದರೆ ಸಹಜವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಈ ನಿರ್ಣಯಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೊರೊನಾ ನಿಯಂತ್ರಣ, ಮಾರಿಕಾಂಬ ಜಾತ್ರೆ ಮುಂತಾದ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸೋಂಕಿನ ದರ 11%ರಷ್ಟಿರುವುದನ್ನು ಗುರುತಿಸಲಾಗಿದೆ. ನಗರದಲ್ಲಿ ಈ ಸೋಂಕು ಹೆಚ್ಚಾಗಿದೆ. 45 ಶಾಲಾ ಕಾಲೇಜುಗಳ 208 ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಈ ಸಂಬಂಧ ಅಗತ್ಯ ಕ್ರಮವಹಿಸಲು ಜಿಲ್ಲೆಯ ಸಚಿವರು, ಸಂಸದರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಂತೆಯೇ ಶಿವಮೊಗ್ಗ ನಗರದ 1ರಿಂದ 9ರವರೆಗಿನ ಎಲ್ಲಾ ಶಾಲೆಗಳನ್ನು ಬುಧವಾರ, ಗುರುವಾರ ಹಾಗೂ ಶುಕ್ರವಾರಗಳಂದು ರಜಾ ಘೋಷಿಸಲಾಗಿದೆ. ಈ ಕ್ರಮವು ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆಯುವ ಮಾನ್ಯ ಮುಖ್ಯಮಂತ್ರಿಗಳ ಸಭೆಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಶಿವಮೊಗ್ಗ ನಗರದ 1ರಿಂದ 9ರವರೆಗಿನ ಎಲ್ಲಾ ಶಾಲೆಗಳನ್ನು ಬುಧವಾರ, ಗುರುವಾರ ಹಾಗೂ ಶುಕ್ರವಾರಗಳಂದು ರಜಾ ಘೋಷಿಸಲಾಗಿದೆ. ಇದರೊಂದಗೆ ಸರ್ಕಾರವು ಈಗಾಗಲೇ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಎಂದಿನಂತೆ ರಜೆಗಳು ಇರಲಿವೆ ಎಂದರು.
ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ವಯೋಮಾನದ ಸುಮಾರು 2ಲಕ್ಷ ನಾಗರೀಕರಿದ್ದು, ಅವರೆಲ್ಲರೂ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯುವಲ್ಲಿ ಉದಾಸೀನ ಮಾಡದಂತೆ ಮನವಿ ಮಾಡಿರುವ ಸಚಿವರು ಜನಜಾಗೃತಿಗಾಗಿ ಲಸಿಕಾ ಅಭಿಯಾನ ನಡೆಸಲು ಕ್ರಮವಹಿಸಲಾಗುವುದು ಎಂದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಬೀದಿದೀಪ ವ್ಯವಸ್ಥೆಯಲ್ಲಿ ದೋಷವಿದ್ದು, ಮುಂದಿನ ಒಂದು ವಾರದೊಳಗಾಗಿ ಸರಿಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಸಚಿವರು, ಬೆಳಕಿಗೆ ಅಡಚಣೆ ಮಾಡುವ ಮರದ ರೆಂಬೆಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಅವರು, ನಗರದಲ್ಲಿ ಅವ್ಯಾಹತವಾಗಿರುವ ಮಾದಕ ದ್ರವ್ಯ ಗಾಂಜಾ ನಿಯಂತ್ರಣಗೊಳಿಸುವಲ್ಲಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
ಭಾನುವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿನ ಎಲ್ಲಾ ಶಾಲೆಗಳಿಗೆ ಆಯಾ ತಾಲೂಕಿನ ಕ್ಷೇತ್ರ ಸಂಪನ್ಮೂಲ ಶಿಕ್ಷಕರು ಪ್ರತಿ ಶಾಲೆಗೆ ಭೇಟಿ ನೀಡಿ ದೈನಂದಿಗೆ ಪ್ರಗತಿ ವರದಿ ನೀಡುವಂತೆ ಸೂಚಿಸಲಾಗಿದೆ. ಅಂತೆಯೇ ಪದವಿ ಪೂರ್ವ ಹಾಗೂ ಸ್ಮಾತಕ-ಸ್ನಾತಲೋತ್ತರ ಪದವಿ ಕಾಲೇಜುಗಳ ವರದಿಯನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಲ್ಲೂ ಟಾಸ್ಕ್‍ಫೋರ್ಸ್ ಸಮಿತಿಗಳಿದ್ದು, ಅವುಗಳಿಂದಲೂ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಚನ್ನಬಸಪ್ಪ, ಜ್ಞಾನೇಶ್ವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್‍ಸುರಗೀಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಲಾಕ್ ಡೌನ್ ಬೇಡ- ಪ್ರತಾಪ್ ಸಿಂಹ

0

ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ. ಆದರೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಅಂತಹ ಕಠಿಣ ನಿಯಮ ಜಾರಿ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ” ಸಂಕಷ್ಟದಲ್ಲೂ ಜನರು ಜೀವ ಉಳಿಸಿಕೊಂಡಿದ್ದಾರೆ. ಈಗಾಗಲೇ ಜೀವನ ದುರಸ್ಥ ವಾಗಿದೆ. ಯಾವುದೇ ಕಾರಣಕ್ಕೂ ಲಾಕ್ಡೌನ್ ಜಾರಿ ಮಾಡಬಾರದು. ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಬೇಕು. ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಮೊದಲ ಅಲೆಯಲ್ಲಿ ಆಸ್ಪತ್ರೆ ಸಮಸ್ಯೆ, ಎರಡನೇ ಅಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಕೊರತೆ ಎದುರಾಗಿತ್ತು. ಇದೀಗ ಎಲ್ಲ ಸಮಸ್ಯೆ ಬಗೆಹರಿದಿದೆ. ಸಂಕಷ್ಟದ ಕಾನೂನು ಜಾರಿ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ಬೇಡ” ಎಂದು ತಮ್ಮದೇ ಪಕ್ಷದ ಸರ್ಕಾರವನ್ನು ಕೋರಿದ್ದಾರೆ.

ಮೇಕೆದಾಟು ಪಾದಯಾತ್ರೆ ಬಂದೋಬಸ್ತ್ ಗೆ ತೆರಳಿದ್ದ ಪೊಲೀಸರಿಗೆ ಸೋಂಕು ತಗಲಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ” ಮೇಕೆದಾಟು ಪಾದಯಾತ್ರೆ ಬೇಳೆ ಮುಖ್ಯಮಂತ್ರಿಗಳೇ ಮನವಿ ಮಾಡಿದ್ದರು. ಪಾದಯಾತ್ರೆಗೆ ಸೂಕ್ತ ಕಾಲ ಇದಲ್ಲ ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್ ಪಕ್ಷದವರು ದೊಡ್ಡ ಜಾತ್ರೆ ಮಾಡಿದರು. ಮುಂದೆಯಾದರೂ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುದ್ದಿ ಸಾಲು

0

ಲಸಿಕೆ ಅಭಿಯಾನಕ್ಕೆ ಒಂದು ವರ್ಷ ಸಂದಿದೆ.
ವೈದ್ಯರು, ದಾದಿಯರು,ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಅಭಿನಂದನೆ.

ಉಸಿರಾಟದ ತೊಂದರೆಗೊಳಗಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಆರೋಗ್ಯಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮುಂಬೈ ಸ್ಫೋಟ( 1993)ದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಲೀಂ ಘಾಜಿ ಪಾಕಿಸ್ಯಾನದ ಕರಾಚಿಯಲ್ಲಿ ಮೃತಪಟ್ಟಿದ್ದಾನೆ. ಮುಂಬೈ ಪೋಲಿಸರಿಗೆ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಪಾತಕಿಯ ಮರಣವನ್ನ ಮುಂಬೈ ಪೋಲಿಸ್ ಮೂಲಗಳು ಧೃಡಪಡಿಸಿವೆ.

ಕಾಬೂಲ್ ನಲ್ಲಿ ತಾಲಿಬಾನಿಗಳು ಸಂಗೀತ ವಾದ್ಯಗಳ ಮಳಿಗೆಗೆ ನುಗ್ಗಿ ಎಲ್ಲ ವಾದ್ಯಗಳನ್ನೂ ಸುಟ್ಟು ಹಾಕಿರುವ ಘಟನೆ ವರದಿಯಾಗಿದೆ. ಸಂಗೀತ ಕಲಿಕೆ ತಾಲಿಬಾನಿಗಳ ಪ್ರಕಾರ ಧರ್ಮ ವಿರೋಧಿಯಂತೆ.

ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದ ನಂತರ ಕುವೆಂಪು ವಿವಿ ಜ.17 ರಿಂದ 21 ರವರೆಗೆ
ಕ್ಯಾಂಪಸ್ ಗೆ ಒಂದುವಾರ ರಜೆ ಘೋಷಿಸಿದೆ.

ದೇಶದಲ್ಲಿನ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಕರ್ನಾಟಕದ್ದೇ ಸಿಂಹಪಾಲು. ಹೆಮ್ಮೆ ಪಡುವ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಲಸಿಕೆ ಹಾಕಿಸಿ ಮಕ್ಕಳನ್ನ ಮೂರನೇ ಅಲೆಯಿಂದ ರಕ್ಷಿಸಿ

0

ರಾಜ್ಯದಲ್ಲಿ ಮೂರನೇ ಅಲೆ ಮಕ್ಕಳ ಮೇಲೆ ದಾಳಿಮಾಡುತ್ತದೆ ಎಂಬ ಊಹೆ ಇತ್ತು. ಆದರೆ ಈಗ, ರಾಜ್ಯದ ಮಕ್ಕಳಲ್ಲಿ ಸೋಂಕು ಹೆಚ್ಚು ಕಂಡುಬರುತ್ತಿರುವುದು ನಿಜವಾದರೂ ಒಟ್ಟಾರೆ ಪರೀಕ್ಷೆಗೆ ಹೋಲಿಸಿದರೆ ಇದು ಗಣನೀಯವಾಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ದಾಖಲಾದ 3200 ಪ್ರಕರಣಗಳಲ್ಲಿ 500 ಮಂದಿ ಮಕ್ಕಳು ಸೋಂಕಿತ ರಾಗಿದ್ದಾರೆ. ನಿಜವೇನೆಂದರೆ, ಈಗ ನಡೆಯುತ್ತಿರುವ ಪರೀಕ್ಷೆಗಳಲ್ಲಿ ಹೆಚ್ಚು ಮಕ್ಕಳದ್ದೇ ಹೆಚ್ಚಾಗಿವೆ. ಅಷ್ಟಾದರೂ ಗಣನೀಯ ಪ್ರಮಾಣದಲ್ಲಿ ಕೇಸುಗಳು ದಾಖಲಾಗುತ್ತಿಲ್ಲ.

ಶಾಲೆಗಳು, ಹಾಸ್ಟೆಲ್ ಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳು ನಡೆಯುತ್ತಿದೆ. ಅಲ್ಲಿ ಕೆಲವು ಪ್ರಕರಣಗಳು ಕಂಡು ಬರುತ್ತಿವೆ. ಹಾಗಂತ ಹೆಚ್ಚಿನವರಿಗೆ ಯಾವುದೇ ಲಕ್ಷಣಗಳು ಇರುವುದಿಲ್ಲ. ಕೆಲವು ಮಂದಿಗಳಿಗೆ ಮಾತ್ರ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ.

ರಾಜ್ಯ ಕೋವಿಡ್-19 ವಾರ್ ರೂಮ್ ಮಾಹಿತಿ ಪ್ರಕಾರ, ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬರುವುದಿಲ್ಲ. ಮಕ್ಕಳಲ್ಲಿ ಸೋಂಕು ಕಡಿಮೆಯಾಗಿದೆ. ಪಾಸಿಟಿವಿಟಿ ತಾಳೆ ಮಾಡಿದಾಗಲೂ ಇದು ಸ್ಪಷ್ಟವಾಗಿದೆ.

ಲಸಿಕೆ ನೀಡದ ಕಾರಣ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಗುರಿಯಾಗಿ ಸಬಹುದು ಎಂದು ಹಲವಾರು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರಸ್ತುತ ಆರಂಭವಾಗಿರುವ ಅಲೆಯಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಕಡಿಮೆ ಸಂಖ್ಯೆಗೆ ಒಳಗಾಗಿದ್ದಾರೆ.

ಕೋವಿಡ್ ವಾರ್ ರೂಮ್ ವರದಿಯ ಪ್ರಕಾರ, ಮೊದಲ ಅಲೆಯಿಂದ ಇಲ್ಲಿಯವರೆಗೆ, ರಾಜ್ಯದಲ್ಲಿ 0-9 ವರ್ಷದೊಳಗಿನ 98,286 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ 10 ರಿಂದ 19 ವಯಸ್ಸಿನ 2,53,154 ರೋಗಿಗಳಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಇತರ ವಯೋಮಾನದವರಿಗೆ ಹೋಲಿಸಿದರೆ ಈ ಎರಡು ವಯೋಮಾನದಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. 0- 9 ವಯೋಮಾನದವರಲ್ಲಿ 67 ಹಾಗೂ 10 ರಿಂದ 19 ವಯಸ್ಸಿನ ವ್ಯಾಪ್ತಿಯಲ್ಲಿ 94 ಸಾವುಗಳು ಸಂಭವಿಸಿವೆ.