Sunday, February 15, 2026
Sunday, February 15, 2026
Home Blog Page 1754

ಪ್ರೊ ಕಬಡ್ಡಿ ಲೀಗ್ ಜಯಂಟ್ಸ್-ವಾರಿಯರ್ಸ್ ಜಯ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಗುರುವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ತಲೈವಾಸ್ ವಿರುದ್ಧ ಜಯಂಟ್ಸ್ ಗೆ ರೋಚಕ ಜಯ
ತಮಿಳ್ ತಲೈವಾಸ್(35) ಮತ್ತು ಗುಜರಾತ್ ಜಯಂಟ್ಸ್ (37) ತಂಡಗಳ ನಡುವೆ ಪಂದ್ಯ ನಡೆಯಿತು. ಜಯಂಟ್ಸ್ ತಂಡವು ತಲೈವಾಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಗುಜರಾತ್ ತಂಡದ ರೇಡರ್ ಮಹೇಂದ್ರ ರಜಪೂತ್ ಮತ್ತು ರಾಕೇಶ್ ನರ್ವಾಲ್ ಅವರು ಅಮೋಘ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು. ಮಹೇಂದ್ರ 9 ಅಂಕ ಮತ್ತು ರಾಕೇಶ್ 6 ಅಂಕ ಗಳಿಸುವುದರೊಂದಿಗೆ ತಂಡವು 2 ಅಂಕಗಳ ಅಂತರದಿಂದ ತಲೈವಾಸ್ ತಂಡವನ್ನು ಮಣಿಸಿತು.

ವಾರಿಯರ್ಸ್ ಗೆ ಮಣಿದ ಬುಲ್ಸ್
ಬೆಂಗಳೂರು ಬುಲ್ಸ್ (39) ಮತ್ತು ಬೆಂಗಾಲ್ ವಾರಿಯರ್ಸ್ (40) ತಂಡಗಳ ನಡುವೆ ಪಂದ್ಯ ನಡೆಯಿತು. ಬೆಂಗಾಲ್ ತಂಡವು ಬೆಂಗಳೂರು ತಂಡದ ವಿರುದ್ಧ ರೋಚಕ ಜಯ ಸಾಧಿಸಿದೆ.
ಎರಡು ತಂಡಗಳು ಆರಂಭದಿಂದಲೂ ಸಮಬಲದ ಪೈಪೋಟಿ ನಡೆಸಿದವು.ಅರ್ಧವಿರಾಮದ ವೇಳೆಗೆ ಬೆಂಗಾಲ್ ತಂಡವು ಕೇವಲ 1 ಅಂಕದ ಅಂತರದಿಂದ ಮುನ್ನಡೆಯಲ್ಲಿತ್ತು. ಆದರೆ, ಬೆಂಗಾಲ್ ತಂಡದ ಕೇವಲ ಒಂದು ರೇಡ್ ನಿಂದ ಪವನ್ ಬಳಗವನ್ನು ಬಗ್ಗುಬಡಿಯಿತು. ಆದರೂ ಎದುರಾಳಿಗೆ ತಕ್ಕ ಪೈಪೋಟಿ ನೀಡಿದ ಬುಲ್ಸ್ ಕೊನೆಯಲ್ಲಿ 1 ಅಂಕದಿಂದ ಸೋಲುಂಡಿತು

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಸ್ಟ್ರೇಲಿಯಾ ಓಪನ್ ಟೆನಿಸ್: ಮೆಡ್ವಡೇವ್ ಜಯ

0

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪಂದ್ಯ ಗುರುವಾರ “ನಿಕ್ ಕಿರ್ಗಿಯೋಸ್” ಮತ್ತು “ಡ್ಯಾನಿಲ್ ಮೆಡ್ವೆಡೆವ್” ಅವರ ನಡುವೆ ನಡೆಯಿತು. ಕೀರ್ಗಿಯೋಸ್ ವಿರುದ್ಧ ಮೆಡ್ವೆಡೆವ್ ಭರ್ಜರಿ ಜಯ ಸಾಧಿಸಿದ್ದಾರೆ.
ರೋಡ್ ಲಾವೆರ್ ಅರೆನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿರ್ಗಿಯೋಸ್ ರವರು ಕ್ರೀಡಾಂಗಣದ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿ ಎದುರಾಳಿಗೆ ಪ್ರಬಲ ಹೋರಾಟ ತೋರಿದರು.
ಎರಡನೇ ಸುತ್ತಿನಲ್ಲಿ ಹಠ ಬಿಡದೆ ತಕ್ಕ ಆಟವಾಡಿ ಚೆಂಡನ್ನು ಎದುರಿಸಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ.
ಮೂರನೇ ಸುತ್ತಿನಲ್ಲಿ ‘ರಷ್ಯಾದ ಡ್ಯಾನಿಲ್ ಮೆಡ್ವೆಡೆವ್’ ರವರಿಗೆ ‘ನೆದರ್ಲೆಂಡ್ ನ ಬಾಟಿಕ್ ವ್ಯಾನ್ ಡಿ ಜಂಡ್ ಶುಲ್ಫ್’ ರವರು ಮುಖಾಮುಖಿಯಾಗಲಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿರಾಡಿ ಘಾಟ್ ಮೇಲ್ದರ್ಜೆಗೆ- ನಿತಿನ್ ಗಡ್ಕರಿ

0

ದ್ವೀಪಥವಿರುವ ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ 1200 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಅನುಮೋದನೆ ನೀಡಿದ್ದು, 2ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ಮಳೆಗಾಲದ ಅವಧಿಯಲ್ಲಿ ಶಿರಾಡಿ ಘಾಟ್ ನ ರಸ್ತೆ ಬಳಸುವುದು ಅಸಾಧ್ಯವಾಗಿತ್ತು. ದಕ್ಷಿಣ ಕರಾವಳಿ ಜಿಲ್ಲೆಗಳು ಮತ್ತು ಹಾಸನ ಜಿಲ್ಲೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್ ಇದೆ. ಈ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಕಳೆದೊಂದು ದಶಕದ ಆಗ್ರಹವು ಇತ್ತು.
ಈ ವಿಷಯವಾಗಿ ಇತ್ತೀಚೆಗೆ ಶಾಸಕ ಎಚ್.ಡಿ. ರೇವಣ್ಣ ಸಿಎಂ ಮನೆ ಎದುರು ಪ್ರತಿಭಟನೆ ನಡೆಸಿ ಗಮನಸೆಳೆದಿದ್ದರು.
ಶಿರಾಡಿ ಘಾಟ್ ಮೂಲಕ ಷಟ್ಪಥ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಅಧ್ಯಯನ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಕೇಂದ್ರ ಸಚಿವರು ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಅನುಮೋದನೆಗೆ ಪೂರಕವಾಗಿ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಸಿಎಂ.ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭೂ ದಾಖಲಾತಿ ರೈತರಿಗೆ ಉಚಿತ ವಿತರಣೆ: ಸಿ ಎಂ ಬೊಮ್ಮಾಯಿ

0

287 ಕೋಟಿ ವೆಚ್ಚದಲ್ಲಿ ಎಲ್ಲಾ 31 ಜಿಲ್ಲೆಗಳಲ್ಲಿ ಆಸ್ತಿ ಡಿಜಿಟಲೀಕರಣಕ್ಕಾಗಿ ಸರ್ಕಾರ ಶೀಘ್ರದಲ್ಲೇ ಡ್ರೋನ್ ಸಮೀಕ್ಷೆಯನ್ನು ಪ್ರಾರಂಭಿಸಲಿದೆ. ಕೇಂದ್ರದ ಪ್ರಮುಖ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ ಸರ್ಕಾರದ ಯೋಜನೆಯಡಿ ರಾಮನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಈಗಾಗಲೇ ಪೈಲಟ್ ಯೋಜನೆಯನ್ನು ಇಲಾಖೆ ಆರಂಭಿಸಿದೆ ಎಂದರು. ಈ ಡ್ರೋನ್ ಸಮೀಕ್ಷೆಯ ಪ್ರಯೋಜನಗಳ ಆವಿಷ್ಕಾರದ ನಂತರ, ಹಲವಾರು ಜಿಲ್ಲಾಡಳಿತಗಳು ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿವೆ. ಪರಿಣಾಮವಾಗಿ, ನಾವು ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಿದ್ದೇವೆ ಎಂದು ಆರ್. ಅಶೋಕ್ ಅವರು ತಿಳಿಸಿದರು.
ಸರ್ಕಾರವು 45-50 ಲಕ್ಷ ರೈತರ ಮನೆಬಾಗಿಲು ತಲುಪಿ ಅವರ ಭೂ ದಾಖಲೆಗಳ ಬಗ್ಗೆ ಒಂದು ಬಾರಿ ಮಾಹಿತಿಯನ್ನು ಒದಗಿಸಲಿದೆ. ತಮ್ಮ ಜಮೀನು ತಮ್ಮ ತಂದೆ ಅಥವಾ ಅಜ್ಜನ ಹೆಸರಿನಲ್ಲಿ ನೋಂದಣಿಯಾಗುತ್ತಲೇ ಇದೆ ಎಂಬ ಸತ್ಯದ ಅರಿವಿಲ್ಲದ ಸಾವಿರಾರು ರೈತರು ಇದ್ದಾರೆ.ಇದಲ್ಲದೆ, ಅವರ ಅರಿವಿಲ್ಲದೆ, ಭೂಮಾಲೀಕರು ಹಕ್ಕುಗಳನ್ನು ಬದಲಾಯಿಸಿದ ಪ್ರಕರಣಗಳಿವೆ. ಕಂದಾಯ ಇಲಾಖೆಯಲ್ಲಿ ನೋಂದಣಿಯಾಗಿರುವ ಭೂದಾಖಲೆಗಳ ವಿವರಗಳನ್ನು ಸರ್ಕಾರವು ರಾಜ್ಯದ ಪ್ರತಿಯೊಬ್ಬ ಮನೆ ಬಾಗಿಲಿಗೆ ತಲುಪಿ ಅವರ ಭೂ ದಾಖಲೆಗಳನ್ನು ಒದಗಿಸಲಿದೆ ಎಂದು ಸಚಿವರು ಹೇಳಿದರು. ದಾಖಲಾತಿಯನ್ನು ರೈತರಿಗೆ ಉಚಿತವಾಗಿ ನೀಡಲಾಗುವುದು ಮತ್ತು ಮುಖ್ಯಮಂತ್ರಿ ಬಸನವರಾಜ್ ಬೊಮ್ಮಾಯಿ ಅವರೊಂದಿಗೆ ಶೀಘ್ರದಲ್ಲೇ ಈ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಆರಂಭಿಕ ಉದ್ಘಾಟನೆಯನ್ನು ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಿಗದಿಪಡಿಸಲಾಗಿದೆ ಎಂದರು. ಇದು ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಸ್ವಲ್ಪ ಸಮಯದವರೆಗೆ ಮುಂದೂಡುವ ಸಾಧ್ಯತೆ ಇದೆ. 2021 ರ ಪ್ರವಾಹ ಹಾನಿಗಾಗಿ ಕರ್ನಾಟಕವು ಸಂಗ್ರಹಿಸಿದ 841 ಕೋಟಿ ರೂಪಾಯಿಗಳ ಹಕ್ಕುಗಳ ವಿರುದ್ಧ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ ಅಡಿಯಲ್ಲಿ ಕೇಂದ್ರವು 504 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವ್ಯಕ್ತಿ ಪ್ರಗತಿ ದೇಶದ ಏಳಿಗೆ ಎರಡೂ ಬೆಸುಗೆ-ಪ್ರಧಾನಿ ಮೋದಿ

0

ಭಾರತದ ಚಿಂತನೆ ಮತ್ತು ಸ್ಪಂದನೆಯ ವಿಧಾನ ನವನವೀನ. ಪ್ರಗತಿಪರ ನಿರ್ಧಾರ ತೆಗೆದುಕೊಳ್ಳುವಲ್ಲೂ ಮುಂಚೂಣಿ ರಾಷ್ಟ್ರ ಎನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದರು.
ದೇಶದಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಯಾವುದೇ ಅತ್ಯುತ್ತಮ ವ್ಯವಸ್ಥೆ ನಿರ್ಮಾಣವಾಗಬೇಕಾದರೆ ತ್ಯಾಗದ ತಳಹದಿಬೇಕು. ಒಬ್ಬ ವ್ಯಕ್ತಿಯ ಪ್ರಗತಿಯೂ ರಾಷ್ಟ್ರದ ಪ್ರಗತಿಯ ಜೊತೆ ಬೆಸೆದುಕೊಂಡಿರುತ್ತದೆ. ದೇಶದ ಏಳಿಗೆಗಾಗಿ ನಿರ್ವಹಿಸಬೇಕಾದ ಕರ್ತವ್ಯಗಳಿಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದರು.
ಕರ್ತವ್ಯ ಪ್ರಜ್ಞೆ ಮರೆತ ಹಕ್ಕಿನ ಹೋರಾಟಗಳಿಗೆ ಬೆಲೆ ಇಲ್ಲ. ಸ್ವಹಿತಾಸಕ್ತಿಯನ್ನೇ ಕೇಂದ್ರವಾಗಿರಿಸಿಕೊಂಡು ನಡೆಯುವ ಹೋರಾಟಗಳಿಂದ ದೇಶ ಸೊರಗುತ್ತದೆ. ಇದುವರೆಗೆ ಆದ ಹಿನ್ನಡೆಯನ್ನು ಇನ್ನುಮುಂದಾದರೂ ತಿದ್ದಿ ನಡೆಯಬೇಕಿದೆ. ಐಕ್ಯತೆಯ ನಡೆಯಿಂದ ಅನಿಷ್ಟಗಳು ನಿವಾರಣೆಯಾಗಿ ದೇಶ ಹೊಸ ಎತ್ತರಕ್ಕೆ ಏರಬಲ್ಲದು.
ತಾರತಮ್ಯ ಇರದ ಸುಂದರ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಪ್ರಧಾನಿಯವರು ಸಲಹೆ ನೀಡಿದರು.
ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ನಮ್ಮ ಸಮಾಜ, ನಮ್ಮ ರಾಷ್ಟ್ರ ಮತ್ತು ನಮ್ಮೆಲ್ಲರನ್ನೂ ಒಂದು ರೀತಿಯ ಅಸ್ವಸ್ಥತೆ ಬಾಧಿಸುತ್ತಾ ಬಂದಿದೆ. ಆ ಅಸ್ವಸ್ಥತೆಯಿಂದಲೇ ನಾವು ನಮ್ಮ ಕರ್ತವ್ಯಗಳಿಂದ ವಿಮುಖರಾಗಿದ್ದೆವೆ. ಅವುಗಳಿಗೆ ಆದ್ಯತೆ ನೀಡುವುದನ್ನು ಮರೆತಿದ್ದೇವೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವೈದ್ಯಕೀಯ ಕೋರ್ಸ್;ಮೀಸಲಾತಿ ಮೆರಿಟ್ ವಿರುದ್ಧವಲ್ಲ- ಸುಪ್ರೀಂ

0

ವೈದ್ಯಕೀಯ ಕೋರ್ಸ್ ಗಳ ಪ್ರವೇಶದಲ್ಲಿ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಕ್ಕೆ ಶೇ. 27ರಷ್ಟು ಮತ್ತು ಆರ್ಥಿಕ ದುರ್ಬಲ ವರ್ಗಗಳಿಗೆ ನೀಡುವ ಶೇ. 10ರಷ್ಟು ಮೀಸಲಾತಿಯು ಮೆರಿಟ್ ವಿರುದ್ಧವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅನ್ವಯ ಒಬಿಸಿ ಮತ್ತು ಇಡಬ್ಲ್ಯೂಎಸ್ ಗಳಿಗೆ ನೀಡುವ ಮೀಸಲಾತಿ ಸಿಂದುತ್ವವನ್ನು ಸುಪ್ರಿಂಕೋರ್ಟ್ ಜನವರಿ 7ರಂದೇ ಎತ್ತಿ ಹಿಡಿದಿತ್ತಾದರೂ, ನಿರ್ಧಾರದ ಹಿಂದಿನ ಕಾರಣಗಳ ಕುರಿತು ವಿಸ್ತೃತ ಆದೇಶ ಹೊರಡಿಸಿರಲಿಲ್ಲ. ಆದ್ದರಿಂದ ಪ್ರಸ್ತುತ ಸಂದರ್ಭದಲ್ಲಿ ವಿಸ್ತೃತ ಆದೇಶವನ್ನು ಹೊರಡಿಸಿದೆ.
“ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೆರಿಟ್ ಒಂದೇ ಯಶಸ್ಸಿನ ಮಾನದಂಡ ಆಗುವುದಿಲ್ಲ. ಅಲ್ಲಿ ಜೀವನಾನುಭವವೂ ಇರಬೇಕಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗೆ ಮೆರಿಟ್ ಸಮಯೋಚಿತ ವಾಗಿರಬೇಕು. ಆದ್ದರಿಂದ ಒಬಿಸಿ ಮತ್ತು ಇಡಬ್ಲ್ಯೂಎಸ್ ಗಳಿಗೆ ನೀಡುವ ಮೀಸಲಾತಿಯು ಮೆರಿಟ್ ವಿರುದ್ಧವಲ್ಲ. ಅದು ಸಾಮಾಜಿಕ ನ್ಯಾಯದ ವಿಸ್ತರಣೆಯಾಗಿದೆ ಎಂದು ನ್ಯಾ. ಡಿ. ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮತದಾರರೆಲ್ಲಿ ಸಕ್ರೀಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು-ನ್ಯಾ.ಮಲ್ಲಿಕಾರ್ಜುನ ಗೌಡ

0

ಮತದಾನದ ಹಕ್ಕು ಅತ್ಯಂತ ಮಹತ್ವದ ಹಕ್ಕಾಗಿದ್ದು, ಸೂಕ್ತವಾದ ವ್ಯಕ್ತಿಗೆ ಮತವನ್ನು ದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಗುಲಾಮರಂತೆ ಇದ್ದ ನಮಗೆ ಸ್ವಾತಂತ್ರ್ಯಾನಂತರ ನಮ್ಮದೇ ಆದ ಸಂವಿಧಾನ ರಚಿಸಿ, ನಮ್ಮ ನಾಯಕರನ್ನು ಆರಿಸಲು ಮತದಾನದ ಹಕ್ಕನ್ನು ನೀಡಲಾಯಿತು.

ಈ ಮತದಾನದ ಹಕ್ಕು ಅತ್ಯಂತ ಮಹತ್ವವಾದ ಹಕ್ಕು. ದಾನ ಎಂದರೆ ಯಾವುದೇ ಅಪೇಕ್ಷೆ ಇಲ್ಲದೆ ಪಾತ್ರರಿಗೆ ನೀಡುವುದು. ದಾನ ಅಪಾತ್ರರಿಗೆ ನೀಡಬಾರದು. ಹೀಗೆ ನೀಡಿದರೆ ಪಾಪ ಬರುತ್ತದೆ. ಪಾತ್ರರಿಗೆ ದಾನ ನೀಡಿದಲ್ಲಿ ಮಾತ್ರ ಪುಣ್ಯ ಬರುತ್ತದೆ. ಆದರೆ ಮತವನ್ನು ಮಾರಾಟ ಮಾಡುವ ಸ್ಥಿತಿ ಬಂದಿರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು.

ನಾವು ಎಂತಹ ವ್ಯಕ್ತಿಗೆ ನಮ್ಮ ಅಮೂಲ್ಯವಾದ ಮತವನ್ನು ನೀಡುತ್ತಿದ್ದೇವೆ ಎಂದು ಎಲ್ಲರೂ ಯೋಚಿಸಬೇಕು. ನಮ್ಮನ್ನೆಲ್ಲ ಶಾಂತಿ-ಸುವ್ಯವಸ್ಥೆಯಿಂದ ಒಗ್ಗೂಡಿಸಿಕೊಂಡು ಹೋಗುವ, ದಕ್ಷ ಆಡಳಿತಗಾರನಾಗುವ ಗುಣವುಳ್ಳ ಅಭ್ಯರ್ಥಿಗೆ ನಮ್ಮ ಮತವನ್ನು ನೀಡಬೇಕು. ಯುವಜನತೆ ಈ ಬಗ್ಗೆ ವಿವೇಚನೆಯಿಂದ ಮತ ಚಲಾಯಿಸಬೇಕು. ನಾವು ಉತ್ತಿದ್ದನ್ನೇ ಬೆಳೆಯುತ್ತೇವೆ ಹಾಗೂ ಕೊಟ್ಟ ಮತವನ್ನು ವಾಪಸ್ ಪಡೆಯಲು ಅವಕಾಶವಿಲ್ಲ ಹಾಗಾಗಿ ಉತ್ತಮ ವ್ಯಕ್ತಿಗೆ ಮತ ನೀಡಬೇಕು. ಹಾಗೂ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಮಾತನಾಡಿ, ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೈಲಿಗಲ್ಲಾಗಿದ್ದು, ಎಲ್ಲ ಅರ್ಹ ಮತದಾರರು ಸ್ಥಳೀಯ, ವಿಧಾನಸಭಾ, ಲೋಕಸಭೆ, ಪರಿಷತ್ ಹೀಗೆ ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ನಾವು ದಕ್ಷ ಆಡಳಿತಗಾರರನ್ನು ಆರಿಸಲು ಸಾಧ್ಯ.

ಸಾಕ್ಷರರೇ ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ನಾನು ಎಲ್ಲ ಯುವ ಮತದಾರರಲ್ಲಿ ಕೋರುತ್ತೇನೆ ಏನೆಂದರೆ, 18 ವರ್ಷ ತುಂಬಿದ ಎಲ್ಲ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈಗ ಸುಲಭವಾಗಿ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬಹುದು. ಕೇವಲ ಜನ್ಮದಿನಾಂಕ, ವಿಳಾಸದ ದೃಢೀಕರಣ ಮತ್ತು ಫೋಟೊ ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲು ನಮೂನೆ-6, ಮರಣ, ಸ್ಥಳಾಂತ, ಪುನರಾವರ್ತನೆಯ ಕಾರಣಕ್ಕೆ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ವಿಳಾಸ, ವರ್ಗಾವಣೆ, ಬದಲಿ ಎಪಿಕ್ ಇತರೆ ತಿದ್ದುಪಡಿಗಾಗಿ ನಮೂನೆ-8 ರಲ್ಲಿ ಅರ್ಜಿ ನೀಡಿ ಆ್ಯಪ್‍ನಲ್ಲೇ ಸರಿಪಡಿಸುವ ಅವಕಾಶ ಇದೆ. ಯುವಜನತೆ ಇದರ ಉಪಯೋಗ ಮಾಡಿಕೊಂಡು ಇತರರಿಗೂ ತಿಳಿಸಿಕೊಡಬೇಕು ಎಂದು ತಿಳಿಸಿದ ಅವರು ಪ್ರತಿ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ಹಾಗೂ ಚುನಾವಣೆ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಟಗೊಳಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ರಾಷ್ಟ್ರೀಯ ಮತದಾನ ದಿನಾಚರಣೆ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ಸ್ವಾತಂತ್ರ್ಯ ಲಭಿಸಿದಾಗ ನಮ್ಮ ರಾಷ್ಟ್ರದಲ್ಲಿ ಕೇವಲ ಶೇ.15 ರಿಂದ 20 ಸಾಕ್ಷರತೆ ಇತ್ತು, ಇದೀಗೆ ಶೇ.74 ರಷ್ಟು ಸಾಕ್ಷರತೆ ಇದೆ. ಸಾಕ್ಷರತೆ ಇನ್ನೂ ಹೆಚ್ಚುತ್ತಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ಶೇ.60 ರಿಂದ 70 ಮಾತ್ರ ಮತದಾನ ಆಗುತ್ತಿದ್ದು, ನಾವೆಲ್ಲ ನಮ್ಮ ಸಾಂವಿಧಾನಿಕ ಹಕ್ಕಾದ ಮತದಾನದ ಹಕ್ಕನ್ನು ಚಲಾಯಿಸಿ ಸಕ್ರಿಯವಾಗಿ ಚುನಾವಣೆಗಳಲ್ಲಿ ಭಾಗವಹಿಸಬೇಕೆಂದರು.

ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಕೆ, ಶಿವಮೊಗ್ಗ ಉಪವಿಭಾಗಾಧಿಕಾರಿ ಹೆಚ್.ಬಿ.ಚನ್ನಪ್ಪ, ತಹಶೀಲ್ದಾರ್ ಗ್ರೇಡ್-2 ಗಣೇಶ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ :ಸಾಲದ ಕಂತು ಮುಂದೂಡಿಕೆ ಗ್ರಾಹಕರ ಹಕ್ಕಲ್ಲ- ಹೈಕೋರ್ಟ್

0

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಸಾಲದ ಮೇಲಿನ ಕಂತುಗಳ ಪಾವತಿ ಮುಂದೂಡಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಇತರೆ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದ್ದು ಕಡ್ಡಾಯವಲ್ಲ ಮತ್ತು ಅದನ್ನು ಗ್ರಾಹಕರು ಹಕ್ಕು ಎಂದು ಮಂಡಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರ್ ಬಿಐ ಮಾರಟೋರಿಯಂ (ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆಗೆ) ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿತ್ತು. ಅದು ಮಾರ್ಗಸೂಚಿಯಷ್ಟೇ. ಅದನ್ನು ಕಡ್ಡಾಯವಾಗಿ ಪಾಲಿಸಬೇಕೆಂದಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಸಣ್ಣ ಕೈಗಾರಿಕೆಗಳ ಉತ್ಪಾದಕರ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ವಿಭಾಗೀಯ ಪೀಠ ತೀರ್ಪು ನೀಡಿದ್ದು, ಏಕ ಸದಸ್ಯ ಪೀಠದ ಆದೇಶ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಹಾಗಾಗಿ ಅದನ್ನು ಮಾನ್ಯ ಮಾಡಲಾಗದು ಎಂದು ಹೇಳಿದೆ.
ಏಕಸದಸ್ಯಪೀಠ ಸಾಲ ಪಡೆದವರ ಪರ ಹಕ್ಕು ಸೃಷ್ಟಿಯಾಗಲಿದೆ ಎಂಬ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ. ಏಕಸದಸ್ಯಪೀಠ ತನ್ನ ವ್ಯಾಪ್ತಿಯನ್ನು ಮೀರಿದೆ ಮತ್ತು ತಪ್ಪೆಸಗಿದೆ ಎಂದು ಅಭಿಪ್ರಾಯಪಟ್ಟಿರುವ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ಅನೂರ್ಜಿತಗೊಳಿಸಿದೆ.
ವೆಲಂಕಣಿ ಇನ್ಫಾರ್ಮೆಷನ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿ ಮನವಿ ಆಲಿಸಿದ್ದ ಏಕಸದಸ್ಯಪೀಠ, ಸಾಲದ ಕಂತು ಪಾವತಿ ಅವಧಿ ವಿಸ್ತರಣೆ ಸೇರಿದಂತೆ ಕೋವಿಡ್ -19 ಸಂಕಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ನ ಅನುಷ್ಠಾನದ ಮೇಲೆ ಆರ್ ಬಿಐ ನಿಗಾ ವಹಿಸಬೇಕು ಎಂದು ಆದೇಶ ನೀಡಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಫೆಬ್ರವರಿ 21; ಹತ್ತನೇ ತರಗತಿ ಸಿದ್ಧತಾ ಪರೀಕ್ಷೆ ಆರಂಭ

0

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫೆ.21ರಿಂದ ಒಂದು ವಾರ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದೆ.
ಈ ಸಂಬಂಧ ಗುರುವಾರ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ಜರುಗಲಿವೆ.
ಪ್ರಥಮ ಭಾಷೆ ಮತ್ತು ಕೋರ್ ವಿಷಯಗಳ ಪರೀಕ್ಷೆಗೆ ಮತ್ತು 3 ಗಂಟೆ 15 ನಿಮಿಷ ಹಾಗೂ ಇತರೆ ವಿಷಯಗಳಿಗೆ 3 ಗಂಟೆ ಕಾಲಾವಕಾಶ ನೀಡಲಾಗಿದೆ.
ಫೆ. 21ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ.
ಫೆಬ್ರವರಿ 22ರಂದು ಸಮಾಜ ವಿಜ್ಞಾನ, ಫೆಬ್ರುವರಿ 23ರಂದು ದ್ವಿತೀಯ ಭಾಷೆ , ಇಂಗ್ಲಿಷ್ ಅಥವಾ ಕನ್ನಡ, ಫೆಬ್ರವರಿ 24ರಂದು ಗಣಿತ, ಫೆಬ್ರವರಿ 25 ರಂದು ತೃತೀಯ ಭಾಷೆ, ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಫೆಬ್ರವರಿ 26ರಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಇಲಾಖೆಯು ತಿಳಿಸಿದೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸೋಂಕು ಉಲ್ಬಣಿಸಿದರೆ ಸಾಕಷ್ಟು ಸೌಕರ್ಯವಿವೆ- ರಣದೀಪ್

0

ರಾಜ್ಯ ಸರ್ಕಾರವು ಕೋವಿಡ್ ಮೂರನೇ ಅಲೆ ಎದುರಿಸಲು ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಕೋವಿಡ್ ಚಿಕಿತ್ಸೆಗೆ ಗೊತ್ತು ಪಡಿಸಲಾಗಿರುವ 1.94 ಲಕ್ಷ ಹಾಸಿಗೆಗಳಲ್ಲಿ ಶೇ.73.71 ಹಾಸಿಗೆಗಳು ಖಾಸಗಿ ಆಸ್ಪತ್ರೆಯವರ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಚಿಕಿತ್ಸೆಗಾಗಿ ಸರ್ಕಾರದ ಮೀಸಲಿರಿಸಿದ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಮಾತ್ರ ಸರ್ಕಾರಿ ವ್ಯವಸ್ಥೆಯಡಿ ಇವೆ. ಇವುಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಹಾಸಿಗೆಗಳು ಸೇರಿವೆ. 1.43 ಲಕ್ಷ ಹಾಸಿಗೆಗಳು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಅಡಿಯಲ್ಲಿ ಗುರುತಿಸಲಾಗಿದೆ.

ರಾಜ್ಯ ಸರ್ಕಾರಕ್ಕೆ ಈಗಾಗಲೇ ಫೆಬ್ರವರಿ ತಿಂಗಳಿನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಉತ್ತುಂಗಕ್ಕೆ ಏರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡಲು ಬೇಕಾಗುವ ಐಸಿಯು ಹಾಸಿಗೆ 6,123 ಮಾತ್ರ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ತಿಳಿದುಬಂದಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಡಾ.ಹೆಚ್.ಎಂ. ಪ್ರಸನ್ನ ಅವರು “ಕೋವಿಡ್ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕ ಸಮಸ್ಯೆಯಾಗಿತ್ತು. ಈಗ ಆಸ್ಪತ್ರೆಗಳಿಗೆ ಪ್ರತ್ಯೇಕ ಘಟಕಗಳನ್ನು ನಿರ್ಮಿಸಿಕೊಂಡಿವೆ. ಸದ್ಯದ ಪರಿಸ್ಥಿತಿ ನೋಡಿದರೆ ಹಾಸಿಗೆ ಸಮಸ್ಯೆಯಾಗದು” ಎಂದು ತಿಳಿಸಿದ್ದಾರೆ.

“ಸದ್ಯ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಿಂಗಳ ಅಂತ್ಯದೊಳಗೆ ಎಲ್ಲಾ ಆಮ್ಲಜನಕ ತಯಾರಿಕಾ ಘಟಕಗಳು ಕಾರ್ಯಾರಂಭಿಸಲಿವೆ” ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.