Sunday, February 15, 2026
Sunday, February 15, 2026
Home Blog Page 1756

ಹೋಂ ಐಸೋಲೇಷನ್ : ನಿಮಗಾಗಿ ಮಾಹಿತಿ

0

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದು ಹೋಂ ಐಸೋಲೇಷನ್ ನಲ್ಲಿರುವ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.

ಹೋಂ ಐಸೋಲೇಷನ್ ನಲ್ಲಿ ಇರುವವರ ಪೈಕಿ ಬೆಂಗಳೂರು ನಗರದಲ್ಲೇ 1.94 ಲಕ್ಷ ಜನ ಸೋಂಕಿತರು ಮನೆಯಲ್ಲಿ ಆಗಿದ್ದು, ಈ ಮೂಲಕ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ತುಮಕೂರು ಎರಡನೇ ಸ್ಥಾನ ಧಾರವಾಡ ಮೂರನೇ ಸ್ಥಾನ ಮತ್ತು ಮಂಡ್ಯ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 5.10 ರಷ್ಟು ಜನರು ಕೋವಿಡ್ ನಿಂದಾಗಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಹೋಂ ಐಸೋಲೇಷನ್ ನಲ್ಲಿರುವವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಿಟ್ ನೀಡುವ ಕುರಿತು ಚಿಂತನೆ ನಡೆಸಿದೆ. ಮುಂದಿನ ವಾರದೊಳಗಾಗಿ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸಭೆಯಲ್ಲಿ ಹಸಿರು ನಿಶಾನೆ ನೀಡಿದ್ದಾರೆ.

ಸರ್ಕಾರ ನೀಡುವ ಐಸೊಲೇಷನ್ ಕಿಟ್ ನಲ್ಲಿ ತಜ್ಞರು ಸೂಚಿಸಿರುವ ಐದು ಬಗೆಯ ಮಾತ್ರೆ ಒಂದುಬಗೆಯ ಸಿರಪ್ ಇದೆಯೆಂದು ಮೂಲಗಳು ತಿಳಿಸಿವೆ.

ಐಸೋಲೇಷನ್ ಕುರಿತಂತೆ ಆರೋಗ್ಯ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಕೋವಿಡ್ ಸೋಂಕಿನಿಂದಾಗಿ ಮನೆಯಲ್ಲಿ ಆರೈಕೆಯಲ್ಲಿರುವವರು ಸೋಂಕಿನ ಯಾವುದೇ ಲಕ್ಷಣ ಹೊಂದಿಲ್ಲದಿದ್ದರೆ ಏಳು ದಿನಗಳ ಬಳಿಕ ಗುಣಮುಖ ಎಂದು ಪರಿಗಣಿಸಬಹುದಾಗಿದೆ ಹಾಗೂ ಅಂತಹ ಸೋಂಕಿತರಿಗೆ ಮತ್ತೊಮ್ಮೆ ಪರೀಕ್ಷೆಗಳ ಆಗುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ಸೂಚಿಸಿದೆ.

ಹೋಂ ಐಸೋಲೇಷನ್ ಸೋಂಕಿತರಿಗೆ ಸಂಬಂಧಪಟ್ಟ ಆರೋಗ್ಯ ಕೇಂದ್ರದ ವ್ಯಾಪ್ತಿಯ ವೈದ್ಯರು ಗುಣಮುಖ ಎಂದು ಪ್ರಮಾಣ ಪತ್ರ ನೀಡಬೇಕು ಎಂದು ಸಹ ಆರೋಗ್ಯ ಇಲಾಖೆ ಸೂಚಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಟೆಸ್ಟ್ ಪಂದ್ಯಗಳಿಗೆ ರಾಹುಲ್ ಸೂಕ್ತ ಸಾರಥಿ-ಸಂಜಯ್ ಜಗದಾಳೆ

0

‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ’ “ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆಯವರು” ‘K.L ರಾಹುಲ್’ ಅವರಿಗೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪಟ್ಟ ಅಲಂಕರಿಸುವ ಅರ್ಹತೆ ಇದೆ ಎಂದು ಜಗದಾಳೆ ಅಭಿಪ್ರಾಯಪಟ್ಟಿದ್ದಾರೆ.
ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಬಲ್ಲ ಜವಾಬ್ದಾರಿ ಹೊರಲು ಸಾದ್ಯ ಇರುವವರಿಗೆ ಮಾತ್ರ ಮುಂದಿನ ನಾಯಕತ್ವದ ಹೊಣೆ ನೀಡಬೇಕು, ಈ ದೃಷ್ಟಿಯಲ್ಲಿ ಯೋಚನೆ ನಡೆಸಿದರೆ K.L ರಾಹುಲ್ ಸೂಕ್ತವಾದ ಆಯ್ಕೆ ಎಂದು ಜಗದಾಳೆ ತಿಳಿಸಿದರು.
ಆದರೆ,”BCCI” ಮಂಡಳಿಯು ಮುಂದಿನ ನಾಯಕ ಯಾರಾಗಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುಂಚೆಯೇ ನಾಯಕನಾಗಿ ವಿರಾಟ್ ಕೊಹ್ಲಿ ಹಾಗೆಯೇ ಉಪನಾಯಕನಾಗಿ ರೋಹಿತ್ ಶರ್ಮಾ ಅವರನ್ನು ನೇಮಕಮಾಡಲಾಗಿತ್ತು.ಆದರೆ,ಗಾಯದ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಶರ್ಮಾರವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಿರಲಿಲ್ಲ.
ಆದರೆ,ವಿರಾಟ್ ಕೊಹ್ಲಿ ಅವರು ಎರಡನೇ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ನಲ್ಲಿ ವಿಶ್ರಾಂತಿ ಪಡೆದಿದ್ದಾಗ K.L ರಾಹುಲ್ ತಂಡವನ್ನು ಮುನ್ನಡೆಸಿದ್ದರು.ಆದ್ದರಿಂದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯಾಗಿರುವ ಸಂಜಯ್ ರವರು ಭಾರತ ತಂಡವನ್ನು ದೀರ್ಘಕಾಲದವರೆಗೆ ಯಶಸ್ವಿಯಾಗಿ ಮುನ್ನಡೆಸಲು K.L ರಾಹುಲ್ ಅವರಿಗೆ ಸಾಧ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಯದ ಹಾದಿಯಲ್ಲಿ ಸ್ಪೇನ್ ನ ನಡಾಲ್ ಮತ್ತು‌ ಜಪಾನ್ ನ ಒಸಾಕ

0

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ನ ರಫೆಲ್ ನಡಾಲ್ ಮತ್ತು ಜಪಾನಿನ ನವೊಮಿ ಒಸಾಕ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೊದಲ ಸವಾಲನ್ನು ಸುಲಭವಾಗಿ ಎದುರಿಸಿದ್ದಾರೆ.
ರಾಡ್ ಲೇವರ್ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 24 ವರ್ಷದ ಆಟಗಾರ್ತಿ ಪ್ರಾರಂಭದಲ್ಲೇ ಸತತ 5 ಗೇಮ್ ಗಳನ್ನ ಗೆದ್ದುಕೊಂಡು ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.
ಲಸಿಕೆ ಮತ್ತು ವೀಸಾ ಪ್ರಕರಣದಿಂದಾಗಿ ನೊವಾಕ್ ಜೊಕೊವಿಚ್ ತವರಿಗೆ ವಾಪಸಾಗಿದ್ದರು.ರೋಜರ್ ಫೆಡರರ್ ಈ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.
ಹಾಗಾಗಿ ದಾಖಲೆಯ 21ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಡಾಲ್ ಸುಲಭವಾಗಿ ಎದುರಾಳಿಯನ್ನು ಮಣಿಸಿದರು.
ಹೀಗಾಗಿ ನಡಾಲ್ ಹಾದಿ ಸುಗಮವಾಗಲಿದೆ ಆರನೇ ಶ್ರೇಯಾಂಕದ ನಡಾಲ್ 34 ವಿನ್ನರ್ ಗಳ ಮೂಲಕ ಎದುರಾಳಿಯನ್ನು ಸೋಲಿಸಿದರು
ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಒಸಾಕ 6-3,6-3,ರಲ್ಲಿ ಕೊಲಂಬಿಯಾ ಕಮೀಲಾ ಒಸೋರಿಯೊ ವಿರುದ್ಧ ಜಯ ಗಳಿಸಿದರು ಹಾಗೆಯೇ ರಫೆಲ್ ನಡಾಲ್ 6-1,6-4,6-2 ರಲ್ಲಿ ಅಮೆರಿಕಾದ ಮಾರ್ಕೊಸ್ ಗಿರಾನ್ ಅವರಿಗೆ ಸೋಲುಣಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದಲ್ಲಿ ನ್ಯೂರೋ ಭಾರತ್ ಆಸ್ಪತ್ರೆ ಲೋಕಾರ್ಪಣೆ.

0

ವೇಗವಾಗಿ ಬೆಳೆಯುತ್ತಿರುವಂತಹ ಶಿವಮೊಗ್ಗ ನಗರಕ್ಕೆ ಎಲ್ಲ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ಆಸ್ಪತ್ರೆಗಳು ಪ್ರಾರಂಭವಾಗಿವೆ. ಆದರೆ ನರರೋಗ, ಮನೋರೋಗ ಹಾಗೂ ಅಪಘಾತಕ್ಕೆ ಸಂಬಂಧಿಸಿದಂತಹ ಆಸ್ಪತ್ರೆಯ ಅಗತ್ಯವಿತ್ತು. ಅಂತಹದ್ದೊಂದು ಆಸ್ಪತ್ರೆಯಾಗಿ ನ್ಯೂರೋ ಭಾರತ್ ಆಸ್ಪತ್ರೆ ಕಾರ್ಯ ಆರಂಭಿಸಿರುವುದು ಮಲೆನಾಡಿಗರಲ್ಲಿ ಸಂತಸ ತಂದಿದೆ.

ಮಲೆನಾಡಿನ ಪ್ರಖ್ಯಾತ ನರರೋಗ ತಜ್ಞರಾದ ಡಾ.ಎ.ಶಿವರಾಮ್ ಕೃಷ್ಣ ಅವರು ನೂತನವಾಗಿ ಪ್ರಾರಂಭಿಸಿರುವ
ನ್ಯೂರೋ ಭಾರತ್ ಆಸ್ಪತ್ರೆಯನ್ನು ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಉದ್ಘಾಟಿಸಿದರು.

“ನ್ಯೂರೋ ಭಾರತ್ ಆಸ್ಪತ್ರೆ ಅವಶ್ಯಕತೆ ಇರುವಂತ ರೋಗಗಳಿಗೆ ಸರಿಯಾದ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯಾಗಲಿ ಎಂದು ಕೆ.ಎಸ್.ಈಶ್ವರಪ್ಪ ಅವರು ಶುಭ ಕೋರಿದರು. ಶಿವಮೊಗ್ಗ ನಗರ ಇಂದು ಆಸ್ಪತ್ರೆಗಳ ಒಂದು ದೊಡ್ಡ ಗುಂಪು ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಿಲ್ಲೆಗಳ ರೋಗಗಳಿಗೆ ಸರಿಯಾದ ಚಿಕಿತ್ಸೆ ಸಿಗದ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಬರುತ್ತಾರೆ. ಅಷ್ಟರಮಟ್ಟಿಗೆ ಶಿವಮೊಗ್ಗ ಎಂದು ಪ್ರಖ್ಯಾತಿ ಆಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಲಿ ಎಂದು ನಾನು ಹೇಳುವುದಿಲ್ಲ. ಇರುವ ಆಸ್ಪತ್ರೆಗಳು ಬರುವಂತಹ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಲಿ” ಎಂದು ಸಚಿವರು ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿದರು.

ವಿಧಾನ ಪರಿಷತ್ತಿನ ನೂತನ ಸದಸ್ಯ ಡಿ.ಎಸ್.ಅರುಣ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ “ಪ್ರಾರಂಭದಲ್ಲಿ ಡಾ.ಎ.ಶಿವರಾಮ್ ಕೃಷ್ಣ ಅವರು ಈ ವಯಸ್ಸಿನಲ್ಲಿ ಆಸ್ಪತ್ರೆಯ ಪ್ರಾರಂಭಕ್ಕೆ ಏಕೆ ಕೈಹಾಕಿದ್ದಾರೆ ಎಂದು ಹೆದರಿಕೆಯಾಗಿತ್ತು ಹಾಗೂ ಡಾ. ಶಿವರಾಮ್ ಕೃಷ್ಣ ಅವರ ಕಾರ್ಯವೈಖರಿ ಹಾಗೂ ಇಡೀ ಕರ್ನಾಟಕದಲ್ಲಿ ಪ್ರಾಮಾಣಿಕ ವೈದ್ಯರ ಪಟ್ಟಿಯಲ್ಲಿ ಯಾರಾದರೂ ಇದ್ದಾರೆ ಎಂದರೆ ಅವರು ಡಾ.ಶಿವರಾಮ್ ಕೃಷ್ಣ ಅವರು ಮಾತ್ರ” ಎಂದು ಪ್ರಶಂಶೆಯ ನುಡಿಗಳನ್ನ ನುಡಿದರು.

ನರರೋಗ ತಜ್ಞರಾದ ಡಾ.ಶಿವರಾಮ್ ಕೃಷ್ಣ ಅವರು ಮಾತನಾಡಿ “ಶಿವಮೊಗ್ಗ ನಗರ ಎಲ್ಲರಿಗೂ ತಿಳಿದಂತೆ ಕಳೆದ ಹತ್ತು ಹದಿನೈದು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಮೆದುಳು ನರರೋಗ ಹಾಗೂ ಮನೋರೋಗ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಮಾಡಬೇಕು. ಈ ರೀತಿಯ ಆಸ್ಪತ್ರೆಯನ್ನು ನಾವು ಕಾಣುವುದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ, ರಾಷ್ಟ್ರಕ್ಕೆ ಒಂದು ಮಾದರಿಯಾದ ಆಸ್ಪತ್ರೆಯಾಗಿದೆ. ಅಂತಹ ಚಿಕ್ಕದೊಂದು ಆಸ್ಪತ್ರೆಯನ್ನು ಶಿವಮೊಗ್ಗದಲ್ಲಿ ಮಾಡಬೇಕು ಎಂಬ ಉದ್ದೇಶದಿಂದ ನ್ಯೂರೋ ಭಾರತ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.

ನ್ಯೂರೋ ಭಾರತ ಆಸ್ಪತ್ರೆಯಲ್ಲಿ ಮೆದುಳು ಮತ್ತು ನರರೋಗ ಶಸ್ತ್ರತಜ್ಞರು, ನ್ಯೂರೋ ಫಿಸಿಷನ್, ಮನೋರೋಗ ತಜ್ಞರು ಕಾರ್ಯ ನಿರ್ವಹಿಸಲಿದ್ದಾರೆ. ಮೆದುಳಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು ರೋಗಿಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಸೌಲಭ್ಯವಿದೆ. ನ್ಯೂರೋಸರ್ಜನ್ ಗಳಾದ ಡಾ.ಸಾತ್ವಿಕ್ ಮತ್ತು ಡಾ.ಶಶಾಂಕ್ ಅವರು ಕಾರ್ಯ ನಿರ್ವಹಿಸಲ್ಲಿದ್ದಾರೆ. ಮಿದುಳು ಮತ್ತು ನರ ರೋಗಗಳ ಚಿಕಿತ್ಸೆಗೆ ನರರೋಗ ತಜ್ಞರಾದ ಡಾ. ಶಿವರಾಮ್ ಕೃಷ್ಣ ಹಾಗೂ ಡಾ.ಕುಮಾರ್, ಮನೋರೋಗ ತಜ್ಞರಾಗಿ ಡಾ. ಪ್ರಮೋದ್ ಅವರು ನ್ಯೂರೋ ಭಾರತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿದ್ದಾರೆ ಎಂದು ಹಿರಿಯ ನರರೋಗ ತಜ್ಞರಾದ ಡಾ. ಶಿವರಾಮ್ ಕೃಷ್ಣ ಅವರು ತಿಳಿಸಿದರು.

ಶ್ತೀಮತಿ ಮಾನಸ ಶಿವರಾಮಕೃಷ್ಣನ್ ಕಾರ್ಯಕ್ರಮ ನಿರೂಪಿಸಿದರು.
ಡಾ.ಪಿ.ಜಿ.ಸಾತ್ವಿಕ್ ವಂದನೆ ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ.ಎನ್.ಎಲ್.ನಾಯಕ್, ಮುಜೀಬ್, ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆಯ ಮೇಯರ್ ಸುನಿತಾ ಅಣ್ಣಪ್ಪ, ಕಾಂತೇಶ್, ಗಿರಿಯಪ್ಪ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ದಬಾಂಗ್ ಅಗ್ರಸ್ಥಾನ ಜೈಂಟ್ಸ್-ಮುಂಬಾ ಟೈ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಮಂಗಳವಾರ 4 ತಂಡಗಳ ನಡುವೆ ನಡೆಯಿತು.

ಪೈರೇಟ್ಸ್ ವಿರುದ್ಧ ಡೆಲ್ಲಿಗೆ ಜಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ದಬಾಂಗ್ ಡೆಲ್ಲಿ (32) ಮತ್ತು ಪಟ್ನಾ ಪೈರೇಟ್ಸ್ (29) ತಂಡಗಳ ನಡುವೆ ಪಂದ್ಯ ನಡೆಯಿತು. ದಬಾಂಗ್ ಡೆಲ್ಲಿ ವಿರುದ್ಧ ಪಟ್ನಾ ಹೀನಾಯ ಸೋಲು ಅನುಭವಿಸಿತು.
ಆರ್ಧವಿರಾಮದ ಹೊತ್ತಿಗೆ ಡೆಲ್ಲಿ 19-10 ರಿಂದ ಮುನ್ನಡೆಯಲ್ಲಿತ್ತು.ಆಲ್ ರೌಂಡರ್ ವಿಜಯ್ ಮತ್ತು ಸಂದೀಪ್ ನರ್ವಾಲ್ ಅವರ ಮಿಂಚಿನ ದಾಳಿಯ ಆಟದಿಂದ ದಬಾಂಗ್ ಡೆಲ್ಲಿ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 42 ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿದೆ.

ಜಯಂಟ್ಸ್ ಮತ್ತು ಮುಂಬಾ ತಂಡಗಳ ನಡುವೆ ಪಂದ್ಯ ಡ್ರಾ
ಗುಜರಾತ್ ಜಯಂಟ್ಸ್ (24) ಮತ್ತು ಯು.ಮುಂಬಾ(24) ತಂಡಗಳ ನಡುವೆ ಪಂದ್ಯ ನಡೆಯಿತು. ಎರಡು ತಂಡಗಳ ಜಿದ್ದಾಜಿದ್ದಿಯ ಹೋರಾಟ ನಡೆಸಿ ಸಮಬಲದೊಂದಿಗೆ ಟೈ ಮಾಡಿಕೊಂಡಿವೆ.
ಮೊದಲಾರ್ಧದಲ್ಲಿಯೇ ಗುಜರಾತ್ ತಂಡವು 13-10 ರಿಂದ ಮುನ್ನಡೆಯಲ್ಲಿತ್ತು.ಆದರೆ, ಅರ್ಧವಿರಾಮದ ನಂತರ ತಕ್ಕ ಆಟದ ಪ್ರದರ್ಶನ ನೀಡಿದ ಮುಂಬಾ ತಂಡವು 24-24 ರಿಂದ ಪಂದ್ಯ ಟೈ ಮಾಡಿಕೊಂಡಿತು.
ಡಿಸೆಂಬರ್ 22 ರಿಂದ ಜನವರಿ 19 ದಿನಾಂಕದ ವರೆಗೆ ಮೊದಲ ಹಂತದಲ್ಲಿ ಒಟ್ಟು 65 ಪಂದ್ಯಗಳು ನಡೆದಿದ್ದು. ಎಲ್ಲಾ ತಂಡಗಳ ಆಟಗಾರರು ತಮ್ಮ ತಮ್ಮ ಪ್ರತಿಭೆ ಹಾಗೂ ಚಾಣಾಕ್ಷ ತನದ ಆಟದ ಪ್ರದರ್ಶನ ತೋರಿ ನಡೆದ ಪಂದ್ಯಗಳಲ್ಲಿ ಗೆಲುವಿಗೆ ಕಾರಣರಾಗಿರುತ್ತಾರೆ.ಮೊದಲ ಹಂತದ ಪಂದ್ಯಾವಳಿಯು ಇಂದು ಮುಕ್ತಾಯಗೊಳ್ಳಲಿದೆ.
ಎರಡನೇ ಹಂತದ ಪಂದ್ಯಗಳು ಜನವರಿ 20 ರಿಂದ ಆರಂಭವಾಗಲಿದೆ.ಮೊದಲ ಹಣಾಹಣಿಯಲ್ಲಿ ತಮಿಳ್ ತಲೈವಾಸ್ ಮತ್ತು ಗುಜರಾತ್ ಜಯಂಟ್ಸ್ ಮುಖಾಮುಖಿಯಾಗಲಿವೆ.ಹಾಗೆಯೇ ಎರಡನೇ ಪಂದ್ಯವು ಬೆಂಗಳೂರು ಬುಲ್ಸ್ ಮತ್ತು ಪಟ್ನಾ ಪೈರೇಟ್ಸ್ ತಂಡಗಳು ಕಣಕ್ಕಿಳಿಯಲಿವೆ.ಎಂದು ಪ್ರೊ ಕಬಡ್ಡಿ ಲೀಗ್ ನ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಸಂಸ್ಥೆಯವರು ತಿಳಿಸಿದ್ದಾರೆ.
ಈ ಹಂತದಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿದ್ದು.ಒಟ್ಟಿಗೆ ರೌಂಡ್ ರಾಬಿನ್ ಹಂತದ ಎಲ್ಲ 132 ಪಂದ್ಯಗಳು ಮುಕ್ತಾಯಗೊಳ್ಳಲಿದೆ ನಂತರದಲ್ಲಿ ಫ್ಲೇ ಆಫ್ ಹಾಗೂ ಫೈನಲ್ ನಡೆಯುತ್ತವೆ.ಎಂದು ಪ್ರೊ ಕಬಡ್ಡಿ ಮಂಡಳಿಯು ತಿಳಿಸಿದೆ.

ಇಂದು ಮೊದಲ ಹಂತದಲ್ಲಿ ನಡೆಯಲಿರುವ ಕೊನೆಯ ಪಂದ್ಯಗಳು:
೧. ಹರಿಯಾಣ ಸ್ಟೀಲರ್ಸ್ ಮತ್ತು ಪುಣೇರಿ ಪಲ್ಟನ್
ಸಮಯ:7.30
೨. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತೆಲುಗು ಟೈಟನ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶೇಷಚೇತನರಿಗೆ ತಾಲೂಕು ಹಂತದಲ್ಲೇ ಸ್ಮಾರ್ಟ್ ಕಾರ್ಡ್-ಆರಗ ಜ್ಞಾನೇಂದ್ರ

0

ಸ್ಮಾರ್ಟ್ ಕಾರ್ಡ್ ಪಡೆಯುವ ಉದ್ದೇಶದಲ್ಲಿ ವಿಶೇಷ ಚೇತನರಿಗೆ ತಾಲೂಕು ಕ್ಷೇತ್ರದಲ್ಲೇ ಪ್ರಮಾಣಪತ್ರ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ದೂರವಾಣಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡಿದ್ದಾರೆ.

ಸ್ಮಾರ್ಟ್ ಕಾರ್ಡ್ ಪಡೆಯುವ ಮೊದಲು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಶೇಷಚೇತನರು ಪ್ರಮಾಣಪತ್ರ ಪಡೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಕ್ಕೆ ಜ್ಞಾನೇಂದ್ರ ಅವರು ಕೋಪಗೊಂಡರು.

ವಿಶೇಷ ಚೇತನರನ್ನು ಗೋಳಾಡಿಸುವ ವಿಕೃತ ಮನಸ್ಸಿನಿಂದ ಹೊರಬನ್ನಿ. ತಾಲೂಕು ಕೇಂದ್ರದಲ್ಲಿ ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಶಿಬಿರ ನಡೆಸಿ ಪ್ರಮಾಣ ಪತ್ರ ವಿತರಿಸಿ ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಶಿಬಿರದ ಕುರಿತು ಸಾರ್ವಜನಿಕವಾಗಿ ವ್ಯಾಪಕ ಪ್ರಚಾರ ಮಾಡಬೇಕು ಈ ವಿಷಯವಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿಶೇಷ ಚೇತನರ ಯೋಜನೆ ಪುನರ್ವಸತಿ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು ಎಂದು ಡಿಎಚ್ಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮರೆಯಲಾಗದ ಕಥಕ್ ಮಹಾರಾಜ

0

ಕಥಕ್ ನೃತ್ಯದ ಬಗ್ಗೆ ಕಂಡು ಕೇಳದ ಭಾರತೀಯನಿಲ್ಲ. ಶಾಸ್ತ್ರೀಯ ನೃತ್ಯದ ಆಳವಾದ ಜ್ಞಾನವಿರದಿದ್ದರೂ,
ಕಿಂಚಿತ್ ಅರಿವಿನಿಂದಲಾದರೂ ಆತ ಭರತನಾಟ್ಯವನ್ನು ನೋಡಿಯೂ ಕೂಡ ಇದು ಕಥಕ್ ಅಲ್ಲವೇ ?
ಎಂಬ ಉದ್ಗಾರ ತೆಗೆಯದೇ ಇರಲಾರ. ಕಥಕ್ ನೃತ್ಯ ಇಷ್ಟು ಜನಮಾನ್ಯವಾಗಲು ಕಾರಣರಾದ
ಮೂಲಕೊಂಡಿಯೇ ಇತ್ತೀಚೆಗೆ ನಮ್ಮನ್ನಗಲಿದ ಪಂಡಿತ್ ಬಿರ್ಜು ಮಹಾರಾಜ್ ಅವರು.
ಅವರ ಕಥಕ್ ನೃತ್ಯದ ಬಗೆಗಿನ ಮೋಹ ಅವರನ್ನು ದಿಗ್ಗಜರ ಸಾಲಿನಲ್ಲಿ ನಿಲ್ಲುವ ಘನತೆಯನ್ನು ಕೊಟ್ಟಿತು.
ತಬಲಾ, ಹಾರ್ಮೋನಿಯಂ, ಗೆಜ್ಜೆಯ ಝೇಂಕಾರಗಳ ನಡುವಿನಲ್ಲೇ ಬೆಳೆದ ಬಿರ್ಜು ಮಹಾರಾಜರು
ತಮ್ಮ ಅಂತಿಮಯ ಯಾತ್ರೆಯನ್ನೂ ಕೂಡ ತಮ್ಮ ನೆಚ್ಚಿನ ಹಳೆಯ ಹಿಂದಿ ಗೀತೆಗಳನ್ನು ಹಾಡುತ್ತಲೇ
ಮುಗಿಸಿದರು. ಅವರು ಕಥಕ್ ನೃತ್ಯವನ್ನು ಕೇವಲ ವಿಶ್ವದರ್ಜೆಗೇರಿಸಿದ್ದಷ್ಟೇ ಅಲ್ಲದೆ ಮುಂಬರುವ ಹಲವು
ಪೀಳಿಗೆಗೆ ಅದರ ಸರ್ವಸಾರವನ್ನೂ ಎರೆದು ಹೋದರು. ಅವರೊಬ್ಬ ಉತ್ಕೃಷ್ಟ ನೃತ್ಯಗಾರರಷ್ಟೆ ಅಲ್ಲದೆ
ಅಪ್ರತಿಮ ಕವಿಗಳೂ ಆಗಿದ್ದರು. ‘ಬ್ರಿಜ್‌ಶ್ಯಾಮ್’ ಎಂಬ ಅಂಕಿತದಡಿಯಲ್ಲಿ ಹಲವು ಕವಿತೆಗಳನ್ನೂ
ಬರೆದಿದ್ದರು. ಗಾಯಕರಾಗಿ ಗಾಯನದ ಹಲವು ಆಯಾಮಗಳಲ್ಲಿ ಸಿದ್ದಹಸ್ತರಾಗಿದ್ದರು. ಹಲವು ಪ್ರಕಾರಗಳ
ವಾದ್ಯಗಳನ್ನೂ ನುಡಿಸುತ್ತಿದ್ದರು. ಆದರೆ ಕಥಕ್ ಅವರ ಜೀವನದ ಧ್ಯೇಯವಾಗಿತ್ತು. ಈ ನೃತ್ಯವನ್ನು
ದೇಶ-ವಿದೇಶಗಳಾಚೆ ಪರಿಚಯಿಸುವ ಹೊಣೆಯನ್ನು ಅವರು ಅತ್ಯಂತ ಶ್ರದ್ದೆಯಿಂದ ಸ್ವೀಕರಿಸಿದ್ದರು. ತಮ್ಮ
ಮನಸೆಳೆಯುವ ಪಾದಚಲನೆಗಳು ಹಾಗೂ ಭಾವಾಭಿನಯದಿಂದ ನೋಡುಗರನ್ನು ಕ್ಷಣಾರ್ಧದಲ್ಲಿ
ಮೂಕವಿಸ್ಮಿತಗೊಳಿಸುತ್ತಿದ್ದ ಬಿರ್ಜುರವರು, ತಮ್ಮ ಮೂರನೆಯ ವಯಸ್ಸಿಗೇ ನೃತ್ಯದ ತಾಲೀಮಿನ ಅಂಗಳಕ್ಕೆ
ಹೋಗಿ ಅಲ್ಲಿ ಅಭ್ಯಸಿಸುತ್ತಿದ್ದ ಇತರ ವಿದ್ಯಾರ್ಥಿಗಳೊಂದಿಗೆ ಅಭ್ಯಾಸಕ್ಕೆ ನಿಲ್ಲುತ್ತಿದ್ದರಂತೆ.
ಲಕ್ನೋದಲ್ಲಿ ತಮ್ಮ ಪೂರ್ವಜರ ಮನೆಯಲ್ಲಿ ಬೃಜ್ ಮೋಹನ್‌ನಾಥ್ ಮಿಶ್ರಾ ಹೆಸರಿನಿಂದ ಜನ್ಮತಳೆದ
ಇವರು ಯಾವಾಗ ಬಿರ್ಜು ಆದರೆಂಬುದು ಅವರಿಗೇ ತಿಳಿಯದ ಸಂಗತಿ. ಒಂದು ಸಂದರ್ಶನದಲ್ಲಿ
ಅವರು ಹೇಳಿದ್ದರು “ನಮ್ಮ ಮನೆ ಶೃತಿ, ಸ್ವರ, ಲಯ ತಾಳಗಳ ಸಮುದ್ರದಂತಿತ್ತು. ಏಳು ಪೀಳಿಗೆಯಿಂದ
ಅಲ್ಲಿ ಸಂಗೀತದ ವಿಚಾರವನ್ನು ಹೊರತುಪಡಿಸಿ ಮತ್ಯಾವುದೇ ಮಾತುಕತೆಗಳು ನಡೆದದ್ದೇ ಇಲ್ಲ.
ಸೌಂದರ್ಯೋಪಾಸನೆ, ಸಂಗೀತೋಪಾಸನೆ, ಭಗವಂತನ ಆರಾಧನೆ ಇವಿಷ್ಟೇ ಅಲ್ಲಿಯ
ಜೀವಾಳವಾಗಿದ್ದವು”. ಪ್ರಖ್ಯಾತ ನೃತ್ಯ ಕಲಾವಿದ ಅಚ್ಛನ್ ಮಹಾರಾಜ್‌ರ ಮನೆತನದಲ್ಲಿ ಜನಿಸಿದ ಬಿರ್ಜು
ಮಹಾರಾಜರು ತಮ್ಮ ಏಳನೇಯ ವಯಸ್ಸಿನಲ್ಲಿಯೇ ವೇದಿಕೆಯನ್ನೇರಿ ನೃತ್ಯ ಪ್ರಸ್ತುತಿ ನೀಡಿದ್ದರು. ತಮ್ಮ
ತಂದೆ ಅಚ್ಚನ್ ಮಹಾರಾಜ್, ಚಿಕ್ಕಪ್ಪ ಶಂಭು ಮಹಾರಾಜ್ ಹಾಗೂ ಲಚ್ಛು ಮಹಾರಾಜ್‌ರ ಗರಡಿಯಲ್ಲಿ
ಕಥಕ್ ನೃತ್ಯದ ಸೂಕ್ಷ್ಮತೆಗಳನ್ನು ಅರಿತುಕೊಂಡರು.
ತಮ್ಮ ತಂದೆಯೊಂದಿಗೆ ಹಲವು ವೇದಿಕೆಗಳಲ್ಲಿ ನೃತ್ಯವನ್ನು ಪ್ರದರ್ಶಿಸಿದ ಇವರು, ತಮ್ಮ ಅತ್ಯಂತ ಕಿರಿಯ
ವಯಸ್ಸಿನಲ್ಲಿಯೇ ಅಂದರೆ 13ರ ವಯಸ್ಸಿಗೇ ಅವರನ್ನು ಕಳೆದುಕೊಂಡು ಜೀವನೋಪಾಯಕ್ಕಾಗಿ ದೆಹಲಿಗೆ
ಪ್ರಯಾಣ ಬೆಳೆಸಿದರು. ಅಲ್ಲಿ ಸಂಗೀತ ಭಾರತಿಯಲ್ಲಿ, ಕಥಕ್ ಕೇಂದ್ರದಲ್ಲಿ ಹಾಗೂ ಭಾರತೀಯ ಕಲಾ
ಕೇಂದ್ರಗಳಲ್ಲಿ ನರ್ತನವನ್ನು ಕಲಿಸಲಾರಂಭಿಸಿದರು. ಅವರ ಕಥಕ್ ನೃತ್ಯದ ಬಗೆಗಿನ ಅಪೂರ್ವ ಜ್ಞಾನ
ಹಾಗೂ ಕಲಾತ್ಮಕತೆಗೆ ಮನಸೋತು ಕೇಂದ್ರ ಸರ್ಕಾರ 1998ರಲ್ಲಿ ಮುಖ್ಯ ಉಪನ್ಯಾಸಕರು, ನಂತರದಲ್ಲಿ
ನಿರ್ದೇಶಕರಾಗಿ ನೇಮಕಗೊಂಡರು.
ತದನಂತರ ನಿವೃತ್ತರಾದರು. ಇದರ ನಂತರವೇ ತಮ್ಮ ಸ್ವಂತ ನೃತ್ಯಶಾಲೆ
‘ಕಲಾಶ್ರಮ’ವನ್ನು ತೆರೆದರು.
ಯಾವುದೇ ಹಮ್ಮುಬಿಮ್ಮಗಳಿಲ್ಲದ ಸಹನಾರೂಪಿ ಬಿರ್ಜುಮಹಾರಾಜರು ಹಲವಾರು ಪ್ರಸಿದ್ದ ನಾಟಕ
ಹಾಗೂ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದರು. ಇವರ ನೃತ್ಯದ ಅಭೂತಪೂರ್ವ ಕೊಡುಗೆಗಾಗಿ
ಕೇಂದ್ರ ಸರ್ಕಾರ ಇವರನ್ನು ಪದ್ಮವಿಭೂಷಣ, ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಕಾಳಿದಾಸ
ಸಮ್ಮಾನ್, ನೃತ್ಯ ವಿಲಾಸ, ರಾಜೀವ ಗಾಂಧಿ ಸಮ್ಮಾನ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರನ್ನಾಗಿಸಿತ್ತು.
ಇದೇ ಫೆಬ್ರವರಿ 8ಕ್ಕೆ ತಮ್ಮ84ನೇ ಸಂವತ್ಸರಕ್ಕೆ ಕಾಲಿರಿಸಬೇಕಾಗಿದ್ದ ಬಿರ್ಜುಮಹಾರಾಜರು ಇಹಲೋಕ
ತ್ಯಜಿಸಿದರೂ ತಮ್ಮ ನೃತ್ಯದ ಅವಿಚ್ಛಿನ್ನ ಪರಂಪರೆಯ ಮುಖಾಂತರ ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ
ನೆಲೆಸಿದ್ದಾರೆ.

ಲೇಖಕರ ಪರಿಚಯ:

ನೃತ್ಯಗುರು ಸಹನಾ ಚೇತನ್ ಅವರು ಪರ್ಫಾರ್ಮರ್ ಮತ್ತು ಕಲಾತ್ಮಕ ನಿರ್ದೇಶಕರು, ನೃತ್ಯ ಸಂಯೋಜಕರು ಹಾಗೂ ಲೇಖಕರು. ಇವರು ಕಲಾಕ್ಷೇತ್ರದಲ್ಲಿ ಕಲಾವಿದೆಯಾಗಿ, ಕಲಾ ಶಿಕ್ಷಕಿಯಾಗಿ, ಸಾಂಸ್ಕೃತಿಕ ಉತ್ಸವಗಳ ರೂವಾರಿಯಾಗಿ ರೂಪುಗೊಂಡಿದ್ದಾರೆ.
ಇವರು ಸಹಚೇತನ ನಾಟ್ಯಾಲಯ (ರಿ) ದಲ್ಲಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೇರೆಯಾದ ಐಶ್ವರ್ಯ ಧನುಷ್ ಜೋಡಿ; ಸೆಲೆಬ್ರಿಟಿ ಬ್ರೇಕ್ ಅಪ್ ಸರಣಿಗೆ ಬ್ರೇಕ್ ಇಲ್ಲವೇ..!

0

ವರ್ಷಗಳು ಉರುಳಿದಂತೆ ಸಂಬಂಧಗಳು ಮತ್ತಷ್ಟು ಸಡಿಲಗೊಳ್ಳುತ್ತಿವೆ.
ಜನಸಾಮಾನ್ಯರು ಸೇರಿದಂತೆ ಸಿನಿಮಾ ಮತ್ತು ಕ್ರಿಕೆಟ್ ಲೋಕದಲ್ಲಿ ಏಣಿಕೆಗೆ ಮೀರಿದ ವಿಚ್ಛೇದನಗಳು ಆಗುತ್ತಿವೆ. ಹತ್ತು ಹಲವಾರು ವರ್ಷಗಳ ಕಾಲ ಜೊತೆಗೆ ಜೀವನ ನಡೆಸಿ ಯಾವುದೋ ಕ್ಷುಲಕ ಕಾರಣಕ್ಕೆ ದೂರವಾಗುವ ದಂಪತಿಗಳು ಸಾವಿರಾರು.
ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವವಿದೆ. ಮದುವೆಯ ಬಂಧನದಲ್ಲಿ ಬಂದಿಯಾದ ಎರಡು ಜೀವಗಳು ಸಾಮಾಜಿಕ, ಕಾನೂನಾತ್ಮಕ, ಭಾವನಾತ್ಮಕವಾಗಿ ಜೊತೆಗೂಡಿ ಸುಖ ದುಃಖದಲ್ಲಿ ಭಾಗಿಯಾಗಿ ಜೀವನವನ್ನು ಸಾಗಿಸುತ್ತಾರೆ.
ಆದರೆ ಇಂದಿನ ದಿನಗಳಲ್ಲಿ ಗಂಡ ಹೆಂಡತಿ ಜೊತೆಯಾಗಿ ಜೀವನ ಸಾಗಿಸುವವರಿಗಿಂತ ವಿವಾಹಗಳು ವಿಚ್ಛೇದನದ ಮೂಲಕವೇ ಕೊನೆಗೊಳ್ಳುತ್ತಿರುವುದು ವಿಪರ್ಯಾಸ.
ಅಂತೆಯೇ, ವಿವಾಹ ವಿಚ್ಛೇದನ ಮತ್ತು ಬ್ರೇಕಪ್ ವಿಚಾರಕ್ಕೆ ಬಂದರೆ ಸಿನಿಮಾ ಮತ್ತು ಕ್ರಿಕೆಟ್ ರಂಗಕ್ಕೆ ಇದೇನು ಹೊಸತೇನಲ್ಲ. ಪ್ರತಿವರ್ಷ ಸಿನಿಮಾ ತಾರೆಯರ ಹಲವಾರು ವಿಚ್ಛೇದನ ಪ್ರಕರಣ ಗಳನ್ನು ನಾವು ನೋಡುತ್ತೇವೆ.
ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಪರಸ್ಪರ ಮೆಚ್ಚಿ ಮದುವೆಯಾಗುತ್ತಾರೆ. ಅವರಲ್ಲಿ ಗಂಡ ಅಥವಾ ಹೆಂಡತಿಯ ಜನಪ್ರಿಯತೆಯೇ ಮುಳುವಾಗಿ ಅವರನ್ನ ಬೇರ್ಪಡಿಸಬಹುದು. ಅವರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ, ಕೌಟುಂಬಿಕ, ಆರೋಗ್ಯ, ಮಾನಸಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸೇರಿ ಇನ್ನೂ ಹತ್ತು ಹಲವಾರು ಕಾರಣಗಳಿಂದ ವಿಚ್ಛೇದನ ಆಗಬಹುದು.
ಆದರೆ ವಿಚ್ಛೇದನ ಪಡೆದ ಜೋಡಿಗಳನ್ನು ನೋಡಿದಾಗ ಕೊಂಚ ಅಚ್ಚರಿಯಾಗುವುದು ಸಹಜ. ಹಲವಾರು ವರ್ಷಗಳ ಕಾಲ ಪ್ರೀತಿಸಿ, ಮನೆಯವರ ವಿರೋಧದ ನಡುವೆ, ಜಾತಿ ಧರ್ಮ ಮತಗಳನ್ನು ಮೀರಿ ಮದುವೆಯೆಂಬ ಸುಂದರ ಬಂಧದಲ್ಲಿ ಬಂಧಿಯಾಗಿ ಜೊತೆಯಾಗುತ್ತಾರೆ. ಹಾಗೇಯೇ ಕೆಲವೇ ವರ್ಷಗಳಲ್ಲಿ ದಾಂಪತ್ಯ ಜೀವನದಿಂದ ಅಥವಾ ಬಾಳಸಂಗಾತಿಯಿಂದ ಬೇಸತ್ತು ವಿಚ್ಛೇದನ ಪಡೆಯುತ್ತಾರೆ.
ಇತ್ತೀಚೆಗೆ ನಟ ಧನುಷ್
-ಐಶ್ವರ್ಯ ಅವರು ಕೂಡ ವಿಚ್ಛೇದನ ಪಡೆದಿದ್ದಾರೆ. 18 ವರ್ಷಗಳ ಕಾಲ ಸಂಸಾರ ಮಾಡಿದ ಈ ಜೋಡಿ ದೂರವಾಗಿರುವುದು ಅನೇಕರಲ್ಲಿ ಆಶ್ಚರ್ಯ ಮೂಡಿಸಿದೆ.
ಈ ಹಿಂದೆ ಬಾಲಿವುಡ್ ನ ಖ್ಯಾತ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ 2021ರಲ್ಲಿ ತಮ್ಮ 15ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈ ವಿಚಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ಕಾರಣ ಇದು ಅಮೀರ್ ಖಾನ್ ಅವರ ಎರಡನೇ ಮದುವೆಯಾಗಿತ್ತು.
ಇದಲ್ಲದೆ, ಟಾಲಿವುಡ್ ನಟ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಹತ್ತು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು. ಆದರೆ ತಮ್ಮ 4 ವರ್ಷದ ದಾಂಪತ್ಯಕ್ಕೆ 2021 ಅಕ್ಟೋಬರ್ 2ರಂದು ವಿಚ್ಛೇದನ ಪಡೆದರು.
ಇವರ ವಿಚ್ಛೇದನದ ಕಾರಣ ಏನೇ ಇರಲಿ, ಅತ್ಯಂತ ಅನ್ಯೋನ್ಯವಾಗಿದ್ದ ಜೋಡಿ ಹೀಗೆ ದೂರವಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿಯೊಂದಿಗೆ ಬೇಸರವನ್ನೂ ಮೂಡಿಸಿತು.
ಇವರೊಂದಿಗೆ ಹೆಸರಾಂತ ರಾಪರ್ ಹನಿಸಿಂಗ್ ಮತ್ತು ಪತ್ನಿ ಶಾಲಿನಿ ಸಿಂಗ್ ಕೂಡ ಹತ್ತು ವರ್ಷದ ದಾಂಪತ್ಯವನ್ನು ವಿಚ್ಛೇದನದಲ್ಲಿ ಮುಗಿಸಿದ್ದಾರೆ.
ಇವರ ಸಾಲಿಗೆ ಇನ್ನೂ ಹತ್ತು ಹಲವಾರು ಕಿರುತೆರೆ, ಕ್ರಿಕೆಟಿಗರು ಕೂಡ ಸೇರಿಕೊಳ್ಳುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಇವರಂತೆ ಜನಸಾಮಾನ್ಯರಲ್ಲೂ ಲೆಕ್ಕಕ್ಕೆ ಸಿಗದ ಹಲವಾರು ದಂಪತಿಗಳು ತಮ್ಮ ಸಾಂಸಾರಿಕ ಜೀವನವನ್ನು ವಿಚ್ಛೇದನದಲ್ಲಿಯೇ ಮುಗಿಸುತ್ತಾರೆ. ಇವೆಲ್ಲವೂ ಬೆಳಕಿಗೆ ಬರುವುದೇ ಇಲ್ಲ. ಆದರೆ ಸಿನಿಮಾ ಜಗತ್ತಿನ ಪ್ರಖ್ಯಾತ ಕಲಾವಿದರ ವೈಯಕ್ತಿಕ ಬದುಕಿನ ಪ್ರತಿ ಎಳೆಯನ್ನೂ ನಾವು ಮಾಧ್ಯಮಗಳ ಮೂಲಕ ತಿಳಿದುಕೊಳ್ಳುತ್ತೇವೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ವೈಯಕ್ತಿಕ ಜೀವನ ಮುಖ್ಯ. ಆದರೆ ಇಂದು ಸಾಮಾಜಿಕ ಜಾಲತಾಣಗಳು, ಮತ್ತು ಮಾಧ್ಯಮಗಳು ಸಿನಿಮಾರಂಗದವರ ಜೀವನದ ಪ್ರತಿ ಭಾಗಗಳನ್ನು ಸುಲಭವಾಗಿ ಬಿತ್ತರಿಸುತ್ತವೆ.
ಇದು ಒಮ್ಮೊಮ್ಮೆ ಒಳ್ಳೆಯದು ಎನಿಸಿದರೂ, ಒಮ್ಮೊಮ್ಮೆ ಯಾವುದೋ ಒಬ್ಬ ವ್ಯಕ್ತಿಯ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ.

ಸೆಲೆಬ್ರಿಟಿಗಳ ಬಗ್ಗೆ ಏನಿದ್ದರೂ ಜನ ಓದುತ್ತಾರೆ,ನೋಡುತ್ತಾರೆ ಎಂಬುದು ಖಾತ್ರಿ.
ಅದನ್ನೇ ಬಂಡವಾಳ ಮಾಡಿಕೊಂಡು ಮಾಧ್ಯಮಗಳಲ್ಲಿ ಕೆಲವರು ಅದನ್ನೇ
ಎಪಿಸೋಡಿನ ಮೇಲೆ ಎಪಿಸೋಡು..ಹೀಗೆ ಸರಣಿಯಂತೆ ನಾವು ಇಷ್ಟಪಡಲಿ ಬಿಡಲಿ ನಮ್ಮ ಮುಂದೆ ಸುಮ್ಮನೆ ಸಂತೆ ಸರಕಿನಂತೆ ಚೆಲ್ಲಿ ಬಿಡುತ್ತಾರೆ.
ಆಯ್ಕೆ ಮಾಡಿಕೊಳ್ಳುವುದು
ಮತ್ತೆ ನಮ್ಮ ಪಾಲಿಗೇ ಬಿಟ್ಟ ಸಂಗತಿ.
ಈ ಬ್ರೇಕ್ ಅಪ್ ಗಳು ಧಾರಾವಾಹಿಯಾಗಿ
ಬರುತ್ತಲೇ ಇರುತ್ತವೆ.
ಬ್ರೇಕ್ ಅಪ್ ಗಳಿಗೆ ಬ್ರೇಕು ಬೀಳಬೇಕೆನ್ನುವುದೇ
ನಮ್ಮ ಆಶಯ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರಥಮ ಪಿಯು ಪಠ್ಯಕ್ರಮ ಶೇ. 30 ಕಡಿತ

0

ಕೊರೊನಾ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಗೆ ಭಾಷಾ ವಿಷಯಗಳಲ್ಲಿ ಶೇ. 30 ರಷ್ಟು ಪಠ್ಯಕ್ರಮಗಳನ್ನು ಕಡಿತಗೊಳಿಸದ ಕಾರಣ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಭಾಷಾ ವಿಷಯಗಳಿಗೆ ಶೇ. 70ರಷ್ಟು ಪಠ್ಯಕ್ಕೆ ಮಾತ್ರ ಪರೀಕ್ಷೆ ನಡೆಸುವುದಾಗಿ ಇಲಾಖೆ ತಿಳಿಸಿದೆ. ಆದರೆ, ಕೇಂದ್ರ ಶಿಕ್ಷಣ ಸಚಿವಾಲಯ ಅಥವಾ ಸಿಬಿಎಸ್ಇ ಮಂಡಳಿ 12ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪಠ್ಯಗಳನ್ನು ಕಡಿತಗೊಳಿಸಿದ ಕಾರಣ, ರಾಜ್ಯದಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯಗಳಿಗೆ ಯಾವುದೇ ಪಠ್ಯಕ್ರಮ ಕಡಿತಗೊಳಿಸಿಲ್ಲ. ಬದಲಿಗೆ, ಶೇ.100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಈ ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸುಲಭವಾಗಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಪ್ರಶ್ನೆಗಳನ್ನು ಕೇಳಲು ತೀರ್ಮಾನಿಸಲಾಗಿದೆ. ಒಂದು ಅಂಕಕ್ಕೆ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದ ಇಲಾಖೆ, ಯಾವುದೇ ಆಯ್ಕೆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ಆದರೆ, ಈ ವರ್ಷ ಒಂದು ಅಂಕಕ್ಕೂ ಆಯ್ಕೆ ಪ್ರಶ್ನೆಗಳನ್ನು ಕೇಳಲು ನಿರ್ಧರಿಸಿದೆ. 2 ಅಂಕ, ಐದು ಅಥವಾ ಹತ್ತು ಅಂಕದ ಪ್ರಶ್ನೆ ಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯ ಪ್ರಶ್ನೆಗಳಿಗೆ ಒತ್ತು ನೀಡಲು ಕ್ರಮ ಕೈಗೊಂಡಿದೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತೀರ್ಥಹಳ್ಳಿಯಲ್ಲಿ ಕಾಲೇಜು ರಂಗೋತ್ಸವ

0

ಭಾರತೀಯ ಸಂಸ್ಕೃತಿಯಲ್ಲಿ ಸಾಂಸ್ಕೃತಿಕ ಕಲೆಗಳಾದ ನೃತ್ಯ, ಹಾಡು ಮತ್ತು ಇತರ ಕಲೆಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ , ಅಷ್ಟೇ ಪ್ರಾಮುಖ್ಯತೆ ನಾಟಕಕ್ಕೂ ಕೂಡ ಇದೆ.

ನಾಟಕವು ಎಲ್ಲವನ್ನು ಒಳಗೊಂಡ ಒಂದು ಸಮಗ್ರ ಕಲೆಯಾಗಿದೆ. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ನಾಟಕಕ್ಕೆ ಇದೆ. ನಾಟಕ ಪುರಾತನ ಕಲೆಯಾಗಿದೆ. ನಾಟಕಕ್ಕೆ ಪ್ರೇಕ್ಷಕರು ಜೀವಾಳ.

ಇಂದಿನ ಜಾಗತೀಕರಣ ಮತ್ತು ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಗಳಾಗಿರುವ ನಾಟಕಗಳು ಜನರನ್ನು ತಲುಪುತ್ತಿಲ್ಲ. ಸಿನಿಮಾ, ಟಿವಿ ಕಡೆಗೆ ಜನರು ಹೆಚ್ಚು ಆಕರ್ಷಿತರಾಗಿ ನಾಟಕಗಳನ್ನು ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ.

ಸಿನಿಮಾ ಜನರಿಗೆ ಎಷ್ಟು ಪ್ರಭಾವ ಬೀರುತ್ತದೆಯೋ ನಾಟಕವು ಸಹ ತನ್ನದೇ ಆದಂತಹ ಪರಿಣಾಮ ಬೀರುತ್ತದೆ.

ಶಿವಮೊಗ್ಗ ಜಿಲ್ಲಾ ಕಾಲೇಜು ರಂಗೋತ್ಸವ 2021-22 ನೇ ಸಾಲಿನ ಶಿವಮೊಗ್ಗ ರಂಗಾಯಣ ಆಯೋಜಿಸಿರುವ ಯುವಜನತೆಯೆಡೆಗೆ, ರಂಗಾಯಣದ ಹೆಜ್ಜೆ ಎಂಬ ಶೀರ್ಷಿಕೆ ಅಡಿಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ಯುವಕರಲ್ಲಿ ನಾಟಕದ ಅರಿವು ಮೂಡಲಿ ಎಂಬ ಉದ್ದೇಶದಿಂದ ಈ ರಂಗೋತ್ಸವವನ್ನು ಆಯೋಜಿಸಲಾಗಿದೆ.

” ತುರುಬು ಕಟ್ಟುವ ಹದನ” ಎಂಬ ನಾಟಕವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೀರ್ಥಹಳ್ಳಿ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಲಿದ್ದಾರೆ. ನಿರ್ದೇಶನ: ಶ್ರೀಕಾಂತ್ ಕುಮಟಾ.
ಸಮಯ: ಇಂದು ಸಂಜೆ 6 ಗಂಟೆಗೆ

ಸ್ಥಳ :ಶಾಂತವೇರಿ ಗೋಪಾಲಗೌಡ ರಂಗಮಂದಿರ ತೀರ್ಥಹಳ್ಳಿ.

ನಾಟಕಕ್ಕೆ ಕೇವಲ 100 ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನೆನಪಿಡಿ ಪ್ರೇಕ್ಷಕರು ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.