Sunday, February 15, 2026
Sunday, February 15, 2026
Home Blog Page 1755

ಪ್ರೊ ಕಬಡ್ಡಿ ಲೀಗ್ ಟೈಟನ್ಸ್ ಜಯ- “ಸ್ಟೀಲರ್ಸ್ ವಿಜಯ

0

ಬೆಂಗಳೂರಿನ ವೈಟ್ ಫೀಲ್ಡ್ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಬುಧವಾರ 4 ತಂಡಗಳ ನಡುವೆ ನಡೆಯಿತು.
ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲ ಹಂತದ ಕೊನೆಯ ಮೊದಲ ಪಂದ್ಯವು ಪುಣೇರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ನಡೆಯಿತು.

ಪಲ್ಟನ್ ವಿರುದ್ಧ ಸ್ಟೀಲರ್ಸ್ ಗೆ ಜಯ
ಹರಿಯಾಣ ಸ್ಟೀಲರ್ಸ್(37) ಮತ್ತು ಪುಣೇರಿ ಪಲ್ಟನ್(30) ತಂಡಗಳ ನಡುವೆ ಪಂದ್ಯ ನಡೆಯಿತು. ಸ್ಟೀಲರ್ಸ್ ತಂಡವು ಪಲ್ಟನ್ ವಿರುದ್ಧ ರೋಚಕ ಜಯ ಸಾಧಿಸಿತು.
ಮೊದಲಾರ್ಧದಲ್ಲಿ ಉಭಯ ತಂಡಗಳು ನಿಧಾನಗತಿಯಲ್ಲಿ ಪಾಯಿಂಟ್ ಗಳಿಸತೊಡಗಿದವು. ಹಾಗಾಗಿ ಸಮಬಲದ ಹೋರಾಟ ನಡೆಸಿದವು.
ವಿಕಾಸ್ ಖಂಡೋಲಾ 8 ಪಾಯಿಂಟ್ ಗಳೊಂದಿಗೆ ತಂಡವನ್ನು ಗೆಲುವಿನ ಹಾದಿಗೆ ಕರೆದೊಯ್ದರು ಅವರಿಗೆ ಮೋಹಿತ್ ಕೂಡ ಉತ್ತಮ ಸಾಥ್ ನೀಡಿದರು.

ಮೊದಲನೇ ಹಂತದ ಕೊನೆಯ ಪಂದ್ಯವು ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತೆಲುಗು ಟೈಟನ್ಸ್ ತಂಡಗಳ ನಡುವೆ ನಡೆಯಿತು.
ಜೈಪುರ್ ಪಿಂಕ್ ಪ್ಯಾಂಥರ್ಸ್ (34) ಮತ್ತು ತೆಲುಗು ಟೈಟನ್ಸ್(35) ತಂಡಗಳ ನಡುವೆ ಪಂದ್ಯ ನಡೆಯಿತು. ಪ್ಯಾಂಥರ್ಸ್ ವಿರುದ್ಧ ಟೈಟನ್ಸ್ ಮೊದಲ ಜಯ ಸಾಧಿಸಿ ತಂಡದ ಖಾತೆಯನ್ನು ತೆರೆದುಕೊಂಡಿದೆ.
ಡಿಫೆಂಡರ್ ಆದರ್ಶ್ 9 ಪಾಯಿಂಟ್ ಗಳಿಸಿದರೆ ರೇಡರ್ ರಜನೀಶ್ 7 ಪಾಯಿಂಟ್ ಮತ್ತು ಸುರೀಂದರ್ ಸಿಂಗ್ 4 ಪಾಯಿಂಟ್ ಹಾಗೂ ರಾಕೇಶ್ ಗೌಡ 3 ಪಾಯಿಂಟ್ ಕಲೆ ಹಾಕುವುದರ ಮೂಲಕ ಇವರುಗಳ ಉತ್ತಮ ಆಟ ಪ್ರದರ್ಶನದಿಂದ ಸತತವಾಗಿ ಸೋಲು ಕಾಣುತ್ತಿದ್ದ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಲೀಗ್ – 8 ರ ಆವೃತ್ತಿಯಲ್ಲಿ ಮೊದಲ ಜಯ ಸಾಧಿಸಿ ಸಂಭ್ರಮಿಸಿತು.

ಪ್ರೊ ಕಬಡ್ಡಿ ಲೀಗ್ – 8 ರ ಆವೃತ್ತಿಯ ಎರಡನೇ ಹಂತದಲ್ಲಿ ಮೊದಲಿಗೆ 4 ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
೧. ತಮಿಳ್ ತಲೈವಾಸ್ ಮತ್ತು ಗುಜರಾತ್ ಜಯಂಟ್ಸ್
ಸಮಯ:7.30
೨. ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗೆಲ್ಲುವ ಮೊತ್ತವನ್ನ ಮುಟ್ಟದ ಭಾರತದ ಬ್ಯಾಟಿಂಗ್ ವೈಫಲ್ಯ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಏಕದಿನ ಸರಣಿಯು ಬುಧವಾರದಂದು ನಡೆಯಿತು.ಮೊದಲ ಪಂದ್ಯದಲ್ಲಿಯೇ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 31 ರನ್ ಗಳಿಂದ ಸೋಲು ಅನುಭವಿಸಿತು.
ಬೊಲ್ಯಾಂಡ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಫೀಲ್ಡಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.
ತೆಂಬಾ ಬವುಮಾ 143 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 110 ರನ್ ಗಳಿಸಿದರು.ಮತ್ತು ರಸಿ ವ್ಯಾನ್ ಡೆರ್ ಡುಸ್ಸೆನ್ 96 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 129 ರನ್ ಗಳಿಸಿ ಇವರಿಬ್ಬರೂ 3ನೇ ಮತ್ತು 5ನೇ ವಿಕೆಟ್ ವಿಕೆಟ್ ಜೊತೆಯಾಟದಲ್ಲಿ ತಂಡಕ್ಕೆ 239 ರನ್ ಸೇರಿಸಿದರು. ಇವರಿಬ್ಬರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಅರ್ಧಶತಕದ ಮೂಲಕ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು.
18 ನೇ ಓವರ್ ಆಗುವಷ್ಟರಲ್ಲಿ ಆಫ್ರಿಕಾ ತಂಡ 3 ವಿಕೆಟ್ ಕಳೆದುಕೊಂಡಿತು. ಆಗ ಸ್ಕೋರ್ ಕಾರ್ಡ್ ನಲ್ಲಿದ್ದ ಮೊತ್ತ 68 ಮಾತ್ರ ಆಗಿತ್ತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ 200 ರನ್ ಗಳಿಸಿವುದು ಕಷ್ಟಕರವಾಗಿತ್ತು. ಆದರೆ,ಬವುಮಾ ಮತ್ತು ಡಸ್ಸೆನ್ ಪಂದ್ಯದ ಗತಿಯನ್ನೇ ಬದಲಿಸಿದರು.
297 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಪತನಕ್ಕೆ 265 ರನ್ ಗಳಿಸಿ ಸೋಲುಂಡಿತು.
ಮೊದಲ ವಿಕೆಟ್ ಜೊತೆಯಾಟಕ್ಕೆ ಕಾಲಿಟ್ಟು ಅಂಕಣಕ್ಕೆ ಇಳಿದ ಶಿಖರ್ ಧವನ್ ಮತ್ತು ನಾಯಕ K.L ರಾಹುಲ್ ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 46 ರನ್ ಸೇರಿಸಿ ರಾಹುಲ್ ಔಟಾದರು. ನಂತರ ಧವನ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದರು. ಇವರಿಬ್ಬರ ಜೊತೆಯಾಟದಲ್ಲಿ ಉತ್ತಮ ಮೊತ್ತ ಕಲೆ ಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದ ಆಟಗಾರರು ಮತ್ತು ಪ್ರೇಕ್ಷಕರ ನಿರೀಕ್ಷೆ ಭಗ್ನವಾಯಿತು. ಇಬ್ಬರು ಅರ್ಧಶತಕ ಪೂರೈಸಿ ತಂಡಕ್ಕೆ 92 ರನ್ ಸೇರಿಸುತ್ತಿದ್ದಂತೆಯೇ ಜೊತೆಯಾಟ ಮುರಿಯಿತು.
ನಂತರ ಭಾರತ ತಂಡದ ವಿಕೆಟ್ ಗಳು ಸತತವಾಗಿ ಒಂದರ ಮೇಲೊಂದು ಬೀಳುತ್ತಲೇ ಹೋಯಿತು. ಈ ಹಂತದಲ್ಲಿ 8 ನೇ ವಿಕೆಟ್ ಹಂತಕ್ಕೆ ಅಂಕಣಕ್ಕೆ ಇಳಿದ ಶಾರ್ದೂಲ್ ಠಾಕೂರ್ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನತ್ತ ಕರೆದೊಯ್ಯುವ ಎಲ್ಲಾ ಲಕ್ಷಣಗಳು ಕಂಡು ಬಂದವು. ಅಷ್ಟರಲ್ಲಿ ಸಮಯದ ಅಭಾವ ಆದ ಕಾರಣ ಮೊದಲ ಏಕದಿನ ಪಂದ್ಯದಲ್ಲಿ ಸೋತು ತಲೆಬಾಗಬೇಕಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಂದು ವರ್ಷದಲ್ಲಿ ಶಿವಮೊಗ್ಗದ ಪ್ರತಿ ಮನೆಗೆ ಕುಡಿಯುವ ನೀರು-ಸಚಿವ ಈಶ್ವರಪ್ಪ

0

ಶಿವಮೊಗ್ಗ ನಗರದ ಪ್ರತಿಮನೆಗೂ ಇನ್ನೊಂದು ವರ್ಷದಲ್ಲಿ ನಿರಂತರವಾಗಿ 24×7 ಕುಡಿಯುವ ನೀರು ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ತಿಳಿಸಿದ್ದಾರೆ.
ಶಿವಮೊಗ್ಗದ ಗುಡ್ಡೇಕಲ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರಪಾಲಿಕೆ ವ್ಯಾಪ್ತಿಯ ಹೊರವಲಯದಲ್ಲಿ ಬರುವ ಪ್ರದೇಶಗಳಿಗೆ ನಿರಂತರ ಒತ್ತಡ ಯುಕ್ತ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ರೂ.96.50 ಕೋಟಿ ಅಂದಾಜು ವೆಚ್ಚದ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಗರದ ಹೊರವಲಯದಲ್ಲಿರುವ ವಿರುಪಿನಕೊಪ್ಪ ಮಂಡಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು ರೂ.4 ಕೋಟಿಯನ್ನು ಘೋಷಿಸಿದ್ದಾರೆ.
ಇನ್ನೊಂದು ವರ್ಷದೊಳಗೆ ನಗರ ಹೊರವಲಯಕ್ಕೆ ನೀರು ಕಲ್ಪಿಸುವ ಕಾಮಗಾರಿ ಪೂರ್ಣಗೊಳ್ಳಲೇಬೇಕು. ಈ ನಿಟ್ಟಿನಲ್ಲಿ ಕೆಲಸಗಳು ಚುರುಕಾಗಬೇಕು ಎಂದು ಸೂಚನೆ ನೀಡಿದರು.
ಈ ಯೋಜನೆಯಿಂದ ನಗರದ ಹೊರವಲಯದ ಪ್ರದೇಶಗಳಿಗೆ 2035ನೇ ಸಾಲಿನವರೆಗೆ ನಿರಂತರವಾಗಿ ಕುಡಿಯುವ ನೀರು ದೊರಕಲಿದೆ. ವಿರುಪಿಕೊಪ್ಪದ ಕುಡಿಯುವ ನೀರಿನ ಯೋಜನೆಗೆ ಯೋಜನೆಯಡಿಯೇ ವ್ಯವಸ್ಥೆ ಮಾಡಲಾಗುವುದು. ಗುಣಮಟ್ಟದ ಕೆಲಸ ಆಗಬೇಕು. ಪ್ರತಿ ಮನೆಗೆ ಒಂದು ವರ್ಷದಲ್ಲಿ ನೀರು ಸರಬರಾಜಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ , ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಯಮುನಾ ರಂಗೇಗೌಡ, ಎಚ್.ಸಿ. ಯೋಗೀಶ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಮಾರಿಜಾತ್ರೆ: ಮಾರ್ಚ್ 22ಕ್ಕೆ ಮುಂದೂಡಲಾಗಿದೆ

0

ಮುಂದಿನ ತಿಂಗಳು ಫೆ.22ರಿಂದ ಆರಂಭವಾಗಬೇಕಿದ್ದ ಶಿವಮೊಗ್ಗ ಮಾರಿಕಾಂಬ ಜಾತ್ರೆಯನ್ನು ಕೋವಿಡ್ ಕಾರಣ ಮಾರ್ಚ್ 22ಕ್ಕೆ ಮುಂದೂಡಲಾಗಿದೆ.
ಮಾರ್ಚ್ ವೇಳೆಗೆ ಕೊರೊನಾ ಹಾವಳಿ ಕಡಿಮೆಯಾಗುವ ಸಾಧ್ಯತೆಯಿದೆ. ಸಾಂಪ್ರದಾಯಿಕ ಮಾರಿಜಾತ್ರೆಗೆ ತೊಂದರೆ ಇರುವುದಿಲ್ಲ. ನಾಡಿಗರ ಮನೆಯಿಂದ ಹಿಡಿದು ಜಾತಿಗಳ ನೇತೃತ್ವದಲ್ಲಿ ವಿಧಿ ವಿಧಾನ, ಪೂಜೆ ಶಾಸ್ತ್ರೋಕ್ತವಾಗಿ ನಡೆಯಲಿವೆ. ಜಾತ್ರೆ ಮೂರು ಅಥವಾ ನಾಲ್ಕು ದಿನಗಳು ನಡೆಸುವ ಕುರಿತು ಮತ್ತೊಮ್ಮೆ ಸಭೆ ಸೇರಿ ನಿರ್ಧರಿಸಲಾಗುವುದು ಎಂದು ಕೋಟೆ ಶ್ರೀ ಮಾರಿಕಾಂಬ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ನವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು.
ದೇವಸ್ಥಾನದ ಸುತ್ತ ಯಾವುದೇ ರೀತಿಯ ಅಂಗಡಿಗಳು, ವಸ್ತು ಪ್ರದರ್ಶನ ಇರುವುದಿಲ್ಲ‌. ಭಕ್ತರು ಅಂತರ ಕಾಯ್ದುಕೊಂಡು ದರ್ಶನ ಪಡೆಯಬೇಕು. ಜಿಲ್ಲಾಡಳಿತದ ಸೂಚನೆ ಅನ್ವಯ ಜಾತ್ರೆ ನಡೆಸಲಾಗುವುದು. ಜ.28ರಂದು ಮರ ತರುವ ಪ್ರಕ್ರಿಯೆ ನಡೆಯುತ್ತದೆ. ತಂದ ಮರವನ್ನು ತವರುಮನೆಯಲ್ಲಿ ಇಡಲಾಗುವುದು. ಶೂನ್ಯ ಮಾಸದಲ್ಲಿಯೇ ಮರ ತರುವುದು ರೂಢಿ.
ಮರ ತಂದರೆ ದೇವಿ ಕೂರಿಸಲೇ ಬೇಕಾಗುತ್ತದೆ. ಈ ಪ್ರಕ್ರಿಯೆ ಜ.28 ರಂದೇ ನಡೆಯುತ್ತದೆ. ನಂತರ ಮಾರ್ಚ್ ತಿಂಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಬದಲಾವಣೆಗೆ ಒಳಪಟ್ಟು ಸಂಭ್ರಮದಿಂದಲೇ ಜಾತ್ರೆ ನಡೆಸಲಾಗುವುದು ಎಂದು ವಿವರ ನೀಡಿದರು.
ಜಾತ್ರೆ ಮುಂದೂಡಿದರೂ ಸಿದ್ಧತೆಗಳು ಮುಂದುವರಿಯಲಿವೆ. ಕೋವಿಡ್ ನಿಯಮಗಳು, ಮಾರ್ಗಸೂಚಿ ಅನುಸರಿಸಿ ಮಾರಿಕಾಂಬ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಮೇಯರ್ ಸುನಿತಾ ಅಣ್ಣಪ್ಪ ಮಾತನಾಡಿ, ಶಿವಮೊಗ್ಗದ ಮಾರಿಕಾಂಬೆಗೆ ವಿಶಿಷ್ಟವಾದ ಶಕ್ತಿ ಇದೆ. ಈ ಬಾರಿ ಮಾರಿಕಾಂಬೆ ಹಬ್ಬ ನಡೆಯುತ್ತದೆ. ಅಂತರ ಕಾಯ್ದುಕೊಂಡು , ನಿಯಮಾನುಸಾರ ಜಾತ್ರೆ ನಡೆಸಲಾಗುವುದು.ಈ ಬಾರಿ ಪಾಲಿಕೆಯಿಂದ ಜಾತ್ರೆಗೆ ರೂ.10 ಲಕ್ಷ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಮುಖಂಡರಾದ ಯುಮುನಪ್ಪ, ಡಿ.ಎಂ. ರಾಮಯ್ಯ, ಸೀತಾರಾಮ ನಾಯಕ, ತಿಮ್ಮಣ್ಣ, ಲೋಕೇಶ್, ಚಂದ್ರಶೇಖರ್, ಶ್ರೀಧರಮೂರ್ತಿ ನವಲೆ , ಸತ್ಯನಾರಾಯಣ ,ತುಕ್ಕೋಜಿರಾವ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿವಿಧ ಹೂಡಿಕೆಗಳಿಗೆ ಆದಾಯ ತೆರಿಗೆ ವಿನಾಯಿತಿಗೆ ಮನವಿ

0

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಹೂಡಿಕೆಯ ಮಿತಿಯನ್ನು ಏರಿಸಬೇಕು ಎಂದು ತೆರಿಗೆದಾರರು ಮತ್ತು ಹಣಕಾಸು ತಜ್ಞರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋವಿಡ್-19 ಬಿಕ್ಕಟ್ಟನ್ನು ಗಮನಿಸಿ ಮಿತಿಯನ್ನು ವಾರ್ಷಿಕ 2.5 ಲಕ್ಷ ರೂ.ಗಳಿಗೆ ಏರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅಂದರೆ ವರ್ಷಕ್ಕೆ 2.5 ಲಕ್ಷ ರೂ.ಗಳ ತನಕ ಹಣಕಾಸು ಹೂಡಿದರೆ, ಅದಕ್ಕೆ ತೆರಿಗೆ ವಿನಾಯಿತಿಯ ಲಾಭವನ್ನು ಕೊಡಬೇಕು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅನ್ನು ತೆರಿಗೆ ಉಳಿತಾಯದ ಉದ್ದೇಶಕ್ಕೆ ನೀಡಲಾಗುತ್ತದೆ. ಇದು ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿರುವ ಅನುಕೂಲ.
ನಿರ್ದಿಷ್ಟ ಉಳಿತಾಯ ಮತ್ತು ವೆಚ್ಚಗಳಿಗೆ ಇದನ್ನು ಪಡೆಯಬಹುದು. ವಾರ್ಷಿಕ ಗರಿಷ್ಠ 1.5 ಲಕ್ಷ ರೂ.ಗಳ ಮಿತಿ ಇದಕ್ಕಿದೆ ಎಂದು ತಿಳಿದುಬಂದಿದೆ.
2023-14ರಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ಗರಿಷ್ಠ 1 ಲಕ್ಷ ರೂ. ಹೂಡಿಕೆಯ ಮಿತಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯ ಸಿಗುತ್ತಿತ್ತು. ಇದನ್ನು 2014-15ರಲ್ಲಿ 1.5 ಲಕ್ಷ ರೂ.ಗೆ ಏರಿಸಲಾಯಿತು. ಕಳೆದ 7 ವರ್ಷಗಳಲ್ಲಿ ಬದಲಾವಣೆ ಆಗದಿರುವುದರಿಂದ ಬಜೆಟ್ ನಲ್ಲಿ ಈ ಸಲ ಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ.
ಜೀವ ವಿಮೆ ಪ್ರೀಮಿಯಂ, ಸರ್ವಜನಿಕ ಭವಿಷ್ಯ ನಿಧಿಯ ಹೂಡಿಕೆ, ಗೃಹ ಸಾಲ, ಮನೆ ಖರೀದಿಯ ಮುದ್ರಾಂಕ ಶುಲ್ಕ, ಸುಕನ್ಯಾ ಸಮೃದ್ಧಿ ಹೂಡಿಕೆ, ಮಕ್ಕಳ ಬೋಧನಾ ಶುಲ್ಕ, 5 ವರ್ಷಗಳ ಅವಧಿಯ ತೆರಿಗೆ ಉಳಿತಾಯ ಎಫ್ ಡಿ, ಹಿರಿಯನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಮಾಡುವ ಹೂಡಿಕೆಗೆ ಈ ಸೌಲಭ್ಯ ಪಡೆಯಬಹುದು.
ಈ ಯೋಜನೆಯಿಂದ ತೆರಿಗೆದಾರರಿಗೆ ತೆರಿಗೆ ಹೊರೆ ಇಳಿಯುತ್ತದೆ. ಹಣಕಾಸು ಉಳಿತಾಯದ ಗುರಿ ಸಾಧ್ಯವಾಗುತ್ತದೆ. ಮನೆ ಖರೀದಿಗೆ ಸಹಕಾರಿಯಾಗುತ್ತದೆ.
ಸರ್ಕಾರಕ್ಕೆ ಗೃಹ ವಲಯದ ಉಳಿತಾಯ ಹೆಚ್ಚಿಸಲು ಸರಕಾರಿ. ಹಣದುಬ್ಬರ ನಿಯಂತ್ರಿಸಲು ಪೂರಕ. ಮೂಲ ಸೌಕರ್ಯ ವಲಯಕ್ಕೆ ಹಣ ಸಂಗ್ರಹಿಸಲು ಸುಲಭವಾಗುತ್ತದೆ.
ಸರಕಾರಕ್ಕೆ ಕಡಿಮೆ ಖರ್ಚಿನಲ್ಲಿ ನಿಧಿ ಸಂಗ್ರಹಿಸಬಹುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎರಡನೇ ಅಲೆಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಕಡಿಮೆಯಾಗಿದೆ

0

ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಒಳಗಾಗುತ್ತಿರು ಮಕ್ಕಳ ಸಂಖ್ಯೆಯೂ ಅಧಿಕವಾಗಿದೆ. 18 ವರ್ಷ ವಯೋಮಾನದವರು ಕಳೆದ 17 ದಿನಗಳಲ್ಲಿ 43,463 ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಕೋವಿಡ್ ವಾರ್ ರೂಂ ವಿಶ್ಲೇಷಣೆಗೆ ರಾಜ್ಯದ ಕೋವಿಡ್ ಪ್ರಕರಣಗಳ ವರದಿಯನ್ನು ಒಳಪಡಿಸಲಾಗಿದೆ. 2022ರ ಜನವರಿ 1ರಿಂದ 17 ರ ಅವಧಿಯಲ್ಲಿ 18 ವರ್ಷದೊಳಗಿನ 7,64,198 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ ಶೇಕಡಾ 5.69 ರಷ್ಟ ಸೋಂಕು ದೃಢಪಟ್ಟಿದೆ. ಈ ಪ್ರಮಾಣ 19 ವರ್ಷ ಮೇಲ್ಪಟ್ಟವರಲ್ಲಿ ಶೇ.13.31 ರಷ್ಟಕ್ಕೆ ಏರಿಕೆಯಾಗಿದೆ.

ಕೋವಿಡ್ ನ ಎರಡನೇ ಅಲೆಗೆ ಹೋಲಿಸಿದರೆ ಈ ಬಾರಿ ಮಕ್ಕಳಲ್ಲಿನ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸೈಬರ್ ಅಪರಾಧಕ್ಕೆ ಪಾಕ್ ನಲ್ಲಿ ಮರಣದಂಡನೆ

0

ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಆರೋಪ ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.

ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನದಲ್ಲಿ 26 ವರ್ಷದ ಅನೀಕಾ ಅತೀಕ್ ಅವರು ವಾಟ್ಸಪ್ ಸ್ಟೇಟಸ್ ಆಗಿ ‘ದೇವನಿಂದನೆಯ ವಸ್ತುಗಳನ್ನು’ ಪೋಸ್ಟ್ ಮಾಡಿದ್ದರು. ಅನಿಕಾ ಅತೀಕ್ ಅವರ ಸ್ನೇಹಿತರೊಬ್ಬರು ಅದನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಆಗ ವಾಟ್ಸಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿದ್ದ ಅದೇ ಚಿತ್ರವನ್ನು ಸ್ನೇಹಿತನಿಗೆ ರವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಆರೋಪದಡಿ ಅನಿಕಾ ಅತೀಕ್ ಅವರನ್ನು 2020ರ ಮೇ ತಿಂಗಳಿನಲ್ಲಿ ಬಂಧಿಸಲಾಗಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯ ನ್ಯಾಯಾಲಯವು ಅನಿಕಾ ಅತೀಕ್ ಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಕ್ಷನ್ ಕಟ್ ನಿಲ್ಲಿಸಿದ ಕಿರಾತಕ ನಿರ್ದೇಶಕ ಪ್ರದೀಪ್ ರಾಜ್

0

ರಾಕಿಂಗ್ ಸ್ಟಾರ್ ಯಶ್ ಅವರ ವೃತ್ತಿ ರಂಗಕ್ಕೆ ಮಹತ್ವದ ತಿರುವು ನೀಡಿದಂತಹ ಕಿರಾತಕ ಸಿನಿಮಾದ ನಿರ್ದೇಶಕ ಪ್ರದೀಪ್ ರಾಜ್ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಥೆಗಾರರಾಗಿ ಪಾದರ್ಪಣೆ ಮಾಡಿದ ಪ್ರದೀಪ್ ರಾಜ್ ಅವರು ದುನಿಯಾ ವಿಜಿ ಅಭಿನಯದ ರಜನಿಕಾಂತ, ಕಾವೇರಿ ನಗರ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿದ್ದಾರೆ. ಆದರೆ ಪ್ರದೀಪ್ ರಾಜ್ ಅವರು ನಿರ್ದೇಶಿಸಿದ ಕಿರಾತಕ ಚಿತ್ರವು ರಾಕಿಂಗ್ ಸ್ಟಾರ್ ಯಶ್ ಅವರ ವೃತ್ತಿ ಜೀವನವನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು.

ಪ್ರದೀಪ್ ರಾಜ್ ಅವರು ನೀನಾಸಂ ಸತೀಶ್ ಅಭಿನಯದ ಅಂಜದಗಂಡು, ಮಿಸ್ಟರ್ 420, ಬೆಂಗಳೂರು 560023 ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಹಾಗೂ ಪ್ರದೀಪ್ ರಾಜ್ ಅವರ ಬಹುನಿರೀಕ್ಷಿತ ಕಿರಾತಕ-2 ಸಿನಿಮಾ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಇಂತಹ ಹೆಸರಾಂತ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ಅವರು ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಈ ಕಾರಣದಿಂದ ಕೆಲಕಾಲದಿಂದ ಚಿತ್ರರಂಗದಿಂದ ಹಿಂದೆ ಸರಿದಿದ್ದರು. ಇಂದು ಬೆಳಗಿನ ಜಾವ ಪಾಂಡಿಚೇರಿಯಲ್ಲಿ ಬಹುದಿನದ ಅಂಗಾಂಗ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾತಿನ ಮಲ್ಲ ಜಗ್ಗೇಶ್ ಕುಪ್ಪಳ್ಳಿಯಲ್ಲಿ ಮೌನ ಧ್ಯಾನ

0

ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಚಿತ್ರೀಕರಣಕ್ಕಾಗಿ ತೀರ್ಥಹಳ್ಳಿಗೆ ನವರಸ ನಾಯಕ ಅವರು ತಮ್ಮ ಚಿತ್ರತಂಡದೊಂದಿಗೆ ಆಗಮಿಸಿದ್ದಾರೆ.

ತೀರ್ಥಹಳ್ಳಿಯ ಸಮೀಪದಲ್ಲಿರುವ ಪುತ್ತಿಗೆ ಮಠದ ದೊಡ್ಡ ಮನೆಯಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರೀಕರಣದ ಬಿಡುವಿನ ಸಮಯದಲ್ಲಿ ನವರಸ ನಾಯಕ ಜಗ್ಗೇಶ್ ಅವರು ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳಿಯ ಅವರ ಮನೆ ಹಾಗೂ ಕವಿಯ ಪ್ರೀತಿಯ ಸ್ಥಳ ಕವಿಶೈಲಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಕವಿ ಕುವೆಂಪು ಅವರ ಮನೆಯ ಮುಂಭಾಗದಲ್ಲಿ ಕೂತ ಫೋಟೋ ಒಂದನ್ನು ನವರಸ ನಾಯಕ ಜಗ್ಗೇಶ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಅವರು ಕವಿಶೈಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ “ನಾನು ನಮ್ಮ ತಂದೆಯನ್ನು ಅಣ್ಣ ಎಂದು ಕರೆಯುತ್ತಿದ್ದೆ. ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿಯವರು ಕೂಡ ಅಣ್ಣ ಎಂದು ಕರೆಯುತ್ತಿದ್ದರು. ಎಂದಾಗ ನನ್ನ ಮನ ನನ್ನ ಅಪ್ಪನ ಕಡೆ ವಾಲಿತು. ನಾನು ಭಾವುಕನಾಗಿ ಬಿಟ್ಟೆ” ಎಂದು ಬರಹದ ಮೂಲಕ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಸಮಯ ಸಿಕ್ಕರೆ ರಸಋಷಿ ಮನೆಗೆ ನೀವು ಹೋಗಿಬನ್ನಿ ಎಂದು ಅಭಿಮಾನಿಗಳಿಗೆ ನವರಸನಾಯಕ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಾಡೋಜ ಕಣವಿ ಅವರ ಚಿಕಿತ್ಸೆಗೆ ಸರ್ಕಾರದ ನೆರವು

0

ನಾಡಿನ ಹೆಸರಾಂತ ಹಿರಿಯ ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಅವರ ಎಲ್ಲ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸಲು ಕ್ರಮ ಕೈಗೊಳ್ಳಲಾಗಿದೆ.
ಜ.14ರಂದು ಎಸ್ ಡಿಎಮ್ ಆಸ್ಪತ್ರೆಗೆ ಚೆನ್ನವೀರ ಕಣವಿ ಅವರು ದಾಖಲಾದ ಮಾಹಿತಿ ಬಂದ ಕೂಡಲೇ ಜಿಲ್ಲಾಡಳಿತವು ಅವರ ಚಿಕಿತ್ಸೆಗೆ ಐಸಿಯು ಬೆಡ್ ಮೀಸಲಿರಿಸಿದೆ. ಉತ್ತಮ ಚಿಕಿತ್ಸಾ ಕ್ರಮ ಕೈಗೊಂಡಿದೆ.
ಕಣವಿ ಅವರು ಗುಣಮುಖರಾಗಿ ಮನೆಗೆ ಬರುವವರಿಗೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಕುರಿತು ಜನವರಿ 15ರಂದೇ ಎಸ್ ಡಿಎಮ್ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಡಾ.ಕಣವಿ ಅವರ ಕುಟುಂಬದ ಸದಸ್ಯರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ದಿನನಿತ್ಯ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಅಧೀಕ್ಷಕರೊಂದಿಗೆ ,ಡಾ. ಕಣವಿ ಅವರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಜಾಗೃತಿ ವಹಿಸಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಕಣವಿಯವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ರಾಜ್ಯ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಒತ್ತಾಯಿಸಿದ್ದರು‌.