ಮಹಾಮಾರಿ ಕೊರೋನಾ ವೈರಸ್ ರಣಕೇಕೆಯೂ 2 ವರ್ಷಗಳ ಕಾಲ ಜಗತ್ತಿನ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಡೆಡ್ಲಿ ಕಿಲ್ಲರ್ ವೈರಸ್ ಮತ್ತೆ ಹರಡಲಾರಂಭಿಸಿದೆ.
4ನೇ ಅಲೆ ಭೀತಿ ಆರಂಭವಾಗಿದೆ. ಈ ಹಿಂದೆ ಕೊರೋನಾ ಬಾಧಿತರಾದ ವ್ಯಕ್ತಿಗಳಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು ಎನ್ನಲಾಗಿತ್ತು.
ಇದೀಗ ವಿಜ್ಞಾನಿಗಳು ಮತ್ತೊಂದು ಸಂಶೋಧನೆಯನ್ನು ನಡೆಸಿದ್ದಾರೆ.
ಕೊರೋನಾ ವೈರಸ್ ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರದೆ ರಕ್ತನಾಳಗಳ ಮೇಲೆ ಪರಿಣಾಮ ಬೀರಿರುವುದನ್ನು ಪತ್ತೆಯನ್ನು ಅಮೆರಿಕದ ರಾಷ್ಟ್ರೀಯ ಆರೋಗ್ಯ ವಿಜ್ಞಾನಿಗಳ ಸಂಸ್ಥೆಯ ಅಂಗಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಆಂಡ್ ಸ್ಟ್ರೋಕ್ ಸಂಸ್ಥೆಯ ವಿಜ್ಞಾನಿಗಳು ಮಾಡಿದ್ದಾರೆ.
SARS-CoV-2, ಕೊರೋನಾ ವೈರಸ್ ಗೆ ಕಾರಣವಾಗುವ ವೈರಸ್ ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುವುದಿಲ್ಲ. ಸೋಂಕಿನಿಂದ ಮೆದುಳಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ
ಇದು ಅಲ್ಪಾವಧಿಯ ಹಾಗೂ ದೀರ್ಘಾವಧಿಯ ನರರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಕೊರೋನಾ ವೈರಸ್ ರೋಗಿಯ ಮೆದುಳಿನಲ್ಲಿ ಪತ್ತೆಯಾಗಿಲ್ಲ ಎನ್ನವ ವಾದಕ್ಕೆ ಬದ್ಧವಾಗಿರುವ ಸಂಸ್ಥೆ, ಕೊರೋನಾ ತಡೆಗಟ್ಟಲು ತಯಾರಾಗುವ ಪ್ರತಿಕಾಯಗಳ ಅಸಮತೋಲನದಿಂದ ವೈರಸ್ ರಕ್ತ ಹಾಗೂ ಮೆದುಳಿನ ನಡುವಿನ ಕೋಶಗಳ ಮೇಲೆ ದಾಳಿ ಮಾಡಬಹುದು. ಅಲ್ಲದೆ ಅಲ್ಲಿರುವ ಎಂಡೋಥೀಲಿಯಮ್ ಕೋಶಗಳು ರಕ್ತ ಹಾಗೂ ಮೆದುಳಿನ ನಡುವೆ ತಡೆಗೋಡೆಯಂತಿದೆ.ಅಗತ್ಯ ವಸ್ತುಗಳು ಮಾತ್ರ ಮೆದುಳಿಗೆ ಪ್ರವೇಶಿಸುವಂತೆ ಮಾಡುತ್ತದೆ.
ಆದರೆ, ಈ ಕೋಶಗಳ ಮೇಲೆ ಕೊರೋನಾ ವೈರಸ್ ದಾಳಿಯಾದಾಗ ರಕ್ತದಲ್ಲಿನ ಪ್ರೊಟೀನ್ ಅಂಶ ಸೋರಿಕೆಯಾಗುವ ಮೂಲಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ಸಂಶೋಧಕರ ತಂಡ.
ಕೊರೋನಾದಿಂದ ಸಾವನ್ನಪ್ಪಿದ 9 ಜನರ ಮೆದುಳಿನ ರಕ್ತನಾಳಗಳನ್ನು ಪರೀಕ್ಷೆಗೆ ಒಳಪಡಿಸಿದ ವಿಜ್ಞಾನಿಗಳ ತಂಡ ಮೆದುಳಿನ ರಕ್ತನಾಳಗಳ ಕೋಶಗಳ ಮೇಲೆ ಕೋವಿಡ್ ಆಂಟಿ ಬಾಡೀಸ್ ದಾಳಿಯಾಗಿರುವುದನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ಮಾರಕ ಕೊರೋನಾ ವೈರಸ್ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ ಎಂದು ಹೇಳಿದ್ದಾರೆ.
ವೈರಸ್‌ಗಳ ಮೆದುಳಿನಲ್ಲಿನ ರಕ್ತನಾಳಗಳ ಜೀವಕೋಶಗಳ ಮೇಲಿನ ದಾಳಿಯಿಂದ, ಉರಿಯೂತ ಮತ್ತು ಹಾನಿಯನ್ನು ಉಂಟುಮಾಡುತ್ತವೆ. ಎಂಡೋಥೀಲಿಯಮ್ ಕೋಶಗಳು ಕ್ರಿಯಾಶೀಲವಾದಾಗ ಪ್ಲೇಟ್‌ಲೇಟ್‌ಗಳು ರಕ್ತನಾಳಗಳ ಗೋಡೆಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾದಾಗ ಸೋರುವಿಕೆಗೆ ಕಾರಣವಾಗುತ್ತದೆ.
ಮೆದುಳಿನಲ್ಲಿ ಸೋರುವಿಕೆ ಉಂಟಾದರೆ ಹಾನಿಯನ್ನು ಸರಿಪಡಿಸಲು ಮ್ಯಾಕ್ರೊಫೇಗಸ್ ಎನ್ನುವ ಇಮ್ಯೂಮ್ ಕೋಶಗಳು ನೆರವಾಗುತ್ತವೆ. ಇದರಿಂದಾಗಿ ತಲೆಯಲ್ಲಿ ಉರಿಯೂತ ಮತ್ತು ನರಗಳಿಗೆ ಹಾನಿಯಾಗುತ್ತದೆ. ಹೀಗಾಗಿ ಮೆದುಳಿಗೆ ಹಾನಿಯಾಗುತ್ತದೆ. ಇದರ ಹೊರತಾಗಿ ಕೊರೋನಾ ವೈರಸ್‌ಗಳು ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಎನ್‌ಐಎನ್‌ಡಿಎಸ್ ಕ್ಲಿನಿಲ್ ಡೈರೆಕ್ಟರ್ ಅವೀಂದ್ರನಾಥ್ ಹೇಳಿದ್ದಾರೆ