ದೇಶದಲ್ಲಿ 2021ರ ಡಿಸೆಂಬರ್ ವೇಳೆಗೆ 5.3 ಕೋಟಿ ಮಂದಿ ನಿರುದ್ಯೋಗಿಗಳು ಇದ್ದಾರೆ. ಹಾಗೂ ಇದರಲ್ಲಿ ಬಹುಪಾಲು ಮಂದಿ ಮಹಿಳೆಯರು ಎಂದು ಖಾಸಗಿ ವಲಯದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ. ನಿರುದ್ಯೋಗಿಗಳ ಪೈಕಿ 1.7 ಕೋಟಿ ಮಂದಿ ಮತ್ತೆ ಉದ್ಯೋಗಕ್ಕೆ ಸೇರಿಕೊಳ್ಳಲು ಬಯಸುತ್ತಿದ್ದಾರೆ. ಅವರಿಗೆ ಕೂಡಲೇ ಉದ್ಯೋಗ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಸಿಎಂಐಇ ತಿಳಿಸಿದೆ. ಉದ್ಯೋಗಾವಕಾಶಗಳು ಕಡಿಮೆಯಾಗಿರುವುದು ಮಾತ್ರವಲ್ಲದೆ, ಯುವ ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹಕರ ವಾತಾವರಣ ಇಲ್ಲದಿರುವುದು ಸವಾಲಾಗಿ ಪರಿಣಮಿಸಿದೆ. ಇದು ಉದ್ಯೋಗ ಲಭ್ಯತೆಯ ಕೊರತೆ ಅಥವಾ ಅವರಿಗೆ ಸಾಮಾಜಿಕ ಬೆಂಬಲದ ಕೊರತೆ ಇದೆ ಎಂಬುದನ್ನು ಗಮನಿಸಬೇಕು ಎಂದು ಸಿಎಂಐಇ ವರದಿ ತಿಳಿಸಿದೆ. ಈ ನಡುವೆ ಐಟಿ ವಲಯ 2022ರಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ. ಕೆಲ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ,ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸೇರಿ ನಾನಾ ಇಲಾಖೆಗಳಿಂದ ಇಂಧನ ಇಲಾಖೆಗೆ ಒಟ್ಟು 12,000 ಕೋಟಿ ರೂ. ಸಂದಾಯ ಬಾಕಿ ಇದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆದೇಶ ಹೊರಡಿಸಿದರೆ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದರು. ರಾಜ್ಯದಲ್ಲಿ ವರ್ಷಕಾಲ ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡಗಿ ಸ್ಮರಿಸುವ ಮತ್ತು ಹೋರಾಟದಲ್ಲಿ ಕನ್ನಡಿಗರ ಪಾತ್ರ ತಿಳಿಸುವ ಆಜಾದಿ ಕಾ ಅಮೃತ ಮಹೋತ್ಸವ ನಡೆಯಲಿದೆ. ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್ ನಲ್ಲಿ ಅಮೃತ ಮಹೋತ್ಸವ ಆಚರಿಸಲಾಗುವುದು. ಸ್ವಾತಂತ್ರ್ಯಯೋಧರ ಪುಸ್ತಕ ರಚನೆ ಹಾಗೂ ಸ್ವಾತಂತ್ರ್ಯದ ನೆಲದಲ್ಲಿ ಒಂದು ದಿನ ಎಂಬ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ನೀಡಬೇಕಾದ ಅನುದಾನ ಬಿಡುಗಡೆ ಹಾಗೂ ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಸಂಬಂಧ ಜ.26ರ ಬಳಿಕ ಹೊಸದಿಲ್ಲಿಗೆ ತೆರಳಿ ಕೇಂದ್ರ ಸಚಿವರು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
1971ರ ಇಂಡೋ-ಪಾಕ್ ಕದನದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥವಾಗಿ ದಿಲ್ಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದ್ದ ಅಮರ ಜವಾನ್ ಜ್ಯೋತಿಯನ್ನು ರಾಜಧಾನಿಯ ರಾಷ್ಟ್ರೀಯ ಯುದ್ದ ಸ್ಮಾರಕದಲ್ಲಿ ವಿಲೀನಗೊಳಿಸಲಾಗಿದೆ. 1972ರ ಜ.26ರಂದು ಇಂದಿರಾಗಾಂಧಿಯವರು ಜ್ಯೋತಿಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆಗೊಂಡ 80 ವರ್ಷಗಳ ಬಳಿಕ ಅಮರ ಜವಾನ್ ಜ್ಯೋತಿ ಸ್ಥಳಾಂತರಗೊಂಡಿದ್ದು, ಜ್ಯೋತಿ ನಂದಿಸಿದ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ನವಭಾರತದ ಹೆಸರನ್ನು ಇನ್ನೆಷ್ಟು ಸ್ಮಾರಕಗಳು ಹೊಸ ಐಡಿಯಾಗೆ ಬಲಿಯಾಗಬೇಕೋ ಗೊತ್ತಿಲ್ಲ.ಎರಡೂ ಸ್ಮಾರಕಗಳಲ್ಲಿ ಜ್ಯೋತಿ ಉರಿಸುವುದು ಸರ್ಕಾರಕ್ಕೆ ಕಷ್ಟವೇನಿರಲಿಲ್ಲ ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೆದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಅಥವಾ ಜ್ವಾಲೆಗಳ ವಿಲೀನವು ಒಂದು ನೈಸರ್ಗಿಕ ಕ್ರಿಯೆ. ಇದು ತಾರ್ಕಿಕವಾಗಿಯೂ ಸರಿ ಇದೆ. ಹುತಾತ್ಮ ಯೋಧರು, ಸಮರಗಳ ನೆನಪಿಗೆ ಒಂದೇ ಪ್ರಮುಖ ಸ್ಥಳವಿದ್ದರೆ ಉತ್ತಮವೇ. ಇಲ್ಲಿಯೇ ಎಲ್ಲ ಗೌರವಾರ್ಥ ಕಾರ್ಯಕ್ರಮಗಳನ್ನು ನಡೆಸಬಹುದು. ಸರ್ಕಾರದ ನಡೆ ಸೇರಿ ಇದೆ ಎಂದು ಭೂಸೇನೆ ಮಾಜಿ ಮುಖ್ಯಸ್ಥ ವೇದ್ ಮಲಿಕ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಶಸ್ತ್ರ ಪಡೆಯ ಸಂಯೋಜಿತ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಬಿ.ಆರ್. ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ, ಅಮರಜ್ಯೋತಿ ಜ್ವಾಲೆಯನ್ನು ಭಾಗಶಃ ತೆಗೆದುಕೊಂಡು ಹೋಗಿ ಇಂಡಿಯಾ ಗೇಟ್ ನಿಂದ 400 ಮೀ. ದೂರದಲ್ಲಿರುವ ಎನ್ ಡಬ್ಲ್ಯೂ ಎಂ ನಲ್ಲಿ ವಿಲೀನಗೊಳಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಹಾಗೂ ಯೋಧರು ಮಿಲಿಟರಿ ಗೌರವ ಸಲ್ಲಿಸಿದರು. ಮೊದಲ ವಿಶ್ವಯುದ್ಧ ಹಾಗೂ ಅಂಗ್ಲೋ -ಆಫ್ಘನ್ ತಮ್ಮ ಪರವಾಗಿ ಹೋರಾಡಿದ ಯೋಧರಿಗಾಗಿ ಬ್ರಿಟಿಷರು ಇಂಡಿಯಾ ಗೇಟ್ ನಿರ್ಮಿಸಿದ್ದರು. 1971ರ ಇಂಡೋ-ಪಾಕ್ ಕದನದಲ್ಲಿ ಹುತಾತ್ಮ ಯೋಧರ ಗೌರವಾರ್ಥವಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಇಂಡಿಯಾ ಗೇಟ್ ಬಳಿ ಅಮರ ಜವಾನ್ ಜ್ಯೋತಿ ನಿರ್ಮಿಸಲು ಆದೇಶಿಸಿದ್ದರು.
ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಯವರೆಗೆ ಬೋಧನೆ ಮಾಡಲು ಒಟ್ಟು ಹದಿನೈದು ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಂಡಿದೆ. ಈ ಸಂಬಂಧ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಭಾಷಾ ವಿಷಯಗಳಲ್ಲಿ ಹುದ್ದೆ ಬಯಸುವ ಅಭ್ಯರ್ಥಿಗಳು ಪದವಿ ವೇಳೆ ಭಾಷಾ ವಿಷಯಗಳ ಜೊತೆಗೆ , ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ತೆಲುಗು,ತಮಿಳು, ಮಲಯಾಳಂ, ಕೊಂಕಣಿ, ಸಂಸ್ಕೃತ ಸೇರಿದಂತೆ ಇತರೆ ಭಾಷೆ ವಿಷಯಗಳಲ್ಲಿ ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ಕೆಲಸ ಮಾಡಿರಬೇಕು. ಈ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದಿರಬೇಕು. ತರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ, ಡಾ.ಬಿ.ಆರ್. ಅಂಬೇಡ್ಕರ್ ವಿಧಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದು. ಇಂಜಿನಿಯರಿಂಗ್ ಪದವೀಧರರಿಗೂ ಅವಕಾಶ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಆರ್ಕಿಟೆಕ್ಚರ್ ವಿಷಯವನ್ನೂ ಹೊರತುಪಡಿಸಿ ಕನಿಷ್ಠ ಮೂರು ಅಥವಾ ನಾಲ್ಕು ಸೆಮಿಸ್ಟರ್ ಗಳಲ್ಲಿ ಗಣಿತ ಅಥವಾ ಅನ್ವಯಿಕ ಗಣಿತ ವಿಷಯ ಅಭ್ಯಾಸ ಮಾಡಿರುವ ಇಂಜಿನಿಯರಿಂಗ್ ಪದವೀಧರರನ್ನೂ ಗಣಿತ ಶಿಕ್ಷಕರ ಹುದ್ದೆಗೆ ಪರಿಗಣಿಸಲಾಗಿದೆ. ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಜೊತೆಗೆ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಸ್ಯಾಟಿಸ್ಟಿಕ್ಸ್,ಜಿಯೋಗ್ರಫಿ, ಜಿಯಾಲಜಿ ಮತ್ತು ಬಯೋಟೆಕ್ನಾಲಜಿ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದು. ಜಿಯಾಲಜಿಕಲ್ ಸೈನ್ಸ್ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ರಸಾಯನಶಾಸ್ತ್ರದೊಂದಿಗೆ ಇತರೆ ಎರಡು ಐಚ್ಛಿಕ ವಿಷಯಗಳಾಗಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಿರಿಕಲ್ಚರ್, ಎನ್ವಿರಾನ್ಮೆಂಟ್ ಸೈನ್ಸ್, ಜೆನೆಟಿಕ್ಸ್ ಹಾಗೂ ಗಣಿತ ವಿಷಯಗಳನ್ನು ಅಧ್ಯಯನ ಮಾಡಿದವರಿಗೂ ಅವಕಾಶ ನೀಡಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಲಾಕ್ ಡೌನ್ ವಿಷಯವಾಗಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರವು ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಉಳಿದೆಡೆ ಪರಿಸ್ಥಿತಿ ಅವಲೋಕಿಸಿ ಸ್ಥಳೀಯ ಅಧಿಕಾರಿಗಳು ಎಲ್ಲಾ ತರಗತಿಗಳನ್ನು ತೆರೆಯುವ ಬಗ್ಗೆ ತೀರ್ಮಾನಿಸಲು ಸರ್ಕಾರ ಅವಕಾಶ ನೀಡಿದೆ. ಸಾರ್ವಜನಿಕರು, ಹೋಟೆಲ್ ಉದ್ಯಮಿಗಳು ಸೇರಿದಂತೆ ನಾನಾ ವಲಯದವರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರವು ವಾರಾಂತ್ಯ ಕರ್ಫ್ಯೂ ಸಹ ರದ್ದುಗೊಳಿಸಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಡಾ.ಕೆ. ಸುಧಾಕರ್, ಆರಗ ಜ್ಞಾನೇಂದ್ರ, ಮತ್ತು ಬಿ.ಸಿ. ನಾಗೇಶ್ ಹಾಗೂ ಇನ್ನಿತರ ಪ್ರಮುಖ ಸಚಿವರ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದರು. ಕೋವಿಡ್ ಸೋಂಕು ಪ್ರಮಾಣ ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ವಾರಾಂತ್ಯ ಕರ್ಫ್ಯೂ ಹಿಂಪಡೆಯುವ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಇದರೊಂದಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಶುಕ್ರವಾರ ರಾತ್ರಿ 10ರಿಂದ ಸೋಮವಾರ 5:00 ರವರೆಗಿನ ವಾರಾಂತ್ಯ ಕರ್ಫ್ಯೂ ವಾಪಸ್ ಪಡೆಯಲಾಯಿತು. ವಾರದ ಎಲ್ಲಾ ದಿನ ರಾತ್ರಿ 10ರಿಂದ ಮುಂಜಾನೆ 5 ರವರೆಗೆ ಕರ್ಫ್ಯೂ ಜಾರಿ. ಈವರೆಗೆ ಹೊರಡಿಸಲಾಗಿರುವ ಆದೇಶಗಳನ್ನು ಉಲ್ಲೇಖಿಸಲಾದ ನಿರ್ಬಂಧಗಳ ಮುಂದುವರಿಕೆ ಮಾಡಲಾಗಿದೆ. ಎಲ್ಲ ಬಗೆಯ ಜಾಥಾ ,ಧರಣಿ, ಸಮಾವೇಶಗಳಿಗೆ ನಿರ್ಬಂಧ ಮುಂದುವರಿಕೆ. ಮದುವೆ ಸಮಾರಂಭಕ್ಕೆ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಯಿತು. ಸಿನಿಮಾ, ರಂಗಮಂದಿರ, ಸಭಾಂಗಣದಲ್ಲಿ 50% ಆಸನ ಭರ್ತಿಗೆ ಅನುಮತಿ. ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆ, ಮೆರವಣಿಗೆಗೂ ನಿಷೇಧ ಮುಂದುವರಿಕೆ. ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ತಿಂಡಿ ತಿನಿಸು ಮಾರಾಟ ಕೇಂದ್ರಗಳಲ್ಲಿ 50% ಸೀಟಿಂಗ್ ಎರಡೂ ಡೋಸ್ ಲಸಿಕೆ ಪಡೆದವರಿಗೆ ಅಷ್ಟೇ ಪ್ರವೇಶ. ಮಹಾರಾಷ್ಟ್ರ, ಕೇರಳ ಹಾಗೂ ಗೋವಾ ಗಡಿಭಾಗದಲ್ಲಿ ಕಟ್ಟುನಿಟ್ಟಿನ ನಿಗಾ ಇಡಲು ಸೂಚಿಸಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
2021ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ನೀಲಗಾರರ ಪದಗಳ ಖ್ಯಾತಿಯ ಮಳವಳ್ಳಿ ಮಹಾದೇವಸ್ವಾಮಿ ಸೇರಿದಂತೆ ಒಟ್ಟು 30 ಹಿರಿಯ ಜಾನಪದ ಕಲಾವಿದರು ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಬಿ ಮಂಜಮ್ಮ ಜೋಗತಿ ಅವರು ಕರ್ನಾಟಕ ಜಾನಪದ ಅಕಾಡೆಮಿಯ ಕಚೇರಿಯಲ್ಲಿ ನಡೆದಂತಹ ಸುದ್ದಿಗೋಷ್ಠಿ ಪ್ರಶಸ್ತಿ ಪ್ರಕಟಿಸಿದರು. ಈ ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ಹಾಗೂ ತಜ್ಞ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ ಎಂದು ಮಂಜಮ್ಮ ಜೋಗತಿ ಅವರು ತಿಳಿಸಿದರು.
ಈ ಬಾರಿಯ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ. ಬೆಂಗಳೂರು ನಗರ ಜಿಲ್ಲೆಯ ಗಂಗಮ್ಮ ಅವರ ಸೋಬಾನೆ ಪದಕ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಾನಪದ ಕಥೆಗಾರ ತಿಮ್ಮಯ್ಯ. ರಾಮನಗರ ಜಿಲ್ಲೆಯ ಚಿಕ್ಕಮ್ಮ (ಸೋಬಾನಪದ ), ತುಮಕೂರು ಜಿಲ್ಲೆಯ ಕಡಬ ಶ್ರೀನಿವಾಸ (ಜಾನಪದ ಹಾಸ್ಯ ಜಾದುಗಾರ), ಚಿಕ್ಕಬಳ್ಳಾಪುರ ಜಿಲ್ಲೆಯ ಜನಪದ ಗಾಯಕ ಗ.ನ.ಅಶ್ವತ್ಥ, ಕೋಲಾರ ಜಿಲ್ಲೆಯ ನಾರಾಯಣಸ್ವಾಮಿ (ತತ್ವಪದ), ಶಿವಮೊಗ್ಗ ಜಿಲ್ಲೆಯ ಲಕ್ಷ್ಮಿ ರಾಮಪ್ಪ (ಹಸೆ ಚಿತ್ತಾರ), ಚಿತ್ರದುರ್ಗ ಜಿಲ್ಲೆಯ ಚಂದ್ರಮ್ಮ (ಮದುವೆ ಹಾಡು), ದಾವಣಗೆರೆ ಜಿಲ್ಲೆಯ ರಂಗಮ್ಮ (ಜನಪದ ಗೀತೆ), ಮಂಡ್ಯ ಜಿಲ್ಲೆಯ ಮಹದೇವಸ್ವಾಮಿ (ನೀಲಗಾರರ ಪದ), ಮೈಸೂರು ಜಿಲ್ಲೆಯ ಮಹದೇವು (ಬೀಸುಕಂಸಾಳೆ), ಹಾಸನ ಜಿಲ್ಲೆಯ ಹೆಚ್.ಎನ್. ರಾಮಯ್ಯ (ಕೀಲುಕುದುರೆ), ದಕ್ಷಿಣ ಕನ್ನಡ ಜಿಲ್ಲೆಯ ವೆಂಕಟೇಶ ಬಂಗೇರ (ಕರಗ ನೃತ್ಯ), ಚಾಮರಾಜನಗರ ಜಿಲ್ಲೆಯ ಆರ್.ಎಂ. ಶಿವಮಲ್ಲೇಗೌಡ (ಗೊರವರ ಕುಣಿತ), ಚಿಕ್ಕಮಗಳೂರು ಜಿಲ್ಲೆಯ ಹನುಮಕ್ಕ (ತತ್ವಪದ), ಕೊಡಗು ಜಿಲ್ಲೆಯ ಜೆ.ಕೆ.ಮರಿ (ಜೇನುಕುರುಬರ ನೃತ್ಯ ಮತ್ತು ಹಾಡು). ಉಡುಪಿ ಜಿಲ್ಲೆಯ ಪದ್ಮಾವತಿ ಆಚಾರ್ಯ (ನಾಟಿವೈದ್ಯ). ಧಾರವಾಡ ಜಿಲ್ಲೆಯ ಕುಬೇರ ಗೌಡ ಮುರಳ್ಳಿ (ಜಗ್ಗಲಿಗೆ). ಜಿಲ್ಲೆಯ ರಾಮಚಂದ್ರಪ್ಪ ಸಿದ್ದಪ್ಪ (ಕರಡಿ ಮಜಲು), ವಿಜಯಪುರ ಜಿಲ್ಲೆಯ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ (ಭಜನೆ), ಬಾಗಲಕೋಟೆ ಜಿಲ್ಲೆಯ ರಂಗಪ್ಪ ಬಾಲಪ್ಪ ಹಲಕುರ್ಕಿ (ಶಿವ ಭಜನೆ), ಜವಾನ್ ಜೈ ಕಿಸಾನ್ ಹಾವೇರಿ ಜಿಲ್ಲೆಯ ಸಿದ್ದಲಿಂಗಪ್ಪ ಚನ್ನಬಸಪ್ಪ ನರೇಗಲ್ಲ (ತತ್ವಪದ), ಬೆಳಗಾವಿ ಜಿಲ್ಲೆಯ ರುದ್ರಾಂಬಿಕಾ ಮಹಾಂತೇಶ ಯಾಳಗಿ (ಲಾವಣಿ ಪದ), ಉತ್ತರ ಕನ್ನಡ ಜಿಲ್ಲೆಯ ಭೂಗೂ ಧಾಕೂ ಕೊಳಾಪ್ಪೆ ಗೌಳಿವಾಡ (ಹೋಳಿ ಸಿಗ್ಮಾ ಕುಣಿತ), ಬಳ್ಳಾರಿ ಜಿಲ್ಲೆ ಪೆದ್ದ ಮಾರೆಕ್ಕ (ಬುರ್ರ ಕಥಾ), ರಾಯಚೂರು ಜಿಲ್ಲೆಯ ಮರಿಯಪ್ಪ (ಭಜನೆ ಪದ), ಕೊಪ್ಪಳ ಜಿಲ್ಲೆಯ ಶಿವಲಿಂಗಪ್ಪಪಹಗಲುವೇಷ), ಕಲಬುರಗಿ ಜಿಲ್ಲೆಯ ಶಕುಂತಲಾ ದೇವಲಾನಾಯಕ (ಗೀಗೀ ಪದ), ಬೀದರ್ ಜಿಲ್ಲೆಯ ಸಿದ್ರಾಮ (ಗೋಂದಳಿ ಪದ), ಯಾದಗಿರಿ ಜಿಲ್ಲೆಯ ಭೂಮಣ್ಣ ಬಸಪ್ಪ ಲಾಠಿ (ಡೊಳ್ಳು ಕುಣಿತ).
ತಜ್ಞ ಪ್ರಶಸ್ತಿ ಪುರಸ್ಕೃತರಾಗಿ ಡಾ. ಚಂದ್ರು ಕಾಳೇನಹಳ್ಳಿ, ಡಾ. ಜಿ.ಶಂ.ಪ ಪ್ರಶಸ್ತಿ, ಡಾ. ಶ್ರೀಪಾದ ಶೆಟ್ಟಿ, ಡಾ.ಬಿ.ಎಸ್. ಗದ್ದಗಿಮಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪೆನಿಗಳ ವಿಷಯದಲ್ಲಾಗಲೀ ಬೇರೆ ಯಾವುದೇ ವಿಚಾರದಲ್ಲಾಗಲೀ ಯಾರಿಂದಲೂ ಯಾವುದೇ ರೀತಿಯ ರಾಜೀಯೂ ಇಲ್ಲ ಮುಲಾಜೂ ಇಲ್ಲ.ರೈತರ ಕಾಳಜಿಯೇ ಮುಖ್ಯವಾದ ಗುರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವರು ಇಲಾಖಾಧಿಕಾರಿಗಳೊಂದಿಗೆ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ಕೇಂದ್ರ ಸಚಿವರು ಅವಲೋಕನಾ ಸಭೆ ನಡೆಸಿ,ಸರ್ಕಾರಿ ಇನ್ಸೂರೆನ್ಸ್ ಕಂಪೆನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕೆಂಬ ನಿಟ್ಟಿನಲ್ಲಿ ಚರ್ಚಿಸಿದರು.
ಅವಲೋಕನಾ ಸಭೆಯಲ್ಲಿ ಸರ್ಕಾರಿ ವಿಮಾ ಕಂಪೆನಿಗಗಳಿಂದ ಸರಿಯಾದ ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪೆನಿಗಳಿಗೆ ಸರಿಯಾಗಿ ರೈತರಿಗೆ ವಿಮೆ ಪಾವತಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದ ಸಚಿವರು ಸಭೆಯಲ್ಲಿ ಖಾಸಗಿ ವಿಮಾ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಅಂಕಿಅಂಶಗಳಿಂದ ಕಾಗದದ ಮೇಲಿನ ಅಂಕಿಸಂಖ್ಯೆಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸರ್ಕಾರಿ ವಿಮಾ ಕಂಪೆನಿಗಳು ಸರಿಯಾಗಿ ನ್ಯಾಯ ಒದಗಿಸುತ್ತಿವೆ. ಖಾಸಗಿ ಕಂಪೆನಿಗಳು ಕೇವಲ ಅಂಕಿಸಂಖ್ಯೆಗಳನ್ನು ಮಾತ್ರ ಅಧಿಕಾರಿಗಳಿಗೆ ತೋರಿಸುತ್ತಿವೆ.ಈ ಹಿಂದೆಯೇ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಸೂಚಿಸಲಾಗಿತ್ತು.ಆದರೆ ಅದು ಬರೀ ಸೂಚನೆಯಾಗಿಯಷ್ಟೇ ಉಳಿದಿದ್ದು,ಕಾರ್ಯಗತವಾಗಿಲ್ಲ ಎಂಬುದನ್ನು ಸಭೆಯಲ್ಲಿ ಕಮಿಷನರ್ ಗಮನಕ್ಕೆ ತಂದ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಬಗ್ಗೆ ಕೃಷಿ ಕೇಂದ್ರ ಇಲಾಖೆಯ ಪ್ರಮುಖರು ಗಮನ ಹರಿಸಿ ಹದಿನೈದು ದಿನದೊಳಗೆ ಎಲ್ಲಾ ವಿಮಾ ಕಂಪೆನಿಗಳಿಗೆ ತಾಕೀತು ಮಾಡುವಂತೆ ಹೇಳಿದರು.
ರೈತರ ಪರವಾಗಿ ಅಧಿಕಾರಿಗಳು ಇರಬೇಕು.ಜಿಲ್ಲೆಯ ಕೃಷಿ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಬೇಕು. ವಿಮಾ ಕಂಪೆನಿಯಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳ ಜೊತೆ ಪರಿಶೀಲನೆ ಮಾಡಿ ಒಂದು ವಾರದೊಳಗೆ ವರದಿ ಮಾಹಿತಿ ನೀಡಬೇಕು ಎಂದು ಆಯುಕ್ತರಿಗೆ ಭಗವಂತ್ ಖೂಬಾ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರ ಸಚಿವ ಭಗವಂತ್ ಖೂಬಾಗೆ “ಬೆಲೆ ಭದ್ರತೆ” ಬಗ್ಗೆ ಮನವಿ ಸಲ್ಲಿಸಿದರು. ಸದ್ಯ ರಾಜ್ಯದಲ್ಲಿ 6.12 ಲಕ್ಷ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರ ದಾಸ್ತಾನಿದ್ದು,2022 ರ ಮುಂಗಾರಿಗೆ 26.5 ಲಕ್ಷ ಟನ್ ಬೇಡಿಕೆಯಿರುವುದಾಗಿ ಅಂದಾಜಿಸಲಾಗಿದೆ. ಅಗತ್ಯವಿರುವ ರಸಗೊಬ್ಬರದ ಸರಬರಾಜು ಹಾಗೂ 3ಲಕ್ಷ ಟನ್ ವಿವಿಧ ರಸಗೊ ಬ್ಬರಗಳನ್ನು ಕಾಪು ದಾಸ್ತಾನಾಗಿ ಶೇಕರಣೆ ಮಾಡಲು ನಿರ್ಧರಿಸಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಬೆಲೆ ಏರಿಳಿತಕ್ಕೆ ರಕ್ಷಣೆ ನೀಡಲು ಮನವಿ ಪತ್ರದಲ್ಲಿ ಹೇಳಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ವಾಯುಮಾಲಿನ್ಯ, ಹವಾಮಾನ ಬದಲಾವಣೆ, ಇಡೀ ನಗರ ಸಮುದ್ರದ ಪಾಲಾಗುತ್ತಿರುವುದು ಸೇರಿ ಹಲವು ಕಾರಣಗಳಿಂದಾಗಿ ಇಂಡೋನೇಷ್ಯಾದ ರಾಜಧಾನಿಯನ್ನು ಜಕಾರ್ತದಿಂದ ನುಸಂತರಾಗೆ ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ. ದೇಶದ ಹೆಮ್ಮೆಯ ಪ್ರತೀಕವಾಗುವಂತೆ ನೂತನ ರಾಜಧಾನಿ ನುಸಂತರಾವನ್ನು ಅಭಿವೃದ್ಧಿಪಡಿಸಲು ಸರಕಾರ ತೀರ್ಮಾನಿಸಿದೆ. ಐದು ಹಂತಗಳಲ್ಲಿ ಇಡೀ ನಗರವನ್ನು ಅಭಿವೃದ್ಧಿಪಡಿಸಲಿದ್ದು, ಮೊದಲ ಹಂತದ ಕೆಲಸವು ಇದೇ ವರ್ಷದಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಸರ್ಕಾರ ಸುಮಾರು 466 ಲಕ್ಷ ಇಂಡೋನೇಷ್ಯಾ ರೂ.( 32ಶತಕೋಟಿ) ವ್ಯಯಿಸಲಿದೆ ಎಂದು ತಿಳಿದುಬಂದಿದೆ. ರಾಜಧಾನಿ ಬದಲಾವಣೆ ಕುರಿತ ವಿಧೇಯಕಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದೆ. ಕೆಲವೇ ವರ್ಷಗಳಲ್ಲಿ ಇಡೀ ರಾಜಧಾನಿಯನ್ನು ನುಸಂತರಾಗೆ ವರ್ಗಾಯಿಸಲಾಗುತ್ತದೆ.ಜವಾನೀಸ್ ಭಾಷೆಯಲ್ಲಿ ನುಸಂತರಾ ಎಂದರೆ ದ್ವಿಪ ಸಮೂಹ ಎಂಬ ಅರ್ಥವಿದೆ. ಹೊಸ ರಾಜಧಾನಿಗೆ ಅಧ್ಯಕ್ಷ ಜೋಕೊ ವಿಡೋಡೊ ಅವರೇ ನುಸಂತರಾ ಎಂದು ಹೆಸರಿಟ್ಟಿದ್ದಾರೆ. ಜಕಾರ್ತ ನಗರ ಜಾವ ಸಮುದ್ರದ ಪಾಲಾಗುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗಿದೆ. ಅಲ್ಲದೇ, ಜಗತ್ತಿನಲ್ಲೇ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿರುವ 4ನೇ ನಗರ ಎಂಬ ಅಪಖ್ಯಾತಿಯೂ ಜಕಾರ್ತಕ್ಕಿದೆ. ರಾಜಧಾನಿಯಲ್ಲಿ ಒಂದು ಕೋಟಿಗೂ ಅಧಿಕ ಜನ ವಾಸಿಸುತ್ತಿದ್ದು, 30 ವರ್ಷಗಳಲ್ಲಿ ಇಡೀ ನಗರ ಮುಳುಗಲಿದೆ ಎಂದು ಅಧ್ಯಯನ ವರದಿಯೊಂದು ಸರ್ಕಾರವನ್ನು ಎಚ್ಚರಿಸಿತ್ತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಭಾರತದಲ್ಲಿ ಕೊರೋನಾ ಮೂರನೇ ಅಲೆ ಹೆಚ್ಚಾಗುತ್ತಿದೆ. ಒಂದೇ ದಿನ 3,17,532 ಪ್ರಕರಣ ದಾಖಲಾಗಿವೆ. ಆ ಮೂಲಕ ಕಳೆದ 249 ದಿನಗಳಲ್ಲಿಯೇ ಗರಿಷ್ಠ ದೈನಂದಿನ ಕೇಸ್ ಗಳು ದಾಖಲಾಗಿವೆ.
ಒಂದೇ ದಿನದಲ್ಲಿ ದಾಖಲಾಗಿರುವ ಹೊಸ ಪ್ರಕರಣಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಕಳೆದ ವರ್ಷ ದ ಮೇ 15ರಂದು 3.11ಲಕ್ಷ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ದಾಖಾಲಾಗಿದ್ದವು. ಇದಾದ ನಂತರ ಇಷ್ಟೊಂದು ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. ಅದೇ ರೀತಿ ಸಕ್ರಿಯ ಸೋಂಕಿತರ ಸಂಖ್ಯೆ ಯು 19,24,051ಕ್ಕೆ ಹೆಚ್ಚಾಗಿದೆ. 234 ದಿನಗಳಲ್ಲಿಯೇ ಸಕ್ರಿಯ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಮತ್ತೊಂದು ಕಡೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 93.03ಕ್ಕೆ ಕುಸಿದಿದೆ. ಓಮಿಕ್ರಾನ್ ರೂಪಾಂತರಿಯಿಂದಾಗಿ ದೇಶದಲ್ಲಿ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೂರನೇ ಅಲೆ ಆರಂಭ ವಾಗಿದ್ದರೂ ಇದುವರೆಗೆ ನಿತ್ಯ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿರಲಿಲ್ಲ. ” ಪಾಸಿಟಿವಿಟಿ ಪ್ರಮಾಣವು ಶೇ.16.41ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇ. 16.06 ರಷ್ಟಿದೆ. ಓಮಿಕ್ರಾನ್ ಸೋಂಕಿತರ ಸಂಖ್ಯೆ 9,287 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಹೊಸ ರೂಪಾಂತರಿ ಕೇಸ್ ಗಳ ಸಂಖ್ಯೆ ಶೇ. 3.63ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕಟ್ಟಡ ಕಾರ್ಮಿಕರ ಮಕ್ಕಳು ಪಡೆದ ವಿದ್ಯಾರ್ಥಿ ವೇತನದಿಂದ ಶಿಕ್ಷಣವಂತರಾಗಿ ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್ಲೈನ್ ಮೂಲಕ ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೆಳವರ್ಗದ ಜನರಿಗೆ ನೀಡಲಾಗುವ ಈ ಮೊತ್ತವು ಅವರ ಬದುಕಿನ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಲಿದೆ. ಅವರಿಗೆ ಆಸರೆ ಆಗಲಿದೆ. ಇಂತಹ ಕೆಲಸಕ್ಕೆ ಕಾರ್ಮಿಕ ಇಲಾಖೆ ಮುಂದಾಗಿರುವುದು ಪ್ರಶಂಸೆಗೆ ಅರ್ಹವಾಗಿದೆ.
ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅವರ ಖಾತೆಗಳಿಗೆ ವಿದ್ಯಾರ್ಥಿವೇತನ ಜಮೆ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮುಖ್ಯಮಂತ್ರಿಗಳು ಕಾರ್ಮಿಕ ಇಲಾಖಾ ಕಾರ್ಯವನ್ನು ಶ್ಲಾಘಿಸಿದರು.
ಸಚಿವ ಶಿವರಾಮ ಹೆಬ್ಬಾರ್, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ 92,061 ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ 1,45,524 ಅರ್ಜಿಗಳು ಸ್ವೀಕೃತವಾಗಿದೆ. ಅದರಲ್ಲಿ 39 ಸಾವಿರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್-ನಂತರದ 50 ಸಾವಿರ ಸ್ವೀಕೃತ ಅರ್ಜಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಖಾತೆಗೆ ಸುಮಾರು ರೂ. 150 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.