Sunday, February 15, 2026
Sunday, February 15, 2026
Home Blog Page 1752

ಕರೆಂಟ್ ಶಾಕ್ ಸದ್ಯಕ್ಕಿಲ್ಲ.ಹಾಲಿನ ದರ ಏರಿಕೆ ಪ್ರಸ್ತಾಪವಿಲ್ಲ

0

ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕು ಜೊತೆಗೆ ಲಾಕ್ ಡೌನ್ ನಿಂದ ನಾನಾ ಆರ್ಥಿಕ ಚಟುವಟಿಕೆಗಳ ಏರುಪೇರಿನಿಂದಾಗಿ ಮಧ್ಯಮವರ್ಗ ಹಾಗೂ ಬಡವರ ಜೀವನ ನಡೆಸಲು ಇಷ್ಟವಾಗುತ್ತಿದೆ. ನಡುವೆಯೂ ರಾಜ್ಯಾದ್ಯಂತ ನೀರು, ಹಾಲು, ವಿದ್ಯುತ್ ದರ ಏರಿಕೆ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ “ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಎಸ್ಕಾಂಗಳು ಪ್ರತಿ ಯೂನಿಟ್ ಗೆ ವಿದ್ಯುತ್ ದರ ಏರಿಕೆಗೆ ಪ್ರಸ್ತಾವ ನೀಡಿದ್ದು, ವಿದ್ಯುತ್ ನಿಯಂತ್ರಣ ಆಯೋಗ ವಿಚಾರಣೆ ನಡೆಸಿ ಅಂತಿಮ ಆದೇಶ ತಿಳಿಸಬೇಕಿದೆ.

ಜಿಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರ 3 ರೂ ಹೆಚ್ಚಿಸುವಂತೆ ಮನವಿ ಮಾಡಿವೆ. ಅಲ್ಲದೆ ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಸಿ.ಎಂ ಬೊಮ್ಮಾಯಿ ಅವರು ” ನೀರು, ಹಾಲು ಹಾಗೂ ವಿದ್ಯುತ್ ದರ ಏರಿಕೆ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾಪಗಳ ಬಗ್ಗೆ ಯಾವುದೇ ತೀರ್ಮಾನವಾಗಲಿ ಆಡಳಿತದಲ್ಲಿ ಎಲ್ಲವೂ ಇರುತ್ತವೆ. ದರ ಏರಿಕೆ ಪ್ರಸ್ತಾಪಗಳನ್ನು ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಲಾಗುವುದು ಈ ಬಗ್ಗೆ ಅವಸರದ ನಿರ್ಧಾರ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಮಂಡಳಿಗಳು, ಆಯೋಗಗಳು ಬೆಲೆ ಏರಿಕೆ ವಿಚಾರದಲ್ಲಿ ತಮ್ಮ ಯೋಜಿತ ತೀರ್ಮಾನಗಳನ್ನು ಸರ್ಕಾರಕ್ಕೆ ಸಲ್ಲಿಸುವುದು ಕಾಲಕಾಲಕ್ಕೆ ನಡೆಯುತ್ತಿರುತ್ತದೆ. ಇವುಗಳ ಸಾಧಕ- ಬಾಧಕಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆಯನ್ನು ಪ್ರತಿ ಸರ್ಕಾರಗಳು ಕೈಗೊಳ್ಳುತ್ತವೆ. ಕೊಟ್ಟಿದ್ದಿಲ್ಲದಕ್ಕೂ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಅಥವಾ ಜಾರಿಗೊಳಿಸಿದೆ ಎಂಬ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ” ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು “ಸರ್ಕಾರ ಶುಕ್ರವಾರವಷ್ಟೇ ವಾರಂತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದು ಸರಿಯಲ್ಲ ಕಾರ್ಪೊರೇಟರ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಲಿ ಆದರೆ ಜನರ ಮೇಲೆ ಬೇಡ” ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು “ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮಕೈಗೊಳ್ಳಲಿ. ಜನರಿಗೆ ಆದಾಯ ಬಂದಮೇಲೆ ವಿದ್ಯುತ್ ದರ ಹೆಚ್ಚಳ ಮಾಡಲಿ” ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಗೆ ತಿವಿದ ಪುಣೇರಿ

0

ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ ನ 70ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಪುಣೇರಿ ಪಲ್ಟನ್ ತಂಡಕ್ಕೆ 35-37 ಗಳಿಂದ ಶರಣಾಯಿತು.ಬೆಂಗಳೂರು ಬುಲ್ಸ್ ಬಳಗವು ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಅನುಭವಿಸಿತು.

ಪುಣೇರಿ ಬಳಗವು ಆರಂಭದಿಂದಲೂ ಅತ್ಯಂತ ವಿಶ್ವಾಸದ ಆಟವಾಡಿತು. ಪಂದ್ಯದ ಪ್ರಥಮ ಅರ್ಧಕ್ಕೆ ಬೆಂಗಳೂರು ಬುಲ್ಸ್ ವಿರುದ್ಧ 16-15ರ ಮುನ್ನಡೆ ಪಡೆಯಿತು.

ಹಾಗೆಯೇ ಬಂದಿದ್ದ ದ್ವಿತೀಯಾರ್ಧದಲ್ಲಿ ಪುಣೇರಿ ತಂಡ 21-20 ಅಂಕಗಳ ಮುನ್ನಡೆ ಪಡೆಯುವ ಮೂಲಕ ಗೆಲುವನ್ನು ತನ್ನದಾಗಿಸಿಕೊಂಡಿತು.

ಬೆಂಗಳೂರು ಬುಲ್ಸ್ ತಂಡವು ಒಟ್ಟು 42 ರೇಯ್ಡ್ ಗಳನ್ನು ಸಂಘಟಿಸಿ 24 ಅಂಕಗಳನ್ನು ಗಳಿಸಿತ್ತು. ಪುಣೇರಿ ತಂಡವು 43 ರೇಡಿಂಗ್ ನಲ್ಲಿ 20 ಅಂಕಗಳನ್ನು ಮಾತ್ರ ಪಡೆಯಿತು. ಆದರೆ ಟ್ಯಾಕಲಿಂಗ್ ನಲ್ಲಿ ಪುಣೇರಿ ತಂಡವು 13 ಅಂಕಗಳ ಜೊತೆಗೆ ನಾಲ್ಕು ಅಂಕಗಳನ್ನು ಗಳಿಸಿತ್ತು.

ಪುಣೇರಿ ತಂಡದ ಮೋಹಿತ್ ಗೋಯಟ್ 13 ಅಂಕಗಳನ್ನು ಸಂಪಾದಿಸುವ ಮೂಲಕ ಗೆಲುವಿನ ರೂವಾರಿಯಾದರು.

ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಸೆಹ್ರಾವತ್ ಸೂಪರ್ ಹತ್ತು ಸಾಧನೆ ಮಾಡಿದರು.

ಇಂದಿನ ಪಂದ್ಯಗಳು:

ಯು.ಪಿ ಯೋಧ vs ಹರಿಯಾಣ ಸ್ಟೀಲರ್ಸ್
ಪಂದ್ಯವು ರಾತ್ರಿ 7:30 ಆರಂಭವಾಗಲಿದೆ.

ತೆಲುಗು ಟೈಟನ್ಸ್ vs ಬೆಂಗಳೂರು ಬುಲ್ಸ್ ಪಂದ್ಯವು 8:30 ಕ್ಕೆ ನಡೆಯಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕರ್ನಾಟಕ ಹೆಮ್ಮೆಯ ಸ್ಥಬ್ಧಚಿತ್ರ: ಕರಕುಶಲ ಕಲೆಯ ಪ್ರತೀಕ

0

ದೆಹಲಿಯಲ್ಲಿ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಸತತವಾಗಿ 13ನೇ ಬಾರಿಗೆ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್. ಹರ್ಷ ಹೇಳಿದ್ದಾರೆ.

‘ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಆಯ್ಕೆಯಾಗಿದೆ.

“ಕರ್ನಾಟಕದ ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಕಲಾಕೃತಿಗಳು, ಈ ಕಲಾಕೃತಿಯ ಕೆಳಭಾಗದಲ್ಲಿ ಯಕ್ಷಗಾನ ಬೊಂಬೆಯಾಟ ಚಿತ್ರಣವಿದೆ. ಜೊತೆಗೆ ಗಂಜೀಫಾ ಕಲಾಕೃತಿಗಳಿವೆ. ಸ್ತಬ್ಧಚಿತ್ರದ ಮಧ್ಯದಲ್ಲಿ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡಪ್ರಮಾಣದ ಪೂಜೆಗಳಲ್ಲಿ ಕರಾವಳಿಯ ವೈಶಿಷ್ಟ್ಯವನ್ನು ಬಿಂಬಿಸುವ ಭೂತರಾದನೆಯ ಮುಖವಾಡ ಹೊತ್ತ ಲೋಹದ ಕಲಾಕೃತಿಗಳಿವೆ. ಹೂಜಿಯ ಹಿಂಬದಿಯಲ್ಲಿ ಬಿದರಿಕಲೆ ಬಳಸಿ ಸಿದ್ಧಪಡಿಸಿರುವ ನವಿಲುಗಳಿವೆ. ಮಧ್ಯಭಾಗದ ಹಿಂಬದಿಯಲ್ಲಿ ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಚಿತ್ರದ ಕೇಂದ್ರಬಿಂದುವಿನಂತೆ ಕಂಗೊಳಿಸುತ್ತಿದೆ” ಎಂದು ಡಾ.ಪಿ.ಎಸ್.ಹರ್ಷ ಅವರು ಹೇಳಿದ್ದಾರೆ.

“ಸ್ತಬ್ಧಚಿತ್ರ ನಿರ್ಮಾಣಕಾರ್ಯದಲ್ಲಿ ಹೆಸರಾಂತ ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ನೂರಕ್ಕೂ ಹೆಚ್ಚು ಕಲಾವಿದರು, ಸಂಗೀತ ನಿರ್ದೇಶಕ ಪ್ರವೀಣ್ ದಯಾನಂದ, ಜಾನಪದ ತಜ್ಞ ಡಾ. ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾಕೇಂದ್ರದ ತಂಡವು ಶ್ರಮಿಸಿದೆ” ಎಂದು ಡಾ.ಪಿ.ಎಸ್. ಹರ್ಷ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕನ್ನಡ ಶಾಸ್ತ್ರೀಯ ಭಾಷೆ: ಅನುದಾನ ತರುವಲ್ಲಿ ಜನಪ್ರತಿನಿಧಿಗಳು ಫೇಲು

0

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ನಾವು ಸದ್ಯ ಇರುವ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಜಾಗ ಗುರುತಿಸಿ, ಒಪ್ಪಂದದ ಕರಡು ತಯಾರಿಸಿ ಕೇಂದ್ರಕ್ಕೆ ಕಳುಹಿಸಿ ವರ್ಷವಾಗುತ್ತಾ ಬಂದಿದೆ ಪ್ರಕ್ರಿಯೆಗಳು ನಡೆಯಬೇಕಿದೆ. ಪ್ರಕ್ರಿಯೆ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

ಕನ್ನಡಕ್ಕೆ 13 ವರ್ಷಗಳ ಹಿಂದೆ ಈ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಅನುದಾನ ಹಾಗೂ ಸೌಲಭ್ಯ ಪಡೆಯುವ ವಿಷಯದಲ್ಲಿ ಮಾತ್ರ ಇದೇ ಗೌರವಕ್ಕೆ ಪಾತ್ರವಾಗಿರುವ ಇತರೆ ಭಾಷೆಗಳಿಗಿಂತ ಕನ್ನಡ ಬಹಳ ಹಿಂದೆ ಬಿದ್ದಿದೆ ಎಂದರೆ ತಪ್ಪಾಗಲಾರದು.

ಶಾಸ್ತ್ರೀಯ ಸ್ಥಾನಮಾನ ಪಡೆದ ತಮಿಳು ಸ್ವಾಯತ್ತ ಅಧ್ಯಯನ ಕೇಂದ್ರ ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ 50 ಕೋಟಿ ರೂಪಾಯಿ ಅನುದಾನ ಪಡೆದಿದೆ. ಇಲ್ಲಿನ ರಾಜಕಾರಣಿಗಳು ಪಟ್ಟುಹಿಡಿದು ಇದನ್ನ ಸಾಧಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯದ ಯಾವ ಪಕ್ಷದ ನಾಯಕರು ಸಂಸದರು ಈ ಬಗ್ಗೆ ಮೌನ ತೋರಿರುವುದು ಕೇಂದ್ರ ನೀಡುವ ವಿಶೇಷ ಅನುದಾನ ಕನ್ನಡಿಗರಿಗೆ ಕನಸಿನ ಗಂಟಾಗಿದೆ.

ಕೇಂದ್ರ ಸರ್ಕಾರದ ತಾರತಮ್ಯ ನೀತಿ ಪರಿಣಾಮ ಕನ್ನಡ ಶಾಸ್ತ್ರೀಯ ಭಾಷೆಗೆ ಈ ಅವಧಿಯಲ್ಲಿ 8 ಕೋಟಿ ರೂಪಾಯಿ ಅನುದಾನ ವಷ್ಟೇ ಬಂದಿದೆ. ಆದರೆ ಇದೇ ವೇಳೆ ಕನ್ನಡಕ್ಕಿಂತ ಒಂದಿಷ್ಟು ವರ್ಷ ಮುಂಚಿತವಾಗಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದಿದ್ದ ತಮಿಳು ಭಾಷೆಗೆ 50 ಕೋಟಿ ರೂ. ಹಾಗೂ ಇನ್ನಿತರ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡಿದೆ. ಸಂಸ್ಕೃತ ಭಾಷೆಯು 1200 ಕೋಟಿ ರೂಪಾಯಿ ಅನುದಾನವನ್ನು ಪಡೆದಿದೆ.

ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರಕ್ಕೆ ಯೋಜನಾ ನಿರ್ದೇಶಕರು, ಆಡಳಿತ ಸಿಬ್ಬಂದಿ ಹಾಗೂ 15 ಮಂದಿ ಸಂಶೋಧಕರು ಇದ್ದಾರೆ. ಸಿಐಐಎಲ್ ಗೆ 4 ಶಾಸ್ತ್ರೀಯ ಭಾಷೆಗೆ ಸೇರಿ ಬರುತ್ತಿರುವ ಅನುದಾನದ ಒಂದು ಭಾಗದಲ್ಲಿ ಕನ್ನಡದ ಚಟುವಟಿಕೆಯು ನಡೆಯಬೇಕು ಆದರೆ ಆಡಳಿತ ವೆಚ್ಚಕ್ಕೆ ಇದು ಸುರಿದುಗೊತ್ತಿದೆ. ಹೊಸ ಅನುದಾನ ಇಲ್ಲದೆ ಸಂಶೋಧನೆ ಪ್ರಕಟಣೆ ಸೇರಿದಂತೆ ಯಾವುದೇ ಪ್ರಮುಖ ಕಾರ್ಯವು ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರೊ ಕಬಡ್ಡಿ ಲೀಗ್ ಸ್ಟೀಲರ್ಸ್-ಯೋಧಾ ಜಯಭೇರಿ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಶುಕ್ರವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ಸ್ಟೀಲರ್ಸ್ ವಿರುದ್ಧ ಡೆಲ್ಲಿ ಗೆ ಸತತ ಸೋಲು
ಹರಿಯಾಣ ಸ್ಟಿಲರ್ಸ್(36) ಮತ್ತು ದಬಾಂಗ್ ಡೆಲ್ಲಿ(33) ತಂಡಗಳ ನಡುವೆ ಪಂದ್ಯ ನಡೆಯಿತು. ಹರಿಯಾಣ ತಂಡವು ದಬಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಮೊದಲಾರ್ಧದಲ್ಲೇ ಹರಿಯಾಣ 19-11 ರಿಂದ ಮುಂದಿತ್ತು ಅದೇ ಲಯವನ್ನು ಮುಂದುವರೆಸಿಕೊಂಡು ಪಂದ್ಯವನ್ನು ಮುನ್ನಡೆಸಿತು.
ಹರಿಯಾಣ ಪರ ವಿಕಾಸ್ 9 ಟಚ್ ಪಾಯಿಂಟ್ಸ್ ಮತ್ತು 4 ಬೋನಸ್ ಪಾಯಿಂಟ್ಸ್ ಸೇರಿ ಒಟ್ಟು 13 ರೇಡಿಂಗ್ ಪಾಯಿಂಟ್ಸ್ ತಂಡಕ್ಕೆ ಸೇರಿಸಿದರು.ಹಾಗೆಯೇ ವಿನಯ್ 7 ಪಾಯಿಂಟ್ಸ್ ಮತ್ತು ಆಶಿಶ್ 4 ಪಾಯಿಂಟ್ಸ್ ಗಳಿಸಿ ತಂಡಕ್ಕೆ ನೀಡಿದರು.
ಇದರಿಂದಾಗಿ ಹರಿಯಾಣ ಸ್ಟೀಲರ್ಸ್ ತಂಡವು ಸತತ 5 ನೇ ಬಾರಿ ಜಯ ಸಾಧಿಸಿದೆ.

ಯೋಧಾ ಗೆ ಮಣಿದ ವಾರಿಯರ್ಸ್
ಯು.ಪಿ ಯೋಧಾ(40) ಮತ್ತು ಬೆಂಗಾಲ್ ವಾರಿಯರ್ಸ್ (36) ತಂಡಗಳ ನಡುವೆ ಪಂದ್ಯ ನಡೆಯಿತು.ವಾರಿಯರ್ಸ್ ವಿರುದ್ಧ ಯೋಧಾ ರೋಚಕ ಜಯ ಸಾಧಿಸಿದೆ.
ಯೋಧಾ ತಂಡದ ರೇಡರ್ ಗಳಾದ ಪ್ರದೀಪ್ ನರ್ವಾಲ್ 9 ಪಾಯಿಂಟ್ಸ್ ಮತ್ತು ಸುರೇಂದರ್ ಗಿಲ್ 9 ಪಾಯಿಂಟ್ಸ್ ಗಳನ್ನ ಕಲೆಹಾಕಿ ಹರಿಯಾಣ ತಂಡವು 40-36 ರ 4 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು.

ಇಂದು ನಡೆಯಲಿರುವ ಪಂದ್ಯಗಳು:
೧. ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್
ಸಮಯ:7.30
೨. ಯು.ಮುಂಬಾ ಮತ್ತು ತೆಲುಗು ಟೈಟನ್ಸ್
ಸಮಯ:8.30
೩. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್
ಸಮಯ:9.30

ಮೆಸ್ಕಾಂ ಅಧಿಕಾರಿಗಳೊಂದಿಗೆ ಶಾಸಕ ಹರತಾಳು ಹಾಲಪ್ಪ ಸಭೆ

0

ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದಲ್ಲಿ ಮೆಸ್ಕಾಂ ಅಧಿಕಾರಿಗಳ ಸಭೆ ನೆಡೆಸಿದರು. ಬೇಸಿಗೆಗಾಲ ಪ್ರಾರಂಭವಾಗುತ್ತಿದೆ. ಆದ್ದರಿಂದ ಟ್ರಾನ್ಸ್ಫಾರ್ಮರ್ ಗಳು ಸುಟ್ಟು ಹೋಗುತ್ತಿವೆ.ಅವುಗಳನ್ನು ತ್ವರಿತಗತಿಯಲ್ಲಿ ಸರಿ ಪಡಿಸಿ ಅಳವಡಿಸುವಂತೆ ಸೂಚಿಸಿದರು.
ಬಾನ್ಕುಳಿ ಗ್ರಾಮ ಪಂಚಾಯಿತಿ ಉರುಳುಗಲ್ಲು ಗ್ರಾಮದಲ್ಲಿ 54 ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಇಂಧನ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಿದರು.

ಸಾಗರ-ಹೊಸನಗರ ತಾ. ಮೆಸ್ಕಾಂ ಇಲಾಖೆ ಸಮಸ್ಯೆ ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಎನ್ ಒಸಿ ಬಗ್ಗೆ ಇರುವ ಗೊಂದಲವನ್ನು ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಸ್ಟ್ರೇಲಿಯಾ ಓಪನ್ ಟೆನಿಸ್ಪ್ರಿ ಕ್ವಾರ್ಟರ್ ಗೆ ಜ್ವೆರೇವ್

0

‘ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫ್ರೀಕ್ವಾರ್ಟರ್ ಫೈನಲ್’ ಗೆ “ಜ್ವೆರೆವ್” ಲಗ್ಗೆ ಇಟ್ಟಿದ್ದಾರೆ.
ವಿಶ್ವ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಜ್ವೆರೆವ್,ಜಾನ್ ಕೇನ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಹಣಾಹಣಿಯಲ್ಲಿ 6-3,6-4,6-4 ರಿಂದ ಮೊಲ್ದೋವಾ ದ ರಾಡು ಅಲ್ಬೊಟ್ ಅವರನ್ನು ಸೋಲಿಸಿ ಬಿರುಸಿನ ಆಟವಾಡಿದರು.
ಇವರ ನಡುವೆ ನಡೆದ ಪಂದ್ಯವು ಒಂದು ಗಂಟೆ 57 ನಿಮಿಷ ಗಳ ಕಾಲ ನಡೆಯಿತು.
ಜ್ವೆರೆವ್ ಅವರಿಗೆ ಮುಂದಿನ ಪಂದ್ಯದಲ್ಲಿ 14 ನೇ ಶ್ರೇಯಾಂಕದ ಆಟಗಾರ ‘ಕೆನಡಾದ ಡೆನಿಸ್ ಶಪೊವಲೊವ್’ ಎದುರಾಗುವರು ಇಲ್ಲಿ ಗೆದ್ದರೆ ಜರ್ಮನಿಯ ಆಟಗಾರನಿಗೆ ಕ್ವಾರ್ಟರ್ ಫೈನಲ್ ನಲ್ಲಿ 20 ಬಾರಿ “ಗ್ರ್ಯಾಂಡ್ ಸ್ಲಾಮ್” ವಿಜೇತ ‘ರಫೆಲ್ ನಡಾಲ್’ ಸವಾಲು ಒಡ್ಡಲ್ಲಿದ್ದಾರೆ.
ವಿಶ್ವಕ್ರಮಾಂಕದಲ್ಲಿ 124 ನೇ ಸ್ಥಾನದಲ್ಲಿರುವ ಅಲ್ಬೋಟ್ ಅವರ ಸರ್ವ್ ಅನ್ನು ಜ್ವೆರೆವ್ ಮೂರು ಬಾರಿ ಭಗ್ನಗೊಳಿಸಿದರು.
ಇದರಿಂದಾಗಿ ಅಮೋಘ ಆಟವಾಡಿ “ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ” ಗೆದ್ದು ಬೀಗಿದ ಜರ್ಮನಿಯ ಅಲೆಕ್ಸಾಂಡರ್ ‘ಜ್ವೆರೆವ್’ “ಆಸ್ಟ್ರೇಲಿಯನ್ ಓಪನ್ ಟೂರ್ನಿಯ 16 ರ ಘಟ್ಟಕ್ಕೆ” ಕಾಲಿಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮತ್ತೆ ಸೋತ ಭಾರತ ಏಕದಿನ ಕ್ರಿಕೆಟ್ ಸರಣಿ ದಕ್ಷಿಣ ಆಫ್ರಿಕ ವಶ

0

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 2 ನೇ ಏಕದಿನ ಕ್ರಿಕೆಟ್ ಸರಣಿಯು ಶುಕ್ರವಾರ ನಡೆಯಿತು. ಈ ಸರಣಿಯಲ್ಲೂ ದಕ್ಷಿಣ ಆಫ್ರಿಕಾ ಸತತ ಎರಡನೇ ಜಯ ಸಾಧಿಸಿದೆ.
ಬೊಲ್ಯಾಂಡ್ ಪಾರ್ಕ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಫೀಲ್ಡಿಂಗ್ ಮಾಡಲು ಅವಕಾಶ ಕಲ್ಪಿಸಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. K.L ರಾಹುಲ್ 79 ಎಸೆತಗಳಲ್ಲಿ 55 ರನ್ ಗಳಿಸಿಕೊಂಡರು ಮತ್ತು ರಿಷಭ್ ಪಂತ್ 71 ಎಸೆತಗಳಲ್ಲಿ 85 ರನ್ ಗಳಿಸಿ ಇವರಿಬ್ಬರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ತಂಡವು ಸವಾಲಿನ ಮೊತ್ತ ಕಲೆಹಾಕಿತು.
ಮೊದಲ ವಿಕೆಟ್ ಜೊತೆಯಾಟದಲ್ಲಿ ಅಂಕಣಕ್ಕೆ ಇಳಿದು ಬ್ಯಾಟಿಂಗ್ ಮಾಡಿದ ಧವನ್ ಮತ್ತು ರಾಹುಲ್ ತಂಡಕ್ಕೆ 63 ರನ್ ಸೇರಿಸಿದರು.
ಆದರೆ, 12 ನೇ ಓವರ್ ನಲ್ಲಿ ಏಡನ್ ಮಾರ್ಕ್ರಮ್ ಬೌಲಿಂಗ್ ನಲ್ಲಿ ಧವನ್ ಔಟಾಗುವುದರೊಂದಿಗೆ ಇವರಿಬ್ಬರ ಜೊತೆಯಾಟವನ್ನು ಮುರಿದರು.
ನಂತರ ಅಂಕಣಕ್ಕೆ ಇಳಿದ ಕೊಹ್ಲಿ ಐದು ಎಸೆತಗಳನ್ನ ಎದುರಿಸಿ ಒಂದೂ ರನ್ ಗಳಿಸಿದೇ ಮರಳಿದರು. ಅವರು ಮೊದಲ ಪಂದ್ಯದಲ್ಲಿ ಅರ್ಧಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ,ಇಲ್ಲಿ ಅವರು ಖಾತೆಯನ್ನು ತೆರೆಯಲಿಲ್ಲ.
ಆದರೆ, ರಾಹುಲ್ ಮಾತ್ರ ಕ್ರೀಸ್ ನಲ್ಲಿಯೇ ಉಳಿದಿದ್ದರು. ರಾಹುಲ್ ಜೊತೆಗೆ ಸಾಥ್ ನೀಡಿ ಮೂರನೇ ಜೊತೆಯಾಟಕ್ಕೆ ಅಂಕಣಕ್ಕೆ ಇಳಿದ ರಿಷಬ್ ಪಂತ್ ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 115 ರನ್ ಸೇರಿಸಿದರು.
ಆದರೆ, ತಂಡದ ಮೊತ್ತವು 200 ರ ಗಡಿ ದಾಟುವಷ್ಟರಲ್ಲಿಯೆ 2 ವಿಕೆಟ್ ಕಳೆದುಕೊಂಡಿತು. ಶಾರ್ದೂಲ್ ಠಾಕೂರ್ ಇಲ್ಲಿಯೂ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ಮೆರೆದರು. ಅಜೇಯ 40 ರನ್ ಗಳಿಸಿದರು ಮತ್ತು R. ಅಶ್ವಿನ್ ಅಜೇಯ 25 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರದರು.
ಆದರೂ ಹೋರಾಟದ ಮೊತ್ತ ಗಳಿಸಿದರು ಭಾರತಕ್ಕೆ ಜಯ ಒಲಿಯಲು ಸಾಧ್ಯವಾಗಲಿಲ್ಲ.
288 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಹೋರಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 48.1 ಓವರ್ ಗಳಲ್ಲಿಯೆ 3 ವಿಕೆಟ್ ಪತನಕ್ಕೆ 288 ರನ್ ಗಳಿಸಿ ಭರ್ಜರಿ ಜಯ ಸಾಧಿಸಿ ಸತತ ಭಾರತಕ್ಕೆ ನೀರಿಳಿಸಿತು.
ಮೊದಲ ವಿಕೆಟ್ ಜೊತೆಯಾಟದಲ್ಲಿ ಅಂಕಣಕ್ಕೆ ಇಳಿದ ಮಲಾನ್ 108 ಎಸೆತಗಳಲ್ಲಿ 91 ರನ್ ಗಳಿಸಿದರು ಮತ್ತು ಕ್ವಿಂಟನ್ 66 ಎಸೆತಗಳಲ್ಲಿ 78 ರನ್ ಗಳಿಸಿ ಇವರಿಬ್ಬರ ಆರಂಭಿಕ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ 132 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕರೆದೊಯ್ದರು.
ಆರಂಭಿಕ ಜೋಡಿಯು ಹಾಕಿದ ಉತ್ತಮ ಗೆಲುವಿನ ಅಡಿಪಾಯ ಮೆರೆಗೆ ನಾಯಕ ತೆಂಬಾ ಬವುಮಾ ಮತ್ತು ರಸಿ ವ್ಯಾನ್ ಡರ್ ಡುಸೇನ್ ಇವರುಗಳು ಸೇರಿ ದಕ್ಷಿಣ ಆಫ್ರಿಕಾ ತಂಡ ಗೆಲುವಿನ ಕೋಟೆ ನಿರ್ಮಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಮೇರಿಕ ಕೆನಡಾ ಗಡಿಯಲ್ಲಿ ನಾಲ್ವರು ಭಾರತೀಯರ ಸಾವು

0

ಕೆನಡಾ-ಅಮೆರಿಕ ಗಡಿಯಲ್ಲಿ ಅತಿಯಾದ ಶೀತ ಗಾಳಿಯಿಂದಾಗಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ಇದೇ ಗಡಿಯಲ್ಲಿ ಅಮೆರಿಕ ಪೊಲೀಸರು ಕೆನಡಾದ ಒಬ್ಬನನ್ನು ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಿದ್ದಾರೆ.
ಅವರು ಭಾರತೀಯರು ಅಕ್ರಮವಾಗಿ ಅಮೆರಿಕ ಗಡಿ ಪ್ರವೇಶಿಸಲು ತೆರಳುವಾಗ ಒಬ್ಬರು ದಾರಿತಪ್ಪಿ ಬೇರ್ಪಟ್ಟಿದ್ದಾರೆ. ನಾಲ್ವರು ಅತಿಯಾದ ಚಳಿಯಿಂದ ಮೃತಪಟ್ಟಿದ್ದಾರೆ. ಬಹುಶಃ ಅವರೆಲ್ಲರೂ 11 ಗಂಟೆ ಕಾಲ ನಡೆದಿದ್ದಾರೆ. ಡಿ ಗುಂಪು ಅವರನ್ನು ಕರೆದೊಯ್ಯಬೇಕಿತ್ತು. ಅಷ್ಟರಲ್ಲಿ ಚಳಿ ತಾಳಲಾಗದೆ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಶಂಕಿಸಿದ್ದಾರೆ.
ಶುಕ್ರವಾರ ಅಮೆರಿಕ ಪೊಲೀಸರು ಗಡಿಯಲ್ಲಿ ಕೆನಡಾದ ಸ್ಟೀವ್ ಶಾಂಡ್ ಎಂಬುವನನ್ನು ಬಂಧಿಸಿದ್ದಾರೆ. ಈತನು ಬುಧವಾರ ದಾಖಲೆ ಇಲ್ಲದ ಇಬ್ಬರು ಭಾರತೀಯರನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಹಾಗಾಗಿ ಕೆನಡಾ- ಅಮೆರಿಕ ಗಡಿಯಲ್ಲಿ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿದೆ.
ಮಿನ್ನೆಸೋಟ ಗಡಿಯ ಕೆನಡಾ ಪ್ರದೇಶದಲ್ಲಿ ಇಬ್ಬರು ತರುಣರು, ಒಬ್ಬ ಬಾಲಕಿ ಹಾಗೂ ಒಂದು ಶಿಶು ಮೃತಪಟ್ಟಿದ್ದು, ಇವರೆಲ್ಲರೂ ಭಾರತೀಯರೆಂದು ತಿಳಿದು ಬಂದಿದೆ.
ಕಳೆದ ಮಂಗಳವಾರ ನಾಲ್ವರೂ ಮೃತಪಟ್ಟಿದ್ದಾರೆ. ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಚಳಿಯಲ್ಲಿ ಮರಗಟ್ಟಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ಕೈಗಾರಿಕಾ ಆಸ್ತಿಗೆ ನೂತನ ತೆರಿಗೆ ಕಾನೂನಿಗೆ ವಿರೋಧ

0

ಕೈಗಾರಿಕಾ ಆಸ್ತಿಗೆ ಸಂಬಂಧಿಸಿದ ನೂತನ ಆಸ್ತಿ ತೆರಿಗೆ ಕಾನೂನಿಗೆ ವಿರೋಧ ವ್ಯಕ್ತಪಡಿಸಿರುವ ಎಫ್ ಕೆಸಿಸಿಐ ಮತ್ತು ನಾನಾ ಕೈಗಾರಿಕೋದ್ಯಮಿಗಳು ಕಾನೂನು ಮಾರ್ಪಡಿಸಲು ಒತ್ತಾಯಿಸಿದ್ದಾರೆ.
ಹೊಸ ತೆರಿಗೆ ನೀತಿ ಬಗ್ಗೆ ಸಚಿವಾಲಯ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಕೇಳಿದೆ. ಇದೇ ತಿಂಗಳು 28 ರಂದು ಸಚಿವಾಲಯದ ಜೊತೆ ಸಭೆ ನಡೆಸಲು ತೀರ್ಮಾನಿಸಿದ್ದು, ನ್ಯೂನ್ಯತೆಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಎಫ್ ಕೆಸಿಸಿಐ ಅಧ್ಯಕ್ಷರಾದ ಐ.ಎಸ್. ಪ್ರಸಾದ್ ಅವರು ತಿಳಿಸಿದ್ದಾರೆ.
ಘೋಷಿತ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹೊರತುಪಡಿಸಿ ಇರುವ ಕೈಗಾರಿಕೆಗಳಿಗೆ ಆಸ್ತಿ ತೆರಿಗೆ ದರ ಪಾವತಿ ಮತ್ತು ಕೆಐಎಡಿಬಿ ವ್ಯಾಪ್ತಿಯ ಕೈಗಾರಿಕೆಗಳಿಗೆ ವಿಧಿಸಿರುವ ದರ ಕುರಿತು ಗೊಂದಲ ಮತ್ತು ಅಸಮಾಧಾನ ವ್ಯಕ್ತವಾಗಿದೆ.
ಕೆಐಎಡಿಬಿ ಹೊರಗಿನ ಕೈಗಾರಿಕೋಪಯೋಗಿ ಪ್ರದೇಶದ ನೊಂದಣಿ ಮತ್ತು ವರ್ಗಾವಣೆಗಳಿಗೆ ರಾಜ್ಯ ಮೌಲ್ಯಮಾಪನ ಸಮಿತಿಯ ಮಾರ್ಗಸೂಚಿಯಲ್ಲಿನ ನಿವೇಶನದ ದರಗಳನ್ನೇ ಪಡೆಯಲಾಗುತ್ತಿದೆ. ಆದರೆ, ಆಸ್ತಿ ತೆರಿಗೆ ಪಡೆಯುವ ಸಂದರ್ಭದಲ್ಲಿ ನಿವೇಶನ ದರ ಬದಲಾಗಿ ವಾಣಿಜ್ಯ ಕಟ್ಟಡಗಳಿಗೆ ಅನ್ವಯಿಸುವ ದರವನ್ನೇ ಸ್ಥಳೀಯ ಸಂಸ್ಥೆಗಳು ಹೇರುತ್ತಿವೆ. ಈ ಗೊಂದಲ ನಿವಾರಣೆಗೆ ಸಚಿವಾಲಯ ಮಟ್ಟದಲ್ಲಿ ಹಲವು ಸಭೆ ನಡೆಸಿದರೂ ಒಮ್ಮತದ ನಿರ್ಧಾರ ಬಂದಿಲ್ಲ ಎಂದು ತಿಳಿದುಬಂದಿದೆ.