Saturday, February 14, 2026
Saturday, February 14, 2026
Home Blog Page 1759

ಸಾಗರ ತಾಲ್ಲೂಕು ಅಂಗನವಾಡಿಯಲ್ಲಿ ಉದ್ಯೋಗಾವಕಾಶ

0

ಶಿಶು ಅಭಿವೃದ್ದಿ ಯೋಜನೆ ಸಾಗರ ವ್ಯಾಪ್ತಿಯ ಕೆಳಕಂಡ ಗ್ರಾಮಗಳಿಂದ ಅಂಗನವಾಡಿ ಕಾರ್ಯಕರ್ತೆ/ಮಿನಿ ಕಾರ್ಯಕರ್ತೆ/ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ತಾವರೇಹಳ್ಳಿ, ಬರೂರು, ಕೊಳೆಗೋಡು(ಮಿನಿ), ಕಾನಗೋಡು+ಬೆನವಗೋಡು(ಮಿನಿ), ಮಡಸೂರು, ವಡಂಬೈಲು, ಕಾರೇಹೊಂಡ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಂದಾಸುರ, ಕೆರೆಹಿತ್ಲು, ಲಕ್ಕವಳ್ಳಿ, ಬರೂರು, ದೊಡ್ಡಬ್ಯಾಣ, ಸಂಗಣ್ಣನಕೆರೆ, ನಂದೀತಳೆ, ಅಡೂರು ಇಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣ ಹೊಂದಿದ ಎಸ್‍ಎಸ್‍ಎಲ್‍ಸಿ ಒಳಗಿನ ವಿದ್ಯಾರ್ಹತೆಯುಳ್ಳ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆನ್‍ಲೈನ್ ಮೂಲಕ ಫೆ.13 ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿರಾಟ್ ಕ್ರಿಕೆಟ್ ನಾಯಕತ್ವಕ್ಕೆ ವಿದಾಯ

0

ವಿಶ್ವದ ಶ್ರೇಷ್ಠ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೂ ಶನಿವಾರ ವಿದಾಯ ಘೋಷಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಸೋತ ಮರುದಿನವೇ ಅವರು ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಅದಾಗ್ಯೂ ಅವರು ತಂಡದ ಆಟಗಾರನಾಗಿ ಮುಂದುವರಿಯಲಿದ್ದಾರೆ.
ಈಗಾಗಲೇ ಏಕದಿನ ಮತ್ತು ಟಿ20 ಸಾರಥ್ಯಕ್ಕೆ ಅವರು ರಾಜೀನಾಮೆ ಘೋಷಿಸಿದ್ದಾರೆ.
ತಂಡವನ್ನು ಸರಿಯಾದ ಪಥದಲ್ಲಿ ಸಾಗಿಸಲು 7 ವರ್ಷಗಳ ಕಾಲ ಪ್ರತಿದಿನ ಶ್ರಮಿಸಿದ್ದೇನೆ. ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ. ಎಲ್ಲದಕ್ಕೂ ಒಂದು ಕೊನೆ ಇದೆ. ಅಂತೆಯೇ ಭಾರತ ಟೆಸ್ಟ್ ತಂಡದ ನನ್ನ ನಾಯಕತ್ವವೂ ಅಂತ್ಯವಾಗಿದೆ. ನನ್ನ ಪಯಣ ಅನೇಕ ಏರಿಳಿತಗಳನ್ನು ಕಂಡಿದೆ. ಆದರೆ ಎಂದಿಗೂ ಪ್ರಯತ್ನ ಪಡದೇ ಇರುವುದು ಅಥವಾ ನಂಬಿಕೆ ಕಳೆದುಕೊಂಡಿದ್ದು ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಧನ್ಯವಾದ. ಯಶಸ್ಸಿಗೆ ಬೆನ್ನೆಲುಬಾಗಿ ನಿಂತ ಕೋಚ್ ರವಿಶಾಸ್ತ್ರಿ ಹಾಗೂ ತಂಡ, ನಾಯಕತ್ವದ ಗುಣ ಗುರುತಿಸಿದ ಮಹೇಂದ್ರ ಸಿಂಗ್ ಧೋನಿಗೆ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ತಿಳಿಸಿದ್ದಾರೆ.
ನಾಯಕತ್ವಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ.
ತಮ್ಮ ಅಭೂತಪೂರ್ವ ನಾಯಕತ್ವ ಗುಣಗಳಿಂದ ಟೀಮ್ ಇಂಡಿಯಾವನ್ನು ಉತ್ತುಂಗಕ್ಕೇರಿಸಿದ ಕೊಹ್ಲಿಗೆ ಶುಭಾಶಯಗಳು ಎಂದು ಹೇಳಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಕೊಹ್ಲಿಗೆ ಅಭಿನಂದನೆ ಸೂಚಿಸಿದ್ದಾರೆ. ಅದೇ ರೀತಿ ದೇಶ-ವಿದೇಶಗಳ ಹಿರಿಯ-ಕಿರಿಯ ಕ್ರಿಕೆಟಿಗರು ಕೊಹ್ಲಿ ಏಕಾಏಕಿ ನಾಯಕತ್ವದ ಬಗ್ಗೆ ಅಚ್ಚರಿ ವ್ಯಕ್ತಪಡಿಸುವ ಜೊತೆಗೆ ಅವರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವ ವಹಿಸುವಾಗ ಭಾರತ ಟೆಸ್ಟ್ ತಂಡ ವಿಶ್ವ ಅಗ್ರತೆಯಲ್ಲಿ ಏಳನೇ ಸ್ಥಾನ ಹೊಂದಿತ್ತು. ಇದೀಗ ನಂಬರ್ ಒನ್ ಸ್ಥಾನದಲ್ಲಿದೆ.
ವಿರಾಟ್ ಕೊಹ್ಲಿ ನಾಯಕತ್ವ ಭಾರತ ತಂಡ ತವರಿನಲ್ಲಿ ಸತತ 11 ಸರಣಿ ಗೆದ್ದ ದಾಖಲೆ ಮಾಡಿದೆ.
ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತದ ಮೊದಲ ನಾಯಕ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಹೊರತಾಗಿಯೂ ಸೆಂಚುರಿಯನ್ ನಲ್ಲಿ ಟೆಸ್ಟ್ ಪಂದ್ಯ ಗೆದ್ದ ವಿಶ್ವದ ಕ್ರಿಕೆಟ್ ತಂಡದ ಮೊದಲ ನಾಯಕ ಎಂದೆನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ಗೆಲುವಿನ ಸರಾಸರಿ ಶೇಕಡ 58.82 ಈ ಮೂಲಕ ಟೀಮ್ ಇಂಡಿಯಾ ಮಾತ್ರವಲ್ಲದೆ ಏಷ್ಯಾದಲ್ಲೇ ಟೆಸ್ಟ್ ಗೆಲುವಿನ ಯಶಸ್ವಿ ನಾಯಕ ಎನಿಸಿದ್ದಾರೆ.
ಇವುಗಳ ಹೊರತಾಗಿಯೂ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ನಾಯಕದ ಹಲವಾರು ಹೆಗ್ಗುರುತುಗಳನ್ನು ನಾವು ಕಾಣಬಹುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚುನಾವಣೆ ನಡೆಯುವ ರಾಜ್ಯಗಳಲ್ಲಿ ಜಾಥಾ ಸಮಾವೇಶ ನಿಷೇಧ

0

ದೇಶಾದ್ಯಂತ ಕೋವಿಡ್ ಸೋಂಕಿನ ಹೆಚ್ಚಳದ ನಡುವೆಯೇ ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳಲ್ಲಿ ಚುನಾವಣೆಯ ಕಾವು ಜೋರಾಗಿದೆ.
ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಆದರೆ ಇದರ ನಡುವೆಯೇ ಐದೂ ರಾಜ್ಯಗಳಲ್ಲಿ ರಾಜಕೀಯ ಪ್ರಚಾರ, ಜಾಥಾಗಳು, ಸಮಾವೇಶಗಳು, ಮತ್ತು ರೋಡ್ ಶೋ ಗಳ ಮೇಲಿನ ನಿಷೇಧವನ್ನು ಚುನಾವಣಾ ಆಯೋಗವು ಜನವರಿ 22ರ ವರೆಗೆ ವಿಸ್ತರಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ, ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಹಾಗೂ ಚುನಾವಣೆ ಎದುರಿಸಲಿರುವ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿ ಗಳೊಂದಿಗೆ ಶನಿವಾರ ವರ್ಚ್ಯುವಲ್ ಸಭೆ ನಡೆಸಿ ಅವರ ಅಭಿಪ್ರಾಯವನ್ನೂ ಪಡೆದ ಬಳಿಕ ಆಯೋಗ ಈ ಕ್ರಮ ಕೈಗೊಂಡಿದೆ.
ಒಳಾಂಗಣದಲ್ಲಿ ಸಭೆಗಳನ್ನು ನಡೆಸಲು ಆಯೋಗ ಅವಕಾಶ ಕಲ್ಪಿಸಿದೆ. ಆದರೆ ಇದಕ್ಕೆ 300 ಜನರು ಅಥವಾ ಸಭಾಂಗಣದ 50% ಸಾಮರ್ಥ್ಯದ ಮಿತಿಯನ್ನು ವಿಧಿಸಲಾಗಿದೆ. ಅಲ್ಲದೆ ವರ್ಚ್ಯುವಲ್ ಸಭೆಗಳ ಮೂಲಕ ಪ್ರಚಾರ ನಡೆಸಬಹುದು ಎಂದು ಹೇಳಿದೆ.
ರೋಡ್ ಶೋ, ಪಾದಯಾತ್ರೆ, ಸೈಕಲ್ ಅಥವಾ ಸೈಕಲ್ ಜಾಥಾ ಮೆರವಣಿಗೆ ಮುಂತಾದ ಜನಸಂದಣಿ ಸೇರುವ ಯಾವುದೇ ಕಾರ್ಯಕ್ರಮಗಳಿಗೆ ಜ.22ರವರೆಗೂ ಅವಕಾಶವಿಲ್ಲ. ರಾಜಕೀಯ ಪಕ್ಷಗಳಾಗಲೀ, ಅಭ್ಯರ್ಥಿಗಳಾಗಲೀ, ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಗುಂಪು ಇಂಥ ಯಾವ ಕಾರ್ಯಕ್ರಮವನ್ನೂ ಆಯೋಜಿಸುವುದು ನಿಷಿದ್ಧ ಎಂದು ಆಯೋಗ ತಿಳಿಸಿದೆ.
ಓಮಿಕ್ರಾನ್ ವೈರಾಣುವಿನಿಂದ ದೇಶಾದ್ಯಂತ ಸೋಂಕಿನ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದ್ದು, ದೈನಂದಿನ ಹೊಸ ಸೋಂಕಿನ ಪ್ರಮಾಣ 2.5 ಲಕ್ಷ ಮೀರಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸ್ಥಿತಿಗತಿಯನ್ನು ಪರಿಗಣಿಸಿ, ಈ ಮೊದಲು ಜನವರಿ 15ರ ವರೆಗೆ ವಿಧಿಸಿದ್ದ ನಿಷೇಧವನ್ನು ಇನ್ನೂ ಒಂದು ವಾರ ವಿಸ್ತರಣೆ ಮಾಡಿರುವುದಾಗಿ ಆಯೋಗ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳಿಗೆ ನೋಂದಣಿಗೆ ಕರೆ

0

ಪರೀಕ್ಷಾ ಪೇ ಚರ್ಚಾ ವಾರ್ಷಿಕ ಕಾರ್ಯಕ್ರಮದ 5ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ನೋಂದಣಿ ಮಾಡಿಕೊಳ್ಳಲು ಮುಂದಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಆಹ್ವಾನಿಸಿದ್ದಾರೆ.
ನೊಂದಣಿ ಮಾಡಿಕೊಂಡವರು ಪ್ರಧಾನಿ ಮೋದಿ ಅವರಿಗೆ ಪರೀಕ್ಷೆ ಎದುರಿಸುವ ಕುರಿತು ಪ್ರಶ್ನೆಗಳನ್ನು ಕೇಳಲು ಅವಕಾಶವಿದ್ದು, ಉತ್ತಮ ಪ್ರಶ್ನೆಗಳನ್ನು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಆಯ್ಕೆ ಮಾಡಲಿದ್ದಾರೆ. ಇವುಗಳಿಗೆ ಪ್ರಧಾನಿ ಮೋದಿಯವರು ಉತ್ತರಿಸಲಿದ್ದು, ಕಾರ್ಯಕ್ರಮದ ಪ್ರಸಾರವನ್ನು ಜನಸಾಮಾನ್ಯರು ವೀಕ್ಷಿಸಬಹುದಾಗಿದೆ. 2018 ಫೆಬ್ರವರಿ 16ರಂದು ತಾಲ್ ಕೊಟಾರ ಮೈದಾನದಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಕುರಿತಾದ ನೇರ ಸಂವಾದದ ಮೂಲಕ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮಕ್ಕೆ ಪ್ರಧಾನಿ ಅವರು ಚಾಲನೆ ನೀಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಕಾರ್ಯಕ್ರಮವು ಬಹುತೇಕ ಆನ್ ಲೈನ್ ಮೂಲಕವೇ ನಡೆಯುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ಕಾರ್ಯಕ್ರಮದಲ್ಲಿ ಜನರು ಮುಕ್ತವಾಗಿ ಭಾಗವಹಿಸುವಂತೆ ಕೋರಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಕುರಿತು ಅರಿಯಲು ಈ ಕಾರ್ಯಕ್ರಮದಿಂದ ನನಗೆ ಬಹಳ ಉಪಯೋಗವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ.

0

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2020 ಮತ್ತು 2021 ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ ಪುರಸ್ಕೃತ ಗರ್ತಿಕೆರೆ ರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2020-21 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಿಂದೂಸ್ತಾನಿ ಸಂಗೀತ ಗಾಯಕ ಆರ್. ಪಿ. ಅಸುಂಡಿ, ಸುಗಮಸಂಗೀತ ಕಲಾವಿದೆ ದಿ. ರಮಾ ಅರವಿಂದ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ದಿ.ರಮಾ ಅರವಿಂದ ಪರವಾಗಿ ಅವರ ಮಗಳು ಪ್ರಶಸ್ತಿ ಸ್ವೀಕರಿಸಿದರು.

ವಾರ್ಷಿಕ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ಕಲಾವಿದರಾದ ಮಧೂರ ಪಿ ಬಾಲಸುಬ್ರಮಣ್ಯಂ, ಸುರಳಿ ಗಣೇಶ್ ಮೂರ್ತಿ, ಸುಕನ್ಯಾ ರಾಂಗೋಪಾಲ್, ಹಿಂದುಸ್ತಾನಿ ಸಂಗೀತದಲ್ಲಿ ಶ್ರೀಪಾದ ಹೆಗಡೆ, ಪಂ. ರಾಜಪ್ರಭುದೋತ್ರೆ ಮತ್ತು ಟಿ. ರಂಗ ಪೈ ತೋನ್ಸೆ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ನೃತ್ಯ ವಿಭಾಗದಲ್ಲಿ ನಯನ ರೈ, ಪ್ರವೀಣ್ ಕುಮಾರ್, ಮಧು ನಟರಾಜ್ ಮತ್ತು ಗುರುಮೂರ್ತಿ ಅವರಿಗೆ ಪ್ರಶಸ್ತಿ ನೀಡಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ – ಶ್ರೀಲಂಕಾ ಮಾತುಕತೆ: ಬಂಧಿತ ಮೀನುಗಾರರ ಬಿಡುಗಡೆಗೆ ಮನವಿ

0

ಶ್ರೀಲಂಕಾ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಅವರು ಸಭೆ ನಡೆಸಿದರು.
ಶ್ರೀಲಂಕಾದಲ್ಲಿ ಭಾರತ ಕೈಗೊಳ್ಳುತ್ತಿರುವ ಯೋಜನೆ, ಅದರಿಂದ ಶ್ರೀಲಂಕಾಗೆ ಆಗುವ ಅನುಕೂಲ, ಮಾನವೀಯತೆ ಆಧಾರದ ಮೇಲೆ ಭಾರತದ ಮೀನುಗಾರರನ್ನು ಬಿಡುಗಡೆಗೊಳಿಸುವ ಕೋರಿಕೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ.
ಭಾರತವು ಯಾವಾಗಲೂ ಶ್ರೀಲಂಕಾ ನೆರವಿಗೆ ನಿಂತಿದೆ ಎಂಬುದನ್ನು ಜೈಶಂಕರ್ ಅವರು ರಾಜಪಕ್ಸ ಅವರಿಗೆ ಮನವರಿಕೆ ಮಾಡಿದರು.
ಮುಂದಿನ ದಿನಗಳಲ್ಲೂ ದ್ವೀಪ ರಾಷ್ಟ್ರವು ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವವರೆಗೆ ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಹಾಗೆಯೇ ಬಂಧಿತರಾದ ಭಾರತದ ಮೀನುಗಾರರನ್ನು ಬಿಡುಗಡೆ ಮಾಡಬೇಕು ಎಂದೂ ಕೋರಿದ್ದಾರೆ.ರಾಜಪಕ್ಸ ಅವರು ಸಹ ಭಾರತ ಮತ್ತು ಶ್ರೀಲಂಕಾ ಮಧ್ಯ ಇರುವ ಸುದೀರ್ಘ ದ್ವಿಪಕ್ಷೀಯ ಸಂಬಂಧದ ಕುರಿತು ಮೆಲುಕು ಹಾಕಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಏರುತ್ತಿರುವ ಕೋವಿಡ್ ಸೋಂಕು

0

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

2.18 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 32,793 ಸೋಂಕಿತರ ಪ್ರಕರಣಗಳು ವರದಿಯಾಗಿವೆ. ಏಳು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ 1,69,850 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ. 15 ರಷ್ಟಿದೆ. ಸಾವಿನ ಪ್ರಮಾಣ ಶೇ. 0.02 ರಷ್ಟಿದೆ.

ರಾಜ್ಯದಾದ್ಯಂತ 9. 14 ಕೋಟಿ ಲಸಿಕೆ ನೀಡಲಾಗಿದೆ. ಇದರಲ್ಲಿ 5.05 ಕೋಟಿ ಮೊದಲ ಡೋಸ್ ಮತ್ತು 4.05 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ 2.56 ಲಕ್ಷ ಮುನ್ನೆಚ್ಚರಿಕೆ ನೀಡಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಪರೀಕ್ಷೆ ಕೇಂದ್ರದಿಂದ ರಾಜ್ಯಗಳಿಗೆ ಮಾರ್ಗಸೂಚಿ

0

ಸಿಕ್ಕ ಸಿಕ್ಕವರಿಗೆ ಕೊರೋನಾ ಪರೀಕ್ಷೆ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಕೊರೋನಾ ಪರೀಕ್ಷೆ ವಿಧಾನ ಬದಲಿಸುವಂತೆ ಐಸಿಎಂಆರ್ ಸಲಹೆ ನೀಡಿದೆ. ಯಾರಿಗೆ ಕೊರೋನಾ ಪರೀಕ್ಷೆ ಮಾಡಬೇಕು, ಯಾರಿಗೆ ಬೇಡ ಎಂಬುದರ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ.

ಕೊರೋನಾ ಸನ್ನಿವೇಶಕ್ಕೆ ತಕ್ಕಂತೆ ಪರೀಕ್ಷಾ ಯೋಜನೆಯನ್ನು ಕೂಡ ಬದಲಾಯಿಸುವಂತೆ ಸಲಹೆ ನೀಡಲಾಗಿದೆ.

ಜನರಿಗೆ ತೊಂದರೆ ಕೊಡಬಾರದು ಎಂಬುದು ಒಂದು ಕಡೆಯಾದರೆ ಸಮಯ ಹಾಗೂ ಆರ್ಥಿಕ ಸಂಪನ್ಮೂಲ ಉಳಿತಾಯಕ್ಕೆ ಈ ಸೂಚನೆ ನೀಡಲಾಗಿದೆ.

ಕೊರೋನ ರೋಗಲಕ್ಷಣಗಳು ಇರುವವರನ್ನು ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟರೆ ಪ್ರಾಥಮಿಕ ಸಂಪರ್ಕದಲ್ಲಿರುವ ಹೈ-ರಿಸ್ಕ್ ವ್ಯಕ್ತಿಗಳು, 60 ವರ್ಷ ಮೇಲ್ಪಟ್ಟವರ, ಇತರ ಆರೋಗ್ಯ ಸಮಸ್ಯೆ ಇದ್ದವರಿಗೆ ಪರೀಕ್ಷೆ ಮಾಡಬೇಕು. ಅಂತರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ ಕಡ್ಡಾಯ.

ಹೆರಿಗೆ, ಶಸ್ತ್ರ ಚಿಕಿತ್ಸೆಗೆಂದು ಕೊರೋನಾ ಪರೀಕ್ಷೆ ಮಾಡಬೇಕಿಲ್ಲ. ಟೆಸ್ಟ್ ಮಾಡಿಸಿಲ್ಲ ಎಂದು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತಿಲ್ಲ. ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವಾರಕ್ಕೆ ಒಂದು ಬಾರಿ ಮಾತ್ರ ಕೋವಿಡ್ ಪರೀಕ್ಷೆ ಮಾಡಬೇಕು. ಅದಕ್ಕಿಂತ ಹೆಚ್ಚು ಟೆಸ್ಟ್ ಮಾಡಿಸುವಂತಿಲ್ಲ ಎಂದು ಆಸ್ಪತ್ರೆಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸೂಚನೆಗಳನ್ನು ನೀಡಿದೆ.

ಯಾರಿಗೆ ಪರೀಕ್ಷೆ ಅಗತ್ಯವಿಲ್ಲ ಎಂದರೆ, ಯಾವುದೇ ರೋಗಲಕ್ಷಣಗಳು ಇಲ್ಲದವರಿಗೆ ಪರೀಕ್ಷೆ ಅಗತ್ಯವಿಲ್ಲ. ಸೋಂಕಿತ ನ ಸಂಪರ್ಕದಲ್ಲಿದ್ದ ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಪರೀಕ್ಷೆ ಬೇಕಿಲ್ಲ. ಹೋಂ ಐಸೋಲೇಷನ್ ನಿಂದ ಬಿಡುಗಡೆ ಯಾದವರಿಗೆ ಪರೀಕ್ಷೆ ಬೇಡ. ಅಂತರಾಜ್ಯ ಪ್ರಯಾಣಿಕರಿಗೂ ಪರೀಕ್ಷೆ ಬೇಕಿಲ್ಲ ಎಂದು ಐಸಿಎಂಆರ್ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಣರಾಜ್ಯೋತ್ಸವ ಸಂಭ್ರಮಕ್ಕೆ ನೇತಾಜಿ ಜನ್ಮದಿನ ಸಡಗರ ಸೇರ್ಪಡೆ.

0

ಈ ಬಾರಿಯಿಂದ ಗಣರಾಜ್ಯೋತ್ಸವ ಸಂಭ್ರಮಾಚರಣೆಯು ಜ.24ರ ಬದಲು ಜ.23ರಿಂದ ಶುರುವಾಗಲಿದೆ. ಇದಕ್ಕೆ ಪ್ರಮುಖ ಕಾರಣ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ಜನವರಿ 23 ಪರಾಕ್ರಮ ದಿನ ಎಂದು ಆಚರಿಸುತ್ತಿರುವ ಕೇಂದ್ರ ಸರ್ಕಾರ ಇದನ್ನೇ ಮುಂದುವರಿಸಿಕೊಂಡು ಗಣರಾಜ್ಯೋತ್ಸವದ ಸಮಾರಂಭಗಳನ್ನು ಪ್ರತಿ ವರ್ಷ ನಡೆಸಲು ತೀರ್ಮಾನಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1987ರ ಜನವರಿ 23ರಂದು ಬೋಸ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಿಳಿಸಿದ್ದರು.
ಗಣರಾಜ್ಯೋತ್ಸವದ ಪರೇಡ್ ಸೇರಿದಂತೆ ಈ ಬಾರಿಯ ಸಮಾರಂಭಗಳ ವೀಕ್ಷಣೆಗೆ ಒಟ್ಟು 24 ಸಾವಿರ ಜನರಿಗೆ ಮಾತ್ರ ಸೌಲಭ್ಯ (ಕಳೆದ ವರ್ಷ 25 ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು) ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಇರುವ ಕಾರಣ ಕಡಿಮೆ ಜನರಿಗೆ ಅವಕಾಶ ನೀಡಲಾಗುವುದು. 24000 ಸೀಟುಗಳ ಪೈಕಿ ಜನಸಾಮಾನ್ಯರಿಗೆ 5,200 ಸೀಟುಗಳು ಮೀಸಲಿರಿಸಲಾಗಿದೆ. ಉಳಿದ ಸೀಟುಗಳು ವಿವಿಐಪಿ, ರಕ್ಷಣಾ ಇಲಾಖೆ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು, ವಿಶೇಷ ಆಹ್ವಾನಿತರು, ವಿದೇಶಿ ಗಣ್ಯರಿಗೆ ಮೀಸಲಿರಿಸಲಾಗುವುದು ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೆಂಗಳೂರು ಈಗೀಗ ಅಪಘಾತಗಳ ಬೀಡಾಗುತ್ತಿದೆ

0

ಸಂಚಾರ ಪೊಲೀಸ್ ಇಲಾಖೆಯ ನಿರ್ಲಕ್ಷತನ ಮತ್ತು ಬಿಬಿಎಂಪಿಯ ಬೇಜವಾಬ್ದಾರಿಯ ಪರಿಣಾಮ ಬೆಂಗಳೂರು ಅಪಘಾತಗಳ ರಾಜ್ಯಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಇತ್ತೀಚಿಗೆ ನಡೆದ ಕೆಲವು ಅಪಘಾತಗಳಲ್ಲಿ ಅಮಾಯಕ ಪ್ರಮಾಣಿಕರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಿರುತೆರೆಯ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಸ್ಪರ್ಧೆ ಆರುವರ್ಷದ ಸಮನ್ವಿ ಕಿಲಾರಿ ಅಪ್ಪಳಿಸಿ ಮೃತಪಟ್ಟ ಘಟನೆಯ ಬಳಿಕವಂತೂ ಸಂಚಾರ ವ್ಯವಸ್ಥೆ ವಿರುದ್ಧ ಬೆಂಗಳೂರಿಗರ ಕೋಪ ಹೇಳತೀರದು.
ಕಳಪೆ ರಸ್ತೆ, ಗುಂಡಿ, ಅರ್ಧಂಬರ್ಧ ಕಾಮಗಾರಿ, ಟೆಲಿಕಾಂ ಕಂಪನಿಗಳು ಕೇಬಲ್ ಹಾಕಲು ಎಲ್ಲಿದ್ದಿರ ನೀ ರಸ್ತೆ ಯಾಗುತ್ತಿರುವುದು ರಸ್ತೆ ಅಪಘಾತಗಳಿಗೆ ಕಾರಣವಾಗಿದೆ.
ನಿತ್ಯ ಪೀಕ್ ಅವರ್ ನಲ್ಲಿ ಭಾರಿ ಗಾತ್ರದ ವಾಹನಗಳನ್ನು ನಗರದೊಳಗೆ ಬಿಡುತ್ತಿಲ್ಲ. ನಗರದ ಹೊರವಲಯದಲ್ಲಿ ಮಾತ್ರ ಸಂಚರಿಸುತ್ತವೆ. ಸರಿ ಬಲಿಯಾಗುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿ ಅಲ್ಲಿನ ಲೋಪಗಳನ್ನು ಸರಿಪಡಿಸಲು ನೈಸ್ ಸಂಸ್ಥೆಗೆ ತಿಳಿಸಲಾಗಿದೆ. ಇತ್ತೀಚಿಗೆ ನೈಸ್ ಸಂಸ್ಥೆ ಮುಖ್ಯಸ್ಥರ ಜೊತೆ ಸಭೆ ನಡೆಸಿ ಅಲ್ಲಿನ ಲೋಪ ದೋಷಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ಸಂಸ್ಥೆಯ ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ. ಇನ್ನು ನಗರದ ಒಳಭಾಗದಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ಪ್ರತಿ ವಾರ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಲಾಗುತ್ತಿದೆ. ಸಂಚಾರ ಪೊಲೀಸ್ ವಿಭಾಗದ ನೀಡುವ ವರದಿಗೂ ಅವರು ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಖಾಸಗಿ ವಾಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ವಾಹನಗಳ ದಟ್ಟನೆ ನಡುವೆಯೂ ಪೊಲೀಸರ ಕಾರ್ಯವೈಖರಿಯಿಂದಾಗಿ ಅಪಘಾತ ಪ್ರಮಾಣ 3 ವರ್ಷಗಳಿಗಿಂತ ಈ ವರ್ಷ ಕಡಿಮೆಯಾಗಿದೆ ಎಂದರು.
ಇತ್ತೀಚಿಗೆ ಬಹುತೇಕ ಸಿಗ್ನಲ್ ಗಳಲ್ಲಿ ಟ್ರಾಫಿಕ್ ಪೊಲೀಸ್ ಸರಿ ಇರುವುದಿಲ್ಲ. ಸಿಗ್ನಲ್ ನಲ್ಲಿ ಕೆಲವೊಮ್ಮೆ ಟ್ರಾಫಿಕ್ ಜಾಮ್ ಆಗಿರುತ್ತದೆ. ಆದರೆ ಪೊಲೀಸರು ಇದನ್ನು ಪರಿಹರಿಸುವುದನ್ನು ಬಿಟ್ಟು, ಅಲ್ಲಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಅಡಗಿ ಕುಳಿತು ದಂಡ ಹಾಕಲು ಹೊಂಚು ಹಾಕುತ್ತಿರುತ್ತಾರೆ. ಓವರ್ ಲೋಡ್ ಮತ್ತು ಭಾರಿ ವಾಹನಗಳ ಚಾಲಕರಿಂದ ಹಣವಸೂಲಿ ಮಾಡುವುದರಲ್ಲಿ ಮುಳುಗಿರುತ್ತಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.