ಭೂಮಿಯ ಮೇಲೆ ಶೇ.71ರಷ್ಟು ಭಾಗ ನೀರು, ಉಳಿದ ಭಾಗ ಭೂಮಿ ಇದೆ. ಆದರೆ, ಅದೆಷ್ಟೇ ಮುಂದುವರೆದರೂ ಇದುವರೆಗೆ ಮಾನವರು ಭೂಮಿಯ ಹಲವು ಭಾಗಗಳನ್ನು ತಲುಪಲು ಸಾಧ್ಯವಾಗಿಲ್ಲ. ಈಗ ಮಾನವರು ತುಂಬಾ ಹೈಟೆಕ್ ಆಗಿದ್ದಾರೆ. ಆದ್ದರಿಂದ, ಇಲ್ಲಿಯವರೆಗೆ ಯಾರೂ ತಲುಪಲು ಸಾಧ್ಯವಾಗದ ಅನೇಕ ಸ್ಥಳಗಳನ್ನು ಕಂಡುಹಿಡಿಯುತ್ತಿದ್ದಾರೆ.
ಆ ಸ್ಥಳಗಳಲ್ಲಿ ಗೊತ್ತೇ ಇರದ ಅದೆಷ್ಟೋ ರಹಸ್ಯಗಳು ಹೊರಬರುತ್ತಿವೆ. ಭಾರತದ ನೆರೆಯ ದೇಶವಾದ ಚೀನಾದಲ್ಲಿ ಮತ್ತೊಂದು ಜಗತ್ತು ಪತ್ತೆಯಾಗಿದೆ. ಪ್ರಥಮ ಬಾರಿಗೆ ಮಾನವ ಇಲ್ಲಿಗೆ ಭೇಟಿ ನೀಡಿದ್ದಾನೆ.
ಈಗ, ಸಂಪೂರ್ಣ ಮರಗಳಿಂದ ಆವೃತವಾಗಿದ್ದ ಭಾರತದ ನೆರೆಯ ಚೀನಾದ ಅರಣ್ಯದಲ್ಲಿ ಬೃಹತ್ ಹೊಂಡ ಪತ್ತೆಯಾಗಿದೆ. ಹಲವು ಜನರು ಇದನ್ನು ಮತ್ತೊಂದು ಜಗತ್ತು ಎಂದು ಪರಿಗಣಿಸಿದ್ದಾರೆ.
ಮತ್ತೊಂದು, ವಿಶೇಷವೆಂದರೆ ಸೂರ್ಯನ ಬೆಳಕು ಕೂಡ ಇಲ್ಲಿಗೆ ಬೀಳುವುದಿಲ್ಲ. ಇತ್ತೀಚೆಗೆ ಒಂದು ತಂಡ ಇಲ್ಲಿಗೆ ಭೇಟಿ ನೀಡಿದೆ. ಇದರಿಂದಾಗಿ ಈ ಸ್ಥಳ ತನ್ನೊಳಗೆ ಹುದುಗಿರುವ ರಹಸ್ಯಗಳು ಬಹಿರಂಗಗೊಂಡಿವೆ.
ಚೀನಾದ ಮಾಧ್ಯಮಗಳ ಪ್ರಕಾರ, ಈ ದೈತ್ಯ ಕುಳಿಯು 630 ಅಡಿಗಳಷ್ಟಿದೆ. ಇದು ಲೇ ಕೌಂಟಿಯ ಕಾಡುಗಳಲ್ಲಿ ಅಡಗಿದೆ. ಸ್ಥಳೀಯರು ಇದನ್ನು ಶೆನ್ಯಿಂಗ್ ಟಿಯಾನ್ಚೆಂಗ್ ಎಂದು ಕರೆಯುತ್ತಾರೆ. ಇದು ಇತರ ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ. ಜೊತೆಗೆ ಇದು ಅಂತ್ಯವಿಲ್ಲದಷ್ಟು ಆಳವಾಗಿದೆ ಎಂದು ನಂಬಲಾಗಿದೆ. ಆದರೆ, ಈಗ ಒಬ್ಬ ವ್ಯಕ್ತಿ ಒಳಗೆ ಪ್ರವೇಶಿಸಿ ಹೊರಬಂದಾಗ, ಇದರಲ್ಲಿ ಅಡಗಿದ್ದ ರಹಸ್ಯಗಳು ಹೊರಬಂದಿವೆ.
ಮೇ 6 ರಂದು ಚೆನ್ ಲಿಕ್ಸಿನ್ ಈ ಹೊಂಡದೊಳಗೆ ಹೋಗಿದ್ದರು ಎಂದು ವರದಿ ತಿಳಿಸಿದೆ. ಅವರೊಂದಿಗೆ ಅವರ ತಂಡವೂ ಇತ್ತು. ಇದರ ಅಗಲವು 490 ಅಡಿಗಳು, ಆದರೆ ತಂಡವು ಅದರೊಳಗೆ ಹೋಗಲು ಮೂರು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದೆ. ಸಂಶೋಧನೆಗಾಗಿ ಅವರು ಅದರೊಳಗೆ ಸಾಕಷ್ಟು ಫೋಟೋಗಳನ್ನು ತೆಗೆದಿದ್ದಾರೆ. ಆದರೆ, ಅದರಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಪತ್ತೆಯಾಗಿಲ್ಲ.
ಹೊಂಡದೊಳಗೆ 130 ಅಡಿ ಎತ್ತರದ ಮರಗಳಿವೆ. ಅದರೊಳಗೆ ಹೋಗುವ ಮಾರ್ಗದ ಕಡೆಗೆ ವಾಲಿದ್ದು, ಇದರಿಂದ ಸೂರ್ಯನ ಬೆಳಕು ಒಳಗೆ ತಲುಪುವುದಿಲ್ಲ ಎಂದು ಈ ಹೊಂಡ ಪತ್ತೆ ಮಾಡಿದ ತಂಡ ತಿಳಿಸಿದೆ. ಈ ಪ್ರದೇಶವು ಅಂತಹ ಹೊಂಡಗಳಿಂದ ತುಂಬಿದೆ. ಇಲ್ಲಿಯವರೆಗೆ ಒಟ್ಟು 30 ಸಿಂಕ್‌ಹೋಲ್‌ಗಳು ಅಂದರೆ ದೈತ್ಯ ಹೊಂಡಗಳನ್ನು ಕಂಡುಹಿಡಿಯಲಾಗಿದೆ. ಮಾನವರಿಗೆ ತಿಳಿದಿಲ್ಲದ ಕೆಲವು ಹೊಸ ಜಾತಿಯ ಮರಗಳು ಅಲ್ಲಿವೆ ಎಂದು ತಂಡವು ಭಾವಿಸುತ್ತದೆ.
ಈ ದೈತ್ಯ ಹೊಂಡಗಳು ಹೇಗೆ ರೂಪುಗೊಂಡವು ಎಂಬುದು ಇನ್ನೂ ತಿಳಿದಿಲ್ಲವಾದರೂ, ತಜ್ಞರು ಒಂದು ಆಳವಾದ ಸಂಶೋದನೆ ಇಲ್ಲಿ ಮುಖ್ಯವಾಗಿದೆ ಎಂದು ಪರಿಗಣಿಸುತ್ತಿದ್ದಾರೆ. ಅವರ ಪ್ರಕಾರ, ನೀರಿನ ಹರಿವಿನಿಂದಾಗಿ, ಪರ್ವತಗಳು ಒಳಗೆ ಮುಳುಗಿರಬೇಕು, ನಂತರ ಈ ಸ್ಥಳವು ಹಳ್ಳವಾಗಿ ಮಾರ್ಪಟ್ಟಿದೆ. ಆದಾಗ್ಯೂ, ಈ ಬಗ್ಗೆ ಇನ್ನೂ ಸಂಶೋಧನೆ ಅಗತ್ಯವಿದೆ.